ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 17-06-2021

at 00:00 hrs to 24:00 hrs

 

ಚಿತ್ತಾಕುಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 35/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಸತೀಶ ತಂದೆ ನಾಗಪ್ಪ ನಾಯ್ಕ, ಪ್ರಾಯ-42 ವರ್ಷ, ವೃತ್ತಿ-ಚಾಲಕ, ಸಾ|| ಚೆಂಡಿಯಾ, ಕಾರವಾರ (ಜೆಸಿಬಿ ವಾಹನ ನಂ: ಕೆ.ಎ-30/ಎನ್-0349 ನೇದರ ಚಾಲಕ). ಈತನು ದಿನಾಂಕ: 17-06-2021 ರಂದು ಮಧ್ಯಾಹ್ನ 01-45 ಗಂಟೆಗೆ ತಾನು ಚಲಾಯಿಸುತ್ತಿದ್ದ ಜೆಸಿಬಿ ವಾಹನ ನಂ: ಕೆ.ಎ-30/ಎನ್-0349 ನೇದನ್ನು ತನ್ನ ಬದಿಯನ್ನು ಬಿಟ್ಟು ಕಾರವಾರ-ಗೋವಾ ರಾಷ್ಟ್ರೀಯ ಹೆದ್ದಾರಿಗೆ ಬಂದು ಗೋವಾ ಕಡೆಯಿಂದ ಕಾರವಾರ ಕಡೆಗೆ ವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದವನು, ವೇಗದಲ್ಲಿದ್ದ ತನ್ನ ಜೆಸಿಬಿ ವಾಹನವನ್ನು ನಿಯಂತ್ರಿಸಲು ಸಾಧ್ಯವಾಗದೇ ತನ್ನ ಎದುರಿಗೆ ಗೋವಾ ಕಡೆಗೆ ಬರುತ್ತಿದ್ದ ಸ್ಕೂಟರ್ ನಂ: ಕೆ.ಎ-30/ವಿ-8075 ನೇದಕ್ಕೆ ಡಿಕ್ಕಿ ಪಡಿಸಿ, ಅದರ ಚಾಲಕನಾದ ಪ್ರಕಾಶ ತಂದೆ ರತ್ನಾಕರ ನಾಯ್ಕ, ಈತನಿಗೆ ಎಡ ಮೊಣಕಾಲಿನ ಹತ್ತಿರ ತೆರಚಿದ ಗಾಯ, ಬಲ ಕಿವಿಯ ಹತ್ತಿರ, ಕೆಳ ತುಟಿಯ ಹತ್ತಿರ ಹಾಗೂ ಬೆನ್ನಿನ ಹತ್ತಿರ ರಕ್ತಗಾಯವಾಗಲು ಹಾಗೂ ಪಿರ್ಯಾದಿಗೆ ಎಡ ಮೊಣಕೈಗೆ ಒಳನೋವಾಗಲು ಕಾರಣನಾದ ಬಗ್ಗೆ ಪಿರ್ಯಾದಿ ಶ್ರೀ ಅನಂತ ತಂದೆ ವಿಲಾಸ ಮಂಜ್ರೇಕರ, ಪ್ರಾಯ-30 ವರ್ಷ, ವೃತ್ತಿ-ವೆಲ್ಡಿಂಗ್ ಕೆಲಸ, ಸಾ|| ಸಿದ್ಧೇಶ್ವರ ದೇವಸ್ಥಾನದ ಹತ್ತಿರ, ಶೇಜವಾಡ, ಮಕ್ಕೇರಿ, ಚಿತ್ತಾಕುಲಾ, ಕಾರವಾರ ರವರು ದಿನಾಂಕ: 17-06-2021 ರಂದು 16-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 116/2021, ಕಲಂ: 323, 324, 341, 504, 506 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಗಣಪತಿ ಜಾನು ಅಂಬಿಗ, 2]. ಜಾನೂ ಸುಕ್ರು ಅಂಬಿಗ, 3]. ರೇಖಾ ಜಾನೂ ಅಂಬಿಗ, ಸಾ|| ಲುಕ್ಕೇರಿ, ದೇವರಬೋಳೆ, ತಾ: ಕುಮಟಾ. ಈ ನಮೂದಿತ ಆರೋಪಿತರು ಪಿರ್ಯಾದಿಯವರ ಗಡಿಬೇಲಿಯ ವಿಷಯದಲ್ಲಿ ಹಿಂದಿನಿಂದಲೂ ತೊಂದರೆ ಕೊಡುತ್ತಾ ಬಂದವರು, ಪಿರ್ಯಾದಿಯವರ ಮರ ಮಳೆ-ಗಾಳಿಗೆ ಗಡಿಬೇಲಿಯ ಹತ್ತಿರ ಬಿದ್ದಿದ್ದಕ್ಕೆ ಸಿಟ್ಟಾಗಿ ದಿನಾಂಕ: 17-06-2021 ರಂದು ಬೆಳಿಗ್ಗೆ 08-00 ಗಂಟೆಗೆ ಆರೋಪಿತರೆಲ್ಲರೂ ಸೇರಿ ಪಿರ್ಯಾದಿಯವರ ಜಾಗದಲ್ಲಿ ಅಕ್ರಮ ಪ್ರವೇಶ ಮಾಡಿ ಬಂದು, ಪಿರ್ಯಾದಿ ಮತ್ತು ಅವರ ಮಗನಿಗೆ ಅಡ್ದಗಟ್ಟಿ ತಡೆದು, ಅವಾಚ್ಯ ಶಬ್ದಗಳಿಂದ ಬೈಯ್ದು, ಆರೋಪಿ 1 ನೇಯವನು ಬಡಿಗೆಯಿಂದ ಪಿರ್ಯಾದಿಯವರ ಮಗ ಗಜಾನನ ಅಂಬಿಗ ಈತನ ತಲೆಯ ಹಿಂಬದಿಗೆ, ಸೊಂಟಕ್ಕೆ ಬೆನ್ನಿಗೆ ಹೊಡೆದು ಗಾಯ ಪಡಿಸಿದ್ದು, ಆರೋಪಿ 2 ನೇಯವನು ಗಜಾನನ ಅಂಬಿಗ ಈತನ ಮೈಮೇಲೆ ಕೈಯಿಂದ ಹೊಡೆದು, ನೆಲಕ್ಕೆ ದೂಡಿ ಕೆಡವಿದ್ದು, ಆರೋಪಿ 3 ನೇಯವಳು ಪಿರ್ಯಾದಿಗೆ ಕೈಯಿಂದ ಮೈಮೇಲೆ ಹೊಡೆದು ಜೀವದ ಬೆದರಿಕೆ ಹಾಕಿದ ಬಗ್ಗೆ ಪಿರ್ಯಾದಿ ಶ್ರೀಮತಿ ಲಕ್ಷ್ಮೀ ಜಟ್ಟಿ ಅಂಬಿಗ, ಪ್ರಾಯ-65 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಲುಕ್ಕೇರಿ, ದೇವರಬೋಳೆ, ತಾ: ಕುಮಟಾ ರವರು ದಿನಾಂಕ: 17-06-2021 ರಂದು 12-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 117/2021, ಕಲಂ: 427, 448 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಶ್ರೀಮತಿ ಶಮಿನ್ ಬಾನು ಮಹಮ್ಮದ್ ಶಫೀ ಶೇಖ್, ಸಾ|| ಹಳೇ ಹೆರವಟ್ಟಾ, ತಾ: ಕುಮಟಾ, 2]. ಶಂಕರ ತಿಮ್ಮಯ್ಯ ಗುನಗಾ, 3]. ರವೀಂದ್ರ ತಿಮ್ಮಯ್ಯ ಪಟಗಾರ, 4]. ಸಂತೋಷ ತಿಮ್ಮಯ್ಯ ಪಟಗಾರ, ಸಾ|| (ಎಲ್ಲರೂ) ಮಾಸೂರು, ತಾ: ಕುಮಟಾ. ಈ ನಮೂದಿತ ಆರೋಪಿತರಲ್ಲಿ ಆರೋಪಿ 1 ನೇಯವರಿಗೂ ಹಾಗೂ ಪಿರ್ಯಾದಿಗೂ ಜಮೀನಿನ ವಿಷಯದಲ್ಲಿ ತಂಟೆ ತಕಾರಾರು ನಡೆಯುತ್ತಿದ್ದು, ಆರೋಪಿ 1 ನೇಯವರು ಆರೋಪಿ 2, 3 ಹಾಗೂ 4 ನೇಯವರ ಮುಖಾಂತರ ದಿನಾಂಕ: 17-06-2021 ರಂದು ಮುಂಜಾನೆ 03-00 ಗಂಟೆಯಗೆ ಪಿರ್ಯಾದಿಗೆ ಸಂಬಂಧಿಸಿದ ಕುಮಟಾ ತಾಲೂಕಿನ ವಿವೇಕನಗರದ ಸರ್ವೇ ನಂ: 70ಅ/1ಅ ಪ್ಲೊಟ್ ನಂ: 56 ನೇದರಲ್ಲಿರುವ ಶೆಡ್ಡಿನ ಬಾಗಿಲ ಬೀಗ ಒಡೆದು ಶೆಡ್ಡನ್ನು ಅಕ್ರಮ ಪ್ರವೇಶ ಮಾಡಿ, ಶೆಡ್ ಒಳಗಡೆ ಇರುವ ಗ್ರಹಬಳಕೆ ಸಾಮಾನು ಮತ್ತು ಕಟ್ಟಡ ನಿರ್ಮಾಣ ಸಾಮಾನುಗಳನ್ನು ಹಾಳು ಮಾಡಿ ಶೆಡ್ ಗೋಡೆಯನ್ನು ಕೆಡವಿ ಲುಕ್ಸಾನ್ ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀಮತಿ ಲಕ್ಷ್ಮೀ ಕಿರಣ ರೋಕಡೆ, ಪ್ರಾಯ-46 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಮೂರೂರು ಕ್ರಾಸ್, ತಾ: ಕುಮಟಾ ರವರು ದಿನಾಂಕ: 17-06-2021 ರಂದು 20-10 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 39/2021, ಕಲಂ: 87 ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ಮಾರುತಿ ತಂದೆ ಅನಂತ ಪಾಟೀಲ್, ಪ್ರಾಯ-50 ವರ್ಷ, ವೃತ್ತಿ-ವೆಲ್ಡಿಂಗ್ ಕೆಲಸ, ಸಾ|| ಹರೆಗಾಳಿ, ದಾಂಡೇಲಿ, 2]. ಅನೀಲ್ ತಂದೆ ಬಾಬು ಕಳ್ಳಿಮನೆ, ಸಾ|| ಹನುಮಾನ್ ಮಂದಿರ ಹತ್ತಿರ, ಗಾಂವಠಾಣ, ದಾಂಡೇಲಿ, 3]. ಮೊಹ್ಮದ್ ರಸೂಲ್ ತಂದೆ ಮಹ್ಮದಅಲಿ ಅಚ್ಚನ್, ಪ್ರಾಯ-29 ವರ್ಷ, ವೃತ್ತಿ-ಎಳನೀರು ವ್ಯಾಪಾರ, ಸಾ|| ಚರ್ಚ್ ಹತ್ತಿರ, ಗಾಂವಠಾಣ, ದಾಂಡೇಲಿ, 4]. ನಾಗರಾಜ ತಂದೆ ಮಹಾದೇವ ಸಣ್ಣತಮ್ಮನವರ, ಪ್ರಾಯ-28 ವರ್ಷ, ವೃತ್ತಿ-ಕಿರಾಣಿ ಅಂಗಡಿ ವ್ಯಾಪಾರ, ಸಾ|| ಗಾಂವಠಾಣ, ದಾಂಡೇಲಿ, 5]. ಸಾವು ತಂದೆ ಲಕ್ಷ್ಮಣ ಕಾತ್ರೋಟ್, ಪ್ರಾಯ-32 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ವಿಟ್ನಾಳ, ದಾಂಡೇಲಿ. ಈ ನಮೂದಿತ ಆರೋಪಿತರು ದಿನಾಂಕ: 17-06-2021 ರಂದು 19-00 ಗಂಟೆಗೆ ಜೋಯಿಡಾ ತಾಲೂಕಿನ ಕೊಣಪಾ (ಕೊಂಡಪಾ) ಗ್ರಾಮದ ಹತ್ತಿರ ಡಾಂಬರ್ ರಸ್ತೆಯ ಪಕ್ಕದ ಅರಣ್ಯದಲ್ಲಿರುವ ಸಾರ್ವಜನಿಕ ಸ್ಥಳದಲ್ಲಿ ತಮ್ಮ ತಮ್ಮ ಲಾಭಕೋಸ್ಕರ ಇಸ್ಪೀಟ್ ಎಲೆಗಳ ಮೇಲೆ ಅಂದರ್-ಬಾಹರ್ ಎಂಬ ಜೂಗಾರಾಟವನ್ನು ಆಡುತ್ತಿದ್ದಾಗ ದಾಳಿಯ ಕಾಲ ಆರೋಪಿ 1 ರಿಂದ 5 ನೇಯವರು ಸ್ಥಳದಲ್ಲಿಯೇ ಸಲಕರಣೆಗಳಾದ 1). ಇಸ್ಪೀಟ್ ಎಲೆಗಳು-52, 2). ದಿನಪತ್ರಿಕೆಯ ಮಂಡ-1, 3). ಮೆಣದ ಬತ್ತಿ-1 ಹಾಗೂ 4). ನಗದು ಹಣ 1,800/- ರೂಪಾಯಿ ನೇದರೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಐ. ಆರ್. ಗಡ್ಡೇಕರ್, ಪಿ.ಎಸ್.ಐ (ಕಾ&ಸು), ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆ ರವರು ದಿನಾಂಕ: 17-06-2021 ರಂದು 20-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 53/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ಗೋವಿಂದ ತಂದೆ ವೆಂಕಟು ದೇವಾಡಿಗ, ಪ್ರಾಯ-44 ವರ್ಷ, ವೃತ್ತಿ-ವ್ಯಾಪಾರ, ಸಾ|| ಕೊರ್ಸೆ, ಪೋ: ಎಕ್ಕಂಬಿ, ತಾ: ಶಿರಸಿ. ಈತನು ದಿನಾಂಕ: 17-06-2021 ರಂದು 14-50 ಗಂಟೆಗೆ ಶಿರಸಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಬಿಸಲಕೊಪ್ಪ ಬಸ್ ನಿಲ್ದಾಣದ ಎದುರಿನ ಸಾರ್ವಜನಿಕ ರಸ್ತೆಯಲ್ಲಿ ಬರ-ಹೋಗುವ ಸಾರ್ವಜನಿಕರನ್ನು ಕೂಗಿ ಕರೆದು ಓ.ಸಿ ಜೂಗಾರಾಟದ ಅಂಕೆಗಳ ಮೇಲೆ ಹಣದ ಪಂಥ ಕಟ್ಟಿದರೆ 01/- ರೂಪಾಯಿಗೆ 80/- ರೂಪಾಯಿ ಕೊಡುವುದಾಗಿ ಹೇಳಿ, ಬಂದ ಜನರಿಂದ ಹಣ ಪಡೆದುಕೊಂಡು ಓ.ಸಿ ಚೀಟಿ ಬರೆದು ಕೊಡುವಾಗ ದಾಳಿಯ ವೇಳೆ ಓ.ಸಿ ಮಟಕಾ ಜೂಗಾರಾಟದ ಸಲಕರಣೆಗಳಾದ 1). ನಗದು ಹಣ 1,135/- ರೂಪಾಯಿ, 2). ಬಾಲ್ ಪೆನ್-01, 3). ಓ.ಸಿ ಅಂಕೆ-ಸಂಖ್ಯೆ ಬರೆದ ಚೀಟಿ-01 ಹಾಗೂ 4). ಚೀಟಿ ಬರೆದು ಕೊಡಲು ತುಂಡು ಮಾಡಿ ಇಟ್ಟುಕೊಂಡಿದ್ದ 2 ಸಣ್ಣ ಸಣ್ಣ ಚೀಟಿಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಶ್ಯಾಮ ಪಾವಸ್ಕರ್, ಪಿ.ಎಸ್.ಐ (ಕ್ರೈಂ), ಶಿರಸಿ ಗ್ರಾಮೀಣ ಪೊಲೀಸ್ ಠಾಣೆ ರವರು ದಿನಾಂಕ: 17-06-2021 ರಂದು 17-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 54/2021, ಕಲಂ: 324, 504, 506 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಈಶ್ವರ ತಂದೆ ಕೆರಿಯಾ ಗೌಡ, ಪ್ರಾಯ-22 ವರ್ಷ, ಸಾ|| ಬೆಳಗಲಮನೆ, ಪೋ: ಕಳವೆ, ತಾ: ಶಿರಸಿ. ಈತನು ದಿನಾಂಕ: 17-06-2021 ರಂದು 16-00 ಗಂಟೆಯ ಸುಮಾರಿಗೆ ತನ್ನ ಗದ್ದೆಗೆ ಪವರ್ ಟಿಲ್ಲರ್ ತೆಗೆದುಕೊಂಡು ಹೋಗಲು ಪಿರ್ಯಾದಿಯ ಗದ್ದೆಯ ಹಾಳೆಯನ್ನು ಕಡಿದು ದಾರಿ ಮಾಡುತ್ತಿರುವಾಗ, ಪಿರ್ಯಾದಿಯು ಆರೋಪಿತನಿಗೆ ‘ನನ್ನ ಗದ್ದೆಯ ಹಾಳೆಯನ್ನು ಏಕೆ ಕಡಿಯುತ್ತಿದ್ದೀಯಾ? ನಿನ್ನ ಗದ್ದೆಗೆ ಹೋಗಲು ಒಂದು ಬದಿಗೆ ನನ್ನ ಗದ್ದೆಯಲ್ಲಿ ದಾರಿ ಬಿಟ್ಟಿದ್ದಿದೆ. ಅಲ್ಲಿಂದ ಹೋಗಬಹುದು’ ಎಂದು ಹೇಳಿದಕ್ಕೆ ಆರೋಪಿತನು ಏಕಾಏಕಿಯಾಗಿ ಸಿಟ್ಟಾದವನು ‘ಬೋಸುಡಿ ಮಗನೆ, ನನಗೇನು ಹೇಳುತ್ತಿಯಾ?’ ಎಂದವನು ತನ್ನ ಸೊಂಟದಲ್ಲಿದ್ದ ಕತ್ತಿಯಿಂದ ಪಿರ್ಯಾದಿಯ ತಲೆಗೆ ಹೊಡೆದಾಗ, ಪಿರ್ಯಾದಿಯು ಚೀರಲಾರಂಭಿಸಿದ್ದನ್ನು ಕೇಳಿ ತನ್ನ ಮಗಳು ಮತ್ತು ಸೊಸೆ ಬಂದು ಆರೋಪಿತನು ಪಿರ್ಯಾದಿಗೆ ಮತ್ತೆ ಹೊಡೆಯುವುದನ್ನು ತಪ್ಪಿಸಿದಾಗ, ಆರೋಪಿತನು ಪಿರ್ಯಾದಿಗೆ ಉದ್ದೇಶಿಸಿ ‘ಸೂಳೆ ಮಗನೆ, ಈ ದಿನ ನೀನು ಬಚಾವ್ ಆಗಿದ್ದೀಯಾ. ಮುಂದೊಂದು ದಿನ ನಿನ್ನನ್ನು ಕೊಂದು ಹಾಕುತ್ತೇನೆ’ ಎಂದು ಜೀವದ ಬೆದರಿಕೆ ಹಾಕಿದ ಬಗ್ಗೆ ಪಿರ್ಯಾದಿ ಶ್ರೀ ಗಣಪತಿ ತಂದೆ ಬಡಿಯಾ ಗೌಡ, ಪ್ರಾಯ-55 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಬೆಳಗಲಮನೆ, ಪೋ: ಕಳವೆ, ತಾ: ಶಿರಸಿ ರವರು ದಿನಾಂಕ: 17-06-2021 ರಂದು 20-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಸಿದ್ದಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 73/2021, ಕಲಂ: 15(ಎ), 32(3) ಕರ್ನಾಟಕ ಅಬಕಾರಿ ಕಾಯದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ರವಿ ತಂದೆ ನಾರಾಯಣ ನಾಯ್ಕ, ಪ್ರಾಯ-40 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕೋಡಿಗದ್ದೆ, ತಾ: ಸಿದ್ದಾಪುರ. ಈತನು ದಿನಾಂಕ: 17-06-2021 ರಂದು 14-30 ಗಂಟೆಗೆ ಸಿದ್ದಾಪುರ ತಾಲೂಕಿನ ಕೋಡಿಗದ್ದೆಯಲ್ಲಿರುವ ತನ್ನ ಮನೆಯ ಎದುರಿನ ಅಂಗಳದ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಅನಧೀಕೃತವಾಗಿ ಸಾರ್ವಜನಿಕರಿಗೆ ಮುಕ್ತವಾಗಿ ಮದ್ಯ ಸೇವನೆ ಮಾಡಲು ಅವಕಾಶ ಮಾಡಿ ಕೊಟ್ಟಿದ್ದಾಗ ಪಿರ್ಯಾದಿಯವರು ಸಿಬ್ಬಂದಿಗಳೊಂದಿಗೆ ಸೇರಿ ದಾಳಿ ಮಾಡಿದಾಗ, 1). CAPTAIN MARTINS Special WHISKY-90 ML ಅಂತಾ ಬರೆದ ಮದ್ಯ ತುಂಬಿದ 10 ಪೌಚ್ ಗಳು, 2). 02 ಪ್ಲಾಸ್ಟಿಕ್ ಗ್ಲಾಸುಗಳು, 3). CAPTAIN MARTINS Special WHISKY-90 ML ಅಂತಾ ಬರೆದ 03 ಮದ್ಯದ ಖಾಲಿ ಪೌಚ್‍ ಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಮಹಾಂತಪ್ಪ ಜಿ. ಕುಂಬಾರ, ಪಿ.ಎಸ್.ಐ. ಸಿದ್ದಾಪುರ ಪೊಲೀಸ್ ಠಾಣೆ ರವರು ದಿನಾಂಕ: 17-06-2021 ರಂದು 16-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ರಾಮನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 56/2021, ಕಲಂ: 279, 304(ಎ) ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಖಾಜಾ ಅಬಿಬುದ್ದೀನ್ ತಂದೆ ಅಮೀರುದ್ದೀನ್ ಖತೀಬ್, ಸಾ|| ಗಾಂಧಿನಗರ, ದಾಂಡೇಲಿ (ಮೋಟಾರ್ ಸೈಕಲ್ ನಂ: ಕೆ.ಎ-65/ಎಚ್-2462 ನೇದರ ಚಾಲಕ). ಮೃತಳಾದ ಶ್ರೀಮತಿ ಮಂದಿರಾ ಕೋಂ. ಸೂರ್ಯಕಾಂತ ದೇಸಾಯಿ, ಪ್ರಾಯ-42 ವರ್ಷ, ಸಾ|| ಇಳವೆದಾಬೆ, ಕಾಮ್ರಾ, ತಾ: ಜೋಯಿಡಾ ಇವಳು ಇಳವೆದಾಬೆಯ ‘ಡಾರ್ಕ್ ಫಾರೆಸ್ಟ್ ಹೋಂ ಸ್ಟೇ’ ದಲ್ಲಿ ಕೂಲಿ ಕೆಲಸಕ್ಕೆ ಹೋಗುತ್ತಾ ಇದ್ದವಳಿಗೆ ಹೋಂ ಸ್ಟೇ ದವರು ಬಂದು ಕರೆದುಕೊಂಡು ಹೋಗುವುದು ಹಾಗೂ ಮರಳಿ ತಂದು ಬಿಡುವುದು ಮಾಡುತ್ತಿದ್ದರು. ಇಳವೆದಾಬೆಯ ‘ಡಾರ್ಕ್ ಫಾರೆಸ್ಟ್ ಹೋಂ ಸ್ಟೇ’ ದ ಮ್ಯಾನೇಜರ್ ಆಗಿರುವ ನಮೂದಿತ ಆರೋಪಿತನು ತನ್ನ ಮೋಟಾರ್ ಸೈಕಲ್ ನಂ: ಕೆ.ಎ-65/ಎಚ್-2462 ನೇದರ ಮೇಲೆ ಶ್ರೀಮತಿ ಮಂದಿರಾ ಕೋಂ. ಸೂರ್ಯಕಾಂತ ದೇಸಾಯಿ ರವರನ್ನು ಇಳವೆದಾಬೆಯಿಂದ ಇಳವೆಯ ‘ಡಾರ್ಕ್ ಫಾರೆಸ್ಟ್ ಹೋಂ ಸ್ಟೇ’ ಗೆ ಕೆಲಸಕ್ಕೆ ಕರೆದುಕೊಂಡು ಹೋಗುವಾಗ ಕಾಡಿನ ಮಧ್ಯದ ತಿರುವುಗಳಿಂದ ಕೂಡಿದ ರಸ್ತೆಯಲ್ಲಿ ತಮ್ಮ ಮಾನವ ಪ್ರಾಣಕ್ಕೆ ಹಾನಿಯಾಗುವ ರೀತಿಯಲ್ಲಿ ಮೋಟಾರ್ ಸೈಕಲನ್ನು ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ದಿನಾಂಕ: 16-06-2021 ರಂದು ಬೆಳಿಗ್ಗೆ 09-30 ರಿಂದ 09-40 ಗಂಟೆಯ ನಡುವಿನ ಅವಧಿಯಲ್ಲಿ  ಅಪಘಾತ ಪಡಿಸಿ, ಶ್ರೀಮತಿ ಮಂದಿರಾ ಕೋಂ. ಸೂರ್ಯಕಾಂತ ದೇಸಾಯಿ ರವರ ತಲೆಯ ಭಾಗದಲ್ಲಿ ತೀವೃ ಸ್ವರೂಪದ ದುಃಖಾಪತ್ ಪಡಿಸಿದ್ದು, ಶ್ರೀಮತಿ ಮಂದಿರಾ ಕೋಂ. ಸೂರ್ಯಕಾಂತ ದೇಸಾಯಿ ರವರನ್ನು ಉಪಚಾರಕ್ಕೆ ತೆಗೆದುಕೊಂಡು ಹೋಗುವಾಗ ದಿನಾಂಕ: 16-06-2021 ರಂದು ಸಾಯಂಕಾಲ 05-15 ಗಂಟೆಯ ಸುಮಾರಿಗೆ ಮೃತಪಟ್ಟಿರುತ್ತಾರೆ ಎಂಬ ಬಗ್ಗೆ ಪಿರ್ಯಾದಿ ಶ್ರೀಮತಿ ರಂಜನಾ ಕೋಂ. ರಮಾಕಾಂತ ದೇಸಾಯಿ, ಪ್ರಾಯ-41 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಇಳವೆದಾಬೆ, ಕಾಮ್ರಾ, ತಾ: ಜೋಯಿಡಾ ರವರು ದಿನಾಂಕ: 17-06-2021 ರಂದು 10-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ರಾಮನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 57/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಮಂಜುನಾಥ ತಂದೆ ವೆಂಕಪ್ಪ ಮಾದರ, ಸಾ|| ಡಿ.ಎಫ್.ಎ ಟೌನಶಿಪ್, ದಾಂಡೇಲಿ (ಕಾರ್ ನಂ: ಕೆ.ಎ-05/ಎಮ್.ಯು-9257 ನೇದರ ಚಾಲಕ). ಈತನು ದಿನಾಂಕ: 15-06-2021 ರಂದು 17-30 ಗಂಟೆಗೆ ತನ್ನ ಗೆಳೆಯ ಮಲ್ಲಿಕಜಾನ್ ನಜೀರಅಹ್ಮದ್ ಸವಣೂರು ಜೊತೆ ಸೇರಿಕೊಂಡು ಕಾರ್ ನಂ: ಕೆ.ಎ-05/ಎಮ್.ಯು-9257 ನೇದರಲ್ಲಿ ಪಿರ್ಯಾದಿಯ ಗೆಳೆಯ ಅರುಣಕುಮಾರ ಭಗವತಿರಾಜ್ ರವರು ಮಾಡುತ್ತಿರುವ ಹೋಂ ಸ್ಟೇ ದ ಕೆಲಸ ನೋಡಿಕೊಂಡು ಬರಲು ಗಣೇಶಗುಡಿಗೆ ಹೋದವರು ಮರಳಿ ಇಳವಾ-ಅವೇಡಾ ದ ಕಿರಿದಾದ ತಿರುವುಗಳಿಂದ ಕೂಡಿದ ರಸ್ತೆಯಲ್ಲಿ ದಾಂಡೇಲಿಗೆ ಅರ್ಜೆಂಟಾಗಿ ಹೋಗಬೇಕಾಗಿದ್ದರಿಂದ ದಾಂಡೇಲಿ ಕಡೆಗೆ ಕಾರನ್ನು ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗುತ್ತಿರುವಾಗ ಕಾರಿನ ಬಲಬದಿಯ ಮುಂದಿನ ಟೈಯರ್ ಬ್ಲಾಸ್ಟ್ ಆಗಿ, ಕಾರ್ ಮೇಲಿನ ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯ ಮರಕ್ಕೆ ಹೋಗಿ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದು, ಪರಿಣಾಮ ಕಾರಿನಲ್ಲಿದ್ದ ಮಲ್ಲಿಕಜಾನ್ ನಜೀರಅಹ್ಮದ್ ಸವಣೂರು, ಸಾ|| ಪೇಪರ್ ಮಿಲ್ ಸಿಬ್ಬಂದಿಗಳ ವಸತಿ ಗೃಹ, ದಾಂಡೇಲಿ ರವರಿಗೆ ಕುತ್ತಿಗೆಯ ಭಾಗದಲ್ಲಿ ಪೆಟ್ಟಾಗಿ, ಕಾರ್ ನಂ: ಕೆ.ಎ-05/ಎಮ್.ಯು-9257 ನೇದರ ಮುಂಭಾಗದ ಬಲಭಾಗದಲ್ಲಿ ಜಖಂ ಆಗಿರುವ ಬಗ್ಗೆ ಪಿರ್ಯಾದಿ ಶ್ರೀ ರತೀಶ ತಂದೆ ಭಾಸ್ಕರ, ಪ್ರಾಯ-31 ವರ್ಷ, ವೃತ್ತಿ-ಚಾಲಕ, ಸಾ|| ಮಾರ್ಕೆಟ್ ಏರಿಯಾ, ಗಣೇಶಗುಡಿ, ತಾ: ಜೋಯಿಡಾ ರವರು ದಿನಾಂಕ: 17-06-2021 ರಂದು 21-35 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 17-06-2021

at 00:00 hrs to 24:00 hrs

 

ಪ್ರಕರಣಗಳು ದಾಖಲಾಗಿರುವುದಿಲ್ಲ....

 

======||||||||======

 

 

 

ಇತ್ತೀಚಿನ ನವೀಕರಣ​ : 18-06-2021 04:59 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080