ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 17-05-2021

at 00:00 hrs to 24:00 hrs

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 107/2021, ಕಲಂ: ಗಂಡಸು ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಗಂಡಸು ಶ್ರೀ ಲಿಂಗಪ್ಪ ತಂದೆ ಅನಂತ ಗಾವಡಿ, ಪ್ರಾಯ-57 ವರ್ಷ. ವೃತ್ತಿ-ಕೃಷಿ ಕೆಲಸ ಸಾ|| ಕಂದವಳ್ಳಿ. ಕಲ್ಲಬ್ಬೆ, ತಾ: ಕುಮಟಾ. ಪಿರ್ಯಾದಿಯವರ ತಮ್ಮನಾದ ಈತನು ದಿನಾಂಕ: 16-05-2021 ರಂದು 15-00 ಗಂಟೆಯ ಸುಮಾರಿಗೆ ‘ಅಘನಾಶಿನಿ ಹೊಳೆಗೆ ಹಾಕಿದ ತನ್ನ ನೀರಿನ ಪಂಪ್ ಸೆಟ್ ಅನ್ನು ತೆಗೆದು ಮೇಲಕ್ಕೆ ಎತ್ತಿಟ್ಟು ಬರುತ್ತೇನೆ’ ಎಂದು ಹೇಳಿ ಹೋದವನು, ದಿನಾಂಕ: 16-05-2021 ರಂದು 21-00 ಗಂಟೆಯಾದರೂ ಮನೆಗೆ ಬಾರದೇ ಅಘನಾಶಿನಿ ಹೊಳೆಗೆ ಹಾಕಿದ ನೀರಿನ ಪಂಪ್ ಸೆಟ್ ಎತ್ತಲು ಹೋಗಿ ಆಕಸ್ಮಾತ್ ಕಾಲು ಜಾರಿ ಅಘನಾಶಿನಿ ನದಿಯ ಪ್ರವಾಹದಲ್ಲಿ ಸಿಕ್ಕಿ ಅಥವಾ ಎಲ್ಲಿಯೋ ಹೋಗಿ ಕಾಣೆಯಾಗಿದ್ದು, ಕಾಣೆಯಾದ ತನ್ನ ತಮ್ಮನನ್ನು ಹುಡುಕಿ ಕೊಡಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಶೇಷಗಿರಿ ತಂದೆ ಅನಂತ ಗಾವಡಿ, ಪ್ರಾಯ-63 ವರ್ಷ, ವೃತ್ತಿ-ನಿವೃತ್ತ ನೌಕರ, ಸಾ|| ಹುಬ್ಬಣಗೇರಿ, ಕಾಗಲ್, ತಾ: ಕುಮಟಾ ರವರು ದಿನಾಂಕ: 17-05-2021 ರಂದು 17-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 147/2021, ಕಲಂ: 269, 270 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ರಫೀಕ್ ತಂದೆ ಮಹಮ್ಮದ್, ಪ್ರಾಯ-36 ವರ್ಷ, ವೃತ್ತಿ-ಕ್ಯಾಂಟೀನ್ ಮಾಲೀಕ, ಸಾ|| ಎಸ್.ಪಿ.ಎಮ್ ರಸ್ತೆ, ತಾ: ಹೊಸನಗರ, ಜಿ: ಶಿವಮೊಗ್ಗ, 2]. ಶಾರೀಕ್ @ ಶಾಫೀ ಹುಸೂಪ್ ಸಾಬ್, ಸಾ|| ನಡುಚಿಟ್ಟೆ, ಕರ್ಕಿ, ತಾ: ಹೊನ್ನಾವರ, 3]. ಸುಹೇಲ್ ಇಸ್ಮಾಯಿಲ್ ಸಾಬ್, ಸಾ|| ನಡುಚಿಟ್ಟೆ, ಕರ್ಕಿ, ತಾ: ಹೊನ್ನಾವರ, 4]. ರಶೀದ್ ಖಾದರ್ ಸಾಬ್, ಸಾ|| ಸಾಗರ, ಶಿವಮೊಗ್ಗ, 5]. ಅರ್ಷದ್ ಅಬುಬಕ್ಕರ್ ಸಾಬ್, ಸಾ|| ನಡುಚಿಟ್ಟೆ, ಕರ್ಕಿ, ತಾ: ಹೊನ್ನಾವರ, 6]. ಬಾಸೀದ್ ಫಾರೂಕ್, ಸಾ|| ಸಾಗರ, ಶಿವಮೊಗ್ಗ. ಕರ್ನಾಟಕ ರಾಜ್ಯ ಸರ್ಕಾರ ಮತ್ತು ಮಾನ್ಯ ಜಿಲ್ಲಾಧಿಕಾರಿಗಳು, ಉತ್ತರ ಕನ್ನಡ ಜಿಲ್ಲೆ, ಕಾರವಾರ ರವರು ಉತ್ತರ ಕನ್ನಡ ಜಿಲ್ಲೆಯಾದ್ಯಂತ ಸಾಂಕ್ರಾಮಿಕ ರೋಗವಾದ ಕೋವಿಡ್-19 (ಕೊರೋನಾ ವೈರಾಣು) ಖಾಯಿಲೆ ಹರಡದಂತೆ ತಡೆಗಟ್ಟುವ ಸಲುವಾಗಿ ಲಾಕಡೌನ್ ಆದೇಶ ಹೊರಡಿಸಿದ್ದರೂ ಸಹ ನಮೂದಿತ ಆರೋಪಿತರು ದಿನಾಂಕ: 17-05-2021 ರಂದು ಮುಖಕ್ಕೆ ಮಾಸ್ಕ್ ಹಾಕದೇ, ಯಾವುದೇ ಸುರಕ್ಷತಾ ಕ್ರಮ ಅನುಸರಿಸದೇ, ಹೊನ್ನಾವರ ತಾಲೂಕಿನ ಕರ್ಕಿ ನಡುಚಿಟ್ಟೆಯ ಜೀಸಸ್ ರೈಸ್ ಮಿಲ್ ನ ಹಿಂದಿನ ಮೈದಾನದಲ್ಲಿ ಕ್ರಿಕೆಟ್ ಆಟವನ್ನು ಆಡಿ ಕೊರೋನಾ ಸಾಂಕ್ರಾಮಿಕ ರೋಗದ ಸರ್ಕಾರದ ಲಾಕಡೌನ್ ಆದೇಶದ ಉಲ್ಲಂಘನೆ ಮಾಡಿ, ಪ್ರಾಣಕ್ಕೆ ಅಪಾಯಕಾರಿಯಾದ ಕೊರೋನಾ ಸಾಂಕ್ರಾಮಿಕ ರೋಗದ ಸೋಂಕನ್ನು ಹರಡುವುದನ್ನು ತಡೆಯಲು ಕೈಗೊಳ್ಳಬೇಕಾದ ಮುಂಜಾಗೃತ ಕ್ರಮಗಳನ್ನು ತೆಗೆದುಕೊಳ್ಳದೇ, ಅನಗತ್ಯವಾಗಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರ ಪ್ರಾಣ ಮತ್ತು ದೈಹಿಕ ಸುರಕ್ಷತೆಗೆ ಅಪಾಯವಾಗುವ ರೀತಿಯಲ್ಲಿ ಆಟವಾಡಿ ಮಾನವನ ಪ್ರಾಣಕ್ಕೆ ಅಪಾಯಕಾರಿಯಾದ ಕೊರೋನಾ ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವಿಕೆ ಬಗ್ಗೆ ಘನ ಸರ್ಕಾರ ಹೊರಡಿಸಿದ ಆದೇಶವನ್ನು ಉಲ್ಲಂಘನೆ ಮಾಡಿದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಮಹಾಂತೇಶ ಉದಯ ನಾಯಕ, ಪಿ.ಎಸ್.ಐ (ಕಾ&ಸು-2), ಹೊನ್ನಾವರ ಪೊಲೀಸ್ ಠಾಣೆ ರವರು ದಿನಾಂಕ: 17-05-2021 ರಂದು 16-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮಂಕಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 78/2021, ಕಲಂ: 269, 270 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ರವಿ ತಂದೆ ಮಾಸ್ತಿ ನಾಯ್ಕ, ಪ್ರಾಯ-36 ವರ್ಷ, ವೃತ್ತಿ-ಸುಗಮಾ ಟೂರಿಸ್ಟ್ ಟ್ರಾನ್ಸಪೋರ್ಟ್ ಕಾಲ್ ಸೆಂಟರಿನಲ್ಲಿ ಕೆಲಸ, ಸಾ|| ಕೆ.ಇ.ಬಿ ಹತ್ತಿರ, ಕಾಸರಕೋಡ, ತಾ: ಹೊನ್ನಾವರ, ಹಾಲಿ ಸಾ|| ನಂ: 116/2, ಟ್ರೇಡ್ ಸೆಂಟರ್, ರೇಸ್ ಕೋರ್ಸ್ ರೋಡ್, ಸುಗಮಾ ಟೂರಿಸ್ಟ್, ಬೆಂಗಳೂರು. ಈತನು ಕೋವಿಡ್-19 2 ನೇ ಅಲೆಯ ಸಾಂಕ್ರಾಮಿಕ ರೋಗದ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಮಾನ್ಯ ಕರ್ನಾಟಕ ಸರ್ಕಾರ ಹಾಗೂ ಮಾನ್ಯ ಜಿಲ್ಲಾಧಿಕಾರಿಗಳು, ಉತ್ತರ ಕನ್ನಡ ಜಿಲ್ಲೆ, ಕಾರವಾರ ರವರು ಹೊರಡಿಸಿದ ಲಾಕಡೌನ್ ಆದೇಶಗಳಿದ್ದರೂ ಸಹ ದಿನಾಂಕ: 17-05-2021 ರಂದು ಮಧ್ಯಾಹ್ನ 12-45 ಗಂಟೆಗೆ ಮಂಯ ಚಿತ್ತಾರ ಕ್ರಾಸಿನಲ್ಲಿ ತನ್ನ ಮೋಟಾರ್ ಸೈಕಲ್ ನಂ: ಕೆ.ಎ-47/ಡಬ್ಲ್ಯೂ-3140 ನೇದರ ಮೇಲೆ ಸಾರ್ವಜನಿಕರಿಗೆ ಮಾರಣಾಂತಿಕ ಸಾಂಕ್ರಾಮಿಕ ರೋಗವನ್ನು ಹರಡುವ ಉದ್ದೇಶದಿಂದ ಅನಾವಶ್ಯಕವಾಗಿ ತಿರುಗಾಡುತ್ತಿದ್ದಾಗ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಅಪ್ಪಾಜಿ ಬಾಬು ಗೊಂಧಳಿ, ಪಿ.ಎಸ್.ಐ (ಕ್ರೈಂ), ಮಂಕಿ ಪೊಲೀಸ್ ಠಾಣೆ ರವರು ದಿನಾಂಕ: 17-05-2021 ರಂದು 14-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮಂಕಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 79/2021, ಕಲಂ: 269, 270 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ದಾಮೋದರ ತಂದೆ ಮಂಜುನಾಥ ಸಿಂಗನಕುಳಿ, ಪ್ರಾಯ-22 ವರ್ಷ, ವೃತ್ತಿ-ಡಿಪ್ಲೋಮಾ ವಿದ್ಯಾರ್ಥಿ, ಸಾ|| ಅರೆಂಗಡಿ, ತಾ: ಹೊನ್ನಾವರ, ಹಾಲಿ ಸಾ|| ಮಂಕಿ, ಗುಳ್ಳದಕೇರಿ, ತಾ: ಹೊನ್ನಾವರ. ಈತನು ಕೋವಿಡ್-19 2 ನೇ ಸಾಂಕ್ರಾಮಿಕ ರೋಗದ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಮಾನ್ಯ ಕರ್ನಾಟಕ ಸರಕಾರಗಳು ಹಾಗೂ ಮಾನ್ಯ ಜಿಲ್ಲಾಧಿಕಾರಿಗಳು, ಉತ್ತರ ಕನ್ನಡ ಜಿಲ್ಲೆ, ಕಾರವಾರ ರವರು ಹೊರಡಿಸಿದ ಲಾಕಡೌನ ಆದೇಶಗಳಿದ್ದರೂ ಸಹ ಸಾರ್ವಜನಿಕರಿಗೆ ಮಾರಣಾಂತಿಕ ಸಾಂಕ್ರಾಮಿಕ ರೋಗವನ್ನು ಹರಡುವ ಉದ್ದೇಶದಿಂದ ಆದೇಶವನ್ನು ಉಲ್ಲಂಘಿಸಿ, ಅನಾವಶ್ಯಕವಾಗಿ ತಿರುಗಾಡುತ್ತಾ ದಿನಾಂಕ: 17-05-2021 ರಂದು ಮಧ್ಯಾಹ್ನ 13-00 ಗಂಟೆಗೆ ಗುಳದಕೇರಿ ಕಡೆಯಿಂದ ರಾಷ್ಟ್ರೀಯ ಹೆದ್ದಾರಿಯ ಕಡೆಗೆ ತನ್ನ ರಾಯಲ್ ಎನಫೀಲ್ಡ್ ಮೋಟಾರ್ ಸೈಕಲ್ ನಂ: ಕೆ.ಎ-47/ಡಬ್ಲ್ಯೂ-4466 ನೇದನ್ನು ಚಲಾಯಿಸಿಕೊಂಡು ಬರುತ್ತಾ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಪರಮಾನಂದ ಬಿ. ಕೊಣ್ಣೂರ, ಪಿ.ಎಸ್.ಐ (ಕಾ&ಸು), ಮಂಕಿ ಪೊಲೀಸ್ ಠಾಣೆ ರವರು ದಿನಾಂಕ: 17-05-2021 ರಂದು 14-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 84/2021, ಕಲಂ: 323, 324, 504, 506 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಸುರೇಶ ತಂದೆ ನಾಗಪ್ಪ ಪವಾರೇಕರ, ಪ್ರಾಯ-23 ವರ್ಷ, ವೃತ್ತಿ-ವ್ಯಾಪಾರ, 2]. ಶ್ರೀಮತಿ ಗೀತಾ ಕೋಂ. ನಾಗಪ್ಪ ಪವಾರೇಕರ, ಪ್ರಾಯ-47 ವರ್ಷ, ವೃತ್ತಿ-ಮನೆ ಕೆಲಸ, 3]. ಶ್ರೀಮತಿ ಕುಸುಮಾ ಕೋಂ. ಸುರೇಶ ಪವಾರೇಕರ, ಪ್ರಾಯ-21 ವರ್ಷ, ಸಾ|| (ಎಲ್ಲರೂ) ನಿಟ್ಟೂರ, ಹುಣಶೆಟ್ಟಿಕೊಪ್ಪ, ತಾ: ಯಲ್ಲಾಪುರ. ಈ ನಮೂದಿತ ಆರೋಪಿತರಲ್ಲಿ ಆರೋಪಿ 1 ನೇಯವವನು ಪಿರ್ಯಾದಿಯವರ ಹೆಂಡತಿಯ ಸಹೋದರನಾಗಿದ್ದು ಹಾಗೂ ಆರೋಪಿ 2 ನೇಯವಳು ಆರೋಪಿ 1 ನೇಯವನ ತಾಯಿ ಹಾಗೂ ಆರೋಪಿ 3 ನೇಯವಳು ಆರೋಪಿ 1 ನೇಯವನ ಪತ್ನಿಯಾಗಿದ್ದು, ದಿನಾಂಕ: 16-05-2021 ರಂದು ಮಧ್ಯಾಹ್ನ ಸುಮಾರು 13-30 ಗಂಟೆಯ ಸಮಯಕ್ಕೆ ಪಿರ್ಯಾದಿಯವರ ಹೆಂಡತಿಯಾದ ಶ್ರೀಮತಿ ಜಯಶ್ರೀ ರವರು ಯಲ್ಲಾಪುರ ತಾಲೂಕಿನ ನಿಟ್ಟೂರ ಗ್ರಾಮದಲ್ಲಿರುವ ಆರೋಪಿ 1 ನೇಯವನ ಮನೆಯ ಬಳಿ ಹೋಗಿ ‘ತನಗೆ ಆಸ್ತಿ ಕೊಡಿ’ ಅಂತಾ ಕೇಳಿದಾಗ ಮನೆಯಲ್ಲಿದ್ದ ಆರೋಪಿ 2 ನೇಯವಳು ಜಗಳ ತೆಗೆದು ಕತ್ತಿಯಿಂದ ಜಯಶ್ರೀ ರವರಿಗೆ ಹೊಡೆದು ಗಾಯ ಮಾಡಿದ್ದು, ಈ ಬಗ್ಗೆ ದಿನಾಂಕ: 17-05-2021 ರಂದು ಮಧ್ಯಾಹ್ನ ಸುಮಾರು 14-00 ಗಂಟೆಗೆ ಪಿರ್ಯಾದಿಯವರು ತನ್ನೊಂದಿಗೆ ತನ್ನ ಹೆಂಡತಿ ಶ್ರೀಮತಿ ಜಯಶ್ರೀ ಹಾಗೂ ಹೆಂಡತಿಯ ಅಕ್ಕ ಶ್ರೀಮತಿ ಭಾರತಿ ಮತ್ತು ಮಗ ಧನರಾಜ ರವರೊಂದಿಗೆ ಆರೋಪಿ 1 ನೇಯವನ ಮನೆಯ ಬಳಿ ಹೋಗಿ ವಿಚಾರಿಸಿದಾಗ ಮನೆಯಲ್ಲಿದ್ದ ಅರೋಪಿ 1 ನೇಯವನು ‘ಬೋಳಿ ಮಗನೆ, ಆಸ್ತಿಯಲ್ಲಿ ಪಾಲು ಬೇಕಾ?’ ಅಂತಾ ಅವಾಚ್ಯವಾಗಿ ಬೈಯ್ದು, ಕತ್ತಿಯಿಂದ ಪಿರ್ಯಾದಿಯವರ ಬಲಗೈಗೆ ಹೊಡೆದು, ಪಿರ್ಯಾದಿಯವರ ಮಗನಾದ ಧನರಾಜ ಈತನಿಗೆ ಕೈಯಿಂದ  ಹೊಡೆದು ದುಃಖಾಪತ್ ಪಡಿಸಿದ್ದು ಹಾಗೂ ಆರೋಪಿ 2 ಮತ್ತು 3 ನೇಯವರು ಕಟ್ಟಿಗೆಯ ಬಡಿಗೆಯಿಂದ ಪಿರ್ಯಾದಿಯವರ ಹೆಂಡತಿ ಜಯಶ್ರೀ ಹಾಗೂ ಭಾರತಿ ರವರ ತಲೆಗೆ ಹೊಡೆದು ದುಃಖಾಪತ್ ಪಡಿಸಿ, ಜೀವ ಬೆದರಿಕೆ ಹಾಕಿದ ಬಗ್ಗೆ ಪಿರ್ಯಾದಿ ಶ್ರೀ ಚಂದನ ತಂದೆ ವಾಸುದೇವ ನಾಯ್ಕ, ಪ್ರಾಯ-42 ವರ್ಷ, ವೃತ್ತಿ-ಕಿರಾಣಿ ವ್ಯಾಪಾರ, ಸಾ|| ನೇಕಾರ ನಗರ, ಸಂತೋಷ ನಗರ, ಹಳೇ ಹುಬ್ಬಳ್ಳಿ, ಹುಬ್ಬಳ್ಳಿ ರವರು ದಿನಾಂಕ: 17-05-2021 ರಂದು 19-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 29/2021, ಕಲಂ: 269, 270 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಹುಸೇನಸಾಬ್ ತಂದೆ ಅಬ್ದುಲಖಾದರ್ ಮನಿಯಾರ್, ಪ್ರಾಯ-52 ವರ್ಷ, ವೃತ್ತಿ-ಬಳೆ ಅಂಗಡಿ ವ್ಯಾಪಾರ, ಸಾ|| ಮುಸ್ಲಿಂ ಗಲ್ಲಿ, ತಾ: ಶಿರಸಿ. ಮಾನ್ಯ ಕರ್ನಾಟಕ ಸರ್ಕಾರ ಬೆಂಗಳೂರು ಮತ್ತು ಮಾನ್ಯ ಜಿಲ್ಲಾಧಿಕಾರಿಗಳು, ಉತ್ತರ ಕನ್ನಡ ಜಿಲ್ಲೆ, ಕಾರವಾರ ರವರ ಅಧೀಕೃತ ಆದೇಶ ಹಾಗೂ ಮಾನ್ಯ ಪೊಲೀಸ್ ಅಧೀಕ್ಷಕರು, ಉತ್ತರ ಕನ್ನಡ ಜಿಲ್ಲೆ, ಕಾರವಾರ ರವರ ಆದೇಶದಂತೆ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಸಾಂಕ್ರಾಮಿಕ ರೋಗವಾದ ಕೋವಿಡ್-19 (ಕೊರೋನಾ ವೈರಾಣು) ಖಾಯಿಲೆ ಹರಡದಂತೆ ತಡೆಗಟ್ಟುವ ಸಲುವಾಗಿ ಕೊರೋನಾ ಕರ್ಫ್ಯೂ (ಲಾಕಡೌನ್) ಆದೇಶ ಜಾರಿ ಮಾಡಿದ್ದರೂ ಸಹ ನಮೂದಿತ ಆರೋಪಿತನು ದಿನಾಂಕ: 17-05-2021 ರಂದು 07-00 ಗಂಟೆಯ ಸುಮಾರಿಗೆ ಶಿರಸಿ ಶಹರದ ಬಿಡಕಿಬೈಲನ ಸುಭಾಶ್ಚಂದ್ರ ಕಾಂಪ್ಲೆಕ್ಸ್ ಎದುರು ಇರುವ ತನ್ನ ಬಳೆ ಅಂಗಡಿಯನ್ನು ತೆರೆದು ವ್ಯಾಪಾರ ವಹಿವಾಟು ಮಾಡಿ ಕೊರೋನಾ ಸಾಂಕ್ರಾಮಿಕ ರೋಗದ ಕರ್ಫ್ಯೂ ಜಾರಿಯ ಸರ್ಕಾರದ ಆದೇಶ ಉಲ್ಲಂಘನೆ ಮಾಡಿ, ಕೋವಿಡ್-19 ವೈರಾಣು ಹರಡುವಿಕೆ ಉದ್ದೇಶದಿಂದ ನಿರ್ಲಕ್ಷ್ಯತೆ ಹಾಗೂ ಸಾರ್ವಜನಿಕರ ದೇಹದ ಸುರಕ್ಷತೆಗೆ ಅಪಾಯವುಂಟು ಮಾಡುವಂತಹ ನಿರ್ಲಕ್ಷ್ಯದ ಕೃತ್ಯ ಮಾಡಿದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ರಾಜಕುಮಾರ, ಪಿ.ಎಸ್.ಐ (ಕಾ&ಸು), ಶಿರಸಿ ನಗರ ಪೊಲೀಸ್ ಠಾಣೆ ರವರು ದಿನಾಂಕ: 17-05-2021 ರಂದು 08-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 30/2021, ಕಲಂ: 269, 270 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಸಾಜೀದ್ ತಂದೆ ಯಾಕೂಬ್ ಶೇಖ್, ಪ್ರಾಯ-45 ವರ್ಷ, ವೃತ್ತಿ-ಬಟ್ಟೆ ವ್ಯಾಪಾರ, ಸಾ|| ಮಾರಿಕಾಂಬಾ ನಗರ, ತಾ: ಶಿರಸಿ. ಮಾನ್ಯ ಕರ್ನಾಟಕ ಸರ್ಕಾರ, ಬೆಂಗಳೂರು ಮತ್ತು ಮಾನ್ಯ ಜಿಲ್ಲಾಧಿಕಾರಿಗಳು, ಉತ್ತರ ಕನ್ನಡ ಜಿಲ್ಲೆ, ಕಾರವಾರ ರವರ ಅಧೀಕೃತ ಆದೇಶ ಹಾಗೂ ಮಾನ್ಯ ಪೊಲೀಸ್ ಅಧೀಕ್ಷಕರು, ಉತ್ತರ ಕನ್ನಡ ಜಿಲ್ಲೆ, ಕಾರವಾರ ರವರ ಆದೇಶದಂತೆ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಸಾಂಕ್ರಾಮಿಕ ರೋಗವಾದ ಕೋವಿಡ್-19 (ಕೊರೋನಾ ವೈರಾಣು) ಖಾಯಿಲೆ ಹರಡದಂತೆ ತಡೆಗಟ್ಟುವ ಸಲುವಾಗಿ ಕೊರೋನಾ ಕರ್ಫ್ಯೂ (ಲಾಕಡೌನ್) ಆದೇಶ ಜಾರಿ ಮಾಡಿದ್ದರೂ ಸಹ ನಮೂದಿತ ಆರೋಪಿತನು ದಿನಾಂಕ: 17-05-2021 ರಂದು 09-45 ಗಂಟೆಯ ಸುಮಾರಿಗೆ ಶಿರಸಿ ಶಹರದ ಬಿಡಕಿಬೈಲನ ಸುಭಾಶ್ಚಂದ್ರ ಕಾಂಪ್ಲೆಕ್ಸ್ ಎದುರಿಗೆ ಹಾಯ್ದ ರಸ್ತೆಯ ಬದಿಯಲ್ಲಿ ತನ್ನ ಬಟ್ಟೆ ಅಂಗಡಿಯನ್ನು ತೆರೆದು ಬಟ್ಟೆ ಮತ್ತು ಮಾಸ್ಕ್ ಮಾರಾಟ ಮಾಡಿ ಕೊರೋನಾ ಸಾಂಕ್ರಾಮಿಕ ರೋಗದ ಕರ್ಫ್ಯೂ ಜಾರಿಯ ಸರ್ಕಾರದ ಆದೇಶ ಉಲ್ಲಂಘನೆ ಮಾಡಿ, ಕೋವಿಡ್-19 ವೈರಾಣು ಹರಡುವಿಕೆ ಉದ್ದೇಶದಿಂದ ನಿರ್ಲಕ್ಷ್ಯತೆ ಹಾಗೂ ಸಾರ್ವಜನಿಕರ ದೇಹದ ಸುರಕ್ಷತೆಗೆ ಅಪಾಯವುಂಟು ಮಾಡುವಂತಹ ನಿರ್ಲಕ್ಷ್ಯದ ಕೃತ್ಯ ಮಾಡಿದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ರಾಜಕುಮಾರ, ಪಿ.ಎಸ್.ಐ (ಕಾ&ಸು), ಶಿರಸಿ ನಗರ ಪೊಲೀಸ್ ಠಾಣೆ ರವರು ದಿನಾಂಕ: 17-05-2021 ರಂದು 10-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ದಾಂಡೇಲಿ ನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 49/2021, ಕಲಂ: 269, 271 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಅಲೀಂ ತಂದೆ ಅಬ್ದುಲ್ ರಹೀಂ ಶೇಖ್, ಪ್ರಾಯ-54 ವರ್ಷ, ವೃತ್ತಿ-ಬೇಕರಿ ವ್ಯಾಪಾರ, ಸಾ|| ಟೌನಶಿಪ್, ದಾಂಡೇಲಿ. ದೇಶಾದ್ಯಂತ ಕೋವಿಡ್-19 ಕೊರೋನಾ ವೈರಸ್ ಸಾಂಕ್ರಾಮಿಕ ಖಾಯಿಲೆ ಹರಡುತ್ತಿದ್ದು, ಕೋವಿಡ್-19 ಖಾಯಿಲೆಯ 2 ನೇ ಅಲೆ ಹೆಚ್ಚಾಗಿರುವುದರಿಂದಾಗಿ ಖಾಯಿಲೆ ನಿಯಂತ್ರಣಕ್ಕಾಗಿ ಮಾನ್ಯ ಸರಕಾರ ಹಾಗೂ ಜಿಲ್ಲಾಧಿಕಾರಿಗಳು, ಉತ್ತರ ಕನ್ನಡ ಜಿಲ್ಲೆ, ಕಾರವಾರ ರವರು ದಿನಾಂಕ: 16-05-2021 ರಿಂದ 24-05-2021 ರವರೆಗೆ ಹೆಚ್ಚುವರಿ ಕ್ರಮ ಕೈಗೊಳ್ಳಲು ಆದೇಶಿಸಿ ದಾಂಡೇಲಿ ನಗರವನ್ನು ವಿಶೇಷ ಕಂಟೈನಮೆಂಟ್ ಜೋನ್ ಆಗಿ ಘೋಷಿಸಿ ಅಂಗಡಿಗಳಲ್ಲಿ ವ್ಯಾಪಾರ ವಹಿವಾಟನ್ನು ನಿಷೇಧಿಸಿದ್ದರೂ ಸಹ ನಮೂದಿತ ಆರೋಪಿತನು ತನ್ನ ಬೇಕರಿಯನ್ನು ತೆರೆದು ಅಲ್ಲಿಗೆ ಬಂದಿದ್ದ ಜನರಿಗೆ ತಿಂಡಿ-ತಿನಿಸುಗಳನ್ನು ಮಾರಾಟ ಮಾಡಿದರೆ ಅಲ್ಲಿ ಜನರು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳದೇ, ಸಾಂಕ್ರಾಮಿಕ ರೋಗ ಒಬ್ಬರಿಂದ ಒಬ್ಬರಿಗೆ ಹರಡಿ ಪ್ರಾಣಕ್ಕೆ ತೊಂದರೆ ಆಗಬಹುದು ಅಂತಾ ಗೊತ್ತಿದ್ದರೂ ಸಹ ದಿನಾಂಕ: 17-05-2021 ರಂದು 15-30 ಗಂಟೆಯಿಂದ 15-35 ಗಂಟೆಯವರೆಗೆ ದಾಂಡೇಲಿಯ ಟೌನಶಿಪ್, ಗಣಪತಿ ದೇವಸ್ಥಾನದ ಹತ್ತಿರ ಇರುವ ತನ್ನ ಬೇಕರಿಯನ್ನು ತೆರೆದು ವ್ಯಾಪಾರ ವಹಿವಾಟು ನಡೆಸಿದ ಬಗ್ಗೆ ಪಿರ್ಯಾದಿ ಶ್ರೀ ಬಿಸ್ಟಕುಮಾರ ತಂದೆ ಪಟ್ಟು ಗವಾಸ್, ಪ್ರಾಯ-40 ವರ್ಷ, ವೃತ್ತಿ-ಸಹಾಯಕ ಸೆಕ್ಟರ್ ಅಧಿಕಾರಿ ಕೋವಿಡ್-19 ನಗರಸಭೆ, ದಾಂಡೇಲಿ, ಸಾ|| ಗಾಂಧಿನಗರ, ದಾಂಡೇಲಿ ರವರು ದಿನಾಂಕ: 17-05-2021 ರಂದು 17-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 17-05-2021

at 00:00 hrs to 24:00 hrs

 

ಹಳಿಯಾಳ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 11/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಬಸ್ತ್ಯಾವ್ ತಂದೆ ಇನಾಸ್ ಡಿಸೋಜಾ, ಪ್ರಾಯ-47 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಮಂಗಳವಾಡ, ತಾ: ಹಳಿಯಾಳ. ಪಿರ್ಯಾದಿಯವರ ಅಣ್ಣನಾದ ಈತನು ದಿನಾಂಕ: 15-05-2021 ರಂದು ಹಳಿಯಾಳ ಶಹರದ ಪ್ಯಾರಿ ಶುಗರ್ ಫ್ಯಾಕ್ಟರಿಗೆ ಕೂಲಿ ಕೆಲಸಕ್ಕೆ ಅಂತಾ ಹೋದವನು, ಮಧ್ಯಾಹ್ನ 03-00 ಗಂಟೆಗೆ ತನ್ನ ಇತರ ಕೆಲಸಗಾರರ ಜೊತೆಗೆ ಫ್ಯಾಕ್ಟರಿಯಲ್ಲಿದ್ದ ಸಕ್ಕರೆ ಚೀಲಗಳನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸ್ಥಳಾಂತರಿಸುವಾಗ ಅಕಸ್ಮಾತ್ ಆಗಿ 2 ರಿಂದ 3 ಚೀಲಗಳು ತನ್ನ ಎರಡೂ ಕಾಲುಗಳ ಮೇಲೆ ಬಿದ್ದಿದ್ದರಿಂದ ಎರಡೂ ಕಾಲುಗಳಿಗೆ ಭಾರೀ ಒಳನೋವು ಆಗಿದ್ದವನಿಗೆ ಚಿಕಿತ್ಸೆಯ ಸಲುವಾಗಿ ಹಳಿಯಾಳದ ಅತ್ತಾರ ಕ್ಲಿನಿಕ್ ನಲ್ಲಿ ಪ್ರಾಥಮಿಕ ಚಿಕಿತ್ಸೆಯನ್ನು ಕೊಡಿಸಿ, ಹೆಚ್ಚಿನ ಉಪಚಾರದ ಕುರಿತು ಹುಬ್ಬಳ್ಳಿಯ ಸೆಕ್ಯೂರ್ ಆಸ್ಪತ್ರೆಗೆ ದಾಖಲಿಸಿದ್ದು ಇರುತ್ತದೆ. ಹೀಗೆ ಹುಬ್ಬಳ್ಳಿಯ ಸೆಕ್ಯೂರ್ ಆಸ್ಪತ್ರೆಯಲ್ಲಿ ಹೆಚ್ಚಿನ ಉಪಚಾರದಲ್ಲಿದ್ದ ಬಸ್ತ್ಯಾವ್ ಡಿಸೋಜಾ ಈತನು ಘಟನೆಯಲ್ಲಿ ಆದ ಗಾಯನೋವಿನಿಂದ ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ: 16-05-2021 ರಂದು ರಾತ್ರಿ 22-00 ಗಂಟೆಗೆ ಮೃತಪಟ್ಟಿದ್ದು, ಇದರ ಹೊರತು ತನ್ನ ಅಣ್ಣನ ಮರಣದಲ್ಲಿ ಬೇರೇ ಯಾವುದೇ ಸಂಶಯವಿರುವುದಿಲ್ಲ ಎಂಬ ಬಗ್ಗೆ ಪಿರ್ಯಾದಿ ಶ್ರೀ ಸಾವೇರ್ ತಂದೆ ಇನಾಸ್ ಡಿಸೋಜಾ, ಪ್ರಾಯ-46 ವರ್ಷ, ವೃತ್ತಿ-ಹೊಟೇಲ್ ಅಡಿಗೆ ಕೆಲಸ, ಸಾ|| ಮಂಗಳವಾಡ, ತಾ: ಹಳಿಯಾಳ, ಹಾಲಿ ಸಾ|| ದೇಶಪಾಂಡೆ ನಗರ, ತಾ: ಹಳಿಯಾಳ ರವರು ದಿನಾಂಕ: 17-05-2021 ರಂದು 08-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

ಇತ್ತೀಚಿನ ನವೀಕರಣ​ : 18-05-2021 11:45 AM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080