ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 17-11-2021

at 00:00 hrs to 24:00 hrs

 

ಸಂಚಾರ ಪೊಲೀಸ್ ಠಾಣೆ ಕಾರವಾರ

ಅಪರಾಧ ಸಂಖ್ಯೆಃ 25/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಸಕರಿಯಾ ಬಿನ್ ಅಬ್ದುಲ್ ಸಲಾಮ್, ಪ್ರಾಯ-33 ವರ್ಷ, ವೃತ್ತಿ-ಮೆಕ್ಯಾನಿಕ್, ಸಾ|| ಸುಹಾರಾ ಮಂಜಿಲ್, ಎಲಂಬಾಚಿ, ಹೊಸ್ದುರ್ಗ, ಕಾಸರಗೋಡ, ಕೇರಳಾ (ಮಾರುತಿ ಸುಜುಕಿ ರಿಟ್ಜ್ ಕಾರ್ ನಂ: ಕೆ.ಎಲ್-18/ಎಚ್-4004 ನೇದರ ಚಾಲಕ). ದಿನಾಂಕ: 17-11-2021 ರಂದು ಬೆಳಿಗ್ಗೆ 07-25 ಗಂಟೆಯಿಂದ 07-35 ಗಂಟೆಯ ನಡುವಿನ ಅವಧಿಯಲ್ಲಿ ಪಿರ್ಯಾದಿಯು ತನ್ನ ಸೈಕಲ್ ಮೇಲಾಗಿ ಪಣಜಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರಲ್ಲಿ ಚಾಪೆಲ್ ಬೋಟ್ ಮ್ಯೂಸಿಯಂ ಹತ್ತಿರ ರಸ್ತೆಯ ಎಡಬದಿಯಲ್ಲಿ ನಿಲ್ಲಿಸಿಕೊಂಡು ನಿಂತಿರುವಾಗ ಕಾರವಾರದ ರವೀಂದ್ರನಾಥ ಠಾಗೋರ್ ಬೀಚ್ ಕಡೆಯಿಂದ ಸದಾಶಿವಗಡ ಕಡೆಗೆ ನಮೂದಿತ ಆರೋಪಿತನು ತನ್ನ ಮಾರುತಿ ಸುಜುಕಿ ರಿಟ್ಜ್ ಕಾರ್ ನಂ: ಕೆ.ಎಲ್-18/ಎಚ್-4004 ನೇದನ್ನು ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಅಡ್ಡಾದಿಡ್ಡಿಯಾಗಿ ಚಲಾಯಿಸಿಕೊಂಡು ಬಂದವನು, ರಸ್ತೆಯ ಪಕ್ಕದಲ್ಲಿ ಕಚ್ಚಾ ರಸ್ತೆಯಲ್ಲಿ ತನ್ನ ಸೈಕಲನ್ನು ನಿಲ್ಲಿಸಿಕೊಂಡು ನಿಂತಿದ್ದ ಪಿರ್ಯಾದಿಯವರಿಗೆ ತನ್ನ ಕಾರಿನ ಮುಂದಿನ ಭಾಗದಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಪಿರ್ಯಾದಿಯವರಿಗೆ ಬೆನ್ನಿನ ಹಿಂದಿನ ಭಾಗದಲ್ಲಿ ಒಳನೋವು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಮಂಜುನಾಥ ರುದ್ರಮುನಿ ಮಠದ, ಪ್ರಾಯ-32 ವರ್ಷ, ವೃತ್ತಿ-ಪೊಲೀಸ್ ಅಧಿಕಾರಿ, ಸಾ|| ರಾಜ್ಯ ಗುಪ್ತಚರ ಘಟಕ, ಕಾರವಾರ ರವರು ದಿನಾಂಕ: 17-11-2021 ರಂದು 10-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 30/2021, ಕಲಂ: 324, 504 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಮಂಗಲದಾಸ ತಂದೆ ಗೋವಿಂದ ಪಾಗಿ, ಸಾ|| ಖಾಂಡ್ಯಾಳಿ, ಕೆರವಡಿ, ಮಲ್ಲಾಪುರ, ಕಾರವಾರ. ದಿನಾಂಕ: 17-11-2021 ರಂದು ಸಾಯಂಕಾಲ ದಿಲೀಪ ಪಾಗಿ ಎಂಬುವವರು ಪಿರ್ಯಾದಿಯ ಮನೆಯ ಕಂಪೌಂಡ್ ಹೊರಗೆ ಬಂದು ಪಿರ್ಯಾದಿಯ ಅತ್ತೆ ಮಾವನ ಹತ್ತಿರ ‘ನಾವು ಹೋಗುತ್ತಿರುವಾಗ ನಿಮ್ಮ ಮನೆಯ ನಾಯಿ ನಮ್ಮ ಗಾಡಿಯ ಹಿಂದೆ ಬೊಗಳುತ್ತಾ ಬರುತ್ತದೆ. ಕಚ್ಚಿದರೆ ಗತಿ ಏನು?’ ಅಂತಾ ಕೇಳುತ್ತಿರುವಾಗ ಪಿರ್ಯಾದಿ ಮತ್ತು ಪಿರ್ಯಾದಿಯ ಗಂಡ ‘ಏನಾಯಿತು?’ ಅಂತಾ ಕೇಳಲು ಬಂದು ಮಾತನಾಡುತ್ತಿರುವಾಗ ನಮೂದಿತ ಆರೋಪಿತನು ಕೈಯಲ್ಲಿ ಒಂದು ಕಟ್ಟಿಗೆಯ ದೊಣ್ಣೆ ಹಿಡಿದುಕೊಂಡು ಬಂದವನೇ ಒಮ್ಮೇಲೆ ಸಿಟ್ಟಿನಿಂದ ಪಿರ್ಯಾದಿಯ ಗಂಡನಿಗೆ ಉದ್ದೇಶಿಸಿ ‘ಬೋಳಿ ಮಗನೇ, ನೀನು ನಾಯಿ ಸಾಕಿ ಬೇರೆಯವರ ಮೇಲೆ ಬಿಡುತ್ತಿಯಾ? ದಾದಾಗಿರಿ ಮಾಡುತ್ತಿಯಾ?’ ಅಂತಾ ಅವಾಚ್ಯ ಶಬ್ದಗಳಿಂದ ಬೈಯುತ್ತಾ, ಕೈಯಲ್ಲಿದ್ದ ದೊಣ್ಣೆಯಿಂದ ಪಿರ್ಯಾದಿಯ ಗಂಡನಿಗೆ ಹೊಡೆಯಲು ಬೀಸಿದಾಗ ಪಿರ್ಯಾದಿಯು ತಪ್ಪಿಸಿಲು ಮುಂದೆ ಹೋದಾಗ ಪಿರ್ಯಾದಿಯ ಎಡಗೈ ಭುಜಕ್ಕೆ ತಾಗಿ ಒಳನೋವಾಗಿದ್ದು, ಆರೋಪಿತನು ಪಿರ್ಯಾದಿಗೆ ದೂಡಿ ನೆಲದ ಮೇಲೆ ಕೆಡವಿ, ಪಿರ್ಯಾದಿಯ ತಲೆಗೆ, ಕಾಲಿಗೆ ಮತ್ತು ಮೊಣಗಂಟಿಗೆ ದುಃಖಾಪತ್ ಪಡಿಸಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀಮತಿ ಸೀಯಾ ಕೋಂ ಗೌರೀಶ ತಳಪಣಕರ, ಪ್ರಾಯ-30 ವರ್ಷ, ವೃತ್ತಿ-ಮನೆವಾರ್ತೆ, ಸಾ|| ಖಾಂಡ್ಯಾಳಿ, ಕೆರವಡಿ, ಮಲ್ಲಾಪುರ, ಕಾರವಾರ ರವರು ದಿನಾಂಕ: 17-11-2021 ರಂದು 21-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಅಂಕೋಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 172/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ನಂದೀಶ ತಂದೆ ನಾಗಪ್ಪ ಗೊಂಡ, ಪ್ರಾಯ-34 ವರ್ಷ, ಸಾ|| ಕಿತ್ರೆ, ಮಾರುಕೇರಿ, ತಾ: ಭಟ್ಕಳ (ಮಾರುತಿ ಆಲ್ಟೋ 800 ಕಾರ್ ನಂ: ಕೆ.ಎ-47/ಎಮ್-3871 ನೇದರ ಚಾಲಕ). ಈತನು ದಿನಾಂಕ: ದಿನಾಂಕ: 13-11-2021 ರಂದು 13-30 ಗಂಟೆಗೆ ಅಂಕೋಲಾ ತಾಲೂಕಿನ ಬೆಳಸೆಯಲ್ಲಿ ಹಾಯ್ದಿರುವ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ಚತುಷ್ಪಥ ರಸ್ತೆಯ ಮೇಲೆ ತನ್ನ ಬಾಬ್ತು ಮಾರುತಿ ಆಲ್ಟೋ 800 ಕಾರ್ ನಂ: ಕೆಎ-47/ಎಮ್-3871 ನೇದನ್ನು ಅಂಕೋಲಾ ಕಡೆಯಿಂದ ಕುಮಟಾ ಕಡೆಗೆ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು, ಕಾರ್ ಮೇಲಿನ ನಿಯಂತ್ರಣವನ್ನು ಕಳೆದುಕೊಂಡು ಚತುಷ್ಪಥ ರಸ್ತೆಯ ಮಧ್ಯದ ಡಿವೈಡರ್ ಮೇಲಿದ್ದ ದಾರಿ ದೀಪದ ಕಂಬಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಪಿರ್ಯಾದಿಗೆ ಮತ್ತು ಕು: ಶೇಜಲ್ ತಂದೆ ನಂದೀಶ ಗೊಂಡ, ಪ್ರಾಯ-03 ವರ್ಷ ಇವರಿಗೆ ಸಾದಾ ಸ್ವರೂಪದ ಗಾಯನೋವು ಪಡಿಸಿದ್ದಲ್ಲದೇ, ಆರೋಪಿ ಕಾರ್ ಚಾಲಕನು ತನಗೂ ಕೂಡಾ ಸಾದಾ ಸ್ವರೂಪದ ಗಾಯನೋವು ಪಡಿಸಿಕೊಂಡಿರುತ್ತಾ ಎಂಬ ಬಗ್ಗೆ ಪಿರ್ಯಾದಿ ಶ್ರೀಮತಿ ಭಾಗ್ಯಶ್ರೀ ತಂದೆ ಸುಕ್ರಾ ಗೊಂಡ, ಪ್ರಾಯ-28 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಕಿತ್ರೆ, ಮಾರುಕೇರಿ, ತಾ: ಭಟ್ಕಳ ರವರು ದಿನಾಂಕ: 17-11-2021 ರಂದು 15-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 307/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಗೌತಮ ತಂದೆ ರಾಮಚಂದ್ರ ಮಡಿವಾಳ, ಪ್ರಾಯ-24 ವರ್ಷ, ವೃತ್ತಿ-ಆಟೋ ರಿಕ್ಷಾ ಚಾಲಕ, ಸಾ|| ಕವಲಕ್ಕಿ, ತಾ: ಹೊನ್ನಾವರ (ಆಟೋ ರಿಕ್ಷಾ ನಂ: ಕೆ.ಎ-47/9836 ನೇದರ ಚಾಲಕ). ಈತನು ದಿನಾಂಕ: 17-11-2021 ರಂದು ಬೆಳಿಗ್ಗೆ 09-15 ಗಂಟೆಯ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-69 ರಲ್ಲಿ ಆರೋಳ್ಳಿ ಕ್ರಾಸ್ ಹತ್ತಿರ ತನ್ನ ಬಾಬ್ತು ಆಟೋ ರಿಕ್ಷಾ ನಂ: ಕೆ.ಎ-47/9836 ನೇದರಲ್ಲಿ ಗಾಯಾಳುವಾದ ಕುಮಾರಿ: ಹರ್ಷಿತಾ ತಂದೆ ರಮೇಶ ಮೇಸ್ತ, ಪ್ರಾಯ-23 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕರ್ಕಿಕೋಡಿ, ಕರ್ಕಿ, ತಾ: ಹೊನ್ನಾವರ, ಇವಳಿಗೆ ಕೂರಿಸಿಕೊಂಡು ತನ್ನ ಆಟೋ ರಿಕ್ಷಾವನ್ನು ಹೊನ್ನಾವರ ಕಡೆಯಿಂದ ಗೇರುಸೊಪ್ಪ ಕಡೆಗೆ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಸಿಕೊಂಡು ಹೋಗಿ, ತನ್ನ ಮುಂದಿನಿಂದ ಗಾಯಾಳುವಾದ ಶ್ರೀ ಗಜಾನನ ತಂದೆ ತಿಮ್ಮಪ್ಪ ಗೌಡ, ಪ್ರಾಯ-44 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಆರೋಳ್ಳಿ, ಪೋ: ಮುಗ್ವಾ, ತಾ: ಹೊನ್ನಾವರ, ಈತನು ತನ್ನ ಸ್ಕೂಟರ್ ನಂ: ಕೆ.ಎ-47/ಕ್ಯೂ-9776 ನೇದನ್ನು ಹೊನ್ನಾವರ ಕಡೆಯಿಂದ ಆರೋಳ್ಳಿ ಕಡೆಗೆ ಚಲಾಯಿಸಿಕೊಂಡು ಹೋಗಿ, ಆರೋಳ್ಳಿ ಕ್ರಾಸ್ ರಸ್ತೆಯ ಕಡೆಗೆ ರಸ್ತೆಯ ಬಲಕ್ಕೆ ಹೋಗಲೆಂದು ತನ್ನ ಸ್ಕೂಟರಿಗೆ ಬಲಗಡೆಯ ಇಂಡಿಕೇಟರ್ ಹಾಕಿ, ಬಲಗೈ ಸನ್ನೆ ಮಾಡಿ ತನ್ನ ಸ್ಕೂಟರನ್ನು ರಸ್ತೆಯ ಬಲಕ್ಕೆ ತಿರುಗಿಸುತ್ತಿದ್ದಾಗ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಸ್ಕೂಟರ್ ಸವಾರನಾದ ಶ್ರೀ ಗಜಾನನ ತಂದೆ ತಿಮ್ಮಪ್ಪ ಗೌಡ, ಈತನಿಗೆ ತಲೆಗೆ ಗಾಯ ಪಡಿಸಿ, ಕಿವಿಯಿಂದ ರಕ್ತ ಸೋರುವಂತೆ ಮಾಡಿದ್ದಲ್ಲದೇ, ತನ್ನ ಆಟೋ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಕುಮಾರಿ: ಹರ್ಷಿತಾ ತಂದೆ ರಮೇಶ ಮೇಸ್ತ, ಇವಳಿಗೆ ಎಡಗಾಲಿನ ಮೊಣಗಂಟಿನ ಹತ್ತಿರ ಮತ್ತು ಪಾದಕ್ಕೆ ಗಾಯ ಪಡಿಸಿ, ಸೊಂಟಕ್ಕೆ ಮತ್ತು ಹೊಟ್ಟೆಗೆ ಪೆಟ್ಟನ್ನುಂಟು ಪಡಿಸಿದ್ದಲ್ಲದೇ, ಆರೋಪಿ ಆಟೋ ರಿಕ್ಷಾ ಚಾಲಕನು ತಾನೂ ಸಹ ತನ್ನ ಆಟೋ ರಿಕ್ಷಾ ಸಮೇತ ರಸ್ತೆಯ ಮೇಲೆ ಬಿದ್ದು, ತನ್ನ ಎಡಗಾಲಿನ ಪಾದಕ್ಕೆ ಗಾಯ ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ನಾಗೇಶ ತಂದೆ ವಾಸು ನಾಯ್ಕ, ಪ್ರಾಯ-59 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಆರೋಳ್ಳಿ, ಬಂಕನಹಿತ್ಲ, ತಾ: ಹೊನ್ನಾವರ ರವರು ದಿನಾಂಕ: 17-11-2021 ರಂದು 11-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 309/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಜೋಸ್ ಮ್ಯಾಥ್ಯೂ ತಂದೆ ಮಥೈ, ಪ್ರಾಯ-55 ವರ್ಷ, ವೃತ್ತಿ-ಚಾಲಕ, ಸಾ|| ಥರಯಿಲ್ ಹೌಸ್, ಚೆಂಗಲಮ್ ಪಿ.ಓ, ಕೇರಳಾ (ಲಾರಿ ನಂ: ಎಮ್.ಎಚ್-12/ಎಮ್.ವಿ-3213 ನೇದರ ಚಾಲಕ). ಈತನು ದಿನಾಂಕ: 17-11-2021 ರಂದು ಸಾಯಂಕಾಲ 16-45 ಗಂಟೆಯ ಸುಮಾರಿಗೆ ತಾನು ಚಲಾಯಿಸುತ್ತಿದ್ದ ಲಾರಿ ನಂ: ಎಮ್.ಎಚ್-12/ಎಮ್.ವಿ-3213 ನೇದನ್ನು ಭಟ್ಕಳ ಕಡೆಯಿಂದ ಕುಮಟಾ ಕಡೆಗೆ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದವನು, ಹೊನ್ನಾವರ ತಾಲೂಕಿನ Pರ್ಕಿಯ ಪೆಟ್ರೋಲ್ ಬಂಕ್ ಹತ್ತಿರ ತಲಪಿದಾಗ ನಿರ್ಲಕ್ಷ್ಯತನದಿಂದ ಲಾರಿಯನ್ನು ರಸ್ತೆಯ ಬಲಕ್ಕೆ ಚಲಾಯಿಸಿ, ಎದುರಿನಿಂದ ಬರುತ್ತಿದ್ದ ಅಂದರೆ ಕುಮಟಾ ಕಡೆಯಿಂದ ಭಟ್ಕಳ ಕಡೆಗೆ ಹೋಗಲು ಬಂದ ಕೆ.ಎಸ್.ಆರ್.ಟಿ.ಸಿ ಬಸ್ ನಂ: ಕೆ.ಎ-42/ಎಫ್-990 ನೇದಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಸಾದಾ ಗಾಯನೋವು ಆಗಲೂ ಕಾರಣನಾಗಿದ್ದಲ್ಲದೇ, ಎರಡು ವಾಹನ ಜಖಂಗೊಳ್ಳಲು ಆರೋಪಿ ಲಾರಿ ಚಾಲಕನೇ ಕಾರಣನಾದ ಬಗ್ಗೆ ಪಿರ್ಯಾದಿ ಶ್ರೀ ರಂಗಪ್ಪ ತಂದೆ ಯಲ್ಲವ್ವ ಮಾದರ, ಪ್ರಾಯ-39 ವರ್ಷ, ವೃತ್ತಿ-ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕ/ನಿರ್ವಾಹಕ (ಬಿಲ್ಲೆ ಸಂಖ್ಯೆ: 1476), ಸಾ|| ಹೂವಿನಹಳ್ಳಿ, ತಾ: ಹುನಗುಂದ, ಜಿ: ಬಾಗಲಕೋಟ, ಹಾಲಿ ಸಾ|| ಹುರಳಿಸಾಲ, ತಾ: ಭಟ್ಕಳ ರವರು ದಿನಾಂಕ: 17-11-2021 ರಂದು 18-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮಂಕಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 138/2021, ಕಲಂ: 15(ಎ), 32(3) ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತರು 1]. ಸೀತಾರಾಮ ಧರ್ಮ ನಾಯ್ಕ, ಪ್ರಾಯ-57 ವರ್ಷ, ಸಾ|| ಅನಿಲಗೋಡ, ಮಕ್ಕಿಗದ್ದೆ, ತಾ: ಹೊನ್ನಾವರ, 2]. ತಿರುಮಲ ನಾರಾಯಣ ನಾಯ್ಕ, ಪ್ರಾಯ-25 ವರ್ಷ, ಸಾ|| ಮೇಲಿನ ಇಡಗುಂಜಿ, ತಾ: ಹೊನ್ನಾವರ, 3]. ಅಕ್ಷಯ ರಾಮಚಂದ್ರ ನಾಯ್ಕ, ಪ್ರಾಯ-27 ವರ್ಷ, ಸಾ|| ಗುಣವಂತೆ, ಹೆಬ್ಬಾರ ಹಿತ್ಲು, ತಾ: ಹೊನ್ನಾವರ, 4]. ಗೋವಿಂದ ಗೋಪಾಲ ನಾಯ್ಕ, ಪ್ರಾಯ-24 ವರ್ಷ, ಸಾ|| ಕುಳಿಮನೆ, ಇಡಗುಂಜಿ, ತಾ: ಹೊನ್ನಾವರ. ಈ ನಮೂದಿತ ಆರೋಪಿತರಲ್ಲಿ ಆರೋಪಿ 1 ನೇಯವನು ದಿನಾಂಕ: 17-11-2021 ರಂದು 21-00 ಗಂಟೆಗೆ ಹೆಗ್ಗಾರ ಗ್ರಾಮದಲ್ಲಿರುವ ಎಮ್.ಎಸ್.ಐ.ಎಲ್ ವೈನ್ ಶಾಪ್ ಪಕ್ಕದಲ್ಲಿ ತಾನು ನಡೆಸುತ್ತಿದ್ದ ಪಾಸ್ಟ್ ಫುಡ್ ಅಂಗಡಿಯಲ್ಲಿ ಪಾಸ್ ಯಾ ಪರ್ಮಿಟ್ ಇಲ್ಲದೇ ಅನಧೀಕೃತವಾಗಿ ಉಳಿದ ಆರೋಪಿತರಿಗೆ ಅಂಗಡಿಯಲ್ಲಿ ಸರಾಯಿ ಕುಡಿಯಲು ಅವಕಾಶ ನೀಡಿದ್ದು, ಉಳಿದ ಮೂರು ಜನ ಆರೋಪಿತರು ಕೂಡಿ BAGPIPER WHISKEY ಅಂತಾ ನಮೂದು ಇದ್ದ 180 ML ಅಳತೆಯ ಪ್ಯಾಕೆಟ್ ಗಳಲ್ಲಿದ್ದ ಸರಾಯಿಯನ್ನು ಕುಡಿಯುತ್ತಾ ಕುಳಿತಾಗ ಅಬಕಾರಿ ಸ್ವತ್ತುಗಳೊಂದಿಗೆ ಆರೋಪಿತರೆಲ್ಲರೂ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಅಶೋಕ ಮಾಳಾಬಗಿ, ಪಿ.ಎಸ್.ಐ (ಕಾ&ಸು), ಮಂಕಿ ಪೊಲೀಸ್ ಠಾಣೆ ರವರು ದಿನಾಂಕ: 17-11-2021 ರಂದು 22-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 136/2021, ಕಲಂ: 279, 337, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ದಿನೇಶ ತಂದೆ ರಾಮನಾಥ ದೇವಾಡಿಗ, ಪ್ರಾಯ-30 ವರ್ಷ, ವೃತ್ತಿ-ಚಾಲಕ, ಸಾ|| ಕಡಸಲಗದ್ದೆ, ತಾ: ಭಟ್ಕಳ (ಲಾರಿ ನಂ: ಕೆ.ಎ-47/ಎ-2210 ನೇದರ ಚಾಲಕ). ಈತನು ದಿನಾಂಕ: 17-11-2021 ರಂದು ಸಾಯಂಕಾಲ 16-30 ಗಂಟೆಯ ಸಮಯಕ್ಕೆ ತನ್ನ ಲಾರಿ ನಂ: ಕೆ.ಎ-47/ಎ-2210 ನೇದನ್ನು ಕುಂಟವಾಣಿ ಕಡೆಯಿಂದ ಭಟ್ಕಳ ಕಡೆಗೆ ಅತೀವೇಗವಾಗಿ ಹಾಗೂ ನಿಷ್ಕಾಳಜೀತನದಿಂದ ಚಲಾಯಿಸಿಕೊಂಡು ಬಂದು ಲಾರಿಯ ವೇಗ ನಿಯಂತ್ರಿಸದೇ ರಾಜ್ಯ ಹೆದ್ದಾರಿ ಸಂಖ್ಯೆ-50 ರಲ್ಲಿ ಭಟ್ಕಳ-ಸಾಗರ ರಸ್ತೆಯ ಬೇಟೆ ವೀರ ದೇವಸ್ಥಾನದ ಹತ್ತಿರ ತನ್ನ ಎದುರಿನಿಂದ ಬರುತ್ತಿದ್ದ ಮೋಟಾರ್ ಸೈಕಲ್ ನಂ: ಕೆ.ಎ-47/ಎಲ್-9572 ನೇದಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಮೋಟಾರ್ ಸೈಕಲ್ ಸವಾರನಾದ ಪವನ ತಂದೆ ಗೋಯ್ದಾ ಮರಾಠಿ, ಪ್ರಾಯ-28 ವರ್ಷ, ವೃತ್ತಿ-ಚಾಲಕ, ಸಾ|| ಅರುಕಿ, ತಾ: ಭಟ್ಕಳ. ಈತನಿಗೆ ಅಪಘಾತ ಪಡಿಸಿದರ ಪರಿಣಾಮ ಅವನ ಕೈ ಮತ್ತು ಕಾಲು ಮುರಿದಿದ್ದು ಅಲ್ಲಲ್ಲಿ ಸಣ್ಣಪುಟ್ಟ ಗಾಯ ಪಡಿಸಿ, ತನ್ನ ಲಾರಿಯಲ್ಲಿದ್ದ ಹಮಾಲಿಗಳಿಗೂ ಗಾಯ ಪಡಿಸಿ, ಆರೋಪಿ ಲಾರಿ ಚಾಲಕನು ತನಗೂ ಸಹ ಗಾಯ ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ಮಾಸ್ತಿ ತಂದೆ ತಿಮ್ಮಪ್ಪ ಗೊಂಡ, ಪ್ರಾಯ-50 ವರ್ಷ, ವೃತ್ತಿ-ವ್ಯಾಪಾರ, ಸಾ|| ಮಾರುಕೇರಿ, ತಾ: ಭಟ್ಕಳ ರವರು ದಿನಾಂಕ: 17-11-2021 ರಂದು 17-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 202/2021, ಕಲಂ: 379 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ಅಪರಿಚಿತರಾಗಿದ್ದು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ದಿನಾಂಕ 17-11-2021 ರಂದು ಮಧ್ಯಾಹ್ನ ಸುಮಾರು 14-00 ಗಂಟೆಯ ಸಮಯಕ್ಕೆ ಪಿರ್ಯಾದಿಯವರು ಯಲ್ಲಾಪುರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಹಳಿಯಾಳಕ್ಕೆ ಹೋಗಲು ಶಿರಸಿ-ಬೆಳಗಾಂವ ಬಸ್ ಹತ್ತುವಾಗ ಪಿರ್ಯಾದಿಯವರ ಹೆಗಲಿಗೆ ಹಾಕಿಕೊಂಡಿದ್ದ ಬ್ಯಾಗಿನ ಕೆಳಭಾಗವನ್ನು ಯಾರೋ ಆರೋಪಿತ ಕಳ್ಳರು ಯಾವುದೋ ಹರಿತವಾದ ವಸ್ತುವಿನಿಂದ ಕತ್ತರಿಸಿ,ಬ್ಯಾಗಿನಲ್ಲಿದ್ದ 30,000/- ರೂಪಾಯಿ ಹಣವನ್ನು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀ ದೇವೇಂದ್ರ ತಂದೆ ದೇಮಣ್ಣಾ ಗುಂಡುಪಕರ್, ಪ್ರಾಯ-80 ವರ್ಷ, ವೃತ್ತಿ-ನಿವೃತ್ತ ಶಿಕ್ಷಕ, ಸಾ|| ಹುಣಶೆಟ್ಟಿಕೊಪ್ಪ, ತಾ: ಯಲ್ಲಾಪುರ ರವರು ದಿನಾಂಕ: 17-11-2021 ರಂದು 17-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮುಂಡಗೋಡ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 151/2021, ಕಲಂ: ಹೆಂಗಸು ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಹೆಂಗಸು ಶ್ರೀಮತಿ ಮಧುಶ್ರೀ ಕೋಂ. ಶ್ರೀಧರ ಚೋಳಪ್ಪನವರ, ಪ್ರಾಯ-25 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕೆಂದಲಗೇರಿ, ತಾ: ಮುಂಡಗೋಡ. ಪಿರ್ಯಾದಿಯ ಅಣ್ಣನ ಮಗಳಾದ ಇವಳು ದಿನಾಂಕ: 15-11-2021 ರಂದು ರಾತ್ರಿ 10-30 ಗಂಟೆಯ ಸುಮಾರಿಗೆ ಮನೆಯಲ್ಲಿ ಯಾರಿಗೂ ಹೇಳದೇ ಕೇಳದೇ ತನ್ನ ಮಗುವನ್ನು ಮನೆಯಲ್ಲಿಯೇ ಬಿಟ್ಟು ಎಲ್ಲಿಯೋ ಹೋಗಿ ಕಾಣೆಯಾಗಿರುತ್ತಾಳೆ. ಅವಳನ್ನು ಇದುವರೆಗೂ ಹುಡಕಾಡಿದರೂ ಪತ್ತೆಯಾಗದೇ ಇದ್ದುದ್ದರಿಂದ ಕಾಣೆಯಾದವಳನ್ನು ಹುಡುಕಿ ಕೊಡಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ನಾರಾಯಣ ತಂದೆ ಮಾರುತಿ ನೆಲಗೆ, ಪ್ರಾಯ-42 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಕೆಂದಲಗೇರಿ, ತಾ: ಮುಂಡಗೋಡ ರವರು ದಿನಾಂಕ: 17-11-2021 ರಂದು 15-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹಳಿಯಾಳ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 177/2021, ಕಲಂ: 323, 324, 341, 504, 506, 307 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಮಹೇಶ ಶಿಂಧೆ, ಸಾ|| ಗುತ್ತಿಗೇರಿ ಗಲ್ಲಿ, ತಾ: ಹಳಿಯಾಳ. ದಿನಾಂಕ: 15-11-2021 ರಂದು ಪಿರ್ಯಾದಿ ಹಾಗೂ ಗಾಯಾಳು ತೌಸೀಪ್ ಭಾವಖಾನ ರವರು ರಾತ್ರಿ ಹಳಿಯಾಳದಿಂದ ಹೊರಗಿನ ಗುತ್ತಿಗೇರಿಗೆ ಹೋಗಿ, ಪಿರ್ಯಾದಿಗೆ ಗಾಯಾಳು ತೌಸೀಪನು ಹೇಳಿದಂತೆ ತುಳಸಿ ಹಬ್ಬದ ನಿಮಿತ್ತ ‘ಟೈಂ ಪಾಸ್ ಕಾಡ್ರ್ಸ್ ಆಟ ಆಡುವಲ್ಲಿ ನಾನು ಹೋಗುತ್ತೇನೆ. ನೀನು ನನಗೆ ಅಲ್ಲಿಗೆ ಬಿಟ್ಟು ಸ್ವಲ್ಪ ಸಮಯದ ನಂತರ ನನಗೆ ಕರೆದುಕೊಂಡು ಹೋಗಲು ಬಾ’ ಅಂತಾ ಪಿರ್ಯಾದಿಗೆ ತಿಳಿಸಿದಂತೆ ಪಿರ್ಯಾದಿಯು ರಾತ್ರಿ 22-30 ಗಂಟೆಗೆ ಹೊರಗಿನ ಗುತ್ತಿಗೇರಿಗೆ ಹೋಗಿ ತೌಸೀಪನಿಗೆ ಮರಳಿ ಕರೆದುಕೊಂಡು ಬರಲು ಹೋದಾಗ, ರಾತ್ರಿ 23-00 ಗಂಟೆಯ ಸುಮಾರಿಗೆ ತೌಸೀಪ್ ಈತನು ನಮೂದಿತ ಆರೋಪಿತನಿಗೆ ‘ತನಗೆ ಕೊಡಬೇಕಾದ ಒಂದು ಸಾವಿರ (1,000/-) ರೂಪಾಯಿ ಹಣ ಕೊಡು’ ಅಂತಾ ಕೇಳಿದ್ದರಿಂದ ಆರೋಪಿತನು ಸಿಟ್ಟಿನಿಂದ ‘ತಾನು ನಿನಗೆ ಹಣ ಕೊಡುವುದಿಲ್ಲ. ನೀನು ಏನು ಬೇಕಾದರೂ ಮಾಡಿಕೊ’ ಅಂತಾ ಹೇಳಿ ‘ಏ ಚಿನಾಲಿ ಮಗನೇ’ ಅಂತಾ ಅವಾಚ್ಯ ಶಬ್ದಗಳಿಂದ ಬೈಯದು, ಕೈಯಿಂದ ಕೆನ್ನೆಗೆ ಎರಡು ಬಾರಿ ಹೊಡೆದನು. ಆಗ ಪುನಃ ತೌಸೀಪನು ಆರೋಪಿತನಿಗೆ ‘ನೀನು ನನಗೆ ಹಣ ಕೊಡಲೇ ಬೇಕು’ ಅಂತಾ ಕೇಳಿದಾಗ, ಆರೋಪಿತನು ಸಿಟ್ಟಿನಿಂದ ತನ್ನ ಕೊರಳಲ್ಲಿದ್ದ ಟವೆಲ್ ದಲ್ಲಿ ಅಲ್ಲಿಯೇ ರಸ್ತೆಯ ಮೇಲೆ ಇದ್ದ ಒಂದು ಕಲ್ಲನ್ನು ಟವೆಲ್ ದಲ್ಲಿ ಹಾಕಿ ಕಟ್ಟಿ ಟವೆಲ್ ನ್ನು ಎರಡು ಬಾರಿ ತಿರುಗಿಸುತ್ತಾ ತೌಸೀಪನಿಗೆ ‘ಈಗ ನಿನಗೆ ಕೊಂದೇ ಹಾಕುತ್ತೇನೆ’ ಅಂತಾ ಹೇಳಿದವನೇ, ತೌಸೀಪನ ಹಣೆಗೆ ಹಾಗೂ ತಲೆಗೆ ಎರಡೂ ಬಾರಿ ಜೋರಾಗಿ ಹೊಡೆದು ‘ನೀನು ಇನ್ನೊಂದು ಸಲ ಹಣವನ್ನು ಕೇಳಲು ಬಂದರೆ ನಿನಗೆ ಕೊಂದೇ ಹಾಕುತ್ತೇನೆ’ ಅಂತಾ ಜೀವದ ಬೆದರಿಕೆ ಹಾಕಿ, ತೌಸೀಪನಿಗೆ ತೀವ್ರ ಸ್ವರೂಪದ ಒಳನೋವು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ತುಕಾರಾಮ ತಂದೆ ಅರುಣ ಜಾವಳೇಕರ, ಪ್ರಾಯ-26 ವರ್ಷ, ವೃತ್ತಿ-ಲಾರಿಯಲ್ಲಿ ಹಮಾಲಿ ಹಾಗೂ ಕ್ಲೀನರ್ ಕೆಲಸ, ಸಾ|| ಎ.ಪಿ.ಎಮ್.ಸಿ ಗೇಟ್ ಎದುರಿಗೆ, ಧಾರವಾಡ ರೋಡ್, ತಾ: ಹಳಿಯಾಳ ರವರು ದಿನಾಂಕ: 17-11-2021 ರಂದು 17-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಸಿದ್ದಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 144/2021, ಕಲಂ: 323, 341, 504, 506 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಕೃಷ್ಣಾ ಪರಶುರಾಮ ನಾಯ್ಕ, 2]. ತ್ರಿಮೂರ್ತಿ ಪರಶುರಾಮ ನಾಯ್ಕ, ಸಾ|| (ಇಬ್ಬರೂ) ಜಾತಿಕಟ್ಟಾ, ತಾ: ಸಿದ್ದಾಪುರ. ದಿನಾಂಕ: 17-11-2021 ರಂದು ಪಿರ್ಯಾದಿಯು ತನ್ನ ಸಂಬಂಧಿಕನೊಂದಿಗೆ ತನ್ನೂರಿನಿಂದ ಶಿವಮೊಗ್ಗಾ ಸೊರಬಾಕ್ಕೆ ಕಾರ್ಯಕ್ರಮದ ಸಲುವಾಗಿ ತನ್ನ ಕಾರ್ ನಂ: ಕೆ.ಎ-25/ಜೆಡ್-1693 ನೇದರ ಮೇಲಾಗಿ ಹೋಗುತ್ತಾ ಸಿದ್ದಾಪುರ ಶಹರದ ಹಾಳದಕಟ್ಟಾ ಹೈಸ್ಕೂಲ್ ಹತ್ತಿರ ಇದ್ದಾಗ ಎದುರಿನಿಂದ ಬಂದ ಮೋಟಾರ್ ಸೈಕಲ್ ಸವಾರನಾದ ಆರೋಪಿ 1 ನೇಯವನು ಪಿರ್ಯಾದಿಗೆ ಜೋರು ಮಾಡುತ್ತಾ ಹೋಗಿ, ಪುನಃ ತನ್ನ ಮೋಟಾರ್ ಸೈಕಲ್ ತಿರುಗಿಸಿಕೊಂಡು ಬಂದವನು, ಪಿರ್ಯಾದಿಯು ಸಿದ್ದಾಪುರದ ಜಾತಿಕಟ್ಟಾ ಕಾಲೇಜಿನ ಹತ್ತಿರ ತಲುಪಿದಾಗ ಪಿರ್ಯಾದಿಯು ಚಲಾಯಿಸುತ್ತಿದ್ದ ಕಾರಿಗೆ ಆರೋಪಿ 1 ನೇಯವನು ಚಲಾಯಿಸುತ್ತಿದ್ದ ಮೋಟಾರ್ ಸೈಕಲ್ ನಂ: ಕೆ.ಎ-31/ಇ.ಎ-0025 ನೇದರಿಂದ ಅಡ್ಡಗಟ್ಟಿ ತಡೆದು, ಮೋಟಾರ್ ಸೈಕಲಿನಿಂದ ಆರೋಪಿ 1 ನೇಯವನು ಹಾಗೂ ಹಿಂದೆ ಕುಳಿತ ಆರೋಪಿ 1 ನೇಯವನ ಅಣ್ಣ ಆರೋಪಿ 2 ನೇಯವನು ಇಳಿದು ಬಂದು, ಆರೋಪಿ 1 ನೇಯವನು ಪಿರ್ಯಾದಿಯನ್ನು ಉದ್ದೇಶಿಸಿ ‘ಸೂಳೆ ಮಗನೇ, ಸರಿಯಾಗಿ ಕಾರು ಹೊಡೆಯಲು ಬರಲ್ಲಾ ಏನು?’ ಅಂತಾ ಅವಾಚ್ಯವಾಗಿ ಬೈಯ್ದು, ಕಾರಿನಲ್ಲಿದ್ದ ಪಿರ್ಯಾದಿಯ ಶರ್ಟನ್ನು ಹಿಡಿದು ಜಗ್ಗಾಡಿ, ತಾನೇ ಕಾರಿನ ಬಾಗಿಲನ್ನು ತೆಗೆದು ಪಿರ್ಯಾದಿಗೆ ಹೊರಗೆ ಎಳೆದು, ಪಿರ್ಯಾದಿಯ ಕೆನ್ನೆಗೆ ಹೊಡೆದು ಎದೆಗೆ ಗುದ್ದಿದ್ದು, ಆರೋಪಿ 2 ನೇಯವನು ಪಿರ್ಯಾದಿಯನ್ನು ಉದ್ದೇಶಿಸಿ ’ಇದು ನಮ್ಮ ಏರಿಯಾ. ನಿನಗೆ ಒಂದು ಗತಿ ಕಾಣಿಸುತ್ತೇನೆ’ ಅಂತಾ ಜೀವದ ಬೆದರಿಕೆ ಹಾಕಿದ ಬಗ್ಗೆ ಪಿರ್ಯಾದಿ ಶ್ರೀ ರಮೇಶ ತಂದೆ ಭೈರಾ ನಾಯ್ಕ, ಪ್ರಾಯ-46 ವರ್ಷ, ವೃತ್ತಿ-ನಿವೃತ್ತ ಸೈನಿಕ, ಸಾ|| ಬೇಡ್ಕಣಿ, ತಾ: ಸಿದ್ದಾಪುರ ರವರು ದಿನಾಂಕ: 17-11-2021 ರಂದು 13-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಬನವಾಸಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 109/2021, ಕಲಂ: ಹೆಂಗಸು ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಹೆಂಗಸು ಶ್ರೀಮತಿ ಲಲಿತಾ ಕೋಂ. ಮರಿಯಪ್ಪ ವಾಳದವರ, ಪ್ರಾಯ-23 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಹತ್ತಿಮತ್ತೂರು, ತಾ: ಸವಣೂರು, ಜಿ: ಹಾವೇರಿ, ಹಾಲಿ ಸಾ|| ಹೆಸರೂರು, ಸವಣೂರು, ತಾ: ಹಾವೇರಿ. ಪಿರ್ಯಾದಿಯ ಹೆಂಡತಿಯಾದ ಇವಳು ತನ್ನ ಊರಿನಿಂದ ಗಂಡ (ಪಿರ್ಯಾದಿ) ಹಾಗೂ ಮಗನೊಂದಿಗೆ ದಿನಾಂಕ: 13-11-2021 ರಂದು ಶಿರಸಿ ತಾಲೂಕಿನ ದಾಸನಕೊಪ್ಪದಲ್ಲಿರುವ ಗಂಡನ ಸಂಬಂಧಿ ರವಿ ಚಿಂತಾಮಣಿ ಹರಿಜನ, ಇವರ ಮನೆಯಲ್ಲಿ ಉಳಿದುಕೊಂಡಿದ್ದು, ದಿನಾಂಕ: 16-11-20221 ರಂದು ಸಾಯಂಕಾಲ 05-30 ಗಂಟೆಯಿಂದ 06-30 ಗಂಟೆಯ ನಡುವ ಅವಧಿಯಲ್ಲಿ ಮನೆಯಲ್ಲಿ ಯಾರಿಗೂ ಹೇಳದೇ, ಕೇಳದೇ ಎಲ್ಲಿಯೋ ಹೋಗಿ ಕಾಣೆಯಾಗಿರುತ್ತಾಳೆ. ಸದ್ರಿ ಕಾಣೆಯಾದ ತನ್ನ ಹೆಂಡತಿಯನ್ನು ಹುಡುಕಿ ಕೊಡಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಮರಿಯಪ್ಪ ತಂದೆ ಸಹದೇವಪ್ಪ ವಾಳದವರ, ಪ್ರಾಯ-31 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಹತ್ತಿಮತ್ತೂರು, ತಾ: ಸವಣೂರು, ಜಿ: ಹಾವೇರಿ. ಹಾಲಿ ಸಾ|| ಹೆಸರೂರು, ಸವಣೂರು, ಜಿ: ಹಾವೇರಿ ರವರು ದಿನಾಂಕ: 17-11-2021 ರಂದು 18-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 17-11-2021

at 00:00 hrs to 24:00 hrs

 

ಕಾರವಾರ ಶಹರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 36/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಕುಮಾರ ಆಂದಿ, ಪ್ರಾಯ-39 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| 4/117, ಇಂದಿರಾನಗರ, ಪಿರಿಯಾಪಟ್ಟಣಮ್, ರಾಮನಾಥಪುರ, ತಮಿಳುನಾಡು. ಈತನು ದಿನಾಂಕ: 17-11-2021 ರಂದು ಮಧ್ಯಾಹ್ನ 15-30 ಘಂಟೆಯಿಂದ 16-00 ಘಂಟೆಯ ನಡುವಿನ ಅವಧಿಯಲ್ಲಿ ಮಂಗಳೂರಿನ ಮೂಲದ ವಿಮಲ ಜನಾರ್ಧನ ಬೋಟಿನಲ್ಲಿ ಕೆಲಸ ಮಾಡುತ್ತಿದ್ದು, ಈತನು ಬೋಟಿನ ಪ್ಯಾನ್ ಕ್ಲೀನ್ ಮಾಡಲು ಸಮುದ್ರದ ನೀರಿಗೆ ಇಳಿದಾಗ ಸಮುದ್ರದ ನೀರಿನಲ್ಲಿ ಆಯ ತಪ್ಪಿ ಮುಳುಗಿ ಮೃತಪಟ್ಟಿರುತ್ತಾನೆ. ಮೃತನು ನೀರಿನಲ್ಲಿ ಮುಳುಗಿರುವುದನ್ನು ತಾವೆಲ್ಲರೂ ಪ್ರತ್ಯಕ್ಷವಾಗಿ ನೋಡಿದ್ದು, ಇದರ ಹೊರತು ಮೃತನ ಮರಣದಲ್ಲಿ ಬೇರೇ ಯಾವುದೇ ಸಂಶಯವಿರುವುದಿಲ್ಲ. ಈ ಕುರಿತು ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಮುರುಗೇಶನ ತಂದೆ ಪಂಜಾವರನ್, ಪ್ರಾಯ-52 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| 1-54, ವಡಕುಪ್ಪಟ್ಟು, ಪುದುಕುಡುಇರುಪು, ಪಿರಿಯಾಪಟ್ಟಣಂ, ರಾಮನಾಥಪುರಂ, ತಮಿಳನಾಡು ರವರು ದಿನಾಂಕ: 17-11-2021 ರಂದು 19-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಗೋಕರ್ಣ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 27/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನು ಸುಮಾರು 55 ರಿಂದ 60 ವರ್ಷ ಪ್ರಾಯದ ಅಪರಿಚಿತ ವ್ಯಕ್ತಿಯಾಗಿದ್ದು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಈತನು ದಿನಾಂಕ: 17-11-2021 ರಂದು ಸಾಯಂಕಾಲ 16-30 ಗಂಟೆಗೆ ಕುಮಟಾ ಬಸ್ ನಿಲ್ದಾಣದಿಂದ ಕೆ.ಎಸ್.ಆರ್.ಟಿ.ಸಿ ಬಸ್ ನಂ: ಕೆ.ಎ-31/ಎಫ್-1267 ನೇದರಲ್ಲಿ ಕುಮಟಾದಿಂದ ಗೋಕರ್ಣಕ್ಕೆ ಟಿಕೆಟ್ ತೆಗೆದು ಬಂದವನು, ಸಮಯ 17-35 ಗಂಟೆಗೆ ಬಸ್ ಗೋಕರ್ಣ ನಿಲ್ದಾಣದಲ್ಲಿ ನಿಂತರು ಇಳಿಯದೇ ಇದ್ದವನು, ಪರತ್ ಬಸ್ ಕುಮಟಾಕ್ಕೆ ಪ್ರಯಾಣಿಕರನ್ನು ಕರೆದುಕೊಂಡು ಹೋಗಲು ಪಿರ್ಯಾದಿಯವರು ಪ್ರಯಾಣಿಕರಿಗೆ ಟಿಕೆಟ್ ಹೊಡೆಯುತ್ತಿದ್ದಾಗ ಮೃತ ಅಪರಿಚಿತ ವ್ಯಕ್ತಿಗೆ ಟಿಕೆಟ್ ಬಗ್ಗೆ ಕೇಳಿದಾಗ ಯಾವುದೇ ಉತ್ತರವನ್ನು ನೀಡದೇ ಸೀಟ್ ಮೇಲೆ ತಲೆ ಕೆಳಗಾಗಿ ಕುಳಿತವನು, ಮಾತನಾಡದೇ ಅಲುಗಾಡದೇ ಇದ್ದಾಗ ಪಿರ್ಯಾದಿಯವರು ಸಮಯ 18-00 ಗಂಟೆಯ ಸುಮಾರಿಗೆ ಸ್ಥಳಕ್ಕೆ 108 ಆಂಬ್ಯುಲೆನ್ಸ್ ಕರೆಯಿಸಿ, ಆಂಬ್ಯುಲೆನ್ ರವರಿಂದ ಪರಿಶೀಲಿಸಿದ್ದು, ಸದರಿಯವನು ಮೃತಪಟ್ಟ ಬಗ್ಗೆ ತಿಳಿಸಿದ್ದು, ಅಪರಿಚಿತ ವ್ಯಕ್ತಿಯು ತನಗೆ ಇರುವ ಯಾವುದೇ ಕಾಯಿಲೆಯಿಂದ ಅಥವಾ ಹೃದಯಾಘಾತದಿಂದ ಮೃತಪಟ್ಟಿರುತ್ತಾನೆ. ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಜಯಣ್ಣ ಡಿ ತಂದೆ ದಡ್ಡಯ್ಯಪ್ಪ, ಪ್ರಾಯ-44 ವರ್ಷ, ವೃತ್ತಿ-ಕೆ.ಎಸ್.ಆರ್.ಟಿ.ಸಿ ಬಸ್ ನಿರ್ವಾಹಕ (ಬಿಲ್ಲೆ ಸಂಖ್ಯೆ: 462), ಕುಮಟಾ ಘಟಕ, ಸಾ|| ಮ್ಯಾಸರಟ್ಟಿ, ಚಿತ್ರದುರ್ಗ, ಹಾಲಿ ಸಾ|| ಕೆ.ಎಸ್.ಆರ್.ಟಿ.ಸಿ ಬಸ್ ಡಿಪೋ ಘಟಕ, ತಾ: ಕುಮಟಾ ರವರು ದಿನಾಂಕ: 17-11-2021 ರಂದು 19-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.  

 

ಬನವಾಸಿ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 20/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಯಲ್ಲಪ್ಪ ತಂದೆ ಬಸವಣ್ಣೆಪ್ಪ ಕೊಂಡೋಜಿ, ಪ್ರಾಯ-33 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ವದ್ದಲ, ಕುಪ್ಪಗಡ್ಡೆ, ತಾ: ಶಿರಸಿ. ಈತನು ತನ್ನ ಹೆಂಡತಿಯಾದ ಶ್ರೀಮತಿ ಈರಮ್ಮ ಇವಳು ತನ್ನ ಮಕ್ಕಳೊಂದಿಗೆ ಕಳೆದ ಒಂದು ವಾರದ ಹಿಂದೆ ತವರು ಮನೆಯಾದ ಹಾನಗಲ್ ತಾಲೂಕಿನ ಶೃಂಗೇರಿಗೆ ಹೋಗಿ ಉಳಿದುಕೊಂಡಿದ್ದು, ಮೃತನು 2-3 ಬಾರಿ ಹೋಗಿ ಮನೆಗೆ ಬರುವಂತೆ ಕರೆದರೂ ಸಹ ಮನೆಗೆ ಬರದೇ ಇದ್ದರಿಂದ ಇದೇ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ಸಾರಾಯಿ ಕುಡಿಯುವ ಚಟವನ್ನು ಬೆಳೆಸಿಕೊಂಡಿದ್ದು, ದಿನಾಂಕ: 17-11-2021 ರಂದು ಬೆಳಿಗ್ಗೆ 10-00 ಗಂಟೆಯಿಂದ ಮಧ್ಯಾಹ್ನದ 01-45 ಗಂಟೆಯ ನಡುವಿನ ಅವಧಿಯಲ್ಲಿ ಮೃತನು ತನ್ನ ಹೆಂಡತಿ ಮನೆಗೆ ಬರಲಿಲ್ಲ ಎಂಬ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ಜೀವನದಲ್ಲಿ ಜಿಗುಪ್ಸೆ ಹೊಂದಿ, ಸಾರಾಯಿ ಕುಡಿದು, ಮನೆಯ ಬೆಡ್ ರೂಮಿನ ಕಟ್ಟಿಗೆಯ ತೊಲೆಗೆ ನೈಲಾನ್ ಹಗ್ಗ ಕಟ್ಟಿಕೊಂಡು ಕುತ್ತಿಗೆಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ. ಇದರ ಹೊರತು ಆತನ ಮರಣದಲ್ಲಿ ಬೇರೆ ಯಾವುದೇ ಸಂಶಯ ಇರುವುದಿಲ್ಲ. ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀಮತಿ ಮುತ್ತವ್ವ ಕೋಂ. ಬಸವಣ್ಣೆಪ್ಪ ಕೊಂಡೋಜಿ, ಪ್ರಾಯ-47 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ವದ್ದಲ, ಕುಪ್ಪಗಡ್ಡೆ, ತಾ: ಶಿರಸಿ ರವರು ದಿನಾಂಕ: 17-11-2021 ರಂದು 19-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ಇತ್ತೀಚಿನ ನವೀಕರಣ​ : 18-11-2021 01:47 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080