ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 17-10-2021

at 00:00 hrs to 24:00 hrs

 

ಸಂಚಾರ ಪೊಲೀಸ್ ಠಾಣೆ ಕಾರವಾರ

ಅಪರಾಧ ಸಂಖ್ಯೆಃ 21/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಮಹಮ್ಮದ್ ಅಶ್ರಫ್ ತಂದೆ ಹಸನ್, ಪ್ರಾಯ-48 ವರ್ಷ, ವೃತ್ತಿ-ಖಾಸಗಿ ಕೆಲಸ, ಸಾ|| ಮುಲ್ಕಿ, ಮಂಗಳೂರು (ಮಾರುತಿ ಸ್ವಿಫ್ಟ್ ಕಾರ್ ನಂ: ಕೆ.ಎ-04/ಎಮ್.ಪಿ-5606 ನೇದರ ಚಾಲಕ). ಈತನು ಪಿರ್ಯಾದಿಯ ಗೆಳೆಯನಾಗಿದ್ದು, ದಿನಾಂಕ: 17-10-2021 ರಂದು ರಾತ್ರಿ 02-50 ಗಂಟೆಯಿಂದ 03-00 ಗಂಟೆಯ ನಡುವಿನ ಅವಧಿಯಲ್ಲಿ ತನ್ನ ಮಾರುತಿ ಸ್ವಿಫ್ಟ್ ಕಾರ್ ನಂ: ಕೆ.ಎ-04/ಎಮ್.ಪಿ-5606 ನೇದರಲ್ಲಿ ಪಿರ್ಯಾದಿಯನ್ನು ಕೂಡ್ರಿಸಿಕೊಂಡು ಪಣಜಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರಲ್ಲಿ ಗೋವಾ ಕಡೆಯಿಂದ ಕಾರವಾರ ಕಡೆಗೆ ಅತೀವೇಗವಾಗಿ ಮತ್ತು ನಿರ್ಲಕ್ಷ್ಯತನದಿಂದ ತನ್ನ ವಾಹನವನ್ನು ಚಲಾಯಿಸಿಕೊಂಡು ಬಂದವನು, ಕಾರವಾರದ ಆರ್.ಟಿ.ಓ ಕಛೇರಿಯ ಹತ್ತಿರ ತನ್ನ ಕಾರಿನ ವೇಗವನ್ನು ನಿಯಂತ್ರಿಸಲಾಗದೇ ನಿರ್ಮಾಣ ಹಂತದಲ್ಲಿರುವ ಫ್ಲೈ-ಓವರಿನ ರಸ್ತೆಯ ಡಿವೈಡರಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಡಿಕ್ಕಿ ಹೊಡೆದ ರಭಸಕ್ಕೆ ಕಾರಿಗೆ ಬೆಂಕಿ ತಗುಲಿ ಕಾರು ಸಂಪೂರ್ಣ ಸುಟ್ಟು ಹೋಗುವಂತೆ ಮಾಡಿದ್ದಲ್ಲದೇ, ತನ್ನ ಮೂಗಿನ ಮೇಲೆ ಗಾಯ ಮತ್ತು ಒಳನೋವು ಹಾಗೂ ಬಲಗಾಲಿನ ಮಧ್ಯದ ಬೆರಳಿಗೆ ಗಾಯ ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ಮಹಮ್ಮದ್ ಸಫ್ವಾನ್ ಎ. ಎ. ತಂದೆ ಅಬುಬಕ್ಕರ್, ಪ್ರಾಯ-25 ವರ್ಷ, ವೃತ್ತಿ-ಮರದ ವ್ಯಾಪಾರ, ಸಾ|| #111, ಗಣೇಶ ಮಜಲು ಮನೆ, ಬಿ.ಸಿ ರೋಡ್, ಗೋಳ್ತಮಜಲು, ಕಲ್ಲಡ್ಕ, ಬಂಟ್ವಾಳ, ದಕ್ಷಿಣ ಕನ್ನಡ-574222 ರವರು ದಿನಾಂಕ: 17-10-2021 ರಂದು 05-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕಾರವಾರ ಶಹರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 83/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ಸಚಿನ್ ತಂದೆ ಮಹಾದೇವ ಪಟಗಾರ, ಪ್ರಾಯ-25 ವರ್ಷ, ವೃತ್ತಿ-ಅಂಗಡಿ ವ್ಯಾಪಾರ, ಸಾ|| ಹಬ್ಬುವಾಡಾ, ಮಡಿವಾಳವಾಡಾ, ಕಾರವಾರ. ಈತನು ದಿನಾಂಕ: 16-10-2021 ರಂದು 19-15 ಗಂಟೆಗೆ ತನ್ನ ಲಾಭದ ಸಲುವಾಗಿ ಕಾರವಾರ ನಗರದಲ್ಲಿ ಅರ್ಬನ್ ಬ್ಯಾಂಕ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ 01/- ರೂಪಾಯಿಗೆ 80/- ರೂಪಾಯಿ ಕೊಡುವ ಷರತ್ತಿನ ಮೇಲೆ ಓ.ಸಿ ಮಟಕಾ ಜೂಜಾಟದ ಅದೃಷ್ಟದ ಅಂಕೆ-ಸಂಖ್ಯೆಗಳ ಮೇಲೆ ಪಂಥ ಕಟ್ಟಿ ಸಾರ್ವಜನಿಕರಿಂದ ಹಣ ಪಡೆದುಕೊಂಡು ಓ.ಸಿ ಚೀಟಿ ಬರೆದುಕೊಟ್ಟು ಓ.ಸಿ ಮಟಕಾ ಜೂಜಾಟ ನಡೆಸುತ್ತಿರುವಾಗ ದಾಳಿಯ ಕಾಲ ಅಂಕೆ-ಸಂಖ್ಯೆ ಬರೆದ ಚೀಟಿ, ಬಾಲ್ ಪೆನ್ ಮತ್ತು ನಗದು ಹಣ 1,950/- ರೂಪಾಯಿ ನೇದವುಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಸಂತೋಷಕುಮಾರ ಎಮ್, ಪಿ.ಎಸ್.ಐ (ಕಾ&ಸು), ಕಾರವಾರ ಶಹರ ಪೊಲೀಸ್ ಠಾಣೆ ರವರು ದಿನಾಂಕ: 17-10-2021 ರಂದು 11-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಗೋಕರ್ಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 74/2021, ಕಲಂ: ಗಂಡಸು ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಗಂಡಸು ಶ್ರೀ ರವಿನಂದ ಎಸ್. ಆರ್. ತಂದೆ ರಾಜೇಶ್ ಎಸ್. ಎನ್, ಪ್ರಾಯ-23 ವರ್ಷ, ವೃತ್ತಿ-ಖಾಸಗಿ ಕಂಪನಿಯಲ್ಲಿ ಕೆಲಸ, ಸಾ|| ಜಿ.ಎಸ್ ಲೇಔಟ್, ಬೆಂಗಳೂರು. ಈತನು ದಿನಾಂಕ: 17-10-2021 ರಂದು ಮಧ್ಯಾಹ್ನ 12-45 ಗಂಟೆಯ ಸುಮಾರಿಗೆ ಗೋಕರ್ಣದ ಬೇಲೆಹಿತ್ತಲ್ ಬೀಚಿನ ಸಮುದ್ರದ ನೀರಿನಲ್ಲಿ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಬಂದ ದೊಡ್ಡ ಅಲೆಯ ರಭಸಕ್ಕೆ ನೀರಿನಲ್ಲಿ ಕಾಲು ಜಾರಿ ಸುಳಿಗೆ ಸಿಲುಕಿದವನು, ಈಜಾಡಲು ಸಾಧ್ಯವಾಗದೇ ಸಮುದ್ರದ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿರುತ್ತಾನೆ. ಆತನು ಇನ್ನೂವರೆಗೂ ಪತ್ತೆಯಾಗಿಲ್ಲವಾಗಿದ್ದು, ಆತನನ್ನು ಹುಡುಕಿ ಕೊಡಲು ಕೋರಿದ ಬಗ್ಗೆ ಪಿರ್ಯಾದಿ ಶ್ರೀ ಪ್ರವೀಣಕುಮಾರ ಎಸ್. ತಂದೆ ಶಿವಕುಮಾರ ಕೆ, ಪ್ರಾಯ-22 ವರ್ಷ, ವೃತ್ತಿ-ಸಾಫ್ಟವೇರ್ ಇಂಜಿನಿಯರ್, ಸಾ|| ನಂ: 77, 03 ನೇ ಕ್ರಾಸ್, ಐ.ಟಿ.ಐ ಲೇಔಟ್, ನ್ಯೂ ಬಿ.ಇ.ಎಲ್ ರೋಡ್,  ಬೆಂಗಳೂರು-560054 ರವರು ದಿನಾಂಕ: 17-10-2021 ರಂದು 19-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 270/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಜನಾರ್ಧನ ತಂದೆ ಬಸವರಾಜ ನಾಯ್ಕ, ಪ್ರಾಯ-24 ವರ್ಷ, ವೃತ್ತಿ-ಚಾಲಕ, ಸಾ|| ಜೋಗಿನಕಟ್ಟೆ, ಹಳದಿಪುರ, ತಾ: ಹೊನ್ನಾವರ (ಟಾಟಾ ಸುಮೋ ವಾಹನ ನಂ: ಕೆ.ಎ-31/6529 ನೇದರ ಚಾಲಕ). ಈತನು ದಿನಾಂಕ: 16-10-2021 ರಂದು 22-20 ಗಂಟೆಗೆ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರಲ್ಲಿ ಹೊನ್ನಾವರದ ಎಮ್ಮೆಫೈಲ್ ಕ್ರಾಸ್ ಹತ್ತಿರ ತನ್ನ ಬಾಬ್ತು ಟಾಟಾ ಸುಮೋ ವಾಹನ ನಂ: ಕೆ.ಎ-31/6529 ನೇದನ್ನು ಹೊನ್ನಾವರ ಕಡೆಯಿಂದ ಕುಮಟಾ ಕಡೆಗೆ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ತಾನು ಚಲಾಯಿಸುತ್ತಿದ್ದ ವಾಹನವನ್ನು ಒಮ್ಮೇಲೆ ರಸ್ತೆಯ ಬಲಕ್ಕೆ ಚಲಾಯಿಸಿ, ತನ್ನ ಮುಂದಿನಿಂದ ಅಂದರೆ ಕುಮಟಾ ಕಡೆಯಿಂದ ಹೊನ್ನಾವರ ಕಡೆಗೆ ಗಾಯಾಳು ಸಿ. ಸಿ. ಮೋಹನ ಈತನು ಚಲಾಯಿಸಿಕೊಂಡು ಹೋಗುತ್ತಿದ್ದ ಕಾರ್ ನಂ: ಕೆ.ಎ-05/ಎಮ್.ಎನ್-9826 ನೇದರ ಮುಂಭಾಗಕ್ಕೆ ಢಿಕ್ಕಿ ಹೊಡೆದು ಅಪಘಾತ ಪಡಿಸಿ, ಕಾರಿನಲ್ಲಿದ್ದ ಗಾಯಾಳು ಸ್ನೇಹಾ ಬಿ. ಕೋಂ. ಸಿ. ಸಿ. ಮೋಹನ, ಇವರಿಗೆ ತಲೆಗೆ ಗಾಯ ಹಾಗೂ ಎರಡೂ ಕಾಲಿಗೆ ಪೆಟ್ಟು ಪಡಿಸಿ ಹಾಗೂ ಕಾರ್ ಚಲಾಯಿಸುತ್ತಿದ್ದ ಸಿ. ಸಿ. ಮೋಹನ ತಂದೆ ಬಿ. ಕೆ. ಚನ್ನತಿಮ್ಮಯ್ಯ, ಇವರಿಗೆ ಎಡಗಾಲಿಗೆ ಸಣ್ಣಪುಟ್ಟ ಗಾಯ ಪಡಿಸಿದ್ದಲ್ಲದೇ, ನಾಗರತ್ನ ಬಿ. ಪಿ. ಕೋಂ. ಬಿ. ಕೆ. ಚನ್ನತಿಮ್ಮಯ್ಯ, ಇವರಿಗೆ ಬಲಗಣ್ಣಿನ ಹತ್ತಿರ ಗಾಯನೋವು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಬಿ. ಕೆ. ಚನ್ನತಿಮ್ಮಯ್ಯ ತಂದೆ ಕಾಳಯ್ಯ, ಪ್ರಾಯ-67 ವರ್ಷ, ವೃತ್ತಿ-ಮನೆ ಕೆಲಸ, ಸಾ|| ವಿನಾಯಕ ನಗರ, ತಾ: ಚನ್ನಪಟ್ಟಣ, ಜಿ: ರಾಮನಗರ ರವರು ದಿನಾಂಕ: 17-10-2021 ರಂದು 14-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 271/2021, ಕಲಂ: 279, 304(ಎ) ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ನಾಗರಾಜ ತಂದೆ ಗಣಪತಿ ನಾಯ್ಕ, ಪ್ರಾಯ-44 ವರ್ಷ, ಸಾ|| ಅಗಸೂರ, ಉಳಗದ್ದೆ, ತಾ: ಅಂಕೋಲಾ (ಕೆ.ಎಸ್.ಆರ್.ಟಿ.ಸಿ ಬಸ್ ನಂ: ಕೆ.ಎ-31/ಎಫ್-1581 ನೇದರ ಚಾಲಕ). ಈತನು ದಿನಾಂಕ: 17-10-2021 ರಂದು ಮಧ್ಯಾಹ್ನ 15-45 ಗಂಟೆಗೆ ತಾನು ಚಲಾಯಿಸುತ್ತಿದ್ದ ಚಿಕ್ಕಮಗಳೂರು-ಕಾರವಾರ ಕೆ.ಎಸ್.ಆರ್.ಟಿ.ಸಿ ಬಸ್ ನಂ: ಕೆ.ಎ-31/ಎಫ್-1581 ನೇದನ್ನು ಹೊನ್ನಾವರ ಕಡೆಯಿಂದ ಕುಮಟಾ ಕಡೆಗೆ ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿ ಕುದಬೈಲ್ ಕ್ರಾಸ್ ಹಳದಿಪುರ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರಲ್ಲಿ ತನ್ನ ಮುಂದಿನಿಂದ ಟಿ.ವಿ.ಎಸ್ ಎಕ್ಸೆಲ್ ಸ್ಕೂಟರ್ ನಂ: ಕೆ.ಎ-47/ಜೆ-7696 ನೇದನ್ನು ಚಲಾಯಿಸಿಕೊಂಡು ಹೋಗುತ್ತಿದ್ದ ಶ್ರೀ ಗಣಪತಿ ತಂದೆ ಅನಂತ ನಾಯ್ಕ, ಪ್ರಾಯ-77 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಸಂಕೊಳ್ಳಿ, ಹಳದಿಪುರ, ತಾ: ಹೊನ್ನಾವರ  ಇವರು ಕುದಬೈಲ್ ಕಡೆಗೆ ಹೋಗಲು ಇಂಡಿಕೇಟರ್ ಹಾಕಿ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಎಕ್ಸೆಲ್ ಸ್ಕೂಟರಿಗೆ ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಗಣಪತಿ ನಾಯ್ಕ ಇವರ  ತಲೆಯ ಹಿಂಬದಿಗೆ ಭಾರೀ ಗಾಯ ಪಡಿಸಿ, ಗಾಯಗೊಂಡ ಗಣಪತಿ ನಾಯ್ಕ ಇವರಿಗೆ ಚಿಕಿತ್ಸೆಯ ಕುರಿತು ಆಂಬ್ಯುಲೆನ್ಸ್ ಮೇಲೆ ಹೊನ್ನಾವರ ತಾಲೂಕಿನ ಆಸ್ಪತ್ರೆಗೆ ಕರೆ ತಂದಾಗ 16-15 ಗಂಟೆಗೆ ವೈದ್ಯರು ಪರೀಕ್ಷಿಸಿ ಈಗಾಗಲೆ ಮೃತಪಟ್ಟ ಬಗ್ಗೆ ತಿಳಿಸಿದ್ದು ಹಾಗೂ ಅಪಘಾತವು ಆರೋಪಿ ಬಸ್ ಚಾಲಕನ ಅತೀವೇಗದ ಹಾಗು ನಿರ್ಲಕ್ಷ್ಯತನದ ಚಾಲನೆಯಿಂದ ಸಂಭವಿಸಿದ ಬಗ್ಗೆ ಪಿರ್ಯಾದಿ ಶ್ರೀ ಶಿವಾನಂದ ತಂದೆ ಕೇಶವ ನಾಯ್ಕ, ಪ್ರಾಯ-53 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಕೆರೆಗದ್ದೆ, ಜೋಗಿನಕಟ್ಟೆ, ಹಳದಿಪುರ, ತಾ: ಹೊನ್ನಾವರ ರವರು ದಿನಾಂಕ: 17-10-2021 ರಂದು 16-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮಂಕಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 128/2021, ಕಲಂ: 87 ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ಪ್ರಶಾಂತ ಹನುಮಂತ ನಾಯ್ಕ, ಪ್ರಾಯ-29 ವರ್ಷ, ಸಾ|| ಗುಣವಂತೆ, ಮಂಕಿ, ತಾ: ಹೊನ್ನಾವರ, 2]. ಸಂಜಯ ಲೂಯಿಸ್ ಡಯಾಸ್, ಪ್ರಾಯ-33 ವರ್ಷ, ಸಾ|| ಗುಣವಂತೆ, ಮಂಕಿ, ತಾ: ಹೊನ್ನಾವರ, 3]. ಮನೋಜ ವಿಷ್ಣು ದೇವಾಡಿಗ, ಪ್ರಾಯ-26 ವರ್ಷ, ವಾಸ: ಗುಣವಂತೆ, ತಾ: ಹೊನ್ನಾವರ, ಮಂಕಿ, ತಾ: ಹೊನ್ನಾವರ, 4]. ನಾಗಪ್ಪ ನಾರಾಯಣ ನಾಯ್ಕ, ಪ್ರಾಯ-48 ವರ್ಷ, ಸಾ|| ಗುಣವಂತೆ, ಮಂಕಿ, ತಾ: ಹೊನ್ನಾವರ. ಈ ನಮೂದಿತ ಆರೋಪಿತರೆಲ್ಲರೂ ಸೇರಿಕೊಂಡು ದಿನಾಂಕ: 17-10-2021 ರಂದು 20-40 ಗಂಟೆಗೆ ಮುಗಳಿ ಗುಡ್ಡದ ಮೇಲೆ ಗೇರು ಪ್ಲಾಂಟೇಷನ್ ಒಳಗೆ ಸಾರ್ವಜನಿಕ ಸ್ಥಳದಲ್ಲಿ ತಮ್ಮ ತಮ್ಮ ಲಾಭಕ್ಕಾಗಿ ಹಣವನ್ನು ಇಸ್ಪೀಟ್ ಎಲೆಗಳ ಮೇಲೆ ಪಂಥವಾಗಿ ಕಟ್ಟಿ ಅಂದರ್-ಬಾಹರ್ ಇಸ್ಪೀಟ್ ಜೂಗರಾಟ ಆಡುತ್ತಿದ್ದಾಗ ದಾಳಿ ಸಮಯದಲ್ಲಿ ಜೂಗರಾಟಕ್ಕೆ ಬಳಸಿದ ಸಲಕರಣೆಗಳಾದ ಹಳದಿ ಬಣ್ಣದ ತಾಡಪಲ್-1, ಕ್ಯಾಂಡಲ್-3, ಇಸ್ಪೀಟ್ ಕಾರ್ಡ್ಸ್-52 ಹಾಗೂ ನಗದು ಹಣ 1,020/- ರೂಪಾಯಿಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಅಶೋಕ ಮಾಳಾಬಗಿ, ಪಿ.ಎಸ್.ಐ (ಕಾ&ಸು), ಮಂಕಿ ಪೊಲೀಸ್ ಠಾಣೆ ರವರು ದಿನಾಂಕ: 17-10-2021 ರಂದು 22-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 183/2021, ಕಲಂ: 4, 5, 7, 12 THE KARNATAKA PREVENTION OF SLAUGHTER AND PRESERVATION OF CATTLE ORDINANCE-2020 ಹಾಗೂ ಕಲಂ: 11(1)(D) PREVENTION OF CRUELTY TO ANIMALS ACT-1960 ಮತ್ತು ಕಲಂ: 192 ಎಮ್.ವಿ ಎಕ್ಟ್ ನೇದ್ದರ ವಿವರ...... ನಮೂದಿತ ಆರೋಪಿತರು 1]. ಉಜೇಫ್ ತಂದೆ ರಾಜು ಮನ್ಸೂರಿ, ಪ್ರಾಯ-23 ವರ್ಷ, ವೃತ್ತಿ-ಲಾರಿ ಚಾಲಕ, ಸಾ|| ಸಂಗಂನೇರ್, ಮೊಮಿನಪೂರಾ, ಮದಿನಾ ನಗರ, 01 ನಂಬರ್ ಗಲ್ಲಿ, ತಾ: ಸಂಗಂನೇರ್, ಜಿ: ಅಹಮ್ಮದನಗರ, ಮಹಾರಾಷ್ಟ್ರ, 2]. ವಾಸಿಂ ತಂದೆ ಮಹಮ್ಮದ್ ಹುಸೇನ್ ಶೇಖ್, ಪ್ರಾಯ-36 ವರ್ಷ, ವೃತ್ತಿ-ಲಾರಿ ಚಾಲಕ, ಸಾ|| ಸಂಗಂನೇರ್, ಮೊಮಿನಪೂರಾ, ಮೊಟಿ ಮಜೀದ್ ಸಮೀಪದ ಶಿವಾಜಿ ಪುತ್ತಳಿ ಹತ್ತಿರ, ತಾ: ಸಂಗಂನೇರ್, ಜಿ: ಅಹಮ್ಮದನಗರ, ಮಹಾರಾಷ್ಟ್ರ, 3]. ರಜಾಕ್ ತಂದೆ ಇದ್ದು ಶೇಖ್, ಪ್ರಾಯ-24 ವರ್ಷ, ವೃತ್ತಿ-ಹೆಲ್ಪರ್ ಕೆಲಸ, ಸಾ|| ಕನಿಪನಾಥ ಮಂದಿರ, ಜಾವಲ್ ಬರಗೋನ್, ನಂದುರ, ತಾ: ರಾವೂರಿ, ಜಿ: ಅಹಮ್ಮದನಗರ, ಮಹಾರಾಷ್ಟ್ರ್ರ. ಈ ನಮೂದಿತ ಆರೋಪಿತರು ಕೂಡಿಕೊಂಡು ದಿನಾಂಕ: 17-10-2021 ರಂದು ಸಾಯಂಕಾಲ 05-00 ಗಂಟೆಯ ಸುಮಾರಿಗೆ ಮಹಾರಾಷ್ಟ್ರ ಕಲ್ಯಾಣದಿಂದ ಲಾರಿ ನಂ: ಎಮ್.ಎಚ್-17/ಬಿ.ವೈ–7611 ನೇದರ ಹಿಂದಿನ ಇಕ್ಕಟ್ಟಾದ ಬಾಡಿಯಲ್ಲಿ ಯಾವುದೇ ಪಾಸ್ ಯಾ ಪರವಾನಿಗೆ ಇಲ್ಲದೇ ಅಕ್ರಮವಾಗಿ 6,00,000/- ರೂಪಾಯಿ ಮೌಲ್ಯದ ಸುರ್ತಿ (ಗುಜರಾತಿ) ಜಾತಿಯ 10 ಎಮ್ಮೆಗಳನ್ನು ತುಂಬಿ ಅವುಗಳನ್ನು ಹಗ್ಗದಿಂದ ಕಟ್ಟಿ ಮಲಗಲು ಸಾಧ್ಯವಾಗದ ರೀತಿಯಲ್ಲಿ ಹಿಂಸಾತ್ಮಕವಾಗಿ ಬಲಿ ಕೊಡುವ ಉದ್ದೇಶದಿಂದ ಹುಬ್ಬಳ್ಳಿ ಕಡೆಯಿಂದ ಅಂಕೋಲಾ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿರುವಾಗ ಯಲ್ಲಾಪುರ ಪಟ್ಟಣದ ರೋಜರಿ ಸ್ಕೂಲ್ ಮುಂದೆ ಕಾರವಾರ-ಬಳ್ಳಾರಿ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-63 ರಲ್ಲಿ ಪಿರ್ಯಾದಿಯವರು ಮತ್ತು ಸಿಬ್ಬಂದಿಯವರು ಕೂಡಿ ದಾಳಿ ಮಾಡಿ ಹಿಡಿದ ವೇಳೆ ಸಿಕ್ಕಿರುತ್ತಾರೆ ಎಂಬ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಮಂಜುನಾಥ ಎಸ್. ಗೌಡರ, ಪಿ.ಎಸ್.ಐ, ಯಲ್ಲಾಪುರ ಪೊಲೀಸ್ ಠಾಣೆ ರವರು ದಿನಾಂಕ: 17-10-2021 ರಂದು 06-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮುಂಡಗೋಡ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 131/2021, ಕಲಂ: 279, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಮುತ್ತುರಾಜ @ ಶಿವಬಸವಲಿಂಗೇಶ ತಂದೆ ಚಂದ್ರಶೇಖರ ಮಡ್ಲಿ, ಪ್ರಾಯ-27 ವರ್ಷ, ವೃತ್ತಿ-ಚಾಲಕ, ಸಾ|| ಚೌಡಳ್ಳಿ, ತಾ: ಮುಂಡಗೋಡ (ಟಿಪ್ಪರ್ ವಾಹನ ನಂ: ಕೆ.ಎ-31/ಎ-1084 ನೇದರ ಚಾಲಕ). ಈತನು ದಿನಾಂಕ: 16-10-2021 ರಂದು ಬೆಳಿಗ್ಗೆ 11-30 ಗಂಟೆಗೆ ತನ್ನ ಟಿಪ್ಪರ್ ವಾಹನ ನಂ: ಕೆ.ಎ-31/ಎ-1084 ನೇದನ್ನು ಮುಂಡಗೋಡ ಕಡೆಯಿಂದ ಕಲಕೇರಿ ಕಡೆಗೆ ರಸ್ತೆಯ ಇಳಿಜಾರಿನಲ್ಲಿ ಅತೀವೇಗವಾಗಿ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಹೋಗಿ ಶಿರಗೇರಿ ಬಸ್ ಸ್ಟಾಪ್ ನಿಂದ ಸುಮಾರು 100 ಮೀಟರ್ ಮುಂದೆ ಕಲವರ್ಟ ಹತ್ತಿರ ಕಲಕೇರಿ ಕಡೆಯಿಂದ ಮುಂಡಗೋಡ ಕಡೆಗೆ ರಸ್ತೆಯ ಪಕ್ಕದಿಂದ ಬರುತ್ತಿದ್ದ ಮೋಟಾರ್ ಸೈಕಲ್ ನಂ: ಕೆ.ಎ-31/ಎಕ್ಸ್-3626 ನೇದರ ಸವಾರ ಬಸವರಾಜ ತಂದೆ ಚಂದ್ರು ವಾಲ್ಮೀಕಿ ಇವನ ಮೋಟಾರ್ ಸೈಕಲಿಗೆ ಢಿಕ್ಕಿ ಹೊಡೆದು ಅಪಘಾತ ಪಡಿಸಿ, ಮೋಟಾರ ಸೈಕಲ್ ಸವಾರನ ಬಲಗಾಲಿನ ಮೊಣಗಂಟಿನ ಹತ್ತಿರ ಹಾಗೂ ಬಲಗೈಯ ಮುಂಗೈ ಹತ್ತಿರ ಭಾರೀ ರಕ್ತಗಾಯ ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ರವಿ ತಂದೆ ಹನುಮಂತಪ್ಪ ವಾಲ್ಮೀಕಿ, ಪ್ರಾಯ-48 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಲಕ್ಕೋಳ್ಳಿ, ತಾ: ಮುಂಡಗೋಡ ರವರು ದಿನಾಂಕ: 17-10-2021 ರಂದು 15-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಸಿದ್ದಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 133/2021, ಕಲಂ: 3(1), 25(1ಬಿ) ಭಾರತೀಯ ಆಯುಧ ಕಾಯ್ದೆ-1959 ನೇದ್ದರ ವಿವರ...... ನಮೂದಿತ ಆರೋಪಿತ ಬಲವೀಂದ್ರ ತಂದೆ ತಿಮ್ಮಾ ಹಸ್ಲರ್, ಪ್ರಾಯ-24 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕುಡೇಗೋಡು, ಪೋ: ದೊಡ್ಮನೆ, ತಾ: ಸಿದ್ದಾಪುರ. ಈತನು ದಿನಾಂಕ: 17-10-2021 ರಂದು 15-00 ಗಂಟೆಗೆ ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಗೆ ಒಳಪಡುವ ಕುಡೇಗೋಡಿನಲ್ಲಿ ಅವನ ಮನೆಯ ಪಕ್ಕದಲ್ಲಿ ಕಟ್ಟಿಗೆ ಶೇಖರಿಸಿಡಲು ಮಾಡಿರುವ ಶೆಡ್ಡಿನಲ್ಲಿ ಅಕ್ರಮ ಒಂಟಿ ನಳಿಕೆಯ ನಾಡ ಬಂದೂಕನ್ನು ಬಚ್ಚಿಟ್ಟಿರುವ ಬಗ್ಗೆ ಮಾಹಿತಿ ಕಲೆ ಹಾಕಿ 16-00 ಗಂಟೆಗೆ ಪಿರ್ಯಾದಿಯವರು ಸಿಬ್ಬಂದಿಗಳು ಹಾಗೂ ಪಂಚರೊಂದಿಗೆ ಹೋಗಿ ದಾಳಿ ಮಾಡಿ ಪರಿಶೀಲಿಸಿದಾಗ ಆರೋಪಿತನು ಅಕ್ರಮ ಒಂಟಿ ನಳಿಕೆಯ ನಾಡ ಬಂದೂಕಿನೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಮಹಾಂತಪ್ಪ ಜಿ. ಕುಂಬಾರ, ಪಿ.ಎಸ್.ಐ, ಸಿದ್ದಾಪುರ ಪೊಲೀಸ್ ಠಾಣೆ ರವರು ದಿನಾಂಕ: 17-10-2021 ರಂದು 18-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 17-10-2021

at 00:00 hrs to 24:00 hrs

 

ಅಂಕೋಲಾ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 57/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತಳಾದ ಶ್ರೀಮತಿ ಯಮುನಾ ಗಂಡ ರಾಮಕೃಷ್ಣ ನಾಯಕ, ಪ್ರಾಯ-82 ವರ್ಷ, ವೃತ್ತಿ-ಮನೆ ಕೆಲಸ, ಸಾ|| ವಂದಿಗೆ, ತಾ: ಅಂಕೋಲಾ. ಇವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದವರು ಹಾಗೂ ಕಳೆದ ತಿಂಗಳ ಹಿಂದೆ ತನ್ನ ತಮ್ಮ ಹೃದಯ ಸಂಬಂಧಿ ಕಾಯಿಲೆಯಿಂದ ಮೃತಪಟ್ಟಿರುವ ಬಗ್ಗೆ ಚಿಂತಿಸುತ್ತಿದ್ದವರು, ದಿನಾಂಕ: 17-10-2021 ರಂದು ಬೆಳಿಗ್ಗೆ 08-00 ಗಂಟೆಯಿಂದ 11-30 ಗಂಟೆಯ ನಡುವಿನ ಅವಧಿಯಲ್ಲಿ ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ಅಂಕೋಲಾ ತಾಲೂಕಿನ ವಂದಿಗೆ ಗ್ರಾಮದಲ್ಲಿರುವ ಮನೆಯಲ್ಲಿ ತಾನು ಮಲಗುವ ಕೋಣೆಯ ಬಾಗಿಲು ಹಾಕಿಕೊಂಡು ತನ್ನ ರೂಮಿನ ಫ್ಯಾನಿಗೆ ಸೀರೆಯಿಂದ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾರೆ. ಈ ಕುರಿತು ಮುಂದಿನ ಕಾನೂನು ಕ್ರಮವನ್ನು ಕೈಗೊಂಡು ಮೃತದೇಹವನ್ನು ಬಿಟ್ಟುಕೊಡಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀಮತಿ ಸುಮಾ ಗಂಡ ನಿತ್ಯಾನಂದ ಗಾಂವಕರ, ಪ್ರಾಯ-58 ವರ್ಷ, ವೃತ್ತಿ-ಕೆನರಾ ಬ್ಯಾಂಕ್ ಮ್ಯಾನೇಜರ್, ಅವರ್ಸಾ ಶಾಖೆ, ಸಾ|| ವಂದಿಗೆ, ತಾ: ಅಂಕೋಲಾ ರವರು ದಿನಾಂಕ: 17-10-2021 ರಂದು 15-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಮುರ್ಡೇಶ್ವರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 28/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಚಿರಂಜೀವಿ ತಂದೆ ಅನಂತ ದೇವಾಡಿಗ, ಪ್ರಾಯ-26 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಬೆಮ್ಮಣ್ಣನಮನೆ, ಉಳ್ಮಣ, ಬೆಂಗ್ರೆ-1, ತಾ: ಭಟ್ಕಳ. ಪಿರ್ಯಾದಿಯವರ ತಮ್ಮನಾದ ಈತನು ಕಳೆದ 10 ವರ್ಷಗಳಿಂದ ಮಾನಸಿಕ ಅಸ್ವಸ್ಥನಾಗಿದ್ದರಿಂದ ಉಡುಪಿ ಹಾಗೂ ಹೊನ್ನಾವರದ ಮಾನಸಿಕ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿದರೂ ಸಹ ಕಾಯಿಲೆ ಕಡಿಮೆ ಆಗದೇ ಇದ್ದವನು, ದಿನಾಂಕ: 16-10-2021 ರಂದು ಸಾಯಂಕಾಲ 06-00 ಗಂಟೆಗೆ ಮನೆಯಿಂದ ಹೋದವನಿಗೆ ಪಿರ್ಯಾದಿ ಹಾಗೂ ಅವರ ಮನೆಯ ಜನರು ಎಲ್ಲಾ ಕಡೆಗೆ ಹುಡುಕಾಡಿದರೂ ಸಿಗದೇ ಇದ್ದವನು, ದಿನಾಂಕ: 17-10-2021 ರಂದು ಮಧ್ಯಾಹ್ನ 03-00 ಗಂಟೆಗೆ ಉಳ್ಮಣ ಕೇರಿಯಲ್ಲಿ ಶವವಾಗಿ ಸಿಕ್ಕಿದ್ದು ಇರುತ್ತದೆ. ಈತನು ದಿನಾಂಕ: 16-10-2021 ರಂದು ಸಾಯಂಕಾಲ 06-00 ಗಂಟೆಯಿಂದ ದಿನಾಂಕ: 17-10-2021 ರಂದು ಮಧ್ಯಾಹ್ನ 03-00 ಗಂಟೆಯ ನಡುವಿನ ಅವಧಿಯಲ್ಲಿ ಉಳ್ಮಣ ಕೆರೆಯಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಕೆರೆಯ ನೀರಿನಲ್ಲಿ ಬಿದ್ದು, ನೀರಿನಲ್ಲಿ ಮುಳುಗಿ ಮೃತಪಟ್ಟಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ವಿನಾಯಕ ತಂದೆ ಅನಂತ ದೇವಾಡಿಗ, ಪ್ರಾಯ-32 ವರ್ಷ, ವೃತ್ತಿ-ಇಂಜೀನಿಯರ್, ಸಾ|| ಬೆಮ್ಮಣ್ಣನಮನೆ, ಬೆಂಗ್ರೆ-1, ತಾ: ಭಟ್ಕಳ ರವರು ದಿನಾಂಕ: 17-10-2021 ರಂದು 16-20 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

ಇತ್ತೀಚಿನ ನವೀಕರಣ​ : 18-10-2021 04:56 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080