ದೈನಂದಿನ ಜಿಲ್ಲಾ ಅಪರಾಧ ವರದಿ
ದಿನಾಂಕ:- 18-04-2021
at 00:00 hrs to 24:00 hrs
ಕಾರವಾರ ಶಹರ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 49/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ಲವೀತ ತಂದೆ ಬಾಬು ಹರಿಕಂತ್ರ, ಪ್ರಾಯ-35 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ಕೋಡಿಬೀರ ದೇವಸ್ಥಾನ ರಸ್ತೆ, ಕಾರವಾರ. ಈತನು ದಿನಾಂಕ: 17-04-2021 ರಂದು 11-30 ಗಂಟೆಗೆ ಕಾರವಾರದ ಲೈಬ್ರರಿ ರಸ್ತೆಯ ಬಳಿ ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡು ತನ್ನ ಲಾಭದ ಸಲುವಾಗಿ ಸಾರ್ವಜನಿಕರಿಗೆ 01/- ರೂಪಾಯಿಗೆ 80/- ರೂಪಾಯಿ ಕೊಡುವ ಷರತ್ತಿನ ಮೇಲೆ ಅದೃಷ್ಠದ ಅಂಕೆ-ಸಂಖ್ಯೆಗಳ ಮೇಲೆ ಪಂಥ ಕಟ್ಟಿ ಜನರಿಂದ ಹಣ ಪಡೆದು ಓ.ಸಿ ಮಟಕಾ ಜೂಗಾರಾಟ ನಡೆಸುತ್ತಿರುವಾಗ ಪಿರ್ಯಾದಿಯವರು ದಾಳಿ ಮಾಡಿ ಜೂಗಾರಾಟಕ್ಕೆ ಬಳಸಿದ ಸ್ವತ್ತುಗಳನ್ನು ಹಾಗೂ ನಗದು ಹಣ 1420/- ರೂಪಾಯಿಯನ್ನು ವಶಕ್ಕೆ ಪಡೆದುಕೊಂಡ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಸಂತೋಷಕುಮಾರ ಎಮ್, ಪಿ.ಎಸ್.ಐ, ಕಾರವಾರ ಶಹರ ಪೊಲೀಸ್ ಠಾಣೆ ರವರು ದಿನಾಂಕ: 18-04-2021 ರಂದು 12-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಕದ್ರಾ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 10/2021, ಕಲಂ: 32, 34 ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತೆ ಶ್ರೀಮತಿ ಶೈಲಾ ಸುಧಾಕರ ನಾಯ್ಕ, ಪ್ರಾಯ-39 ವರ್ಷ, ವೃತ್ತಿ-ಮನೆವಾರ್ತೆ, ಸಾ|| ಪುನರ್ವಸತಿ ಕೇಂದ್ರ, ಕದ್ರಾ, ಕಾರವಾರ. ನಮೂದಿತ ಆರೋಪಿತಳು ದಿನಾಂಕ: 18-04-2021 ರಂದು 12-30 ಗಂಟೆಗೆ ಕದ್ರಾದ ಪುನರ್ವಸತಿ ಕೇಂದ್ರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಿಂದುಗಡೆಯ ಸಾರ್ವಜನಿಕ ರಸ್ತೆಯ ಬದಿಯಲ್ಲಿ ಯಾವುದೇ ಅಧೀಕೃತ ಪಾಸ್ ಯಾ ಪರ್ಮಿಟ್ ಇಲ್ಲದೇ ಒಂದು ಕೈಚೀಲದಲ್ಲಿ 1). 1 ಲೀಟರ್ ಅಳತೆಯ ಗೇರು ಹಣ್ಣಿನಿಂದ ತಯಾರಿಸಿದ ಮದ್ಯ (ಉರಾಕ್) ತುಂಬಿದ ಬಾಟಲಿಗಳು-02, ಗೋವಾ ರಾಜ್ಯ ತಯಾರಿಕೆಯ 2). 180 ML ಅಳತೆಯ McDowell’s No1, Reserve Whisky, For Sale in Goa, 42.8% v/v ಅಂತಾ ಇಂಗ್ಲೀಷ್ ಲೇಬಲ್ ಇರುವ ಸರಾಯಿ ಬಾಟಲಿಗಳು-09, 3). 180 ML ಅಳತೆಯ DOCTOR’S Interchoice Brandy, For Sale in Goa 42.8% v/v ಅಂತಾ ಇಂಗ್ಲೀಷ್ ಲೇಬಲ್ ಇರುವ ಸರಾಯಿ ಬಾಟಲಿಗಳು-20. ಇವುಗಳನ್ನು ಅಕ್ರಮವಾಗಿ ಸಾಗಾಟ ಮಾಡಿ ತಂದು, ಅಕ್ರಮವಾಗಿ ಮಾರಾಟ ಮಾಡಿ ಲಾಭ ಪಡೆಯುವ ಉದ್ದೇಶದಿಂದ ಮಾರಾಟ ಮಾಡುವ ತಯಾರಿಯಲ್ಲಿದ್ದಾಗ ಸರಾಯಿ ಬಾಟಲಿಗಳೊಂದಿಗೆ ಸೆರೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಮಹಾದೇವ ಭೋಸಲೆ, ಪಿ.ಎಸ್.ಐ, ಕದ್ರಾ ಪೊಲೀಸ್ ಠಾಣೆ ರವರು ದಿನಾಂಕ: 18-04-2021 ರಂದು 15-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಅಂಕೋಲಾ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 73/2021, ಕಲಂ: 279 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಲೇತಪೇಟ್ ಸೋಮಿನಾಥ ತಂದೆ ಪರಮೇಶ್ವರ, ಸಾ|| ಮಹಾರಾಷ್ಟ್ರ (ಕಂಟೇನರ್ ಲಾರಿ ನಂ: ಎಮ್.ಎಚ್-05/ಡಿ.ಕೆ-4433 ನೇದರ ಚಾಲಕ). ಈತನು ದಿನಾಂಕ: 17-04-2021 ರಂದು 20-00 ಗಂಟೆಗೆ ಅಂಕೋಲಾ ತಾಲೂಕಿನ ಹೊನ್ನಳ್ಳಿ ಗ್ರಾಮದಲ್ಲಿ ಹಾಯ್ದಿರುವ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-63 ರ ಡಾಂಬರ್ ರಸ್ತೆಯ ಮೇಲೆ ತನ್ನ ಬಾಬ್ತು ಕಂಟೇನರ್ ಲಾರಿ ನಂ: ಎಮ್.ಎಚ್-05/ಡಿ.ಕೆ-4433 ನೇದನ್ನು ಅಂಕೋಲಾ ಕಡೆಯಿಂದ ಯಲ್ಲಾಪುರ ಕಡೆಗೆ ಅತೀವೇಗವಾಗಿ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ತನ್ನ ಚಾಲನೆಯ ಮೇಲಿನ ನಿಯಂತ್ರಣವನ್ನು ಕಳೆದುಕೊಂಡು ರಸ್ತೆಯ ಬಲಕ್ಕೆ ಬಂದವನು, ಯಲ್ಲಾಪುರ ಕಡೆಯಿಂದ ಅಂಕೋಲಾ ಕಡೆಗೆ ರಸ್ತೆಯ ತನ್ನ ಬದಿಯಿಂದ ಹೋಗುತ್ತಿದ್ದ ಲಾರಿ ನಂ: ಕೆ.ಎಲ್-01/ಸಿ.ಬಿ-6800 ನೇದಕ್ಕೆ ಬಲಬದಿಯ ಬಾಡಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಲಾರಿಯನ್ನು ಜಖಂ ಪಡಿಸಿರುತ್ತಾನೆ ಬಗ್ಗೆ ಪಿರ್ಯಾದಿ ಶ್ರೀ ಪ್ರವೀಣ ತಂದೆ ಶಂಕರ ವಾರಿಯರ್, ಪ್ರಾಯ-36 ವರ್ಷ, ವೃತ್ತಿ-ವ್ಯವಹಾರ, ಸಾ|| ಪ್ರಶಾಂತಿ ನಿವಾಸ, ಇದಿವೇರ್ ಸಕ್ಕರೆಕಲ್ಲ, ತಾ: ಕಣ್ಣೂರು, ಜಿ: ಕಣ್ಣೂರು, ಕೇರಳಾ ರಾಜ್ಯ ರವರು ದಿನಾಂಕ: 18-04-2021 ರಂದು 12-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಗೋಕರ್ಣ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 35/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ಪ್ರಶಾಂತ ಜಟ್ಟಿ ಹರಿಕಂತ್ರ, ಪ್ರಾಯ-33 ವರ್ಷ, ವೃತ್ತಿ-ಕಿರಾಣಿ ಅಂಗಡಿ, ಸಾ|| ಮೊರಬಾ, ತಾ: ಕುಮಟಾ, 2]. ಮಂಜುನಾಥ ಲಕ್ಷ್ಮಣ ಹಳ್ಳೇರ, ಪ್ರಾಯ-41 ವರ್ಷ, ವೃತ್ತಿ-ಅಂಗಡಿ ವ್ಯಾಪಾರ, ಸಾ|| ಹರಿಜನಕೇರಿ, ಮೊರಬಾ, ತಾ: ಕುಮಟಾ, 3]. ಮೋಹನ ಪಿ. ಪಟಗಾರ, ಪ್ರಾಯ-45 ವರ್ಷ, ವೃತ್ತಿ-ವ್ಯಾಪಾರ, ಸಾ|| ಬೆಟ್ಕುಳಿ, ತಾ: ಕುಮಟಾ, 4]. ಅನಂತ ಪರಮೇಶ್ವರ ಹಳ್ಳೇರ, ಪ್ರಾಯ-45 ವರ್ಷ, ವೃತ್ತಿ-ವ್ಯಾಪಾರ, ಸಾ|| ಹರಿಜನಕೇರಿ, ಮೊರಬಾ, ತಾ: ಕುಮಟಾ, 5]. ದಯಾನಂದ ಗೌಡ, ಪ್ರಾಯ-35 ವರ್ಷ, ವೃತ್ತಿ-ವ್ಯಾಪಾರ, ಸಾ|| ನುಶೀಕೋಟೆ, ಮೊರಬಾ, ತಾ: ಕುಮಟಾ, 6]. ಕೃಷ್ಣಾ ಗೌಡ, ಪ್ರಾಯ-35 ವರ್ಷ, ಸಾ|| ಮಾವಿನಕುರ್ವೆ, ತಾ: ಹೊನ್ನಾವರ. ಈ ನಮೂದಿತ ಆರೋಪಿತರಲ್ಲಿ ಆರೋಪಿ 1, 2, 3, 4 ಹಾಗೂ 5 ನೇಯವರು ದಿನಾಂಕ: 17-04-2021 ರಂದು 14-20 ಗಂಟೆಯ ಸುಮಾರಿಗೆ ಗೋಕರ್ಣ ಠಾಣಾ ವ್ಯಾಪ್ತಿಯ ಕುಮಟಾ ಗೋಕರ್ಣ ರಸ್ತೆಯ ಮೊರಬಾ ಗ್ರಾಮದ ಬಸ್ ಸ್ಟಾಪ್ ಹತ್ತಿರ ಪಾನ್ ಬೀಡಾ ಅಂಗಡಿಯ ಎದುರಿಗೆ ಸಾರ್ವಜನಿಕ ಸ್ಥಳದಲ್ಲಿ ಅಂಕೆ-ಸಂಖ್ಯೆಗಳ ಮೇಲೆ ಹಣದ ಪಂಥವನ್ನು ಜನರಿಂದ ಕಟ್ಟಿಸಿಕೊಂಡು ಅವರಿಗೆ ಓ.ಸಿ ಚೀಟಿ ಬರೆದುಕೊಡುತ್ತಿರುವಾಗ ಪಿರ್ಯಾದಿಯವರು ದಾಳಿ ಮಾಡಿದ ಕಾಲಕ್ಕೆ ಆರೋಪಿ 1 ಮತ್ತು 2 ನೇಯವರು ಸೆರೆ ಸಿಕ್ಕಿದ್ದು ಹಾಗೂ ಆರೋಪಿ 3, 4 ಮತ್ತು 5 ನೇಯವರು ಓಡಿ ಹೋಗಿ ಪರಾರಿಯಾಗಿದ್ದು, ಸದರ 05 ಜನ ಆರೋಪಿತರು ಅಂಕೆ-ಸಂಖ್ಯೆ ಬರೆದ ಚೀಟಿಗಳನ್ನು ಮತ್ತು ಹಣವನ್ನು ಓ.ಸಿ ಮಟಕಾ ಬುಕ್ಕಿಯಾದ ಆರೋಪಿ 6 ನೇಯವನಿಗೆ ನೀಡುತ್ತಿದ್ದು, ಸೆರೆ ಸಿಕ್ಕ ಆರೋಪಿ 1 ಹಾಗೂ 2 ನೇಯವರಿಂದ ಓ.ಸಿ ಮಟಕಾ ಜೂಗಾರಾಟ ಆಡಲು ಬೇಕಾಗುವ ಸಲಕರಣೆಗಳಾದ 1). ಅಂಕೆ-ಸಂಖ್ಯೆ ಬರೆದ ಚೀಟಿ-05, 2). ಅಂಕೆ-ಸಂಖ್ಯೆ ಬರೆದು ಕೊಡಲು ಇಟ್ಟುಕೊಂಡಿದ್ದ ಖಾಲಿ ಚೀಟಿಗಳು-11, 3). ಬಾಲ್ ಪೆನ್-02 ಹಾಗೂ 4). ವಿವಿಧ ಮೌಲ್ಯದ ನಗದು ಹಣ 12,680/- ರೂಪಾಯಿ ನೇದವುಗಳನ್ನು ವಶಪಡಿಸಿಕೊಂಡ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಶಿವಪ್ರಕಾಶ ಆರ್. ನಾಯ್ಕ, ಪೊಲೀಸ್ ವೃತ್ತ ನಿರೀಕ್ಷಕರು, ಪ್ರಭಾರ: ಕುಮಟಾ ವೃತ್ತ, ಕುಮಟಾ ರವರು ದಿನಾಂಕ: 18-04-2021 ರಂದು 17-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಹೊನ್ನಾವರ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 114/2021, ಕಲಂ: 15(ಎ), 32(3) ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತರು 1]. ಕುಮಾರ ತಂದೆ ದಾಮೋದರ ಮೇಸ್ತಾ, ಪ್ರಾಯ-32 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ಕಾಸರಕೋಡ, ಹಿರೇಮಠ, ತಾ: ಹೊನ್ನಾವರ, 2]. ಸಾಯಿನಾಥ ತಂದೆ ಗೋವಿಂದ ಮೇಸ್ತಾ, ಪ್ರಾಯ-29 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ಕಾಸರಕೋಡ, ತೊಪ್ಪಲ, ತಾ: ಹೊನ್ನಾವರ. ಈ ನಮೂದಿತ ಆರೋಪಿತರು ದಿನಾಂಕ: 18-04-2021 ರಂದು 19-00 ಗಂಟೆಗೆ ಹೊನ್ನಾವರ ಶಹರದ ಶರಾವತಿಯ ಹಳೇ ಬ್ರಿಡ್ಜ್ ಮೇಲೆ ಸಾರ್ವಜನಿಕ ಸ್ಥಳದಲ್ಲಿ 1). FOSTER’S GOLD STRONG BEER ಅಂತಾ ಬರೆದ 650 ML ಅಳತೆಯ ಸರಾಯಿ ತುಂಬಿದ ಬಾಟಲಿ-01, ಅ||ಕಿ|| 120/- ರೂಪಾಯಿ, 2). JOHN BULL WHISKY ಅಂತಾ ಬರೆದ 180 ML ಅಳತೆಯ ಅರ್ಧ ಸರಾಯಿ ಇದ್ದ ಪ್ಲಾಸ್ಟಿಕ ಬಾಟಲಿ-01, ಅ||ಕಿ|| 00.00/- ರೂಪಾಯಿ, 3). ಖಾಲಿ ಪ್ಲಾಸ್ಟಿಕ್ ಗ್ಲಾಸ್-02, ಅ||ಕಿ|| 00.00/- ರೂಪಾಯಿ ನೇದವುಗಳೊಂದಿಗೆ ಸರಾಯಿ ಕುಡಿಯುತ್ತಿರುವಾಗ ಸೆರೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಮಹಾಂತೇಶ ಉದಯ ನಾಯಕ, ಪಿ.ಎಸ್.ಐ (ಕಾ&ಸು-02), ಹೊನ್ನಾವರ ಪೊಲೀಸ್ ಠಾಣೆ ರವರು ದಿನಾಂಕ: 18-04-2021 ರಂದು 20-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಹೊನ್ನಾವರ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 115/2021, ಕಲಂ: 15(ಎ), 32(3) ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತರು 1]. ಸುಬ್ರಹ್ಮಣ್ಯ ತಂದೆ ಗಣೇಶ ನಾಯ್ಕ, ಪ್ರಾಯ-21 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಹೊಸಪಟ್ಟಣ, ತಾ: ಹೊನ್ನಾವರ, 2]. ಜಗದೀಶ ತಂದೆ ರತ್ನಾಕರ ನಾಯ್ಕ, ಪ್ರಾಯ-24 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಹೊಸಪಟ್ಟಣ, ತಾ: ಹೊನ್ನಾವರ, 3]. ದರ್ಶನ ತಂದೆ ಮೋಹನ ನಾಯ್ಕ, ಪ್ರಾಯ-19 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಗುಳದಕೇರಿ, ಮಂಕಿ, ತಾ: ಹೊನ್ನಾವರ. ಈ ನಮೂದಿತ ಆರೋಪಿತರು ದಿನಾಂಕ: 18-04-2021 ರಂದು 22-15 ಗಂಟೆಗೆ ಹೊನ್ನಾವರ ಶಹರದ ಶರಾವತಿ ಹಳೇ ಬ್ರಿಡ್ಜ್ ಮೇಲೆ ಸಾರ್ವಜನಿಕ ಸ್ಥಳದಲ್ಲಿ 1). FOSTER’S GOLD STRONG BEER ಅಂತಾ ಬರೆದ 650 ML ಅಳತೆಯ ಸರಾಯಿ ತುಂಬಿದ ಬಾಟಲಿ-01, ಅ||ಕಿ|| 120/- ರೂಪಾಯಿ, 2). JOHN BULL WHISKY ಅಂತಾ ಬರೆದ 180 ML ಅಳತೆಯ ಅರ್ಧ ಸರಾಯಿ ಇದ್ದ ಪ್ಲಾಸ್ಟಿಕ ಬಾಟಲಿ-01, ಅ||ಕಿ|| 00.00/- ರೂಪಾಯಿ, 3). HAYWARD’S CHEERS WHISKY ಅಂತಾ ಬರೆದ 90 ML ಅಳತೆ ಟೆಟ್ರಾ ಪ್ಯಾಕೆಟ್-01, ಅ||ಕಿ|| 35/- ರೂಪಾಯಿ, 4). ಖಾಲಿ ಪ್ಲಾಸ್ಟಿಕ್ ಗ್ಲಾಸ್-03, ಅ||ಕಿ|| 00.00/- ರೂಪಾಯಿ ನೇದವುಗಳೊಂದಿಗೆ ಸರಾಯಿ ಕುಡಿಯುತ್ತಿರುವಾಗ ಸೆರೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಮಹಾಂತೇಶ ಉದಯ ನಾಯಕ, ಪಿ.ಎಸ್.ಐ (ಕಾ&ಸು-02), ಹೊನ್ನಾವರ ಪೊಲೀಸ್ ಠಾಣೆ ರವರು ದಿನಾಂಕ: 18-04-2021 ರಂದು 23-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಜೋಯಿಡಾ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 24/2021, ಕಲಂ: 419, 420 ಐಪಿಸಿ ಹಾಗೂ ಕಲಂ: 66(ಸಿ)(ಡಿ) ಮಾಹಿತಿ ತಂತ್ರಜ್ಞಾನ ಕಾಯ್ದೆ-2000 ನೇದ್ದರ ವಿವರ...... ನಮೂದಿತ ಆರೋಪಿತನು ಮೊಬೈಲ್ ಸಂಖ್ಯೆ: 8509073041 ನೇದರಿಂದ ಕರೆ ಮಾಡಿದ ವ್ಯಕ್ತಿಯಾಗಿದ್ದು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಪಿರ್ಯಾದಿಯವರು ಕೆನರಾ ಬ್ಯಾಂಕ್, ಜೋಯಿಡಾ ಶಾಖೆಯಲ್ಲಿ ಉಳಿತಾಯ ಖಾತೆಯನ್ನು ಹೊಂದಿದ್ದು, ತಮ್ಮ ಉಳಿತಾಯ ಖಾತೆ ನಂ: 033526100XXXXX ನೇದು ಇದ್ದು, ಅದಕ್ಕೆ ಬಿ.ಎಸ್.ಎನ್.ಎಲ್ ನ ಪಿರ್ಯಾದಿಯ ಮೊಬೈಲ್ ನಂ: 82770XXXXX ಮತ್ತು ಪಿರ್ಯಾದಿಯ ಆಧಾರ್ ಕಾರ್ಡ್ ಲಿಂಕ್ ಆಗಿದ್ದು ಇರುತ್ತದೆ. ದಿನಾಂಕ: 13-04-2021 ರಂದು ಪಿರ್ಯಾದಿಯು ತಮ್ಮ ಮೊಬೈಲಿನಲ್ಲಿದ್ದ ಅಮೆಜಾನ್ ಯ್ಯಾಪ್ ನಲ್ಲಿ ದ್ವಿಚಕ್ರ ವಾಹನದ ಒಂದು ಇಂಡಿಕೇಟರ್ 219/- ರೂಪಾಯಿಗೆ ಖರೀದಿಗೆ ಪ್ರಯತ್ನಿಸಿದ್ದು, ಆ ಸಮಯದಲ್ಲಿ ಕೈ ತಪ್ಪಿ ಇನ್ನೊಂದು ವಸ್ತು ಖರೀದಿಗೆ 598/- ರೂಪಾಯಿ ಹಣ ಕೂಡ ತನ್ನ ಖಾತೆಯಿಂದ ಕಡಿತವಾಗಿರುತ್ತದೆ. ಇದಾದ ಮೇಲೆ ಪಿರ್ಯಾದಿಯು ಎರಡನೇ ವಸ್ತು ಖರೀದಿಗೆ ಕೈ ತಪ್ಪಿ ಆಗಿರುವ ಆರ್ಡರ್ ರದ್ದು ಮಾಡಲು ಪ್ರಯತ್ನಿಸಿದ್ದು, ಆದರೆ ಅದು ಸಾಧ್ಯವಾಗಿರುವುದಿಲ್ಲ. ನಂತರ ಪಿರ್ಯಾದಿಯು ಎರಡನೇ ಆರ್ಡರ್ ರದ್ದುಗೊಳಿಸುವ ಸಲುವಾಗಿ ಈ ಬಗ್ಗೆ ಗೂಗಲ್ ನಲ್ಲಿ ಅಮೆಜಾನ್ ಆ್ಯಪ್ ನ ಗ್ರಾಹಕರ ವಿಭಾಗದ ದೂರವಾಣಿ ಸಂಖ್ಯೆಯನ್ನು ಹುಡುಕಲು ಪ್ರಯತ್ನಿಸಿದ್ದು, ಆಗ ಪಿರ್ಯಾದಿಗೆ ಒಂದು ದೂರವಾಣಿ ಸಂಖ್ಯೆ: 18004122266 ನೇದರಂತೆ ಸಿಕ್ಕಿದ್ದು. ಸದರಿ ದೂರವಾಣಿ ಸಂಖ್ಯೆಗೆ ಪಿರ್ಯಾದಿಯು ದಿನಾಂಕ: 13-04-2021 ರಂದು ಮಧ್ಯಾಹ್ನ 13-22 ಗಂಟೆಗೆ ತನ್ನ ಮೊಬೈಲಿನಿಂದ ಕರೆ ಮಾಡಿದ್ದು, ಆದರೆ ಕರೆಯನ್ನು ಯಾರು ಸ್ವೀಕರಿಸಿದ್ದು ಇರುವುದಿಲ್ಲ. ಇದಾದ ಮೇಲೆ ಸ್ವಲ್ಪ ಸಮಯದ ನಂತರ ಅಂದರೆ 13-25 ಗಂಟೆಗೆ ಪಿರ್ಯಾದಿಯ ಮೊಬೈಲಿಗೆ ಆರೋಪಿತನ ಮೊಬೈಲ್ ನಂ: 8509073041 ನೇದರಿಂದ ಕರೆ ಬಂದಿದ್ದು, ಪಿರ್ಯಾದಿಯು ಅದನ್ನು ಸ್ವೀಕರಿಸಿದ್ದು, ಆಗ ಎದುರುಗಡೆಯಿಂದ ಆರೋಪಿತನಾದ ಓರ್ವ ಗಂಡಸು ವ್ಯಕ್ತಿಯ ಧ್ವನಿಯಲ್ಲಿ ಓರ್ವರು ಮಾತನಾಡುತ್ತಾ ‘ನಾನು ಅಮೆಜಾನ್ ಆ್ಯಪ್ ನ ಗ್ರಾಹಕ ವಿಭಾಗದ ಸಿಬ್ಬಂದಿಯಾಗಿದ್ದು, ನಿಮಗೆ ಏನು ಸಮಸ್ಯೆ ಇದೆ?’ ಎಂದು ಕೇಳಿದಂತೆ. ಆಗ ಪಿರ್ಯಾದಿಯು ‘ಕೈ ತಪ್ಪಿ 598.00/- ರೂಪಾಯಿಯ ಎರಡನೆಯ ಆರ್ಡರ್ ಆಗಿದ್ದು, ಅದನ್ನು ರದ್ದು ಪಡಿಸಬೇಕಾಗಿದೆ’ ಎಂದು ಹೇಳಿದಂತೆ, ಆಗ ಎದುರುಗಡೆಯಿಂದ ಮಾತನಾಡುತ್ತಿದ್ದ ಆರೋಪಿತ ವ್ಯಕ್ತಿಯು ಪಿರ್ಯಾದಿಗೆ ತನ್ನ ಮೊಬೈಲನಲ್ಲಿ ಪ್ಲೇ ಸ್ಟೋರಿಗೆ ಹೋಗಿ AnyDesk Control Plugin (adl) ಆ್ಯಪ್ ಡೌನಲೋಡ್ ಮಾಡುವಂತೆ ಹೇಳಿದ್ದು, ಅವರ ಮಾಹಿತಿಯಂತೆ ಪಿರ್ಯಾದಿಯು ಸದರಿ ಆ್ಯಪ್ ನ್ನು ಡೌನ್ಲೋಡ್ ಮಾಡಿಕೊಂಡಿದ್ದು, ಇದಾದ ಸ್ವಲ್ಪ ಹೊತ್ತಿಗೆ ಪಿರ್ಯಾದಿಯ ಮೊಬೈಲ್ ಹ್ಯಾಂಗ್ ಆಗಿದ್ದು, ಏನೇ ಮಾಡಿದರೂ ಸರಿಯಾಗಿರುವುದಿಲ್ಲ. ನಂತರ ಸ್ವಲ್ಪ ಹೊತ್ತಿಗೆ ಪಿರ್ಯಾದಿಯ ಮೊಬೈಲ್ ಸರಿಯಾಗಿದ್ದು ತಕ್ಷಣ ಸದರಿ ಆ್ಯಪ್ ನ್ನು ಅನ್ ಇನಸ್ಟಾಲ್ ಮಾಡಿದ್ದು ಇರುತ್ತದೆ. ಅಷ್ಟೊತ್ತಿಗೆ ಆಗಲೇ ಪಿರ್ಯಾದಿಯ ಖಾತೆಯಿಂದ ಹಣ 3,000/- ರೂಪಾಯಿ, 24,000/- ರೂಪಾಯಿ, 19,999/- ರೂಪಾಯಿ, 19,999/- ರೂಪಾಯಿ, 19,999/- ರೂಪಾಯಿ ಹಾಗೂ 9,490/- ರೂಪಾಯಿಯಂತೆ ಕ್ರಮವಾಗಿ ಒಟ್ಟು 96,487/- ರೂಪಾಯಿ ಹಣವನ್ನು ಮೊಬೈಲ್ ನಂ: 8509073041 ನೇದರಿಂದ ಕರೆ ಮಾಡಿದ ಆರೋಪಿತನು ಮೋಸದಿಂದ ವರ್ಗಾವಣೆ ಮಾಡಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ಅನೀಲ ತಂದೆ ಮ್ಹಾಬಳು ವೇಳಿಪ, ಪ್ರಾಯ-25 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ನಗರಿ, ತಾ: ಜೋಯಿಡಾ ರವರು ದಿನಾಂಕ: 18-04-2021 ರಂದು 11-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಯಲ್ಲಾಪುರ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 63/2021, ಕಲಂ: 279, 337, 427 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ವಿಶ್ವನಾಥ ತಂದೆ ಕೃಷ್ಣಾ ಮರಾಠಿ, ಪ್ರಾಯ-29 ವರ್ಷ, ವೃತ್ತಿ-ವ್ಯಾಪಾರ, ಸಾ|| ಉಪ್ಪಳೇಶ್ವರ, ತಾ: ಯಲ್ಲಾಪುರ. ಈತನು ದಿನಾಂಕ: 18-04-2021 ರಂದು 19-30 ಗಂಟೆಯ ಸುಮಾರಿಗೆ ಯಲ್ಲಾಪುರ ತಾಲೂಕಿನ ಉಪ್ಪಳೇಶ್ವರ ಗ್ರಾಮದಲ್ಲಿ ಇರುವ ತನ್ನ ಅಂಗಡಿಯ ಹಿಂಬದಿಯ ತಾತ್ಕಾಲಿಕ ಶೆಡ್ಡಿನಲ್ಲಿ ತನ್ನ ಅನ್ಯಾಯದ ಲಾಭಕ್ಕೋಸ್ಕರ ಯಾವುದೇ ಪಾಸ್ ಯಾ ಪರ್ಮಿಟ್ ಇಲ್ಲದೇ ಸಾರ್ವಜನಿಕ ಸ್ಥಳದಲ್ಲಿ ಜನರಿಗೆ ಮುಕ್ತವಾಗಿ ಮದ್ಯವನ್ನು ಕುಡಿಯಲು ಅವಕಾಶ ಮಾಡಿಕೊಟ್ಟಿರುವಾಗ ORIGINAL CHOICE DELUXE Whisky-180 ML ಅಳತೆಯ ಮದ್ಯದ ಪ್ಯಾಕೆಟ್ ಗಳು-15, ಅ||ಕಿ|| 1,053/- ರೂಪಾಯಿ, ORIGINAL CHOICE DELUXE Whisky 180 ML ಅಳತೆಯ ಖಾಲಿ ಪ್ಯಾಕೆಟ್-02, ಅ||ಕಿ|| 00.00/- ರೂಪಾಯಿ ಹಾಗೂ ಮದ್ಯವನ್ನು ಕುಡಿಯಲು ಬಳಸಿದ ಖಾಲಿ ಪ್ಲಾಸ್ಟಿಕ್ ಗ್ಲಾಸುಗಳು-4, ಅ||ಕಿ|| 00.00/- ರೂಪಾಯಿ, ಖಾಲಿ ಸೋಡಾ ಬಾಟಲಿ-01, ಅ||ಕಿ|| 00.00/- ರೂಪಾಯಿ. ಇವುಗಳೊಂದಿಗೆ ಅನಧೀಕೃತವಾಗಿ ಮದ್ಯವನ್ನು ಕುಡಿಯಲು ಅವಕಾಶ ಮಾಡಿಕೊಟ್ಟಾಗ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಸುರೇಶ ಎಚ್. ಯಳ್ಳೂರ, ಪೊಲೀಸ್ ನಿರೀಕ್ಷಕರು, ಯಲ್ಲಾಪುರ ಪೊಲೀಸ್ ಠಾಣೆ ರವರು ದಿನಾಂಕ: 18-04-2021 ರಂದು 21-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ
ಮುಂಡಗೋಡ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 63/2021, ಕಲಂ: 279, 337, 427 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಬಸವರಾಜ ತಂದೆ ದ್ಯಾಮಣ್ಣ ವಡ್ಡಿನ, ಪ್ರಾಯ-42 ವರ್ಷ, ವೃತ್ತಿ ಚಾಲಕ, ಸಾ|| ಹೀರೆಕೊಪ್ಪ, ತಾ&ಜಿ: ಗದಗ (ಟಾಟಾ ಗೂಡ್ಸ್ ಲಾರಿ ನಂ: ಎ.ಪಿ-16/ಟಿ.ಜಿ-3955 ನೇದರ ಚಾಲಕ). ಈತನು ದಿನಾಂಕ: 17-04-2021 ರಂದು ರಾತ್ರಿ 20-30 ಗಂಟೆಗೆ ತನ್ನ ಬಾಬ್ತು ಟಾಟಾ ಗೂಡ್ಸ್ ಲಾರಿ ನಂ: ಎ.ಪಿ-16/ಟಿ.ಜಿ-3955 ನೇದನ್ನು ಶಿರಶಿ ಕಡೆಯಿಂದ ಹುಬ್ಬಳ್ಳಿ ಕಡೆಗೆ ಅತೀವೇಗವಾಗಿ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಬಾಚಣಕಿ ಗ್ರಾಮದ ಮಂಜುನಾಥ ತಂದೆ ಅಂದಾನಪ್ಪ ಕುರುಬರ, ಇವರ ಬಾಬ್ತು ಸಾಗವಾನಿ ಮರಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಲಾರಿಯನ್ನು ಅವರ ಹೊಲದಲ್ಲಿ ಚಲಾಯಿಸಿ ಮೆಣಸಿನ ಗಿಡಗಳ ಮೇಲೆ ಹಾಯಿಸಿ ಸುಮಾರು 30,000/- ರೂಪಾಯಿಯಷ್ಟು ಲುಕ್ಸಾನ್ ಪಡಿಸಿದ್ದಲ್ಲದೇ, ಅಪಘಾತದಿಂದ ಲಾರಿಯ ಕ್ಲೀನರ್ ಮಂಜುನಾಥ ತಂದೆ ಪಪ್ಪಣ್ಣ ಗಚ್ಚಿನಮನಿ, ಸಾ|| ಬಳೇಹೊಸೂರು, ಲಕ್ಷ್ಮೇಶ್ವರ, ಗದಗ ಈತನ ತಲೆಗೆ, ಎಡಗಾಲಿನ ಮೊಣಕಾಲಿನ ಹತ್ತಿರ ಹಾಗೂ ಮುಖದ ಭಾಗದಲ್ಲಿ ಗಾಯನೋವು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ನಿಂಗಪ್ಪ ತಂದೆ ಅಂದಾನಪ್ಪ ಕುರಬರ, ಪ್ರಾಯ-41 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಬಾಚಣಿಕಿ, ತಾ: ಮುಂಡಗೋಡ ರವರು ದಿನಾಂಕ: 18-04-2021 ರಂದು 16-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಹಳಿಯಾಳ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 88/2021, ಕಲಂ: ಮಹಿಳೆ ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಮಹಿಳೆ ಶ್ರೀಮತಿ ಮಾಯಾ ಕೋಂ. ಗೋಕುಳ ದನ್ನು, ಪ್ರಾಯ-36 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಮಂಗಳವಾಡ, ತಾ: ಹಳಿಯಾಳ. ಪಿರ್ಯಾದಿಯವರ ತಂಗಿಯಾದ ಇವಳು ಯುಗಾದಿ ಹಬ್ಬದ ಸಲುವಾಗಿ ಕಳೆದ 15 ದಿನಗಳ ಹಿಂದೆ ತನ್ನ ಗಂಡನ ಮನೆಯಾದ ಹಳಿಯಾಳ ತಾಲೂಕಿನ ಮಂಗಳವಾಡದಿಂದ ತನ್ನ ತವರು ಮನೆಯಾದ ಹಳಿಯಾಳ ತಾಲೂಕಿನ ಗೋಲೆಹಳ್ಳಿಗೆ ಬಂದವಳು, ದಿನಾಂಕ: 16-04-2021 ರಂದು 22-00 ಗಂಟೆಯಿಂದ ದಿನಾಂಕ: 17-04-2021 ರಂದು ಬೆಳಿಗ್ಗೆ 06-00 ಗಂಟೆಯ ನಡುವಿನ ಅವಧಿಯಲ್ಲಿ ಹಳಿಯಾಳ ತಾಲೂಕಿನ ಗೋಲೆಹಳ್ಳಿಯ ತನ್ನ ತವರು ಮನೆಯಿಂದ ಯಾವುದೋ ವಿಚಾರಕ್ಕೆ ಮನಸ್ಸಿಗೆ ಬೇಸರ ಮಾಡಿಕೊಂಡು, ಮನೆಯಲ್ಲಿ ಯಾರಿಗೂ ಹೇಳದೇ ಕೇಳದೇ ಎಲ್ಲಿಯೋ ಹೋಗಿ ಕಾಣೆಯಾಗಿರುತ್ತಾಳೆ. ಸದರಿ ಕಾಣೆಯಾದವಳನ್ನು ಹುಡುಕಿ ಕೊಡಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಮಹೇಶ ತಂದೆ ಭೀಮರಾಯ ಗಾಡಿ, ಪ್ರಾಯ-38 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಗೋಲೆಹಳ್ಳಿ, ತಾ: ಹಳಿಯಾಳ ರವರು ದಿನಾಂಕ: 18-04-2021 ರಂದು 20-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ರಾಮನಗರ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 38/2021, ಕಲಂ: 279, 337, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಮಂಜುನಾಥ ತಂದೆ ಬಸಪ್ಪ ಮಡಿವಾಳರ, ಪ್ರಾಯ-47 ವರ್ಷ, ವೃತ್ತಿ-ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕ, ಸಾ|| ಗುಲಗಂಜಿಕೊಪ್ಪ, ತಾ&ಜಿ: ಧಾರವಾಡ (ಕಾರ್ ನಂ: ಕೆ.ಎ-25/ಎಮ್.ಎ-8897 ನೇದರ ಚಾಲಕ). ದಿನಾಂಕ: 17-04-2021 ರಂದು ಪಿರ್ಯಾದಿ ಹಾಗೂ ಅವರ ಗೆಳೆಯರಾದ 1). ಮಂಜನಗೌಡ ಗಂಗನಗೌಡ ಪಾಟೀಲ, 2). ಮಂಜುನಾಥ ಬಸಪ್ಪ ಮಡಿವಾಳರ ಸೇರಿಕೊಂಡು, ಪಿರ್ಯಾದಿಯವರ ಗೆಳೆಯನಾದ ನಮೂದಿತ ಆರೋಪಿತನ ಬಾಬ್ತು ಕಾರ್ ನಂ: ಕೆ.ಎ-25/ಎಮ್.ಎ-8897 ನೇದರ ಮೇಲೆ ಪಿರ್ಯಾದಿಯವರ ವೈಯಕ್ತಿಕ ಕೆಲಸದ ಮೇಲೆ ಅಂಕೋಲಾಕ್ಕೆ ಹೋಗಿ, ಅಂಕೋಲಾದಲ್ಲಿ ತಮ್ಮ ಕೆಲಸ ಮುಗಿಸಿಕೊಂಡು ಸದರಿ ಕಾರ್ ನಂ: ಕೆ.ಎ-25/ಎಮ್.ಎ-8897 ನೇದರ ಮೇಲೆ ಮೂರು ಜನರು ಸೇರಿಕೊಂಡು ಅದೇ ದಿವಸ ಅಲ್ಲಿಂದ ಪಣಜಿಗೆ ಹೋಗಿ, ಪಣಜಿಯಲ್ಲಿ ಉಳಿದು ಸುತ್ತಾಡಿಕೊಂಡು, ಮರುದಿವಸ ದಿನಾಂಕ: 18-04-2021 ರಂದು ಬೆಳಿಗ್ಗೆ 06-00 ಗಂಟೆಯ ಸುಮಾರಿಗೆ ಪಣಜಿಯಲ್ಲಿದ್ದ ಪಿರ್ಯಾದಿಯವರ ಗೆಳೆಯ: ವಿಠ್ಠಲ ಅರಭಾವಿ ಇವರಿಗೆ ಸದರಿ ಕಾರ್ ನಂ: ಕೆ.ಎ-25/ಎಮ್.ಎ-8897 ನೇದರ ಮೇಲೆ ಕರೆದುಕೊಂಡು, ಪಿರ್ಯಾದಿಯವರು ಹಾಗೂ ಪಿರ್ಯಾದಿಯವರ ಗೆಳೆಯರಾದ 1). ವಿಠ್ಠಲ ಅರಭಾವಿ, 2) ಮಂಜನಗೌಡ ಗಂಗನಗೌಡ ಪಾಟೀಲ, 3). ಆರೋಪಿತ. ಈ ಮೂರು ಜನರು ಸೇರಿಕೊಂಡು ಪಣಜಿ-ಬೆಳಗಾವಿ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-4(ಎ) ಮಾರ್ಗವಾಗಿ ಧಾರವಾಡಕ್ಕೆ ಬರುವಾಗ ಅನಮೋಡದ ಆರ್.ಟಿ.ಓ ಚೆಕ್ ಪೋಸ್ಟ್ ದಾಟಿ 02 ಕೀ.ಮೀ ದೂರದ ರಸ್ತೆ ತಿರುವಿನಲ್ಲಿ ಸದರಿ ಕಾರ್ ನಂ: ಕೆ.ಎ-25/ಎಮ್.ಎ-8897 ನೇದನ್ನು ಚಲಾಯಿಸುತ್ತಿದ್ದ ಪಿರ್ಯಾದಿಯವರ ಗೆಳೆಯನಾದ ನಮೂದಿತ ಆರೋಪಿತನು ತನ್ನ ಬಾಬ್ತು ಕಾರ್ ನಂ: ಕೆ.ಎ-25/ಎಮ್.ಎ-8897 ನೇದನ್ನು ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಸದರಿ ಕಾರಿನ ಮೇಲಿನ ನಿಯಂತ್ರಣವನ್ನು ತಪ್ಪಿ, ಸದರಿ ಕಾರನ್ನು ಅನಮೋಡ ಬದಿಗೆ ಹೋಗುವಾಗ ಬಲಬದಿಯ ರಸ್ತೆಯ ತಿರುವಿನ ಪಕ್ಕದಲ್ಲಿರುವ ಇಳಿಜಾರಿನ ಅರಣ್ಯ ಪ್ರದೇಶದ ಕಂದರಿಗೆ ಸದರಿ ಕಾರನ್ನು ಚಲಾಯಿಸಿ, ಕಾರನ್ನು ಪಲ್ಟಿ ಪಡಿಸಿ, ಸದರಿ ಕಾರಿನಲ್ಲಿದ್ದ 1). ಪಿರ್ಯಾದಿಯವರಿಗೆ ಗದ್ದದ ಭಾಗದಲ್ಲಿ ರಕ್ತದ ಗಾಯ ಪಡಿಸಿದ್ದು, ಪಿರ್ಯಾದಿಯವರ ಗೆಳೆಯರಾದ 2). ವಿಠ್ಠಲ ಅರಭಾವಿ, ಇವನಿಗೆ ತಲೆಯ ಭಾಗದಲ್ಲಿ ಹಾಗೂ ಎರಡು ಕಾಲುಗಳ ಮೊಣಕಾಲಿನ ಭಾಗದಲ್ಲಿ ತೀವೃ ಸ್ವರೂಪದ ರಕ್ತದ ಗಾಯ ಪಡಿಸಿದ್ದು, 3). ಮಂಜನಗೌಡ ಗಂಗನಗೌಡ ಪಾಟೀಲ, ಇವರಿಗೆ ತಲೆಯ ಹಿಂಭಾಗದಲ್ಲಿ ಹಾಗೂ ಬಲಗಾಲಿನ ಮೊಣಕಾಲಿನ ಭಾಗದಲ್ಲಿ ತೀವೃ ಸ್ವರೂಪದ ಒಳಪೆಟ್ಟು ಪಡಿಸಿದ್ದು ಹಾಗೂ ಆರೋಪಿತನೂ ತನಗೂ ಸಹ ಎದೆಗೆ, ಮೂಗಿನ ಭಾಗದಲ್ಲಿ ಹಾಗೂ ಗದ್ದದ ಭಾಗದಲ್ಲಿ ಒಳಪೆಟ್ಟು ಪಡಿಸಿಕೊಂಡಿರುತ್ತಾನೆ ಹಾಗೂ ಸದರ ಕಾರ್ ನಂ: ಕೆ.ಎ-25/ಎಮ್.ಎ-8897 ನೇದನ್ನು ಜಖಂಗೊಳಿಸಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಶಿವಾನಂದ ತಂದೆ ಶಂಕರಪ್ಪ ಯಡವಟ್ಟಿ, ಪ್ರಾಯ-46 ವರ್ಷ, ವೃತ್ತಿ-ವಕೀಲರು, ಸಾ|| ಗುಲಗಂಜಿಕೊಪ್ಪ, ತಾ&ಜಿ: ಧಾರವಾಡ ರವರು ದಿನಾಂಕ: 18-04-2021 ರಂದು 11-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
======||||||||======
ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ
ದಿನಾಂಕ:- 18-04-2021
at 00:00 hrs to 24:00 hrs
ಪ್ರಕರಣಗಳು ದಾಖಲಾಗಿರುವುದಿಲ್ಲ....
======||||||||======