ದೈನಂದಿನ ಜಿಲ್ಲಾ ಅಪರಾಧ ವರದಿ
ದಿನಾಂಕ:- 18-04-2022
at 00:00 hrs to 24:00 hrs
ಅಂಕೋಲಾ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 68/2022, ಕಲಂ: 279 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ರಾಘವೇಂದ್ರ ತಂದೆ ಸುರೇಶ ನಾಯ್ಕ, ಪ್ರಾಯ-37 ವರ್ಷ, ಸಾ|| ಬೊಬ್ರುವಾಡ, ತಾ: ಅಂಕೋಲಾ (ಲಾರಿ ನಂ: ಕೆ.ಎ-30/ಎ-1286 ನೇದರ ಚಾಲಕ). ಈತನು ದಿನಾಂಕ: 18-04-2022 ರಂದು ಬೆಳಿಗ್ಗೆ 03-30 ಗಂಟೆಗೆ ತನ್ನ ಬಾಬ್ತು ಲಾರಿ ನಂ: ಕೆ.ಎ-30/ಎ-1286 ನೇದನ್ನು ಅಂಕೋಲಾ ಶಹರದ ಜಿ.ಸಿ ಸರ್ಕಲ್ ಕಡೆಯಿಂದ ಅಂಕೋಲಾ ಬಸ್ ನಿಲ್ದಾಣದ ಕಡೆಗೆ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದವನು, ತನ್ನ ಲಾರಿಯ ಚಾಲನೆಯ ಮೇಲಿನ ನಿಯಂತ್ರಣವನ್ನು ಕಳೆದುಕೊಂಡು ರಸ್ತೆಯ ಮಧ್ಯದಲ್ಲಿದ್ದ ಡಿವೈಡರಿಗೆ ಡಿಕ್ಕಿ ಹೊಡೆದು ಡಿವೈಡರ್ ಮೇಲೆ ಹತ್ತಿಸಿ ಅಪಘಾತ ಪಡಿಸಿ, ಲಾರಿಯನ್ನು ಡ್ಯಾಮೇಜ್ ಪಡಿಸಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಪ್ರವೀಣಕುಮಾರ ಆರ್, ಪಿ.ಎಸ್.ಐ (ಕಾ&ಸು), ಅಂಕೋಲಾ ಪೊಲೀಸ್ ಠಾಣೆ ರವರು ದಿನಾಂಕ: 18-04-2022 ರಂದು 11-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಯಲ್ಲಾಪುರ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 89/2022, ಕಲಂ: 279, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಶಿವಾನಂದ ತಂದೆ ನಾರಾಯಣ ನಾಯ್ಕ, ಪ್ರಾಯ-46 ವರ್ಷ, ವೃತ್ತಿ-ಚಾಲಕ, ಸಾ|| ಕರ್ಕಿ, ರಾಮೇಶ್ವರ ಕಂಬಿ, ತಾ: ಹೊನ್ನಾವರ (ಲಾರಿ ನಂ: ಕೆ.ಎ-47/1067 ನೇದರ ಚಾಲಕ). ಈತನು ದಿನಾಂಕ: 16-04-2022 ರಂದು ಮಧ್ಯಾಹ್ನ 14-30 ಗಂಟೆಯ ಸುಮಾರಿಗೆ ತನ್ನ ಬಾಬ್ತು ಲಾರಿ ನಂ: ಕೆ.ಎ-47/1067 ನೇದನ್ನು ಶಿರಸಿ ಕಡೆಯಿಂದ ಯಲ್ಲಾಪುರ ಕಡೆಗೆ ಅತೀವೇಗವಾಗಿ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಲಾರಿಯನ್ನು ತನ್ನ ನಿಯಂತ್ರಣದಲ್ಲಿ ಇಟ್ಟುಕೊಳ್ಳದೇ ಯಲ್ಲಾಪುರ ತಾಲೂಕಿನ ಹಲಸ್ಕಂದ ಕ್ರಾಸ್ ಹತ್ತಿರ ಹಾಯ್ದು ಹೋದ ರಾಜ್ಯ ಹೆದ್ದಾರಿ ಸಂಖ್ಯೆ- 93 ರ ಡಾಂಬರ್ ರಸ್ತೆಯ ಮೇಲೆ ತನ್ನ ಎದುರಿನಿಂದ ಅಂದರೆ ಯಲ್ಲಾಪುರ ಕಡೆಯಿಂದ ಶಿರಸಿ ಕಡೆಗೆ ಪಿರ್ಯಾದಿಯ ತಮ್ಮ ಸಾಕ್ಷಿದಾರನಾದ ಕೃಷ್ಣಾ ತಂದೆ ರಾಮಣ್ಣ ನಾಳಕರ ರವರು ನಿಧಾನವಾಗಿ ತನ್ನ ರಸ್ತೆಯ ಸೈಡಿನಿಂದ ಚಲಾಯಿಸಿಕೊಂಡು ಬರುತ್ತಿದ್ದ ಮೋಟಾರ್ ಸೈಕಲ್ ನಂ: ಕೆ.ಎ-31/ಎಸ್-5013 ನೇದಕ್ಕೆ ಎದುರಿನಿಂದ ಢಿಕ್ಕಿ ಹೊಡೆದ ಪರಿಣಾಮ ಸಾಕ್ಷಿದಾರ ಕೃಷ್ಣಾ ನಾಳಕರ ರವರು ಮೋಟಾರ್ ಸೈಕಲ್ ಸಮೇತ ರಸ್ತೆಯ ಮೇಲೆ ಬಿದ್ದಿದ್ದರಿಂದ ಅವರ ಬಲಗಾಲು ತೊಡೆಯ ಹತ್ತಿರ ಭಾರೀ ಗಾಯನೋವು ಪಡಿಸಿಪಡಿದ್ದಲ್ಲದೇ, ಎರಡೂ ವಾಹನಗಳನ್ನು ಜಖಂಗೊಳಿಸಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ನಾರಾಯಣ ತಂದೆ ರಾಮಣ್ಣ ನಾಳಕರ, ಪ್ರಾಯ-48 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಡೋಮಗೇರಿ, ಹುಣಶೆಟ್ಟಿಕೊಪ್ಪ, ತಾ: ಯಲ್ಲಾಪುರ ರವರು ದಿನಾಂಕ: 18-04-2022 ರಂದು 13-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ದಾಂಡೇಲಿ ನಗರ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 33/2022, ಕಲಂ: 341, 323, 324, 504, 506 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಆದಂ ತಂದೆ ಜಾವೇದ್ ಮುಲ್ಲಾ, ಪ್ರಾಯ-21 ವರ್ಷ, 2]. ಅಬ್ದುಲ್ ಖಾನ್ @ ಡೋರಲ್ಯಾ ತಂದೆ ಖಾದರ್ ಖಾನ್ ಪಠಾಣ, ಪ್ರಾಯ-20 ವರ್ಷ, ಸಾ|| (ಇಬ್ಬರೂ) ಹಳೇ ದಾಂಡೇಲಿ, ತಾ: ದಾಂಡೇಲಿ. ಈ ನಮೂದಿತ ಆರೋಪಿತರಿಬ್ಬರೂ ಕೂಡಿಕೊಂಡು ದಿನಾಂಕ: 17-04-2022 ರಂದು 17-15 ಗಂಟೆಯಿಂದ 17-30 ಗಂಟೆಯ ಅವಧಿಯಲ್ಲಿ ಹಳೇ ದಾಂಡೇಲಿ ಹಳೇ ಕೋರ್ಟ್ ಹತ್ತಿರ ಪಿರ್ಯಾದಿಯು ಆತನ ಗೆಳೆಯನೊಂದಿಗೆ ನಡೆದುಕೊಂಡು ಹೋಗುತ್ತಿರುವಾಗ ಅಲ್ಲಿ ಮೋಟಾರ್ ಸೈಕಲ್ ಮೇಲೆ ಕುಳಿತುಕೊಂಡಿದ್ದ ತನ್ನ ತಮ್ಮನಿಗೆ ಪಿರ್ಯಾದಿಯು ‘ಮನೆಗೆ ಹೋಗು’ ಅಂತಾ ಹೇಳಿದಕ್ಕೆ ಆರೋಪಿತರಿಬ್ಬರೂ ಪಿರ್ಯಾದಿಯನ್ನು ಅಡ್ಡಗಟ್ಟಿ ತಡೆದು ನಿಲ್ಲಿಸಿ, ಪಿರ್ಯಾದಿಯನ್ನು ಉದ್ದೇಶಿಸಿ ‘ಏನೋ ಬೋಸಡಿಕೆ, ನೀನು ಅವನಿಗೆ ಏನು ಹೇಳುತ್ತೀಯಾ?’ ಅಂತಾ ಹೇಳಿದವನೇ ಆರೋಪಿ 1 ನೇಯವನು ಅಲ್ಲಿಯೇ ಇದ್ದ ಒಂದು ಬಾಂಬೂ ಪಟ್ಟಿಯಿಂದ ಪಿರ್ಯಾದಿಯ ತಲೆಗೆ ಹೊಡೆದಿದ್ದು, ಅದಕ್ಕೆ ಪಿರ್ಯಾದಿಯು ‘ನನಗೆ ಯಾಕೆ ಹೊಡೆಯುತ್ತೀಯಾ?’ ಅಂತಾ ಹೇಳಿದಕ್ಕೆ ಮತ್ತೆ ಪಿರ್ಯಾದಿಗೆ ಕೈಯಿಂದ ಮುಖಕ್ಕೆ ಹೊಡೆದಿದ್ದಲ್ಲದೇ, ಆರೋಪಿ 2 ನೇಯವನು ಪಿರ್ಯಾದಿಗೆ ಕೈಯಿಂದ ಮುಖಕ್ಕೆ ಹೊಡೆದವನೇ, ಪಿರ್ಯಾದಿಯನ್ನು ಕೆಳಗೆ ನೆಲದ ಮೇಲೆ ಬೀಳಿಸಿ ಕಾಲಿನಿಂದ ಒದ್ದು, ಆರೋಪಿತರು ಹೋಗುವಾಗ ‘ನೀನು ಇವತ್ತು ಉಳಿದುಕೊಂಡೆ. ಬೋಸಡಿಕೆ, ನಿನ್ನನ್ನು ಕೊಂದೆ ಬಿಡುತ್ತೇನೆ’ ಅಂತಾ ಜೀವದ ಬೆದರಿಕೆ ಹಾಕಿರುತ್ತಾರೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಹಸನಸಾಬ್ ತಂದೆ ಅಕ್ಬರ್ ಲತೀಫನವರ್, ಪ್ರಾಯ-23 ವರ್ಷ, ವೃತ್ತಿ-ಕಾರ್ಪೆಂಟರ್ ಕೆಲಸ, ಸಾ|| ಸ್ವಾಮಿಲ್ ಚಾಳ, ಹಳೇ ದಾಂಡೇಲಿ, ತಾ: ದಾಂಡೇಲಿ ರವರು ದಿನಾಂಕ: 18-04-2022 ರಂದು 18-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
======||||||||======
ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ
ದಿನಾಂಕ:- 18-04-2022
at 00:00 hrs to 24:00 hrs
ಹಳಿಯಾಳ ಪೊಲೀಸ್ ಠಾಣೆ
ಯು.ಡಿ.ಆರ್ ಸಂಖ್ಯೆಃ 10/2022, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಗಣಪತಿ @ ನಿಲೇಶ ತಂದೆ ರಮಾಕಾಂತ ಮಹಾಜನ್, ಪ್ರಾಯ-47 ವರ್ಷ, ವೃತ್ತಿ-ಸಂಜಯ ದರ್ಪಣ ಮತ್ತು ಸಾಗರ ಸಾಮ್ರಾಟ್ ಪತ್ರಿಕಾ ವರದಿಗಾರರು, ಸಾ|| ಬಸವರಾಜ ಗಲ್ಲಿ, ತಾ: ಹಳಿಯಾಳ, ಹಾಲಿ ಸಾ|| ಬ್ರೆಜಿಲ್ ಕಾಸ್ಟೋ ಬಿಲ್ಡಿಂಗ್, ಬೆಳಗಾಂವ ರೋಡ್, ತಾ: ಹಳಿಯಾಳ. ಈತನು ದಿನಾಂಕ: 18-04-2022 ರಂದು ಸಂಜೆ 17-30 ಗಂಟೆಯಿಂದ 17-45 ಗಂಟೆಯ ನಡುವಿನ ಅವಯಧಿಯಲ್ಲಿ ತನ್ನ ಮಗನಿಗೆ ವಿನಾ ಕಾರಣ ಹೊಡೆದನಲ್ಲ ಅಂತಲೋ ಅಥವಾ ಇನ್ನಾವುದೋ ಕಾರಣದಿಂದ ಮನಸ್ಸಿಗೆ ಬೇಜಾರು ಮಾಡಿಕೊಂಡು ಜೀವನದಲ್ಲಿ ಜುಗುಪ್ಸೆಗೊಂಡು ತಾನು ವಾಸವಿದ್ದ ಬ್ರೆಜಿಲ್ ಕಾಸ್ಟೋ ಬಿಲ್ಡಿಂಗಿನ ಬಾಡಿಗೆ ಮನೆಯ ರೂಮಿನಲ್ಲಿ ಇರುವ ಫ್ಯಾನಿನ ಹುಕ್ಕಿಗೆ ವೇಲ್ ನಿಂದ ಕುತ್ತಿಗೆಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಇದರ ಹೊರತು ಮೃತನ ಮರಣದಲ್ಲಿ ಬೇರೆ ಯಾವುದೇ ಸಂಶಯ ಇರುವುದಿಲ್ಲ. ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಂಡು ಮೃತದೇಹ ಬಿಟ್ಟುಕೊಡಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀಮತಿ ದಿವ್ಯಾ ಕೋಂ. ಗಣಪತಿ @ ನಿಲೇಶ ಮಹಾಜನ್, ಪ್ರಾಯ-29 ವರ್ಷ, ವೃತ್ತಿ-ಪಿ.ಎಲ್.ಐ ಏಜೆಂಟ್, ಸಾ|| ಕಣ್ಣಿಗೇರಿ, ತಾ: ಯಲ್ಲಾಪುರ, ಹಾಲಿ ಸಾ|| ಬ್ರೆಜಿಲ್ ಕಾಸ್ಟೋ ಬಿಲ್ಡಿಂಗ್, ಬೆಳಗಾವಿ ರೋಡ್, ತಾ: ಹಳಿಯಾಳ ರವರು ದಿನಾಂಕ: 18-04-2022 ರಂದು 19-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
======||||||||======