ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 18-08-2021

at 00:00 hrs to 24:00 hrs

 

ಮುರ್ಡೇಶ್ವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 72/2021, ಕಲಂ: 279, 338 ಐಪಿಸಿ ಹಾಗೂ ಕಲಂ: 187 ಎಮ್.ವಿ ಎಕ್ಟ್  ನೇದ್ದರ ವಿವರ...... ನಮೂದಿತ ಆರೋಪಿತನು ಯಾವುದೋ ಅಪರಿಚಿತ ವಾಹನದ ಚಾಲಕನಾಗಿದ್ದು, ವಾಹನದ ನಂಬರ್ ಹಾಗೂ ಚಾಲಕನ ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ದಿನಾಂಕ: 17-08-2021 ರಂದು ಬೆಳಿಗ್ಗೆ ಪಿರ್ಯಾದಿಯ ಅಣ್ಣನಾದ ಮೊಹಮ್ಮದ್ ಉಸ್ಮಾನ್ ತಂದೆ ಬಾಬಾ ಸಾಹೇಬ್, ಪ್ರಾಯ-54 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಜಾಮೀಯಬಾದ್, ಜನತಾ ಕಾಲೋನಿ, ಹೆಬ್ಳೆ, ತಾ: ಭಟ್ಕಳ, ಈತನು ತನ್ನ ಹೋಂಡಾ ಎಕ್ಟಿವಾ ಮೋಟಾರ ಸೈಕಲ್ ನಂ: ಕೆ.ಎ-47/ಕ್ಯೂ-7078 ನೇದರ ಮೇಲಾಗಿ ಮುರ್ಡೇಶ್ವರಕ್ಕೆ ಹೋಗಿ ಕೆಲಸ ಮುಗಿಸಿ, ಮರಳಿ ರಾತ್ರಿ 10-00 ಗಂಟೆಗೆ ಮನೆಗೆ ಬರುವ ಸಲುವಾಗಿ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರಲ್ಲಿ ಮುರ್ಡೇಶ್ವರ ಕಡೆಯಿಂದ ಭಟ್ಕಳ ಕಡೆಗೆ ಬರುವಾಗ ಮಾವಿನಕಟ್ಟಾದ ಮಧುರಾ ಗ್ರಾನೈಟ್ಸ್ ಸಮೀಪ ಯಾವುದೋ ಒಂದು ಅಪರಿಚಿತ ವಾಹನದ ಆರೋಪಿ ಚಾಲಕನು ತನ್ನ ವಾಹನವನ್ನು ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದವನು, ಮೊಹಮ್ಮದ್ ಉಸ್ಮಾನ್ ಚಲಾಯಿಸುತ್ತಿದ್ದ ಮೋಟಾರ್ ಸೈಕಲಿಗೆ ಹಿಂದಿನಿಂದ ಢಿಕ್ಕಿ ಹೊಡೆದು ಅಪಘಾತ ಪಡಿಸಿ, ಮೊಹಮ್ಮದ್ ಉಸ್ಮಾನ್ ಈತನ ತಲೆಗೆ ಗಂಭೀರವಾಗಿ ಗಾಯನೋವು ಪಡಿಸಿ, ವಾಹನವನ್ನು ಸ್ಥಳದಲ್ಲಿ ನಿಲ್ಲಿಸದೇ ಹಾಗೂ ಅಪಘಾತದ ಮಾಹಿತಿ ನೀಡದೇ ಸ್ಥಳದಿಂದ ಪರಾರಿಯಾದ ಬಗ್ಗೆ ಪಿರ್ಯಾದಿ ಶ್ರೀ ಅಬ್ದುಲ್ ರವೂಫ್ ತಂದೆ ಬಾಬಾಸಾಹೇಬ್, ಪ್ರಾಯ-51 ವರ್ಷ, ವೃತ್ತಿ-ಚಾಲಕ, ಸಾ|| ಜಾಮೀಯಬಾದ್, ಜನತಾ ಕಾಲೋನಿ, ಪೋ: ಹೆಬ್ಳೆ, ತಾ: ಭಟ್ಕಳ ರವರು ದಿನಾಂಕ: 18-08-2021 ರಂದು 11-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮುರ್ಡೇಶ್ವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 73/2021, ಕಲಂ: 454, 457, 380 ಐಪಿಸಿ  ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ಅಪರಿಚಿತರಾಗಿದ್ದು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ದಿನಾಂಕ: 14-08-2021 ರಂದು ಬೆಳಿಗ್ಗೆ 10-00 ಗಂಟೆಯಿಂದ ದಿನಾಂಕ: 17-08-2021 ರಂದು ರಾತ್ರಿ 09-00 ಗಂಟೆಯ ನಡುವಿನ ಅವಧಿಯಲ್ಲಿ ಪಿರ್ಯಾದಿಯವರು ಮನೆಯಲ್ಲಿರದೇ ಇರುವಾಗ ಆರೋಪಿತ ಕಳ್ಳರು ಪಿರ್ಯಾದಿಯವರ ಮನೆಯ ಬಾಗಿಲನ್ನು ಮೀಟಿ ತೆರೆದು ಇಂಟರಲಾಕ್ ಕಳಚಿ ಮನೆಯ ಒಳ ಹೊಕ್ಕಿ ಬೆಡ್ ರೂಮಿನಲ್ಲಿದ್ದ ಅಲ್ಮೇರಾದ ಬಾಗಿಲನ್ನು ಮೀಟಿ ತೆರೆದು ಅದರಲ್ಲಿದ್ದ 1). VIVO 9 Pro ಮೊಬೈಲ್ ಅ||ಕಿ|| 6,000/- ರೂಪಾಯಿ, 2). ನಗದು ಹಣ 1,500/- ರೂಪಾಯಿ ನೇದವುಗಳನ್ನು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀ ನಾಗೇಶ ತಂದೆ ಗಣಪತಿ ಗದ್ದೆಮನೆ, ಪ್ರಾಯ-40 ವರ್ಷ, ವೃತ್ತಿ-ವಕೀಲ ವೃತ್ತಿ, ಸಾ|| ಬುಗ್ರಿಜಡ್ಡ, ಬೆಂಗ್ರೆ-1, ತಾ: ಭಟ್ಕಳ ರವರು ದಿನಾಂಕ: 18-08-2021 ರಂದು 19-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಶಹರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 95/2021, ಕಲಂ: 279, 337, 338 ಐಪಿಸಿ  ನೇದ್ದರ ವಿವರ...... ನಮೂದಿತ ಆರೋಪಿತ ಇಮ್ರಾನ್ @ ಗೌಸ್ ಖಾನ್ ತಂದೆ ಶಬ್ಬೀರ್ ಖಾನ್, ಪ್ರಾಯ-22 ವರ್ಷ, ವೃತ್ತಿ-ಗೌಂಡಿ ಕೆಲಸ, ಸಾ|| ಶೇಡಕುಳಿ ಹೊಂಡ, ತಾ: ಭಟ್ಕಳ (ಮೋಟಾರ್ ಸೈಕಲ್ ನಂ: ಕೆ.ಎ-47/ಡಬ್ಲ್ಯೂ-0886 ನೇದರ ಸವಾರ). ಈತನು ದಿನಾಂಕ: 17-08-2021 ರಂದು ರಾತ್ರಿ 23-45 ಗಂಟೆಯ ಸುಮಾರಿಗೆ ಭಟ್ಕಳ ಶಹರದ ಬಂದರ್ ರೋಡ್ ಡೋರಾಂಟಾ ಕ್ರಾಸ್ ಸಮೀಪ್ ತನ್ನ ಮೋಟಾರ್ ಸೈಕಲ್ ನಂ: ಕೆ.ಎ-47/ಡಬ್ಲ್ಯೂ-0886 ನೇದರ ಹಿಂಬದಿಯಲ್ಲಿ ಮಹ್ಮದ್ ಹುಸೇನ್ ಬುಡನಗೇರಿ ತಂದೆ ಹನೀಪ್ ಬುಡನಗೇರಿ, ಪ್ರಾಯ-21 ವರ್ಷ, ಸಾ|| ಆಜಾದ್ ನಗರ, ಶೇಡಕುಳಿ ಹೊಂಡ, ತಾ: ಭಟ್ಕಳ ಹಾಗೂ ಅಬ್ದುಲ್ ರೆಹಮಾನ್ ತಂದೆ ನಿಸಾರ್ ಅಹ್ಮದ್, ಸಾ|| ಆಜಾದ್ ನಗರ, ಶೇಡಕುಳಿ ಹೊಂಡ, ತಾ: ಭಟ್ಕಳ ಇವರನ್ನು ಕೂಡ್ರಿಸಿಕೊಂಡು ಭಟ್ಕಳ ಶಹರದ ಶಂಷುದ್ದೀನ್ ಸರ್ಕಲ್ ಕಡೆಯಿಂದ ಬಂದರ ಕಡೆಗೆ ಅತೀವೇಗವಾಗಿ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗುತ್ತಿದ್ದವನು, ರಸ್ತೆಯ ಬಲಕ್ಕೆ ಹೋಗಿ ಪಿರ್ಯಾದಿಯವರು ಭಟ್ಕಳದ ಬಂದರ್ ಕಡೆಯಿಂದ ಭಟ್ಕಳದ ಶಂಷುದ್ದೀನ್ ಸರ್ಕಲ್ ಕಡೆಗೆ ಚಲಾಯಿಸಿಕೊಂಡು ಬರುತ್ತಿದ್ದ ಕಾರ್ ನಂ: ಕೆ.ಎ-53/ಎನ್-2705 ನೇದಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಪಿರ್ಯಾದಿಯವರಿಗೆ ಎಡಗಣ್ಣಿನ ಹತ್ತಿರ ಸಾದಾ ಸ್ವರೂಪದ ಗಾಯ, ಆರೋಪಿತನ ಮೋಟಾರ್ ಸೈಕಲ್ ಹಿಂದೆ ಮಧ್ಯದಲ್ಲಿ ಕುಳಿತು ಪ್ರಯಾಣಿಸುತ್ತಿದ್ದ ಮಹ್ಮದ್ ಹುಸೇನ್ ಬುಡನಗೇರಿ ಇವರ ತಲೆಗೆ ಗಂಭೀರ ಸ್ವರೂಪದ ಗಾಯ ಹಾಗೂ ಮೋಟಾರ್ ಸೈಕಲ್ ಹಿಂದೆ ಕೊನೆಯಲ್ಲಿ ಕುಳಿತು ಪ್ರಯಾಣಿಸುತ್ತಿದ್ದ ಅಬ್ದುಲ್ ರೆಹಮಾನ್ ಇವರಿಗೆ ಸಣ್ಣಪುಟ್ಟ ಸಾದಾ ಸ್ವರೂಪದ ಗಾಯನೋವು ಪಡಿಸಿದ್ದಲ್ಲದೇ, ತನಗೂ ಸಹ ಬಲಗೈ ಮತ್ತು ಎಡಗಾಲಿಗೆ ಸಾದಾ ಸ್ವರೂಪದ ಗಾಯನೋವು ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ಶಿವಮೂರ್ತಿ ತಂದೆ ಮೋಹನ ಕೊಲ್ಲೆ, ಪ್ರಾಯ-32 ವರ್ಷ, ವೃತ್ತಿ-ಬ್ಯಾಂಕ್ ಆಪ್ ಬರೋಡಾದಲ್ಲಿ ದಿನಗೂಲಿ ನೌಕರ, ಸಾ|| ವಿ.ಟಿ ರೋಡ್, ಸೋನಾರ ಕೇರಿ, ತಾ: ಭಟ್ಕಳ ರವರು ದಿನಾಂಕ: 18-08-2021 ರಂದು 06-30 ಗಂಟೆಗೆ ಠಾಣೆಯಲ್ಲಿ ದೂರು ದಾಖಲಿಸಿದ್ದನ್ನು ದಾಖಲಿಸಿಕೊಂಡು ಪ್ರಕರಣ ಕೈಗೊಳ್ಳಲಾಗಿತ್ತು.

ಈ ಪ್ರಕರಣವು ತನಿಖೆಯಲ್ಲಿರುವಾಗ ಪ್ರಕರಣದ ಗಾಯಾಳು ಮಹ್ಮದ್ ಹುಸೇನ್ ಬುಡನಗೇರಿ ತಂದೆ ಹನೀಪ್ ಬುಡನಗೇರಿ, ಇವರಿಗೆ ಕಸ್ತೂರಬಾ ಆಸ್ಪತ್ರೆ ಮಣಿಪಾಲದಲ್ಲಿ ಉಪಚಾರಕ್ಕೆ ದಾಖಲು ಮಾಡಿದ್ದು, ಅಲ್ಲಿನ ವೈದ್ಯರು ಅವರಿಗೆ ತಲೆಗೆ ಭಾರೀ ಗಾಯವಾಗಿದ್ದು ಗುಣಮುಖನಾಗುವ ಸಾಧ್ಯತೆ ಕಡಿಮೆ ಇರುತ್ತದೆ ಅಂತಾ ತಿಳಿಸಿದ್ದು, ಅವರಿಗೆ ಅಲ್ಲಿಂದ ಡಿಸ್ಚಾರ್ಜ್ ಮಾಡಿಸಿ ಮಂಗಳೂರು ಕಡೆಗೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ದಿನಾಂಕ: 18-08-2021 ರಂದು 13-00 ಗಂಟೆಗೆ ಸಮಯಕ್ಕೆ ಉಡುಪಿಯ ಬಸ್ ನಿಲ್ದಾಣದ ಹತ್ತಿರ ಮಾರ್ಗಮಧ್ಯದಲ್ಲಿ ಮೃತಪಟ್ಟ ಬಗ್ಗೆ ಪಿರ್ಯಾದಿಯವರು ಮರು ಹೇಳಿಕೆಯಿಂದ ತಿಳಿದು ಬಂದಿರುತ್ತದೆ. ಕಾರಣ ಈ ಪ್ರಕರಣಕ್ಕೆ ಕಲಂ: 304(ಎ) ಐ.ಪಿ.ಸಿ ನೇದನ್ನು ಅಳವಡಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದು ಇರುತ್ತದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 18-08-2021

at 00:00 hrs to 24:00 hrs

 

ಕುಮಟಾ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 23/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ರೇಣುಕಾ ಪ್ರಸಾದ ತಂದೆ ಮಂಜುನಾಥ ಜಿ. ಸಿ, ಪ್ರಾಯ-23 ವರ್ಷ, ವೃತ್ತಿ-ವಿದ್ಯಾರ್ಥಿ, ಸಾ|| ನಂ: 1145, ಶಿವಕುಮಾರಸ್ವಾಮಿ ಬಡಾವಣೆ, 2 ನೇ ಸ್ಟೇಜ್, ದಾವಣಗೆರೆ. ಈತನು ತನ್ನ ಸ್ನೇಹಿತರ ಜೊತೆ ದಿನಾಂಕ: 16-08-2021 ರಂದು ಕುಮಟಾ ಹುಬ್ಬಣಗೇರಿಯ ಸಮುದ್ರದ ತೀರಕ್ಕೆ ಪ್ರವಾಸಕ್ಕೆ ಬಂದವನು, ಮಧ್ಯಾಹ್ನ 15-30 ಗಂಟೆಗೆ ಅರಬ್ಬೀ ಸಮುದ್ರದ ನೀರಿನಲ್ಲಿ ಸ್ನೇಹಿತರ ಜೊತೆ ಈಜಾಡುತ್ತಿರುವಾಗ ಆಕಸ್ಮಿಕವಾಗಿ ಜೋರಾಗಿ ಬಂದ ಸಮುದ್ರದ ಅಲೆಯ ಸೆಳೆತಕ್ಕೆ ಸಿಲುಕಿ ಸಮುದ್ರದ ನೀರಿನಲ್ಲಿ ಮುಳುಗಿ ಕಾಣೆಯಾಗಿದ್ದು, ಅವನಿಗೆ ಹುಡುಕುತ್ತಿದ್ದಾಗ ಅವನ ಶವವು ದಿನಾಂಕ: 18-08-2021 ರಂದು 13-30 ಗಂಟೆಗೆ ಕುಮಟಾ ಜ್ಯೇಷ್ಠಪುರದ ಅರಬ್ಬೀ ಸಮುದ್ರದಲ್ಲಿ ಸಿಕ್ಕ ಬಗ್ಗೆ ಪಿರ್ಯಾದಿ ಶ್ರೀ ಜಿ. ಸಿ. ಮಂಜುನಾಥ ತಂದೆ ಜಿ. ಜಗನ್ನಾಥ, ಪ್ರಾಯ-52 ವರ್ಷ, ವೃತ್ತಿ-ಬ್ಯಾಂಕ್ ನೌಕರ, ಸಾ|| ನಂ: 1145, ಶಿವಕುಮಾರಸ್ವಾಮಿ ಬಡಾವಣೆ, 2 ನೇ ಸ್ಟೇಜ್, ದಾವಣಗೆರೆ ರವರು ದಿನಾಂಕ: 18-08-2021 ರಂದು 14-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ರಾಮನಗರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 10/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಬಸವರಾಜ ತಂದೆ ಈರಪ್ಪ ಕೋಳದೂರ, ಪ್ರಾಯ-45 ವರ್ಷ, ವೃತ್ತಿ-ಕೆ.ಪಿ.ಸಿ ವಾಟರ್ ಪಂಪ್ ಅಪರೇಟರ್, ಸಾ|| ರೆಡ್ಡಿ ಕ್ಯಾಂಪ್, ಗಣೇಶಗುಡಿ, ತಾ: ಜೋಯಿಡಾ. ಈತನ ಹೆಂಡತಿಯು ವಿಚ್ಛೇದನ ಪಡೆದುಕೊಂಡಿದ್ದರಿಂದ ಒಬ್ಬರೇ ತಮ್ಮ ಮನೆಯಲ್ಲಿ ಉಳಿದುಕೊಂಡು ಗಣೇಶಗುಡಿಯ ಜಾಕವೇಲನಲ್ಲಿ ವಾಟರ್ ಪಂಪ್ ಅಪರೇಟರ್ ಅಂತಾ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡಿಕೊಂಡು ಇದ್ದವನು, ಸರಾಯಿ ಕುಡಿತದ ಚಟವನ್ನು ಹೊಂದಿದ್ದನು, ಈಗ ಒಂದು ತಿಂಗಳಿನಿಂದ ಸರಾಯಿ ಕುಡಿತವನ್ನು ಬಿಟ್ಟಿದ್ದು, ಕಳೆದ ಎರಡು ವರ್ಷಗಳ ಹಿಂದೆ ಒಮ್ಮೆ ಎದೆನೋವು ಅಂತಾ ಕಾಣಿಸಿಕೊಂಡಾಗ ದಾಂಡೇಲಿಯಲ್ಲಿ ಉಪಚಾರ ಪಡೆದುಕೊಂಡು ಆರಾಮ ಆಗಿ ಇದ್ದವನು, ದಿನಾಂಕ: 18-08-2021 ರಂದು ಬೆಳಿಗ್ಗೆ 06-00 ಗಂಟೆಗೆ ತನ್ನ ವಾಟರ್ ಪಂಪ್ ಅಪರೇಟರ್ ಕೆಲಸಕ್ಕೆ ಹೋಗಿ ಬೆಳಿಗ್ಗೆ 06-05 ಗಂಟೆಗೆ ವಾಟರ್ ಪಂಪ್ ಅನ್ನು ಚಾಲನೆ ಮಾಡಿಕೊಂಡು ಕೆಲಸದ ಮೇಲಿದ್ದವನು ಮೃತಪಟ್ಟಿದ್ದು, ಪಿರ್ಯಾದಿಯವರು ಆರಾಮ ಆಗಿ ಇದ್ದ ತನ್ನ ಮೈದುನ: ಬಸವರಾಜ ಕೊಳದೂರ ಈತನು ಹೃದಯಾಘಾತದಿಂದ ಅಥವಾ ಇನ್ಯಾವುದಾದರೂ ಕಾರಣದಿಂದ ಸತ್ತಿರಬಹುದು. ಇದರ ಹೊರತು ಅವರ ಸಾವಿನಲ್ಲಿ ಬೇರೆ ಯಾವುದೇ ಸಂಶಯ ಇರುವುದಿಲ್ಲ. ಈ ಕುರಿತು ಮುಂದಿನ ಕಾನೂನು ಕ್ರಮಕ್ಕಾಗಿ ಕೋರಿದ ಬಗ್ಗೆ ಪಿರ್ಯಾದಿ ಶ್ರೀಮತಿ ಶಾರದಾ ಕೋಂ. ನಿಂಗಪ್ಪ ಕೋಳದೂರ, ಪ್ರಾಯ-42 ವರ್ಷ, ವೃತ್ತಿ-ಗೃಹಿಣಿ, ಸಾ|| ರೆಡ್ಡಿ ಕ್ಯಾಂಪ್, ಗಣೇಶಗುಡಿ, ತಾ: ಜೋಯಿಡಾ ರವರು ದಿನಾಂಕ: 18-08-2021 ರಂದು 10-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

ಇತ್ತೀಚಿನ ನವೀಕರಣ​ : 19-08-2021 01:11 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080