ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 18-12-2021

at 00:00 hrs to 24:00 hrs

 

ಸಂಚಾರ ಪೊಲೀಸ್ ಠಾಣೆ ಕಾರವಾರ

ಅಪರಾಧ ಸಂಖ್ಯೆಃ 29/2021, ಕಲಂ: 279, 337, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ರೋಹಿತ ತಂದೆ ರಾಜೇಶ್ವರ ಜೋಶಿ, ಪ್ರಾಯ-21 ವರ್ಷ, ವೃತ್ತಿ-ವಿದ್ಯಾರ್ಥಿ, ಸಾ|| ಖುರ್ಸಾವಾಡ, ಬಾಡ, ಕಾರವಾರ (ರಾಯಲ್ ಎನ್‍ಫೀಲ್ಡ್ ಮೋಟಾರ್ ಸೈಕಲ್ ನಂ: ಕೆ.ಎ-30/ವಿ-2677 ನೇದರ ಸವಾರ). ದಿನಾಂಕ: 18-12-2021 ರಂದು ಬೆಳೆಗ್ಗೆ 08-30 ಗಂಟೆಯಿಂದ 08-40 ಗಂಟೆಯ ಅವಧಿಯಲ್ಲಿ ಪಿರ್ಯಾದಿಯ ಸಂಬಂಧಿಯಾದ ಶ್ರೀಮತಿ ಕುಂದಾ ಇವರು ಕಾರವಾರದ ಕೆಂಚಾ ರಸ್ತೆಯ ಮುಖಾಂತರ ಸಿವಿಲ್ ಆಸ್ಪತ್ರೆಯ ಕಡೆಗೆ ರಸ್ತೆಯ ತೀರಾ ಎಡಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಕಾರವಾರದ ಕೆಂಚಾ ರಸ್ತೆಯ ವಿಘ್ನೇಶ ಎಂಟರಪ್ರೈಸಸ್ ಅಂಗಡಿಯ ಹತ್ತಿರ ರಾಯಲ್ ಎನ್‍ಫೀಲ್ಡ್ ಮೋಟಾರ್ ಸೈಕಲ್ ನಂ: ಕೆ.ಎ-30/ವಿ-2677 ನೇದರ ಆರೋಪಿ ಸವಾರನು ತನ್ನ ಮೋಟಾರ್ ಸೈಕಲನ್ನು ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು, ತನ್ನ ಮೋಟಾರ್ ಸೈಕಲಿನ ಮುಂದಿನಿಂದ ರಸ್ತೆಯ ತೀರಾ ಎಡಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಿರ್ಯಾದಿಯ ಸಂಬಂಧಿಯವರ ಹಿಂದುಗಡೆಗೆ ತನ್ನ ಮೋಟಾರ್ ಸೈಕಲಿನ ಮುಂದಿನ ಭಾಗದಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಪಿರ್ಯಾದಿಯ ಸಂಬಂಧಿಯಾದ ಶ್ರೀಮತಿ ಕುಂದಾ ಕೋಂ. ರಮೇಶ ಹುಲಸ್ವಾರ, ಇವರು ರಸ್ತೆಯ ಮೇಲೆ ಬೀಳುವಂತೆ ಮಾಡಿ, ಅವರಿಗೆ ತಲೆಯ ಹಿಂದಿನ ಭಾಗದಲ್ಲಿ ಭಾರೀ ಗಾಯ ಮತ್ತು ಒಳನೋವು ಹಾಗೂ ಎಡಗಾಲಿನ ಪಾದದ ಹತ್ತಿರ ತೆರಚಿದ ಗಾಯ ಪಡಿಸಿದ್ದಲ್ಲದೇ, ಆರೋಪಿ ಮೋಟಾರ್ ಸೈಕಲ್ ಸವಾರನು ತನಗೂ ಸಹ ಬಲಗಾಲಿನ ಹಾಗೂ ಎಡಗಾಲಿನ ಮಂಡಿಯ ಮೇಲೆ ತೆರಚಿದ ಗಾಯ ಹಾಗೂ ಒಳನೋವು ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ಸರ್ವೇಶ ತಂದೆ ಗೇನು ಹುಲಸ್ವಾರ, ಪ್ರಾಯ-33 ವರ್ಷ, ವೃತ್ತಿ-ಖಾಸಗಿ ಕೆಲಸ, ಸಾ|| ಅಂಬೇಡ್ಕರ್ ಕಾಲೋನಿ, ನಂದನಗದ್ದಾ, ಕಾರವಾರ ರವರು ದಿನಾಂಕ: 18-12-2021 ರಂದು 10-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 350/2021, ಕಲಂ: ಗಂಡಸು ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಗಂಡಸು ಶ್ರೀ ಜುಲಫಿಕರ್ ತಂದೆ ಅಬ್ದುಲ್ ಮುನಾಫ್ ಸಾಬ್ ಬಾವಿಕಟ್ಟಿ, ಪ್ರಾಯ-30 ವರ್ಷ, ವೃತ್ತಿ-ಗಾರೆ ಕೆಲಸ, ಸಾ|| ದೇವಿಹೊಸ್ರರ, ಹಾವೇರಿ. ಈತನು  ದಿನಾಂಕ: 18-12-2021 ರಂದು ಬೆಳಿಗ್ಗೆ ಪಿರ್ಯಾದಿ ಹಾಗೂ ಮಹಮ್ಮದ್ ಜಾಫರ್, ಆಸೀಫ್ ಇವರೊಂದಿಗೆ ಸೇರಿ ಉಪ್ಪೋಣಿಯಲ್ಲಿ ಕಟ್ಟಡ ಕಾಮಗಾರಿ ಕೆಲಸಕ್ಕೆ ಹೋಗಿದ್ದವನು, ಮಧ್ಯಾಹ್ನ ಕೆಲಸ ಮುಗಿಸಿ ಊಟಕ್ಕೆ ಹೋಗುವ ಸಲುವಾಗಿ ಉಪ್ಪೋಣಿಯಿಂದ ಸಂಶಿಗೆ ಬರಲು ಶರಾವತಿ ನದಿ ದಾಟುವ ಸಲುವಾಗಿ ದೋಣಿ ಮೇಲೆ ಹೊರಟಿದ್ದು, 14-00 ಗಂಟೆಯ ಸಮಯಕ್ಕೆ ನಮೂದಿತ ಜುಲಫಿಕರ್ ಈತನು ಹಾಗೂ ಆಸಿಫ್ ಬುಕ್ಕಟಗಾರ ಇವರು ನದಿಯಲ್ಲಿ ಈಜುವ ಸಲುವಾಗಿ ದೋಣಿಯಿಂದ ನದಿಯಲ್ಲಿ ಹಾರಿದ್ದು, ಜುಲಫಿಕರ್ ಈತನು ನದಿಯಲ್ಲಿ ಹಾರಿದವನು, ಒಮ್ಮೆ ಮೇಲಕ್ಕೆ ಬಂದು ನಂತರ ಮುಳುಗಿದವನು, ಮತ್ತೆ ವಾಪಸ್ ಮೇಲೆ ಬರದೇ ನೀರಿನಲ್ಲಿ ಮುಳುಗಿದವನಿಗೆ ಸ್ಥಳಿಕ ಜನರ ಸಹಾಯದಿಂದ ಹುಡುಕಾಟ ನಡೆಸಿದ್ದಲ್ಲಿ ಹಾಗೂ ಅಗ್ನಿಶಾಮಕ ದಳ ಹಾಗೂ ಪೊಲೀಸರಿಂದ ಬೋಟಿನಲ್ಲಿ ನದಿಯಲ್ಲಿ ಹುಡುಕಾಟ ನಡೆಸಿದ್ದರಲ್ಲಿ ಜುಲಫಿಕರ್ ಈತನು ಎಲ್ಲೂ ಸಿಕ್ಕಿದ್ದು ಇರುವುದಿಲ್ಲ. ಜುಲಫಿಕರ್ ಈತನು ನದಿಯಲ್ಲಿ ಈಜಲು ಹೋದವನು, ನೀರಿನಲ್ಲಿ ಮುಳಗಿ ಕಾಣೆಯಾಗಿದ್ದು, ಸದ್ರಿ ಕಾಣೆಯಾದವನನ್ನು ಪತ್ತೆ ಮಾಡಿ ಕೊಡಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಮಹಮ್ಮದ್ ಸಲಿಂ ತಂದೆ ಮಿಯಾಜಾನ್ ದಾಸನಕೊಪ್ಪ, ಪ್ರಾಯ-34 ವರ್ಷ, ವೃತ್ತಿ-ಗಾರೆ ಕೆಲಸ, ಸಾ|| ಹರಗನಹಳ್ಳಿ, ಧರ್ಮಾ ಕಾಲೋನಿ, ತಾ: ಮುಂಡಗೋಡ ರವರು ದಿನಾಂಕ: 18-12-2021 ರಂದು 18-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 156/2021, ಕಲಂ: 15(ಎ), 32(3) ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತರು 1]. ದುರ್ಗಪ್ಪ ತಂದೆ ಕುಪ್ಪಯ್ಯ ನಾಯ್ಕ, ಪ್ರಾಯ-45 ವರ್ಷ, ವೃತ್ತಿ-ವ್ಯಾಪಾರ, ಸಾ|| ತಲಗೋಡ, ಅಜ್ಜಪ್ಪನಮನೆ, ತಾ: ಭಟ್ಕಳ, 2]. ಯಾರೋ ಅಪರಿಚಿತ ವ್ಯಕ್ತಿ, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಈ ನಮೂದಿತ ಆರೋಪಿತರಲ್ಲಿ ಆರೋಪಿ 1 ನೇಯವನು ಭಟ್ಕಳದ ಮಾವಿನಕುರ್ವೆ ಬಂದರ್ ದಲ್ಲಿರುವ ಶ್ರೀ ವೆಂಕಟೇಶ್ವರ ಹೋಟೆಲಿನಲ್ಲಿ ಪಾಸ್ ಯಾ ಪರ್ಮಿಟ್ ಇಲ್ಲದೇ ಅನಧೀಕೃತವಾಗಿ ಆರೋಪಿ 2 ನೇಯವನಿಗೆ ಹೋಟೆಲಿನಲ್ಲಿ ಸರಾಯಿ ಕುಡಿಯಲು ಅವಕಾಶ ನೀಡಿದ್ದು, ಆರೋಪಿ 2 ನೇಯವನು ‘HAYWARDS’ ಅಂತಾ ನಮೂದು ಇದ್ದ 90 ML ಅಳತೆಯ ಪ್ಯಾಕೆಟ್ ನಲ್ಲಿದ್ದ ಸರಾಯಿಯನ್ನು ಕುಡಿಯುತ್ತಾ ಕುಳಿತವನು, ದಾಳಿಯ ಸಮಯ ಓಡಿ ಹೋಗಿದ್ದು, ಆರೋಪಿ 1 ನೇಯವನು 1). HAYWARDS, 90 ML ಅಳತೆಯ ಕುಡಿದು ಖಾಲಿ ಮಾಡಿದ ಪ್ಯಾಕೆಟ್-1, ಅ||ಕಿ|| 00.00/- ರೂಪಾಯಿ, 2). HAYWARDS ಅಂತಾ ನಮೂದು ಇದ್ದ 90 ಒಐ ಅಳತೆಯ ಪ್ಯಾಕೆಟ್-1, ಅ||ಕಿ|| 35.13/- ರೂಪಾಯಿ, 3). ಸರಾಯಿ ಕುಡಿಯಲು ಬಳಸಿದ ಪ್ಲಾಸ್ಟಿಕ್ ಗ್ಲಾಸ್-1, ಅ||ಕಿ|| 00.00/- ರೂಪಾಯಿ, 4). 1/2 ಲೀಟರಿನ ನೀರಿನ ಪ್ಲಾಸ್ಟಿಕ್ ಬಾಟಲಿ-1, ಅ||ಕಿ|| 00.00/- ರೂಪಾಯಿಯ ಸ್ವತ್ತುಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಮಹಾಬಲೇಶ್ವರ ಎಸ್. ಎನ್, ಪೊಲೀಸ್ ವೃತ್ತ ನಿರೀಕ್ಷಕರು, ಭಟ್ಕಳ ಗ್ರಾಮೀಣ ವೃತ್ತ, ಭಟ್ಕಳ ರವರು ದಿನಾಂಕ: 18-12-2021 ರಂದು 17-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಶಿರಸಿ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 124/2021, ಕಲಂ: 279, 337, 338 ಐಪಿಸಿ ಮತ್ತು ಕಲಂ: 134, 187 ಎಮ್.ವಿ ಎಕ್ಟ್ ನೇದ್ದರ ವಿವರ...... ನಮೂದಿತ ಆರೋಪಿತ ದೀಪಕ ತಂದೆ ಸುರೇಶ ಬಿಸೆ, ಪ್ರಾಯ-25 ವರ್ಷ, ಸಾ|| ಹೌಸ್ ನಂ: 1032, ನಾರಾಯಣ ಗಲ್ಲಿ, ಕಂಗ್ರಾಳಿ, ಬೆಳಗಾವಿ (ಕಾರ್ ನಂ: ಕೆ.ಎ-19/ಎಮ್.ಸಿ 4966 ನೇದರ ಚಾಲಕ). ಈತನು ದಿನಾಂಕ: 18-12-2021 ರಂದು 21-30 ಗಂಟೆಗೆ ತನ್ನ ಕಾರ್ ನಂ: ಕೆ.ಎ-19/ಎಮ್.ಸಿ 4966 ನೇದನ್ನು ಸಿದ್ದಾಪುರ ಕಡೆಯಿಂದ ಶಿರಸಿ ಕಡೆಗೆ ಅತೀವೇಗವಾಗಿ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಶಿರಸಿ-ಸಿದ್ದಾಪುರ ರಸ್ತೆಯ ಅಜ್ಜಿಬಾಳ ಸಮೀಪದಲ್ಲಿ ಕಾರಿನ ವೇಗವನ್ನು ನಿಯಂತ್ರಿಸಲಾಗದೇ ರಸ್ತೆಯ ತೀರಾ ಬಲಕ್ಕೆ ಚಲಾಯಿಸಿ, ಶಿರಸಿ ಕಡೆಯಿಂದ ಸಿದ್ದಾಪುರ ಕಡೆಗೆ ಹೊರಟಿದ್ದ ಮೋಟಾರ್ ಸೈಕಲ್ ನಂ: ಕೆ.ಎ-47/ಕೆ-9039 ನೇದಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಮೋಟಾರ್ ಸೈಕಲ್ ಸವಾರನಾದ ಗಣಪತಿ ತಂದೆ ಲಕ್ಷ್ಮಣ ನಾಯ್ಕ, ಪ್ರಾಯ-36 ವರ್ಷ, ವೃತ್ತಿ-ಮೆಕ್ಯಾನಿಕ್, ಸಾ|| ಗವಿನಗುಡ್ಡ, ಬೀಸನಗದ್ದೆ, ಪೋ: ನಾನಿಕಟ್ಟಾ, ತಾ: ಸಿದ್ದಾಪುರ ಈತನ ಬಲಗಾಲಿಗೆ ಗಂಭೀೀರ ಸ್ವರೂಪದ ಗಾಯನೋವು ಪಡಿಸಿದ್ದಲ್ಲದೇ, ಆರೋಪಿ ಚಾಲಕನು ಸ್ಥಳದಲ್ಲಿ ತನ್ನ ಕಾರನ್ನು ನಿಲ್ಲಿಸಿ ತನ್ನ ಕರ್ತವ್ಯ ನಿರ್ವಹಿಸಿದೇ ಕಾರನ್ನು ಚಲಾಯಿಸಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀ ಮಂಜುನಾಥ ತಂದೆ ಆನಂದ ಆಚಾರಿ, ಪ್ರಾಯ-28 ವರ್ಷ, ವೃತ್ತಿ-ಮೆಕ್ಯಾನಿಕ್, ಸಾ|| ಗವಿನಗುಡ್ಡ, ಬೀಸನಗದ್ದೆ, ಪೋ: ನಾನಿಕಟ್ಟಾ, ತಾ: ಸಿದ್ದಾಪುರ ರವರು ದಿನಾಂಕ: 18-12-2021 ರಂದು 23-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ದಾಂಡೇಲಿ ನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 107/2021, ಕಲಂ: 420 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಸೋಮಶೇಖರ ಬೋರಕರ, ಪ್ರಾಯ-48 ವರ್ಷ, ವೃತ್ತಿ-ಆಶಾಕಿರಣ ಐಟಿಐ ಕಾಲೇಜ್ ದಾಂಡೇಲಿಯಲ್ಲಿ ಶಿಕ್ಷಕ, ಸಾ|| ಅಂಬೇವಾಡಿ, ತಾ: ದಾಂಡೇಲಿ, 2]. ಪ್ರದೀಪ ಮಾಡದೋಳಕರ, ಪ್ರಾಯ-50 ವóರ್ಷ, ವೃತ್ತಿ-ಒಕ್ಕಲುತನ, ಸಾ|| ಹಳೆ ದಾಂಡೇಲಿ, ತಾ: ದಾಂಡೇಲಿ, 3]. ರವಿಕುಮಾರ ಅಸೋಟಿ, ಪ್ರಾಯ-45 ವರ್ಷ, ವೃತ್ತಿ-ವ್ಯಾಪಾರ, ಸಾ|| ಶ್ರೀನಿವಾಸ ವೃದ್ಧಿ ಗಾರ್ಡನ್, 9 ನೇ ಕ್ರಾಸ್, ನಾರಾಯಣಪುರ, ಧಾರವಾಡ. ಈ ನಮೂದಿತ ಆರೋಪಿತರಲ್ಲಿ ಆರೋಪಿ 1 ನೇಯವನು ಪಿರ್ಯಾದಿಯ ಸಹೋದರನ ಮಗನಿಗೆ ‘ನಾನು ನಿಮ್ಮ ಕುಟುಂಬದಲ್ಲಿ ಯಾರಿಗಾದರೂ ಸರ್ಕಾರಿ ನೌಕರಿ ಬೇಕಾದರೆ ಕೊಡಿಸುತ್ತೇನೆ. ನನಗೆ ಸರ್ಕಾರಿ ಅಧಿಕಾರಿಗಳ ಪರಿಚಯ ಇದೆ’ ಅಂತಾ ಹೇಳಿ ನಂಬಿಸಿದ್ದು, ಅದರಂತೆ ಪಿರ್ಯಾದುದಾರರು ತನ್ನ ಮಗನಿಗೆ ನೌಕರಿ ಕೊಡಿಸುವ ಸಲುವಾಗಿ ಆರೋಪಿ 1 ನೇಯವನೊಂದಿಗೆ ಮಾತನಾಡಿದಾಗ ಆರೋಪಿ 1 ನೇಯವನು ಆರೋಪಿ 3 ನೇಯವನಿಗೆ ಭೇಟಿ ಮಾಡಿಸಿದ್ದು, ‘ಹಣ ಕೊಟ್ಟರೆ ನೌಕರಿ ಕೊಡಿಸುತ್ತೇನೆ ಹಾಗೂ ಒಂದು ವೇಳೆ ನೌಕರಿ ಸಿಗದಿದ್ದರೆ ಹಣ ವಾಪಸ್ ಕೊಡುತ್ತೇನೆ’ ಎನ್ನುವುದಾಗಿ ಆರೋಪಿ 1 ಮತ್ತು 2 ನೇಯವರು ಭರವಸೆ ಕೊಟ್ಟಿದ್ದು, ನಂತರ ಆರೋಪಿ 1 ನೇಯವನು ಪಿರ್ಯಾದುದಾರರನ್ನು ತನ್ನ ಮನೆಗೆ ಕರೆಸಿ ನಗದು ಹಣ 25,000/- ರೂಪಾಯಿ ಪಡೆದುಕೊಂಡಿದ್ದು, ನಂತರ ಹಂತ ಹಂತವಾಗಿ ಪಿರ್ಯಾದುದಾರರು ಆರೋಪಿ 1 ನೇಯವನ ಖಾತೆಗೆ ಪಿರ್ಯಾದಿಯ ತಂದೆಯ ಖಾತೆಯಿಂದ 40,000/- ರೂಪಾಯಿ, ಪಿರ್ಯಾದಿಯ ಸಂಬಂಧಿಕ ಹರ್ಷಲ್ ಪಾಟೀಲ್ ರವರ ಖಾತೆಯಿಂದ 1,10,000/- ರೂಪಾಯಿ ಹಾಗೂ ಪಿರ್ಯಾದಿಯ ತಮ್ಮ ಉಮೇಶರವರ ಖಾತೆಯಿಂದ 50,000/- ರೂಪಾಯಿ. ಹೀಗೆ ಒಟ್ಟೂ 2,25,000/- ರೂಪಾಯಿಗಳನ್ನು ಜಮಾ ಮಾಡಿಸಿದ್ದು, ಆರೋಪಿ 1 ನೇಯವನು ಹಣವನ್ನು ಪಡೆದುಕೊಂಡು ಪಿರ್ಯಾದುದಾರರ ಮಗನಿಗೆ ನೌಕರಿ ಕೊಡಿಸದೇ ಹಾಗೂ ಪಡೆದುಕೊಂಡ ಹಣವನ್ನು ಮರಳಿ ನೀಡದೇ ಮೋಸ ಮಾಡಿದ ಬಗ್ಗೆ ಪಿರ್ಯಾದಿ ಶ್ರೀ ಜಯಸಿಂಗ ತಂದೆ ವಿಷ್ಣು ದೇಸಾಯಿ, ಪ್ರಾಯ-52 ವರ್ಷ, ವೃತ್ತಿ-ಒಕ್ಕಲುತನ, ಸಾ|| ಸಿಂಗರಗಾಂವ್, ತಾ: ಜೋಯಿಡಾ ರವರು ದಿನಾಂಕ: 18-12-2021 ರಂದು 18-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹಳಿಯಾಳ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 194/2021, ಕಲಂ: 279, 337, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಸೈಯದ್ ಅಬ್ದುಲ್ ಖಾದರ್ ತಂದೆ ಸೈಯದ್ ಕರೀಮ್, ಪ್ರಾಯ-48 ವರ್ಷ ವೃತ್ತಿ-ಚಾಲಕ, ಸಾ|| ವಲಿಷಾ ಗಲ್ಲಿ, ತಾ: ಯಲ್ಲಾಪುರ (ಲಾರಿ ನಂ: ಕೆ.ಎ-19/ಎ-1683 ನೇದರ ಚಾಲಕ). ಈತನು ದಿನಾಂಕ: 17-12-2021 ರಂದು ಬೆಳಿಗ್ಗೆ 12-30 ಗಂಟೆಗೆ ತನ್ನ ಬಾಬ್ತು ಲಾರಿ ನಂ: ಕೆ.ಎ-19/ಎ-1683 ನೇದನ್ನು ಹಳಿಯಾಳ ಬದಿಯಿಂದ ಯಲ್ಲಾಪುರ ಬದಿಗೆ ಅತೀವೇಗವಾಗಿ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗುತ್ತಾ ಲಾರಿಯ ಮೇಲಿನ ನಿಯಂತ್ರಣ ಕಳೆದುಕೊಂಡು ಡಾಂಬರ್ ರಸ್ತೆಯ ತೀರಾ ಬಲಬದಿಗೆ ಬಂದು ಹಳಿಯಾಳ ತಾಲೂಕಿನ ಭಾಗವತಿ ಗ್ರಾಮದ ತಟ್ಟಿಹಳ್ಳದ ಕ್ರಾಸ್ ಹತ್ತಿರ ಎದುರಿನಿಂದ ಅಂದರೆ ಯಲ್ಲಾಪುರ ಬದಿಯಿಂದ ಭಾಗವತಿ ಬದಿಗೆ ರಸ್ತೆಯ ಎಡ ಸೈಡಿನಿಂದ ಬರುತ್ತಿದ್ದ ಮೋಟಾರ್ ಸೈಕಲ್ ನಂ: ಕೆ.ಎ-31/ವಾಯ್-3820 ನೇದಕ್ಕೆ ಮುಂದಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿದ ಪರಿಣಾಮ, ಮೋಟಾರ್ ಸೈಕಲ್ ಚಾಲಕ ಮಿನಿನ್ ಫರ್ನಾಂಡೀಸ್ ಇವರಿಗೆ ಕೈಗೆ ಸಣ್ಣಪುಟ್ಟ ತೆರಚಿದ ಗಾಯ ಪಡಿಸಿ, ಮೋಟಾರ್ ಸೈಕಲ್ ಹಿಂಬದಿ ಸವಾರನಾದ ಸ್ಟಿವನ್ ಫರ್ನಾಂಡೀಸ್ ಇವರಿಗೆ ಬಲಗಾಲಿನ ತೊಡೆಗೆ ಮತ್ತು ಬಲಗಾಲಿನ ಮೊಣಕಾಲಿಗೆ ಭಾರೀ ಒಳನೋವು, ಮತ್ತು ತಲೆಯ ಎಡಬದಿಗೆ, ಹಣೆಗೆ ರಕ್ತಗಾಯ ಪಡಿಸಿದ್ದಲ್ಲದೇ, ಮೋಟಾರ್ ಸೈಕಲನ್ನು ಜಖಂಗೊಳಿಸಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಡ್ಯಾನಿಯಲ್ ತಂದೆ ಅಂತೋನ್ ಫರ್ನಾಂಡೀಸ್, ಪ್ರಾಯ-52 ವರ್ಷ, ವೃತ್ತಿ-ಚಾಲಕ, ಸಾ|| ಜೋಡಗಾಳಿ ಗ್ರಾಮ, ಪೋ: ಕಣ್ಣಿಗೇರಿ, ತಾ: ಯಲ್ಲಾಪುರ ರವರು ದಿನಾಂಕ: 18-12-2021 ರಂದು 21-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 18-12-2021

at 00:00 hrs to 24:00 hrs

 

ದಾಂಡೇಲಿ ನಗರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 14/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಶೆಡ್ರಕ ತಂದೆ ಚೆನ್ನಯ್ಯ ನೂತಲಪಾಟಿ, ಪ್ರಾಯ-40 ವರ್ಷ, ವೃತ್ತಿ-ಪೇಂಟಿಂಗ್ ಕೆಲಸ, ಸಾ|| ಕೋಗಿಲಬನ, ತಾ: ದಾಂಡೇಲಿ. ಪಿರ್ಯಾದಿಯ ತಮ್ಮನಾದ ಈತನು ದಿನಾಂಕ: 18-12-2021 ರಂದು ಬೆಳಿಗ್ಗೆ ದಾಂಡೇಲಿ-ಹಳಿಯಾಳ ರಸ್ತೆಯ 3 ನಂಬರ್ ಗೇಟ್ ಹತ್ತಿರದ ಸಾಯಿಬಾಬಾ ಟ್ರಾನ್ಸಪೋರ್ಟ್ ರÀವರ ಮನೆಯ ಕಟ್ಟಡದ ಪೇಂಟಿಂಗ್ ಕೆಲಸಕ್ಕೆ ಅಂತಾ ಹೋಗಿದ್ದವನು, ಬೆಳಿಗ್ಗೆ 10-00 ಗಂಟೆಯ ಸುಮಾರಿಗೆ ಕಂಪೌಂಡ್ ಮೇಲೆ ನಿಂತುಕೊಂಡಿದ್ದವನು, ಅಲ್ಲಿಂದಲೇ ಆಕಸ್ಮಿಕವಾಗಿ ಆಯ ತಪ್ಪಿ ಕೆಳಗೆ ನೆಲದ ಮೇಲೆ ಬಿದ್ದು, ತಲೆಗೆ ಪೆಟ್ಟಾಗಿ ಅಸ್ವಸ್ಥನಾಗಿದ್ದವನು, ದಾಂಡೇಲಿ ಸರಕಾರಿ ಆಸ್ಪತ್ರೆಗೆ ದಾಖಲಿಸಿ, ನಂತರ ಹೆಚ್ಚಿನ ಚಿಕಿತ್ಸೆಗೆ ಧಾರವಾಡದ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸುವಷ್ಟರಲ್ಲಿ ಮೃತಪಟ್ಟಿದ್ದು, ಇದರ ಹೊರತು ಆತನ ಮರಣದಲ್ಲಿ ಬೇರೇ ಯಾವುದೇ ಸಂಶಯವಿರುವುದಿಲ್ಲ. ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಸಲ್ಮಾನ್ ತಂದೆ ಚೆನ್ನಯ್ಯ ನೂತಲಪಾಟಿ, ಪ್ರಾಯ-42 ವರ್ಷ, ವೃತ್ತಿ-ಪೇಪರ್ ಮಿಲ್ ನಲ್ಲಿ ಕೆಲಸ, ಸಾ|| ಶಾಫಿಂಗ್ ಸೆಂಟರ್ ಹತ್ತಿರ, ಬಂಗೂರನಗರ, ತಾ: ದಾಂಡೇಲಿ ರವರು ದಿನಾಂಕ: 18-12-2021 ರಂದು 19-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

 

 

ಇತ್ತೀಚಿನ ನವೀಕರಣ​ : 25-12-2021 09:28 AM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080