ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 18-02-2021

at 00:00 hrs to 24:00 hrs

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 43/2021, ಕಲಂ: 341, 323, 504, 506 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಗಣೇಶ ತಿಮ್ಮಪ್ಪ ಗೌಡ, ಪ್ರಾಯ-ಅಂದಾಜು 32 ವರ್ಷ, ಸಾ|| ಯೆರಗೋಡ, ಜಲವಳ್ಳಿ, ತಾ: ಹೊನ್ನಾವರ, 2]. ಮಾರುತಿ ಗೌಡ, ಪ್ರಾಯ-ಅಂದಾಜು 30 ವರ್ಷ, ಸಾ|| ಮಾವಿನಕುರ್ವಾ, ತಾ: ಹೊನ್ನಾವರ, 3]. ಮೋಹನ ಗೌಡ, ಪ್ರಾಯ-ಅಂದಾಜು 30 ವರ್ಷ, ಸಾ|| ಮಾವಿನಕುರ್ವಾ, ತಾ: ಹೊನ್ನಾವರ. ಈ ನಮೂದಿತ ಆರೋಪಿತರು ಹಾಗೂ ಪಿರ್ಯಾದಿಯು ಪರಿಚಯಸ್ಥರಿದ್ದು, ಪಿರ್ಯಾದಿಯು ಆರೋಪಿ 1 ನೇಯವನೊಂದಿಗೆ ತಮಾಷೆ ಮಾಡುತ್ತಿದ್ದ ವಿಷಯವನ್ನೇ ಗಂಭೀರವಾಗಿ ತೆಗೆದುಕೊಂಡು, ಆರೋಪಿ 1 ನೇಯವನ ಗೆಳೆಯರಾದ ಆರೋಪಿ 2 ಮತ್ತು 3 ನೇಯವರೊಂದಿಗೆ ಸೇರಿಕೊಂಡು ದಿನಾಂಕ: 18-02-2021 ರಂದು ರಾತ್ರಿ 07-30 ಗಂಟೆಯ ಸುಮಾರಿಗೆ ಪಿರ್ಯಾದಿಯು ಕೆಲಸ ಮುಗಿಸಿಕೊಂಡು ತನ್ನ ಮೋಟಾರ್ ಸೈಕಲ್ ಮೇಲೆ ಮನೆಗೆ ಹೋಗುತ್ತಿದ್ದಾಗ, ಮೋಟಾರ್ ಸೈಕಲನ್ನು ಅಡ್ಡಗಟ್ಟಿ ತಡೆದು ನಿಲ್ಲಿಸಿದ್ದು, ಪಿರ್ಯಾದಿಯು ಮೋಟಾರ್ ಸೈಕಲಿನಿಂದ ಇಳಿದು ‘ಯಾಕೆ ನನಗೆ ಅಡ್ಡಗಟ್ಟಿದ್ದಿರಿ?’ ಅಂತಾ ಕೇಳಿದ್ದಕ್ಕೆ, ಆರೋಪಿ 1 ನೇಯವನು ಪಿರ್ಯಾದಿಯನ್ನು ಉದ್ದೇಶಿಸಿ ‘ನನಗೆ ಗೇಲಿ ಮಾಡುತ್ತೀಯಾ ನೀನು? ನಿನ್ನನ್ನು ಸುಮ್ಮನೆ ಬಿಡುವುದಿಲ್ಲ, ಬೋಳಿ ಮಗನೆ’ ಅಂತಾ ಅವಾಚ್ಯ ಶಬ್ದದಿಂದ ಬೈಯ್ದಿದ್ದು, ಮೂವರೂ ಆರೋಪಿತರು ಸೇರಿ ಪಿರ್ಯಾದಿಗೆ ಕೈಯಿಂದ ಹೊಡೆದು, ಪಿರ್ಯಾದಿಯ ಶರ್ಟ್ ಹರಿದು ಹಾಕಿ, ರಸ್ತೆಯ ಮೇಲೆ ದೂಡಿ ಹಾಕಿ, ಕಾಲಿನಿಂದ ಒದ್ದು, ಪಿರ್ಯಾದಿಯ ತಲೆಯ ಹಿಂಬದಿಗೆ ಮತ್ತು ಮೈಮೇಲೆ ಅಲ್ಲಲ್ಲಿ ತೆರಚಿದ ರಕ್ತದ ಗಾಯನೋವು ಪಡಿಸಿ, ‘ಕೊಲೆ ಮಾಡುತ್ತೇವೆ’ ಅಂತಾ ಹೇಳಿ ಜೀವ ಬೆದರಿಕೆ ಹಾಕಿದ ಬಗ್ಗೆ ಪಿರ್ಯಾದಿ ಶ್ರೀ ಗಣಪತಿ ತಂದೆ ಮಾದೇವ ನಾಯ್ಕ, ಪ್ರಾಯ-35 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಹಸಿಮನೆ, ಖರ್ವಾ, ತಾ: ಹೊನ್ನಾವರ ರವರು ದಿನಾಂಕ: 18-02-2021 ರಂದು 20-50 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮುರ್ಡೇಶ್ವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 18/2021, ಕಲಂ: 295, 427 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಮಾರುತಿ ತಂದೆ ಸೇನಾ ಬಾಕಡ, ಸಾ|| ಬಾಕಡಕೇರಿ, ಮುರ್ಡೇಶ್ವರ, ತಾ: ಭಟ್ಕಳ. ಪಿರ್ಯಾದಿಯವರು ದಿನಾಂಕ: 18-02-2021 ರಂದು ಠಾಣಾ ಸರಹದ್ದಿನಲ್ಲಿ ಬೀಟ್ ಗಸ್ತು ಸಂಚರಣೆಯಲ್ಲಿದ್ದಾಗ ಬಸ್ತಿ ಕಾಯ್ಕಿಣಿಯಲ್ಲಿರುವ ಶ್ರೀ ಪಾರ್ಶ್ವನಾಥ ಸ್ವಾಮಿ ದಿಗಂಬರ ಜೈನ್ ಬಸೀದಿಯ ಹಿಂದುಗಡೆ ಇರುವ ನಾಗರಕಟ್ಟೆಯ ನಾಗರ ಕಲ್ಲುಗಳನ್ನು ಯಾರೋ ಕಿಡಿಗೇಡಿಗಳು ಕಿತ್ತಿರುವಂತೆ ಕಂಡುಬಂದಿರುವ ವಿಷಯದ ಮಾಹಿತಿ ಸಿಕ್ಕಂತೆ ಸ್ಥಳಕ್ಕೆ ಹೋಗಿ ನೋಡಿದಾಗ ಶ್ರೀ ಪಾರ್ಶ್ವನಾಥ ಸ್ವಾಮಿ ಜೈನ್ ಬಸೀದಿಯ ಹಿಂಭಾಗದಲ್ಲಿದ್ದ 3 ನಾಗರ ಕಲ್ಲುಗಳನ್ನು ಹಾಗೂ 1 ನಾಗಯಕ್ಷೆ ಕಲ್ಲುಗಳನ್ನು ಕಿತ್ತಿರುವುದು ಕಂಡು ಬಂತು ಹಾಗೂ ಸ್ಥಳದಲ್ಲಿ ಚಪ್ಪಲಿಗಳು ಸಿಕ್ಕಿದ್ದು, ಮತ್ತು ಚೀರೆ ಕಲ್ಲುಗಳನ್ನು ನೆಲೆದ ಮೇಲೆ ಎಸೆದು ನೀರಿನ ಪೈಪ್ ಗಳನ್ನು ಹೊಡೆದು ಲುಕ್ಸಾನ್ ಪಡಿಸಿದ ಬಗ್ಗೆ ಸ್ಥಳಿಯ ಗುಪ್ತ ಮಾಹಿತಿದಾರರಿಂದ ಮಾಹಿತಿ ಸಂಗ್ರಹಿಸಿದಂತೆ ಸ್ಥಳದಲ್ಲಿ ಸಿಕ್ಕಿರುವ ಚಪ್ಪಲಿಗಳನ್ನು ಬಾಕಡಕೇರಿಯ ನಿವಾಸಿಯಾದ ನಮೂದಿತ ಆರೋಪಿಯದೇ ಅಂತಾ ಗುರುತು ಹಿಡಿದು, ನಂತರ ಆತನ ವಾಸದ ಮನೆಗೆ ಹೋಗಿ ಮನೆಯ ಜನರು ಸಹ ಆರೋಪಿಯದೇ ಚಪ್ಪಲಿಗಳು ಅಂತಾ ಗುರುತಿಸಿದ್ದು, ಕಾರಣ ನಮೂದಿತ ಆರೋಪಿತನು ದಿನಾಂಕ: 18-02-2021 ರಂದು ರಾತ್ರಿ 01-30 ಗಂಟೆಯಿಂದ ಬೆಳಗಿನ ಜಾವ 06-00 ಗಂಟೆಯ ನಡುವಿನ ಅವಧಿಯಲ್ಲಿ ಬಸ್ತಿಯಲ್ಲಿರುವ ಶ್ರೀ ಪಾರ್ಶ್ವನಾಥ ಸ್ವಾಮಿ ದಿಗಂಬರ ಜೈನ್ ಬಸೀದಿಯ ಹಿಂಭಾಗದಲ್ಲಿದ್ದ 3 ನಾಗರ ಕಲ್ಲುಗಳನ್ನು ಹಾಗೂ 1 ನಾಗಯಕ್ಷೆ ಕಲ್ಲಿನ ಮೂರ್ತಿಗಳನ್ನು ಕಿತ್ತು ಅಡ್ಡ ಕೆಡವಿ ಹಾಕಿದ್ದಲ್ಲದೇ, ದೇವಸ್ಥಾನಕ್ಕೆ ನೀರು ಬಿಡುವ ಪೈಪ್ ಗಳನ್ನು ಒಡೆದು ಲುಕ್ಸಾನ್ ಪಡಿಸಿ, ಧಾರ್ಮಿಕ ಭಾವನೆಗೆ ಅಪಮಾನ ಮಾಡುವ ಉದ್ದೇಶದಿಂದ ಪೂಜಾ ಸ್ಥಾನಕ್ಕೆ ಕ್ಷತಿಯನ್ನುಂಟು ಮಾಡಿ ಅಪವಿತ್ರಗೊಳಿಸಿದ್ದು ಇರುತ್ತದೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಲಕ್ಷ್ಮಣ ತಂದೆ ಮುತ್ತಪ್ಪ ಪೂಜಾರಿ, ಪೊಲೀಸ್ ಕಾನ್ಸಟೇಬಲ್ (ಸಿಪಿಸಿ-1033), ಮುರ್ಡೇಶ್ವರ ಪೊಲೀಸ್ ಠಾಣೆ ರವರು ದಿನಾಂಕ: 18-02-2021 ರಂದು 20-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಶಹರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 26/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ಜಗದೀಶ ತಂದೆ ಕುಪ್ಪಾ ನಾಯ್ಕ, ಪ್ರಾಯ-29 ವರ್ಷ, ವೃತ್ತಿ-ಆಟೋ ಚಾಲಕ, ಸಾ|| ಪಾಯಿನ ಮನೆ, ಜಾಲಿಕೊಡಿ, ತಾ: ಭಟ್ಕಳ. ನಮೂದಿತ ಆರೋಪಿತನು ದಿನಾಂಕ: 18-02-2021 ರಂದು 10-30 ಗಂಟೆಯ ಸುಮಾರಿಗೆ ಭಟ್ಕಳದ ದೇವಿನಗರ ಕ್ರಾಸ್ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ನಿಂತು ತನ್ನ ಲಾಭಕ್ಕೋಸ್ಕರ ಓ.ಸಿ ಮಟಕಾ ಜೂಗಾರಾಟದ ಅಂಕೆ-ಸಂಖ್ಯೆಗಳ ಮೇಲೆ ಸಾರ್ವಜನಿಕರಿಂದ ಹಣವನ್ನು ಪಡೆದು ಪಂಥವನ್ನಾಗಿ ಕಟ್ಟಿ ಓ.ಸಿ ಮಟಕಾ ಜೂಗಾರಾಟ ಆಡಿಸುತ್ತಿರುವಾಗ ನಗದು ಹಣ 3,070/- ರೂಪಾಯಿ ಮತ್ತು ಓ.ಸಿ ಮಟಕಾ ಜೂಗಾರಾಟದ ಸಲಕರಣೆಗಳ ಸಮೇತ ದಾಳಿಯ ಕಾಲಕ್ಕೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಭರತಕುಮಾರ ವಿ, ಪಿ.ಎಸ್.ಐ, ಭಟ್ಕಳ ಶಹರ ಪೊಲೀಸ್ ಠಾಣೆ ರವರು ದಿನಾಂಕ: 18-02-2021 ರಂದು 12-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹಳಿಯಾಳ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 46/2021, ಕಲಂ: 427, 323, 324, 341, 504, 506 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಈರಣ್ಣಾ ತಂದೆ ಮಂಜುನಾಥ ಕೊಳದಾರ, ಸಾ|| ಶಿವಪುರ, ತಾ: ಹಳಿಯಾಳ, 2]. ಮಂಜುನಾಥ ತಂದೆ ಬಸಪ್ಪ ಕೊಳದಾರ, ಸಾ|| ಶಿವಪುರ, ತಾ: ಹಳಿಯಾಳ. ಈ ನಮೂದಿತ ಆರೋಪಿತರಲ್ಲಿ ಆರೋಪಿ 1 ನೇಯವನು ಪಿರ್ಯಾದಿಯು ತನ್ನ ಮೇಲೆ ದಿನಾಂಕ: 16-01-2021 ರಂದು ದೂರು ಕೊಟ್ಟ ವಿಷಯದಲ್ಲಿ ಆರೋಪಿ 1 ನೇಯವನು ಮತ್ತು ಆತನ ತಂದೆಯಾದ ಆರೋಪಿ 2 ನೇಯವರು ಸಿಟ್ಟಿನಿಂದ ಇದ್ದವರು, ದಿನಾಂಕ: 16-01-2021 ರಂದು 17-00 ಗಂಟೆಗೆ ಪಿರ್ಯಾದಿಯ ಹೊಲದಲ್ಲಿ ಅಕ್ರಮ ಪ್ರವೇಶ ಮಾಡಿ, ಹೊಲದಲ್ಲಿ ಕೆಲಸ ಮಾಡುತ್ತಿದ್ದ ಪಿರ್ಯಾದಿಗೆ ‘ನನ್ನ ಮೇಲೆ ಪೊಲೀಸರಿಗೆ ದೂರು ಕೊಡುತ್ತಿ ಸೂಳೆ, ಬೋಸಡಿ’ ಎಂದು ಕೆಟ್ಟದ್ದಾಗಿ ಬೈಯ್ದು, ಒಂದು ಕಬ್ಬಿನ ಗಳದಿಂದ ತಲೆಗೆ ಮತ್ತು ಎಡಗೈಗೆ ಹೊಡೆದಿದ್ದು, ಬಿಡಲು ಬಂದು ಪಿರ್ಯಾದಿಯ ಗಂಡನಾದ ಸುರೇಶ ಇವನಿಗೆ ಆರೋಪಿ 2 ನೇಯವನು ಹಿಡಿದುಕೊಂಡಿದ್ದು, ಆರೋಪಿ 1 ನೇಯವನು ಸುರೇಶ ಇವನಿಗೆ ಹೊಟ್ಟೆಗೆ ಮತ್ತು ಕಾಲಿಗೆ ಒದ್ದಿದ್ದು ಇರುತ್ತದೆ ಹಾಗೂ ‘ನೀವು ಈ ದಿವಸ ಉಳಿದುಕೊಂಡಿದ್ದಿರಿ. ಇನ್ನೊಮ್ಮೆ ಸಿಕ್ಕರೆ ನಿಮಗೆ ಬಿಡುವುದಿಲ್ಲ’ ಎಂದು ಧಮಕಿ ಹಾಕಿರುತ್ತಾರೆ ಎಂಬ ಬಗ್ಗೆ ಪಿರ್ಯಾದಿ ಶ್ರೀಮತಿ ರೇಣುಕಾ ಕೋಂ. ಸುರೇಶ ವಾಸ್ತೆಗೌಡರ, ಪ್ರಾಯ-48 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಶಿವಪುರ, ತಾ: ಹಳಿಯಾಳ ರವರು ದಿನಾಂಕ: 18-02-2021 ರಂದು 13-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ರಾಮನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 14/2021, ಕಲಂ: 279, 304(ಎ) ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ವೆಂಕಟೇಶನ್ ಜೆ. ತಂದೆ ಜಯರಾಮನ್ ಸಾ|| 4/10 ಮೆಟ್ಟು ಸ್ಟ್ರೀಟ್, ಚೆಟಪೇಟ & ಟಿ.ಕೆ, ತಿರುವನ್ನಮಲೈ, ತಮಿಳುನಾಡು (ಕಂಟೇನರ್ ಲಾರಿ ನಂ: ಟಿ.ಎನ್-04/ಎ.ಡಬ್ಲ್ಯೂ-3340 ನೇದರ ಚಾಲಕ). ಮೃತ ರಾಮಚಂದ್ರ ಬಾಬು ಲೋಹಾರ ಇವರು ರಾಮನಗರದಲ್ಲಿ ಲೋಹಾರ ಅಂಗಡಿ ಇಟ್ಟುಕೊಂಡು ತಮ್ಮೂರಾದ ಅಕ್ರಾಳಿಯಿಂದ ರಾಮನಗರಕ್ಕೆ ಬಂದು ಹೋಗಿ ಮಾಡುತ್ತಿದ್ದವರು, ದಿನಾಂಕ: 15-02-2021 ರಂದು ಎಂದಿನಂತೆ ತಮ್ಮ ರಾಮನಗರದ ಅಂಗಡಿಗೆ ಬಂದು ಕೆಲಸ ಮುಗಿಸಿಕೊಂಡು ಸಾಯಂಕಾಲ 17-30 ಗಂಟೆಗೆ ತಮ್ಮೂರಿಗೆ ರಾಮನಗರ-ಅನಮೋಡ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-4ಎ ರಲ್ಲಿ ರಾಮನಗರದ ಚರ್ಚಿನಿಂದ ಸುಮಾರು 150 ಮೀಟರ್ ಅಂತರದಲ್ಲಿ ಬರುವ ತಿರುವಿನಲ್ಲಿ ಹೋಗುತ್ತಿರುವಾಗ ಹಿಂದಿನಿಂದ ಬಂದ ಕಂಟೇನರ್ ಲಾರಿ ನಂ: ಟಿ.ಎನ್-04/ಎ.ಡಬ್ಲ್ಯೂ-3340 ನೇದರ ಚಾಲಕನಾದ ನಮೂದಿತ ಆರೋಪಿತನು ತನ್ನ ಕಂಟೇನರ್ ಲಾರಿಯನ್ನು ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ತಿರುವಿನಲ್ಲಿ ಹೋಗುತ್ತಿದ್ದ ಮೃತ ರಾಮಚಂದ್ರ ಲೋಹಾರ ರವರ ಮೋಟಾರ್ ಸೈಕಲ್ ನಂ: ಕೆ.ಎ-30/ಆರ್-4397 ನೇದಕ್ಕೆ ತಾಗಿಸಿದ್ದು, ಲಾರಿ ತಾಗಿದ ರಭಸಕ್ಕೆ ರಾಮಚಂದ್ರ ರವರು ರಸ್ತೆ ಮೇಲೆ ಬಿದ್ದು, ತಲೆಯ ಬಲಭಾಗದಲ್ಲಿ, ಬಲಗಾಲು ಹಾಗೂ ಬಲಗೈಗೆ ತೆರಚಿದ ನಮೂನೆಯ ರಕ್ತಗಾಯವಾಗಿದ್ದು, ರಾಮನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಉಪಚಾರ ಕೊಡಿಸಿಕೊಂಡು, ಹೆಚ್ಚಿನ ಉಪಚಾರಕ್ಕೆ ಬೆಳಗಾವಿಯ ವಿಜಯಾ ಆಸ್ಪತ್ರೆಗೆ ಉಪಚಾರಕ್ಕೆ ತೆಗೆದುಕೊಂಡು ಹೋದಾಗ ಪರೀಕ್ಷಿಸಿದ ವೈದ್ಯರು ‘ಬ್ರೇನ್ ಹ್ಯಾಮರೇಜ್ ಆಗಿದೆ. ಉಳಿಯುವ ಸಾಧ್ಯತೆಗಳು ತೀರಾ ಕಡಿಮೆ’ ಅಂತಾ ಹೇಳಿದ್ದರಿಂದ ಡಿಸ್ಚಾರ್ಜ್ ಮಾಡಿಸಿಕೊಂಡು ಮನೆಗೆ ಕರೆದುಕೊಂಡು ಬಂದಿದ್ದು, ಮನೆಯಲ್ಲಿರುವಾಗ ದಿನಾಂಕ: 18-02-2021 ರಂದು ಬೆಳಿಗ್ಗೆ 10-30 ಗಂಟೆಗೆ ಮೃತಪಟ್ಟಿರುತ್ತಾರೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಸುರೇಶ ತಂದೆ ರಾಮಚಂದ್ರ ಲೋಹಾರ, ಪ್ರಾಯ-46 ವರ್ಷ, ವೃತ್ತಿ-ಕಾರ್ಪೆಂಟರ್, ಸಾ|| ಕುರಾಡವಾಡಾ, ಅಕ್ರಾಳಿ, ತಾ: ಖಾನಾಪುರ, ಜಿ: ಬೆಳಗಾವಿ, ಹಾಲಿ ಸಾ|| ಗಣೇಶಗಲ್ಲಿ, ರಾಮನಗರ, ತಾ: ಜೊಯಿಡಾ ರವರು ದಿನಾಂಕ: 18-02-2021 ರಂದು 12-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 18-02-2021

at 00:00 hrs to 24:00 hrs

 

ಮಲ್ಲಾಪುರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 02/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತಳಾದ ಕುಮಾರಿ: ಗಗನಾ ತಂದೆ ವೆಂಕಟೇಶ ನಾಯ್ಕ, ಪ್ರಾಯ-11 ವರ್ಷ, ವೃತ್ತಿ-ವಿದ್ಯಾರ್ಥಿ, ಸಾ|| ಕುರ್ನಿಪೇಟೆ, ಮಲ್ಲಾಪುರ, ಕಾರವಾರ. ಇವಳು ದಿನಾಂಕ: 16-02-2021 ರಂದು 09-30 ಗಂಟೆಗೆ ಪಿರ್ಯಾದಿಯ ಜೊತೆ ಅಂಗಡಿಗೆ ಬಂದು ಹೋಮ್ ವರ್ಕ್ ಬರೆಯುತ್ತಾ ಕುಳಿತ್ತಿದ್ದವಳು, ಸ್ವಲ್ಪ ಸಮಯದ ಬಳಿಕ ಶೌಚಾಲಯಕ್ಕೆ ಹೋಗುತ್ತೇನೆಂದು ಹೇಳಿ ಮನೆಗೆ ಹೋಗಿದ್ದಳು. ನಂತರ ಅರ್ಧ ಗಂಟೆಯ ಬಳಿಕ ಪಿರ್ಯಾದಿಯ ಅಂಗಡಿಯ ಪಕ್ಕದ ಅಂಗಡಿಯವರಾದ ಹರ್ಷ ತೋಳಾರ ಇವರು ಪಿರ್ಯಾದಿಗೆ ಕರೆದು ‘ನಿಮ್ಮ ಮಗಳಿಗೆ ಏನೋ ತೊಂದರೆ ಆಗಿದೆ. ಕೂಡಲೇ ಅಂಗಡಿ ಬಂದ್ ಮಾಡಿ ಆಸ್ಪತ್ರೆಗೆ ಹೋಗೋಣ’ ಎಂದು ಹೇಳಿದ ನಂತರ ಹರ್ಷ ಇವರ ಮೋಟಾರ್ ಸೈಕಲ್ ಮೇಲಾಗಿ ಮಲ್ಲಾಪುರದ ಪ್ರಾಥಮಿಕ ಆಸ್ಪತ್ರೆಗೆ ಹೋಗಿದ್ದು, ಅಲ್ಲಿ ನನ್ನ ಮಗಳಿಗೆ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಯ ಕುರಿತು ಕಾರವಾರದ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿನ ತುರ್ತು ಚಿಕಿತ್ಸಾ ಘಟಕದಲ್ಲಿ ದಾಖಲಿಸಿ, ನಾನು ಅಲ್ಲಿ ನನ್ನ ಮಗಳಿಗೆ ನೋಡಿದಾಗ ಅವಳ ದೇಹವು ಬೆಂಕಿಯಿಂದ ಸುಟ್ಟಿದ್ದು, ಅವಳು ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ. ನಂತರ ವೈದ್ಯರ ಸಲಹೆಯ ಮೇರೆಗೆ ಅದೇ ದಿವಸ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ 16-45 ಗಂಟೆಗೆ ದಾಖಲಿಸಿದಾಗ ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ: 18-02-2021 ರಂದು ಬೆಳಿಗ್ಗೆ 07-30 ಗಂಟೆಗೆ ಮರಣಪಟ್ಟ ಬಗ್ಗೆ ವೈದ್ಯರು ತಿಳಿಸಿರುತ್ತಾರೆ. ಮೃತ ನನ್ನ ಮಗಳು ದಿನಾಂಕ: 16-02-2021 ರಂದು 09-30 ಗಂಟೆಯಿಂದ 10-00 ಗಂಟೆಯ ನಡುವಿನ ಅವಧಿಯಲ್ಲಿ ಅಂಗಡಿಯಿಂದ ಶೌಚಾಲಯಕ್ಕೆ ಹೋಗುತ್ತೇನೆಂದು ಹೇಳಿ ಹೋದವಳು, ಆಕಸ್ಮಿಕವಾಗಿಯೋ ಅಥವಾ ಇನ್ನಾವುದೋ ಕಾರಣದಿಂದ ಮೈಗೆ ಬೆಂಕಿ ಹಚ್ಚಿಕೊಂಡು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುವಾಗ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು, ಈ ಕುರಿತು ಮುಂದಿನ ಕಾನೂನು ಕ್ರಮ ಜರುಗಿಸಲು ಕೋರಿದ ಬಗ್ಗೆ ಪಿರ್ಯಾದಿ ಶ್ರೀಮತಿ ಚಂದ್ರಕಲಾ ಕೋಂ. ವೆಂಕಟೇಶ ನಾಯ್ಕ, ಪ್ರಾಯ-38 ವರ್ಷ, ವೃತ್ತಿ-ಮನೆವಾರ್ತೆ, ಸಾ|| ಕುರ್ನಿಪೇಟೆ, ಮಲ್ಲಾಪುರ, ಕಾರವಾರ ರವರು ದಿನಾಂಕ: 18-02-2021 ರಂದು 13-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

ಇತ್ತೀಚಿನ ನವೀಕರಣ​ : 19-02-2021 01:39 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080