ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 18-01-2022

at 00:00 hrs to 24:00 hrs

 

ಕಾರವಾರ ಶಹರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 05/2022, ಕಲಂ: 323, 324, 504 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಜಮೀಯುಲ್ಲಾ @ ಜಮೀರ್ ತಂದೆ ಅಬ್ದುಲ್ ರವೂಪ್, ಪ್ರಾಯ-29 ವರ್ಷ, ವೃತ್ತಿ-ಹೇರ್ ಕಟಿಂಗ್, ಸಾ|| ಬಡಗು ನಿವಾಸಿ, ಥಾಣಾ ಕುಲುಮೆ, ಗೋರಕಪುರ್, ಮಹಾರಾಜಗಂಜ್, ಉತ್ತರ ಪ್ರದೇಶ. ಪಿರ್ಯಾದಿಯು ಕಾರವಾರದ ಕುಟಿನ್ಹೋ ರಸ್ತೆಯಲ್ಲಿ ಲಕ್ಕಿ ಹೇರ್ ಕಟ್ಟಿಂಗ್ ಸಲೂನ್ ಇಟ್ಟುಕೊಂಡಿದ್ದು, ಆರೋಪಿತನು ಸಹ ಅದೇ ರಸ್ತೆಯಲ್ಲಿ ರಿಯಾನ್ ಹೇರ್ ಕಟ್ಟಿಂಗ್ ಸಲೂನ್ ಇಟ್ಟುಕೊಂಡಿರುತ್ತಾನೆ. ದಿನಾಂಕ: 17-01-2022 ರಂದು ರಾತ್ರಿ 21-30 ಘಂಟೆಗೆ ಪಿರ್ಯಾದಿಯ ಅಂಗಡಿಗೆ ಬಂದ ಗ್ರಾಹಕನಿಗೆ ಆರೋಪಿತನು ಕರೆದು ತನ್ನ ಅಂಗಡಿಗೆ ಬರಲು ತಿಳಿಸಿದ್ದರಿಂದ, ಪಿರ್ಯಾದುದಾರರು ‘ತಮ್ಮ ಅಂಗಡಿಗೆ ಬಂದ ಗಿರಾಕಿ ಯಾಕೆ ಕರೆಯುತ್ತೀರಿ?’ ಅಂತಾ ಕೇಳಿದ್ದಕ್ಕೆ ಆರೋಪಿತನು ಸಿಟ್ಟಿನಿಂದ ಪಿರ್ಯಾದಿಗೆ ‘ಮಾದರಚೋದ್’ ಅಂತಾ ಬೈಯ್ದು, ತನ್ನ ಅಂಗಡಿಯಲ್ಲಿದ್ದ ಕಬ್ಬಿಣದ ರಾಡಿನಿಂದ ಪಿರ್ಯಾದಿಯ ತಲೆಯ ಮೇಲೆ ಹೊಡೆದು, ದುಃಖಾಪತ್ ಪಡಿಸಿ, ತಪ್ಪಿಸಲು ಬಂದ ಪಿರ್ಯಾದಿಯ ಹೆಂಡತಿ: ಜೋಯಾ ಹಾಗೂ ತಾಯಿ: ಜಮೀಲಾ ಇವರಿಗೂ ದುಃಖಾಪತ್ ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಅರ್ಷಿದ್ ಖಾನ್ ತಂದೆ ಮುನಾವರ್ ಖಾನ್, ಪ್ರಾಯ-30 ವರ್ಷ, ವೃತ್ತಿ-ಬಿಸಿನೆಸ್, ಸಾ|| ಅಹಮ್ಮದ್ ಕಾಂಪ್ಲೆಕ್ಸ್, ಮಹಾಲಕ್ಷ್ಮೀ ಶೋರೂಮ್ ಹತ್ತಿರ, ಕಾಜುಬಾಗ, ಕಾರವಾರ ರವರು ದಿನಾಂಕ: 18-01-2022 ರಂದು 00-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕಾರವಾರ ಶಹರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 05/2022, ಕಲಂ: 323, 324, 504, 506 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಅರ್ಷಿದ್ ಖಾನ್ ತಂದೆ ಮುನಾವರ್ ಖಾನ್, ಪ್ರಾಯ-30 ವರ್ಷ, ವೃತ್ತಿ-ಬಿಸಿನೆಸ್, ಸಾ|| ಅಹಮ್ಮದ್ ಕಾಂಪ್ಲೆಕ್ಸ್, ಮಹಾಲಕ್ಷ್ಮೀ ಶೋರೂಮ್ ಹತ್ತಿರ, ಕಾಜುಬಾಗ, ಕಾರವಾರ. ಪಿರ್ಯಾದಿಯು ಕಾರವಾರದ ಕುಟಿನ್ಹೋ ರಸ್ತೆಯಲ್ಲಿ ರಿಯಾನ್ ಹೇರ್ ಕಟ್ಟಿಂಗ್ ಸಲೂನ್ ಇಟ್ಟುಕೊಂಡಿದ್ದು, ಆರೋಪಿತನು ಸಹ ಅದೇ ರಸ್ತೆಯಲ್ಲಿ ಲಕ್ಕಿ ಹೇರ್ ಕಟ್ಟಿಂಗ್ ಸಲೂನ್ ಇಟ್ಟುಕೊಂಡಿರುತ್ತಾನೆ. ಪಿರ್ಯಾದಿಗೆ ಹಾಗೂ ಆರೋಪಿತನಿಗೆ ಹಿಂದಿನ ಬಾಡಿಗೆ ಹಣದ ವಿಚಾರವಾಗಿ ದ್ವೇಷ ಇದ್ದು, ದಿನಾಂಕ: 17-01-2022 ರಂದು ರಾತ್ರಿ 21-30 ಘಂಟೆಗೆ ಪಿರ್ಯಾದಿಯ ಅಂಗಡಿಗೆ ಬಂದ ಗ್ರಾಹಕನಿಗೆ ಆರೋಪಿತನು ಕರೆದು ತನ್ನ ಅಂಗಡಿಗೆ ಬರಲು ತಿಳಿಸಿದ್ದರಿಂದ, ಪಿರ್ಯಾದುದಾರರು ‘ತಮ್ಮ ಅಂಗಡಿಗೆ ಬಂದ ಗಿರಾಕಿಗೆ ಯಾಕೆ ಕರೆಯುತ್ತೀರಿ?’ ಅಂತಾ ಕೇಳಿದ್ದಕ್ಕೆ ಆರೋಪಿತನು ಸಿಟ್ಟಿನಿಂದ ಪಿರ್ಯಾದಿಗೆ ‘ಮಾದರಚೋದ್, ಬೆಹನಚೋದ್, ಗಾಂಡು, ಬಾಹರಸೇ ಆಕೆ ಹಮಕೋ ದಾದಾಗಿರಿ ದಿಕಾರಹೇ ಕ್ಯಾ? ಆಪಕೋ ಮೈ ಐಸಾ ನಹಿ ಚೋಡನೇವಾಲಾ ಹೂಂ, ಜಾನಸೇ ಮಾರೂಂಗಾ’ ಅಂತಾ ಬೈಯ್ದು, ತನ್ನ ಕೈಯಲ್ಲಿದ್ದ ಕಬ್ಬಿಣದ ರಾಡಿನಿಂದ ಪಿರ್ಯಾದಿಯ ತಲೆಗೆ ಹಾಗೂ ಎಡಗಾಲಿನ ಮೇಲೆ ಹೊಡೆದು ದುಃಖಾಪತ್ ಪಡಿಸಿ, ‘ಆಪ್ ಲೋಗೊಂಕೋ ಜಾನಸೇ ಮಾರದುಂಗಾ’ ಅಂತಾ ಹೇಳಿ ತನ್ನ ಕೈಯಲ್ಲಿರುವ ರಾಡನ್ನು ಎಸೆದು ಹೋದ ಬಗ್ಗೆ ಪಿರ್ಯಾದಿ ಶ್ರೀ ಜಮೀಯುಲ್ಲಾ @ಜಮೀರ್ ತಂದೆ ಅಬ್ದುಲ್ ರವೂಪ್, ಪ್ರಾಯ-29 ವರ್ಷ, ವೃತ್ತಿ-ಹೇರ್ ಕಟಿಂಗ್, ಸಾ|| ಬಡಗು ನಿವಾಸಿ, ಥಾಣಾ ಕುಲುಮೆ, ಗೋರಕಪುರ್, ಮಹಾರಾಜಗಂಜ್, ಉತ್ತರ ಪ್ರದೇಶ ರವರು ದಿನಾಂಕ: 18-01-2022 ರಂದು 12-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಚಿತ್ತಾಕುಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 03/2022, ಕಲಂ: ಮನುಷ್ಯ ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಮನುಷ್ಯ ಶ್ರೀ ಜಾನ್ ತಂದೆ ಮಾರ್ಷಲ್ ಡಿಸೋಜಾ, ಪ್ರಾಯ-25 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ವೇಗಸವಾಡ, ಚರ್ಚವಾಡ, ಚಿತ್ತಾಕುಲಾ, ಕಾರವಾರ. ಪಿರ್ಯಾದಿಯ ತಮ್ಮನಾದ ಈತನು ಬಿ.ಕಾಂ ಪದವೀದರನಾಗಿದ್ದು, ತನ್ನ ಓದಿಗೆ ಸರಿಯಾದ ವೃತ್ತಿ ಸಿಗಲಿಲ್ಲವೆಂದು ಬೇಸರದಲ್ಲಿದ್ದವನು, ದಿನಾಂಕ: 18-01-2022 ರಂದು 10-45 ಗಂಟೆಗೆ ತನ್ನ ಮೋಟಾರ್ ಸೈಕಲ್ ನಂ: ಕೆ.ಎ-30/ಕ್ಯೂ-2354 ನೇದನ್ನು ಮನೆಯಿಂದ ತೆಗೆದುಕೊಂಡು ಹೋಗಿ ಕಾಳಿ ಬ್ರಿಡ್ಜ್ ಮೇಲೆ ಇಟ್ಟು ಎಲ್ಲಿಯೋ ಹೋಗಿ ಕಾಣೆಯಾಗಿದ್ದು, ಸಾಯಂಕಾಲ 06-30 ಗಂಟೆಯವರೆಗೂ ಹುಡುಕಾಡಿದರು ಸಿಕ್ಕಿರುವುದಿಲ್ಲ. ಅದ್ದರಿಂದ ಕಾಣೆಯಾದ ನನ್ನ ತಮ್ಮನನ್ನು ಹುಡುಕಿ ಕೊಡಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀಮತಿ ಮೇರಿ ತಂದೆ ಮಾರ್ಷಲ್ ಡಿಸೋಜಾ, ಪ್ರಾಯ-29 ವರ್ಷ, ವೃತ್ತಿ-ಮನೆ ಕೆಲಸ ಸಾ|| ವೇಗಸವಾಡ, ಚರ್ಚವಾಡ, ಚಿತ್ತಾಕುಲಾ, ಕಾರವಾರ ರವರು ದಿನಾಂಕ: 18-01-2022 ರಂದು 19-05 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 12/2022, ಕಲಂ: 379 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ದಿನಾಂಕ: 05-01-2022 ರಂದು 14-00 ಗಂಟೆಯಿಂದ ದಿನಾಂಕ: 18-01-2021 ರಂದು 07-15 ಗಂಟೆಯ ನಡುವಿನ ಅವಧಿಯಲ್ಲಿ ಕುಮಟಾ ಶಹರದ ರೈಲ್ವೇ ನಿಲ್ದಾಣದಲ್ಲಿ ನಿಲ್ಲಿಸಿಟ್ಟ ಪಿರ್ಯಾದಿಯ ಹೋಂಡಾ ಗ್ರೆಜಿಯಾ ಸ್ಕೂಟರ್ ನಂ: ಕೆ.ಎ-47/ವಿ-2823 ನೇದನ್ನು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀ ಮಹೇಶ ತಂದೆ ನಾರಾಯಣ ಗಾವಡಿ, ಪ್ರಾಯ-31 ವರ್ಷ, ವೃತ್ತಿ-ರೈಲ್ವೇ ಕ್ಯಾಂಟೀನ್ ದಲ್ಲಿ ಕೆಲಸ, ಸಾ|| ಪೋಸ್ಟ್ ಬೆಟ್ಕುಳಿ, ತಾ: ಕುಮಟಾ ರವರು ದಿನಾಂಕ: 18-01-2022 ರಂದು 10-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 24/2022, ಕಲಂ: 323, 324, 504, 506 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಪ್ರದೀಪ ತಂದೆ ಶ್ರೀಧರ ನಾಯ್ಕ, ಪ್ರಾಯ-30 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಸರಳಗಿ, ತಾ: ಹೊನ್ನಾವರ. ಈತನು ಪಿರ್ಯಾದಿಯವರೊಂದಿಗೆ ಈ ಮೊದಲಿನಿಂದಲು ದ್ವೇಷ ಸಾಧಿಸುತ್ತಾ ಬಂದಿದ್ದಲ್ಲದೇ, ಪಿರ್ಯಾದಿಯ ಕಂಡಾಗಲೆಲ್ಲ ಗುರಾಯಿಸಿ ನೋಡುತ್ತಾ ಬಂದವನು, ದಿನಾಂಕ: 18-01-2022 ರಂದು 15-15 ಗಂಟೆಗೆ ಪಿರ್ಯಾದಿಯು ಹೊನ್ನಾವರ ತಾಲೂಕಿನ ಗೇರುಸೊಪ್ಪದ ಕೆ.ಪಿ.ಸಿ ಬಸ್ ಸ್ಟಾಫ್ ಹತ್ತಿರ ಇರುವ ಕೋಳಿ ಅಂಗಡಿಯ ಎದುರಿಗೆ ನಿಂತುಕೊಂಡಿದ್ದಾಗ ಆಗ ಅಲ್ಲಿಗೆ ಬಂದ ಆರೋಪಿತನು ಪಿರ್ಯಾದಿಯನ್ನು ಉದ್ದೇಶಿಸಿ ‘ಸೂಳೆ ಮಗನೇ, ಬೋಳಿ ಮಗನೇ, ನೀನೇನು ದೊಡ್ಡ ದಾದಾನಾ? ನನ್ನ ತಂಟೆಗೆ ಬರುತ್ತಿಯಾ?’ ಅಂತಾ ಅವಾಚ್ಯವಾಗಿ ಬೈಯ್ದು, ಕೈಯಿಂದ ಮೈಮೇಲೆ ಹೊಡೆದು, ಪಿರ್ಯಾದಿಯು ಧರಿಸಿದ್ದ ಶರ್ಟನ್ನು ಹರಿದು ನೆಲಕ್ಕೆ ದೂಡಿ ಹಾಕಿದ್ದಲ್ಲದೇ, ಅಲ್ಲಿಯೇ ಇದ್ದ ಕಟ್ಟಿಗೆಯ ಬಡಿಗೆಯಿಂದ ಪಿರ್ಯಾದಿಯ ಮೈಮೇಲೆ ಹೊಡೆದು, ಪಿರ್ಯಾದಿಯ ಎದೆಗೆ ಹಾಗೂ ಬಲಗಾಲಿನ ಪಾದಕ್ಕೆ ಗಾಯ ಪಡಿಸಿದ್ದಲ್ಲದೇ, ಪಿರ್ಯಾದಿಗೆ ‘ಇವತ್ತು ಬಚಾವಾದೆ. ಇನ್ನೊಂದು ದಿನ ನಿನ್ನನ್ನು ಕೊಚ್ಚಿ ಹೊಳೆಗೆ ಹಾಕುತ್ತೇನೆ’ ಅಂತಾ ಜೀವದ ಬೆದರಿಕೆ ಹಾಕಿ ಹೋದ ಬಗ್ಗೆ ಪಿರ್ಯಾದಿ ಶ್ರೀ ದಾದಾಪೀರ್ ಬಾಬು ತಂದೆ ಭಾಷಾ, ಪ್ರಾಯ-56 ವರ್ಷ, ವೃತ್ತಿ-ಚಾಲಕ, ಸಾ|| ಗೇರುಸೊಪ್ಪ ಸರ್ಕಲ್, ಗೇರುಸೊಪ್ಪ, ತಾ: ಹೊನ್ನಾವರ ರವರು ದಿನಾಂಕ: 18-01-2022 ರಂದು 17-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 25/2022, ಕಲಂ: 87 ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ಮಂಜು ತಂದೆ ಅಮ್ಮಕೂಸ ಗೌಡ, ಪ್ರಾಯ-65 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕೆರವಳ್ಳಿ, ತಾ: ಹೊನ್ನಾವರ ಮತ್ತು ಇನ್ನಿತರರು. ಈ ನಮೂದಿತ ಆರೋಪಿತರು ದಿನಾಂಕ: 18-01-2022 ರಂದು 18-30 ಗಂಟೆಗೆ ಹೊನ್ನಾವರ ತಾಲೂಕಿನ ಕೆರವಳ್ಳಿಯ ಗದ್ದೆ ಬಯಲಿನ ಸಾರ್ವಜನಿಕ ಖುಲ್ಲಾ ಪ್ರದೇಶದಲ್ಲಿ ಕೋಳಿ ಹುಂಜಗಳನ್ನು ಎರಡು ಕಡೆಯಿಂದಲು ಕಾದಾಡಲು ಬಿಟ್ಟು ತಮ್ಮ ಲಾಭಕ್ಕೋಸ್ಕರ ಅವುಗಳ ಮೇಲೆ ಹಣವನ್ನು ಪಂಥವನ್ನಾಗಿ ಕಟ್ಟಿ ಕೋಳಿ ಅಂಕ ಜೂಜಾಟ ಆಡುತ್ತಿದ್ದಾಗ ದಾಳಿಯ ವೇಳೆ 1). ಒಟ್ಟು ನಗದು ಹಣ 400/- ರೂಪಾಯಿ, 2). ಕೋಳಿ ಹುಂಜ-1, ಅ||ಕಿ|| 300/- ರೂಪಾಯಿ. ಇವುಗಳೊಂದಿಗೆ ಆರೋಪಿ 1 ನೇಯವನು ಸೆರೆ ಸಿಕ್ಕಿದ್ದು ಹಾಗೂ ಇತರೆ ಆರೋಪಿತರು ಓಡಿ ಹೋದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಮಹಾಂತೇಶ ಉದಯ ನಾಯಕ, ಪಿ.ಎಸ್.ಐ (ಕಾ&ಸು, ಸಂಚಾರ), ಹೊನ್ನಾವರ ಪೊಲೀಸ್ ಠಾಣೆ ರವರು ದಿನಾಂಕ: 18-01-2022 ರಂದು 20-10 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 03/2022, ಕಲಂ: 279 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ರಾಮಚಂದ್ರ ತಂದೆ ಭೀಮಪ್ಪಾ ಬುರ್ಲಿ, ಪ್ರಾಯ-47 ವರ್ಷ, ವೃತ್ತಿ-ವ್ಯವಹಾರ, ಸಾ|| ಭಾಗವತಿ, ತಾ: ಹಳಿಯಾಳ (ಕಾರ್ ನಂ: ಕೆ.ಎ-65/ಎಮ್-1248 ನೇದರ ಚಾಲಕ). ಈತನು ದಿನಾಂಕ: 16-01-2022 ರಂದು 19-00 ಗಂಟೆಗೆ ದಾಂಡೇಲಿ ತಾಲೂಕಿನ ಬಡಾಕಾನಶಿರಾಡಾ ಕ್ರಾಸ್ ನಿಂದ ದಾಂಡೇಲಿ ಕಡೆಗೆ ಸುಮಾರು 1 ಕೀ.ಮೀ ದೂರದಲ್ಲಿ ಡಾಂಬರ್ ರಸ್ತೆಯ ಮೇಲೆ ತನ್ನ ಕಾರ್ ನಂ: ಕೆ.ಎ-65/ಎಮ್-1248 ನೇದನ್ನು ಕುಳಗಿ ಕಡೆಯಿಂದ ದಾಂಡೇಲಿ ಕಡೆಗೆ ಹೋಗಲು ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಎದುರಿಗೆ ಬಂದ ಕಾಡು ಪ್ರಾಣಿಯನ್ನು ತಪ್ಪಿಸಲು ಹೋಗಿ, ಕಾರಿನ ವೇಗವನ್ನು ನಿಯಂತ್ರಿಸಲಾಗದೇ ಡಾಂಬರ್ ರಸ್ತೆಯ ಬಲಬದಿಯ ಕಾಡಿನಲ್ಲಿ ಚಲಾಯಿಸಿಕೊಂಡು ಹೋಗಿ ಒಂದು ಮರಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಕಾರನ್ನು ಜಖಂಗೊಳಿಸಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಅನಿಲ್ ತಂದೆ ವಿಷ್ಣು ಪೊದಾರ, ಪ್ರಾಯ-52 ವರ್ಷ, ವೃತ್ತಿ-ವ್ಯವಹಾರ, ಸಾ|| ಕೇರವಾಡ, ತಾ: ಹಳಿಯಾಳ ರವರು ದಿನಾಂಕ: 18-01-2022 ರಂದು 10-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮುಂಡಗೋಡ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 08/2022, ಕಲಂ: 394 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತನು ಯಾರೋ ಅಪರಿಚಿತನಾಗಿದ್ದು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಈತನು ದಿನಾಂಕ: 17-01-2022 ರಂದು ರಾತ್ರಿ 08-00 ಯಿಂದ 09-00 ಗಂಟೆಯ ನಡುವಿನ ಅವಧಿಯಲ್ಲಿ ಪಿರ್ಯಾದಿಯವರು ಕಾತೂರ ಗ್ರಾಮದ ತಮ್ಮ ಮನೆಯಲ್ಲಿ ಒಬ್ಬರೇ ಇದ್ದಾಗ ಲಗ್ನ ಪತ್ರಿಕೆಯನ್ನು ಕೊಡುವ ನೆಪದಲ್ಲಿ ಮನೆಗೆ ಬಂದು ‘ಕುಡಿಯಲು ನೀರು ಕೊಡಿ’ ಎಂದು ಕೇಳಿದವನಿಗೆ ಪಿರ್ಯಾದಿಯವರು ನೀರು ತಂದು ಕೊಟ್ಟಾಗ ಕುಡಿದು, ‘ಇನ್ನೊಂದು ಲೋಟ ನೀರು ಕೊಡಿ’ ಎಂದು ಕೊಡುವಂತೆ ಕೇಳಿಕೊಂಡು ಬಂದವನಿಗೆ ನೀರು ಕೊಟ್ಟಿದ್ದು, ಪಿರ್ಯಾದಿಯವರ ಸತ್ತ ಮಗನ ಮಗನ ಪೋಟೋ ನೋಡಿ ಅಳುವ ತರ ನಾಟಕ ಮಾಡಿ, ಪಿರ್ಯಾದಿಯ ಕುತ್ತಿಗೆ ಬಾಗಕ್ಕೆ ಚಾಕುವಿನಿಂದ ಹಲ್ಲೆ ಮಾಡಿ, ಸುಮಾರು 20 ಗ್ರಾಮ ತೂಕದ ಬಂಗಾರದ ಲಕ್ಷ್ಮೀ ಪದಕ ಇರುವ ಸರ-01 ಮತ್ತು 06 ಗ್ರಾಮದ ತೂಕದ ಹರಳು ಮತ್ತು ಹವಳ ಇರುವ 2 ಬಂಗಾರದ ಉಂಗುರ, ಅಂದಾಜು ಮೌಲ್ಯ 90,000/- ರೂಪಾಯಿ ಹಾಗೂ ನಗದು ಹಣ 10,000/- ರೂಪಾಯಿ ಹಣವನ್ನು ಕಿತ್ತುಕೊಂಡು ಹೋಗಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀಮತಿ ಗೀತಾ ಕೋಂ. ಯಲ್ಲಪ್ಪ ಯಲ್ಲಾಪುರ, ಪ್ರಾಯ-54 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಕಾತೂರ, ತಾ: ಮುಂಡಗೋಡ ರವರು ದಿನಾಂಕ: 18-01-2022 ರಂದು 14-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮುಂಡಗೋಡ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 09/2022, ಕಲಂ: 279, 304(ಎ) ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ನಾಗರಾಜ ತಂದೆ ಫಕ್ಕೀರಪ್ಪ ಸುಣಗಾರ, ಪ್ರಾಯ-44 ವರ್ಷ, ವೃತ್ತಿ-ಚಾಲಕ, ಸಾ|| ಶಾಂತಿನಗರ ಚರ್ಚ್, ಜಾವೂರ ಲೇಔಟ್, ಹುಬ್ಬಳ್ಳಿ  (ಮಾರುತಿ ಸುಜುಕಿ ಇಕೋ ವಾಹನ ನಂ: ಕೆ.ಎ-47/ಎಮ್-2156 ನೇದರ ಚಾಲಕ). ಈತನು ದಿನಾಂಕ: 18-01-2022 ರಂದು 19-00 ಗಂಟೆಯ ಸುಮಾರಿಗೆ ಮುಂಡಗೋಡ ತಾಲೂಕಿನ ಶಿರಸಿ-ಮುಂಡಗೋಡ ರಸ್ತೆಯ ಲೋಯಲಾ ಶಾಲೆಯ ಹತ್ತಿರ ತನ್ನ ಬಾಬ್ತು ಮಾರುತಿ ಸುಜುಕಿ ಇಕೋ ವಾಹನ ನಂ: ಕೆ.ಎ-47/ಎಮ್-2156 ನೇದನ್ನು ಶಿರಸಿ ಕಡೆಯಿಂದ ಮುಂಡಗೋಡ ಕಡೆಗೆ ಅತೀವೇಗವಾಗಿ ಹಾಗೂ ನಿಷ್ಕಾಳಜೀತನದಿಂದ ಚಾಲನೆ ಮಾಡಿಕೊಂಡು ಬಂದು ಮುಂಡಗೊಡ ಕಡೆಯಿಂದ ಶಿರಸಿ ರಸ್ತೆಯ ಕಡೆಗೆ ರಸ್ತೆಯಲ್ಲಿ ಪಿರ್ಯಾದಿಯವರೊಂದಿಗೆ ನಡೆದುಕೊಂಡು ಮನೆಗೆ ಹೋಗುತ್ತಿದ್ದ ಶ್ರೀಮತಿ ಲೋಕವ್ವ ಕೋಂ. ಧರ್ಮಣ್ಣ ಲಮಾಣಿ, ಸಾ|| ಕರಗಿನಕೊಪ್ಪ, ತಾ: ಮುಂಡಗೋಡ ಇವರಿಗೆ ಎದುರಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿದ ಪರಿಣಾಮವಾಗಿ ಸದರಿಯವರು ರಸ್ತೆಯ ಮೇಲೆ ಹಾರಿ ಬಿದ್ದು, ಅವರ ತಲೆಗೆ ಹಾಗೂ ಕಿವಿಯ ಹತ್ತಿರ ಭಾರೀ ಸ್ವರೂಪದ ಗಾಯನೋವು ಆಗಿದ್ದು, ಅವರು ಸ್ಥಳದಲ್ಲಿಯೇ ಮೃತಪಡಲು ಆರೋಪಿ ಚಾಲಕನೇ ಕಾರಣನಾದ ಬಗ್ಗೆ ಪಿರ್ಯಾದಿ ಶ್ರೀ ನಾಗರಾಜ ತಂದೆ ಧರ್ಮಣ್ಣ ಲಮಾಣಿ, ಪ್ರಾಯ-26 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕರಗಿನಕೊಪ್ಪ, ತಾ: ಮುಂಡಗೋಡ ರವರು ದಿನಾಂಕ: 18-01-2022 ರಂದು 20-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 18-01-2022

at 00:00 hrs to 24:00 hrs

 

ಶಿರಸಿ ನಗರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 02/2022, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಹಾಲೇಶ ತಂದೆ ಮುಕಪ್ಪ ಲಮಾಣಿ, ಪ್ರಾಯ-24 ವರ್ಷ, ವೃತ್ತಿ-ಟ್ಯಾಟೂ ಹಾಕುವ ಕೆಲಸ, ಸಾ|| ಸೇವಾಲಾಲಪುರ, ಪೋ ಶೀರಬಡಗಿ, ತಾ: ಸವಣೂರು, ಜಿ: ಹಾವೇರಿ, ಹಾಲಿ ಸಾ|| ಲಮಾಣಿ ಕಾಲೋನಿ, ಮಾರಿಕಾಂಬಾ ನಗರ, ತಾ: ಶಿರಸಿ. ಈತನು ಕಳೆದ 3-4 ವರ್ಷಗಳಿಂದ ಟ್ಯಾಟೂ ಹಾಕುವ ಕೆಲಸ ಮಾಡಿಕೊಂಡಿದ್ದನು, ದಿನಾಂಕ: 18-01-2022 ರಂದು 12-00 ಗಂಟೆಯ ಸುಮಾರಿಗೆ ಶಿರಸಿ ಶಹರದ ಮಾರಿಕಾಂಬಾ ನಗರದ ಲಮಾಣಿ ಕಾಲೋನಿಯಲ್ಲಿ ಸವಿತಾ ರಾಠೋಡ ಇವರ ಮನೆಯಲ್ಲಿ ಬಾಡಿಗೆಗೆ ಉಳಿದುಕೊಂಡ ಮನೆಯಲ್ಲಿ ಅಳವಡಿಸಿದ ಕರೆಂಟಿನ ಬೋರ್ಡಿಗೆ ಹಾಕಿದ ಗ್ಯಾಂಗ್ ಬಾಕ್ಸಿನ ವೈರ್ ಮಧ್ಯದಲ್ಲಿ ಹರಿದಿದ್ದುದ್ದನ್ನು ಮತ್ತು ಕರೆಂಟ್ ಹಾಕಿದ್ದನ್ನು ಗಮನಿಸದೇ ಗ್ಯಾಂಗ್ ಬಾಕ್ಸಿನ ವೈರನ್ನು ಸುತ್ತುತ್ತಿರುವಾಗ ಕರೆಂಟ್ ಎಡಗೈಗೆ ತಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಮುಕಪ್ಪ ತಂದೆ ಸಕ್ರಪ್ಪ ಲಮಾಣಿ, ಪ್ರಾಯ-46 ವರ್ಷ, ವೃತ್ತಿ-ವ್ಯವಸಾಯ, ಸಾ|| ಸೇವಾಲಾಲಪುರ, ಪೋ: ಶೀರಬಡಗಿ ತಾ: ಸವಣೂರು, ಜಿ: ಹಾವೇರಿ ರವರು ದಿನಾಂಕ: 18-01-2022 ರಂದು 16-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

 

 

ಇತ್ತೀಚಿನ ನವೀಕರಣ​ : 19-02-2022 04:18 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080