ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 18-07-2021

at 00:00 hrs to 24:00 hrs

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 194/2021, ಕಲಂ: ಗಂಡಸು ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಗಂಡಸು ಶ್ರೀ ಬೀರಾ ತಂದೆ ಮಂಜುನಾಥ ಹುಲಸ್ವಾರ, ಪ್ರಾಯ-51 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕೆಳಗಿನಪಾಳ್ಯ, ತಾ: ಹೊನ್ನಾವರ. ಪಿರ್ಯಾದಿಯ ತಂದೆಯಾದ ಇವರು ದಿನಾಂಕ: 17-07-2021 ರಂದು ಬೆಳಿಗ್ಗೆ 11-15 ಗಂಟೆಯ ಸುಮಾರಿಗೆ ಹೊರಗಡೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಗಡೆ ಹೋದವರು ಈವರೆಗೂ ವಾಪಸ್ ಮನೆಗೆ ಬಾರದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದು, ಪಿರ್ಯಾದಿಯವರು ಕಾಣೆಯಾದ ತನ್ನ ತಂದೆಯವರಿಗೆ ಈವರೆಗೆ ತಮ್ಮ ಸಂಬಂಧಿಕರಲ್ಲಿ ತಮ್ಮ ಕೇರಿಯವರಲ್ಲಿ ಹುಡುಕಾಡಿ ಕೇಳಿದ್ದರಲ್ಲಿ ಹಾಗೂ ತನ್ನ ತಂದೆಯವರು ಕೆಲಸ ಮಾಡುತ್ತಿದ್ದ ಕಡೆಗಳಲ್ಲಿ ಹಾಗೂ ಹೊನ್ನಾವರದ ಬಜಾರ್ ರಸ್ತೆ, ಬಿಕಾಸಿತರೆ, ಬಂದರ್ ರಸ್ತೆ ಮುಂತಾದ ಕಡೆಗಳಲ್ಲಿ ಹುಡುಕಾಡಿ ತನ್ನ ತಂದೆಯವರು ಎಲ್ಲಿಯೂ ಸಿಗದೇ ಇದ್ದುದರಿಂದ ಕಾಣೆಯಾದ ತನ್ನ ತಂದೆಯವರನ್ನು ಹುಡುಕಿ ಕೊಡುವಂತೆ ಕೋರಿದ ಬಗ್ಗೆ ಪಿರ್ಯಾದಿ ಶ್ರೀಮತಿ ಉಷಾ ಕೋಂ. ರವಿ ಹುಲಸ್ವಾರ, ಪ್ರಾಯ-29 ವರ್ಷ, ವೃತ್ತಿ-ಕಂಪ್ಯೂಟರ್ ಆಪರೇಟರ್, ಸಾ|| ಕೆಳಗಿನಪಾಳ್ಯ, ತಾ: ಹೊನ್ನಾವರ ರವರು ದಿನಾಂಕ: 18-07-2021 ರಂದು 17-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮುರ್ಡೇಶ್ವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 66/2021, ಕಲಂ: 279, 304(ಎ) ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಸಂತೋಷ ತಂದೆ ಸಾಲ್ವದರ್ ಡಿಕೋಸ್ತ್, ಪ್ರಾಯ-33 ವರ್ಷ, ವೃತ್ತಿ-ಮೇಸ್ತ್ರಿ ಕೆಲಸ, ಸಾ|| ಜನತಾ ಕಾಲೋನಿ, ತೆರ್ನಮಕ್ಕಿ, ಪೋ: ಕಾಯ್ಕಿಣಿ, ತಾ: ಭಟ್ಕಳ (ಹೀರೋ ಹೋಂಡಾ ಸೂಪರ್ ಸ್ಪ್ಲೆಂಡರ್ ಪ್ಲಸ್ ಮೋಟಾರ್ ಸೈಕಲ್ ನಂ: ಕೆ.ಎ-47/ಜೆ-2476 ನೇದರ ಸವಾರ). ದಿನಾಂಕ: 17-07-2021 ರಂದು ಪಿರ್ಯಾದಿಯ ತಂಗಿಯಾದ ಶ್ರೀಮತಿ ಮೇರಿ ಕೋಂ. ಜೋನ್ ಮಿರಾಂಡ, ಸಾ|| ಸರಳಗಿ, ತಾ: ಹೊನ್ನಾವರ. ಹಾಲಿ ಸಾ|| ಕಾಮತ್ ಕ್ಯಾಂಟೀನ್ ಹತ್ತಿರ, ಬೇಂಗ್ರೆ, ತಾ: ಭಟ್ಕಳ ಇವಳು ತನ್ನ ಅಣ್ಣ ಅಂಥೋನ್ ಡಿಕೋಸ್ತ್ ಈತನಿಗೆ ಆರಾಮ ಇಲ್ಲದ ಕಾರಣ ಆತನಿಗೆ ಚಿಕಿತ್ಸೆಯ ಕುರಿತು ಮುರ್ಡೇಶ್ವರದ ಆರ್.ಎನ್.ಎಸ್ ಆಸ್ಪತ್ರೆಯಲ್ಲಿ ದಾಖಲಿಸಿಕೊಂಡು ಪುನಃ ಮನೆಗೆ ಹೋಗುವ ಕುರಿತು ತನ್ನ ತಮ್ಮನಾದ ನಮೂದಿತ ಆರೋಪಿತನ ಹೀರೋ ಹೋಂಡಾ ಸೂಪರ್ ಸ್ಪ್ಲೆಂಡರ್ ಪ್ಲಸ್ ಮೋಟಾರ್ ಸೈಕಲ್ ನಂ: ಕೆ.ಎ-47/ಜೆ-2476 ನೇದರ ಹಿಂದುಗಡೆ ಕುಳಿತುಕೊಂಡು ಆರೋಪಿತನು ತನ್ನ ಮೋಟಾರ್ ಸೈಕಲನ್ನು ಮುರ್ಡೇಶ್ವರದ ಆರ್.ಎನ್ ಆಸ್ಪತ್ರೆ ಕಡೆಯಿಂದ ಬೇಂಗ್ರೆ ಕಡೆಗೆ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ಮೇಲೆ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಸಮಯ 20-45 ಗಂಟೆಗೆ ಬಸ್ತಿಯಲ್ಲಿ ತನ್ನ ಮೋಟಾರ್ ಸೈಕಲನ್ನು ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ, ಹಿಂದುಗಡೆ ಕುಳಿತ ಮೇರಿ ಇವಳನ್ನು ರಸ್ತೆಯ ಮೇಲೆ ಕೆಡವಿ ಅಪಘಾತ ಪಡಿಸಿದ್ದು, ಈ ಅಪಘಾತದಿಂದ ಮೇರಿ ಇವಳಿಗೆ ತಲೆಯ ಭಾಗಕ್ಕೆ ಗಂಭೀರ ಸ್ವರೂಪದ ಗಾಯನೋವು ಪಡಿಸಿದ್ದರಿಂದ, ಚಿಕಿತ್ಸೆಯ ಕುರಿತು ಮುರ್ಡೇಶ್ವರದ ಆರ್.ಎನ್.ಎಸ್ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ವೈದ್ಯರು ಉಪಚರಿಸಿ ಹೆಚ್ಚಿನ ಉಪಚಾರಕ್ಕಾಗಿ ಬೇರೆ ಆಸ್ಪೆತ್ರೆಗೆ ಕರೆದುಕೊಂಡು ಹೋಗಲು ತಿಳಿಸಿದಂತೆ ಕೆ.ಎಮ್.ಸಿ ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ: 18-07-2021 ರಂದು ಬೆಳಗಿನ ಜಾವ 00-50 ಗಂಟೆಗೆ ಮೇರಿ ಇವಳು ಮೃತಪಟ್ಟ ಬಗ್ಗೆ ಪಿರ್ಯಾದಿ ಶ್ರೀಮತಿ ಇನಾಸ್ ಕೋಂ. ಆಗ್ನೇಲ್ ಲೊಪೀಸ್, ಪ್ರಾಯ-50 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಜನತಾ ಕಾಲೋನಿ, ತೆರ್ನಮಕ್ಕಿ, ಪೋ: ಕಾಯ್ಕಿಣಿ, ತಾ: ಭಟ್ಕಳ ರವರು ದಿನಾಂಕ: 18-07-2021 ರಂದು 08-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 115/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಗಜಾನನ ತಂದೆ ಕೃಷ್ಣ ಕುಣಬಿ, ಪ್ರಾಯ-27 ವರ್ಷ, ವೃತ್ತಿ-ಚಾಲಕ, ಸಾ|| ಕಟ್ಟಿಗೆ, ಪೋ: ದೇಹಳ್ಳಿ, ತಾ: ಯಲ್ಲಾಪುರ (ಓಮಿನಿ ವಾಹನ ನಂ: ಕೆ.ಎ-31/ಎಮ್-9750 ನೇದರ ಚಾಲಕ), 2]. ಕಲ್ಮೇಶ ತಂದೆ ಬಸಪ್ಪ ಬ್ಯಾಹಟ್ಟಿ, ಪ್ರಾಯ-34 ವರ್ಷ, ವೃತ್ತಿ-ಚಾಲಕ, ಸಾ|| ಬೇಗರೂ, ಪೋ: ಬೇಗರೂ, ತಾ: ಕಲಘಟಗಿ, ಜಿ: ಧಾರವಾಡ (ಲಾರಿ ನಂ: ಕೆ.ಎ-25/ಎ.ಬಿ-2384 ನೇದರ ಚಾಲಕ). ಈ ನಮೂದಿತ ಆರೋಪಿತರಲ್ಲಿ ಆರೋಪಿ 1 ನೇಯವನು ದಿನಾಂಕ: 17-07-2021 ರಂದು ಸಮಯ ಸುಮಾರು 16-30 ಗಂಟೆಗೆ ಯಲ್ಲಾಪುರ ಪಟ್ಟಣದ ಟಿ.ಎಮ್.ಎಸ್ ಪೆಟ್ರೋಲ್ ಬಂಕ್ ಎದುರು ಹಾದು ಹೋದ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-63 ರಲ್ಲಿ ತನ್ನ ಬಾಬ್ತು ಓಮಿನ ವಾಹನ ನಂ: ಕೆ.ಎ-31/ಎಮ್-9750 ನೇದನ್ನು ಯಲ್ಲಾಪುರ ಪಟ್ಟಣದ ಟಿ.ಎಮ್.ಎಸ್ ಪೆಟ್ರೋಲ್ ಬಂಕ್ ಕಡೆಯಿಂದ ತನ್ನ ವಾಹನಕ್ಕೆ ಯಾವುದೇ ಲೈಟ್ ಹಾಗೂ ಸಿಗ್ನಲ್ ನೀಡದೇ ತನ್ನ ವಾಹನವನ್ನು ಒಮ್ಮಲೇ ಅತೀವೇಗವಾಗಿ ಮತ್ತು ನಿಷ್ಕಾಳಜಿತನದಿಂದ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-63 ರ ರಸ್ತೆಯನ್ನು ಕ್ರಾಸ್ ಮಾಡಿ ಹುಬ್ಬಳ್ಳಿ ಕಡಗೆ ಹೋಗುತ್ತಿರುವಾಗ ಅದೇ ವೇಳೆಗೆ ಆರೋಪಿ 2 ನೇಯವನು ತನ್ನ ಲಾರಿ ನಂ: ಕೆ.ಎ-25/ಎ.ಬಿ-2384 ನೇದನ್ನು ಅಂಕೋಲಾ ಕಡೆಯಿಂದ ಹುಬ್ಬಳ್ಳಿ ಕಡೆಗೆ ಅತೀವೇಗವಾಗಿ ಮತ್ತು ನಿಷ್ಕಾಳಜಿತನದಿಂದ ಚಾಲಾಯಿಸಿಕೊಂಡು ಬಂದು ತನ್ನ ವಾಹನದ ಮೇಲಿನ ನಿಯಂತ್ರಣ ಕಳೆದುಕೊಂಡು ಓಮಿನಿ ವಾಹನಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿದರ ರಭಸಕ್ಕೆ ಓಮಿನಿ ವಾಹನವು ಮುಂದೆ ಹೋಗಿ ಅದೇ ವೇಳೆ ಹುಬ್ಬಳ್ಳಿ ಕಡೆಯಿಂದ ಯಲ್ಲಾಪುರ ಕಡೆಗೆ ಪಿರ್ಯಾದಿಯವರು ಚಾಲನೆ ಮಾಡಿಕೊಂಡು ಬರುತ್ತಿದ್ದ ಇಕೋ ವಾಹನ ನಂ: ಕೆ.ಎ-31/ಎನ್-2465 ನೇದಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ ಪರಿಣಾಮ ಓಮಿನಿ ವಾಹನದಲ್ಲಿದ್ದ ಬಾಲಕ ಕುಮಾರ: ಆಕಾಶ ತಂದೆ ರಾಮಚಂದ್ರ ಕುಣಬಿ, ಪ್ರಾಯ-10 ವರ್ಷ, ವೃತ್ತಿ-ವಿದ್ಯಾರ್ಥಿ, ಸಾ|| ಕಟ್ಟಿಗೆ, ತಾ: ಯಲ್ಲಾಪುರ ಇವನ ಮೈಕೈಗೆ ಗಾಯನೋವು ಆಗಿದ್ದು  ಹಾಗೂ ಮೂರು ವಾಹನಗಳನ್ನು ಜಖಂಗೊಳಿಸಿರುತ್ತಾರೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ದತ್ತಾತ್ರಯ ತಂದೆ ಸದಾಶಿವ ದುರ್ಗದ್, ಪ್ರಾಯ-60 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಹುಕ್ಕಳ್ಳಿ, ಪೋ: ಕೊಡಸೆ, ತಾ: ಯಲ್ಲಾಪುರ ರವರು ದಿನಾಂಕ: 18-07-2021 ರಂದು 11-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

                      

ಶಿರಸಿ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 69/2021, ಕಲಂ: 3, 7 ಅವಶ್ಯ ವಸ್ತುಗಳ ಕಾಯ್ದೆ-1955 ಹಾಗೂ ಕಲಂ: 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಸಚೀನ ಕಬ್ಬೂರ, ಸಾ|| ಹಾವೇರಿ, 2]. ಬ್ರಿಜೇಶ ಶೆಟ್ಟಿ, ಸಾ|| ಮಂಗಳೂರು, 3]. ಸಂಗಪ್ಪ ಸಿದ್ದಪ್ಪ ಅಸೂಟಿ, ಪ್ರಾಯ-31 ವರ್ಷ, ವೃತ್ತಿ-ಚಾಲಕ, ಸಾ|| ಗುಡ್ಡದಮಲ್ಲಾಪುರ, ತಾ: ಬಾದಾಮಿ, ಜಿ: ಬಾಗಲಕೋಟ, ಹಾಲಿ ಸಾ|| ನಂತೂರು, ಮಂಗಳೂರು. ಈ ನಮೂದಿತ ಆರೋಪಿತರು ಏಕೋದ್ದೇಶದಿಂದ ಸೇರಿಕೊಂಡು ಅವರಲ್ಲಿ ಆರೋಪಿ 1 ನೇಯವನು ಅನಧೀಕೃತವಾಗಿ ಸಂಗ್ರಹಿಸಿಟಿದ್ದ 5,85,000/- ರೂಪಾಯಿ ಮೌಲ್ಯದ ಪಡಿತರ ಚೀಟಿದಾರರಿಗೆ ವಿತರಿಸುವ ಅನ್ನಭಾಗ್ಯ ಯೋಜನೆಯ ಸರ್ಕಾರಿ 26 ಟನ್ ಅಕ್ಕಿಯನ್ನು ಆರೋಪಿ 2 ನೇಯವನ ಸೂಚನೆಯ ಮೇರೆಗೆ ಆರೋಪಿ 3 ನೇಯವನು ಕಂಟೇನರ್ ವಾಹನ ನಂ: ಕೆ.ಎ-19/ಎ.ಬಿ-6689 ನೇದರಲ್ಲಿ ತುಂಬಿಕೊಂಡು ಯಾವುದೇ ಸಂಬಂಧಪಟ್ಟ ಪ್ರಾಧಿಕಾರದಿಂದ ಪಾಸ್ ಯಾ ಪರ್ಮಿಟ್ ಇಲ್ಲದೇ ಅನಧೀಕೃತವಾಗಿ ಹಾವೇರಿ ಕಡೆಯಿಂದ ಮಂಗಳೂರು ಕಡೆಗೆ ಅಕ್ರಮವಾಗಿ ಸಾಗಾಟ ಮಾಡಿಕೊಂಡು ಹೊರಟಿದ್ದಾಗ ದಿನಾಂಕ: 18-07-2021 ರಂದು 04-00 ಗಂಟೆಗೆ ಶಿರಸಿ-ಹುಬ್ಬಳ್ಳಿ ರಸ್ತೆಯ ಚಿಪಗಿ ಸರ್ಕಲ್ ಹತ್ತಿರ ಸಿಕ್ಕ ಬಗ್ಗೆ ಪಿರ್ಯಾದಿ ಶ್ರೀಮತಿ ರೂಪಾ ಸಿ. ಜೋಗಳೆಕರ, ಆಹಾರ ನಿರೀಕ್ಷಕರು, ತಹಶೀಲ್ದಾರ ಕಚೇರಿ, ಶಿರಸಿ ರವರು ದಿನಾಂಕ: 18-07-2021 ರಂದು 08-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

                      

ದಾಂಡೇಲಿ ನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 64/2021, ಕಲಂ: ಗಂಡಸು ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಗಂಡಸು ಸತೀಶ ತಂದೆ ಸಂಗಪ್ಪ ಸಜ್ಜನ್, ಪ್ರಾಯ-32 ವರ್ಷ, ವೃತ್ತಿ-ಡಬ್ಲ್ಯೂ.ಸಿ.ಪಿ.ಎಮ್ ನಲ್ಲಿ ಕೆಲಸ, ಸಾ|| ಭಟ್ ಆಸ್ಪತ್ರೆಯ ಮುಂದೆ, ಟೌನಶಿಪ್, ದಾಂಡೇಲಿ. ಪಿರ್ಯಾದುದಾರಳ ಗಂಡನಾದ ಈತನು ದಿನಾಂಕ: 13-07-2021 ರಂದು 10-30 ಗಂಟೆಗೆ ತನ್ನ ಗೆಳೆಯನ ಮದುವೆಗೆ ಹಳೇ ದಾಂಡೇಲಿಯ ಸಯ್ಯದ್ ಹಾಲ್ ಗೆ ಹೋಗಿ ಬರುತ್ತೇನೆ ಅಂತಾ ಹೇಳಿ ಮನೆಯಿಂದ ಹೋದವನು ಈವರೆಗೂ ಮರಳಿ ಮನೆಗೂ ಬಾರದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದು, ಕಾಣೆಯಾದ ಪಿರ್ಯಾದಿಯ ಗಂಡನನ್ನು ಹುಡುಕಿ ಕೊಡಲು ಕೋರಿದ ಬಗ್ಗೆ ಪಿರ್ಯಾದಿ ಶ್ರೀಮತಿ ಸೋನು ಕೋಂ. ಸತೀಶ ಸಜ್ಜನ, ಪ್ರಾಯ-30 ವರ್ಷ, ವೃತ್ತಿ-ಗೃಹಿಣಿ, ಸಾ|| ಭಟ್ ಆಸ್ಪತ್ರೆಯ ಮುಂದೆ, ಟೌನಶಿಪ್, ದಾಂಡೇಲಿ ರವರು ದಿನಾಂಕ: 18-07-2021 ರಂದು 20-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮುಂಡಗೋಡ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 98/2021, ಕಲಂ: 302 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು ಯಾರೋ ಅಪರಿಚಿತರಾಗಿದ್ದು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಈ ನಮೂದಿತ ಆರೋಪಿತರು ದಿನಾಂಕ: 18-07-2021 ರಂದು ರಾತ್ರಿ 00-30 ಗಂಟೆಯಿಂದ ಬೆಳಿಗ್ಗೆ 07-00 ಗಂಟೆಯ ನಡುವಿನ ಅವಧಿಯಲ್ಲಿ ಮುಂಡಗೋಡ ಪಟ್ಟಣದಿಂದ ನ್ಯಾಸರ್ಗಿ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಹತ್ತಿರ ವಿಜಯ ತಂದೆ ಮಂಜುನಾಥ ಇಳಿಗೇರ, ಪ್ರಾಯ-24 ವರ್ಷ, ವೃತ್ತಿ-ಗೌಂಡಿ ಕೆಲಸ, ಸಾ|| ಕಂಬಾರಗಟ್ಟಿ ಪ್ಲಾಟ್, ಮುಂಡಗೋಡ ಈತನ ಕುತ್ತಿಗೆಯ ಭಾಗದಲ್ಲಿ ಚಾಕುವಿನಿಂದ ಕೊಯ್ದು ತೀವ್ರ ಗಾಯಗೊಳಿಸಿ, ಯಾವುದೋ ಹರಿತವಾದ ಆಯುಧದಿಂದ ಎದೆಯ ಭಾಗದಲ್ಲಿ ಚುಚ್ಚಿ ಕೊಲೆ ಮಾಡಿ, ನ್ಯಾಸರ್ಗಿ ರಸ್ತೆಯ ಪಕ್ಕದ ತಗ್ಗಿನಲ್ಲಿ ಮೃತದೇಹವನ್ನು ಎಸೆದು ಹೋದ ಬಗ್ಗೆ ಪಿರ್ಯಾದಿ ಶ್ರೀ ಮುತ್ತುರಾಜ ತಂದೆ ಚಂದ್ರಪ್ಪ ಇಳಿಗೇರ, ಪ್ರಾಯ-39 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಕಂಬಾರಗಟ್ಟಿ ಪ್ಲಾಟ್, ತಾ: ಮುಂಡಗೋಡ ರವರು ದಿನಾಂಕ: 18-07-2021 ರಂದು 09-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

                      

ಬನವಾಸಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 71/2021, ಕಲಂ: 279, 33, 338 ಐಪಿಸಿ ಹಾಗೂ ಕಲಂ: 187 ಎಮ್.ವಿ ಎಕ್ಟ್ ನೇದ್ದರ ವಿವರ...... ನಮೂದಿತ ಆರೋಪಿತನು ಬಿಳಿ ಬಣ್ಣದ ಬೊಲೆರೋ ಮಾದರಿಯ ವಾಹನದ ಚಾಲಕನಾಗಿದ್ದು, ವಾಹನದ ನಂಬರ್ ಹಾಗೂ ಚಾಲಕನ ಹೆಸರು  ವಿಳಾಸ ತಿಳಿದು ಬಂದಿರುವುದಿಲ್ಲ. ಈತನು ದಿನಾಂಕ: 18-07-2021 ರಂದು 16-15 ಗಂಟೆಗೆ ಶಿರಸಿ ಕಡೆಯಿಂದ ಬನವಾಸಿ ಕಡೆಗೆ ತಾನು ಚಲಾಯಿಸಿಕೊಂಡು ಬಂದ ವಾಹನವನ್ನು ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿ ಹೊಸಕಟ್ಟೆ ಏರಿಯ ಚಂದ್ರಪ್ಪ ಇವರ ಮನೆಯ ಎದುರಿನ ರಸ್ತೆಯಲ್ಲಿ ರಸ್ತೆಯ ಎಡಬದಿಯ ಮಣ್ಣಿನ ರಸ್ತೆಯ ಮೇಲೆ ನಡೆದುಕೊಂಡು ಹೋಗುತ್ತಿದ್ದ 1). ಪಿರ್ಯಾದಿ, 2). ಶಾರದಾ ಶಿವಣ್ಣ ವಡ್ಡರ, 3). ಗೀತಾ ಸತೀಶ ಆರೇರ, 4). ಮಂಜಮ್ಮ ಬಸವಂತಪ್ಪ ವಡ್ಡರ, 5). ಮಮತಾ ರವಿ ಆರೇರ, 6). ಸರೋಜಾ ಶೇಖಪ್ಪ ವಡ್ಡರ, 7). ಶಾರದಾ ರಾಮು ಬಂಡೇರ, ಸಾ|| (ಎಲ್ಲರೂ) ಬನವಾಸಿ, ತಾ: ಶಿರಸಿ ಇವರಿಗೆ ಡಿಕ್ಕಿ ಹೊಡೆದು ರಸ್ತೆ ಅಪಘಾತ ಪಡಿಸಿ ಶಾರದಾ ಶಿವಣ್ಣ ವಡ್ಡರ, ಮಮತಾ ಆರೇರ, ಸರೋಜಾ ಇವರಿಗೆ ಗಂಭೀರ ಸ್ವರೂಪದ ರಕ್ತಗಾಯ ಪಡಿಸಿದ್ದಲ್ಲದೇ, ಪಿರ್ಯಾದಿ, ಗೀತಾ ಆರೇರ, ಮಂಜಮ್ಮ, ಶಾರದಾ ಬಂಡೇರ ಇವರಿಗೆ ಸಾದಾ ಸ್ವರೂಪದ ರಕ್ತಗಾಯ ಪಡಿಸಿದ್ದಲ್ಲದೇ, ಆರೋಪಿ ವಾಹನ ಚಾಲಕನು ಅಪಘಾತದಲ್ಲಿ ಗಾಯಗೊಂಡವರಿಗೆ ಆಸ್ಪತ್ರೆಗೆ ಉಪಚಾರಕ್ಕೆ ದಾಖಲಿಸಿದೇ ಹಾಗೂ ಅಪಘಾತದ ವಿಷಯವನ್ನು ಹತ್ತಿರದ ಪೊಲೀಸ್ ಠಾಣೆಗೆ ತಿಳಿಸದೇ ವಾಹನದ ಸಮೇತ ಸ್ಥಳದಿಂದ ಪರಾರಿಯಾದ ಬಗ್ಗೆ ಪಿರ್ಯಾದಿ ಶ್ರೀಮತಿ ಲಕ್ಷ್ಮೀ ಕೋಂ. ಕೆರೆಸ್ವಾಮಿ ವಡ್ಡರ, ಪ್ರಾಯ-37 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಚರ್ಚ್ ರಸ್ತೆ, ಬನವಾಸಿ, ತಾ: ಶಿರಸಿ ರವರು ದಿನಾಂಕ: 18-07-2021 ರಂದು 19-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 18-07-2021

at 00:00 hrs to 24:00 hrs

 

ಕಾರವಾರ ಶಹರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 21/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಮಂಜುನಾಥ ತಂದೆ ಜಾನು ಬಾನಾವಳಿ, ಪ್ರಾಯ-37 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ಸರ್ವೋದಯ ನಗರ, ಕೋಡಿಬಾಗ, ಕಾರವಾರ. ಈತನು ವಿಪರೀತ ಕುಡಿತದ ಚಟವನ್ನು ಹೊಂದಿದವನಾಗಿದ್ದು, ಜೊತೆಗೆ ತಂಬಾಕು ವ್ಯಸನಿಯಾಗಿದ್ದು, ಹೀಗಿರುವಾಗ ದಿನಾಂಕ: 17-07-2021 ರಂದು ಸಾಯಂಕಾಲ ತನ್ನ ಮನೆಯಲ್ಲಿದ್ದಾಗ ವಿಪರೀತ ಹೊಟ್ಟೆನೋವು ಎಂದು ಒದ್ದಾಡುತ್ತಿದ್ದವನನ್ನು ಪಿರ್ಯಾದಿಯವರು ಹಾಗೂ ಇತರರು ಸೇರಿ ಚಿಕಿತ್ಸೆಗೆಂದು 108 ಆಂಬ್ಯುಲೆನ್ಸ್ ಮೂಲಕ ಜಿಲ್ಲಾ ಸರ್ಕಾರಿ ಆಸ್ಪತ್ರೆ ಕಾರವಾರಕ್ಕೆ ಕರೆತಂದು ದಾಖಲಿಸಿದ್ದು, ಪರೀಕ್ಷಿಸಿದ ವೈದ್ಯರು ಸದರಿ ಮೃತನನ್ನು ಆಸ್ಪತ್ರಗೆ ಚಿಕಿತ್ಸೆಗೆ ಕರೆತರುವ ಪೂರ್ವದಲ್ಲಿಯೇ ಮೃತಪಟ್ಟಿರುವುದಾಗಿ ತಿಳಿಸಿದ್ದು, ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಲು ಕೋರಿದ ಬಗ್ಗೆ ಪಿರ್ಯಾದಿ ಶ್ರೀ ರಾಘವೇಂದ್ರ ತಂದೆ ಜಾನು ಬಾನಾವಳಿ, ಪ್ರಾಯ-35 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ಸರ್ವೋದಯ ನಗರ, ಕೋಡಿಬಾಗ, ಕಾರವಾರ ರವರು ದಿನಾಂಕ: 18-07-2021 ರಂದು 10-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಶಿರಸಿ ಗ್ರಾಮೀಣ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 23/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತಳಾದ ಕುಮಾರಿ: ನಾಗರತ್ನ ತಂದೆ ಶಿವು ಗೌಡ, ಪ್ರಾಯ-17 ವರ್ಷ, 11 ತಿಂಗಳು, ವೃತ್ತಿ-ವಿದ್ಯಾರ್ಥಿನಿ, ಸಾ|| ಕೆಳಸೆ, ಕುದ್ರಗೋಡ ಗ್ರಾಮ, ಪೋ: ದೇವನಳ್ಳಿ, ತಾ: ಶಿರಸಿ. ಪಿರ್ಯಾದಿಯ ಮಗಳಾದ ಇವಳು ಶಿರಸಿಯ ಮಾರಿಕಾಂಬಾ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದಳು, ಕೋವಿಡ್-19 ಕೊರೋನಾ ವೈರಸ್ ಹಿನ್ನಲೆಯಲ್ಲಿ ಲಾಕಡೌನ್ ನಿಮಿತ್ತ ಕಾಲೇಜುಗಳು ಬಂದಾಗಿದ್ದವು, ಮನೆಯಲ್ಲಿಯೇ ಆನಲೈನ್ ಮುಖಾಂತರ ಅಭ್ಯಾಸ ಮಾಡಲು ಮೊಬೈಲ್ ನೆಟವರ್ಕ್ ಬರುತ್ತಿರಲಿಲ್ಲ, ಪರೀಕ್ಷೆಯನ್ನು ನಾನು ಹೇಗೆ ಬರೆಯಲಿ ಅಂತಲೂ ಅಥವಾ ಕಾಲೇಜ್ ಇನ್ನು ಶುರುವಾಗಲಿಲ್ಲ ಅಂತಲೂ ಅಥವಾ ಯಾವುದೂ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ಮಾನಸಿಕ ಖಿನ್ನತೆಗೆ ಒಳಗಾಗಿದ್ದವಳಿಗೆ ಕಳೆದ 7 ತಿಂಗಳಿಂದ ಅವಳಿಗೆ ನಾವು ಮಂಗಳೂರಿನ ಕೆ.ಎಸ್ ಹೆಗಡೆ ಆಸ್ಪತ್ರೆಗೆ ತೋರಿಸುತ್ತಿರುವುದನ್ನು ಕಂಡು ಅದನ್ನೇ ಮನಸ್ಸಿಗೆ ಹಚ್ಚಿಕೊಂಡು ದಿನಾಂಕ: 18-07-2021 ರಂದು 03-00 ಗಂಟೆಯಿಂದ 05-30 ಗಂಟೆಯ ನಡುವಿನ ಅವಧಿಯಲ್ಲಿ ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಮನೆಯ ಸಾಮಗ್ರಿಗಳನ್ನು ಇಡುವ ಕೋಣೆಯ ಛಾವಣಿಯ ಮುಂಡಿಗೆ ನೈಲಾನ್ ಹಗ್ಗದಿಂದ ಕುತ್ತಿಗೆಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರಲ್ಲಿ ಯಾವುದೇ ಸಂಶಯ ಇರುವುದಿಲ್ಲ. ಆದರೂ ಅವಳು ಇನ್ನಾವುದಾದರೂ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿರುವುಳೋ ಹೇಗೋ ಎನ್ನುವ ಬಗ್ಗೆ ಕೂಲಂಕುಷವಾಗಿ ತನಿಖೆ ಮಾಡಿ ಮುಂದಿನ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಶಿವು ತಂದೆ ಈರು ಗೌಡ, ಪ್ರಾಯ-56 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಕೆಳಸೆ, ಕುದ್ರಗೋಡ ಗ್ರಾಮ, ಪೋ: ದೇವನಳ್ಳಿ, ತಾ: ಶಿರಸಿ ರವರು ದಿನಾಂಕ: 18-07-2021 ರಂದು 19-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

ಇತ್ತೀಚಿನ ನವೀಕರಣ​ : 19-07-2021 01:52 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080