ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 18-06-2021

at 00:00 hrs to 24:00 hrs

 

ಅಂಕೋಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 101/2021, ಕಲಂ: ಹುಡುಗಿ ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಹುಡುಗಿ ಕುಮಾರಿ: ದೀಕ್ಷಿತಾ ತಂದೆ ರಾಜನ್ ಹುಲ್ಸವಾರ, ಪ್ರಾಯ-20 ವರ್ಷ, ವೃತ್ತಿ-ಕರ್ನಾಟಕ ವೈಭವ ಬಟ್ಟೆ ಅಂಗಡಿಯಲ್ಲಿ ಕೆಲಸ, ಸಾ|| ಅಂಬೇಡ್ಕರ್ ಕಾಲೋನಿ, ನೀಲಂಪುರ, ತಾ: ಅಂಕೋಲಾ. ಸುದ್ದಿದಾರರ ಮಗಳಾದ ಇವಳು ದಿನಾಂಕ: 16-06-2021 ರಂದು ಬೆಳಿಗ್ಗೆ ಸುಮಾರು 09-00 ಗಂಟೆಗೆ ತನ್ನ ಮನೆಯಾದ ಅಂಬೇಡ್ಕರ್ ಕಾಲೋನಿ, ನೀಲಂಪುರ, ತಾ: ಅಂಕೋಲಾದಿಂದ ಬೆಳೆ ತರುತ್ತೆನೆಂದು ಮನೆಯಿಂದ ಹೋದವಳು, ವಾಪಸ್ ಮನೆಗೆ ಬಾರದೇ ಯಾರಿಗೂ ಹೇಳದೇ ಎಲ್ಲಿಯೋ ಹೋಗಿ ಕಾಣೆಯಾಗಿರುತ್ತಾಳೆ. ಕಾಣೆಯಾದ ತನ್ನ ಮಗಳನ್ನು ಹುಡುಕಿ ಕೊಡಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ರಾಜನ್ ತಂದೆ ಶಿವರಾಯ ಹುಲ್ಸವಾರ, ಪ್ರಾಯ-47 ವರ್ಷ, ವೃತ್ತಿ-ಸೆಂಟ್ರಿಂಗ್ ಕೆಲಸ, ಸಾ|| ಅಂಬೇಡ್ಕರ್ ಕಾಲೋನಿ, ನೀಲಂಪುರ, ತಾ: ಅಂಕೋಲಾ ರವರು ದಿನಾಂಕ: 18-06-2021 ರಂದು 20-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 118/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ರಾಮಾ ತಂದೆ ನಾರಾಯಣ ಪಟಗಾರ, ಪ್ರಾಯ-46 ವರ್ಷ, ವೃತ್ತಿ-ಪಾನ್ ಶಾಫ್, ಸಾ|| ಚಿತ್ರಗಿ, ತಾ: ಕುಮಟಾ. ಈತನು ದಿನಾಂಕ: 18-06-2021 ರಂದು 12-30 ಗಂಟೆಗೆ ಕುಮಟಾ ಪಟ್ಟಣದ ಮೂರ್ಕಟ್ಟೆ ರಿಕ್ಷಾ ಸ್ಟ್ಯಾಂಡ್ ಎದುರಿಗೆ ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡು ತನ್ನ ಲಾಭಕ್ಕಾಗಿ ಬರ-ಹೋಗುವ ಜನರಿಗೆ 01/- ರೂಪಾಯಿಗೆ 80/- ರೂಪಾಯಿ ಕೊಡುವುದಾಗಿ ಹೇಳಿ ಜನರಿಂದ ಹಣವನ್ನು ಪಡೆದುಕೊಂಡು ಅದನ್ನು ಅಂಕೆ-ಸಂಖ್ಯೆಗಳ ಮೇಲೆ ಪಂಥ ಕಟ್ಟಿ ಓ.ಸಿ ಮಟಕಾ ಜೂಗಾರಾಟ ನಡೆಸುತ್ತಿದ್ದಾಗ ನಗದು ಹಣ 810/- ರೂಪಾಯಿ ಹಾಗೂ ಓ.ಸಿ ಜೂಗಾರಾಟದ ಸಲಕರಣೆಗಳೊಂದಿಗೆ ದಾಳಿಯ ವೇಳೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ರವಿ ಗುಡ್ಡಿ ಪಿ.ಎಸ್.ಐ (ಕಾ&ಸು-1), ಕುಮಟಾ ಪೊಲೀಸ್ ಠಾಣೆ ರವರು ದಿನಾಂಕ: 18-06-2021 ರಂದು 19-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 168/2021, ಕಲಂ: 3, 7 ಅಗತ್ಯ ವಸ್ತುಗಳಕಾಯ್ದೆ-1955 ನೇದ್ದರ ವಿವರ...... ನಮೂದಿತ ಆರೋಪಿತ ರೋಶನ್ ತಂದೆ ಫೆಲಿಕ್ಸ್ ಫರ್ನಾಂಡೀಸ್, ಸಾ|| ಕಾಸರಕೋಡ, ತಾ: ಹೊನ್ನಾವರ. ಈತನು ದಿನಾಂಕ: 18-06-2021 ರಂದು 12-00 ಗಂಟೆಗೆ ಹೊನ್ನಾವರ ತಾಲೂಕಿನ ಕಾಸರಕೋಡ ಗ್ರಾಮದ ನ್ಯಾಯಬೆಲೆ ಅಂಗಡಿ, ಹಿರೇಮಠದ ಪಕ್ಕದಲ್ಲಿರುವ ಕಟ್ಟಡದಲ್ಲಿ ಅನಧೀಕೃತವಾಗಿ ಯಾವದೇ ಪಾಸ್ ಯಾ ಪರ್ಮಿಟ್ ಇಲ್ಲದೇ ಪಿ.ಡಿ.ಎಸ್ (ಪಬ್ಲಿಕ್ ಡಿಸ್ಟ್ರಿಬ್ಯೂಷನ್ ಸಿಸ್ಟಮ್) ಗೆ ಸಂಬಂಧಿಸಿದ ತಲಾ 50 ಕೆ.ಜಿ, 20 ಅಕ್ಕಿ ತುಂಬಿದ ಅಂದಾಜು 23,000/- ರೂಪಾಯಿ ಮೌಲ್ಯದ ಮೂಟೆಗಳನ್ನು ಸಂಗ್ರಹಿಸಿಟ್ಟುಕೊಂಡ ಬಗ್ಗೆ ಪಿರ್ಯಾದಿ ಶ್ರೀ ವೇಂಕಟ್ರಮಣ ಎಮ್. ಹಳದಿಪುರ, ಪ್ರಾಯ-53 ವರ್ಷ, ವೃತ್ತಿ-ಆಹಾರ ನಿರೀಕ್ಷಕರು, ಸಾ|| ಪ್ರಭಾತನಗರ, ತಾ: ಹೊನ್ನಾವರ ರವರು ದಿನಾಂಕ: 18-06-2021 ರಂದು 19-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮಂಕಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 92/2021, ಕಲಂ: 279, 337 ಐಪಿಸಿ ಹಾಗೂ ಕಲಂ: 187 ಎಮ್.ವಿ ಎಕ್ಟ್ ನೇದ್ದರ ವಿವರ...... ನಮೂದಿತ ಆರೋಪಿತನು ಕಂಟೇನರ್ ವಾಹನ ನಂ: ಎಮ್.ಎಚ್-03/ಸಿ.ವಿ-2776 ನೇದರ ಚಾಲಕನಾಗಿದ್ದು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಈತನು ತನ್ನ ಕಂಟೇನರ್ ವಾಹನ ನಂ: ಎಮ್.ಎಚ್-03/ಸಿ.ವಿ-2776 ನೇದನ್ನು ಭಟ್ಕಳ ಕಡೆಯಿಂದ ಚಲಾಯಿಸಿಕೊಂಡು ಬಂದು ಕೆರೆಮನೆ ಹತ್ತಿರ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದನ್ನು ದಿನಾಂಕ: 18-06-2021 ರಂದು 13-30 ಗಂಟೆಗೆ ಹೊನ್ನಾವರ ಕಡೆಗೆ ಹೋಗಲು ಅದೇ ಮಾರ್ಗವಾಗಿ ಹಿಂದಿನಿಂದ ಬರುವ ವಾಹನಗಳನ್ನು ನೋಡದೇ ಸಿಗ್ನಲ್ ಕೊಡದೇ ನಿಷ್ಕಾಳಜೀತನದಿಂದ ಒಮ್ಮೆಲೇ ರಸ್ತೆಯ ಮೇಲೆ ಚಲಾಯಿಸಿ, ಅದೇ ರಸ್ತೆಯಲ್ಲಿ ಮಂಕಿ ಕಡೆಯಿಂದ ಹೊಸಪಟ್ಟಣ ಕಡೆಗೆ ಹೋಗಲು ಬುರುತ್ತಿದ್ದ ಪಿರ್ಯಾದಿಯ ಮೋಟಾರ್ ಸೈಕಲಿಗೆ ತಾಗಿಸಿ, ಪಿರ್ಯಾದಿ ಹಾಗೂ ಪಿರ್ಯಾದಿಯ ಮೋಟಾರ್ ಸೈಕಲ್ ಹಿಂಬದಿಯಲ್ಲಿ ಕುಳಿತ ಪಿರ್ಯಾದಿಯ ತಂದೆ ಮಾಬ್ಲೇಶ್ವರ ನಾಯ್ಕ ಇವರಿಗೆ ಮೋಟಾರ್ ಸೈಕಲ್ ಸಮೇತ ಬೀಳಿಸಿ, ಪಿರ್ಯಾದಿಗೆ ಸಣ್ಣಪುಟ್ಟ ಗಾಯನೋವು ಹಾಗೂ ಮಾಬ್ಲೇಶ್ವರ ನಾಯ್ಕ ಇವರ ತಲೆಗೆ ರಕ್ತಗಾಯ ಹಾಗೂ ಮೈಕೈಗೆ ಒಳನೋವು ಪಡಿಸಿದ್ದಲ್ಲದೇ, ತನ್ನ ಕಂಟೇನರ್ ವಾಹನವನ್ನು ಸ್ಥಳದಲ್ಲಿ ನಿಲ್ಲಿಸದೇ ಚಲಾಯಿಸಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀ ರವಿ ತಂದೆ ಮಾಬ್ಲೇಶ್ವರ ನಾಯ್ಕ, ಪ್ರಾಯ-28 ವರ್ಷ, ವೃತ್ತಿ-ವೆಲ್ಡಿಂಗ್ ವರ್ಕ್ಸ್, ಸಾ|| ಹೊಸಪಟ್ಟಣ, ತಾ: ಹೊನ್ನಾವರ ರವರು ದಿನಾಂಕ: 18-06-2021 ರಂದು 17-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 41/2021, ಕಲಂ: 269, 270 ಐಪಿಸಿ ಹಾಗೂ ಕಲಂ: 87 ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ಫಯಾಜ್ ತಂದೆ ಬಸೀರ್ ಅಹಮ್ಮದ್ ಶೇಖ್, ಪ್ರಾಯ-33 ವರ್ಷ, ವೃತ್ತಿ-ವ್ಯಾಪಾರ, ಸಾ|| ರಾಜೀವ ನಗರ, ತಾ: ಶಿರಸಿ, 2]. ಹಸನ್ ತಂದೆ ಹಯತ್ ಸಾಬ್ ಬೆಣ್ಣೆ, ಪ್ರಾಯ-49 ವರ್ಷ, ವೃತ್ತಿ-ವ್ಯಾಪಾರ, ಸಾ|| ರಾಜೀವ ನಗರ, ತಾ: ಶಿರಸಿ, 3]. ಅಸ್ಫಾಕ್ ತಂದೆ ಅನ್ವರಸಾಬ್ ಮದರಂಗಿ, ಪ್ರಾಯ-24 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ರಾಜೀವ ನಗರ, ತಾ: ಶಿರಸಿ, 4]. ಶಕೀಲ್ ತಂದೆ ಅನ್ವರಸಾಬ್ ಶೇಖ್, ಪ್ರಾಯ-20 ವರ್ಷ, ವೃತ್ತಿ-ಚಿಕನ್ ವ್ಯಾಪಾರ, ಸಾ|| ರಾಜೀವ ನಗರ, ತಾ: ಶಿರಸಿ, 5]. ಅದ್ನಾನ್ ತಂದೆ ಅಬ್ದಲ್ ಖುದ್ದುಸ್ ಖತೀಬ್, ಪ್ರಾಯ-22 ವರ್ಷ, ವೃತ್ತಿ-ಕ್ಲೀನರ್, ಸಾ|| ರಾಜೀವ ನಗರ, ತಾ: ಶಿರಸಿ, 6]. ಸಲ್ಮಾನ್ ತಂದೆ ಮಕ್ಬೂಲ್ ಸಾಬ್ ಕಲ್ಕೇರಿ, ಪ್ರಾಯ-23 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ರಾಜೀವ ನಗರ, ತಾ: ಶಿರಸಿ. ಈ ನಮೂದಿತ ಆರೋಪಿತರು ಮಾನ್ಯ ಕರ್ನಾಟಕ ಸರ್ಕಾರ, ಬೆಂಗಳೂರು ಮತ್ತು ಮಾನ್ಯ ಜಿಲ್ಲಾಧಿಕಾರಿಗಳು, ಉತ್ತರ ಕನ್ನಡ ಜಿಲ್ಲೆ, ಕಾರವಾರ ರವರ ಅಧೀಕೃತ ಆದೇಶದಂತೆ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಸಾಂಕ್ರಾಮಿಕ ರೋಗವಾದ ಕೋವಿಡ್-19 (ಕೊರೋನಾ ವೈರಾಣು) ಖಾಯಿಲೆ ಹರಡದಂತೆ ತಡೆಗಟ್ಟುವ ಸಲುವಾಗಿ ಕೊರೋನಾ ಕರ್ಫ್ಯೂ (ಲಾಕಡೌನ್) ಜಾರಿ ಮಾಡಿದ ಬಗ್ಗೆ ತಿಳಿದಿದ್ದರೂ ಸಹ ದಿನಾಂಕ: 18-06-2021 ರಂದು 17-30 ಗಂಟೆಗೆ ಶಿರಸಿ ಶಹರದ ರಾಜೀವ ನಗರದ ಅಂಗನವಾಡಿಯ ಹತ್ತಿರ ಮೈದಾನದಲ್ಲಿ ಇರುವ ಮರದ ಕೆಳಗೆ ಸಾರ್ವಜನಿಕ ಸ್ಥಳದಲ್ಲಿ ತಮ್ಮ ಅನ್ಯಾಯದ ಲಾಭಕ್ಕೋಸ್ಕರ ಅಂದರ್-ಬಾಹರ್ ಇಸ್ಪೀಟ್ ಜುಗಾರಾಟ ಆಡುತ್ತಿರುವಾಗ ಆರೋಪಿ 1 ರಿಂದ 6 ನೇಯವರ ತಾಬಾ ಹಾಗೂ ಮಂಡದ ಮೇಲೆ ಸಿಕ್ಕ ಒಟ್ಟು ನಗದು ಹಣ ಒಟ್ಟೂ 2,040/- ರೂಪಾಯಿ, 52 ಇಸ್ಪೀಟ್ ಎಲೆಗಳು, ಮಂಡಕ್ಕೆ ಹಾಸಲು ಬಳಸಿದ ಟವೆಲ್ ಇವುಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ರಾಮಚಂದ್ರ ನಾಯಕ, ಪೊಲೀಸ್ ವೃತ್ತ ನಿರೀಕ್ಷಕರು, ಶಿರಸಿ ವೃತ್ತ, ಶಿರಸಿ ರವರು ದಿನಾಂಕ: 18-06-2021 ರಂದು 19-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ಹೊಸಮಾರುಕಟ್ಟೆ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 53/2021, ಕಲಂ: ಗಂಡಸು ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಗಂಡಸು ಶ್ರೀ ಮಹ್ಮದ್ ಇಮ್ತಿಯಾಜ್ ತಂದೆ ಮಹ್ಮದ್ ಅಬ್ಬಾಸ್ ಶೇಖ್, ಪ್ರಾಯ-47 ವರ್ಷ, ವೃತ್ತಿ-ಹಣ್ಣಿನ ವ್ಯಾಪಾರ, ಸಾ|| ಮುಸ್ಲಿಂ ಗಲ್ಲಿ, ತಾ: ಶಿರಸಿ. ಪಿರ್ಯಾದಿಯವರ ತಮ್ಮನಾದ ಈತನು ಸರಾಯಿ ಕುಡಿಯುವ ಹವ್ಯಾಸ ಹೊಂದಿದ್ದವನು, ಆಗಾಗ ಕೆಲಸಕ್ಕೆ ಅಂತಾ ಮನೆಯಿಂದ ಹೋದವನು, ತಿಂಗಳುಗಟ್ಟಲೆ ಹೊರಗೆ ಉಳಿದು ಮನೆಗೆ ಬಂದು ಹೋಗುವುದು ಮಾಡುತ್ತಾ ಬಂದಿದ್ದವನು. ದಿನಾಂಕ: 12-04-2021 ರಂದು ಬೆಳಿಗ್ಗೆ 09-00 ಗಂಟೆಯ ಸುಮಾರಿಗೆ ಶ್ರೀ ಫೈರೋಜ್ ಅಹ್ಮದ್ ತಂದೆ ಅಬ್ದುಲ್ ರಜಾಕ್ ಬನವಾಸಿ, ಈತನೊಂದಿಗೆ ಲಾರಿ ಕ್ಲೀನರ್ ಕೆಲಸಕ್ಕೆ ಅಂತಾ ಮನೆಯಿಂದ ಹೋದವನು, ಲಾರಿ ಮೇಲಾಗಿ ಗುಜರಾತ್, ಅಹ್ಮದಾಬಾದ್ ಗೆ ಹೋಗಿ, ಅಲ್ಲಿಂದ ಚಿಕ್ಕಮಗಳೂರಿಗೆ ಬಾಡಿಗೆಗೆ ಹೋಗಿ, ದಿನಾಂಕ: 20-04-2021 ರಂದು 20-30 ಗಂಟೆಯ ಸುಮಾರಿಗೆ ಚಿಕ್ಕಮಗಳೂರಿನಿಂದ ಮರಳಿ ಶಿರಸಿಗೆ ಬಂದು ಲಾರಿ ಚಾಲಕನು ಜೈವಂತ ಹಾರ್ಡವೇರ್ ಹತ್ತಿರ ಹುಬ್ಬಳ್ಳಿ ರಸ್ತೆಯಲ್ಲಿ ಇಳಿಸಿದ್ದು. ನಮೂದಿತನು ಅಲ್ಲಿಂದ ಲಾರಿ ಚಾಲಕನಿಗೆ ಮನೆಗೆ ಹೋಗುತ್ತೆನೆ ಅಂತಾ ಹೇಳಿ ಅಲ್ಲಿಂದ ಹೋದವನು, ಈವರೆಗೆ ಮನೆಗೆ ಬಾರದೇ ಕೆಲಸಕ್ಕೆ ಹೋಗದೇ, ಎಲ್ಲಿಯೋ ಹೋಗಿ ಕಾಣೆಯಾಗಿದ್ದು, ಕಾಣೆಯಾದ ತನ್ನ ತಮ್ಮನ ಬಗ್ಗೆ ಗುಜರಾತಗೆ ಕರೆದುಕೊಂಡು ಹೋಗಿದ್ದ ಲಾರಿ ಚಾಲಕನಿಂದ ವಿಷಯ ತಿಳಿದು, ನಂತರ ಕಾಣೆಯಾದವನು ಈ ಹಿಂದೆ ಕೆಲಸಕ್ಕೆ ಹೋಗುತ್ತಿದ್ದ ಲಾರಿ ಚಾಲಕರುಗಳಿಗೆ ಮತ್ತು ಸಂಬಂಧಿಕರಲ್ಲಿ ವಿಚಾರಿಸಿ ಆತನ ಪತ್ತೆಗೆ ಪ್ರಯತ್ನಿಸಿ ಪತ್ತೆಯಾಗದೇ ಇದ್ದುದರಿಂದ ಕಾಣೆಯಾದ ತನ್ನ ತಮ್ಮನನ್ನು ಹುಡುಕಿ ಕೊಡಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಮೊಹ್ಮದ್ ಖಾಸಿಂ ತಂದೆ ಮಹ್ಮದ್ ಅಬ್ಬಾಸ್ ಶೇಖ್, ಪ್ರಾಯ-51 ವರ್ಷ, ವೃತ್ತಿ-ಗೌಂಡಿ ಕೆಲಸ, ಸಾ|| ಮುಸ್ಲಿಂ ಗಲ್ಲಿ, ತಾ: ಶಿರಸಿ ರವರು ದಿನಾಂಕ: 18-06-2021 ರಂದು 20-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹಳಿಯಾಳ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 117/2021, ಕಲಂ: 143, 147, 323, 341, 504, 506 ಸಹಿತ 149 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಚಂದ್ರಕಾಂತ ತಂದೆ ದೇವೇಂದ್ರ ಸೋನಾರ, ಪ್ರಾಯ-52 ವರ್ಷ, ವೃತ್ತಿ-ಕೃಷಿ ಕೆಲಸ, 2]. ವಿನಾಯಕ ತಂದೆ ಶಂಕರ ಸೋನಾರ, ಪ್ರಾಯ-53 ವರ್ಷ, ವೃತ್ತಿ-ಕೃಷಿ ಕೆಲಸ, 3]. ಮಾರುತಿ ತಂದೆ ದೇವೆಂದ್ರ ಸೋನಾರ, ಪ್ರಾಯ-55 ವರ್ಷ, ವೃತ್ತಿ-ಕೃಷಿ ಕೆಲಸ, 4]. ಹನುಮಂತ ತಂದೆ ಅಪ್ಪಾರಾವ್ ಗೌಡ, ಪ್ರಾಯ-42 ವರ್ಷ, ವೃತ್ತಿ-ಕೃಷಿ ಕೆಲಸ, 5]. ಸಚಿನ್ ತಂದೆ ಚಂದ್ರಕಾಂತ ಸೋನಾರ, ಸಾ|| (ಎಲ್ಲರೂ) ನಂದಿಗದ್ದಾ ಗ್ರಾಮ, ತಾ: ಹಳಿಯಾಳ, 6]. ನಾಗರಾಜ @ ರಾಜು ತಂದೆ ಕೃಷ್ಣಪ್ಪಾ ಸೋನಾರ, ಪ್ರಾಯ-43 ವರ್ಷ, ಸಾ|| ಬೆಳವಟಿಗೆ ಗ್ರಾಮ, ತಾ: ಹಳಿಯಾಳ. ಈ ನಮೂದಿತ ಆರೋಪಿತರು ಪಿರ್ಯಾದಿಯವರ ಊರಿನವರಿದ್ದು, ದಿನಾಂಕ: 17-06-2021 ರಂದು ರಾತ್ರಿ 22-30 ಗಂಟೆಯ ಸುಮಾರಿಗೆ ಹಳಿಯಾಳ ತಾಲೂಕಿನ ನಂದಿಗದ್ದಾ ಗ್ರಾಮದಲ್ಲಿ ಪಿರ್ಯಾದಿಯವರು ತಮ್ಮ ಮನೆಯ ಮುಂದೆ ನಿಂತುಕೊಂಡಿದ್ದಾಗ ಆರೋಪಿ 1 ನೇಯವನು ಪಿರ್ಯಾದಿಯವರೊಂದಿಗೆ ದ್ವೇಷದಿಂದ ಇದ್ದವನು, ಉಳಿದ ಆರೋಪಿ 2 ರಿಂದ 6 ನೇಯವರನ್ನು ಕರೆದುಕೊಂಡು ಏಕೋದ್ದೇಶದಿಂದ ಸಂಘನಮತ ಮಾಡಿಕೊಂಡು ದೊಂಬಿ ಮಾಡುವ ಉದ್ದೇಶದಿಂದ ಪಿರ್ಯಾದಿಯವರಿಗೆ ಅಡ್ಡಗಟ್ಟಿ ‘ಏ ಪೋದ್ರಿಚಾ ಮಗನಾ, ನಿನ್ನದು ಬಾಳ ಅಯಿತು’ ಅಂತಾ ಅವಾಚ್ಯವಾಗಿ ಬೈಯ್ದುದಲ್ಲದೇ, ಪಿರ್ಯಾದಿಯವರಿಗೆ ಕೈಯಿಂದ ಬೆನ್ನಿಗೆ ಮೈ ಕೈಗೆ ಅಲ್ಲಲ್ಲಿ ಹೊಡೆದು ದುಃಖಾಪತ್ ಪಡಿಸಿದಕ್ಕೆ, ಪಿರ್ಯಾದಿಯವರು ಆರೋಪಿತರಿಗೆ ‘ಯಾಕೆ ಹೊಡೆಯುತ್ತೀರಿ?’ ಅಂತಾ ಕೇಳಿದ್ದಕ್ಕೆ, ‘ಮಗನೇ ನಿನ್ನದು ಅತೀ ಆಯಿತು. ಮನೆಯಲ್ಲಿ ಸುಮ್ಮನೇ ಇರಲಿಕ್ಕೆ ಆಗೋಲ್ಲವಾ? ನಿನ್ನದು ಧಿಮಾಕು ಜಾಸ್ತಿಯಾಗಿದೆ’ ಅಂತಾ ಹೇಳಿ ಹಲ್ಲೆ ಮಾಡುತ್ತಿದ್ದಾಗ ಜಗಳವನ್ನು ಬಿಡಿಸಲು ಬಂದ ಪಿರ್ಯಾದಿಯ ತಂದೆ-ತಾಯಿಯವರಿಗೂ ಸಹ ಅವಾಚ್ಯವಾಗಿ ಬೈಯ್ದು, ಸದರ ಆರೋಪಿತರೆಲ್ಲರೂ ಕೂಡಿ ಅಲ್ಲಿಂದ ಹೋಗುವಾಗ ಪಿರ್ಯಾದಿಯವರಿಗೆ ಉದ್ದೇಶಿಸಿ, ‘ಈ ಬಾರಿ ನೀನು ಉಳಿದುಕೊಂಡಿದ್ದಿಯಾ. ಇನ್ನೊಮ್ಮೆ ಸಿಕ್ಕಲ್ಲಿ ನಿನಗೆ ಬಿಡುವುದಿಲ್ಲ. ಕೊಂದೇ ಬಿಡುತ್ತೇವೆ’ ಅಂತಾ ಜೀವದ ಬೆದರಿಕೆ ಹಾಕಿದ ಬಗ್ಗೆ ಪಿರ್ಯಾದಿ ಮಂಜುನಾಥ ತಂದೆ ರಾಮಕೃಷ್ಣ ಸೋನಾರ, ಪ್ರಾಯ-30 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ನಂದಿಗದ್ದಾ ಗ್ರಾಮ, ತಾ: ಹಳಿಯಾಳ ರವರು ದಿನಾಂಕ: 18-06-2021 ರಂದು 19-50 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 18-06-2021

at 00:00 hrs to 24:00 hrs

 

ಹೊನ್ನಾವರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 19/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತಳು ಸುಮಾರು 40-45 ವರ್ಷ ಪ್ರಾಯದ ಅಪರಿಚಿತ ಮಹಿಳೆಯಾಗಿದ್ದು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ದಿನಾಂಕ: 18-6-2021 ರಂದು ಮಧ್ಯಾಹ್ನ ಪಿರ್ಯಾದಿಯು ತನ್ನ ಮನೆಯಲ್ಲಿದ್ದಾಗ ಕಾಸರಕೋಡ ಟೊಂಕಾದ ಜೈನ ಜಟಕೇಶ್ವರ ದೇವಸ್ಥಾನದ ಹಿಂದಿನ ಅರಬ್ಬೀ ಸಮುದ್ರದ ತೀರದಲ್ಲಿ ಒಬ್ಬ ಹೆಂಗಸಿನ ಶವ ಸಮುದ್ರದಲ್ಲಿ ತೇಲಿ ಬಂದು ದಡದಲ್ಲಿ ಬಿದ್ದಿದ್ದು ಇರುತ್ತದೆ ಅಂತಾ ಊರಿನ ಜನರಿಂದ ವಿಷಯ ತಿಳಿದು ಸಮಯ 03-00 ಗಂಟೆಯ ಸುಮಾರಿಗೆ ಅಲ್ಲಿಗೆ ಹೋಗಿ ನೋಡಿದ್ದರಲ್ಲಿ ಸುಮಾರು 40 ರಿಂದ 45 ವರ್ಷ ವಯಸ್ಸಿನ ಹೆಂಗಸಿನ ಶವ ಸಮುದ್ರ ತೀರದಲ್ಲಿ ಇದ್ದಿದ್ದು ಇರುತ್ತದೆ. ಅವಳ ಗುರುತು ಪರಿಚಯ ತಿಳಿದು ಬಂದಿರುವುದಿಲ್ಲ. ಅಲ್ಲಿ ಸೇರಿದ ಜನರನ್ನು ವಿಚಾರಿಸಿದರು ಸಹ ಶವದ ಗುರುತು ಪತ್ತೆಯಾಗಿದ್ದು ಇರುವುವದಿಲ್ಲ. ಯಾರೋ ಸುಮಾರು 40 ರಿಂದ 45 ವರ್ಷದೊಳಗಿನ ಮಹಿಳೆ ಯಾವುದೋ ಕಾರಣದಿಂದ ಸಮುದ್ರದಲ್ಲಿ ಬಿದ್ದೋ ಅಥವಾ ಮಳೆ ನೀರಿನಿಂದ ಯಾವುದೋ ನದಿಯಲ್ಲಿ ಬಿದ್ದು ಸಮುದ್ರಕ್ಕೆ ತೇಲಿ ಬಂದೋ ಮೃತಪಟ್ಟಿದ್ದು ಇರುತ್ತದೆ. ಕಾರಣ ಅವಳ ಮರಣದ ಬಗ್ಗೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲು ಕೋರಿದ ಬಗ್ಗೆ ಪಿರ್ಯಾದಿ ಶ್ರೀ ಜಗದೀಶ ತಂದೆ ಈಶ್ವರ ತಾಂಡೇಲ, ಪ್ರಾಯಃ 39 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ಟೊಂಕಾ, ಕಾಸರಕೋಡ, ತಾ: ಹೊನ್ನಾವರ ರವರು ದಿನಾಂಕ: 18-06-2021 ರಂದು 16-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಭಟ್ಕಳ ಶಹರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 05/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ರಾಮ ತಂದೆ ಸೋಮಯ್ಯ ಗೊಂಡ, ಪ್ರಾಯ-30 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಹಾರುಮಕ್ಕಿ, ಜಾಲಿ, ತಾ: ಭಟ್ಕಳ. ಈತನು ದಿನಾಂಕ: 18-06-2021 ತಂದು 02-00 ಗಂಟೆಯ ಸಮಯಕ್ಕೆ ಭಟ್ಕಳದ ಬದ್ರಿಯಾ ಕಾಲೋನಿಯ ನಿವಾಸಿಯಾದ ಅಬ್ದುಲ್ ರಸೀದ್ ತಂದೆ ಬುಡುಸಾಬ್ ಇವರ ಮನೆಯ ಹತ್ತಿರ ಇರುವ ತೆಂಗಿನ ಮರಕ್ಕೆ ತಾಗಿದ ವಿದ್ಯುತ್ ತಂತಿ ಆಕಸ್ಮಾತ್ ತಾಗಿ ವಿದ್ಯುತ್ ಸ್ಪರ್ಷವಾಗಿ ಮರದಿಂದ ಕೆಳಗೆ ಬಿದ್ದು ಮರಣ ಹೊಂದಿದ್ದು ಇರುತ್ತದೆ. ಇದರ ಹೊರತು ಅವನ ಮರಣದಲ್ಲಿ ಬೇರೆ ಯಾವುದೇ ಸಂಶಯ ಇರುವುದಿಲ್ಲ ಎಂಬ ಬಗ್ಗೆ ಪಿರ್ಯಾದಿ ಶ್ರೀ ಮಾದೇವ ತಂದೆ ಸೋಮಯ್ಯ ಗೊಂಡ, ಪ್ರಾಯ-38 ವರ್ಷ, ವೃತ್ತಿ-ಮೇಸ್ತ್ರಿ ಕೆಲಸ, ಸಾ|| ಹಾರುಮಕ್ಕಿ, ಜಾಲಿ, ತಾ: ಭಟ್ಕಳ ರವರು ದಿನಾಂಕ: 18-06-2021 ರಂದು 15-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಶಿರಸಿ ಗ್ರಾಮೀಣ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 19/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನು ಸುಮಾರು 45-50 ವರ್ಷ ಪ್ರಾಯದ ಅಪರಿಚಿತ ಗಂಡಸ್ಸಾಗಿದ್ದು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಈತನು ದಿನಾಂಕ: 13-06-2021 ರಂದು 00-01 ಗಂಟೆಯಿಂದ ದಿನಾಂಕ: 18-06-2021 ರಂದು 09-00 ಗಂಟೆಯವರೆಗೆ ಎಲ್ಲಿಂದಲೋ ಬಂದು ಹೊಳೆಯ ನೀರಿನಲ್ಲಿ ಹಾರಿಯೋ, ಈಜಾಡಲೋ ಹೋಗಿಯೋ ಅಥವಾ ಕಾಲು ಜಾರಿಯೋ ಬಿದ್ದು ಮೃತಪಟ್ಟು, ಹಹೊಳೆಯ ನೀರಿನಲ್ಲಿ ತೇಲಿ ಶಿರಸಿ ತಾಲೂಕಿನ ಸಹಸ್ರಲಿಂಗದ ಶಾಲ್ಮಲಾ ಹೊಳೆಯ ಹತ್ತಿರದ ಕೆಳಗಡೆ ಒಣ ಕಟ್ಟಿಗೆಗಳು ಇರುವಲ್ಲಿ ಬಂದು ಶವವು ಡಬ್ಬಾಗಿ ಸಿಲುಕಿಕೊಂಡಿರುತ್ತದೆ, ಮೃತನ ದೇಹದ ಬಲಗೈಯಲ್ಲಿ ಸ್ಟೀಲ್ ಖಡ್ಗ-01 ಮತ್ತು ಕಪ್ಪು ದಾರ ಕಟ್ಟಿದ್ದು, ಬಲಗಾಲಿನಲ್ಲಿ ಕಪ್ಪು ದಾರ ಕಟ್ಟಿದ್ದು ಕಂಡು ಬರುತ್ತದೆ. ಕಾರಣ ಮೃತನ ವಾರಸುದಾರರ ಪತ್ತೆ ಹಚ್ಚುವುದರೊಂದಿಗೆ ಶವದ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ದಿವಾಕರ ತಂದೆ ಶಿವರಾಮ ಶೇಟ್, ಪ್ರಾಯ-45 ವರ್ಷ, ವೃತ್ತಿ-ಕಾರ್ಪೆಂಟರ್, ಸಾ|| ಕಪ್ಪೆಗದ್ದೆ, ಪೋ: ಹುಲೇಕಲ್, ತಾ: ಶಿರಸಿ ರವರು ದಿನಾಂಕ: 18-06-2021 ರಂದು 10-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

ಇತ್ತೀಚಿನ ನವೀಕರಣ​ : 21-06-2021 11:02 AM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080