ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 18-05-2021

at 00:00 hrs to 24:00 hrs

 

ಕಾರವಾರ ಶಹರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 54/2021, ಕಲಂ: 269, 271 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಮಾಲಿಕರು, ಆರೋಗ್ಯ ಮಿಲ್ಕ್ ಸೆಂಟರ್, ರಾಯ್ಕರ್ ಮೆನನ್ ಹತ್ತಿರ, ಕೈಗಾ ರಸ್ತೆ, ಕಾರವಾರ, 2]. ಮಾಲಿಕರು, ಶ್ರೀ ಉಡುಪಿ ಶ್ರೀ ಕೃಷ್ಣ ವಿಲಾಸ ಹೊಟೇಲ್, ಗೀತಾಂಜಲಿ ಟಾಕೀಸ್ ಹತ್ತಿರ, ಕಾರವಾರ. ಕೋವಿಡ್-19 ಖಾಯಿಲೆ ಸಂಬಂಧ ಕಾರವಾರ ನಗರವನ್ನು ಸಂಪೂರ್ಣ ಕಂಟೈನಮೆಂಟ್ ಝೋನ್ ಎಂದು ಘೊಷಿಸಿದ ಲಾಕಡೌನ್ ಸಮಯದಲ್ಲಿ ನಮೂದಿತ ಆರೋಪಿತರು ದಿನಾಂಕ: 17-05-2021 ರಂದು ರಾತ್ರಿ 19-00 ಗಂಟೆಗೆ ತಮ್ಮ ತಮ್ಮ ಅಂಗಡಿ/ಹೊಟೇಲನ್ನು ತೆರೆದು ಕೋವಿಡ್ ನಿಯಮಗಳನ್ನು ಪಾಲಿಸದೇ ವ್ಯಾಪಾರ ಮಾಡುತ್ತಿದ್ದು, ಪಿರ್ಯಾದಿಯವರು ಅನೇಕ ಬಾರಿ ಮೌಕಿಕವಾಗಿ ಸೂಚಿಸಿದರೂ ಸಹ ಯಾವುದೇ ಸೂಚನೆಯನ್ನು ಲೆಕ್ಕಿಸದೇ ಮಾರಣಾಂತಿಕ ಕೋವಿಡ್ ಖಾಯಿಲೆಯ ವಿರುದ್ದ ನಿರ್ಲಕ್ಷ್ಯತನ ತೋರಿ ಉದ್ದಿಮೆಯನ್ನು ನಡೆಸುತ್ತಿದ್ದ ಬಗ್ಗೆ ಪಿರ್ಯಾದಿ ಶ್ರೀ ಆರ್. ಪಿ. ನಾಯ್ಕ, ಪೌರಾಯುಕ್ತರು, ನಗರ ಸಭೆ, ಕಾರವಾರ ರವರು ದಿನಾಂಕ: 18-05-2021 ರಂದು 18-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಅಂಕೋಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 87/2021, ಕಲಂ: 454, 457, 380, 511 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ದಿನಾಂಕ: 17-05-2021 ರಂದು ಬೆಳಿಗ್ಗೆ 07-30 ಗಂಟೆಯಿಂದ ದಿನಾಂಕ: 18-05-2021 ರಂದು ಬೆಳಿಗ್ಗೆ 07-30 ಗಂಟೆಯ ನಡುವಿನ ಅವಧಿಯಲ್ಲಿ ಅಂಕೋಲಾ ವಂದಿಗೆಯ ಬಸ್ ಡಿಪೋ ರಸ್ತೆಯಲ್ಲಿರುವ ಪಿರ್ಯಾದಿಯವರ ಮನೆಯ ದಕ್ಷಿಣ ದಿಕ್ಕಿನ ಬಾಗಿಲ ಇಂಟರ್ ಲಾಕ್ ಅನ್ನು ಮುರಿದು ಒಳ ಹೊಕ್ಕಿ ಮನೆಯೊಳಗೆ ಲಾಕ್ ಮಾಡದೇ ಇದ್ದ ವಾರ್ಡರೋಬ್/ಕಪಾಟು ಮತ್ತು ಗೋದ್ರೇಜ್‍ ಗಳನ್ನು ಓಪನ್ ಮಾಡಿ, ಅದರೊಳಗಿದ್ದ ಬಟ್ಟೆ ಬರೆ ಇತ್ಯಾದಿ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿ, ಕಳುವು ಮಾಡಲು ಪ್ರಯತ್ನಿಸಿದ ಬಗ್ಗೆ ಪಿರ್ಯಾದಿ ಶ್ರೀಮತಿ ಸೀಮಾ ಅರುಣ ನಾಯಕ, ಪ್ರಾಯ-42 ವರ್ಷ, ವೃತ್ತಿ-ಗೃಹಿಣಿ, ಸಾ|| 2 ನೇ ಮೇನ್, ಬಸ್ ಡಿಪೋ ರಸ್ತೆ, ವಂದಿಗೆ, ತಾ: ಅಂಕೋಲಾ, ಹಾಲಿ ಸಾ|| ಬಾಗಲಕೋಟೆ ರವರು ದಿನಾಂಕ: 18-05-2021 ರಂದು 16-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 108/2021, ಕಲಂ: 143, 147, 323, 341, 504, 506 ಸಹಿತ 149 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಆರೀಫ್ ಅಬ್ದುಲ್ ಕರೀಂ ಶೇಖ್, ಸಾ|| ಜನತಾ ಪ್ಲಾಟ್, ಮಿರ್ಜಾನ್, ತಾ: ಕುಮಟಾ, 2]. ತೌಫಿಕ್ ಅಬ್ದುಲ್ ಕರೀಂ ಶೇಖ್, ಸಾ|| ಜನತಾ ಪ್ಲಾಟ್, ಮಿರ್ಜಾನ್, ತಾ: ಕುಮಟಾ, 3]. ಶೋಹಿಬ್ ಅಕ್ಬರ್ ಖಾನ್, ಸಾ|| ತಾರಿಬಾಗಿಲು, ಮಿರ್ಜಾನ, ತಾ: ಕುಮಟಾ, 4]. ಮುಖೀಬ್ ಅಕ್ಬರ್ ಖಾನ್, ಸಾ|| ತಾರಿಬಾಗಿಲು, ಮಿರ್ಜಾನ್, ತಾ: ಕುಮಟಾ, 5]. ಮೇರಾಜ್ ಜಪೂರಉಲ್ಲಾ ಖಾನ್, ಸಾ|| ತಾರಿಬಾಗಿಲು, ಮಿರ್ಜಾನ್, ತಾ: ಕುಮಟಾ, 6]. ಫಯಾಜ್ ಬಸೀರ್ ಸಯ್ಯದ್, ಸಾ|| ತಾರಿಬಾಗಿಲು, ಮಿರ್ಜಾನ್, ತಾ: ಕುಮಟಾ. ಈ ನಮೂದಿತ ಆರೋಪಿತರು ಹಾಗೂ ಪಿರ್ಯಾದಿಯವರು ಒಂದೇ ಊರಿನವರಾಗಿದ್ದು, ಆರೋಪಿತರು ಮೊದಲಿನಿಂದಲೂ ಸಣ್ಣಪುಟ್ಟ ವಿಷಯಕ್ಕೆ ಪಿರ್ಯಾದಿಯವರೊಂದಿಗೆ ತಂಟೆ ತಕರಾರು ಮಾಡಿ, ಪಿರ್ಯಾದಿಯ ಮೇಲೆ ದ್ವೇಷದಿಂದ ಇದ್ದವರು, ದಿನಾಂಕ: 12-05-2021 ರಂದು 21-10 ಗಂಟೆಯ ಸಮಯದಲ್ಲಿ ಪಿರ್ಯಾದಿಯವರು ತಮ್ಮ ಮನೆಯ ಎದುರಿಗೆ ತಿರುಗಾಡುತ್ತಿದ್ದಾಗ, ಆ ವೇಳೆಗೆ ಆರೋಪಿತರೆಲ್ಲಾ ಸೇರಿ ಪಿರ್ಯಾದಿಯ ಮೇಲೆ ಹಲ್ಲೆ ಮಾಡುವ ಉದ್ದೇಶದಿಂದ ಪಿರ್ಯಾದಿ ಇದ್ದಲ್ಲಿಗೆ ಬಂದು ಪಿರ್ಯಾದಿಯನ್ನು ಕುರಿತು ‘ಮಾದರ್ ಚೋದ್, ರಾಂಡಕಾ ಬೇಟಾ, ಬೋಸುಡಿಕಾ’ ಅಂತಾ ಅವಾಚ್ಯ ಶಬ್ದಗಳಿಂದ ಬೈಯ್ದು, ಪಿರ್ಯಾದಿಯನ್ನು ಅಡಗಟ್ಟಿ ತಡೆದು, ಆರೋಪಿತರೆಲ್ಲಾ ಸೇರಿ ಪಿರ್ಯಾದಿಗೆ ಕೈಯಿಂದ ತಲೆಗೆ ಹಾಗೂ ಮುಖಕ್ಕೆ ಹೊಡೆದು ಹಲ್ಲೆ ಮಾಡಿ, ‘ನೀನು ಇನ್ನೊಮ್ಮೆ ಸಿಕ್ಕಾಗ ನಿನ್ನನ್ನು ಕೊಂದು ಅಘನಾಶಿನಿ ಹೊಳೆಗೆ ಹಾಕುತ್ತೇನೆ’ ಅಂತಾ ಜೀವದ ಬೆದರಿಕೆ ಹಾಕಿ ಹೋದ ಬಗ್ಗೆ ಪಿರ್ಯಾದಿ ಶ್ರೀ ಮನ್ಸೂರ್ ಅಲಿ ಅಬ್ದುಲ್ ರಹಮಾನ್ ಬೇಗ್, ಪ್ರಾಯ-45 ವರ್ಷ, ವೃತ್ತಿ-ಕೋಲ್ಡ್ರಿಂಕ್ಸ್ ವ್ಯಾಪಾರ, ಸಾ|| ದರ್ಗಾ ಹತ್ತಿರ, ತಾರಿಬಾಗಿಲ ರಸ್ತೆ, ಮಿರ್ಜಾನ್, ತಾ: ಕುಮಟಾ ರವರು ದಿನಾಂಕ: 18-05-2021 ರಂದು 16-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 85/2021, ಕಲಂ: 143, 147, 148, 447, 323, 324, 323, 504, 506 ಸಹಿತ 149 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಚಂದನ ತಂದೆ ವಾಸುದೇವ ನಾಯ್ಕ, 2]. ಶ್ರೀಮತಿ ಜಯಶ್ರೀ ಕೋಂ. ಚಂದನ ನಾಯ್ಕ, 3]. ಶ್ರೀಮತಿ ಭಾಗೀರಥಿ ಕೋಂ. ನಾಗಪ್ಪ ಪವಾರೇಕರ, 4]. ಧನರಾಜ ತಂದೆ ಚಂದನ ನಾಯ್ಕ, 5]. ಶ್ರೀಮತಿ ಭಾರತಿ ಕೋಂ. ಗಣೇಶ ಗೋಡಕೆ, ಸಾ|| (ಎಲ್ಲರೂ) ನೇಕಾರ ನಗರ, ಹುಬ್ಬಳ್ಳಿ, ಧಾರವಾಡ, 6]. ಕೃಷ್ಣಾ ತಂದೆ ಭೈರು ಗೌಡ, ಸಾ|| ಹಸೇಕಲ್, ಮಂಚಿಕೇರಿ, ತಾ: ಯಲ್ಲಾಪುರ, 7]. ಶ್ರೀಮತಿ ಸುಮತಿ ಕೋಂ. ಸೋಮು ಗೌಡ, ಸಾ|| ನಿಟ್ಟೂರ, ಹುಣಶೆಟ್ಟಿಕೊಪ್ಪ, ತಾ: ಯಲ್ಲಾಪುರ ಹಾಗೂ ಇನ್ನೂ ಇಬ್ಬರು ಹುಡುಗರು. ಈ ನಮೂದಿತ ಆರೋಪಿತರಲ್ಲಿ ಆರೋಪಿ 1 ನೇಯವನು ಪಿರ್ಯಾದಿಯವರ ಗಂಡನ ಮೊದಲನೇ ಹೆಂಡತಿಯ ಅಳಿಯನಾಗಿದ್ದು, ಆರೋಪಿ 2 ನೇಯವಳು ಪಿರ್ಯಾದಿಯ ಗಂಡನ ಮೊದಲನೇ ಹೆಂಡತಿಯ ಮಗಳಾಗಿದ್ದು, ಆರೋಪಿ 3 ನೇಯವಳು ಪಿರ್ಯಾದಿಯ ಗಂಡನ ಮೊದಲನೇ ಹೆಂಡತಿ ಇದ್ದು, ಆರೋಪಿ 4 ನೇಯವನು ಆರೋಪಿ 1 ನೇಯವನ ಮಗನಿದ್ದು, ಆರೋಪಿ 6 ನೇಯವನು ಆರೋಪಿ 1 ನೇಯವರ ಸಂಬಂಧಿಕನಿದ್ದು, ಆರೋಪಿ 7 ನೇಯವರು ಪಿರ್ಯಾದಿಯ ಊರಿನವರಿದ್ದು, ದಿನಾಂಕ: 16-05-2021 ರಂದು ಮಧ್ಯಾಹ್ನ ಸುಮಾರು 13-30 ಗಂಟೆಯ ಸಮಯಕ್ಕೆ ಆರೋಪಿತರ ಪೈಕಿ ಶ್ರೀಮತಿ ಜಯಶ್ರೀ, ಭಾಗೀರಥಿ ಮತ್ತು ಕೃಷ್ಣಾ ಹಾಗೂ ಇನ್ನೂ ಎರಡು ಜನ ಅಪರಿಚಿತರು ಕೂಡಿಕೊಂಡು ಯಲ್ಲಾಪುರ ತಾಲೂಕಿನ ಹುಣಶೆಟ್ಟಿಕೊಪ್ಪ ಗ್ರಾಮದ ನಿಟ್ಟೂರ ಗ್ರಾಮದ ಪಿರ್ಯಾದಿಯವರ ಮನೆಯ ಬಳಿ ಬಂದು ‘ತಮಗೆ ಆಸ್ತಿಯಲ್ಲಿ ಪಾಲು ಕೊಡಿ’ ಅಂತಾ ಜಗಳ ತೆಗೆದು ಪಿರ್ಯಾದಿಯವರಿಗೆ ಅವಾಚ್ಯವಾಗಿ ಬೈಯ್ದು, ಹೊಡೆಬಡೆ ಮಾಡಿದ್ದು, ಅಲ್ಲದೇ ಮರು ದಿವಸ ದಿನಾಂಕ: 16-05-2021 ರಂದು ಮಧ್ಯಾಹ್ನ 15-30 ಗಂಟೆಯ ಸಮಯಕ್ಕೆ ನಮೂದಿತ ಆರೋಪಿತರೆಲ್ಲರೂ ಕೂಡಿಕೊಂಡು ಪಿರ್ಯಾದಿವರಿಗೆ ಹಲ್ಲೆ ಮಾಡುವ ಉದ್ದೇಶದಿಂದ ಸಂಗನಮತ ಮಾಡಿಕೊಂಡು ಏಕಾಏಕಿ ಕೈಯಲ್ಲಿ ದೊಣ್ಣೆ ಮತ್ತು ಕತ್ತಿಯನ್ನು ಹಿಡಿದುಕೊಂಡು ಪಿರ್ಯಾದಿಯವರ ಮನೆಯ ಅಂಗಳದಲ್ಲಿ ಅಕ್ರಮ ಪ್ರವೇಶ ಮಾಡಿ ಆಸ್ತಿ ವಿಚಾರದಲ್ಲಿ ಜಗಳ ತೆಗೆದು ಅವಾಚ್ಯ ಶಬ್ದದಿಂದ ‘ರಂಡೆ, ಮುಂಡೆ’ ಅಂತಾ ಬೈಯ್ದು, ಪಿರ್ಯಾದಿಯವರಿಗೆ ಮತ್ತು ಅವರ ಮಗ ಸುರೇಶ ಈತನಿಗೆ ಹೊಡೆದು ನೆಲಕ್ಕೆ ಉರುಳಿಸಿ, ಜಯಶ್ರೀ ಇವಳು ದೊಣ್ಣೆಯಿಂದ ಹಾಗೂ ಚಂದನ ಈತನು ಕತ್ತಿಯಿಂದ ಪಿರ್ಯಾದಿಯವರಿಗೆ ಹೊಡೆದು ಅವರ ಬಲಗೈಗೆ ಹಾಗೂ ಎಡಗಾಲಿಗೆ ರಕ್ತಗಾಯ ಪಡಿಸಿ ಹಾಗೂ ಪಿರ್ಯಾದಿಯವರ ಮಗನಿಗೆ ಚಂದನ ಹಾಗೂ ಧನರಾಜ ಇವರು ಸೇರಿಕೊಂಡು ದೊಣ್ಣೆಯಿಂದ ಮೈಕೈಗೆ ಹೊಡೆದು, ಹಲ್ಲನ್ನು ಮುರಿದು ದುಃಖಾಪತ್ ಪಡಿಸಿ ‘ನಿಮಗೆ ಜೀವ ಸಹಿತ ಬಿಡುವುದಿಲ್ಲ’ ಅಂತಾ ಜೀವ ಬೆದರಿಕೆ ಹಾಕಿದ ಬಗ್ಗೆ ಪಿರ್ಯಾದಿ ಶ್ರೀಮತಿ ಗೀತಾ ಕೋಂ. ನಾಗಪ್ಪ ಪವಾರೇಕರ, ಪ್ರಾಯ-50 ವರ್ಷ, ವೃತ್ತಿ-ಮನೆ ಕೆಲಸ, ಸಾ|| ನಿಟ್ಟೂರ, ಹುಣಶೆಟ್ಟಿಕೊಪ್ಪ, ತಾ: ಯಲ್ಲಾಪುರ ರವರು ದಿನಾಂಕ: 18-05-2021 ರಂದು 19-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 31/2021, ಕಲಂ: 269, 270 ಐಪಿಸಿ ಹಾಗೂ ಕಲಂ: 15(ಎ), 32(3) ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ನಾಗರಾಜ ತಂದೆ ದಾಮೋದರ ನಾಯ್ಕ, ಪ್ರಾಯ-45 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಹೊನ್ನಜ್ಜಿ, ಪೋ: ಹಿಪ್ಪನಳ್ಳಿ, ತಾ: ಶಿರಸಿ. ಈತನು ಮಾನ್ಯ ಕರ್ನಾಟಕ ಸರ್ಕಾರ, ಬೆಂಗಳೂರು ಮತ್ತು ಮಾನ್ಯ ಜಿಲ್ಲಾಧಿಕಾರಿಗಳು, ಉತ್ತರ ಕನ್ನಡ ಜಿಲ್ಲೆ, ಕಾರವಾರ ರವರ ಅಧೀಕೃತ ಆದೇಶದಂತೆ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಸಾಂಕ್ರಾಮಿಕ ರೋಗವಾದ ಕೋವಿಡ್-19 (ಕೊರೋನಾ ವೈರಾಣು) ಖಾಯಿಲೆ ಹರಡದಂತೆ ತಡೆಗಟ್ಟುವ ಸಲುವಾಗಿ ಕೊರೋನಾ ಕರ್ಫ್ಯೂ (ಲಾಕಡೌನ್) ಆದೇಶ ಜಾರಿ ಮಾಡಿದ ಬಗ್ಗೆ ತಿಳಿದಿದ್ದರೂ ಸಹ ದಿನಾಂಕ: 18-05-2021 ರಂದು 11-00 ಗಂಟೆಗೆ ಶಿರಸಿ ನಗರದ ನಿಲೇಕಣಿಯ ಕನ್ನಡ ಶಾಲೆಯ ಮೈದಾನದಲ್ಲಿ ತನ್ನ ಅನ್ಯಾಯದ ಲಾಭಕ್ಕೋಸ್ಕರ ಯಾವುದೇ ಪಾಸ್ ಯಾ ಪರ್ಮಿಟ್ ಇಲ್ಲದೇ ಸಾರ್ವಜನಿಕ ಸ್ಥಳದಲ್ಲಿ ಜನರಿಗೆ ಮುಕ್ತವಾಗಿ ಮದ್ಯವನ್ನು ಕುಡಿಯಲು ಅವಕಾಶ ಮಾಡಿಕೊಟ್ಟ ಕಾಲಕ್ಕೆ 562/- ರೂಪಾಯಿಯ HAYWARDS CHEERS WHISKY ಅಂತಾ ಲೇಬಲ್ ಇದ್ದ 180 ML ಅಳತೆಯ ಮದ್ಯದ ಪ್ಯಾಕೆಟ್ ಗಳು-08, HAYWARDS CHEERS WHISKY ಅಂತಾ ಲೇಬಲ್ ಇದ್ದ 180 ML ಅಳತೆಯ ಮದ್ಯದ ಖಾಲಿ ಪ್ಯಾಕೆಟ್ ಗಳು-02, ಅ||ಕಿ|| 00.00/- ರೂಪಾಯಿ ಹಾಗೂ ಮದ್ಯವನ್ನು ಕುಡಿಯಲು ಬಳಸಿದ ಗಾಜಿನ ಗ್ಲಾಸ್-02, ಅ||ಕಿ|| 00.00/- ರೂಪಾಯಿ, ನೀರಿನ ಖಾಲಿ ಬಾಟಲಿಗಳು-01, ಅ||ಕಿ|| 00.00/- ರೂಪಾಯಿ. ಇವುಗಳೊಂದಿಗೆ ಸಾರ್ವಜನಿಕ ಸ್ಥಳದಲ್ಲಿ ಅನಧೀಕೃತವಾಗಿ ಮದ್ಯವನ್ನು ಕುಡಿಯಲು ಅವಕಾಶ ಮಾಡಿಕೊಟ್ಟಾಗ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ರಾಜಕುಮಾರ, ಪಿ.ಎಸ್.ಐ (ಕಾ&ಸು), ಶಿರಸಿ ನಗರ ಪೊಲೀಸ್ ಠಾಣೆ ರವರು ದಿನಾಂಕ: 18-05-2021 ರಂದು 12-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹಳಿಯಾಳ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 98/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ವಿನಾಯಕ ತಂದೆ ಶಿವರಾಮ ಆಚಾರಿ, ಪ್ರಾಯ-32 ವರ್ಷ, ವೃತ್ತಿ-ತಾಲೂಕಾ ಪಂಚಾಯತ್ ನಲ್ಲಿ ಕೆಲಸ, ಸಾ|| ಯಲ್ಲಾಪುರ (ಮೋಟಾರ್ ಸೈಕಲ್ ನಂ: ಕೆ.ಎ-31/ಇ.ಬಿ-8768 ನೇದರ ಸವಾರ). ನಮೂದಿತ ಆರೋಪಿತನು ದಿನಾಂಕ: 17-05-2021 ರಂದು 19-40 ಗಂಟೆಗೆ ತನ್ನ ಬಾಬ್ತು ಮೋಟಾರ್ ಸೈಕಲ್ ನಂ: ಕೆ.ಎ-31/ಇ.ಬಿ-8768 ನೇದರ ಮೇಲೆ ಹಿಂಬದಿ ಸವಾರಳಾಗಿ ಗಾಯಾಳು ರೇಣುಕಾ ಬೆಳಗಟ್ಟಿ (ಡಬ್ಲ್ಯೂ.ಎಚ್.ಸಿ-1598, ಹಳಿಯಾಳ ಪೊಲೀಸ್ ಠಾಣೆ) ರವರಿಗೆ ಕೂಡಿಸಿಕೊಂಡು ಹಳಿಯಾಳ ಬದಿಯಿಂದ ಯಲ್ಲಾಪುರ ಬದಿಗೆ ತನ್ನ ಮೋಟಾರ್ ಸೈಕಲನ್ನು ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗಿ ಭಾಗವತಿ ಹೊರ ಪೊಲೀಸ್ ಠಾಣೆಯ ಹತ್ತಿರ ಅರಣ್ಯ ಪ್ರದೇಶದಿಂದ ಹೊರ ಬಂದ ಎಮ್ಮೆಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಹಿಂಬದಿಯ ಸವಾರಳಿಗೆ ಸಾಧಾರಣ ಸ್ವರೂಪದ ಗಾಯನೋವು ಪಡಿಸಿ, ಮೋಟಾರ್ ಸೈಕಲನ್ನು ಜಖಂಗೊಳಿಸಿದ್ದಲ್ಲದೇ, ಆರೋಪಿ ಮೋಟಾರ್ ಸೈಕಲ್ ಸವಾರನು ತನಗೂ ಸಹ ಸಾಧಾರಣ ಸ್ವರೂಪದ ಗಾಯನೋವು ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ಸುಭಾಷ ತಂದೆ ಶಾಭಾ ಗಾವಡೆ, ಪ್ರಾಯ-45 ವರ್ಷ, ವೃತ್ತಿ-ಕಾಂಟ್ರ್ಯಾಕ್ಟರ್, ಸಾ|| ಭಾಗವತಿ ಗ್ರಾಮ, ತಾ: ಹಳಿಯಾಳ ರವರು ದಿನಾಂಕ: 18-05-2021 ರಂದು 09-10 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 18-05-2021

at 00:00 hrs to 24:00 hrs

 

ಕುಮಟಾ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 13/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತರು ಶ್ರೀ ಲಿಂಗಪ್ಪ ತಂದೆ ಅನಂತ ಗಾವಡಿ, ಪ್ರಾಯ-57 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಕಂದವಳ್ಳಿ, ಕಲ್ಲಬ್ಬೆ, ತಾ: ಕುಮಟಾ. ಪಿರ್ಯಾದಿಯವರ ತಂದೆಯವರಾದ ಇವರು ಚಂಡಮಾರುತದಿಂದ ಆದ ಭಾರೀ ಮಳೆ ಗಾಳಿಗೆ ಅಘನಾಶಿನಿ ನದಿಯ ನೀರು ಹೆಚ್ಚುತ್ತಿರುವುದನ್ನು ನೋಡಿ, ದಿನಾಂಕ: 16-05-2021 ರಂದು 15-00 ಗಂಟೆಯ ಸುಮಾರಿಗೆ ತಮ್ಮ ತೋಟಕ್ಕೆ ನೀರು ಹಾಯಿಸುವ ಸಲುವಾಗಿ ಅಳವಡಿಸಿದ ಪಂಪ್ ಸೆಟ್ ಅನ್ನು ನದಿಯ ನೀರಿನಿಂದ ಮೇಲಕ್ಕೆ ಎತ್ತಿ ಇಡುತ್ತಿದ್ದಾಗ, ಆಕಸ್ಮಾತ್ ಕಾಲು ಜಾರಿ ಅತಿಯಾದ ಮಳೆಯಿಂದ ಜೋರಾಗಿ ಹರಿಯುತ್ತಿದ್ದ ಅಘನಾಶಿನಿ ನದಿಯಲ್ಲಿ ಬಿದ್ದು ಮುಳುಗಿ ನೀರಿನ ಪ್ರವಾಹಕ್ಕೆ ಕೊಚ್ಚಿಕೊಂಡು ಹೋಗಿದ್ದು, ಅವರ ಶವವು ದಿನಾಂಕ: 18-05-2021 ರಂದು 18-00 ಗಂಟೆಗೆ ಕುಮಟಾದ ಕತಗಾಲ ಶಿರಗುಂಜಿಯ ಹತ್ತಿರ ಅಘನಾಶಿನಿಯಲ್ಲಿ ಸಿಕ್ಕಿದ್ದು, ಈ ಕುರಿತು ಮುಂದಿನ ಕಾನೂನು ಕ್ರಮಕ್ಕಾಗಿ ಕೋರಿದ ಬಗ್ಗೆ ಪಿರ್ಯಾದಿ ಶ್ರೀ ತನೇಶ ತಂದೆ ಲಿಂಗಪ್ಪ ಗಾವಡಿ, ಪ್ರಾಯ-25 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಕಂದವಳ್ಳಿ, ಕಲ್ಲಬ್ಬೆ, ತಾ: ಕುಮಟಾ ರವರು ದಿನಾಂಕ: 18-05-2021 ರಂದು 21-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಮುರ್ಡೇಶ್ವರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 13/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತಳು ಶ್ರೀಮತಿ ಜಾನಕಿ ಕೋಂ. ರಮೇಶ ನಾಯ್ಕ, ಪ್ರಾಯ-36 ವರ್ಷ, ವೃತ್ತಿ-ಗದ್ದೆ ಕೆಲಸ, ಸಾ|| ಹಂಚಿನಮನೆ, ನೀರಗದ್ದೆ, ಬೈಲೂರು, ತಾ: ಭಟ್ಕಳ. ಪಿರ್ಯಾದಿಯ ತಂಗಿಯಾದ ಇವಳು ದಿನಾಂಕ: 18-05-2021 ರಂದು ಬೆಳಿಗ್ಗೆ 11-45 ಗಂಟೆಯ ಸುಮಾರಿಗೆ ಬೈಲೂರು ಗ್ರಾಮದ ನೀರಗದ್ದೆಯಲ್ಲಿ ತನ್ನ ಮನೆಯ ಹಿಂದೆ ಇರುವ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದಾಗ ಯಾವುದೋ ವಿಷಕಾರಿಕ ಹಾವು ಅವಳ ಬಲಗೈ ಮಧ್ಯದ ಬೆರಳಿಗೆ ಕಚ್ಚಿದ್ದರಿಂದ ಉಪಚಾರದ ಕುರಿತು ಮುರ್ಡೇಶ್ವರದ ಆರ್.ಎನ್.ಎಸ್ ಆಸ್ಪತ್ರೆಗೆ ತಂದಾಗ ಅಲ್ಲಿಯ ವೈದ್ಯರು ಉಪಚರಿಸಿ ಭಟ್ಕಳದ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲು ತಿಳಿಸಿದಂತೆ ಮಧ್ಯಾಹ್ನ 02-00 ಗಂಟೆಯ ಸುಮಾರಿಗೆ ಭಟ್ಕಳದ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದ್ದು, ಮೃತಳಿಗೆ ಯಾವುದೋ ವಿಷಕಾರಿಕ ಹಾವು ಕಚ್ಚಿ ಮೃತಪಟ್ಟಿದ್ದು, ಮೃತದೇಹವು ಭಟ್ಕಳದ ಸರಕಾರಿ ಆಸ್ಪತ್ರೆಯಲ್ಲಿ ಇದ್ದು, ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಲು ಕೋರಿದ ಬಗ್ಗೆ ಪಿರ್ಯಾದಿ ಶ್ರೀ ದತ್ತಾ ತಂದೆ ಮಂಜಪ್ಪ ನಾಯ್ಕ, ಪ್ರಾಯ-40 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ಕಾಮಯ್ಯನ ಮನೆ, ತೂದಳ್ಳಿ, ಬೈಲೂರು, ತಾ: ಭಟ್ಕಳ ರವರು ದಿನಾಂಕ: 18-05-2021 ರಂದು 15-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

ಇತ್ತೀಚಿನ ನವೀಕರಣ​ : 19-05-2021 12:50 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080