ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 18-11-2021

at 00:00 hrs to 24:00 hrs

 

ಕಾರವಾರ ಶಹರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 96/2021, ಕಲಂ: 32, 34, 38(A) ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ವಿಜಯ ತಂದೆ ರವಿಚಂದ್ರ ತಾಮ್ಸೆ, ಪ್ರಾಯ-29 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ತಾರಿವಾಡಾ, ಸದಾಶಿವಗಡ, ಕಾರವಾರ. ಈತನು ದಿನಾಂಕ: 18-11-2021 ರಂದು 14-45 ಘಂಟೆಯ ಸುಮಾರಿಗೆ ಕೋಡಿಬಾಗ ಖಾಫ್ರಿ ದೇವಸ್ಥಾನದ ಹತ್ತಿರ ರಾಷ್ಟ್ರೀಯ ಹೆದ್ದಾರಿಯ ಮೇಲೆ ತನ್ನ ತಾಬಾ ಯಾವುದೇ ಪಾಸ್ ಅಥವಾ ಪರ್ಮಿಟ್ ಇಟ್ಟುಕೊಳ್ಳದೇ ತಾನು ಚಲಾಯಿಸುತ್ತಿದ್ದ ಮಹೀಂದ್ರಾ ಡ್ಯೂರೋ ಸ್ಕೂಟರ್ ನಂ: ಕೆ.ಎ-30/ಕ್ಯೂ-4401 ನೇದರ ಡಿಕ್ಕಿಯಲ್ಲಿ ಸುಮಾರು 5,000/- ರೂಪಾಯಿ ಬೆಲೆಬಾಳುವ ಗೋವಾ ರಾಜ್ಯ ತಯಾರಿಕೆಯ ಸುಮಾರು 20 ಲೀಟರ್ ದುಸರಿ ಎಂಬ ಸರಾಯಿ ಮತ್ತು McDowells No.1 Reserve whisky ORIGINAL, 180 ML, For sale in Goa ಅಂತಾ ನಮೂದಿರುವ 10 ಸರಾಯಿ ತುಂಬಿದ ಬಾಟಲಿಗಳನ್ನು ಸಾಗಾಟ ಮಾಡುತ್ತಿರುವಾಗ ಪಿರ್ಯಾದಿಯವರು ಸಿಬ್ಬಂದಿಯವರೊಂದಿಗೆ ಸೇರಿ ದಾಳಿ ನಡೆಸಿದಾಗ ಸ್ವತ್ತುಗಳೊಂದಿಗೆ ವಶಕ್ಕೆ ಪಡೆದುಕೊಂಡ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಸಿದ್ದಪ್ಪ ಎಸ್. ಬೀಳಗಿ. ಪೊಲೀಸ್ ನಿರೀಕ್ಷಕರು, ಕಾರವಾರ ಶಹರ ಪೊಲೀಸ್ ಠಾಣೆ ರವರು ದಿನಾಂಕ: 18-11-2021 ರಂದು 16-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 203/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ನಿಲೇಶ ತಂದೆ ಗುರುದಾಸ ನಾಯ್ಕ, ಪ್ರಾಯ-47 ವರ್ಷ, ವೃತ್ತಿ-ಚಾಲಕ, ಸಾ|| ಜಿಲ್ಲಾ ಆಸ್ಪತ್ರೆ ಹತ್ತಿರ, ಸಾಂತಾಕ್ರ್ಯೂಜ್, ಪೋಂಡಾ, ಗೋವಾ (ಟಾಟಾ ವಿಂಗರ್ ವಾಹನ ನಂ: ಜಿ.ಎ-04/ಕೆ-1016 ನೇದರ ಚಾಲಕ). ಈತನು ದಿನಾಂಕ: 16-11-2021 ರಂದು 20-15 ಗಂಟೆಗೆ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರಲ್ಲಿ ಹೊನ್ನಾವರ-ಅಂಕೋಲಾ ಡಾಂಬರ್ ರಸ್ತೆಯ ಮೇಲೆ ತಾನು ಚಲಾಯಿಸುತ್ತಿದ್ದ ಬಾಬ್ತು ಟಾಟಾ ವಿಂಗರ್ ವಾಹನ ನಂ: ಜಿ.ಎ-04/ಕೆ-1016 ನೇದನ್ನು ಹೊನ್ನಾವರ ಕಡೆಯಿಂದ ಅಂಕೋಲಾ (ಗೋವಾ) ಕಡೆಗೆ ಹೋಗಲು ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದವನು, ಕುಮಟಾ ಹೊಸ ಬಸ್ ಸ್ಟ್ಯಾಂಡ್ ಎದುರು ಸಾಕಷ್ಟು ಜನದಟ್ಟಣೆ ಇದ್ದರೂ ಸಹ ತನ್ನ ವಾಹನದ ವೇಗವನ್ನು ನಿಯಂತ್ರಿಸದೇ ಕೃಷ್ಣ ವಿಲಾಸ ಹೋಟೆಲ್ ಎದುರು ರಸ್ತೆಯನ್ನು ದಾಟುತ್ತಿದ್ದ ಪಿರ್ಯಾದಿಯ ಅಣ್ಣ ಶ್ರೀ ಗಣೇಶ ತಂದೆ ವೆಂಕಟ್ರಮಣ ಹೆಗಡೆಕರ್, ಪ್ರಾಯ-40 ವರ್ಷ, ವೃತ್ತಿ-ಹೋಟೆಲ್ ಕೆಲಸ, ಸಾ|| ಹೊಸ ಬಸ್ ಸ್ಟ್ಯಾಂಡ್ ಹತ್ತಿರ, ತಾ: ಕುಮಟಾ, ಇವರಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ ರಸ್ತೆಯಲ್ಲಿ ಬೀಳುವಂತೆ ಮಾಡಿ, ಆತನ ಹಣೆಗೆ, ಮೂಗಿಗೆ, ಎರಡು ಮೊಣಕೈಗೆ ತೆರಚಿದ ಗಾಯ ಹಾಗೂ ಕಾಲಿಗೂ ಸಹ ಗಾಯನೋವು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ರಾಧಾಕೃಷ್ಣ ತಂದೆ ವೆಂಕಟ್ರಮಣ ಹೆಗಡೆಕರ್, ಪ್ರಾಯ-37 ವರ್ಷ, ವೃತ್ತಿ-ಹೋಟೆಲ್ ಕೆಲಸ, ಸಾ|| ಹೊಸ ಬಸ್ ಸ್ಟ್ಯಾಂಡ್ ಹತ್ತಿರ, ತಾ: ಕುಮಟಾ ರವರು ದಿನಾಂಕ: 18-11-2021 ರಂದು 11-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 310/2021, ಕಲಂ: 420 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ರಾಘವೇಂದ್ರ ತಂದೆ ಗೋವಿಂದ ಪೂಜಾರಿ, ಸಾ|| ಮಕ್ಕಿ ಮನೆ, ಬಸ್ರೂರ, ತಾ: ಕುಂದಾಪುರ, ಜಿ: ಉಡುಪಿ. ಈತನು ಪಿರ್ಯಾದಿಯರಿಗೆ ಆತನ ಮಾವನ ಮುಖಾಂತರ 2019 ರಲ್ಲಿ ಪರಿಚಯವಾದವನು, ‘ರೈಲ್ವೇ ಇಲಾಖೆಯಲ್ಲಿ ಡ್ರಾಫ್ಟ್ಸಮನ್ ಹುದ್ದೆಯನ್ನು ಕೊಡಿಸುತ್ತೇನೆ. ಅದಕ್ಕೆ ಒಟ್ಟೂ 7 ಲಕ್ಷ ರೂಪಾಯಿ ಖರ್ಚಾಗುತ್ತದೆ. ಮುಂಗಡವಾಗಿ 3 ಲಕ್ಷ ರೂಪಾಯಿಯನ್ನು ಕೊಡುವುದು. ನಂತರ ನೌಕರಿ ಸಿಕ್ಕ ಬಗ್ಗೆ ಆರ್ಡರ್ ಕಾಪಿ ಬಂದ ನಂತರ ಉಳಿದ ಹಣವನ್ನು ಕೊಡುವುದು’ ಅಂತಾ 2019 ರಲ್ಲಿ ಪಿರ್ಯಾದಿ ಹಾಗೂ ಪಿರ್ಯಾದಿಯ ಮನೆಯವರಿಗೆ ನಂಬಿಸಿ, ಪಿರ್ಯಾದಿಯವರ ಕಡೆಯಿಂದ ಪಿರ್ಯಾದಿಯವರ ತಾಯಿಯವರಾದ ಶ್ರೀಮತಿ ವಿಜಯಾ ಶೇಟ್, ಇವರ ಹೆಸರಿನಲ್ಲಿರುವ ಕವಲಕ್ಕಿ ಶಾಖೆಯ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಖಾತೆ ನಂ: 890440XXXXX ನೇದರಿಂದ ಆರೋಪಿತನು ನೀಡಿದ್ದ ಆತನ ಹೆಸರಿಗೆ ಇರುವ ಕುಂದಾಪುರ ಶಾಖೆಯ ಎಚ್.ಡಿ.ಎಫ್.ಸಿ ಬ್ಯಾಂಕ್ ಖಾತೆ ನಂ: 50100186456554 ನೇದಕ್ಕೆ ದಿನಾಂಕ: 02-03-2019 ರಂದು 50,000/- ರೂಪಾಯಿ, ದಿನಾಂಕ: 08-03-2019 ರಂದು 80,000/- ರೂಪಾಯಿ ಹಾಗೂ ದಿನಾಂಕ: 09-04-2019 ರಂದು 10,000/- ರೂಪಾಯಿ ಹಣವನ್ನು ನೆಫ್ಟ್ ಮೂಲಕ ಹಾಕಿಸಿ ಹಾಗೂ ದಿನಾಂಕ: 25-05-2019 ರಂದು ಕವಲಕ್ಕಿಯ ಪಿರ್ಯಾದಿಯವರ ಮನೆಯಲ್ಲಿ ಆರೋಪಿತನು ಖುದ್ದಾಗಿ ಬಂದು ಪಿರ್ಯಾದಿಯರ ತಾಯಿಯವರ ಕಡೆಯಿಂದ 1,60,000/- ರೂಪಾಯಿ ನಗದು ಹಣವನ್ನು ಪಡೆದು, ಹೀಗೆ ಒಟ್ಟೂ 3 ಲಕ್ಷ ರೂಪಾಯಿ ಹಣವನ್ನು ಪಡೆದುಕೊಂಡು ಪಿರ್ಯಾದಿಯವರಿಗೆ ಈವರೆಗೆ ನೌಕರಿಯನ್ನು ಕೊಡಿಸದೇ ಮತ್ತು ಪಿರ್ಯಾದಿಯವರು ನೀಡಿದಂತಹ 3 ಲಕ್ಷ ರೂಪಾಯಿ ಹಣವನ್ನು ಮರಳಿ ಸಹ ನೀಡದೇ, ಪಿರ್ಯಾದಿಯವರಿಗೆ ಮೋಸ ಮಾಡಿದ ಬಗ್ಗೆ ಪಿರ್ಯಾದಿ ಶ್ರೀ ಸುಬ್ರಹ್ಮಣ್ಯ ತಂದೆ ಶ್ರೀಪಾದ ಶೇಟ್, ಪ್ರಾಯ-23 ವರ್ಷ, ವೃತ್ತಿ-ಖಾಸಗಿ ಕಂಪನಿಯಲ್ಲಿ ಕೆಲಸ, ಸಾ|| ಕವಲಕ್ಕಿ, ತಾ: ಹೊನ್ನಾವರ ರವರು ದಿನಾಂಕ: 18-11-2021 ರಂದು 15-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 137/2021, ಕಲಂ: 326, 323, 506 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ನಾರಾಯಣ ಈರಾ ನಾಯ್ಕ, 2]. ದೇವಿದಾಸ ಈರಾ ನಾಯ್ಕ, 3]. ರಮೇಶ ಈರಾ ನಾಯ್ಕ, 4]. ತನುಜಾ ನಾರಾಯಣ ನಾಯ್ಕ, ಸಾ|| (ಎಲ್ಲರೂ) ಯಲ್ವಡಿಕವೂರ, ಸರ್ಪನಕಟ್ಟಾ, ತಾ: ಭಟ್ಕಳ. ಈ ನಮೂದಿತ ಆರೋಪಿತರ ಪೈಕಿ ಆರೋಪಿ 1 ರಿಂದ 3 ನೇಯವರು ಪಿರ್ಯಾದಿಯ ಅಣ್ಣಂದಿರಿದ್ದು ಹಾಗೂ ಆರೋಪಿ 4 ನೇಯವಳು ಪಿರ್ಯಾದಿಯ ಅಣ್ಣನ ಹೆಂಡತಿ ಇರುತ್ತಾಳೆ. ಪಿರ್ಯಾದಿಯು ಟ್ಯಾಕ್ಸಿ ಚಾಲಕನಿದ್ದು, ಪಿರ್ಯಾದಿಯು ಬಾಡಿಗೆಗೆ ಹೋದ ಸಮಯದಲ್ಲಿ ಪಿರ್ಯಾದಿಯ ಹೆಂಡತಿ ಶಾರದಾ ಇವಳಿಗೆ ಆರೋಪಿತರಾದ  1, 2 ಮತ್ತು 3 ನೇಯವರುಗಳು ಪಿರ್ಯಾದಿಯ ಹೆಂಡತಿ ಮತ್ತು ಮಕ್ಕಳಿಗೆ ತೊಂದರೆ ಕೊಡುವುದು ಹಾಗೂ ಪಿರ್ಯಾದಿಯ ಮನೆಯ ಹೊರಗಡೆ ಕುಂಕುಮ ಹಾಕಿ ಮಾಟ ಮಂತ್ರ ಮಾಡುವುದು ಮಾಡುತ್ತಿದ್ದು, ಈ ವಿಚಾರವಾಗಿ ಪಿರ್ಯಾದಿಯು ದಿನಾಂಕ: 17-11-2021 ರಂದು ರಾತ್ರಿ 22-00 ಗಂಟೆಯ ಸಮಯಕ್ಕೆ ತನ್ನ ಮನೆಯ ಪಕ್ಕದಲ್ಲಿ ವಾಸವಾಗಿರುವ ತನ್ನ ಅಣ್ಣನಾದ ಆರೋಪಿ 1 ನೇಯವನ ಹತ್ತಿರ ಹೋಗಿ ‘ನೀವು ನನ್ನ ಹೆಂಡತಿ ಮತ್ತು ಮಕ್ಕಳಿಗೆ ಯಾಕೆ ತೊಂದರೆ ಕೊಡುತ್ತಿರಿ?’ ಅಂತಾ ವಿಚಾರಿಸಿದಾಗ ಅದಕ್ಕೆ  ಆರೋಪಿತರಾದ 1, 2 ಮತ್ತು  3 ನೇಯವರುಗಳು ಪಿರ್ಯಾದಿಯನ್ನು ಉದ್ದೇಶಿಸಿ ‘ನೀನು ತಾಯಿಯ ಚಿನ್ನವನ್ನು ಬಡಿಸಿದವನು. ಇವನನ್ನು ಬಿಡಬೇಡಾ’ ಅಂತಾ ಆರೋಪಿ 2 ನೇಯವನು ಹೇಳಿದಾಗ ಅದಕ್ಕೆ ಆರೋಪಿ 1 ನೇಯವನು ತನ್ನ ಕೈಯಲ್ಲಿ ಹಿಡಿದುಕೊಂಡಿದ್ದ ಚಾಕುವಿನಿಂದ ಪಿರ್ಯಾದಿಯ ಹೊಟ್ಟೆಯ ಎಡಭಾಗಕ್ಕೆ ತಿವಿದು ತೀವ್ರ ರಕ್ತಗಾಯ ಪಡಿಸಿದ್ದಲ್ಲದೇ, ಆರೋಪಿ 3 ನೇಯವನು ಅಲ್ಲಿಯೇ ಇದ್ದ ಒಂದು ಕೊಲಿನಿಂದ ಪಿರ್ಯಾದಿಯ ತಲೆಗೆ ಜೊರಾಗಿ ಬೀಸಿ ಹೊಡೆದಿದ್ದಲ್ಲದೇ, ಎಲ್ಲರೂ ಸೇರಿಕೊಂಡು ಪಿರ್ಯಾದಿಗೆ ಕೈಯಿಂದ ಹೊಡೆದು ಮತ್ತು ಕಾಲಿನಿಂದ ಒದ್ದು, ಎಲ್ಲರೂ ಸೇರಿಕೊಂಡು ಜೀವ ಬೆದರಿಕೆ ಹಾಕಿದ ಬಗ್ಗೆ ಪಿರ್ಯಾದಿ ಶ್ರೀ ಜಗದೀಶ ತಂದೆ ಈರಾ ನಾಯ್ಕ, ಪ್ರಾಯ-38 ವರ್ಷ, ವೃತ್ತಿ-ಟ್ಯಾಕ್ಸಿ ಚಾಲಕ, ಸಾ|| ಯಲ್ವಡಿಕವೂರ, ಸರ್ಪನಕಟ್ಟಾ, ತಾ: ಭಟ್ಕಳ ರವರು ದಿನಾಂಕ: 18-11-2021 ರಂದು 01-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 139/2021, ಕಲಂ: 15(ಎ), 32(3) ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತರು 1]. ನಾಗರಾಜ ತಂದೆ ನಾರಾಯಣ ನಾಯ್ಕ, ಪ್ರಾಯ-50 ವರ್ಷ, ವೃತ್ತಿ-ಹೋಟೆಲ್ ವ್ಯಾಪಾರ, ಸಾ|| ಮುಂಡಳ್ಳಿ, ನೀರಗದ್ದೆ, ತಾ: ಭಟ್ಕಳ, 2]. ಮಾದೇವ ತಂದೆ ಈರಪ್ಪಾ ನಾಯ್ಕ, ಪ್ರಾಯ-46 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಮುಂಡಳ್ಳಿ, ನೀರಗದ್ದೆ, ತಾ: ಭಟ್ಕಳ. ಈ ನಮೂದಿತ ಆರೋಪಿತರಲ್ಲಿ ಆರೋಪಿ 1 ನೇಯವನು ಸರ್ಪನಕಟ್ಟಾ ಕೋಣಾರ ರಸ್ತೆಯಲ್ಲಿರುವ ಶ್ರೀದೇವಿ ಹೋಟೆಲಿನಲ್ಲಿ್ತನ್ನ ತಾಬಾ ಯಾವ್ಯದೇ ಪಾಸ್ ಯಾ ಪರ್ಮಿಟ್ ಇಲ್ಲದೇ ಅನಧೀಕೃತವಾಗಿ ಆರೋಪಿ 2 ನೇಯವನಿಗೆ ಹೋಟೆಲಿನಲ್ಲಿ ಸರಾಯಿ ಕುಡಿಯಲು ಅವಕಾಶ ನೀಡಿದ್ದು,  BAGPIPER WHISKEY ಅಂತಾ ನಮೂದು ಇದ್ದ 180 ML ಅಳತೆಯ ಪ್ಯಾಕೆಟ್ ನಲ್ಲಿದ್ದ ಸರಾಯಿಯನ್ನು ಕುಡಿಯುತ್ತಾ ಕುಳಿತಿರುವಾಗ ಆರೋಪಿತರೆಲ್ಲರೂ ಅಬಕಾರಿ ಸ್ವತ್ತುಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಭರತಕುಮಾರ ವಿ,  ಪಿ.ಎಸ್.ಐ (ಕಾ&ಸು), ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ ರವರು ದಿನಾಂಕ: 18-11-2021 ರಂದು 14-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 140/2021, ಕಲಂ: 143, 147, 148, 326, 307, 384 ಸಹಿತ 149 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಮಾದೇವ ನಾಯ್ಕ ಸಾ|| ಬೆಳಕೆ, ತಾ: ಭಟ್ಕಳ, 2]. ಶಂಕರ ನಾಯ್ಕ ಹಾಗೂ ಇನ್ನುಳಿದ 6 ಜನ ಆರೋಪಿತರು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಪಿರ್ಯಾದಿಯು ಕರಾವಳಿ ಸಮಾಚಾರ ವಾಹಿನಿಯ ಪ್ರಧಾನ ಸಂಪಾದಕರಿದ್ದು, ಆರೋಪಿ 1 ನೇಯವನಿಗೂ ಮತ್ತು ಪಿರ್ಯಾದಿಗೂ ಹಳೇ ದ್ವೇಷ ಇದ್ದು, ಅದಲ್ಲದೇ ಕಳೆದ 3 ದಿನಗಳ ಹಿಂದೆ ಭಟ್ಕಳ ತಾಲೂಕಿನ ಕ್ರಿಯೇಷನ ಕ್ಲಬ್ ಬಗ್ಗೆ ಸುದ್ದಿ ಮಾಡಿದ್ದರಿಂದ ಸದ್ರಿ ಕ್ಲಬ್ ನ ಮಾಲೀಕರು ಪಿರ್ಯಾದಿಯ ಮೇಲೆ ಸಿಟ್ಟಿನಿಂದ ಇದ್ದವರು, ಆರೋಪಿ 2 ನೇಯವನು ಕಳೆದ 2 ದಿನಗಳಿಂದ ಪಿರ್ಯಾದಿಯನ್ನು ಹಿಂಬಾಲಿಸುತ್ತಿದ್ದು, ಹೀಗಿರುತ್ತಾ ದಿನಾಂಕ: 18-11-2021 ರಂದು ಸಾಯಂಕಾಲ 05-45 ಗಂಟೆಯ ಸಮಯಕ್ಕೆ ಪಿರ್ಯಾದಿಯು ತನ್ನ ಕಛೇರಿಯಲ್ಲಿ ಕೆಲಸ ಮುಗಿಸಿಕೊಂಡು ಬೆಳಕೆಯಲ್ಲಿರುವ ತನ್ನ ಮನೆಗೆ ತನ್ನ ಡಿಯೋ ಸ್ಕೂಟಿ ನಂ: ಕೆ.ಎ-47/ಆರ್-2600 ನೇದರ ಮೇಲೆ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ಡಾಂಬರ್ ರಸ್ತೆಯ ಮೇಲೆ ಹೋಗುತ್ತಿರುವಾಗ ಸಾಯಂಕಾಲ ಸುಮಾರು 06-10 ರಿಂದ 06-15 ಗಂಟೆಯ ಸಮಯಕ್ಕೆ ಬೆಳಕೆಯ ವಾಂಟಿಕೋಳ ಮೋರಿ ಹತ್ತಿರ ಬೆಳಕೆ ಕಡೆಯಿಂದ ಸರ್ಪನಕಟ್ಟಾ ಕಡೆಗೆ ಒಬ್ಬ ಮೋಟಾರ್ ಸೈಕಲ್ ಸವಾರನು ಬಂದು ಪಿರ್ಯಾದಿಯನ್ನು ನೋಡಿ ತನ್ನ ಮೋಟಾರ್ ಸೈಕಲ್‍ನ್ನು ತಿರುಗಿಸಿ ಪಿರ್ಯಾದಿಯನ್ನು ಹಿಂಬಾಲಿಸಿ, ತನ್ನ ಮೋಟಾರ್ ಸೈಕಲಿನಿಂದ ಪಿರ್ಯಾದಿಯ ಸ್ಕೂಟಿಗೆ ಗುದ್ದಿದ ರೀತಿ ಮಾಡಿ, ಸ್ಕೂಟಿಯಿಂದ ಕೆಳಗೆ ಬೀಳುವಂತೆ ಮಾಡಿ, ಅಲ್ಲೇ ಹತ್ತಿರದಲ್ಲಿ ಸ್ಕೂಟಿ ಮತ್ತು ಮೋಟಾರ್ ಸೈಕಲ್ ಮೇಲೆ ನಿಂತ ಆರೋಪಿತ 5 ಜನರು ಏಕೋದ್ದೇಶದಿಂದ ಸಂಗನಮತ ಮಾಡಿಕೊಂಡು ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಬಂದಿದ್ದು, ಅದರಲ್ಲಿ ಒಬ್ಬನು ಆರೋಪಿ 1 ನೇಯವನ ಹಾಗೆ ಕಂಡಿದ್ದು, ಎಲ್ಲರೂ ಪಿರ್ಯಾದಿಯನ್ನು ಕೊಲೆ ಮಾಡುವ ಉದ್ದೇಶದಿಂದ ಕಟ್ಟಿಗೆಯ ರೀಪ್ ಮತ್ತು ಕಟ್ಟಿಗೆಯ ಪೋಲ್ಸ್ ನಿಂದ ಪಿರ್ಯಾದಿಯ ತಲೆಗೆ ಹಾಕಿಕೊಂಡಿದ್ದ ಹೆಲ್ಮೆಟ್ ಗೆ ಹೊಡೆದು ಪಿರ್ಯಾದಿಯ ಎಡಗೈ ಮುರಿಯುವಂತೆ ಹಾಗೂ ಎಡಗಾಲಿಗೆ ಪೆಟ್ಟಾಗುವಂತೆ ಹೊಡೆದಾಗ ಪಿರ್ಯಾದಿಯು ಕೂಗಿದಾಗ ಅದೇ ಮಾರ್ಗವಾಗಿ ಮೋಟಾರ್ ಸೈಕಲ್ ಮೇಲೆ ಬರುತ್ತಿದ್ದ ಜನರನ್ನು ನೋಡಿ ಆರೋಪಿತರು ಪಿರ್ಯಾದಿಯ ಕೈಯಲ್ಲಿದ್ದ ಮೊಬೈಲ್ ನ್ನು ಕಸಿದುಕೊಂಡು ತಮ್ಮ ಮೋಟಾರ್ ಸೈಕಲ್ ಮೇಲೆ ಶಿರೂರ ಕಡೆಗೆ ಹೋದ ಬಗ್ಗೆ ಪಿರ್ಯಾದಿ ಶ್ರೀ ಅರ್ಜುನ ತಂದೆ ಮಾಧವ ಮಲ್ಯ, ಪ್ರಾಯ-30 ವರ್ಷ, ವೃತ್ತಿ-ಕರಾವಳಿ ಸಮಾಚಾರ ವಾಹಿನಿಯ ಪ್ರಧಾನ ಸಂಪಾದಕರು, ಸಾ|| ಕಂಚಿಕೇರಿ, ಬೆಳಕೆ, ತಾ: ಭಟ್ಕಳ ರವರು ದಿನಾಂಕ: 18-11-2021 ರಂದು 23-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಶಹರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 146/2021, ಕಲಂ: 78(3) ಕರ್ನಾಟಕ ಪೊಲೀಸ್ (ತಿದ್ದುಪಡಿ) ಕಾಯ್ದೆ-2021 ನೇದ್ದರ ವಿವರ...... ನಮೂದಿತ ಆರೋಪಿತ ಶ್ರೀಧರ ತಂದೆ ಕೃಷ್ಣಾ ನಾಯ್ಕ, ಪ್ರಾಯ-43 ವರ್ಷ, ವೃತ್ತಿ-ಪಾನಶಾಪ್ ಅಂಗಡಿ, ಸಾ|| ಹಳೆರ ಮನೆ, ಹುರುಳಿಸಾಲ, ತಾ: ಭಟ್ಕಳ. ಈತನು ದಿನಾಂಕ: 18-11-2021 ರಂದು ಬೆಳಿಗ್ಗೆ 10-15 ಗಂಟೆಯ ಸುಮಾರಿಗೆ ಭಟ್ಕಳದ ಶಹರದ ಸಾಗರ ರಸ್ತೆಯ ಅಮೀತಾ ಅಸ್ಪತ್ರೆ ಕ್ರಾಸ್ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ನಿಂತು ತನ್ನ ಲಾಭಕ್ಕೋಸ್ಕರ ಓ.ಸಿ ಮಟಕಾ ಜೂಗಾರಾಟದ ಅಂಕೆ-ಸಂಖ್ಯೆಗಳ ಮೇಲೆ ಸಾರ್ವಜನಿಕರಿಂದ ಹಣವನ್ನು ಪಡೆದು ಪಂಥವನ್ನಾಗಿ ಕಟ್ಟಿ, ಓ.ಸಿ ಮಟಕಾ ಜೂಗಾರಾಟ ಆಡಿಸುತ್ತಿರುವಾಗ ನಗದು ಹಣ 2,250/- ರೂಪಾಯಿ ಮತ್ತು ಓ.ಸಿ ಮಟಕಾ ಜೂಗಾರಾಟದ ಸಲಕರಣೆಗಳ ಸಮೇತ ದಾಳಿಯ ಕಾಲಕ್ಕೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಯಲ್ಲಪ್ಪ ಎಚ್. ಮಾದರ, ಪಿ.ಎಸ್.ಐ, ಭಟ್ಕಳ ಶಹರ ಪೊಲೀಸ್ ಠಾಣೆ ರವರು ದಿನಾಂಕ: 18-11-2021 ರಂದು 12-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಭಟ್ಕಳ ಶಹರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 147/2021, ಕಲಂ: 78(3) ಕರ್ನಾಟಕ ಪೊಲೀಸ್ (ತಿದ್ದುಪಡಿ) ಕಾಯ್ದೆ-2021 ನೇದ್ದರ ವಿವರ...... ನಮೂದಿತ ಆರೋಪಿತ ರತ್ನಾಕರ ತಂದೆ ರಾಮಕೃಷ್ಣ ಶೆಟ್ಟಿ, ಪ್ರಾಯ-60 ವರ್ಷ, ವೃತ್ತಿ-ಪಾನಶಾಪ್ ಅಂಗಡಿ, ಸಾ|| ಮಣ್ಕುಳಿ, ತಾ: ಭಟ್ಕಳ. ಈತನು ದಿನಾಂಕ: 18-11-2021 ರಂದು ಬೆಳಿಗ್ಗೆ 10-30 ಗಂಟೆಯ ಸುಮಾರಿಗೆ ಭಟ್ಕಳದ ಶಹರದ ಚೆನ್ನಪಟ್ಟಣ ಮಾರುತಿ ದೇವಸ್ಥಾನದ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ನಿಂತು ತನ್ನ ಲಾಭಕ್ಕೋಸ್ಕರ ಓ.ಸಿ ಮಟಕಾ ಜೂಗಾರಾಟದ ಅಂಕೆ-ಸಂಖ್ಯೆಗಳ ಮೇಲೆ ಸಾರ್ವಜನಿಕರಿಂದ ಹಣವನ್ನು ಪಡೆದು ಪಂಥವನ್ನಾಗಿ ಕಟ್ಟಿ, ಓ.ಸಿ ಮಟಕಾ ಜೂಗಾರಾಟ ಆಡಿಸುತ್ತಿರುವಾಗ ನಗದು ಹಣ 2,150/- ರೂಪಾಯಿ ಮತ್ತು ಓ.ಸಿ ಮಟಕಾ ಜೂಗಾರಾಟದ ಸಲಕರಣೆಗಳ ಸಮೇತ ದಾಳಿಯ ಕಾಲಕ್ಕೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಕುಮಾರಿ: ಸುಮಾ ಬಿ, ಡಬ್ಲ್ಯೂ.ಪಿ.ಎಸ್.ಐ, ಭಟ್ಕಳ ಶಹರ ಪೊಲೀಸ್ ಠಾಣೆ ರವರು ದಿನಾಂಕ: 18-11-2021 ರಂದು 12-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಶಹರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 148/2021, ಕಲಂ: 78(3) ಕರ್ನಾಟಕ ಪೊಲೀಸ್ (ತಿದ್ದುಪಡಿ) ಕಾಯ್ದೆ-2021 ನೇದ್ದರ ವಿವರ...... ನಮೂದಿತ ಆರೋಪಿತ ಗುರುರಾಜ ತಂದೆ ಅನಂತ ನಾಯ್ಕ, ಪ್ರಾಯ-24 ವರ್ಷ, ವೃತ್ತಿ-ಪಾನಶಾಪ್ ಅಂಗಡಿ, ಸಾ|| ಪುಷ್ಪಾಂಜಲಿ ಕ್ರಾಸ್, ತಲಾಂದ, ತಾ: ಭಟ್ಕಳ. ಈತನು ದಿನಾಂಕ: 18-11-2021 ರಂದು ಮಧ್ಯಾಹ್ನ 13-30 ಗಂಟೆಯ ಸುಮಾರಿಗೆ ಭಟ್ಕಳದ ಶಹರದ ಮೇನ್ ರೋಡ್ ಹೂವಿನ ಚೌಕ್ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ನಿಂತು ತನ್ನ ಲಾಭಕ್ಕೋಸ್ಕರ ಓ.ಸಿ ಮಟಕಾ ಜೂಗಾರಾಟದ ಅಂಕೆ-ಸಂಖ್ಯೆಗಳ ಮೇಲೆ ಸಾರ್ವಜನಿಕರಿಂದ ಹಣವನ್ನು ಪಡೆದು ಪಂಥವನ್ನಾಗಿ ಕಟ್ಟಿ, ಓ.ಸಿ ಮಟಕಾ ಜೂಗಾರಾಟ ಆಡಿಸುತ್ತಿರುವಾಗ ನಗದು ಹಣ 2,070/- ರೂಪಾಯಿ ಮತ್ತು ಓ.ಸಿ ಮಟಕಾ ಜೂಗಾರಾಟದ ಸಲಕರಣೆಗಳ ಸಮೇತ ದಾಳಿಯ ಕಾಲಕ್ಕೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಎಚ್. ಬಿ. ಕುಡಗುಂಟಿ, ಪಿ.ಎಸ್.ಐ, ಭಟ್ಕಳ ಶಹರ ಪೊಲೀಸ್ ಠಾಣೆ ರವರು ದಿನಾಂಕ: 18-11-2021 ರಂದು 15-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 203/2021, ಕಲಂ: 4, 5, 7, 12, THE KARNATAKA PREVENTION OF SLAUGHTER AND PRESERVATION OF CATTLE ORDINANCE-2020 ಹಾಗೂ ಕಲಂ: 11(1) & (D) PREVENTION OF CRUELTY TO ANIMALS ACT-1960 ಮತ್ತು ಕಲಂ: 192 ಎಮ್.ವಿ ಎಕ್ಟ್ ನೇದ್ದರ ವಿವರ...... ನಮೂದಿತ ಆರೋಪಿತರು 1]. ಸಂತೋಷ ತಂದೆ ಶಿವಾಜಿ ಘುಮ್ರೆ, ಪ್ರಾಯ-44 ವರ್ಷ, ವೃತ್ತಿ-ಲಾರಿ ಚಾಲಕ, ಸಾ|| ನಿಂಬೋಡಿ, ಪೋ: ಭವನಗರ, ತಾ: ಇಂದಾಪುರ, ಜಿ: ಪುಣೆ, ಮಹಾರಾಷ್ಟ ರಾಜ್ಯ, 2]. ಶ್ಯಾಮ ತಂದೆ ಪ್ರಹ್ಲಾದ್ ಭೋಸ್ಲೆ, ಪ್ರಾಯ-44 ವರ್ಷ, ವೃತ್ತಿ-ಲಾರಿ ಕ್ಲೀನರ್, ಸಾ|| ಸನಸರ್, ತಾ: ಇದಾಪುರ, ಜಿ: ಪುಣೆ, ಮಹಾರಾಷ್ಟ ರಾಜ್ಯ, 3]. ಜಿತ್ ತಂದೆ ನಾರಾಯಣ ಕುಟ್ಟಿ, ಪ್ರಾಯ-43 ವರ್ಷ, ವೃತ್ತಿ-ವ್ಯವಹಾರ, ಸಾ|| ಪಪೂರಕರ್, ತಾ: ಮುಕುಂದಪುರಮ್, ಜಿ: ತ್ರಿಶೂರ್, ಕೇರಳಾ ರಾಜ್ಯ, 4]. ಶಶಿ ತಂದೆ ಅಯ್ಯಪ್ಪ ಕುಟ್ಟಿ, ಪ್ರಾಯ-53 ವರ್ಷ, ವೃತ್ತಿ-ವ್ಯವಹಾರ, ಸಾ|| ಕುಟ್ಟಿಕಲ್ಲಿ ಹೌಸ್ ಮಳಗಂನ್, ಪೋ: ತುಟಿಪಾಲ, ತಾ: ಮುಕುಂದಪೆರಮ್, ಜಿ: ತ್ರಿಶೂರ್, ಕೇರಳಾ ರಾಜ್ಯ. ಈ ನಮೂದಿತ ಆರೋಪಿತರು ಕೂಡಿಕೊಂಡು ದಿನಾಂಕ: 18-11-2021 ರಂದು 20-30 ಗಂಟೆಯ ಸುಮಾರಿಗೆ ಮಹಾರಾಷ್ಟ್ರ ಬಡೋಜ್‍ದಿಂದ ಲಾರಿ ನಂ: ಎಮ್.ಎಚ್-45/ಎ.ಎಫ್–1186 ನೇದರ ಹಿಂದಿನ ಇಕ್ಕಟ್ಟಾದ ಬಾಡಿಯಲ್ಲಿ ಯಾವುದೇ ಪಾಸ್ ಯಾ ಪರವಾನಿಗೆ ಇಲ್ಲದೇ ಅಕ್ರಮವಾಗಿ 3,40,000/- ರೂಪಾಯಿ ಮೌಲ್ಯದ ಜಾನುವಾರಗಳನ್ನು ತುಂಬಿ ಅವುಗಳನ್ನು ಹಗ್ಗದಿಂದ ಕಟ್ಟಿ ಮಲಗಲು ಸಾಧ್ಯವಾಗದ ರೀತಿಯಲ್ಲಿ ಹಿಂಸಾತ್ಮಕವಾಗಿ ಬಲಿ ಕೊಡುವ ಉದ್ದೇಶದಿಂದ ಹುಬ್ಬಳ್ಳಿ ಕಡೆಯಿಂದ ಅಂಕೋಲಾ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿರುವಾಗ ಯಲ್ಲಾಪುರ ಪಟ್ಟಣದ ರೋಜರಿ ಸ್ಕೂಲ್ ಮುಂದೆ ಕಾರವಾರ-ಬಳ್ಳಾರಿ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-63 ರಲ್ಲಿ ಪಿರ್ಯಾದಿ ಮತ್ತು ಸಿಬ್ಬಂದಿಯವರು ಕೂಡಿ ದಾಳಿ ಮಾಡಿ ಹಿಡಿದ ವೇಳೆ ಸಿಕ್ಕಿರುತ್ತಾರೆ ಎಂಬ ಬಗ್ಗೆ ಪಿರ್ಯಾದಿ ಸ||ತ|| ಕುಮಾರಿ: ಪ್ರಿಯಾಂಕ ನಾಮಗೌಡ, ಡಬ್ಲ್ಯೂ.ಪಿ.ಎಸ್.ಐ, ಯಲ್ಲಾಪುರ ಪೊಲೀಸ್ ಠಾಣೆ ರವರು ದಿನಾಂಕ: 18-11-2021 ರಂದು 22-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ದಾಂಡೇಲಿ ನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 91/2021, ಕಲಂ: ಗಂಡಸು ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಗಂಡಸು ಶ್ರೀ ಮಾರುತಿ ತಂದೆ ಸುಭಾಷ ಶಹಾಪೂರಕರ, ಪ್ರಾಯ-34 ವರ್ಷ, ವೃತ್ತಿ-ಮೊಬೈಲ್ ಅಂಗಡಿಯಲ್ಲಿ ಕೆಲಸ, ಸಾ|| ಗಾಂಧಿನಗರ, ತಾ: ದಾಂಡೇಲಿ. ಪಿರ್ಯಾದುದಾರರ ಗಂಡನಾದ ಈತನು ದಿನಾಂಕ: 16-11-2021 ರಂದು 09-00 ಗಂಟೆಯ ಸುಮಾರಿಗೆ ದಾಂಡೇಲಿಯ ಸುಭಾಷ ನಗರದಲ್ಲಿರುವ ತನ್ನ ತಾಯಿಯ ಮನೆಯಿಂದ ಮನೆಯಲ್ಲಿ ಯಾರಿಗೂ ಹೇಳದೇ ಕೇಳದೇ ಎಲ್ಲಿಯೋ ಹೋಗಿದ್ದು, ಮರಳಿ ಮನೆಗೂ ಬಾರದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದು, ಕಾಣೆಯಾದ ತನ್ನ ಗಂಡನನ್ನನು ಹುಡುಕಿ ಕೊಡಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀಮತಿ ಸಂಜೀವಿನಿ ಕೋಂ. ಮಾರುತಿ ಶಹಪೂರಕರ, ಪ್ರಾಯ-30 ವರ್ಷ, ವೃತ್ತಿ-ಗೃಹಿಣಿ, ಸಾ||  ಗಾಂಧಿನಗರ, ತಾ: ದಾಂಡೇಲಿ ರವರು ದಿನಾಂಕ: 18-11-2021 ರಂದು 09-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಶಿರಸಿ ನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 81/2021, ಕಲಂ: 341, 504, 506 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಪ್ರೀತೇಶ ರೋಡ್ರಗೀಸ್, ಪ್ರಾಯ-25 ವರ್ಷ, ಸಾ|| ಗಾಂಧಿನಗರ, ತಾ: ಶಿರಸಿ. ಈತನು ಪಿರ್ಯಾದಿಯವರೊಂದಿಗೆ ಹಳೇಯ ದ್ವೇಷದಿಂದ ಇದ್ದವನು, ದಿನಾಂಕ: 16-11-2021 ರಂದು ರಾತ್ರಿ ಪಿರ್ಯಾದಿಯವರು ಆಸ್ಪತ್ರೆಯಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ನಡೆದುಕೊಂಡು ಹೋಗುತ್ತಿರುವಾಗ ಶಿರಸಿ ಶಹರದ ಚೌಕಿ ಮಠದಲ್ಲಿ ರಾತ್ರಿ 20-30 ಗಂಟೆಯ ಸುಮಾರಿಗೆ ತಲುಪಿದಾಗ ಆರೋಪಿತನು ಪಿರ್ಯಾದಿಗೆ ಅಡ್ಡಗಟ್ಟಿ ತಡೆದು ನಿಲ್ಲಿಸಿ, ಅವಾಚ್ಯ ಶಬ್ದಗಳಿಂದ ಬೈಯ್ದು, ಅಷ್ಟರಲ್ಲಿ ಜನರು ಬರುವುದನ್ನು ನೋಡಿ ಪಿರ್ಯಾದಿಗೆ ‘ಈ ದಿನ ಉಳಿದುಕೊಂಡಿದ್ದಿಚಿiiÁ. ಇನ್ನೊಂದು ದಿನ ಸಿಕ್ಕರೆ ನಿನಗೆ ಜೀವ ಸಹಿತ ಬಿಡುವುದಿಲ್ಲ’ ಅಂತಾ ಜೀವದ ಬೆದರಿಕೆ ಹಾಕಿ ಹೋದ ಬಗ್ಗೆ ಪಿರ್ಯಾದಿ ಶ್ರೀಮತಿ ಬಿ. ವಿ. ಸೌಮ್ಯ ಕೋಂ. ವಿನೋದ ಭಂಡಾರಿ, ಪ್ರಾಯ-47 ವರ್ಷ, ಸಾ|| ಕಮಟೆಹಿತ್ತಲ್, ತಾ: ಹೊನ್ನಾವರ, ಹಾಲಿ ಸಾ|| ಚೌಕಿ ಮಠ, ತಾ: ಶಿರಸಿ ರವರು ದಿನಾಂಕ: 18-11-2021 ರಂದು 19-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ರಾಮನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 84/2021, ಕಲಂ: 279, 337, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಪುಂಡ್ಲೀಕ ತಂದೆ ರವಳು ಗಾವಡೆ, ಪ್ರಾಯ-42 ವರ್ಷ, ಸಾ|| ಕಸರ್ಲೆ, ಅಸು, ತಾ: ಜೋಯಿಡಾ (ಮೋಟಾರ್ ಸೈಕಲ್ ನಂ: ಕೆ.ಎ-65/ಜೆ-5533 ನೇದರ ಚಾಲಕ). ಈತನು ದಿನಾಂಕ: 18-11-2021 ರಂದು ತನ್ನ ಮೋಟಾರ್ ಸೈಕಲ್ ನಂ: ಕೆ.ಎ-65/ಜೆ-5533 ನೇದರ ಮೇಲೆ ಹಿಂದುಗಡೆ ಶ್ರೀಮತಿ ನೀತಾ ನಾಮದೇವ ಗಾವಡೆ, ಪ್ರಾಯ-26 ವರ್ಷ, ಇವರನ್ನು ಕೂಡ್ರಿಸಿಕೊಂಡು ಕಸರ್ಲೆ ಗ್ರಾಮದ ಕಡೆಯಿಂದ ಬೋರೆಗಾಳಿ-ರಾಮನಗರ ರಸ್ತೆಯಲ್ಲಿ ಅಸು ಗ್ರಾಮದ ಹೈಸ್ಕೂಲ್ ಕ್ರಾಸ್ ಹತ್ತಿರ ರಸ್ತೆಗಳು ಅರಣ್ಯದ ಮಧ್ಯ ತಿರುವುಗಳಿಂದ ಕೂಡಿದ್ದು ಮತ್ತು ಕಾಡು ಪ್ರಾಣಿಗಳು ರಸ್ತೆಗೆ ಬರುವ ಸಾಧ್ಯತೆಗಳು ಇರುತ್ತವೆ ಅಂತಾ ಗೊತ್ತಿದ್ದೂ ಕೂಡಾ ಆರೋಪಿತನು ತನ್ನ ಮೋಟಾರ್ ಸೈಕಲನ್ನು ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬರುತ್ತಿರುವಾಗ ಕಾಡು ಕೋಣ ಒಂದು ರಸ್ತೆಗೆ ಬಂದಾಗ ಆರೋಪಿ ಮೋಟಾರ್ ಸೈಕಲ್ ಸವಾರನು ತನ್ನ ಮೋಟಾರ್ ಸೈಕಲ್ ಮೇಲಿನ ನಿಯಂತ್ರಣ ಕಳೆದುಕೊಂಡು ಮೋಟಾರ್ ಸೈಕಲ್ ಸಮೇತ ಇಬ್ಬರೂ ಕೆಳಗೆ ಬಿದ್ದು, ಆರೋಪಿ ಮೋಟಾರ್ ಸೈಕಲ್ ಸವಾರನು ತನ್ನ ಎಡಗಾಲಿಗೆ ತೆರಚಿದ ನಮೂನೆಯ ಗಾಯ ಪಡಿಸಿಕೊಂಡಿದ್ದು, ಮೋಟಾರ್ ಸೈಕಲ್ ಹಿಂಬದಿಯಲ್ಲಿ ಕುಳಿತಿದ್ದ ಶ್ರೀಮತಿ ನೀತಾ ನಾಮದೇವ ಗಾವಡೆ ರವರು ತಲೆ ಕೆಳಗಾಗಿ ಬಿದ್ದಿದ್ದರಿಂದ, ಅವರ ತಲೆ ಹಿಂಭಾಗದಲ್ಲಿ ಭಾರೀ ಒಳಪೆಟ್ಟು ಆಗಿ ಎಡಕಿವಿಯಿಂದ ರಕ್ತ ಬಂದಿದ್ದು, ಅಲ್ಲಿಯೇ ಇದ್ದ ಪಿರ್ಯಾದಿಯವರು ಸ್ಥಳೀಕರ ಸಹಾಯದಿಂದ ಆಸ್ಪತ್ರೆಗೆ ಸೇರಿಸಿದ ಬಗ್ಗೆ ಪಿರ್ಯಾದಿ ಶ್ರೀ ಕಿರಣ ತಂದೆ ನಾರಾಯಣ ಕೊಲೇಕರ, ಪ್ರಾಯ-21 ವರ್ಷ, ವೃತ್ತಿ-ಪೇಂಟಿಂಗ್ ಕೆಲಸ, ಸಾ|| ಕಸರ್ಲೆ, ಅಸು, ತಾ: ಜೋಯಿಡಾ ರವರು ದಿನಾಂಕ: 18-11-2021 ರಂದು 17-50 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಅಂಬಿಕಾನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 12/2021, ಕಲಂ: 279, 337, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಸುರೇಂದ್ರ ತಂದೆ ರಾಮಯ್ಯ ಶೇರುಗಾರ, ಪ್ರಾಯ-26 ವರ್ಷ, ವೃತ್ತಿ-ಎಮ್.ಟಿ.ಎಸ್ ಹೆಡ್ ಪೊಸ್ಟ್ ಆಫೀಸ್ ತಾ: ದಾಂಡೇಲಿ, ಹಾಲಿ ಸಾ|| ತೆಲಂಗಾರ, ತಾ: ಯಲ್ಲಾಪುರ (ಹೋಂಡಾ ಸಿಬಿಆರ್ ಮೋಟಾರ್ ಸೈಕಲ್ ನಂ: ಕೆ.ಎ-31/ವಿ-7143 ನೇದರ ಸವಾರ). ಈತನು ದಿನಾಂಕ: 18-11-2021 ರಂದು ಸಂಜೆ 18-15 ಗಂಟೆಗೆ ತನ್ನ ಹೋಂಡಾ ಸಿಬಿಆರ್ ಮೋಟಾರ್ ಸೈಕಲ್ ನಂ: ಕೆ.ಎ-31/ವಿ-7143 ನೇದನ್ನು ದಾಂಡೇಲಿ ಕಡೆಯಿಂದ ಯಲ್ಲಾಪುರ ಕಡೆಗೆ ಅತೀವೇಗವಾಗಿ ಹಾಗೂ ಅಜಾಕರೂಕತೆಯಿಂದ ಚಲಾಯಿಸಿಕೊಂಡು ಹೋಗುತ್ತಿದ್ದವನು, ಅಂಬಿಕಾನಗರದ ಕೇಗದಾಳ ಗ್ರಾಮದ ಮಾರುತಿ ದೇವಸ್ಥಾನ ಹತ್ತಿರ ರಸ್ತೆಯ ಮೇಲೆ ಅಡ್ಡವಾಗಿ ಬಂದ ಎಮ್ಮೆಯನ್ನು ತಪ್ಪಿಸಲು ಹೋಗಿ, ತನ್ನ ಮೋಟಾರ್ ಸೈಕಲಿನ ವೇಗವನ್ನು ನಿಯಂತ್ರಿಸದೇ, ತನ್ನ ಮೋಟಾರ್ ಸೈಕಲನ್ನು ರಸ್ತೆಯ ಬಲಕ್ಕೆ ಚಲಾಯಿಸಿ, ರಸ್ತೆಯ ಬಲದಲ್ಲಿ ಇರುವ ಆನೆಗಳ ತಡೆಗೋಡೆಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿಕೊಂಡಿದ್ದು, ಈ ಅಪಘಾತದಿಂದ ಆರೋಪಿ ಮೋಟಾರ್ ಸೈಕಲ್ ಸವಾರನ ತಲೆಗೆ ಭಾರೀ ಗಾಯವಾಗಿದ್ದು, ಹೆಚ್ಚಿನ ಉಪಚಾರಕ್ಕೆ ದಾಂಡೇಲಿಯ ಸರ್ಕಾರಿ ಆಸ್ಪತ್ರೆಯಿಂದ ಎಸ್.ಡಿ.ಎಮ್ ಆಸ್ಪತ್ರೆ, ಧಾರವಾಡಕ್ಕೆ ಒಯ್ದಿದ್ದು, ಈ ಅಪಘಾತವು ಆರೋಪಿ ಮೋಟಾರ್ ಸೈಕಲ್ ಸವಾರನ ಅತೀವೇಗದ ಹಾಗೂ ಅಜಾಗರೂಕತೆಯ ಚಾಲನೆಯಿಂದ ಘಟಿಸಿದ ಬಗ್ಗೆ ಪಿರ್ಯಾದಿ ಶ್ರೀ ಮೌಲಾಲಿ ತಂದೆ ಮಹಮ್ಮದಲಿ ಬಡಗಿ, ಪ್ರಾಯ-49 ವರ್ಷ, ವೃತ್ತಿ-ಗ್ರಾಮೀಣ ಅಂಚೆ ಪಾಲಕ, ಕೇಗದಾಳ, ತಾ: ದಾಂಡೇಲಿ, ಹಾಲಿ ಸಾ|| ಬೊಮ್ಮನಹಳ್ಳಿ, ತಾ: ದಾಂಡೇಲಿ ರವರು ದಿನಾಂಕ: 18-11-2021 ರಂದು 21-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 18-11-2021

at 00:00 hrs to 24:00 hrs

 

ಯಾವುದೇ ಪ್ರಕರಣಗಳು ದಾಖಲಾಗಿರುವುದಿಲ್ಲ....

 

======||||||||======

 

 

 

 

 

 

ಇತ್ತೀಚಿನ ನವೀಕರಣ​ : 21-11-2021 06:11 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080