ದೈನಂದಿನ ಜಿಲ್ಲಾ ಅಪರಾಧ ವರದಿ
ದಿನಾಂಕ:- 18-10-2021
at 00:00 hrs to 24:00 hrs
ಭಟ್ಕಳ ಶಹರ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 137/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ನಾಗೇಶ ತಂದೆ ಸೋಮಯ್ಯ ಗೊಂಡ, ಪ್ರಾಯ-23 ವರ್ಷ, ಸಾ|| ಕೊನಾರ ಬೆಸೆ, ತಾ: ಭಟ್ಕಳ (ಮೋಟಾರ್ ಸೈಕಲ್ ನಂ: ಕೆ.ಎ-47/ಡಬ್ಲ್ಯೂ-0828 ನೇದರ ಸವಾರ). ಈತನು ದಿನಾಂಕ: 17-10-2021 ರಂದು ರಾತ್ರಿ 19-45 ಗಂಟೆಯ ಸುಮಾರಿಗೆ ಭಟ್ಕಳ ಶಹರದ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ರಸ್ತೆಯಲ್ಲಿ ಮಾರುತಿ ಶೋ ರೂಮ್ ಎದುರಿಗೆ ತನ್ನ ಮೋಟಾರ್ ಸೈಕಲ್ ನಂ: ಕೆ.ಎ-47/ಡಬ್ಲ್ಯೂ-0828 ನೇದನ್ನು ಭಟ್ಕಳ ಶಹರದ ಕಡೆಯಿಂದ ಸರ್ಪನಕಟ್ಟಾ ಕಡೆಗೆ ಅತೀವೇಗವಾಗಿ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗಿ ಸರ್ಪನಕಟ್ಟಾ ಕಡೆಯಿಂದ ಭಟ್ಕಳ ಶಹರದ ಕಡೆಗೆ ಶ್ರೀ ಮಂಜುನಾಥ ತಂದೆ ಸೋಮಯ್ಯ ಗೊಂಡ, ಪ್ರಾಯ-36 ವರ್ಷ, ಸಾ|| ಭೈರುಮನೆ, ತಲಾಂದ, ಪೋ: ಮುಟ್ಟಳ್ಳಿ, ತಾ: ಭಟ್ಕಳ ಇವರು ಚಲಾಯಿಸಿಕೊಂಡು ಬರುತ್ತಿದ್ದ ಮೋಟಾರ್ ಸೈಕಲ್ ನಂ: ಕೆ.ಎ-47/ಎಲ್-1701 ನೇದಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಮೋಟಾರ್ ಸೈಕಲ್ ಸವಾರ ಶ್ರೀ ಮಂಜುನಾಥ ತಂದೆ ಸೋಮಯ್ಯ ಗೊಂಡ ಇವರಿಗೆ ಎಡಗೈಗೆ, ಬಲಗಾಲಿಗೆ ಹಾಗೂ ತಲೆಗೆ ಸಾದಾ ಸ್ವರೂಪದ ಗಾಯನೋವು ಪಡಿಸಿದ್ದಲ್ಲದೇ, ಆರೋಪಿ ಸವಾರನು ತನಗೂ ಸಹ ಬಲಗೈಗೆ ಸಾದಾ ಸ್ವರೂಪದ ಗಾಯನೋವು ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ಮಾದೇವ ತಂದೆ ನಾಗಪ್ಪ ನಾಯ್ಕ, ಪ್ರಾಯ-48 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ತಲಾಂದ, ಪೋ: ಮುಟ್ಟಳ್ಳಿ, ತಾ: ಭಟ್ಕಳ ರವರು ದಿನಾಂಕ: 18-10-2021 ರಂದು 20-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಯಲ್ಲಾಪುರ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 184/2021, ಕಲಂ: 381, 420 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ರಾಜು, 2]. ರಾಕೇಶ ಜಾನಾ, ಸಾ|| ಪಶ್ಚಿಮ ಬಂಗಾಳ. ಈ ನಮೂದಿತ ಆರೋಪಿತರು ಕಳೆದ 3 ತಿಂಗಳಿನಿಂದ ಪಿರ್ಯಾದಿಯವರು ನಡೆಸುತ್ತಿರುವ ಸ್ವರ್ಣ ಇಂಡಸ್ಟ್ರೀಸ್ ನಲ್ಲಿ ಬೆಳ್ಳಿಯ ಆಭರಣಗಳ ತಯಾರಿಕೆ ಕೆಲಸಕ್ಕಾಗಿ ಇದ್ದವರು, ದಿನಾಂಕ: 17-10-2021 ರಂದು ಸಂಜೆ ಸುಮಾರು 17-00 ಗಂಟೆಗೆ ಸದರಿ ಆರೋಪಿತರು ಕೆಲಸ ಮಾಡುವ ಮನೆಯಲ್ಲಿಯ ಡ್ರಾವರ್ ನಲ್ಲಿಟ್ಟಿದ್ದ 1,62,000/- ರೂಪಾಯಿ ಬೆಲೆಬಾಳುವ ಸುಮಾರು 2 ಕೆ.ಜಿ 280 ಗ್ರಾಂ ತೂಕದ ಬೆಳ್ಳಿಯ ಚೈನನ್ನು ಕಳ್ಳತನ ಮಾಡಿಕೊಂಡು ಪಿರ್ಯಾದಿಗೆ ಕೊಡಬೇಕಾಗಿದ್ದ 18,000/- ರೂಪಾಯಿ ಹಣವನ್ನು ಕೊಡದೇ ಮೋಸ ಮಾಡಿ ಹೋದ ಬಗ್ಗೆ ಪಿರ್ಯಾದಿ ಶ್ರೀ ಸಚಿನ್ ತಂದೆ ಮಂಜುನಾಥ ಕುರ್ಡೇಕರ, ಪ್ರಾಯ-26 ವರ್ಷ, ವೃತ್ತಿ-ಅಕ್ಕಸಾಲಿಗ, ಸಾ|| ಕಾಳಮ್ಮನಗರ, ತಾ: ಯಲ್ಲಾಪುರ ರವರು ದಿನಾಂಕ: 18-10-2021 ರಂದು 18-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ದಾಂಡೇಲಿ ನಗರ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 85/2021, ಕಲಂ: ಮಹಿಳೆ ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಮಹಿಳೆ ಕುಮಾರಿ: ಆಫ್ರೀನ್ ತಂದೆ ಸಲೀಂ ಶೇಖ್, ಪ್ರಾಯ-19 ವರ್ಷ, ಸಾ|| ಆಶ್ರಯ ಕಾಲೋನಿ, ಗಾಂಧಿನಗರ, ದಾಂಡೇಲಿ. ಪಿರ್ಯಾದಿಯವರ ಮಗಳಾದ ಇವಳು ದಿನಾಂಕ: 17-10-2021 ರಂದು ಮಧ್ಯಾಹ್ನ 12-00 ಗಂಟೆಯ ಸಮಯಕ್ಕೆ ತಾನು ತನ್ನ ಗೆಳತಿಯರೊಂದಿಗೆ ಗಾರ್ಡನ್ ಗೆ ಹೋಗಿ ಬರುತ್ತೇನೆ ಅಂತಾ ಹೇಳಿ ದಾಂಡೇಲಿ, ಗಾಂಧಿನಗರದ ಆಶ್ರಯ ಕಾಲೋನಿಯಲ್ಲಿರುವ ತನ್ನ ಮನೆಯಿಂದ ಹೋದವಳು ಈವರೆಗೂ ಮರಳಿ ಮನೆಗೆ ಬಾರದೇ ಎಲ್ಲಿಗೋ ಹೋಗಿ ಕಾಣೆಯಾಗಿದ್ದು, ಸದರಿ ಕಾಣೆಯಾದವಳನ್ನು ಹುಡುಕಿ ಕೊಡುವಂತೆ ಕೋರಿದ ಬಗ್ಗೆ ಪಿರ್ಯಾದಿ ಶ್ರೀಮತಿ ಸಲ್ಮಾ ಕೊಂ. ಸಲೀಂ ಶೇಖ್, ಪ್ರಾಯ-45 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಆಶ್ರಯ ಕಾಲೋನಿ, ಗಾಂಧಿನಗರ, ದಾಂಡೇಲಿ ರವರು ದಿನಾಂಕ: 18-10-2021 ರಂದು 11-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಶಿರಸಿ ಗ್ರಾಮೀಣ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 102/2021, ಕಲಂ: 279, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಚನ್ನವೀರ ತಂದೆ ಶೇಖಪ್ಪ ಗಾಣಿಗೇರಿ, ಪ್ರಾಯ-46 ವರ್ಷ, ವೃತ್ತಿ-ಪೋಟೋಗ್ರಾಫರ್, ಸಾ|| ಕೆ.ಎಚ್.ಬಿ ಕಾಲೋನಿ, ಆರ್.ಎನ್.ಎಸ್ ಶೋ ರೂಮ್ ಹಿಂಭಾಗ, ತಾ: ಶಿರಸಿ (ಕಾರ್ ನಂ: ಕೆ.ಎ-51/ಎನ್-9931 ನೇದರ ಚಾಲಕ). ಈತನು ದಿನಾಂಕ: 17-10-2021 ರಂದು 20-20 ಗಂಟೆಯ ಸುಮಾರಿಗೆ ತನ್ನ ಕಾರ್ ನಂ: ಕೆ.ಎ-51/ಎನ್-9931 ನೇದನ್ನು ಸೋಂದಾ ಕಡೆಯಿಂದ ಹುಲೇಕಲ್ ಕಡೆಗೆ ಅತೀವೇಗವಾಗಿ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದವನು, ಕೋಡಿಗಾರ ಹತ್ತಿರದ ರಸ್ತೆಯಲ್ಲಿ ಕಾರಿನ ವೇಗವನ್ನು ನಿಯಂತ್ರಿಸಲಾಗದೇ ರಸ್ತೆಯ ತೀರಾ ಬಲಬದಿಗೆ ಚಲಾಯಿಸಿ, ಎದುರುಗಡೆ ಹುಲೇಕಲ್ ಕಡೆಯಿಂದ ಸೋಂದಾ ಕಡೆಗೆ ಬರುತ್ತಿದ್ದ ಮೋಟಾರ್ ಸೈಕಲ್ ನಂ: ಕೆ.ಎ-31/ಎಸ್-9693 ನೇದಕ್ಕೆ ಡಿಕ್ಕಿ ಹೊಡೆದು, ಅಪಘಾತ ಪಡಿಸಿ ಮೋಟಾರ್ ಸೈಕಲ್ ಜಖಂಗೊಳಿದ್ದಲ್ಲದೇ, ಮೋಟಾರ್ ಸೈಕಲ್ ಸವಾರ ಶ್ರೀ ರಾಘವೇಂದ್ರ ತಂದೆ ದಯಾನಂದ ಮಹಾಲೆ ಇವರ ತಲೆಗೆ ಹಾಗೂ ಬಲಗೈಗೆ ಗಂಭೀರ ಸ್ವರೂಪ ಗಾಯನೋವು ಪಡಿಸಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಕುಮಾರಿ: ಅನುಷಾ ತಂದೆ ಸುರೇಶ ಮಹಾಲೆ, ಪ್ರಾಯ-29 ವರ್ಷ, ವೃತ್ತಿ-ಖಾಸಗಿ ನೌಕರಿ, ಸಾ|| ಆರೆಕಟ್ಟಾ. ಪೋ: ವಾನಳ್ಳಿ, ತಾ: ಶಿರಸಿ ರವರು ದಿನಾಂಕ: 18-10-2021 ರಂದು 14-10 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಮುಂಡಗೋಡ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 132/2021, ಕಲಂ: ಮಹಿಳೆ ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಮಹಿಳೆ ಕುಮಾರಿ: ಶಬನಂ ತಂದೆ ರಾಜೇಸಾಬ್ ಮತ್ತಿಗಟ್ಟಿ, ಪ್ರಾಯ-21 ವರ್ಷ, ವೃತ್ತಿ-ಬಟ್ಟೆ ಅಂಗಡಿಯಲ್ಲಿ ಕೆಲಸ, ಸಾ|| ಕಂಬಾರಗಟ್ಟಿ, ತಾ: ಮುಂಡಗೋಡ. ಪಿರ್ಯಾದಿಯ ಅಣ್ಣನ ಮಗಳಾದ ಇವಳು ದಿನಾಂಕ: 11-10-2021 ರಂದು ರಾತ್ರಿ 08-30 ಗಂಟೆಗೆ ತಾನು ಕೆಲಸ ಮಾಡುತ್ತಿದ್ದ ಬಟ್ಟೆ ಅಂಗಡಿಯಲ್ಲಿ ಕೆಲಸ ಮುಗಿಸಿಕೊಂಡು ಪರತ್ ಮನೆಗೆ ಬರದೇ ಎಲ್ಲಿಯೋ ಹೋಗಿ ಕಾಣೆಯಾದವಳಿಗೆ ಮುಂಡಗೋಡ ಸುತ್ತಮುತ್ತಲ ಹಳ್ಳಿಗಳಲ್ಲಿ, ಶಿಗ್ಗಾಂವ ತಾಲೂಕಿನ ಬಸನಕಟ್ಟಿ ಮುಂತಾದ ಕಡೆಯಲ್ಲಿ ಹುಡಕಾಡಿದರೂ ಸಿಕ್ಕಿದ್ದು ಇರುವುದಿಲ್ಲ. ಕಾಣೆಯಾದವಳನ್ನು ಇದುವರೆಗೂ ಹುಡುಕಾಡಿ ಪತ್ತೆಯಾಗದೇ ಇದ್ದುದರಿಂದ ಸದ್ರಿಯವಳಿಗೆ ಹುಡುಕಿ ಕೊಡುವಂತೆ ಕೋರಿದ ಬಗ್ಗೆ ಪಿರ್ಯಾದಿ ಶ್ರೀ ಕಲಂದರ್ ತಂದೆ ಖಾಸಿಂಸಾಬ್ ಮತ್ತಿಗಟ್ಟಿ, ಪ್ರಾಯ-45 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕಂಬಾರಗಟ್ಟಿ, ತಾ: ಮುಂಡಗೋಡ ರವರು ದಿನಾಂಕ: 18-10-2021 ರಂದು 20-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಅಂಬಿಕಾನಗರ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 08/2021, ಕಲಂ: 279, 337, 304(ಎ) ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ವಿಠ್ಠು ತಂದೆ ವಿಠ್ಠು ಕಸ್ತೂರೆ, ಪ್ರಾಯ-50 ವರ್ಷ, ವೃತ್ತಿ-ಫಾರೆಸ್ಟ್ ವಾಚರ್, ಸಾ|| ತಾಟವಾಳ, ತಾ: ಯಲ್ಲಾಪುರ (ಮೋಟಾರ್ ಸೈಕಲ್ ನಂ: ಕೆ.ಎ-31/ಇ.ಬಿ-9367 ನೇದರ ಸವಾರ). ಈತನು ದಿನಾಂಕ: 17-10-2021 ರಂದು ಸಾಯಂಕಾಲ 07-30 ಗಂಟೆಯ ಸುಮಾರಿಗೆ ತನ್ನ ಮೋಟಾರ್ ಸೈಕಲ್ ನಂ: ಕೆ.ಎ-31/ಇ.ಬಿ-9367 ನೇದನ್ನು ದಾಂಡೇಲಿಯ ಕರಂಪಾಲಿ ಕಡೆಯಿಂದ ತಾಟವಾಳ ಕಡೆಗೆ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಹೋಗಿ ದಾಂಡೇಲಿ ತಾಲೂಕಿನ ಕುಳಗಿ, ಕಲಬಾವಿ ಹತ್ತಿರ ಹಾಯ್ದು ಹೋದ ರಸ್ತೆಯ ಮೇಲೆ ತನ್ನ ವೇಗವನ್ನು ನಿಯಂತ್ರಿಸಲಾಗದೆ ಮೋಟಾರ್ ಸೈಕಲ್ ಸಮೇತ ರಸ್ತೆಯ ಮೇಲೆ ಬಿದ್ದುಕೊಂಡು ತನ್ನ ತಲೆಗೆ ಭಾರೀ ಸ್ವರೂಪದ ಗಾಯ ಪೆಟ್ಟು ಪಡಿಸಿಕೊಂಡವನಿಗೆ ಚಿಕಿತ್ಸೆಯ ಕುರಿತು ಅಲ್ಲಿಂದ ಕಿಮ್ಸ್ ಹುಬ್ಬಳ್ಳಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ದಾರಿಯ ಮಧ್ಯದಲ್ಲಿ ದಿನಾಂಕ: 17-10-2021 ರಂದು ರಾತ್ರಿ 11-45 ಗಂಟೆಗೆ ಮೃತಪಟ್ಟಿದ್ದಲ್ಲದೇ, ಹಿಂಬದಿ ಸವಾರನಾದ ಪಿರ್ಯಾದಿಯವರಿಗೂ ಸಹ ಸಾದಾ ಸ್ವರೂಪದ ಗಾಯನೋವು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ರಾಮು ತಂದೆ ಜನ್ನು ಗಾವಡೆ, ಪ್ರಾಯ-38 ವರ್ಷ, ವೃತ್ತಿ-ಫಾರೆಸ್ಟ್ ವಾಚರ್, ಸಾ|| ತಾಟವಾಳ, ತಾ: ಯಲ್ಲಾಪುರ ರವರು ದಿನಾಂಕ: 18-10-2021 ರಂದು 10-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
======||||||||======
ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ
ದಿನಾಂಕ:- 18-10-2021
at 00:00 hrs to 24:00 hrs
ಗೋಕರ್ಣ ಪೊಲೀಸ್ ಠಾಣೆ
ಯು.ಡಿ.ಆರ್ ಸಂಖ್ಯೆಃ 23/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಎಸ್. ಆರ್. ರವಿನಂದ, ಪ್ರಾಯ-23 ವರ್ಷ, ವೃತ್ತಿ-ಇಂಟರ್ನಶಿಪ್ ಕಂಪನಿ ಸೆಕ್ರೆಟರಿ, ಸಾ|| 12, 6 ನೇ ಮೇನ್, ಎ.ಜಿ.ಎಸ್ ಲೇಔಟ್, ನ್ಯೂ ಬೆಲ್ ರೋಡ್, ಎಮ್.ಎಸ್.ಆರ್.ಐ.ಟಿ, ಬೆಂಗಳೂರು-560054. ಈತನು ದಿನಾಂಕ: 17-10-2021 ರಂದು ಮಧ್ಯಾಹ್ನ 12-45 ಗಂಟೆಯ ಸುಮಾರಿಗೆ ಗೋಕರ್ಣದ ಬೇಲೆಹಿತ್ತಲ್ ಬೀಚಿನ ಸಮುದ್ರದ ನೀರಿನಲ್ಲಿ ತನ್ನ ಸ್ನೇಹಿತರೊಂದಿಗೆ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಬಂದ ದೊಡ್ಡ ಅಲೆಯ ರಭಸಕ್ಕೆ ನೀರಿನಲ್ಲಿ ಕಾಲು ಜಾರಿ ಸುಳಿಗೆ ಸಿಲುಕಿದವನು, ಈಜಾಡಲು ಸಾಧ್ಯವಾಗದೇ ಸಮುದ್ರದ ನೀರಿನಲ್ಲಿ ಮುಳುಗಿ ನಾಪತ್ತೆಯಾದವನು, ದಿನಾಂಕ: 18-10-2021 ರಂದು ಮಧ್ಯಾಹ್ನ 14-45 ಗಂಟೆಯ ಸುಮಾರಿಗೆ ನಾಡುಮಾಸ್ಕೇರಿಯ ಬಾವಿಕೊಡ್ಲ ಸಮುದ್ರದ ತೀರದಲ್ಲಿ ಶವವಾಗಿ ಸಿಕ್ಕಿರುತ್ತಾನೆ. ಇದರ ಹೊರತು ಆತನ ಮರಣದಲ್ಲಿ ಬೇರೇ ಯಾವುದೇ ಸಂಶಯ ಇರುವುದಿಲ್ಲ. ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಲು ಕೋರಿದ ಬಗ್ಗೆ ಪಿರ್ಯಾದಿ ಶ್ರೀ ಎಸ್. ಎನ್. ರಾಜೇಶ ತಂದೆ ಎಸ್. ನರಸಿಂಹಮನ್, ಪ್ರಾಯ-56 ವರ್ಷ, ವೃತ್ತಿ-ಖಾಸಗಿ ಕೆಲಸ, ಸಾ || 12, 6 ನೇ ಮೇನ್, ಎ.ಜಿ.ಎಸ್. ಲೇಔಟ್, ನ್ಯೂ ಬೆಲ್ ರೋಡ್, ಎಮ್.ಎಸ್.ಆರ್.ಐ.ಟಿ, ಬೆಂಗಳೂರು-560054 ರವರು ದಿನಾಂಕ: 18-10-2021 ರಂದು 16-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಹೊನ್ನಾವರ ಪೊಲೀಸ್ ಠಾಣೆ
ಯು.ಡಿ.ಆರ್ ಸಂಖ್ಯೆಃ 39/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಜಾನು ತಂದೆ ಸುಬ್ಬಾ ಅಗೇರ, ಪ್ರಾಯ-47 ವರ್ಷ, ವೃತ್ತಿ-ಮೀನುಗಾರಿಗೆ, ಸಾ|| ಕಾಗಲ್, ತಾ: ಕುಮಟಾ ಹಾಲಿ ಸಾ|| ಪ್ರಭಾತನಗರ, ತಾ: ಹೊನ್ನಾವರ. ಈತನು ವಿಪರೀತ ಸರಾಯಿ ಕುಡಿಯುವ ಚಟ ಹೊಂದಿದ್ದವನು, ತನ್ನ ಹೆಂಡತಿಯೊಂದಿಗೆ ವೈಮನಸ್ಸಿನಿಂದ ಬೇಸರದಿಂದ ಇದ್ದವನು, ದಿನಾಂಕ: 18-10-2021 ರಂದು ಬೆಳಗಿನ ಜಾವ 01-00 ಗಂಟೆಯಿಂದ 07-30 ಗಂಟೆಯ ನಡುವಿನ ಅವಧಿಯಲ್ಲಿ ತಾನು ಬಾಡಿಗೆಗೆ ಇರುವ ಪ್ರಭಾತನಗರದ ಪಿರ್ಯಾದಿಯವರ ಮನೆಯ ಮುಂದಿನ ಸಂಪಿಗೆ ಮರಕ್ಕೆ ನೈಲಾನ್ ಹಗ್ಗದಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದು, ಈ ಕುರಿತು ಮುಂದಿನ ಕಾನೂನು ಕ್ರಮ ಜರುಗಿಸಲು ಕೋರಿದ ಬಗ್ಗೆ ಪಿರ್ಯಾದಿ ಶ್ರೀ ಚಂದ್ರು ತಂದೆ ಬಿಕೋ ಮೇಸ್ತಾ, ಪ್ರಾಯ-64 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ಪ್ರಭಾತನಗರ, ತಾ: ಹೊನ್ನಾವರ ರವರು ದಿನಾಂಕ: 18-10-2021 ರಂದು 08-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಹೊನ್ನಾವರ ಪೊಲೀಸ್ ಠಾಣೆ
ಯು.ಡಿ.ಆರ್ ಸಂಖ್ಯೆಃ 40/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಮಹಾದೇವ ತಂದೆ ನಾರಾಯಣ ನಾಯ್ಕ, ಪ್ರಾಯ-60 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಮೇಲಿನ ಮುಡ್ಕಣಿ, ತಾ: ಹೊನ್ನಾವರ. ಪಿರ್ಯಾದಿಯ ಮಾವನಾದ ಇವರು ಬ್ಯಾಂಕಿನಲ್ಲಿ ಸುಮಾರು 5 ರಿಂದ 6 ಲಕ್ಷ ಸಾಲ ಮಾಡಿಕೊಂಡಿದ್ದವರು, ಅದನ್ನೇ ಮನಸ್ಸಿಗೆ ಹಚ್ಚಿಕೊಂಡು ಸದಾಕಾಲ ಬೇಜಾರಿನಲ್ಲಿ ಇರುತ್ತಿದ್ದವರು, ದಿನಾಂಕ: 17-10-2021 ರಂದು 23-15 ಗಂಟೆಗೆ ಮನೆಯಲ್ಲಿ ಇಲಿ ಪಾಷಾಣ ಸೇವಿಸಿ ಅಸ್ವಸ್ಥಗೊಂಡು ವಾಂತಿ ಮಾಡುತ್ತಾ ಹೊರಳಾಡುತ್ತಿದ್ದವರಿಗೆ, ಚಿಕಿತ್ಸೆಗಾಗಿ ಹೊನ್ನಾವರದ ತಾಲೂಕಾ ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿಗೆ ಕರೆದುಕೊಂಡು ಹೋಗಲು ಆಂಬ್ಯುಲೆನ್ಸ್ ಮೇಲಾಗಿ ಕರೆದುಕೊಂಡು ಹೋಗುತ್ತಿದ್ದಾಗ, ಹೊನ್ನಾವರ ತಾಲೂಕಿನ ಕಾಸರಕೋಡ ಹತ್ತಿರ ತಲುಪಿದಾಗ ಮಾರ್ಗ ಮಧ್ಯದಲ್ಲಿಯೇ ದಿನಾಂಕ: 18-10-2021 ರಂದು 06-15 ಗಂಟೆಗೆ ಮೃತಪಟ್ಟಿದ್ದು, ಇದರ ಹೊರತು ಮೃತನ ಸಾವಿನಲ್ಲಿ ಬೇರೇ ಯಾವುದೇ ಸಂಶಯ ಇರುವುದಿಲ್ಲ. ಈ ಕುರಿತು ಮೃತದೇಹದ ಮೇಲೆ ಮುಂದಿನ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಿದ ಬಗ್ಗೆ ಪಿರ್ಯಾದಿ ಶ್ರೀ ಕುಮಾರ ತಂದೆ ಗೋವಿಂದ ನಾಯ್ಕ, ಪ್ರಾಯ-34 ವರ್ಷ, ವೃತ್ತಿ-ಇಲೆಕ್ಟ್ರೀಶಿಯನ್, ಸಾ|| ಬಂಕನಹಿತ್ಲು, ಮುಗ್ವಾ, ತಾ: ಹೊನ್ನಾವರ ರವರು ದಿನಾಂಕ: 18-10-2021 ರಂದು 08-50 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಮುಂಡಗೋಡ ಪೊಲೀಸ್ ಠಾಣೆ
ಯು.ಡಿ.ಆರ್ ಸಂಖ್ಯೆಃ 34/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಶಂಕ್ರಪ್ಪ ತಂದೆ ಸೋಮಲಿಂಗಪ್ಪ ಕೆಂಗನೂರು, ಪ್ರಾಯ-48 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಹಿರೇಹಳ್ಳಿ ಗ್ರಾಮ, ತಾ: ಮುಂಡಗೋಡ. ಸುದ್ದಿದಾರನ ತಂದೆಯಾದ ಈತನು ವಿಪರೀತ ಸರಾಯಿ ಕುಡಿಯುವ ಚಟದವನಿದ್ದು, ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ಜೀವನದಲ್ಲಿ ಜಿಗುಪ್ಸೆ ಹೊಂದಿ ದಿನಾಂಕ: 17-10-2021 ರಂದು ರಾತ್ರಿ 22-00 ಗಂಟೆಯಿಂದ ದಿನಾಂಕ: 18-10-2021 ರಂದು ಮುಂಜಾನೆ 07-00 ಗಂಟೆಯ ನಡುವಿನ ಅವದಿಯಲ್ಲಿ ನಮ್ಮ ಮನೆಯ ಹಿಂದಿನ ಹಕ್ಕಿ ಮನೆಯ ಅಡ್ಡ ಎಳೆಗೆ ನೈಲಾನ್ ಹಗ್ಗದಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ. ನಮ್ಮ ತಂದೆಯವರ ಮೃತದೇಹವು ನಮ್ಮ ಮನೆಯಲ್ಲಿದ್ದು, ಇದರ ಹೊರತು ಅವರ ಮರಣದಲ್ಲಿ ಬೇರೇ ಯಾವುದೇ ಸಂಶಯ ವ ಕಾರಣ ಇರುವುದಿಲ್ಲ. ಈ ಕುರಿತು ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಮಂಜುನಾಥ ತಂದೆ ಶಂಕ್ರಪ್ಪ ಕೆಂಗನೂರು, ಪ್ರಾಯ-23 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಹಿರೇಹಳ್ಳಿ ಗ್ರಾಮ, ತಾ: ಮುಂಡಗೋಡ ರವರು ದಿನಾಂಕ: 18-10-2021 ರಂದು 13-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಹಳಿಯಾಳ ಪೊಲೀಸ್ ಠಾಣೆ
ಯು.ಡಿ.ಆರ್ ಸಂಖ್ಯೆಃ 28/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ರವಿ ತಂದೆ ಚೆನ್ನಪ್ಪ ನರಗುಂದ, ಪ್ರಾಯ-32 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಸಿದ್ಧರಾಮೇಶ್ವರ ಗಲ್ಲಿ, ಫಾರೆಸ್ಟ್ ಕ್ವಾರ್ಟರ್ಸ್ ಹತ್ತಿರ, ಹಳಿಯಾಳ ಶಹರ. ಪಿರ್ಯಾದಿಯವರ ಮಗನಾದ ಈತನು ಸರಾಯಿ ಕಡಿಯುವ ಚಟಕ್ಕೆ ಅಂಟಿಕೊಂಡು, ಕಾಮಾಲೆ ರೋಗಕ್ಕೆ ಒಳಗಾಗಿ ಆಸ್ಪತ್ರೆಯ ಉಪಚಾರವನ್ನು ಪಡೆದುಕೊಂಡು ಮನೆಯ ಉಪಚಾರದಲ್ಲಿದ್ದವನು, ತನಗೆ ಇದ್ದ ರೋಗದ ಬಗ್ಗೆ ಮಾನಸಿಕತೆಯಲ್ಲಿ ದಿನಾಂಕ: 18-10-2021 ರಂದು ಬೆಳಗ್ಗೆ 08-00 ಗಂಟೆಯಿಂದ 08-15 ಗಂಟೆಯ ನಡುವಿನ ಅವಧಿಯಲ್ಲಿ ತನ್ನ ಬೆಡ್ ರೂಮಿನಲ್ಲಿ ಕಬ್ಬಿಣದ ಸೀಲಿಂಗಿಗೆ ಹಗ್ಗದಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ. ಇದರ ಹೊರತು ಮೃತನ ಮರಣದಲ್ಲಿ ಬೇರೇ ಯಾವುದೇ ಸಂಶಯ ಇರುವುದಿಲ್ಲ. ಮೃತದೇಹವು ಸರ್ಕಾರಿ ಆಸ್ಪತ್ರೆಯ ಶವಾಗಾರಾದಲ್ಲಿದ್ದು, ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಂಡು ಮೃತದೇಹವನ್ನು ಬಿಟ್ಟುಕೊಡಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಚೆನ್ನಪ್ಪ ತಂದೆ ಮಲ್ಲಪ್ಪ ನರಗುಂದ, ಪ್ರಾಯ-67 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಸಿದ್ಧರಾಮೇಶ್ವರ ಗಲ್ಲಿ, ಫಾರೆಸ್ಟ್ ಕ್ವಾರ್ಟರ್ಸ್ ಹತ್ತಿರ, ಹಳಿಯಾಳ ಶಹರ ರವರು ದಿನಾಂಕ: 18-10-2021 ರಂದು 09-10 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
======||||||||======