ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 18-09-2021

at 00:00 hrs to 24:00 hrs

 

ಸಂಚಾರ ಪೊಲೀಸ್ ಠಾಣೆ ಕಾರವಾರ

ಅಪರಾಧ ಸಂಖ್ಯೆಃ 19/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಮನೀಶ ತಂದೆ ಸಾಯಿನಾಥ ಸಾವಂತ, ಪ್ರಾಯ-22 ವರ್ಷ, ವೃತ್ತಿ-ಇಂಜಿನಿಯರಿಂಗ್ ವಿದ್ಯಾರ್ಥಿ, ಸಾ|| ನಾರಾಯಣಶೇಟ್ ರೋಡ್, ಸೋನಾರವಾಡ, ಕಾರವಾರ (ಹೊಸ ನೋಂದಣಿ ಸಂಖ್ಯೆ ಹೊಂದದ ಕಪ್ಪು ಬಣ್ಣದ ಯಮಹಾ ಆರ್-15 ಮೋಟಾರ್ ಸೈಕಲ್ ಸವಾರ). ದಿನಾಂಕ: 18-09-2021 ರಂದು ಪಿರ್ಯಾದಿಯ ತಂದೆಯಾದ ಶ್ರೀ ಸಾಗಾ ತಂದೆ ದೇವಾ ಗೌಡ, ಪ್ರಾಯ-80 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಗೌಡರಕೇರಿ, ಅಲಿಗದ್ದಾ, ಕಾರವಾರ. ಇವರು ತಮ್ಮ ಸೈಕಲ್ ಮೇಲಾಗಿ ಕಾರವಾರ ಬಂದರ್ ಕಡೆಯಿಂದ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ಮುಖಾಂತರ ಕೂಲಿ ಕೆಲಸದ ನಿಮಿತ್ತ ಕಾರವಾರಕ್ಕೆ ಬರುತ್ತಿರುವಾಗ ಕಾರವಾರದ ಅಲಿಗದ್ದಾ ಭಾವುಟೆ ಕಟ್ಟೆಯ ಹತ್ತಿರ ಹೊಸ ನೋಂದಣಿ ಸಂಖ್ಯೆ ಹೊಂದದ ಕಪ್ಪು ಬಣ್ಣದ ಯಮಹಾ ಆರ್-15 ಮೋಟಾರ್ ಸೈಕಲ್ ಸವಾರನಾದ ನಮೂದಿತ ಆರೋಪಿತನು ತನ್ನ ಮೋಟಾರ್ ಸೈಕಲನ್ನು ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿಯ ತಂದೆಯವರಾದ ಸಾಗಾ ತಂದೆ ದೇವಾ ಗೌಡ ಇವರ ಸೈಕಲಿಗೆ ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಸಾಗಾ ತಂದೆ ದೇವಾ ಗೌಡ ಇವರಿಗೆ ತಲೆಯ ಹಿಂದಿನ ಭಾಗದಲ್ಲಿ ಗಾಯ ಮತ್ತು ಒಳನೋವು ಹಾಗೂ ಎಡಕಿವಿಯ ಹತ್ತಿರ ಗಾಯ ಪಡಿಸಿದ್ದಲ್ಲದೇ, ತನಗೂ ಸಹ ಬಲಗಾಲಿನ ಹಾಗೂ ಎಡಗಾಲಿನ ಮಂಡಿಯ ಮೇಲಿ ತೆರಚಿದ ಗಾಯ ಹಾಗೂ ಒಳನೋವು, ಎಡಗೈ ಮತ್ತು ಬಲಗೈ ಮುಷ್ಠಿಯ ಹತ್ತಿರ ತೆರಚಿದ ಗಾಯ ಹಾಗೂ ಒಳನೋವು, ಬಲಗಾಲಿನ ತೊಡೆಯ ಮೇಲೆ ಒಳನೋವು ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ಸುರೇಶ ತಂದೆ ಸಾಗಾ ಗೌಡ, ಪ್ರಾಯ-42 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಗೌಡಾವಾಡ, ಅಲಿಗದ್ದಾ, ಕಾರವಾರ ರವರು ದಿನಾಂಕ: 18-09-2021 ರಂದು 13-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಗೋಕರ್ಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 68/2021, ಕಲಂ: 147, 148, 323, 324, 341, 504, 506 ಸಹಿತ 149 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಸಂತೋಷ ಅನಂತ ಗಾಂವಕರ (ಪಡ್ತಿ), 2]. ಗಜಾನನ ಕಾಂತಾ ಪಡ್ತಿ, 3]. ದಿನೇಶ ಶಿವಪ್ಪ ಪಡ್ತಿ, 4]. ಅಜಯ ಜಾನು ಪಡ್ತಿ, 5]. ಅಕ್ಷಯ ಜಾನು ಪಡ್ತಿ, 6]. ಉಲ್ಲಾಸ ಸುಬ್ರಾಯ ಪಡ್ತಿ, ಸಾ|| (ಎಲ್ಲರೂ) ಹಿರೇಗುತ್ತಿ ಗ್ರಾಮ, ತಾ: ಕುಮಟಾ. ದಿನಾಂಕ: 16-09-2021 ರಂದು ಸಂಜೆ 18-30 ಗಂಟೆಯ ಸುಮಾರಿಗೆ ಪಿರ್ಯಾದಿ ಹಾಗೂ ಆತನ ಮಗನಾದ ಗೋವಿಂದ ಅನಂತ ಪಡ್ತಿ ಈತನ ಜೊತೆಯಲ್ಲಿ ಮೇಲಿನ ಹಿರೇಗುತ್ತಿಯ ಕೊಂಕಣ ಮಾಸ್ತಿ ದೇವಸ್ಥಾನದ ಎದುರಿನ ರಸ್ತೆಯಲ್ಲಿ ಹೋಗುತ್ತಿದ್ದಾಗ ನಮೂದಿತ ಆರೋಪಿತರಲ್ಲಿ ಆರೋಪಿ 1 ನೇಯವನು ಪಿರ್ಯಾದಿಗೆ ರಸ್ತೆಯಲ್ಲಿ ಅಡ್ಡಗಟ್ಟಿ ‘ನಿನ್ನ ಮಗನಾದ ಗೋವಿಂದನು ನನ್ನ ಮಗಳು ಕಾಲೇಜಿಗೆ ಹೋಗುವಾಗ ಕಾಲನ್ನು ಹಿಡಿದನಂತೆ’ ಅಂತಾ ಕೇಳಿದ್ದಕ್ಕೆ, ಪಿರ್ಯಾದಿಯು ಆರೋಪಿ 1 ನೇಯವನಿಗೆ ‘ಇದೆಲ್ಲ ಸುಳ್ಳು ಹೇಳುತ್ತೀಯಾ?’ ಅಂತಾ ಹೇಳಿದಾಗ, ಪಿರ್ಯಾದಿಯ ಜೊತೆಯಲ್ಲಿದ್ದ ಗೋವಿಂದನಿಗೆ ಆರೋಪಿ 1 ನೇಯವನು ಕೈಯಿಂದ ಹೊಡೆಯಲು ಹೋದಾಗ, ಪಿರ್ಯಾದಿಯು ‘ನನ್ನ ಮಗನಿಗೆ ಯಾಕೆ ಹೊಡೆಯುತ್ತಿ?’ ಅಂತಾ ಹೇಳಿ ಆತನ ಕೈ ಹಿಡಿದಿದ್ದಕ್ಕೆ, ಆರೋಪಿ 1 ನೇಯವನ ಸಂಬಂಧಿಕರಾದ ನಮೂದಿತ ಆರೋಪಿತರಾದ 2 ರಿಂದ 6 ನೇಯವರು ಸಂಗನಮತ ಮಾಡಿಕೊಂಡು ಬಂದು, ಕೈಯಲ್ಲಿ ಹಿಡಿದುಕೊಂಡು ಬಂದ ಕಟ್ಟಿಗೆಯ ಸೊಟ್ಟೆಯಿಂದ ಪಿರ್ಯಾದಿಯ ಮಗನಿಗೆ ಹಾಗೂ ಕೈಯಿಂದ ಪಿರ್ಯಾದಿಗೆ ಹೊಡೆದು ಗಾಯನೋವು ಪಡಿಸಿದ್ದಲ್ಲದೇ, ‘ಇನ್ನೊಮ್ಮೆ ಹುಡುಗಿಯರ ತಂಟೆಗೆ ಬಂದರೆ ಕಾಲು ಮುರಿದು ಕೊಂದು ಹಾಕುತ್ತೇವೆ’ ಅಂತಾ ಬೆದರಿಕೆ ಹಾಕಿ ಹೋದ ಬಗ್ಗೆ ಪಿರ್ಯಾದಿ ಶ್ರೀ ಅನಂತ ತಂದೆ ಕೇಮು ಪಡ್ತಿ, ಪ್ರಾಯ-76 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಕೆಳಗಿನ ಹಿರೇಗುತ್ತಿ, ತಾ: ಕುಮಟಾ ರವರು ದಿನಾಂಕ: 18-09-2021 ರಂದು 13-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮಂಕಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 124/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ಅನಿಲ ತಂದೆ ವಾಸುದೇವ ಶಾನಭಾಗ, ಪ್ರಾಯ-54 ವರ್ಷ, ವೃತ್ತಿ-ಕಿರಾಣಿ ಅಂಗಡಿ ವ್ಯಾಪಾರ, ಸಾ|| ದೇವರಗದ್ದೆ, ಮಂಕಿ, ತಾ: ಹೊನ್ನಾವರ. ಈತನು ದಿನಾಂಕ: 17-09-2021 ರಂದು 12-30 ಗಂಟೆಗೆ ಮಂಕಿ ಪೊಲೀಸ್ ಠಾಣಾ ವ್ಯಾಪ್ತಿಯ ಸೂಪರ್ ಬಜಾರ್ ನಲ್ಲಿರುವ ವಾಸುದೇವ ಜನರಲ್ ಸ್ಟೋರ್ ಎದುರಿಗೆ ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡು ಬರ-ಹೋಗುವ ಜನರಿಗೆ ಕೂಗಿ ಕರೆದು ನಿಮಗೆ 01/- ರೂಪಾಯಿಗೆ 80/- ರೂಪಾಯಿ ಕೊಡುವುದಾಗಿ ಹೇಳಿ, ಅವರಿಂದ ಓ.ಸಿ ಮಟಕಾ ಜೂಗಾರಾಟದ ಅಂಕೆ-ಸಂಖ್ಯೆಗಳ ಮೇಲೆ ಹಣವನ್ನು ಪಂಥವಾಗಿ ಕಟ್ಟಿಸಿ, ಅವರಿಗೆ ಓ.ಸಿ ಮಟಕಾ ಜೂಗಾರಾಟದ ಅಂಕೆ-ಸಂಖ್ಯೆಯ ಚೀಟಿಯನ್ನು ಬರೆದು ಕೊಡುತ್ತಾ ಜನರಿಂದ ಹಣ ಪಡೆದುಕೊಂಡು ಓ.ಸಿ ಮಟಕಾ ಜುಗಾರಾಟ ಆಡಿಸುತ್ತಿದ್ದಾಗ ದಾಳಿಯ ಸಮಯಕ್ಕೆ ಆರೋಪಿತನ ತಾಬಾದಲ್ಲಿ ಒಟ್ಟೂ ನಗದು ಹಣ 1,250/-ರೂಪಾಯಿ ಹಾಗೂ ಓ.ಸಿ ಮಟಕಾ ಜೂಗಾರಾಟದ ಸಲಕರಣೆಗಳಾದ ಓ.ಸಿ ಸಂಖ್ಯೆಗಳನ್ನು ಬರೆದ ಚೀಟಿ-1, ಕಪ್ಪು ಬಾಲ್ ಪೆನ್-1 ನೇದವುಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಅಶೋಕ ಮಾಳಾಬಗಿ, ಪಿ.ಎಸ್.ಐ (ಕಾ&ಸು), ಮಂಕಿ ಪೊಲೀಸ್ ಠಾಣೆ ರವರು ದಿನಾಂಕ: 18-09-2021 ರಂದು 21-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮಂಕಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 125/2021, ಕಲಂ: 8(C), 20(B)(ii)(A) ಎನ್.ಡಿ.ಪಿ.ಎಸ್ ಎಕ್ಟ್-1985 ನೇದ್ದರ ವಿವರ...... ನಮೂದಿತ ಆರೋಪಿತ ಜಗದೀಶ ತಂದೆ ಶಂಭು ಗೌಡ, ಪ್ರಾಯ-40 ವರ್ಷ, ಸಾ|| ಗುಣವಂತೆ, ತಾ: ಹೊನ್ನಾವರ. ಈತನು ದಿನಾಂಕ: 18-09-2021 ರಂದು 12-30 ಗಂಟೆಗೆ ಗುಣವಂತೆಯ ಬೊಳಕಟ್ಟೆಯಲ್ಲಿ ನಿಂತುಕೊಂಡು ಯಾವುದೇ ಪಾಸ್ ಯಾ ಪರ್ಮಿಟ್ ಇಲ್ಲದೆ ಸುಮಾರು 6,000/- ರೂಪಾಯಿ ಮೌಲ್ಯದ 30 ಗ್ರಾಂ ಗಾಂಜಾವನ್ನು ತನ್ನ ತಾಬಾದಲ್ಲಿಟ್ಟುಕೊಂಡು ಮಾರಾಟಕ್ಕಾಗಿ ನಿಂತುಕೊಂಡಿರುವಾಗ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಅಶೋಕ ಮಾಳಾಬಗಿ, ಪಿ.ಎಸ್.ಐ (ಕಾ&ಸು), ಮಂಕಿ ಪೊಲೀಸ್ ಠಾಣೆ ರವರು ದಿನಾಂಕ: 18-09-2021 ರಂದು 14-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮುರ್ಡೇಶ್ವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 88/2021, ಕಲಂ: 279, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಅಬ್ದುಲ್ ಖಾದರ್ ಜೈಲಾನಿ ತಂದೆ ಮಹಮ್ಮದ್ ಹುಸೇನ್ ನಿಲಗೇರಿ, ಪ್ರಾಯ-42 ವರ್ಷ, ವೃತ್ತಿ-ಚಾಲಕ, ಸಾ|| 3 ನೇ ಕ್ರಾಸ್, ನ್ಯಾಶನಲ್ ಕಾಲೋನಿ, ಮಾವಳ್ಳಿ-01, ಮುರ್ಡೇಶ್ವರ, ತಾ: ಭಟ್ಕಳ (ರಾಯಲ್ ಎನಫೀಲ್ಡ್ ಬುಲೆಟ್ ಮೋಟಾರ್ ಸೈಕಲ್ ನಂ: ಕೆ.ಎ-47/ಆರ್-8888 ನೇದರ ಸವಾರ). ಪಿರ್ಯಾದಿಯು ದಿನಾಂಕ: 18-09-2021 ರಂದು ಮೀನು ತರಲು ತನ್ನ ಮನೆಯಿಂದ ಅಂದರೆ ತೆರ್ನಮಕ್ಕಿ ಕಡೆಯಿಂದ ಬಸ್ತಿ ಕಡೆಗೆ ರಾಷ್ಟ್ರೀಯ ಹೆದಾರಿ ಸಂಖ್ಯೆ-66 ರ ಮೇಲೆ ತನ್ನ ಎಡಬದಿಯಿಂದ ನಡೆದುಕೊಂಡು ಬಸ್ತಿ ಮೀನು ಮಾರುಕಟ್ಟೆಗೆ ಬಂದು ಮೀನು ನೋಡಿ, ಉತ್ತರಕೊಪ್ಪ ರಸ್ತೆಯ ಪಕ್ಕದಲ್ಲಿ ತಾಜಾ ಮೀನು ಸಿಗಬಹುದು ಅಂತ ಭಾವಿಸಿ, ಬಸ್ತಿ ಮೀನು ಮಾರುಕಟ್ಟೆಯಿಂದ ಉತ್ತರಕೊಪ್ಪ ಕಡೆಗೆ ಹೋಗಲು ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ರಸ್ತೆ ದಾಟಲು ರಸ್ತೆಯ ಪಕ್ಕ ನಿಂತುಕೊಂಡಿರುವಾಗ ಸುಮಾರು 18-30 ಗಂಟೆಗೆ ರಾಯಲ್ ಎನಫೀಲ್ಡ್ ಬುಲೆಟ್ ಮೋಟಾರ್ ಸೈಕಲ್ ನಂ: ಕೆ.ಎ-47/ಆರ್-8888 ನೇದರ ಸವಾರನಾದ ನಮೂದಿತ ಆರೋಪಿತನು ಭಟ್ಕಳ ಕಡೆಯಿಂದ ಹೊನ್ನಾವರ ಕಡೆಗೆ ತನ್ನ ವಾಹನವನ್ನು ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆಯ ಪಕ್ಕ ನಿಂತುಕೊಂಡಿದ್ದ ಪಿರ್ಯಾದಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದಾಗ ಡಿಕ್ಕಿಯ ರಭಸಕ್ಕೆ ಪಿರ್ಯಾದಿಯ ಎಡಗೈ ಮೊಣಗಂಟಿಗೆ ಸಾದಾ ಸ್ವರೂಪದ ಗಾಯ ಹಾಗೂ ಎಡಗಾಲು ಮೊಣಗಂಟಿನ ಕೆಳಗೆ ಮೂಳೆ ಮೂರಿದು ಗಂಭೀರ ಸ್ವರೂಪದ ಗಾಯನೋವು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಜಟ್ಟಾ ತಂದೆ ಕುಪ್ಪಾ ನಾಯ್ಕ, ಪ್ರಾಯ-62 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕನ್ನಯ್ಯನ ಮನೆ, ಕಟಗೇರಿ, ತೆರ್ನಮಕ್ಕಿ, ಪೋ: ಕಾಯ್ಕಿಣಿ, ತಾ: ಭಟ್ಕಳ ರವರು ದಿನಾಂಕ: 18-09-2021 ರಂದು 20-05 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 114/2021, ಕಲಂ: 201, 302 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಆದಿತ್ಯ ತಂದೆ ಬಿ. ಎನ್. ನಾಗರಾಜ, ಪ್ರಾಯ-32 ವರ್ಷ, ಸಾ|| ನಂ: 11-16 ಮೇನ್, 15 ನೇ ಕ್ರಾಸ್, ಬಂಡಪ್ಪಾ ಗಾರ್ಡನ್, ಮುರ್ಥಲಾ ನಗರ, ಜೆ.ಪಿ ಪಾರ್ಕ್ ಎಮ್ ಸ್ಟ್ರೀಟ್, ಬೆಂಗಳೂರು ಉತ್ತರ, ಬೆಂಗಳೂರು, ಕರ್ನಾಟಕ-560054. ಈತನು ಅಂದಾಜು 2 ಅಥವಾ 3 ದಿನಗಳ ಹಿಂದೆ (ದಿನಾಂಕ ಮತ್ತು ವೇಳೆ ತಿಳಿದು ಬಂದಿರುವುದಿಲ್ಲ) ರಂದು ಹಡೀನ್ ಇಕೋ ಬೀಚ್ ಪಕ್ಕದ ಸಮುದ್ರ ದಡದ ಮೇಲೆ ಯಾವುದೋ ಕಾರಣಕ್ಕಾಗಿ ಶ್ರೀಮತಿ ಲಕ್ಷ್ಮೀ ಎನ್. ರಾಜ ಕೋಂ. ಬಿ ಎಸ್. ನಾಗರಾಜ, ಸಾ|| ನಂ 11-16 ಮೇನ್, 15 ನೇ ಕ್ರಾಸ್, ಬಂಡಪ್ಪಾ ಗಾರ್ಡನ್, ಮುರ್ಥಲಾ ನಗರ, ಜೆ.ಪಿ ಪಾರ್ಕ್ ಎಮ್ ಸ್ಟ್ರೀಟ್, ಬೆಂಗಳೂರು ಉತ್ತರ, ಬೆಂಗಳೂರು ಇವಳಿಗೆ ಬಂಡಗಲ್ಲಿನ ಮೇಲಿನಿಂದ ದೂಡಿ ಹಾಕಿ ಸಾಯಿಸಿದ್ದಲ್ಲದೇ, ತಮ್ಮ ಗುರುತು ಪತ್ತೆಯಾಗದಂತೆ ತಮ್ಮ ಆಧಾರ್ ಕಾರ್ಡ್, ಪಾನ್ ಕಾರ್ಡ್ ಹಾಗೂ ಇತರೆ ದಾಖಲಾತಿಗಳನ್ನು ಹರಿದು ಬಿಸಾಡಿ ಸಾಕ್ಷ್ಯ ನಾಶ ಪಡಿಸಿ, ತಾನು ಸಹ ಕುತ್ತಿಗೆಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ಶಿವರಾಜ ತಂದೆ ಪಾಂಡುರಂಗ ನಾಯ್ಕ, ಪ್ರಾಯ-23 ವರ್ಷ, ವೃತ್ತಿ-ಅರಣ್ಯ ಇಲಾಖೆಯಲ್ಲಿ ದಿನಗೂಲಿ ನೌಕರ, ಸಾ|| ಹಡೀನ್, ಸೋಡಿಗದ್ದೆ, ತಾ: ಭಟ್ಕಳ ರವರು ದಿನಾಂಕ: 18-09-2021 ರಂದು 16-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 77/2021, ಕಲಂ: 454, 457, 380 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ದಿನಾಂಕ: 03-09-2021 ರಂದು 21-00 ಗಂಟೆಯಿಂದ ದಿನಾಂಕ: 04-09-2021 ರಂದು ಬೆಳಿಗ್ಗೆ 09-00 ಗಂಟೆಯ ನಡುವಿನ ಅವಧಿಯಲ್ಲಿ ಪಿರ್ಯಾದಿಯ ಶ್ರೀ ರೇಣುಕಾ ಸ್ಟೀಲ್ ಆ್ಯಂಡ್ ಹಾರ್ಡವೇರ್ ಅಂಗಡಿಯ ರೂಫಿಂಗ್ ಶೀಟ್ ಅನ್ನು ಮುರಿದು ತಗೆದು ಅಂಗಡಿಯ ಒಳ ನುಗ್ಗಿ ಅಂಗಡಿಯ ಕ್ಯಾಶ್ ಕೌಂಟರ್ ಟೇಬಲ್ ಡ್ರಾವರ್ ದಲ್ಲಿಟ್ಟ 1). ನಗದು ಹಣ 10,000/- ರೂಪಾಯಿ ಹಾಗೂ ಅಂಗಡಿಯಲ್ಲಿದ್ದ ವಸ್ತುಗಳಾದ 2). ಸೂಪರ್ ಜೀತ್ ಕಂಪನಿಯ ಡ್ರಿಲ್ ಮಷೀನ್-01, ಅ||ಕಿ|| 2,800/- ರೂಪಾಯಿ, 3). ಓಸಿಮಾ ಕಂಪನಿಯ ವೆಲ್ಡಿಂಗ್ ರಾಡ್ಸ್ ಬಾಕ್ಸ್-01, ಅ||ಕಿ|| 3,800/- ರೂಪಾಯಿ, 3). ಜಾನ್ ಬಂಢಾರಿ ಕಂಪನಿಯ ಕಟ್ಟಿಂಗ್ ವೀಲ್ ಬಾಕ್ಸ್-04 (1 ಬಾಕ್ಸ್ ಗೆ 720/- ರೂಪಾಯಿ), ಅ||ಕಿ|| 2,880/- ರೂಪಾಯಿ, 4). ವೆಲ್ಡಿಂಗ್ ಮಷೀನ್ ಕೇಬಲ್-15 ಮೀಟರ್ (1 ಮೀಟರಿಗೆ 350/- ರೂಪಾಯಿ), ಅ||ಕಿ|| 5,250/- ರೂಪಾಯಿ. ಹೀಗೆ 10,000/- ರೂಪಾಯಿ ನಗದು ಹಣ ಹಾಗೂ ಒಟ್ಟೂ 14,730/- ರೂಪಾಯಿ ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀ ಪ್ರಸನ್ನ ತಂದೆ ಚಂದ್ರಶೇಖರ ಜೋಗಳೇಕರ, ಪ್ರಾಯ-25 ವರ್ಷ, ವೃತ್ತಿ-ಸ್ಟೀಲ್ ಆ್ಯಂಡ್ ಹಾರ್ಡವೇರ್ ಶಾಪ್, ಸಾ|| ಹನುಮಗಿರಿ ದೇವಸ್ಥಾನದ ಹತ್ತಿರ, ತಾ: ಶಿರಸಿ ರವರು ದಿನಾಂಕ: 18-09-2021 ರಂದು 13-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 18-09-2021

at 00:00 hrs to 24:00 hrs

 

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 17/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಆದಿತ್ಯ ತಂದೆ ಬಿ. ಎನ್. ನಾಗರಾಜ, ಪ್ರಾಯ-32 ವರ್ಷ, ಸಾ|| ನಂ: 11-16 ಮೇನ್, 15 ನೇ ಕ್ರಾಸ್, ಬಂಡಪ್ಪಾ ಗಾರ್ಡನ್, ಮುರ್ಥಲಾ ನಗರ, ಜೆ.ಪಿ. ಪಾರ್ಕ್, ಎಮ್ ಸ್ಟ್ರೀಟ್, ಬೆಂಗಳೂರು ಉತ್ತರ, ಬೆಂಗಳೂರು, ಕರ್ನಾಟಕ-560054. ಈತನು ಅಂದಾಜು 2 ಅಥವಾ 3 ದಿನಗಳ ಹಿಂದೆ (ದಿನಾಂಕ ಮತ್ತು ವೇಳೆ ತಿಳಿದು ಬಂದಿರುವುದಿಲ್ಲ) ರಂದು ಹಡೀನ್ ಬೀಚ್ ಪಕ್ಕದ ಸಮುದ್ರ ದಡದ ಮೇಲೆ ಯಾವುದೋ ಕಾರಣಕ್ಕಾಗಿ ಬಂಡೆಗಳ ಮಧ್ಯ ಒಂದು ಕಟ್ಟಿಗೆಯನ್ನು ಅಡ್ಡ ಇಟ್ಟು ಅದಕ್ಕೆ ವೇಲ್ ಕಟ್ಟಿ ಅದೇ ವೇಲ್ ನಿಂದ ಕುತ್ತಿಗೆಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ಮಹೇಶ ತಂದೆ ನಾಗಪ್ಪ ನಾಯ್ಕ, ಪ್ರಾಯ-21 ವರ್ಷ, ವೃತ್ತಿ-ಅರಣ್ಯ ಇಲಾಖೆಯಲ್ಲಿ ದಿನಗೂಲಿ ನೌಕರ, ಸಾ|| ಮುಲ್ಲಿಗದ್ದೆ, ಹಡೀನ್, ತಾ: ಭಟ್ಕಳ ರವರು ದಿನಾಂಕ: 18-09-2021 ರಂದು 17-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 05/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಶಂಭಾಜಿ ತಂದೆ ಮಹಾದೇವ ಕುಂಬಾರ, ಪ್ರಾಯ-59 ವರ್ಷ, ವೃತ್ತಿ-ಡಬ್ಲ್ಯೂ.ಸಿ.ಪಿ.ಎಮ್ ನೌಕರ, ಸಾ|| ರೂಮ್ ನಂ: 514, ನ್ಯೂ ಸ್ಟಾಫ್ ಕ್ವಾರ್ಟರ್ಸ್, ಬಂಗೂರು ನಗರ, ತಾ: ದಾಂಡೇಲಿ. ಈತನು ಅತೀಯಾಗಿ ಸಾರಾಯಿ ಕುಡಿಯುತ್ತಿದ್ದವನು, ದಾಂಡೇಲಿಯಲ್ಲಿ ಅಲ್ಲಿ ಇಲ್ಲಿ ಸಾಲ ಮಾಡಿದವನು, ಸಾರಾಯಿ ಕುಡಿಯುವ ಚಟದಿಂದ ಮಾನಸಿಕವಾಗಿ ನೊಂದು ಅಥವಾ ಸಾಲದ ಬಾಧೆ ತಾಳಲಾರದೇ ಮಾನಸಿಕವಾಗಿ ನೊಂದು ಅಥವಾ ಇನ್ನಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ: 18-09-2021 ರಂದು ಬೆಳಿಗ್ಗೆ 07-00 ಗಂಟೆಯಿಂದ ಬೆಳಿಗ್ಗೆ 09-00 ಗಂಟೆಯ ನಡುವಿನ ಅವಧಿಯಲ್ಲಿ ಕೋಗಿಲಬನ್ ಗ್ರಾಮಕ್ಕೆ ಸಂಬಂಧಪಡುವ ಮೋಹಿನಿ ಸರ್ಕಲ್ ದಿಂದ ಅಂಬಿಕಾನಗರದ ಕಡೆಗೆ ಸುಮಾರು 1/2 ಕಿ.ಮೀ ದೂರದಲ್ಲಿ ಕುಳಗಿ ರಸ್ತೆಯ ಪಕ್ಕದ ಅರಣ್ಯದಲ್ಲಿ ಒಂದು ಮರಕ್ಕೆ ನೈಲಾನ್ ಹಗ್ಗದಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮತ್ಯೆ ಮಾಡಿಕೊಂಡಿರುತ್ತಾನೆ. ಇದರ ಹೊರತು ಅವನ ಮರಣದಲ್ಲಿ ಬೇರೇ ಯಾವುದೇ ಸಂಶಯ ಇರುವುದಿಲ್ಲ ಎಂಬ ಬಗ್ಗೆ ಪಿರ್ಯಾದಿ ಶ್ರೀ ಶಿವಾಜಿ ತಂದೆ ಮಹಾದೇವ ಕುಂಬಾರ, ಪ್ರಾಯ-50 ವರ್ಷ, ವೃತ್ತಿ-ಶ್ರೇಯಸ್ ಪೇಪರ್ ಮಿಲ್ ನಲ್ಲಿ ಕೆಲಸ, ಸಾ|| ಕೇರವಾಡ, ತಾ: ದಾಂಡೇಲಿ ರವರು ದಿನಾಂಕ: 18-09-2021 ರಂದು 11-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

ಇತ್ತೀಚಿನ ನವೀಕರಣ​ : 20-09-2021 04:29 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080