ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 19-04-2021

at 00:00 hrs to 24:00 hrs

 

ಕಾರವಾರ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 23/2021, ಕಲಂ: 341, 504, 506 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಪ್ರೇಮಾನಂದ ತಂದೆ ಶಾಂತಾರಾಮ ನಾಯ್ಕ, ಸಾ|| ಅಮದಳ್ಳಿ, ಕಾರವಾರ. ಈತನು ಪಿರ್ಯಾದಿಯ ಸಂಬಂಧಿಕನಿದ್ದು, ಸದರಿಯವನು ದಿನಾಂಕ: 19-04-2021 ರಂದು 17-30 ಗಂಟೆಯ ಸಮಯಕ್ಕೆ ಪಿರ್ಯಾದಿಯವರು ತಮ್ಮ ಸ್ಕೂಟಿ ವಾಹನದ ಮೇಲಾಗಿ ಅಮದಳ್ಳಿ ಕಡೆಯಿಂದ ತೋಡೂರ ಕಡೆಗೆ ಹೆದ್ದಾರಿಯ ಮೇಲಾಗಿ ಬರುತ್ತಿದ್ದಾಗ ಮಹಾದೇವವಾಡಾ ಕ್ರಾಸ್ ಹತ್ತಿರ ಆರೋಪಿತನು ತನ್ನ ಹೀರೋ ಹೋಂಡಾ ಮೋಟಾರ್ ಸೈಕಲ್ ಮೇಲಾಗಿ ಪಿರ್ಯಾದಿಯವರ ಸ್ಕೂಟಿಗೆ ಅಡ್ಡಗಟ್ಟಿ ನಿಲ್ಲಿಸಿ, ಈ ಹಿಂದಿನ ದ್ವೇಷದಿಂದ ಪಿರ್ಯಾದಿಯವರಿಗೆ ಉದ್ದೇಶಿಸಿ ‘ಸೂಳೆ ಮಗನೇ, ಬೋಳಿ ಮಗನೇ’ ಅಂತಾ ಅವಾಚ್ಯ ಶಬ್ದಗಳಿಂದ ಬೈಯ್ದು, ‘ನಿನ್ನನ್ನು ಕೊಲೆ ಮಾಡದೇ ಬಿಡುವುದಿಲ್ಲ. ರಾತ್ರಿ ಬಂದು ನಿನ್ನನ್ನು ನೋಡಿಕೊಳ್ಳುತ್ತೇನೆ’ ಅಂತಾ ಜೀವದ ಬೆದರಿಕೆ ಹಾಕಿ ಹೋದ ಬಗ್ಗೆ ಪಿರ್ಯಾದಿ ಶ್ರೀ ಮೋಹನ ತಂದೆ ಮೋಟಾ ನಾಯ್ಕ, ಪ್ರಾಯ-60 ವರ್ಷ, ವೃತ್ತಿ-ವ್ಯಾಪಾರ, ಸಾ|| ತೋಡೂರ, ಕಾರವಾರ ರವರು ದಿನಾಂಕ: 19-04-2021 ರಂದು 21-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಅಂಕೋಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 74/2021, ಕಲಂ: 279, 304(ಎ) ಐಪಿಸಿ ಹಾಗೂ ಕಲಂ: 187 ಎಮ್.ವಿ ಎಕ್ಟ್ ನೇದ್ದರ ವಿವರ...... ನಮೂದಿತ ಆರೋಪಿತನು ಯಾವುದೋ ವಾಹನ ಚಾಲಕನಾಗಿದ್ದು, ವಾಹನದ ನಂಬರ್ ಮತ್ತು ಚಾಲಕನ ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಈತನು ದಿನಾಂಕ: 19-04-2021 ರಂದು ಬೆಳಿಗ್ಗೆ 06-00 ಗಂಟೆಗೆ ಅಂಕೋಲಾ ತಾಲೂಕಿನ ಸರಳೇಬೈಲ್ ಸಂಗೀತಾ ಡಾಬಾ ಹತ್ತಿರ ಹಾಯ್ದಿರುವ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-63 ಎರ ಡಾಂಬರ್ ರಸ್ತೆಯಲ್ಲಿ ತನ್ನ ವಾಹನವನ್ನು ಅಂಕೋಲಾ ಕಡೆಯಿಂದ ಯಲ್ಲಾಪುರ ಕಡೆಗೆ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವಂತೆ ಚಲಾಯಿಸಿಕೊಂಡು ಬಂದು, ಲಾರಿ ನಂ: ಕೆ.ಎ-29/ಬಿ-8184 ನೇದರ ಚಾಲಕನಾದ ಪರಸಪ್ಪ ತಂದೆ ಅರ್ಜುನ ತಳಗೇರಿ, ಪ್ರಾಯ-32 ವರ್ಷ, ಸಾ|| ಬಸವನ ಬಾಗೇವಾಡಿ, ಬಿಜಾಪುರ ಈತನು ಲಾರಿಯಲ್ಲಿ ಕೋಕ್ ಲೋಡ್ ಮಾಡಿಕೊಂಡು ಅಂಕೋಲಾ ಕಡೆಯಿಂದ ಯಲ್ಲಾಪುರ ಕಡೆಗೆ ಹೋಗಲು ಬಂದವನು, ಸರಳೇಬೈಲ್ ನಲ್ಲಿರುವ ಸಂಗೀತಾ ಡಾಬಾದ ಮುಂದೆ ರಸ್ತೆಯ ಪಕ್ಕದ ಕಚ್ಚಾ ರಸ್ತೆಯ ಮೇಲೆ ನಿಲ್ಲಿಸಿ, ಬಹಿರ್ದೆಸೆಗೆ ಹೋಗಲು ಅಂತಾ ಪ್ಲಾಸ್ಟಿಕ್ ಬಾಟಲಿಯಲ್ಲಿ ನೀರು ತೆಗೆದುಕೊಂಡು ರಸ್ತೆಯ ಅಂಚಿನಿಂದ ನಡೆದುಕೊಂಡು ಹೋಗುತ್ತಿರುವಾಗ, ಈತನಿಗೆ ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಆತನ ತಲೆಗೆ ಭಾರೀ ಗಾಯನೋವು ಪಡಿಸಿದವನಿಗೆ ಚಿಕಿತ್ಸೆಯ ಕುರಿತು ಅಂಕೋಲಾದ ಸರ್ಕಾರಿ ಆಸ್ಪತ್ರೆಗೆ ಸಾಗಿಸುತ್ತಿರುವಾಗ ಬೆಳಿಗ್ಗೆ 07-20 ಗಂಟೆಗೆ ಅಂಕೋಲಾ ಶಹರದ ಸಮೀಪ ಮಾರ್ಗಮಧ್ಯದಲ್ಲಿ ಮರಣವನ್ನುಂಟಾಗುವಂತೆ ಮಾಡಿದ್ದಲ್ಲದೇ, ಆರೋಪಿತನು ಅಪಘಾತದ ಸ್ಥಳದಲ್ಲಿ ತನ್ನ ವಾಹನವನ್ನು ನಿಲ್ಲಿಸದೇ ಚಲಾಯಿಸಿಕೊಂಡು ಹೋಗಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ರವೀಂದ್ರನಾಥ ತಂದೆ ನಾರಾಯಣ ಶೇಣ್ವಿ, ಪ್ರಾಯ-40 ವರ್ಷ, ವೃತ್ತಿ-ಸಂಗೀತಾ ಡಾಬಾ (ಪಂಜಾಬಿ ಡಾಬಾ) ಮಾಲಿಕ, ಸಾ|| ಸಗಡಿಬ್ಯಾಣ, ಅಗಸೂರ, ತಾ: ಅಂಕೋಲಾ ರವರು ದಿನಾಂಕ: 19-04-2021 ರಂದು 10-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಗೋಕರ್ಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 36/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ಸಹದೇವ ತಂದೆ ವೆಂಕಪ್ಪ ನಾಯ್ಕ, ಪ್ರಾಯ-47 ವರ್ಷ, ವೃತ್ತಿ-ಅಂಗಡಿ ವ್ಯಾಪಾರ, ಸಾ|| ತದಡಿ, ಗೋಕರ್ಣ, ತಾ: ಕುಮಟಾ. ಈತನು ದಿನಾಂಕ: 19-04-2021 ರಂದು 11-10 ಗಂಟೆಯ ಸುಮಾರಿಗೆ ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯ ತದಡಿ ಗ್ರಾಮದ ಐಸ್ ಪ್ಲ್ಯಾಂಟ್ ಹಿಂದುಗಡೆಯ ಪಾನ್ ಬೀಡಾ ಅಂಗಡಿಯ ಎದುರಿನ ಸಾರ್ವಜನಿಕ ಸ್ಥಳದಲ್ಲಿ ತನ್ನ ಲಾಭಕ್ಕೋಸ್ಕರ ಬರ-ಹೋಗುವ ಸಾರ್ವಜನಿಕರನ್ನು ಕರೆಯುತ್ತಾ, ತಮ್ಮ ತಮ್ಮ ಅದೃಷ್ಟದ ಸಂಖ್ಯೆಗಳ ಮೇಲೆ ಹಣ ಪಂಥ ಕಟ್ಟಿ, ಅದೃಷ್ಟ ಸಂಖ್ಯೆ ತಾಗಿದರೆ 01/- ರೂಪಾಯಿಗೆ 80/- ರೂಪಾಯಿ ಕೊಡುವುದಾಗಿ ಹೇಳಿ ಅವರ ಮನವೊಲಿಸಿ, ಸಾರ್ವಜನಿಕರಿಂದ ಅಕ್ರಮವಾಗಿ ಹಣ ಪಡೆದು, ಅವರು ಹೇಳಿದ ಅಂಕೆ-ಸಂಖ್ಯೆಯನ್ನು ತನ್ನ ಹತ್ತಿರ ಇರುವ ಚೀಟಿಯಲ್ಲಿ ಬರೆದುಕೊಂಡು ಓ.ಸಿ ಮಟಕಾ ಜೂಗಾರಾಟ ಆಡಿಸುತ್ತಿದ್ದಾಗ, ನಗದು ಹಣ 1,130/- ರೂಪಾಯಿ ಮತ್ತು ಓ.ಸಿ ಮಟಕಾ ಜೂಗಾರಾಟದ ಸಲಕರಣೆಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ನವೀನ್ ಎಸ್. ನಾಯ್ಕ, ಪಿ.ಎಸ್.ಐ (ಕಾ&ಸು), ಗೋಕರ್ಣ ಪೊಲೀಸ್ ಠಾಣೆ ರವರು ದಿನಾಂಕ: 19-04-2021 ರಂದು 17-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 117/2021, ಕಲಂ: 160 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಸಯ್ಯದ್ ಫೈಸಲ್ ಸಯ್ಯದ್ ಹಾರುಣ, ಪ್ರಾಯ-28 ವರ್ಷ, ವೃತ್ತಿ-ಹೊಟೇಲ್ ಕೆಲಸ, ಸಾ|| ಅಸೂರಖಾನ್ ಗಲ್ಲಿ, ತಾ: ಹೊನ್ನಾವರ, 2]. ಉಸ್ಮಾನ್ @ ಖಲೀಲ್ ಅಬ್ದುಲ್ ಘನಿ, ಪ್ರಾಯ-50 ವರ್ಷ, ಸಾ|| ಅಸೂರಖಾನ್ ಗಲ್ಲಿ, ತಾ: ಹೊನ್ನಾವರ. ಈ ನಮೂದಿತ ಆರೋಪಿತರು ದಿನಾಂಕ: 19-04-2020 ರಂದು 20-30 ಗಂಟೆಗೆ ಹೊನ್ನಾವರ ಠಾಣಾ ವ್ಯಾಪ್ತಿಯ ಹೊನ್ನಾವರ ಪಟ್ಟಣದ ಗುಡಲಕ್ ಹೊಟೇಲ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ತಮ್ಮ ತಮ್ಮ ವೈಯಕ್ತಿಕ ವಿಷಯದಲ್ಲಿ ಒಬ್ಬರಿಗೊಬ್ಬರು ಕೈಗೆ ಕೈ ಮಿಲಾಯಿಸಿಕೊಂಡು ಬೈಯ್ದಾಡಿ ದೂಡಾಡಿ, ದೊಡ್ಡದಾಗಿ ಕೂಗಾಡಿ ತಮ್ಮ ತಮ್ಮಲ್ಲಿ ಜಗಳ ಮಾಡಿ ಸಾರ್ವಜನಿಕರಿಗೆ ಶಾಂತತಾ ಭಂಗವನ್ನುಂಟು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಪ್ರಶಾಂತ ಅಡಪೇಕರ, ಪೊಲೀಸ್ ಹೆಡ್ ಕಾನ್ಸಟೇಬಲ್ (ಸಿ.ಎಚ್.ಸಿ-496), ಹೊನ್ನಾವರ ಪೊಲೀಸ್ ಠಾಣೆ ರವರು ದಿನಾಂಕ: 19-04-2021 ರಂದು 22-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 66/2021, ಕಲಂ: 279 ಐಪಿಸಿ ಹಾಗೂ ಕಲಂ: 187 ಎಮ್.ವಿ ಎಕ್ಟ್ ನೇದ್ದರ ವಿವರ...... ನಮೂದಿತ ಆರೋಪಿತನು ಬೊಲೆರೋ ವಾಹನ ನಂ: ಕೆ.ಎ-47/2450 ನೇದರ ಚಾಲಕನಾಗಿದ್ದು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಈತನು ದಿನಾಂಕ: 18-04-2021 ರಂದು 01-30 ಗಂಟೆಯ ಸುಮಾರಿಗೆ ಯಲ್ಲಾಪುರ ತಾಲೂಕಿನ ಅರಬೈಲ್ ಘಟ್ಟದಲ್ಲಿ ಹಾದು ಹೋದ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-63 ರಲ್ಲಿ ತನ್ನ ಬಾಬ್ತು ಬೊಲೆರೋ ವಾಹನವನ್ನು ಹುಬ್ಬಳ್ಳಿ ಕಡೆಯಿಂದ ಅಂಕೋಲಾ ಕಡೆಗೆ ಅತೀವೇಗವಾಗಿ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದವನು, ಅಂಕೋಲಾ ಕಡೆಯಿಂದ ಹುಬ್ಬಳ್ಳಿ ಕಡೆಗೆ ಪಿರ್ಯಾದಿಯವರು ಚಲಾಯಿಸಿಕೊಂಡು ಹೋಗುತ್ತಿದ್ದ ಕಂಟೇನರ್ ಲಾರಿ ನಂ: ಎಚ್.ಆರ್-38/ಎ.ಎ-0435 ನೇದರ ಬಲಬದಿಯ ಹಿಂದಿನ ಟಾಯರ್ ಹತ್ತಿರ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದರಿಂದ ಎರಡು ವಾಹನಗಳು ಜಖಂಗೊಂಡಿರುತ್ತದೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಗಂಗಾಧರ ತಂದೆ ಗಣಪತಿ ಗುರಮೆ, ಪ್ರಾಯ-33 ವರ್ಷ, ವೃತ್ತಿ-ಚಾಲಕ, ಸಾ|| ನಂದೂರ, ಬಿ.ಕೆ ಅಹಮ್ಮದಪುರ, ಲಾತೂರ, ಮಹಾರಾಷ್ಟ್ರ ರವರು ದಿನಾಂಕ: 19-04-2021 ರಂದು 17-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 67/2021, ಕಲಂ: 15(ಎ), 32(3) ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ಜೈರಾಮ ತಂದೆ ಗರಡಯ್ಯ ನಾಯಕ್, ಪ್ರಾಯ-44 ವರ್ಷ, ವೃತ್ತಿ-ವ್ಯಾಪಾರ, ಸಾ|| ಅರಬೈಲ್, ತಾ: ಯಲ್ಲಾಪುರ. ಈತನು ದಿನಾಂಕ: 18-04-2021 ರಂದು 19-50 ಗಂಟೆಯ ಸುಮಾರಿಗೆ ಯಲ್ಲಾಪುರ ತಾಲೂಕಿನ ಅರಬೈಲ್ ಗ್ರಾಮದಲ್ಲಿ ಇರುವ ತನ್ನ ಅಂಗಡಿಯ ಹಿಂಬದಿಯ ತಾತ್ಕಾಲಿಕ ಶೆಡ್ಡಿನಲ್ಲಿ ತನ್ನ ಅನ್ಯಾಯದ ಲಾಭಕ್ಕೋಸ್ಕರ ಯಾವುದೇ ಪಾಸ್ ಯಾ ಪರ್ಮಿಟ್ ಇಲ್ಲದೇ ಸಾರ್ವಜನಿಕ ಸ್ಥಳದಲ್ಲಿ ಜನರಿಗೆ ಮುಕ್ತವಾಗಿ ಮದ್ಯವನ್ನು ಕುಡಿಯಲು ಅವಕಾಶ ಮಾಡಿಕೊಟ್ಟಿರುವಾಗ WYT RARE OLD WHISKY-180 ML ನ ಅಳತೆಯ ಮದ್ಯದ ಪ್ಯಾಕೆಟ್ ಗಳು-15, ಅ||ಕಿ|| 839.55/- ರೂಪಾಯಿ, WYT RARE OLD WHISKY-180 ML ನ ಅಳತೆಯ ಖಾಲಿ ಪ್ಯಾಕೆಟ್-02, ಅ||ಕಿ|| 00.00/- ರೂಪಾಯಿ ಹಾಗೂ ಮದ್ಯವನ್ನು ಕುಡಿಯಲು ಬಳಸಿದ ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು-4, ಅ||ಕಿ|| 00.00/- ರೂಪಾಯಿ, ಖಾಲಿ ಸೋಡಾ ಬಾಟಲಿ-01, ಅ||ಕಿ|| 00.00/- ರೂಪಾಯಿ. ಇವುಗಳೊಂದಿಗೆ ಅನಧೀಕೃತವಾಗಿ ಮದ್ಯವನ್ನು ಕುಡಿಯಲು ಅವಕಾಶ ಮಾಡಿಕೊಟ್ಟಾಗ ಸೆರೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಮಂಜುನಾಥ ಎಸ್. ಗೌಡರ್, ಪಿ.ಎಸ್.ಐ, ಯಲ್ಲಾಪುರ ಪೊಲೀಸ್ ಠಾಣೆ ರವರು ದಿನಾಂಕ: 19-04-2021 ರಂದು 21-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 39/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ರಾಮಾ ತಂದೆ ಶಂಭು ನಾಯ್ಕ, ಪ್ರಾಯ-67 ವರ್ಷ, ವೃತ್ತಿ-ಕೂಲಿ ಕೆಲಸ, ಸಾ: ಮೇಲಿನ ಓಣಿಕೇರಿ, ತಾ: ಶಿರಸಿ. ಈತನು ದಿನಾಂಕ: 19-04-2021 ರಂದು 13-15 ಗಂಟೆಗೆ ಶಿರಸಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಮೇಲಿನ ಓಣಿಕೇರಿಯ ಆಟದ ಮೈದಾನದ ಹತ್ತಿರದ ಸಾರ್ವಜನಿಕ ರಸ್ತೆಯಲ್ಲಿ ಬರ-ಹೋಗುವ ಸಾರ್ವಜನಿಕರಿಗೆ ಕೂಗಿ ಕರೆದು ಓ.ಸಿ ಜೂಗಾರಾಟದ ಅಂಕೆಗಳ ಮೇಲೆ ಹಣ ಪಂಥ ಕಟ್ಟಿದರೆ 01/- ರೂಪಾಯಿಗೆ 80/- ರೂಪಾಯಿ ಕೊಡುವುದಾಗಿ ಹೇಳಿ, ಬಂದ ಜನರಿಂದ ಹಣ ಪಡೆದುಕೊಂಡು ಓ.ಸಿ ಚೀಟಿ ಬರೆದುಕೊಡುವಾಗ ಓ.ಸಿ ಮಟಕಾ ಜುಗಾರಾಟದ ಸಲಕರಣೆಗಳಾದ 1). ನಗದು ಹಣ 1,430/- ರೂಪಾಯಿ, 2). ಬಾಲ್ ಪೆನ್-1, 3). ಓ.ಸಿ ಅಂಕೆ-ಸಂಖ್ಯೆ ಬರೆದ ಚೀಟಿ-1, 4). ಚೀಟಿ ಬರೆದು ಕೊಡಲು ಕಟ್ ಮಾಡಿ ಇಟ್ಟುಕೊಂಡಿದ್ದ ಸಣ್ಣ ಸಣ್ಣ ಚೀಟಿ-8 ನೇದವುಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ನಂಜಾನಾಯ್ಕ ಎನ್, ಪಿ.ಎಸ್.ಐ (ಕಾ&ಸು), ಶಿರಸಿ ಗ್ರಾಮೀಣ ಪೊಲೀಸ್ ಠಾಣೆ ರವರು ದಿನಾಂಕ: 19-04-2021 ರಂದು 15-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಸಿದ್ದಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 50/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ 1]. ಅನಂತ ತಂದೆ ದುಗ್ಗು ಗೌಡ, ಪ್ರಾಯ-42 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಅತ್ತಿಸವಲು, ತಾ: ಸಿದ್ದಾಪುರ, 2]. ಗಣಪತಿ ತಂದೆ ಸೀತಾರಾಮ ಗೌಡ, ಪ್ರಾಯ-35 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಅತ್ತಿಸವಲು, ತಾ: ಸಿದ್ದಾಪುರ, 3]. ಹುಲಿಯ ತಂದೆ ಮುದ್ಯಾ ಗೌಡ, ಪ್ರಾಯ-49 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಅತ್ತಿಸವಲು, ತಾ: ಸಿದ್ದಾಪುರ, 4]. ಮಂಜುನಾಥ ತಂದೆ ಹುವಾ ಗೌಡ, ಪ್ರಾಯ-42 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಅತ್ತಿಸವಲು, ತಾ: ಸಿದ್ದಾಪುರ, 5]. ನಾರಾಯಣ ತಂದೆ ಪುಟ್ಟಾ ಗೌಡ, ಪ್ರಾಯ-48 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಅತ್ತಿಸವಲು, ತಾ: ಸಿದ್ದಾಪುರ, 6]. ರಮೇಶ ತಂದೆ ರಾಮ ಗೌಡ, ಪ್ರಾಯ-45 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಹೆಗ್ನೂರ, ತಾ: ಸಿದ್ದಾಪುರ, 7]. ಪರಮ ತಂದೆ ಪುಟ್ಟಾ ಗೌಡ, ಪ್ರಾಯ-39 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಅತ್ತಿಸವಲು, ತಾ: ಸಿದ್ದಾಪುರ. ಈ ನಮೂದಿತ ಆರೋಪಿತರು ದಿನಾಂಕ: 18-04-2021 ರಂದು 19-00 ಗಂಟೆಗೆ ಸಿದ್ದಾಪುರ ತಾಲೂಕಿನ ಅತ್ತಿಸವಲು ಊರಿನ ಆರೋಪಿ 1 ನೇಯವನ ಮನೆಯ ಪಕ್ಕದ ಬೇಣದಲ್ಲಿ ತಮ್ಮ ಅನ್ಯಾಯದ ಲಾಭಕ್ಕೋಸ್ಕರ ಅಂದರ್-ಬಾಹರ್ ಇಸ್ಪೀಟ್ ಜುಗಾರಾಟ ಆಡುತ್ತಿದ್ದಾಗ ಪಿರ್ಯಾದಿಯವರು ಸಿಬ್ಬಂದಿ ಹಾಗೂ ಪಂಚರೊಂದಿಗೆ ಸೇರಿ ದಾಳಿ ಮಾಡಿದಾಗ ನಮೂದಿತ ಆರೋಪಿತರೆಲ್ಲರೂ 1). ನಗದು ಹಣ 5,140/- ರೂಪಾಯಿ, 2). 52 ಇಸ್ಪೀಟ್ ಎಲೆಗಳು, 3). ಮಂಡಕ್ಕೆ ಹಾಸಿದ್ದ ಒಂದು ಟವೆಲ್ ಹಾಗೂ 4). ಅರ್ಧ ಉರಿದ 04 ಕ್ಯಾಂಡಲ್‍ಗಳೊಂದಿಗೆ ಸೆರೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಮಹಾಂತಪ್ಪ ಜಿ. ಕುಂಬಾರ, ಪಿ.ಎಸ್.ಐ, ಸಿದ್ದಾಪುರ ಪೊಲೀಸ್ ಠಾಣೆ ರವರು ದಿನಾಂಕ: 19-04-2021 ರಂದು 11-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 19-04-2021

at 00:00 hrs to 24:00 hrs

 

ಕಾರವಾರ ಶಹರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 11/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತಳಾದ ಶ್ರೀಮತಿ ಲೀನಾ ಮೊಜೇಸ್ ಬೆರಟೋ, ಪ್ರಾಯ-49 ವರ್ಷ, ವೃತ್ತಿ-ಮನೆವಾರ್ತೆ, ಸಾ|| ಜೈಲವಾಡಾ, ಸೀಬರ್ಡ್ ರಸ್ತೆ, ಬೈತಖೋಲ್, ಕಾರವಾರ. ಈಕೆಯು ಮದುವೆಯಾಗಿ 15 ವರ್ಷ ಕಳೆದಿದ್ದು, 12 ವರ್ಷಗಳಿಂದ ತನ್ನ ಸಂಸಾರದಲ್ಲಿ ಆದ ವೈಮನಸ್ಸಿನಿಂದಾಗಿ ತನ್ನ ತವರು ಮನೆಯಲ್ಲಿ ತನ್ನ ಮಗ ಹಾಗೂ ಸಹೋದರನೊಂದಿಗೆ ವಾಸ ಮಾಡಿಕೊಂಡಿದ್ದವಳು, ಕಳೆದ 03 ವರ್ಷಗಳಿಂದ ಅಸ್ತಮಾ ಖಾಯಿಲೆಯಿಂದ ಬಳಲುತ್ತಾ ಅನಾರೋಗ್ಯದಿಂದ ಇದ್ದವಳು, ಯಾವುದೋ ವಿಷಯವನ್ನು ತನ್ನ ಮನಸ್ಸಿಗೆ ಹಚ್ಚಿಕೊಂಡು ದಿನಾಂಕ: 19-04-2021 ರಂದು ಬೆಳಿಗ್ಗೆ 11-50 ಗಂಟೆಯಿಂದ 13-30 ಗಂಟೆಯ ನಡುವಿನ ಅವಧಿಯಲ್ಲಿ ತಾನು ವಾಸವಿದ್ದ ಮನೆಯ ಮೇಲ್ಛಾವಣಿಯ ಕಬ್ಬಿಣದ ರಾಡಿಗೆ ನೇಣು ಕಟ್ಟಿ ತನ್ನ ಕುತ್ತಿಗೆಗೆ ಉರುಳು ಹಾಕಿಕೊಂಡು ಮೃತಪಟ್ಟ ಬಗ್ಗೆ ಪಿರ್ಯಾದಿ ಶ್ರೀ ಜೋನಿ ತಂದೆ ಫಾಸ್ಕಲ್ ಪಿಯೋ, ಪ್ರಾಯ-47 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ಜೈಲವಾಡಾ, ಸೀಬರ್ಡ್ ರಸ್ತೆ, ಬೈತಖೋಲ್, ಕಾರವಾರ ರವರು ದಿನಾಂಕ: 19-04-2021 ರಂದು 14-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಅಂಕೋಲಾ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 21/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ವಿಶ್ವೇಶ್ವರ ತಂದೆ ರಾಮಚಂದ್ರ ಭಟ್ಟ, ಪ್ರಾಯ-60 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಕೊನಾಳ, ತಾ: ಅಂಕೋಲಾ. ಈತನು ತನ್ನ ಹೆಂಡತಿ ಸುಮಾರು 2 ವರ್ಷ 6 ತಿಂಗಳಿನಿಂದ ಪ್ಯಾರಾಲಿಸಿಸ್ ನಿಂದ ಬಳಲುತ್ತಿದ್ದು, ಮಾನಸಿಕವಾಗಿ ಖಿನ್ನತೆಗೆ ಒಳಪಟ್ಟಿದ್ದ ವಿಷಯವನ್ನು ತನ್ನ ಮನಸ್ಸಿಗೆ ಹಚ್ಚಿಕೊಂಡು ದಿನಾಂಕ: 18-04-2021 ರಂದು ರಾತ್ರಿ 11-00 ಗಂಟೆಯಿಂದ ದಿನಾಂಕ: 19-04-2021 ರಂದು ಬೆಳಿಗ್ಗೆ ಸುಮಾರು 06-00 ಗಂಟೆಯ ನಡುವಿನ ಅವಧಿಯಲ್ಲಿ ಅವರ ಮನೆಯ ಅಂಗಳದಲ್ಲಿ ಕುತ್ತಿಗೆಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಎಚ್. ಎಲ್. ಗುರುದತ್ತ ತಂದೆ ಲಕ್ಷ್ಮೀನಾರಾಯಣ ಭಟ್ಟ, ಪ್ರಾಯ-36 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಗುಂಡಿಬೈಲ್, ಚಿಕ್ಕನಕೊಡ, ಹೆರಾವಲಿ, ಅಪಗಾಲ. ತಾ: ಹೊನ್ನಾವರ ರವರು ದಿನಾಂಕ: 19-04-2021 ರಂದು 07-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಅಂಕೋಲಾ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 22/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ಅರುಣ ತಂದೆ ಮಂಕಾಳು ಗೌಡ, ಪ್ರಾಯ-25 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ: ನವಳಸೆ ತಾ: ಅಂಕೋಲಾ. ಈತನು ಕಳೆದ ಸುಮಾರು 5-6 ವರ್ಷಗಳಿಂದ ವಿಪರೀತ ಸಾರಾಯಿ ಕುಡಿಯುತ್ತಾ ಬಂದವನು, ದಿನಾಂಕ: 18-04-2021 ರಂದು ರಾತ್ರಿ ಸುಮಾರು 09-00 ಗಂಟೆಯಿಂದ ವಿಪರೀತ ವಾಂತಿಯಾಗಿದ್ದು, ಉಪಚಾರದ ಸಲುವಾಗಿ ಗೋಕರ್ಣದ ಶಾಸ್ತ್ರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಉಪಚಾರವನ್ನು ಪಡೆದುಕೊಂಡು ರಾತ್ರಿ ಮನೆಗೆ ಮರಳಿ ಬಂದಿದ್ದು, ನಂತರ ಅರುಣ ಈತನಿಗೆ ವಾಂತಿ ಕಡಿಮೆಯಾಗದೇ ಇದ್ದುದ್ದರಿಂದ ದಿನಾಂಕ: 19-04-2021 ರಂದು ಬೆಳಿಗ್ಗೆ ಶಾಸ್ತ್ರಿ ಆಸ್ಪತ್ರಗೆ ಕರೆದುಕೊಂಡು ಹೋಗಿದ್ದು, ಅಲ್ಲಿಯ ವೈದ್ಯರು ಹೆಚ್ಚಿನ ಉಪಚಾರಕ್ಕೆ ಕುಮಟಾದ ಆಸ್ಪತ್ರೆಗೆ ಕರೆದುಕೊಂಡು ಹೋಗಲು ತಿಳಿಸಿದಂತೆ ಅಲ್ಲಿಂದ ಹೆಚ್ಚಿನ ಉಪಚಾರಕ್ಕೆ ಕುಮಟಾದ ಆಸ್ಪತ್ರೆಗೆ ಬೆಳಿಗ್ಗೆ ಕರೆದುಕೊಂಡು ಹೋಗಿದ್ದು, ಸುಮಾರು 08-45 ಗಂಟೆಗೆ ನೋಡಿದ ವೈದ್ಯರು ಮೃತಪಟ್ಟ ಬಗ್ಗೆ ತಿಳಿಸಿರುತ್ತಾರೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ದುರ್ಗು ತಂದೆ ಮಂಕಾಳು ಗೌಡ, ಪ್ರಾಯ-28 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ನವಳಸೆ, ತಾ: ಅಂಕೋಲಾ ರವರು ದಿನಾಂಕ: 19-04-2021 ರಂದು 10-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಅಂಕೋಲಾ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 23/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ಸುಶಾಂತ ತಂದೆ ಪ್ರಕಾಶ ನಾಯ್ಕ, ಪ್ರಾಯ-21 ವರ್ಷ, ವೃತ್ತಿ-ಖಾಸಗಿ ಕಂಪನಿಯಲ್ಲಿ ಕೆಲಸ, ಸಾ|| ಡೊಂಗ್ರಿ, ತಾ: ಅಂಕೋಲಾ.ಈತನು ದಿನಾಂಕ: 19-04-2021 ರಂದು 10-15 ಗಂಟೆಗೆ ಅಂಕೋಲಾ ತಾಲೂಕಿನ ಡೊಂಗ್ರಿ ಗ್ರಾಮದ ಡೊಂಗ್ರಿ ಹಳ್ಳದಲ್ಲಿ ಬಟ್ಟೆ ತೊಳೆಯಲು ಹೋದಾಗ ಆಕಸ್ಮಿಕವಾಗಿ ಕಾಲು ಜಾರಿ ಹಳ್ಳದ ನೀರಿನಲ್ಲಿ ಬಿದ್ದು ಮುಳುಗಿದವನಿಗೆ ಉಪಚಾರಕ್ಕಾಗಿ ಅಂಕೋಲಾ ತಾಲೂಕಿನ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಆತನನ್ನು ಪರೀಕ್ಷಿಸಿದ ವೈದ್ಯರು 12-10 ಗಂಟೆಗೆ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಂಡು ಮೃತದೇಹವನ್ನು ಬಿಟ್ಟುಕೊಡಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಸಂಜೀವ ತಂದೆ ದೇವಪ್ಪ ನಾಯ್ಕ, ಪ್ರಾಯ-36 ವರ್ಷ, ವೃತ್ತಿ-ಆಟೋ ಚಾಲಕ, ಸಾ|| ಡೊಂಗ್ರಿ, ತಾ: ಅಂಕೋಲಾ ರವರು ದಿನಾಂಕ: 19-04-2021 ರಂದು 12-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಮಂಕಿ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 03/2021, ಕಲಂ: 174 ಸಿ.ಆರ್.ಪಿ.ಸಿ  ನೇದ್ದರ ವಿವರ...... ಮೃತನಾದ ಶ್ರೀ ಸಚೀನ ತಂದೆ ಸುರೇಶ ನಾಯ್ಕ, ಪ್ರಾಯ-27 ವರ್ಷ, ಸಾ|| ಗುಳದಕೇರಿ, ಮಂಕಿ, ತಾ: ಹೊನ್ನಾವರ. ಈತನು ಇಂಜಿನಿಯರಿಂಗ್ ಓದಿಕೊಂಡು ಮನೆಯಲ್ಲಿದ್ದವನು, ತನಗೆ ಸರಕಾರಿ ಕೆಲಸ ಸಿಕ್ಕಿಲ್ಲ ಅಂತಾ ಹೇಳುತ್ತಾ ಬಂದವನು, ಅದೇ ಚಿಂತೆಯಲ್ಲಿ ದಿನಾಂಕ: 19-04-2021 ರಂದು 11-00 ಗಂಟೆಯಿಂದ 13-45 ಗಂಟೆಯ ನಡುವಿನ ಅವಧಿಯಲ್ಲಿ ತನ್ನ ವಾಸದ ಮನೆಯ ಅಟ್ಟದಲ್ಲಿ ಮೇಲ್ಛಾವಣಿಯ ಜಂತಿಗೆ ನೈಲಾನ್ ಹಗ್ಗದಿಂದ ಕಟ್ಟಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟ ಬಗ್ಗೆ ಪಿರ್ಯಾದಿ ಶ್ರೀ ರಾಘು ತಂದೆ ಸುರೇಶ ನಾಯ್ಕ, ಪ್ರಾಯ-30 ವರ್ಷ, ವೃತ್ತಿ-ಪೊಲೀಸ್ ಇಲಾಖೆ, ಸಾ|| ಗುಳದಕೇರಿ, ಮಂಕಿ, ತಾ: ಹೊನ್ನಾವರ ರವರು ದಿನಾಂಕ: 19-04-2021 ರಂದು 15-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

ಇತ್ತೀಚಿನ ನವೀಕರಣ​ : 20-04-2021 05:10 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080