ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂ:- 19-04-2022

at 00:00 hrs to 24:00 hrs

 

ಚಿತ್ತಾಕುಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 20/2022, ಕಲಂ: 307, 324, 504, 506 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ದಿನೇಶ ತಂದೆ ಮಹಾದೇವ ಮುಳೇಕರ, ಪ್ರಾಯ-45 ವರ್ಷ, ವೃತ್ತಿ-ಟೇಲರ್, ಸಾ|| ಮುಡಗೇರಿ, ಕಾರವಾರ. ಪಿರ್ಯಾದಿಯು ದಿನಾಂಕ: 18-04-2022 ರಂದು ರಾತ್ರಿ 21-00 ಗಂಟೆಗೆ ಮಾಜಾಳಿಯಲ್ಲಿರುವ ತನ್ನ ಗೂಡಂಗಡಿ ಬಂದ್ ಮಾಡಿಕೊಂಡು ಮನೆಗೆ ಹೋಗಿ ಮನೆಯಲ್ಲಿ ಊಟ ಮಾಡಿಕೊಂಡು ತನ್ನ ಸ್ನೇಹಿತರಾದ ಮಾಜಾಳಿಯ ಸನ್ನಿ ಹಾಗೂ ಸೂರಜ ಮತ್ತು ಸಂತೋಷ ನಾಯ್ಕ, ಅಶೋಕ ನಾಯ್ಕ, ನಾಗರಾಜ ನಾಯ್ಕ, ದೀಪಕ ಸದಾನಂದ ನಾಯ್ಕ ರವರೊಂದಿಗೆ ಸೇರಿಕೊಂಡು ಘೋಟ್ನೆಭಾಗದ ಬ್ರಹ್ಮದೇವ ದೇವಸ್ಥಾನದ ಜಾತ್ರೆಯ ನಿಮಿತ್ತ ನಾಟಕವನ್ನು ಏರ್ಪಡಿಸಿದ್ದು, ಅದನ್ನು ನೋಡಲು ಘೋಟ್ನೆಭಾಗಕ್ಕೆ ಪಿರ್ಯಾದಿಯು ತನ್ನ ಸ್ನೇಹಿತರೊಂದಿಗೆ ಹೋದಾಗ ನಾಟಕ ಆಗ ತಾನೇ ಶುರು ಆಗಿದ್ದು, ನಾಟಕದವರೆಲ್ಲರು ಸೇರಿ ಪಾರ್ಥನೆ ಮಾಡುತಿದ್ದು, ಪಿರ್ಯಾದಿಯು ಹಾಗೂ ತನ್ನ ಸ್ನೇಹಿತರು ನಾಟಕ ನಡೆಯುವ ಸ್ಥಳದಿಂದ ಎದುರಿಗೆ ಇರುವ ರಸ್ತೆಯ ಪಕ್ಕ ನಿಂತುಕೊಂಡು ನಾಟಕವನ್ನು ನೋಡುತಿದ್ದರು. ಆಗ ಪಿರ್ಯಾದಿಯ ತಲೆಗೆ ಹಿಂದಿನಿಂದ ಯಾರೋ ಗಟ್ಟಿಯಾದ ವಸ್ತುವಿನಿಂದ ಜೋರಾಗಿ ಹೊಡೆದಿದ್ದು, ಪಿರ್ಯಾದಿಯು ಹಿಂತಿರುಗಿ ನೋಡುವಷ್ಟರಲ್ಲಿ ಪಿರ್ಯಾದಿಯ ಹಿಂದೆ ತನ್ನ ಪರಿಚಯದ ನಮೂದಿತ ಆರೋಪಿತನು ತನ್ನ ಕೈಯಲ್ಲಿದ್ದ ಕಬ್ಬಿಣದ ರಾಡಿನಿಂದ ಮತ್ತೊಂದು ಸಾರಿ ಪಿರ್ಯಾದಿಯ ತಲೆಗೆ ಬಲವಾಗಿ ಹೊಡೆದನು. ಇದರಿಂದ ಪಿರ್ಯಾದಿಯ ತಲೆಯಿಂದ ರಕ್ತ ಬರತೊಡಗಿತು, ಅಗ ಸಮಯ ರಾತ್ರಿ 22-30 ಗಂಟೆಯಾಗಿತ್ತು. ಪಕ್ಕದಲ್ಲಿದ್ದ ಪಿರ್ಯಾದಿಯ ಸ್ನೇಹಿತರು ಪಿರ್ಯಾದಿಯನ್ನು ಉಪಚರಿಸುತ್ತಿರುವಾಗ ನಮೂದಿತ ಆರೋಪಿತನನ್ನು ನಾಟಕ ನೋಡಲು ಬಂದಿದ್ದ ಸ್ಥಳೀಯರು ಹಿಡಿದುಕೊಂಡರು. ಆಗ ಆತನು ಪಿರ್ಯಾದಿಯನ್ನು ಉದ್ದೇಶಿಸಿ ‘ಬೋಳಿ ಮಗನೆ, ನಿನ್ನನ್ನು ಬಿಡುವುದಿಲ್ಲ. ಸಾಯಿಸಿ ಬಿಡುತ್ತೇನೆ. ನನ್ನ ತಮ್ಮ ರೇಲ್ವೆಗೆ ಸಿಕ್ಕಿ ಆತ್ಮಹತ್ಯೆ ಮಾಡಿಕೊಳ್ಳಲು ನೀನೇ ಕಾರಣ’ ಅಂತಾ ಬೈಯ್ಯುತ್ತಾ ಮತ್ತೆ ಹೊಡೆಯಲು ಬರುತ್ತಿರುವಾಗ ಅಲ್ಲಿದ್ದವರು ಆರೋಪಿತನನ್ನು ಹಿಡಿದುಕೊಂಡರು. ಆರೋಪಿತನು ಅವರಿಂದ ಬಿಡಿಸಿಕೊಂಡು ಪಿರ್ಯಾದಿಗೆ ‘ಮಗನೇ ಇವತ್ತು ನಿನ್ನನ್ನು ಸಾಯಿಸುವುದಕ್ಕೋಸ್ಕರ ನಾನು ಬಂದಿದ್ದು, ಆದರೆ ಉಳಿದುಕೊಂಡಿದ್ದಿಯಾ. ಇನ್ನೊಮ್ಮೆ ಸಿಕ್ಕಾಗ ನಿನ್ನನ್ನು ಬಿಡುವುದಿಲ್ಲ’ ಅಂತಾ ಹೇಳಿ, ಪಿರ್ಯಾದಿಗೆ ಹೊಡೆಯಲು ಬಳಸಿದ ರಾಡನ್ನು ಅಲ್ಲಿಯೇ ರಸ್ತೆಯ ಪಕ್ಕ ಬಿಸಾಡಿ ಅಲ್ಲಿಂದ ಓಡಿ ಹೋಗಿದ್ದು, ಸದ್ರಿ ಆರೋಪಿತನು ನನ್ನನ್ನು ಸಾಯಿಸುವ ಉದ್ದೇಶದಿಂದ ಕಬ್ಬಿಣದ ರಾಡಿನಿಂದ ತಲೆಗೆ ಹೊಡೆದು ಗಂಭೀರ ರಕ್ತಗಾಯ ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಮದನ ತಂದೆ ಅರ್ಜಿನ ನಾಯ್ಕ, ಪ್ರಾಯ-33 ವರ್ಷ, ವೃತ್ತಿ-ಗೂಡಂಗಡಿ ವ್ಯಾಪಾರ, ಸಾ|| ಮುಡಗೇರಿ, ರೇಲ್ವೆ ಗೇಟ್ ಹತ್ತಿರ, ಕಾರವಾರ ರವರು ದಿನಾಂಕ: 19-04-2022 ರಂದು 01-40 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 85/2022, ಕಲಂ: 15(ಎ), 32(3) ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ಪ್ರಶಾಂತ ತಂದೆ ನಾರಯಣ ಶೆಟ್ಟಿ, ಪ್ರಾಯ-40 ವರ್ಷ, ವೃತ್ತಿ-ಚಾಲಕ, ಸಾ|| ಬಾಳೆಗುಂಡಿ, ಮೂರೂರು, ತಾ: ಕುಮಟಾ. ಈತನು ದಿನಾಂಕ: 19-04-2022 ರಂದು 13-00 ಗಂಟೆಗೆ ಕುಮಟಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಮೂರೂರು ಅಂಗಡಿಕೇರಿಯ ಗೂಡಂಗಡಿಯ ಎದುರು ಸಾರ್ವಜನಿಕ ಸ್ಥಳದಲ್ಲಿ ಸರಾಯಿಯನ್ನು ಕುಡಿದು ಅಪರಾಧ ಎಸಗಿದ್ದು, ದಾಳಿಯ ಕಾಲ 1). ಅರ್ಧಭಾಗ ಸರಾಯಿ ಇದ್ದ 90 ML ಅಳತೆಯ Haywards ಟೆಟ್ರಾ ಪ್ಯಾಕೆಟ್-01, ಅ||ಕಿ|| 00.00/- ರೂಪಾಯಿ, 2). ಸರಾಯಿ ತುಂಬಿದ 90 ML ಅಳತೆಯ Haywards ಟೆಟ್ರಾ ಪ್ಯಾಕೆಟ್-01, ಅ||ಕಿ|| 36.00/- ರೂಪಾಯಿ, 3). ಖಾಲಿ ಇದ್ದ 90 ML ಅಳತೆಯ Haywards ಟೆಟ್ರಾ ಪ್ಯಾಕೆಟ್-01, ಅ||ಕಿ|| 00.00/- ರೂಪಾಯಿ, 4). ಪ್ಲಾಸ್ಟಿಕ್ ಗ್ಲಾಸ್-01, ಅ||ಕಿ|| 00.00/- ರೂಪಾಯಿ, 5). Konkan Aqua ಕಂಪನಿಯ ಅರ್ಧ ತುಂಬಿದ ಲೀಟರ್ ಅಳತೆಯ ನೀರಿನ ಬಾಟಲಿ-01, ಅ||ಕಿ|| 00.00/- ರೂಪಾಯಿ. ಸದರಿ ಸ್ವತ್ತಿನೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ನವೀನ ಎಸ್. ನಾಯ್ಕ, ಪಿ.ಎಸ್.ಐ (ಕಾ&ಸು), ಕುಮಟಾ ಪೊಲೀಸ್ ಠಾಣೆ ರವರು ದಿನಾಂಕ: 19-04-2022 ರಂದು 17-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮುರ್ಡೇಶ್ವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 53/2022, ಕಲಂ: 143, 147, 323, 324, 427 ಸಹಿತ 149 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಮಣಿಕಂಠನ್ ಎ. ತಂದೆ ಆರ್ಮುಗನ್, ಪ್ರಾಯ-20 ವರ್ಷ, 2]. ಗಣೇಶ ಎ. ತಂದೆ ಆರ್ಮುಗನ್, ಪ್ರಾಯ-19 ವರ್ಷ, ಸಾ|| (ಇಬ್ಬರು) ಕೊಯಿಮತ್ತರು, ತಮಿಳನಾಡು ಹಾಗೂ ಇನ್ನೂ 4 ಜನರು ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಪಿರ್ಯಾದಿ ಹಾಗೂ ಗಾಯಾಳು ಪಾಂಡುರಂಗ ತಂದೆ ಮಂಜುನಾಥ ದೇವಡಿಗ, ಈತನು ಎಂದಿನಂತೆ ದಿನಾಂಕ: 19-04-2022 ರಂದು 19-30 ಗಂಟೆಗೆ ಪ್ರವಾಸಿಗರ ಪೋಟೋ ತೆಗೆಯುತ್ತಿದ್ದಾಗ ನಮೂದಿತ ಆರೋಪಿತರಾದ 1 ಹಾಗೂ 2 ನೇಯವರು ಸೇರಿ ಪಾಂಡುರಂಗ ತಂದೆ ಮಂಜುನಾಥ ದೇವಡಿಗ, ಈತನಲ್ಲಿ ತೆಗೆದ ಪೋಟೋಗಳ ಸಾಪ್ಟ್ ಕಾಫಿ ಕೊಡಲು ಕೇಳಿದ್ದು, ‘ಸಾಪ್ಟ್ ಕಾಫಿ ಕೊಡಲು ಬರುವುದಿಲ್ಲ’ ಎಂದಿದ್ದಕ್ಕೆ ಜಗಳ ತೆಗೆದು ಒಬ್ಬ ಆರೋಪಿತ ವ್ಯಕ್ತಿಯು ಕ್ಯಾಮೆರಾ ಸ್ಟ್ಯಾಂಡ್ ಅನ್ನು ಕಾಲಿನಿಂದ ಒದ್ದು, ಪಾಂಡುರಂಗನಿಗೆ ಎಡಗೆನ್ನೆಯ ಮೇಲ್ಭಾಗಕ್ಕೆ ಮತ್ತು ಮೂಗಿನ ಹತ್ತಿರ ಕೈ ಮುಷ್ಠಿಯಿಂದ ಗುದ್ದಿ ರಕ್ತಗಾಯ ಪಡಿಸಿ, ಅಲ್ಲಿರುವ ಖುರ್ಚಿಯಿಂದ ಬೆನ್ನ ಮೇಲೆ ಹೊಡೆದನು. ಬಿಡಿಸಲು ಹೋದ ಪಿರ್ಯಾದಿಗೂ ಇನ್ನೂ ಉಳಿದ 4 ಜನ ಆರೋಪಿತರು ಸೇರಿ ಹಲ್ಲೆ ಮಾಡಿ, ಲ್ಯಾಬ್ ಒಳಗಡೆಯಿದ್ದ ಪ್ರಿಂಟರ್ ಮತ್ತು ಲ್ಯಾಮಿನೇಷನ್ ಮಷೀನ್ ದೂಡಿ ಹಾಕಿ, ಡ್ಯಾಮೇಜ್ ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ವಿಶ್ವನಾಥ ತಂದೆ ಮುಂಜುನಾಥ ನಾಯ್ಕ, ಪ್ರಾಯ-23 ವರ್ಷ, ವೃತ್ತಿ-ಪೋಟೋಗ್ರಾಫರ್, ಸಾ|| ಬಿದ್ರಮನೆ, ಬಸ್ತಿ, ತಾ: ಭಟ್ಕಳ ರವರು ದಿನಾಂಕ: 19-04-2022 ರಂದು 20-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 91/2022, ಕಲಂ: 32(3) ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ರಾಜೇಶ ತಂದೆ ತಾನಾಜಿ ನೆಸ್ರೇಕರ್, ಪ್ರಾಯ-50 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಬಜಾರ್ ಗಲ್ಲಿ, ತಾ: ಹಳಿಯಾಳ, ಹಾಲಿ ಸಾ|| ಶಾರದಾ ಗಲ್ಲಿ, ತಾ: ಯಲ್ಲಾಪುರ. ಈತನು ದಿನಾಂಕ: 19-04-2022 ರಂದು ಸಾಯಂಕಾಲ 06-10 ಗಂಟೆಯ ಸುಮಾರಿಗೆ ತನಗೆ ಸಂಬಂಧಿಸಿದ ಯಲ್ಲಾಪುರ ತಾಲೂಕಿನ ಹಳಿಯಾಳ ಕ್ರಾಸ್ ಹತ್ತಿರ ಆಶಾ ದಾಬಾದ ಹಿಂದೆ ಇರುವ ತಾತ್ಕಾಲಿಕ ಶೆಡ್ಡಿನಲ್ಲ್ಲಿ ಯಾವುದೇ ಪಾಸ್ ಯಾ ಪರ್ಮಿಟ್ ಇಲ್ಲದೇ ಅನಧಿಕೃತವಾಗಿ ಸಾರ್ವಜನಿಕರಿಗೆ ಮದ್ಯ ಸೇವಿಸಲು ಅನುವು ಮಾಡಿಕೊಟ್ಟಿದ್ದ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿರ್ಯಾದಿ ಹಾಗೂ ಸಿಬ್ಬಂದಿಯವರು ಪಂಚರೊಂದಿಗೆ ಸೇರಿ ದಾಳಿ ಮಾಡಿದಾಗ 1). 0RIGINAL CHOICE-90 ML ನ ಸೀಲ್ಡ್ ಪೌಚ್ ಗಳು-02, ಅ||ಕಿ|| 70/- ರೂಪಾಯಿ (1 ಕ್ಕೆ 35.13/- ರೂಪಾಯಿ), 2). ಖಾಲಿ ಪ್ಲಾಸ್ಟಿಕ್ ಗ್ಲಾಸ್-02, 3) ಖಾಲಿ ನೀರಿನ ಬಾಟಲಿ-01, 4). 0RIGINAL CHOICE-90 ML ನ ಖಾಲಿ ಪೌಚ್ ಗಳು-02, ಅ||ಕಿ|| 00.00/- ರೂಪಾಯಿಗಳೊಂದಿಗೆ ಸಿಕ್ಕಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಮಂಜುನಾಥ ಗೌಡರ್, ಪಿ.ಎಸ್.ಐ, ಯಲ್ಲಾಪುರ ಪೊಲೀಸ್ ಠಾಣೆ ರವರು ದಿನಾಂಕ: 19-04-2022 ರಂದು 19-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 30/2022, ಕಲಂ: 78(3) ಕರ್ನಾಟಕ ಪೊಲೀಸ್ (ತಿದ್ದುಪಡಿ) ಅಧಿನಿಯಮ-2021 ನೇದ್ದರ ವಿವರ...... ನಮೂದಿತ ಆರೋಪಿತ ಉಮಾಕಾಂತ ತಂದೆ ನಾಗೇಶ ಶೆಟ್ಟಿ, ಪ್ರಾಯ-48 ವರ್ಷ, ವೃತ್ತಿ-ಪಾನಶಾಪ್ ಅಂಗಡಿ, ಸಾ|| ವಿವೇಕಾನಂದ ನಗರ, ತಾ: ಶಿರಸಿ. ಈತನು ಶಿರಸಿ ನಗರದ ಶಿರಸಿ-ಹುಬ್ಬಳ್ಳಿ ರಸ್ತೆಯ ಕೆ.ಎಸ್.ಆರ್.ಟಿ.ಸಿ ಬಸ್ ಡಿಪೋ ಹತ್ತಿರ ಶೆಟ್ಟಿ ಪಾನಶಾಪ್ ಎದುರಿನ ಸಾರ್ವಜನಿಕ ಸ್ಥಳದಲ್ಲಿ ದಿನಾಂಕ: 19-04-2022 ರಂದು 17-30 ಗಂಟೆಗೆ ತನ್ನ ಲಾಭಕ್ಕೋಸ್ಕರ ಅದೃಷ್ಟದ ಅಂಕೆ-ಸಂಖ್ಯೆಗಳ ಮೇಲೆ ಹಣವನ್ನು ಪಂಥವಾಗಿ ಕಟ್ಟಿದರೆ 01/- ರೂಪಾಯಿಗೆ 80/- ರೂಪಾಯಿ ಹಣವನ್ನು ಕೊಡುತ್ತೇನೆ ಅಂತಾ ಹೇಳಿ ಜನರಿಗೆ ಕರೆದು ಜನರಿಂದ ಹಣವನ್ನು ಅದೃಷ್ಟದ ಅಂಕೆ-ಸಂಖ್ಯೆಗಳ ಮೇಲೆ ಪಂಥವಾಗಿ ಕಟ್ಟಿಸಿಕೊಂಡು ಓ.ಸಿ ಮಟಕಾ ಜೂಗಾರಾಟ ನಡೆಸುತ್ತಿರುವಾಗ ಪಿರ್ಯಾದಿಯವರು ಪಂಚರು ಮತ್ತು ಸಿಬ್ಬಂದಿಗಳೊಂದಿಗೆ ಸೇರಿ ದಾಳಿ ನಡೆಸಿದಾಗ ಓ.ಸಿ ಮಟಕಾ ಜೂಗಾರಾಟದಿಂದ ಸಂಗ್ರಹವಾದ ನಗದು ಹಣ 1,670/- ರೂಪಾಯಿ ಹಾಗೂ ಓ.ಸಿ ಮಟಕಾ ಜೂಗರಾಟಕ್ಕೆ ಬಳಸಿದ ಅಂಕೆ-ಸಂಖ್ಯೆ ಬರೆದ ಚೀಟಿ-01, ಅ||ಕಿ|| 00.00/- ರೂಪಾಯಿ ಮತ್ತು ಬಾಲ್ ಪೆನ್-01, ಅ||ಕಿ|| 00.00/- ರೂಪಾಯಿಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಭೀಮಾಶಂಕರ ಸಿನ್ನೂರು ಸಂಗಣ್ಣ, ಪಿ.ಎಸ್.ಐ, ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆ ರವರು ದಿನಾಂಕ: 19-04-2022 ರಂದು 19-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 31/2022, ಕಲಂ: 78(3) ಕರ್ನಾಟಕ ಪೊಲೀಸ್ (ತಿದ್ದುಪಡಿ) ಅಧಿನಿಯಮ-2021 ನೇದ್ದರ ವಿವರ...... ನಮೂದಿತ ಆರೋಪಿತರು 1]. ಬಾಲಚಂದ್ರ ತಂದೆ ಯಂಕಾ ಮರಾಠಿ, ಪ್ರಾಯ-42 ವರ್ಷ, ವೃತ್ತಿ-ಪಾನಬೀಡಾ ಅಂಗಡಿ, ಸಾ|| ಪಡಂಬೈಲ್, ಬಚಗಾಂವ್ ತಾ: ಶಿರಸಿ, 2]. ಶೇಖರ, ಸಾ|| ಶಿರಸಿ. ಈ ನಮೂದಿತ ಆರೋಪಿತರಲ್ಲಿ ಆರೋಪಿ 2 ನೇಯವನು ಆರೋಪಿ 1 ನೇಯವನ ಓ.ಸಿ ಬುಕ್ಕಿ ಇದ್ದು, ಆರೋಪಿ 2 ನೇಯವನ ಹೇಳಿದಂತೆ ಆರೋಪಿ 1 ನೇಯವನು ದಿನಾಂಕ: 19-04-2022 ರಂದು 11-30 ಗಂಟೆಯ ಸುಮಾರಿಗೆ ಶಿರಸಿ ಶಹರದ ಚಲವಾದಿ ಗಲ್ಲಿ ಕ್ರಾಸ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ತನ್ನ ಅನ್ಯಾಯದ ಲಾಭಕ್ಕೋಸ್ಕರ ಓ.ಸಿ ಮಟಕಾ ಜುಗಾರಾಟ ನಡೆಸುತ್ತಿರುವಾಗ ಓ.ಸಿ ಮಟಕಾ ಜುಗಾರಾಟದ ಸಲಕರಣೆಗಳಾದ ನಗದು ಹಣ ಒಟ್ಟೂ 920/- ರೂಪಾಯಿ, ಓ.ಸಿ. ಅಂಕೆ-ಸಂಖ್ಯೆ ಬರೆದ ಚೀಟಿ-01, ಒಂದು ಬಾಲ್ ಪೆನ್. ಇವುಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ರಾಮಚಂದ್ರತಂದೆ ಗೋಪಾಲ ನಾಯಕ, ಪೊಲೀಸ್ ವೃತ್ತ ನಿರೀಕ್ಷಕರು, ಶಿರಸಿ ವೃತ್ತ, ಶಿರಸಿ ರವರು ದಿನಾಂಕ: 19-04-2022 ರಂದು 13-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ದಾಂಡೇಲಿ ನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 34/2022, ಕಲಂ: 78(3) ಕರ್ನಾಟಕ ಪೊಲೀಸ್ (ತಿದ್ದುಪಡಿ) ಅಧಿನಿಯಮ-2021 ನೇದ್ದರ ವಿವರ...... ನಮೂದಿತ ಆರೋಪಿತರು 1]. ನಾಗರಾಜ ತಂದೆ ಕೃಷ್ಣ ತೋಕು, ಪ್ರಾಯ-19 ವರ್ಷ, ವೃತ್ತಿ-ಪಾನ್ ಅಂಗಡಿ ವ್ಯಾಪಾರ, ಸಾ|| ಸ್ವಾಮಿಲ್ ಚಾಳ, ಲಕ್ಷ್ಮೀ ದೇವಸ್ಥಾನದ ಹತ್ತಿರ, ಹಳೇ ದಾಂಡೇಲಿ, ತಾ: ದಾಂಡೇಲಿ, 2]. ಸದ್ದಾಂ ಖುತಬುದ್ದೀನ್ ಬಾಳೇಕುಂದ್ರಿ, ಸಾ|| ಹಳಿಯಾಳ ರಸ್ತೆ, ತಾ: ದಾಂಡೇಲಿ. ಈ ನಮೂದಿತ ಆರೋಪಿತರಲ್ಲಿ ಆರೋಪಿ 1 ನೇಯವನು ದಿನಾಂಕ: 19-04-2022 ರಂದು 11-20 ಗಂಟೆಗೆ ದಾಂಡೇಲಿ ನಗರ ಠಾಣಾ ವ್ಯಾಪ್ತಿಯ ಹಳೇ ದಾಂಡೇಲಿಯ ಗಾಂಧಿ ಚೌಕನ ಗಣಪತಿ ದೇವಸ್ಥಾನದ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ನಿಂತು ತಮ್ಮ ಲಾಭಕ್ಕಾಗಿ ಅದೃಷ್ಟದ ಅಂಕೆ ಬಂದಲ್ಲಿ 01/- ರೂಪಾಯಿಗೆ 80/- ರೂಪಾಯಿ ಕೊಡುವುದಾಗಿ ಹೇಳಿ ಸಾರ್ವಜನಿಕರಿಂದ ಅಂಕೆ-ಸಂಖ್ಯೆಗಳ ಮೇಲೆ ಹಣವನ್ನು ಪಂಥಕ್ಕೆ ಕಟ್ಟಿಸಿಕೊಂಡು ಓ.ಸಿ ಮಟಕಾ ಜುಗಾರಾಟ ಆಡಿಸುತ್ತಾ ದಾಳಿಯ ಕಾಲಕ್ಕೆ ಒಂದು ಬಾಲ್ ಪೆನ್ನು ಓ.ಸಿ ಅಂಕೆ-ಸಂಖ್ಯೆ ಬರೆದಿರುವ ಚೀಟಿ ಹಾಗೂ ನಗದು ಹಣ 1,050/- ರೂಪಾಯಿ ಸಮೇತ ಸಿಕ್ಕಿದ್ದು ಹಾಗೂ ಆರೋಪಿ 2 ನೇಯವನು ಆರೋಪಿ 1 ನೇಯವನು ಕಮೀಷನ್ ನೀಡಿ, ಓ.ಸಿ ಮಟಕಾ ಜೂಗಾರಾಟ ಆಡಿಸಿದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಯಲ್ಲಪ್ಪ ಎಸ್, ಪಿ.ಎಸ್.ಐ (ತನಿಖೆ), ದಾಂಡೇಲಿ ನಗರ ಪೊಲೀಸ್ ಠಾಣೆ ರವರು ದಿನಾಂಕ: 19-04-2022 ರಂದು 13-20 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಸಿದ್ದಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 56/2022, ಕಲಂ: 78(3) ಕರ್ನಾಟಕ ಪೊಲೀಸ್ (ತಿದ್ದುಪಡಿ) ಅಧಿನಿಯಮ-2021 ನೇದ್ದರ ವಿವರ...... ನಮೂದಿತ ಆರೋಪಿತರು 1]. ಬಂಗಾರ್ಯ ತಂದೆ ರಾಮಾ ನಾಯ್ಕ, ಪ್ರಾಯ-56 ವರ್ಷ, ವೃತ್ತಿ-ಅಂಗಡಿ ವ್ಯಾಪಾರ, ಸಾ|| ಬೇಡ್ಕಣಿ, ತಾ: ಸಿದ್ದಾಪುರ, 2]. ಉದಯ ಶೆಟ್ಟಿ, ಸಾ|| ಚಿಪಗಿ, ತಾ: ಶಿರಸಿ. ಈ ನಮೂದಿತ ಆರೋಪಿತರಲ್ಲಿ ಆರೋಪಿ 1 ನೇಯವನು ದಿನಾಂಕ: 19-04-2022 ರಂದು ಸಂಜೆ 18-45 ಗಂಟೆಗೆ ಸಿದ್ದಾಪುರ ತಾಲೂಕಿನ ಬೇಡ್ಕಣಿಯ ಹುಲೆಮನೆ ಕ್ರಾಸ್ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ತನ್ನ ಅನ್ಯಾಯದ ಲಾಭಕ್ಕೋಸ್ಕರ ಓ.ಸಿ ಮಟಕಾ ಜುಗಾರಾಟದ ಅಂಕೆ-ಸಂಖ್ಯೆಗಳ ಅದೃಷ್ಟದ ಮೇಲೆ ಜನರಿಂದ ಹಣವನ್ನು ಪಂಥವಾಗಿ ಕಟ್ಟಿಸಿಕೊಂಡು ಅವರಿಗೆ ಓ.ಸಿ ಮಟಕಾ ಜುಗಾರಾಟದ ಅಂಕೆ-ಸಂಖ್ಯೆಗಳ ಚೀಟಿಯನ್ನು ಬರೆದುಕೊಟ್ಟು ಓ.ಸಿ ಮಟಕಾ ಜುಗಾರಾಟ ನಡೆಸುತ್ತಿದ್ದಾಗ ಪಿರ್ಯಾದಿಯವರು ಸಿಬ್ಬಂದಿಗಳೊಂದಿಗೆ ಸೇರಿ ದಾಳಿ ಮಾಡಿದಾಗ ಆರೋಪಿ 1ನೇಯವನು ದಾಳಿಯ ಕಾಲಕ್ಕೆ ಓ.ಸಿ ಜುಗಾರಾಟದ ಸಲಕರಣೆಗಳಾದ 1). ಬಾಲ್ ಪೆನ್-1, 2). ಓ.ಸಿ ಚೀಟಿ-1 ಮತ್ತು 3). ನಗದು ಹಣ 1,020/- ರೂಪಾಯಿಗಳೊಂದಿಗೆ ಆರೋಪಿ 1 ನೇಯವನು ಸೆರೆ ಸಿಕ್ಕಿದ್ದು ಹಾಗೂ ಈ ಓ.ಸಿ ಚೀಟಿ ಮತ್ತು ಸಂಗ್ರಹವಾದ ಹಣವನ್ನು ಆರೋಪಿ 2 ನೇಯವನಿಗೆ ಕೊಡುತ್ತಿದ್ದ ಕುರಿತು ತಿಳಿಸಿದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಮಂಜೇಶ್ವರ ವಿ, ಚಂದಾವರ, ಪಿ.ಎಸ್.ಐ (ತನಿಖೆ), ಸಿದ್ದಾಪುರ ಪೊಲೀಸ್ ಠಾಣೆ ರವರು ದಿನಾಂಕ: 19-04-2022 ರಂದು 20-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 19-04-2022

at 00:00 hrs to 24:00 hrs

 

ಶಿರಸಿ ಗ್ರಾಮೀಣ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 22/2022, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಅಣ್ಣಪ್ಪ ತಂದೆ ಶಿವು ಗೌಡ, ಪ್ರಾಯ-26 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಮತ್ತಿಗಟ್ಟಾ, ಕೆಳಗಿನಕೇರಿ, ಮಾಡಮನೆ ಮಜರೆ, ಪೋ: ಮುಂಡಗನಮನೆ, ತಾ: ಶಿರಸಿ. ಈತನು ಪಿರ್ಯಾದಿಯ ತಮ್ಮನಾಗಿದ್ದು, ಯಾವುದೋ ಒಂದು ಹುಡುಗಿಯನ್ನು ಪ್ರೀತಿ ಮಾಡಿದ ವಿಷಯವನ್ನೋ ಅಥವಾ ಇನ್ಯಾವುದೋ ಬೇರೆ ಕಾರಣದಿಂದಲೋ ಮನಸ್ಸಿಗೆ ಹಚ್ಚಿಕೊಂಡು ದಿನಾಂಕ: 12-02-2022 ರಂದು 08-30 ಗಂಟೆಯಿಂದ ದಿನಾಂಕ: 19-04-2022 ರಂದು 19-05 ಗಂಟೆಯ ನಡುವೆ ಅವಧಿಯಲ್ಲಿ ಮತ್ತಿಘಟ್ಟಾ ಕ್ರಾಸ್ ಸಮೀಪದ ಅರಣ್ಯ ಪ್ರದೇಶದಲ್ಲಿ ಒಂದು ಅಡಚರಿ ಮರದ ಕೊಂಬೆಗೆ ನೈಲಾನ್ ಹಗ್ಗದಿಂದ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡು ಕೊಳೆತು ನೇತಾಡುವ ಸ್ಥಿತಿಯಲ್ಲಿರುತ್ತದೆ. ಇದನ್ನು ಹೊರತು ಪಡಿಸಿದರೇ ತನ್ನ ತಮ್ಮನ ಸಾವಿನಲ್ಲ್ಲಿ ಬೇರೆ ಯಾವುದೇ ಸಂಶಯ ಇರುವುದಿಲ್ಲ. ಈ ಕುರಿತು ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ದೇವರು ತಂದೆ ಶಿವು ಗೌಡ, ಪ್ರಾಯ-36 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಮತ್ತಿಗಟ್ಟಾ, ಕೆಳಗಿನಕೇರಿ, ಮಾಡಮನೆ ಮಜರೆ, ಪೋ: ಮುಂಡಗನಮನೆ, ತಾ: ಶಿರಸಿ ರವರು ದಿನಾಂಕ: 19-04-2022 ರಂದು 21-05 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

 

 

ಇತ್ತೀಚಿನ ನವೀಕರಣ​ : 03-05-2022 01:12 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080