ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 19-08-2021

at 00:00 hrs to 24:00 hrs

 

ಕಾರವಾರ ಶಹರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 70/2021, ಕಲಂ: ಗಂಡಸು ಕಾಣೆ  ನೇದ್ದರ ವಿವರ...... ನಮೂದಿತ ಕಾಣೆಯಾದ ಗಂಡಸು ಶ್ರೀ ದಿನೇಶ ತಂದೆ ರಾಮಚಂದ್ರ ಕಾಮತ್, ಪ್ರಾಯ-75 ವರ್ಷ, ಸಾ|| ತಾಮ್ಸೇವಾಡಾ, ಕೋಡಿಬಾಗ್, ಕಾರವಾರ. ಪಿರ್ಯಾದಿಯ ಗಂಡನಾದ ಈತನು ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ಯಾರಿಗೂ ಹೇಳದೇ ಕೇಳದೇ ದಿನಾಂಕ: 16-08-2021 ರಂದು ಸಾಯಂಕಾಲ 08-20 ಗಂಟೆಗೆ ಮನೆಯಿಂದ ಹೊರಗೆ ಹೋಗಿ ಗೋವಾ ದಿಕ್ಕಿನೆಡೆಗೆ ನಡೆದುಕೊಂಡು ಹೋಗಿ ಕಾಣೆಯಾಗಿದ್ದು, ಇದುವರೆಗೂ ಮರಳಿ ಮನೆಗೆ ಬಂದಿರುವುದಿಲ್ಲ. ತನ್ನ ಗಂಡನನ್ನು ನಮ್ಮ ಸಂಬಂಧಿಕರು ಹಾಗೂ ಪರಿಚಯದವರ ಮನೆ ಹಾಗೂ ಮತ್ತಿತರ ಕಡೆ ಹುಡುಕಾಡಿದರೂ ಪತ್ತೆಯಾಗದೇ ಇದ್ದು, ಕಾಣೆಯಾದ ತನ್ನ ಗಂಡನನ್ನು ಹುಡುಕಿ ಕೊಡಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀಮತಿ ದೀಪಾ ದಿನೇಶ ಕಾಮತ್, ಪ್ರಾಯ-58 ವರ್ಷ, ವೃತ್ತಿ-ಮನೆ ಕೆಲಸ, ಸಾ|| ತಾಮ್ಸೇವಾಡಾ, ಕೋಡಿಬಾಗ್, ಕಾರವಾರ ರವರು ದಿನಾಂಕ: 19-08-2021 ರಂದು 11-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 218/2021, ಕಲಂ: 279, 337, 304(ಎ) ಐಪಿಸಿ  ನೇದ್ದರ ವಿವರ...... ನಮೂದಿತ ಆರೋಪಿತ ಶಿವಪ್ಪ ತಂದೆ ಮಹಾದೇವಪ್ಪ, ಪ್ರಾಯ-35 ವರ್ಷ, ವೃತ್ತಿ-ಚಾಲಕ, ಸಾ|| ಗುರುಗುಂಟಾ, ತಾ: ಲಿಂಗಸಗೂರು, ಜಿ: ರಾಯಚೂರ (ಲಾರಿ ನಂ: ಕೆ.ಎ-02/ಎ.ಎಚ್-1730 ನೇದರ ಚಾಲಕ). ಈತನು ದಿನಾಂಕ: 19-08-2021 ರಂದು 15-00 ಗಂಟೆಯ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರಲ್ಲಿ ಹೊನ್ನಾವರ ತಾಲೂಕಿನ ಹಳದೀಪುರದ ಕೇಶವ ದೇವಸ್ಥಾನದ ಕ್ರಾಸ್ ಹತ್ತಿರ ತನ್ನ ಬಾಬ್ತು ಲಾರಿ ನಂ: ಕೆ.ಎ-02/ಎ.ಎಚ್-1730 ನೇದನ್ನು ಹೊನ್ನಾವರ ಕಡೆಯಿಂದ ಕುಮಟಾ ಕಡೆಗೆ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವಂತೆ ಚಲಾಯಿಸಿಕೊಂಡು ಹೋಗಿ ತನ್ನ ಮುಂದಿನಿಂದ ಗಾಯಾಳು ರಾಜು ತಂದೆ ಪುರಸಯ್ಯ ನಾಯ್ಕ, ಪ್ರಾಯ-54 ವರ್ಷ, ವೃತ್ತಿ-ಶಿಕ್ಷಕ, ಸಾ|| ಬಂದರ್ ರಸ್ತೆ, ಅಸೂರಖಾನ್ ಗಲ್ಲಿ, ತಾ: ಹೊನ್ನಾವರ ಈತನು  ತನ್ನ ಬಾಬ್ತು ಮೋಟಾರ್ ಸೈಕಲ್ ನಂ: ಕೆ.ಎ-47/ಕ್ಯೂ-6416 ನೇದರ ಮೇಲೆ ತನ್ನ ಹೆಂಡತಿಯಾದ ಶ್ರೀಮತಿ ಆಶಾ ಕೋಂ. ರಾಜು ನಾಯ್ಕ, ಪ್ರಾಯ-50 ವರ್ಷ, ವೃತ್ತಿ-ಶಿಕ್ಷಕಿ, ಸಾ|| ಬಂದರ್ ರಸ್ತೆ, ಅಸೂರಖಾನ್ ಗಲ್ಲಿ, ತಾ: ಹೊನ್ನಾವರ ಇವಳಿಗೆ ಕೂಡ್ರಿಸಿಕೊಂಡು ಹೊನ್ನಾವರ ಕಡೆಯಿಂದ ಹಳದೀಪುರದ ಕೇಶವ ದೇವಸ್ಥಾನದ ಕ್ರಾಸ್ ಕಡೆಗೆ ತನ್ನ ಮೋಟಾರ್ ಸೈಕಲನ್ನು ಚಲಾಯಿಸಿಕೊಂಡು ಹೋಗಿ ರಸ್ತೆಯ ಬಲಕ್ಕೆ ಕೆರೆಗದ್ದೆ ಕಡೆಗೆ ಹೋಗಲೆಂದು ತನ್ನ ಮೋಟಾರ್ ಸೈಕಲಿಗೆ ಬಲಗಡೆ ಇಂಡಿಕೇಟರ್ ಹಾಕಿ ಬಲಗೈ ಸನ್ನೆ ಮಾಡಿ ಮೋಟಾರ್ ಸೈಕಲನ್ನು ರಸ್ತೆಯ ಬಲಕ್ಕೆ ತಿರುಗಿಸುತ್ತಿದ್ದಾಗ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಮೋಟಾರ್ ಸೈಕಲ್ಲ ಸವಾರನಾದ ರಾಜು ತಂದೆ ಪುರಸಯ್ಯ ನಾಯ್ಕ ರವರಿಗೆ ತಲೆಗೆ ಹಾಗೂ ಮೈಮೇಲೆ ಅಲ್ಲಲ್ಲಿ ಗಾಯ ಪಡಿಸಿದ್ದಲ್ಲದೇ, ಮೋಟಾರ್ ಸೈಕಲ್ ಹಿಂಬದಿ ಸವಾರಳಾದ ಶ್ರೀಮತಿ ಆಶಾ ಕೋಂ. ರಾಜು ನಾಯ್ಕ ರವರಿಗೆ ತಲೆಗೆ, ಎಡಗಾಲಿನ ತೊಡೆಗೆ ಹಾಗೂ ಎಡಗಾಲಿಗೆ ಗಂಭೀರ ಸ್ವರೂಪದ ಗಾಯ ಪಡಿಸಿದ್ದಲ್ಲದೇ, ಬಲಗಾಲಿಗೆ ಮತ್ತು ಎರಡು ಕೈಗಳಿಗೆ ಅಲ್ಲಲ್ಲಿ ಗಾಯ ಪಡಿಸಿದ್ದು, ಗಂಭೀರ ಗಾಯಗೊಂಡ ಶ್ರೀಮತಿ ಆಶಾ ಕೋಂ. ರಾಜು ನಾಯ್ಕ ರವರಿಗೆ ಹೊನ್ನಾವರ ತಾಲೂಇಕನ ಆಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆಗಾಗಿ ಕುಂದಾಪುರದ ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ಗಾಯಾಳುವಿಗೆ ಪರೀಕ್ಷಿಸಿದ ವೈದ್ಯರು ಗಾಯಾಳು ಆಶಾ ರಾಜು ನಾಯ್ಕ ರವರು ಮಾರ್ಗಮಧ್ಯದಲ್ಲಿಯೇ 16-40 ಗಂಟೆಗೆ ಮೃತಪಟ್ಟ ಕುರಿತು ತಿಳಿಸಿದ ಬಗ್ಗೆ ಪಿರ್ಯಾದಿ ಶ್ರೀ ಶಿವಾನಂದ ತಂದೆ ಕೇಶವ ನಾಯ್ಕ, ಪ್ರಾಯ-53 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಹಳದೀಪುರ, ಕೆರೆಗದ್ದೆ, ತಾ: ಹೊನ್ನಾವರ ರವರು ದಿನಾಂಕ: 19-08-2021 ರಂದು 18-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮಂಕಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 113/2021, ಕಲಂ: 279, 337 ಐಪಿಸಿ  ನೇದ್ದರ ವಿವರ...... ನಮೂದಿತ ಆರೋಪಿತ ದೇವಾ ತಂದೆ ಮಂಜು ಗೌಡ, ಸಾ|| ಇಡಗುಂಜಿ ಕುಳಿಮನೆ, ತಾ: ಹೊನ್ನಾವರ (ಮೋಟಾರ್ ಸೈಕಲ್ ನಂ: ಕೆ.ಎ-47/ಡಬ್ಲ್ಯೂ-4392 ನೇದರ ಸವಾರ). ಈತನು ದಿನಾಂಕ: 19-08-2021 ರಂದು 10-00 ಗಂಟೆಯ ಸುಮಾರಿಗೆ ಇಡಗುಂಜಿ ಕ್ರಾಸ್ ಹತ್ತಿರ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ರಸ್ತೆಯ ತಿರುವಿನಲ್ಲಿ ತಾನು ಸವಾರಿ ಮಾಡುತ್ತಿದ್ದ ಮೋಟಾರ್ ಸೈಕಲ್ ನಂ: ಕೆ.ಎ-47/ಡಬ್ಲ್ಯೂ-4392 ನೇದನ್ನು ಕುಳಿಮನೆಯಿಂದ ಹೊನ್ನಾವರ ಕಡೆಗೆ ಹೋಗಲು ಅತೀವೇಗವಾಗಿ ಮತ್ತು ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಹೋಗಿ ನಿಯಂತ್ರಣ ತಪ್ಪಿ ಮೋಟಾರ್ ಸೈಕಲ್ ಸಮೇತ ಬಿದ್ದು, ಮೋಟಾರ್ ಸೈಕಲ್ ಹಿಂಬದಿಯಲ್ಲಿ ಕುಳಿತ ಶ್ರೀಮತಿ ಮಂಗಲಾ ಗೌಡ ಇವರಿಗೆ ತಲೆಗೆ ಹಾಗೂ ಮೈಕೈಗೆ ರಕ್ತದ ಗಾಯನೋವು ಪಡಿಸಿದ್ದಲ್ಲದೇ, ಆರೋಪಿ ಮೋಟಾರ್ ಸೈಕಲ್ ಸವಾರನು ತನಗೂ ಸಹ ಸಣ್ಣಪುಟ್ಟ ಗಾಯನೋವು ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ಶ್ರೀಧರ ಮಂಜು ಗೌಡ, ಪ್ರಾಯ-30 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಇಡಗುಂಜಿ, ಕುಳಿಮನೆ, ತಾ: ಹೊನ್ನಾವರ ರವರು ದಿನಾಂಕ: 19-08-2021 ರಂದು 21-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮುರ್ಡೇಶ್ವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 74/2021, ಕಲಂ: 323, 504, 506 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಸುಬ್ರಹ್ಮಣ್ಯ ತಂದೆ ಕಮಲಾಕರ ನಾಯ್ಕ, ಸಾ|| ಜನತಾ ಕಾಲೋನಿ, ಮುರ್ಡೇಶ್ವರ, ತಾ: ಭಟ್ಕಳ. ದಿನಾಂಕ: 17-08-2021 ರಂದು ಪಿರ್ಯಾದಿಯ ಗೆಳೆಯನಾದ ಆನಂದ ಭದ್ರಾ ನಾಯ್ಕ ಈತನು ಪಿರ್ಯಾದಿಗೆ ಬಸ್ತಿಗೆ ಬರಲು ತಿಳಿಸಿದಂತೆ ಪಿರ್ಯಾದುದಾರರು ಬಸ್ತಿಗೆ ಬಂದಾಗ ರೈಲ್ವೇ ಹಳಿಯ ಹತ್ತಿರ ಆನಂದ ಹಾಗೂ ಪರಿಚಯದವರಾದ ನಮೂದಿತ ಆರೋಪಿತ ಹಾಗೂ ವಸಂತ ನಾಗಪ್ಪ ನಾಯ್ಕ ಇವರು ಕುಳಿತುಕೊಂಡಿರುವುದನ್ನು ನೋಡಿ ರಾತ್ರಿ 09-10 ಗಂಟೆಯ ಸುಮಾರಿಗೆ ಪಿರ್ಯಾದುದಾರರು ಅಲ್ಲಿಗೆ ಹೋಗಿ ಮಾತನಾಡುತ್ತಿರುವಾಗ ಆರೋಪಿತನ ಬಲಗೈ ಹೆಬ್ಬೆರೆಳು ಚಿಕ್ಕದಿದ್ದು, ಆತನಿಗೆ ಸ್ನೇಹಿತರೆಲ್ಲರೂ ತಮಾಷೆಗೆ ‘ಛೊಟ್ಟಾ ಸುಬ್ರಹ್ಮಣ್ಯ’ ಅಂತಾ ಕರೆಯುತ್ತಿದ್ದರಿಂದ ಅದಕ್ಕೆ ಪಿರ್ಯಾದುದಾರರು ‘ಛೊಟ್ಟಾ ಸುಬ್ರಹ್ಮಣ್ಯ’ ಅಂತಾ ಕರೆದಿದ್ದರಿಂದ ಆರೋಪಿತನು ಒಮ್ಮೆಲೇ ಪಿರ್ಯಾದಿಗೆ ‘ಬೋಳಿ ಮಗನೆ, ಸೂಳೆ ಮಗನೆ’ ಅಂತಾ ಅವಾಚ್ಯವಾಗಿ ಬೈಯ್ದು, ಹೊಡೆಯಲು ಮುಂದಾದಾಗ ಅಲ್ಲಿಯೇ ಇದ್ದ ವಸಂತ ಮತ್ತು ಆನಂದ ಇವರು ಆರೋಪಿತನಿಗೆ ಸಮಾಧಾನ ಪಡಿಸಿದರೂ ಸಹ ಕೇಳದೇ ಕೈಯಿಂದ ಪಿರ್ಯಾದಿಗೆ ಮೈಮೇಲೆ ಹೊಡೆದು, ಯಾವುದೋ ಒಂದು ವಸ್ತು ತೆಗೆದುಕೊಂಡು ಹೊಟ್ಟೆಯ ಎಡಭಾಗದಲ್ಲಿ ಬಲವಾಗಿ ಹೊಡೆದು ಗಾಯಗೊಳಿಸಿ ದೂಡಿ ಹಾಕಿದಾಗ ಪಿರ್ಯಾದಿದಾರರು ಕೆಳಗಡೆ ಬಿದ್ದು, ತುಟಿಗೆ ಗಾಯನೋವು ಪಡಿಸಿ ಜೀವದ ಬೆದರಿಕೆ ಹಾಕಿದ ಬಗ್ಗೆ ಪಿರ್ಯಾದಿ ಶ್ರೀ ಉಮೇಶ ತಂದೆ ರಾಜಪ್ಪ ನಾಯ್ಕ, ಪ್ರಾಯ-38 ವರ್ಷ, ವೃತ್ತಿ-ಆಟೋ ಚಾಲಕ, ಸಾ|| ಮೇಲಿನ ಮನೆ, ಚಿತ್ರಾಪುರ, ಶಿರಾಲಿ, ತಾ: ಭಟ್ಕಳ ರವರು ದಿನಾಂಕ: 19-08-2021 ರಂದು 18-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

                      

ಮುರ್ಡೇಶ್ವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 75/2021, ಕಲಂ: 279, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಸಂತೋಷ ಸಿ. ಎಸ್. ತಂದೆ ಸುರೇಶ, ಸಾ|| ಚಕ್ಕರ, ತಾ: ಚನ್ನಪಟ್ಟಣ, ಜಿ: ರಾಮನಗರ (ಮಾರುತಿ ಸ್ವಿಪ್ಟ್ ಕಾರ್ ನಂ: ಕೆ.ಎ-11/ಬಿ-1419 ನೇದರ ಚಾಲಕ). ಪಿರ್ಯಾದಿಯು ದಿನಾಂಕ: 18-08-2021 ರಂದು ತನ್ನ ಮನೆಯಿಂದ ಅಂದರೆ ಮಾವಿನಕಟ್ಟಾ ಕಡೆಯಿಂದ ಬಂಗಾರಮಕ್ಕಿ ಕ್ರಾಸ್ ಕಡೆಗೆ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ಮೇಲೆ ತನ್ನ ಬಾಪ್ತು ಬಜಾಜ್ ಪ್ಲಾಟಿನಮ್ ಮೋಟಾರ್ ಸೈಕಲ್ ನಂ: ಕೆ.ಎ-47/ಯು-3926 ನೇದನ್ನು ಚಲಾಯಿಸಿಕೊಂಡು ಬಂದು ಬಂಗಾರಮಕ್ಕಿಯಲ್ಲಿರುವ ದ್ಯಾಮಮಾಸ್ತಿ ದೇವಾಸ್ಥಾನಕ್ಕೆ ಹೋಗುವ ಕುರಿತು ತನ್ನ ಮೋಟಾರ್ ಸೈಕಲಿನ ಬಲಬದಿಯ ಇಂಡಿಕೇಟರ್ ಅನ್ನು ಹಾಕಿಕೊಂಡು ರಸ್ತೆ ದಾಟಿ ಡಿವೈಡರ್ ಖುಲ್ಲಾ ಜಾಗದಲ್ಲಿ ನಿಂತು ಇನ್ನೊಂದು ಪಥದಲ್ಲಿ ಹೊನ್ನಾವರ ಕಡೆಯಿಂದ ಭಟ್ಕಳ ಕಡೆಗೆ ಹೋಗುವ ವಾಹನಗಳನ್ನು ಗಮನಿಸುತ್ತಿರುವಾಗ 20-45 ಗಂಟೆಯ ಸುಮಾರಿಗೆ ಮಾರುತಿ ಸ್ವಿಪ್ಟ್ ಕಾರ್ ನಂ: ಕೆ.ಎ-47/ಬಿ-1419 ನೇದರ ಆರೋಪಿ ಚಾಲಕನು ತನ್ನ ಕಾರನ್ನು ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ಮೇಲೆ ಭಟ್ಕಳ ಕಡೆಯಿಂದ ಹೊನ್ನಾವರ ಕಡೆಗೆ ಅತೀವೇಗವಾಗಿ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿಯ ಮೋಟಾರ್ ಸೈಕಲಿಗೆ ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಪಿರ್ಯಾದಿಯ ತಲೆಗೆ, ಹಣೆಯ ಎಡಬದಿಗೆ, ಬಲಬದಿಯ ಪಕ್ಕೆಲಬು ಹತ್ತಿರ ಗಾಯನೋವು ಪಡಿಸಿದ್ದು ಹಾಗೂ ಬಲಗೈ ಮೊಣಗಂಟಿನ ಹತ್ತಿರ ಗಂಭೀರ ಸ್ವರೂಪದ ಗಾಯನೋವು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ನಾರಾಯಣ ತಂದೆ ಮಂಜಯ್ಯ ದೇವಾಡಿಗ, ಪ್ರಾಯ-59 ವರ್ಷ, ವೃತ್ತಿ-ಕೆ.ಇ.ಬಿ ಯಲ್ಲಿ ಮೆಕ್ಯಾನಿಕಲ್ ಕೆಲಸ, ಸಾ|| ಮರದ ಮನೆ, ಯಕ್ಷಿಮನೆ, ಬೇಂಗ್ರೆ-01, ತಾ: ಭಟ್ಕಳ ರವರು ದಿನಾಂಕ: 19-08-2021 ರಂದು 19-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

                      

ಭಟ್ಕಳ ಶಹರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 96/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಲಂಬೋದರ ತಂದೆ ಕೃಷ್ಣ ನಾಯ್ಕ, ಪ್ರಾಯ-32 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಗೊರಟರ ಮನೆ, ಹೊನ್ನೆಗದ್ದೆ, ಹೆಬ್ಳೆ, ತಾ: ಭಟ್ಕಳ (ಮೋಟಾರ್ ಸೈಕಲ್ ನಂ: ಕೆ.ಎ-47/ಜೆ-9430 ನೇದರ ಸವಾರ). ಈತನು ದಿನಾಂಕ: 16-08-2021 ರಂದು ಬೆಳಿಗ್ಗೆ 11-00 ಗಂಟೆಯ ಸುಮಾರಿಗೆ ಭಟ್ಕಳ ಶಹರದ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರಲ್ಲಿ ಎಮ್ಮಿಸ್ ಹೊಟೇಲ್ ಎದುರಿಗೆ ತನ್ನ ಮೋಟಾರ್ ಸೈಕಲ್ ನಂ: ಕೆ.ಎ-47/ಜೆ-9430 ನೇದರ ಹಿಂಬದಿಯಲ್ಲಿ ತನ್ನ ತಂದೆ ಶ್ರೀ ಕೃಷ್ಣ ತಂದೆ ದುರ್ಗಪ್ಪ ನಾಯ್ಕ, ಪ್ರಾಯ-58 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಗೊರಟರ ಮನೆ, ಹೊನ್ನೆಗದ್ದೆ, ಹೆಬ್ಳೆ, ತಾ: ಭಟ್ಕಳ ಇವರನ್ನು ಕೂಡ್ರಿಸಿಕೊಂಡು ಸದ್ರಿ ಮೋಟಾರ್ ಸೈಕಲನ್ನು ಭಟ್ಕಳ ಬದಿಯಿಂದ ಶಿರಾಲಿ ಕಡೆಗೆ ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಹೋಗಿ ಮೋಟಾರ್ ಸೈಕಲಿಗೆ ಒಮ್ಮೇಲೆ ಬ್ರೇಕ್ ಹಾಕಿದ್ದರಿಂದ ಮೋಟಾರ್ ಸೈಕಲ್ ಮೇಲಿನ ನಿಯಂತ್ರಣ ಕಳೆದುಕೊಂಡು ರಸ್ತೆಯ ಮೇಲೆ ಬಿದ್ದು ಪಲ್ಟಿ ಮಾಡಿ ಅಪಘಾತ ಪಡಿಸಿ, ಮೋಟಾರ್ ಸೈಕಲ್ ಹಿಂಬದಿಯ ಸವಾರ ಶ್ರೀ ಕೃಷ್ಣ ತಂದೆ ದುರ್ಗಪ್ಪ ನಾಯ್ಕ ಇವರಿಗೆ ಸೊಂಟದ ಬಲಬದಿಗೆ ಗಾಯನೋವು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಲಂಬೋದರ ತಂದೆ ಈರಪ್ಪಾ ನಾಯ್ಕ, ಪ್ರಾಯ-37 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಮನಿಯಾರ ಮನೆ, ಹೊನ್ನೆಗದ್ದೆ, ಹೆಬ್ಳೆ, ತಾ: ಭಟ್ಕಳ ರವರು ದಿನಾಂಕ: 19-08-2021 ರಂದು 11-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

                      

ಮುಂಡಗೋಡ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 111/2021, ಕಲಂ: 457, 380 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ದಿನಾಂಕ: 19-08-2021 ರಂದು ಬೆಳಿಗ್ಗಿನ ಜಾವ 03-00 ಗಂಟೆಯ ಸುಮಾರಿಗೆ ಮುಂಡಗೋಡ ಪಟ್ಟಣದ ಹುಬ್ಬಳ್ಳಿ ರಸ್ತೆಯಲ್ಲಿರುವ ತೃಪ್ತಿ ವೈನ್ ಶಾಪ್ ನ ಮೇಲಿನ ತಗಡಿನ ಶೀಟ್ ತೆಗೆದು ಅದರ ಕೆಳಗೆ ಇದ್ದು ಪಾಟಿ ಕಲ್ಲು ಒಡೆದು, ಅದರ ಕೆಳಗೆ ಇದ್ದ ಹಲಗೆಯನ್ನು ಕಬ್ಬಿಣದ ರಾಡಿನಿಂದ ಮೀಟಿ ತೆಗೆದು, ಅಂಗಡಿಯ ಒಳಗೆ ಹೊಕ್ಕು ಕಟ್ಟಿಗೆಯ ಕ್ಯಾಷ್ ಟೇಬಲಿನ ಒಳಗೆ ಪ್ಲಾಸ್ಟಿಕ್ ಡಬ್ಬದಲ್ಲಿ ಇಟ್ಟಿದ್ದ ವ್ಯಾಪಾರದಿಂದ ಸಂಗ್ರಹವಾದ 1,93,500/- ರೂಪಾಯಿ ಹಣವನ್ನು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀ ಈರಜ್ಜ ತಂದೆ ಪಕ್ಕಿರಪ್ಪ ಮಳವಳ್ಳಿ, ಪ್ರಾಯ-30 ವರ್ಷ, ವೃತ್ತಿ-ವ್ಯಾಪಾರ, ಸಾ|| ಹಿರೇಹಳ್ಳಿ, ತಾ: ಮುಂಡಗೋಡ ರವರು ದಿನಾಂಕ: 19-08-2021 ರಂದು 15-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಸಿದ್ದಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 92962021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ಪ್ರೇಮಾನಂದ ತಂದೆ ಕೇರಿಯಾ ಮಡಿವಾಳ, ಪ್ರಾಯ-22 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ವಡಗೇರಿ, ಕಾನಗೋಡ ಗ್ರಾಮ, ತಾ: ಸಿದ್ದಾಪುರ. 2]. ರಮೇಶ ತಂದೆ ಗಣಪತಿ ನಾಯ್ಕ, ಪ್ರಾಯ-34 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ವಡಗೇರಿ, ಕಾನಗೋಡ ಗ್ರಾಮ, ತಾ: ಸಿದ್ದಾಪುರ. 3]. ರಮೇಶ ನಾಯ್ಕ, ಸಾ|| ತೆರಳಿ, ಬಾಳೆಗದ್ದೆ, ತಾ: ಸಿದ್ದಾಪುರ. ಈ ನಮೂದಿತ ಆರೋಪಿತರಲ್ಲಿ ಆರೋಪಿ 1 ಹಾಗೂ 2 ನೇಯವರು ಸೇರಿಕೊಂಡು ದಿನಾಂಕ: 18-08-2021 ರಂದು 19-30 ಗಂಟೆಗೆ ಸಿದ್ಧಾಪುರ ತಾಲೂಕಿನ ಕಾನಗೋಡ ಗ್ರಾಮದ ವಡಗೇರಿಯ ಶಾಲೆಯ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ಓ.ಸಿ ಅಂಕೆ-ಸಂಖ್ಯೆಗಳ ಮೇಲೆ 01/- ರೂಪಾಯಿಗೆ 80/- ರೂಪಾಯಿ ಕೊಡುವುದಾಗಿ ಹೇಳಿ ಜನರಿಂದ ಹಣವನ್ನು ಪಂಥ ಕಟ್ಟಿಸಿಕೊಂಡು ಓ.ಸಿ ಮಟಕಾ ಜೂಗಾರಾಟ ನಡೆಸುತ್ತಿರುವಾಗ ಪಿರ್ಯಾದಿಯವರು ಸಿಬ್ಬಂದಿಯೊಂದಿಗೆ ಸೇರಿ ದಾಳಿ ಮಾಡಿದಾಗ, ದಾಳಿಯ ಕಾಲಕ್ಕೆ 1). ನಗದು ಹಣ 1,500/- ರೂಪಾಯಿ, 2). ಬಾಲ್ ಪೆನ್-01, 3). ಓ.ಸಿ ಅಂಕೆ-ಸಂಖ್ಯೆ ಬರೆದ ಚೀಟಿ-01 ನೇದವುಗಳೊಂದಿಗೆ ಆರೋಪಿ 1 ಹಾಗೂ 2 ನೇಯವರು ಸೆರೆ ಸಿಕ್ಕಿದ್ದು ಹಾಗೂ ಆರೋಪಿ 3 ನೇಯವನು ಆರೋಪಿ 1 ಹಾಗೂ 2 ನೇಯವರಿಂದ ಓ.ಸಿ ಚೀಟಿ ಮತ್ತು ಸಂಗ್ರಹವಾದ ಹಣವನ್ನು ಸ್ವೀಕರಿಸುವ ಆರೋಪಿತನಾಗಿರುವ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಗಣಪತಿ ಆರ್. ಶೇರುಗಾರ, ಎ.ಎಸ್.ಐ, ಸಿದ್ದಾಪುರ ಪೊಲೀಸ್ ಠಾಣೆ ರವರು ದಿನಾಂಕ: 19-08-2021 ರಂದು 12-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 19-08-2021

at 00:00 hrs to 24:00 hrs

 

ಶಿರಸಿ ಹೊಸಮಾರುಕಟ್ಟೆ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 11/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಶಂಕ್ರಪ್ಪ ತಂದೆ ಯಲ್ಲಪ್ಪಾ ನಾಗೋಜಿ, ಪ್ರಾಯ-67 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಅರೆಕೊಪ್ಪ, ಅಂಗನವಾಡಿ ಹತ್ತಿರ, ತಾ: ಶಿರಸಿ. ಪಿರ್ಯಾದಿಯವರ ತಂದೆಯವರಾದ ಇವರು ಕಳೆದ 03 ವರ್ಷಗಳಿಂದ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದವರಿಗೆ ಶಿವಮೊಗ್ಗದ ಶ್ರೀಧರ ನರ್ಸಿಂಗ್ ಹೋಮ್ ನಲ್ಲಿ ಚಿಕಿತ್ಸೆ ಕೊಡಿಸಿ ಔಷಧೋಪಚಾರ ಪಡೆಯುತ್ತಿದ್ದವನಿಗೆ ಕಳೆದ 4 ತಿಂಗಳ ಹಿಂದೆ ತಲೆಯ ಒಳಗೆ ರಕ್ತ ಹೆಪ್ಪುಗಟ್ಟಿದ್ದರಿಂದ ಮಂಗಳೂರಿನ ಕೆ.ಎಸ್ ಹೆಗಡೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಔಷಧೋಪಚಾರ ಪಡೆಯುತ್ತಿದ್ದವನು, ತನಗಿರುವ ಖಾಯಿಲೆಯ ಬಗ್ಗೆ ಮನಸ್ಸಿಗೆ ಹಚ್ಚಿಕೊಂಡು ವಿಪರೀತ ಮದ್ಯ ಸೇವನೆ ಮಾಡುತಿದ್ದವನು, ದಿನಾಂಕ: 18-08-2021 ರಂದು ಬೆಳಿಗ್ಗೆ 08-00 ಗಂಟೆಯಿಂದ ದಿನಾಂಕ: 19-08-2021 ರಂದು 10-00 ಗಂಟೆಯ ನಡುವಿನ ಅವಧಿಯಲ್ಲಿ ಶಿರಸಿ ನಗರದ ಕೋಟೆಕೆರೆಗೆ ಯಾವುದೋ ಕೆಲಸಕ್ಕೆ ಹೋದವರು, ಮದ್ಯದ ಅಮಲಿನಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಕೋಟೆಕೆರೆಯ ನೀರಿನಲ್ಲಿ ಬಿದ್ದು ಮೃತಪಟ್ಟಿದ್ದು, ಇದರ ಹೊರತು ತನ್ನ ತಂದೆಯ ಮರಣದಲ್ಲಿ ಬೇರೆ ಯಾವುದೇ ಸಂಶಯ ಇರುವುದಿಲ್ಲ. ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಯಲ್ಲಪ್ಪ ತಂದೆ ಶಂಕ್ರಪ್ಪ ನಾಗೋಜಿ, ಪ್ರಾಯ-33 ವರ್ಷ, ವೃತ್ತಿ-ಮೆಕ್ಯಾನಿಕಲ್ (ಗ್ಯಾರೇಜ್ ವರ್ಕ್ಸ್), ಸಾ|| ಅರೆಕೊಪ್ಪ, ಅಂಗನವಾಡಿ ಹತ್ತಿರ, ತಾ: ಶಿರಸಿ ರವರು ದಿನಾಂಕ: 19-08-2021 ರಂದು 10-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

ಇತ್ತೀಚಿನ ನವೀಕರಣ​ : 20-08-2021 01:31 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080