ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 19-12-2021

at 00:00 hrs to 24:00 hrs

 

ಸಂಚಾರ ಪೊಲೀಸ್ ಠಾಣೆ ಕಾರವಾರ

ಅಪರಾಧ ಸಂಖ್ಯೆಃ 30/2021, ಕಲಂ: 279, 337, 338 ಐಪಿಸಿ ಮತ್ತು ಕಲಂ: 134(ಎ&ಬಿ), 187 ಎಮ್.ವಿ ಎಕ್ಟ್ ನೇದ್ದರ ವಿವರ...... ನಮೂದಿತ ಆರೋಪಿತನು ಯಾವುದೋ ಅಪರಿಚಿತ ಪ್ಯಾಸೆಂಜರ್ ಆಟೋ ರಿಕ್ಷಾದ ಚಾಲಕನಾಗಿದ್ದು, ಆಟೋ ರಿಕ್ಷಾ ನಂಬರ್ ಹಾಗೂ ಚಾಲಕನ ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ದಿನಾಂಕ: 18-12-2021 ರಂದು ರಾತ್ರಿ 21-00 ಗಂಟೆಯಿಂದ 21-15 ಗಂಟೆಯ ಅವಧಿಯಲ್ಲಿ ಪಿರ್ಯಾದಿಯ ಭಾವನವರಾದ ನಾಗರಾಜ ತಂದೆ ವೈಕುಂಠ ನಾಯ್ಕ, ಈತನು ತನ್ನ ಮೋಟಾರ್ ಸೈಕಲ್ ನಂ: ಕೆ.ಎ-30/ಎಸ್-2010 ನೇದರ ಹಿಂದಿನ ಸೀಟಿನಲ್ಲಿ ತನ್ನ ಮಗಳನ್ನು ಕೂರಿಸಿಕೊಂಡು ಕಾರವಾರ ಕಡೆಯಿಂದ ನಂದನಗದ್ದಾ ಕಡೆಗೆ ರಸ್ತೆಯ ಎಡಬದಿಯಲ್ಲಿ ತನ್ನ ಮೋಟಾರ್ ಸೈಕಲನ್ನು ಚಲಾಯಿಸಿಕೊಂಡು ಹೋಗುತ್ತಿರುವಾಗ ಕಾರವಾರ-ಸುಂಕೇರಿ ರಸ್ತೆಯ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದ ಹತ್ತಿರ ತನ್ನ ಮೋಟಾರ್ ಸೈಕಲಿನ ಹಿಂದಿನಿಂದ ಬಂದಂತಹ ಯಾವುದೋ ಅಪರಿಚಿತ ಪ್ಯಾಸೆಂಜರ್ ಆಟೋ ರಿಕ್ಷಾದ ಆರೋಪಿ ಚಾಲಕನು ತನ್ನ ಆಟೋ ರಿಕ್ಷಾವನ್ನು ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿಯ ಭಾವನವರಾದ ನಾಗರಾಜ ತಂದೆ ವೈಕುಂಠ ನಾಯ್ಕ ಈತನ ಮೋಟಾರ್ ಸೈಕಲಿನ ಮುಂದಿನ ಬಲಬದಿಯ ಹ್ಯಾಂಡಲ್ ಗೆ ತನ್ನ ಆಟೋ ರಿಕ್ಷಾದ ಮುಂದಿನ ಎಡಬದಿಯಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಮೋಟಾರ್ ಸೈಕಲ್ ಸಮೇತ ರಸ್ತೆಯ ಮೇಲೆ ಬೀಳುವಂತೆ ಮಾಡಿ, ನಾಗರಾಜ ತಂದೆ ವೈಕುಂಠ ನಾಯ್ಕ ಈತನಿಗೆ ತಲೆಯ ಎಡಭಾಗದಲ್ಲಿ ಭಾರೀ ಗಾಯ ಹಾಗೂ ಬಲಗೈ ಮತ್ತು ಎಡಗೈ ಮುಷ್ಠಿಯ ಹತ್ತಿರ ತೆರಚಿದ ಗಾಯ, ಬಲಹುಬ್ಬಿನ ಹತ್ತಿರ ತೆರಚಿದ ಗಾಯ ಹಾಗೂ ಮೋಟಾರ್ ಸೈಕಲಿನ ಹಿಂಬದಿ ಸವಾರಳಾದ ಕು: ದಿಯಾ ತಂದೆ ನಾಗರಾಜ ನಾಯ್ಕ ಇವಳಿಗೆ ಬಲಗಾಲಿನ ಮಂಡಿಯ ಹತ್ತಿರ ತೆರಚಿದ ಗಾಯ ಪಡಿಸಿ, ಗಾಯಾಳುಗಳನ್ನು ಉಪಚರಿಸದೇ ವಾಹನವನ್ನು ಸ್ಥಳದಲ್ಲಿ ನಿಲ್ಲಿಸದೇ ಹಾಗೂ ಅಪಘಾತ ಪಡಿಸಿದ ಬಗ್ಗೆ ಪೊಲೀಸ್ ಠಾಣೆಗೆ ಮಾಹಿತಿ ತಿಳಿಸದೇ ಆರೋಪಿ ಚಾಲಕನು ತನ್ನ ಪ್ಯಾಸೆಂಜರ್ ಆಟೋ ರಿಕ್ಷಾವನ್ನು ಚಲಾಯಿಸಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀ ಸೋಮೇಶ ತಂದೆ ವೈಕುಂಠ ನಾಯ್ಕ, ಪ್ರಾಯ-36 ವರ್ಷ, ವೃತ್ತಿ-ಇಲೆಕ್ಟ್ರೀಶಿಯನ್, ಸಾ|| ತೇಲಂಗ ರೋಡ್, ನಂದನಗದ್ದಾ, ಕಾರವಾರ ರವರು ದಿನಾಂಕ: 19-12-2021 ರಂದು 01-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಸಂಚಾರ ಪೊಲೀಸ್ ಠಾಣೆ ಕಾರವಾರ

ಅಪರಾಧ ಸಂಖ್ಯೆಃ 31/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಭರಮಾ ತಂದೆ ರಾಮಾ ಇರಗಾರ, ಪ್ರಾಯ-27 ವರ್ಷ, ವೃತ್ತಿ-ಚಾಲಕ, ಸಾ|| ವಾರಿ ಮಾಸ್ತಿಹೊಳಿ, ಪೋ: ನರಸಿಂಗಪುರ, ತಾ: ಹುಕ್ಕೇರಿ, ಜಿ: ಬೆಳಗಾವಿ (ಲಾರಿ ನಂ: ಕೆ.ಎ-22/ಸಿ-6476 ನೇದರ ಚಾಲಕ). ಈತನು ಪಿರ್ಯಾದಿಯ ಪರಿಚಯದವನಾಗಿದ್ದು, ದಿನಾಂಕ: 19-12-2021 ರಂದು ಸಾಯಂಕಾಲ 16-20 ಗಂಟೆಯಿಂದ 16-30 ಗಂಟೆಯ ಅವಧಿಯಲ್ಲಿ ತನ್ನ ಬಾಬ್ತು ಲಾರಿ ನಂ: ಕೆ.ಎ-22/ಸಿ-6476 ನೇದನ್ನು ಪಣಜಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ರಸ್ತೆಯಲ್ಲಿ ಕಾರವಾರ ಕಡೆಯಿಂದ ಅಂಕೋಲಾ ಕಡೆಗೆ ತನ್ನ ಲಾರಿಯನ್ನು ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಹೋದವನು, ಕಾರವಾರದ ಬಿಣಗಾ ಘಟ್ಟದ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಹತ್ತಿರ ತನ್ನ ಲಾರಿಯ ವೇಗವನ್ನು ನಿಯಂತ್ರಿಸಲಾಗದೇ ತನ್ನ ಲಾರಿಯನ್ನು ರಸ್ತೆಯ ಎಡಬದಿಯಲ್ಲಿ ಪಲ್ಟಿ ಕೆಡವಿ ಅಪಘಾತ ಪಡಿಸಿಕೊಂಡು, ತನಗೆ ತಲೆಯ ಎಡಭಾಗದಲ್ಲಿ ರಕ್ತಗಾಯ ಹಾಗೂ ಒಳನೋವು, ಎಡಗಣ್ಣಿನ ಹುಬ್ಬಿನ ಹತ್ತಿರ ತೆರಚಿದ ಗಾಯ ಹಾಗೂ ಎಡ ಕಿವಿಯ ಮೇಲೆ ತೆರಚಿದ ಗಾಯ ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ಚೇತನ ತಂದೆ ಶಿವಾನಂದ ಮಾಳ್ಸೇಕರ, ಪ್ರಾಯ-34 ವರ್ಷ, ವೃತ್ತಿ-ಖಾಸಗಿ ಕೆಲಸ, ಸಾ|| ನಂದನಗದ್ದಾ, ಕಾರವಾರ ರವರು ದಿನಾಂಕ: 19-12-2021 ರಂದು 18-35 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕಾರವಾರ ಶಹರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 106/2021, ಕಲಂ: 341, 323, 324, 35, 504 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಮಂಜುನಾಥ ತಂದೆ ಪಾಂಡುರಂಗ ರೇವಣಕರ್, 2]. ದೀಪಾ ಪಾಂಡುರಂಗ ರೇವಣಕರ್, 3]. ಪಾಂಡುರಂಗ ರೇವಣಕರ್, ಸಾ|| (ಎಲ್ಲರೂ) ಗೌರಿಶಂಕರ ದೇವಸ್ಥಾನದ ಹತ್ತಿರ, ಹಬ್ಬುವಾಡಾ, ಕಾರವಾರ. ಈ ನಮೂದಿತ ಆರೋಪಿತರ ಹಾಗೂ ಪಿರ್ಯಾದಿಯವರ ಮಧ್ಯ ದಾರಿಯ ವಿಷಯದಲ್ಲಿ ಮಾನ್ಯ ಉಚ್ಛ ನ್ಯಾಯಾಲಯದಲ್ಲಿ ಸಿವಿಲ್ ವ್ಯಾಜ್ಯ ನಡೆಯುತ್ತಿರುತ್ತದೆ. ದಿನಾಂಕ: 19-12-2021 ರಂದು ಹಬ್ಬುವಾಡಾದ ಗೌರಿಶಂಕರ ಹಾಲ್ ನಲ್ಲಿ ಮದುವೆ ಇದ್ದುದರಿಂದ ಪಿರ್ಯಾದಿಯವರು ಕಾರವಾರದಿಂದ ಸಾಮಾನುಗಳನ್ನು ಆಟೋ ರಿಕ್ಷಾದಲ್ಲಿ ತೆಗೆದುಕೊಂಡು ಹೋಗಿ ಹಾಲ್ ನಲ್ಲಿ ಖಾಲಿ ಮಾಡಿ ಮರಳಿ ಬರುತ್ತಿರುವಾಗ ನಮೂದಿತ ಆರೋಪಿತರು ಆಟೋ ರಿಕ್ಷಾ ಮುಂದೆ ಹೋಗದಂತೆ ಮೋಟಾರ್ ಸೈಕಲ್ ಮತ್ತು ಸೈಕಲ್‍ಗಳನ್ನು ದಾರಿಯಲ್ಲಿಟ್ಟು ರಸ್ತೆ ಅಡ್ಡಗಟ್ಟಿದ್ದು, ‘ರಸ್ತೆ ಖುಲ್ಲಾ ಪಡಿಸಿ’ ಅಂತಾ ಪಿರ್ಯಾದಿ ಹಾಗೂ ಆಟೋ ರಿಕ್ಷಾ ಚಾಲಕ ಕೇಳಿದ್ದಕ್ಕೆ ನಮೂದಿತ ಆರೋಪಿತರ ಪೈಕಿ ಆರೋಪಿ 1 ನೇಯವನು ಪಿರ್ಯಾದಿಗೆ ಕೈಯಿಂದ ಮುಖದ ಮೇಲೆ ಹೊಡೆದು, ಕಾಲಿನಿಂದ ಗುಪ್ತಾಂಗದ ಮೇಲೆ ಹೊಡೆದು ನೋವು ಪಡಿಸಿದ್ದು, ಆರೋಪಿ 2 ನೇಯವಳು ಕಾಲಿಗೆ ಹಾಕಿದ ಸಿಪ್ಪರ್ ಮತ್ತು ಕಲ್ಲಿನಿಂದ ಪಿರ್ಯಾದಿಯ ಮೈ ಮೇಲೆ ಹೊಡೆದು ದುಃಖಾಪತ್ ಪಡಿಸಿದ್ದು, ಆ ಸಮಯದಲ್ಲಿ ಅಲ್ಲಿಯೇ ಇದ್ದ ಆರೋಪಿ 3 ನೇಯವನು ಅವಾಚ್ಯ ಶಬ್ದಗಳಿಂದ ಪಿರ್ಯಾದಿಗೆ ಬೈಯ್ದಿರುತ್ತಾನೆ, ಈ ಕುರಿತು ಆರೋಪಿತರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಸುಬೋಧ ತಂದೆ ಗಣಪತಿ ಹಬ್ಬು, ಪ್ರಾಯ-59 ವರ್ಷ, ವೃತ್ತಿ-ಅರ್ಚಕ/ವ್ಯವಸ್ಥಾಪಕ, ಸಾ|| ಗೌರಿಶಂಕರ ದೇವಸ್ಥಾನದ ಹತ್ತಿರ, ಹಬ್ಬುವಾಡಾ, ಕಾರವಾರ ರವರು ದಿನಾಂಕ: 19-12-2021 ರಂದು 12-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮಂಕಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 150/2021, ಕಲಂ: 279, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ವೆಂಕಟೇಶ  ತಂದೆ ಸುಕ್ರು ಗೌಡ, ಸಾ|| ಹನೇಹಳ್ಳಿ, ಗೋಕರ್ಣ, ತಾ: ಕುಮಟಾ (ಅಶೋಕ ಲೈಲ್ಯಾಂಡ್ ವಾಹನ ನಂ:  ಕೆ.ಎ-47/7964 ನೇದರ ಚಾಲಕ). ಈತನು ದಿನಾಂಕ: 18-12-2021 ರಂದು 16-30 ಗಂಟೆಗೆ ತನ್ನ ಅಶೋಕ ಲೈಲ್ಯಾಂಡ್ ವಾಹನ ನಂ: ಕೆ.ಎ-47-7964 ನೇದನ್ನು ಭಟ್ಕಳ ಕಡೆಯಿಂದ ಹೊನ್ನಾವರ ಕಡೆಗೆ ಹೋಗಲು ಅತೀವೇಗವಾಗಿ ಮತ್ತು ಅಜಾಗರೂಕತೆಯಿಂದ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ರಸ್ತೆಯಲ್ಲಿ ಚಲಾಯಿಸಿಕೊಂಡು ಮಂಕಿ ಅರೆಗೆ ಬಂದವನು, ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ರಸ್ತೆಯ ಬದಿಯಲ್ಲಿ ನಿಂತು ಅಂಗಡಿಗೆ ಹೋದ ಪಿರ್ಯಾದಿಗೆ ಹಾಗೂ ತನ್ನ ಮಗಳಿಗೆ ಕಾಯುತ್ತಾ ನಿಂತ ಶ್ರೀಮತಿ ಮೇರಿ ಕೋಂ. ಲಾರೆನ್ಸ್ ಪಿಂಟೋ, ಸಾ|| ಜನತಾ ಕಾಲೋನಿ, ಮಂಕಿ, ತಾ: ಹೊನ್ನಾವರ ಇವರಿಗೆ ಡಿಕ್ಕಿ ಹೊಡೆದು ರಸ್ತೆಯ ಬದಿಯಲ್ಲಿ ಬೀಳಿಸಿ, ಅವಳ ಎರಡು ಕೈಗಳಿಗೆ ಭಾರೀ ಗಾಯನೋವು ಪಡಿಸಿದ್ದಲ್ಲದೇ, ತಲೆಗೆ ಒಳನೋವು ಮತ್ತು ಮೈಕೈಗೆ ಸಣ್ಣಪುಟ್ಟ ಗಾಯನೋವು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಡೊಮಿನಿಕ್ ತಂದೆ ಅಗಸ್ತಿನೋ ಸ್ಟಿಬೆರೋ, ಪ್ರಾಯ-61 ವರ್ಷ, ವೃತ್ತಿ-ಮಾಜಿ ಸೈನಿಕ, ಸಾ|| ಜನತಾ ಕಾಲೋನಿ, ಮಂಕಿ, ತಾ: ಹೊನ್ನಾವರ ರವರು ದಿನಾಂಕ: 19-12-2021 ರಂದು 13-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 124/2021, ಕಲಂ: 279, 337, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಚನ್ನಯ್ಯಾ ತಂದೆ ಜೋನ ಭಂಡಿ, ಪ್ರಾಯ-48 ವರ್ಷ, ಸಾ|| ಆಶ್ರಯ ಕಾಲೋನಿ, ಗಾಂಧಿನಗರ, ತಾ: ದಾಂಡೇಲಿ (ಕಾರ್ ನಂ: ಕೆ.ಎ-31/7469 ನೇದರ ಚಾಲಕ), 2]. ರಹೀಂಖಾನ್ @ ತೌಶೀಫ್ ತಂದೆ ಬಹದ್ದೂರಖಾನ್ ಲೋಧಿ, ಪ್ರಾಯ-24 ವರ್ಷ, ಸಾ|| ಆನಂದನಗರ, ಹುಬ್ಬಳ್ಳಿ (ಆಟೋ ರಿಕ್ಷಾ ನಂ: ಕೆ.ಎ-25/ಎ.ಎ-1508 ನೇದರ ಚಾಲಕ). ದಿನಾಂಕ: 19-12-2021 ರಂದು 18-30 ಗಂಟೆಗೆ ದಾಂಡೇಲಿ ತಾಲೂಕಿನ ಕರ್ಕಾ ಚೆಕ್ ಪೋಸ್ಟ್ ನಿಂದ ಆಲೂರು ಕಡೆಗೆ ಸುಮಾರು 2 ಕಿ.ಮೀ ದೂರದಲ್ಲಿ ರಾಜ್ಯ ಹೆದ್ದಾರಿಯ ಮೇಲೆ ಆರೋಪಿ 1 ನೇಯವನು ತನ್ನ ಕಾರ್ ನಂ: ಕೆ.ಎ-31/7469 ನೇದನ್ನು ಕರ್ಕಾ ಕಡೆಯಿಂದ ದಾಂಡೇಲಿ ಕಡೆಗೆ ಹಾಗೂ ಆರೋಪಿ 2 ನೇಯವನು ತನ್ನ ಆಟೋ ರಿಕ್ಷಾ ನಂ: ಕೆ.ಎ-25/ಎ.-1508 ನೇದನ್ನು ದಾಂಡೇಲಿ ಕಡೆಯಿಂದ ಕರ್ಕಾ ಕಡೆಗೆ ಹೋಗಲು, ಹೀಗೇ ಇಬ್ಬರು ತಮ್ಮ ವಾಹನಗಳನ್ನು ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಹೋಗಿ ಮುಖಾಮುಖಿಯಾಗಿ ಡಿಕ್ಕಿ ಹೊಡೆದುಕೊಂಡು, ಡಿಕ್ಕಿ ಹೊಡೆದ ಪರಿಣಾಮ ಕಾರ್ ನಂ: ಕೆ.ಎ-31/7469 ನೇದರ ಮೇಲಿನ ಆರೋಪಿ 1 ನೇಯವನ ನಿಯಂತ್ರಣ ತಪ್ಪಿ ರಾಜ್ಯ ಹೆದ್ದಾರಿಯ ಪಕ್ಕದ ಮರಕ್ಕೆ ಡಿಕ್ಕಿ ಹೊಡೆದಿದ್ದು, ಈ ಅಪಘಾತದಿಂದ ಕಾರಿನಲ್ಲಿದ್ದ ಆರೋಪಿ 1 ನೇಯವನಿಗೆ ಬಲಗೈ ಮುಂಗೈ ಹತ್ತಿರ ಫ್ರ್ಯಾಕ್ಚರ್ ಆಗಿದ್ದು, ಮಹಾದೇವ ತಂದೆ ಈರಣ್ಣಾ ಜಮಾದಾರ ಈತನಿಗೆ ಮತ್ತು ಆಟೋ ರಿಕ್ಷಾ ನಂ: ಕೆ.ಎ-25/ಎ.ಎ-1508 ನೇದರ ಚಾಲಕನಾದ ಆರೋಪಿ 2 ನೇಯವನಿಗೆ, ಪ್ರಯಾಣಿಕರಾದ ಮೊಹ್ಮದ್ ಅಜೀಮ್ ತಂದೆ ರಿಯಾಜ್ ಅಹ್ಮದ್, ತನ್ವಿರ್ ತಂದೆ ಶಂಸುದ್ದೀನ್ ಧರುಬಾಯಿ, ಮೊಹ್ಮದ್ ಗೌಸ್ ತಂದೆ ಇಕ್ಬಾಲ್ ಶೇಖ್ ಇವರಿಗೆ ಸಾದಾ ಸ್ವರೂಪದ ಗಾಯನೋವಾದ ಬಗ್ಗೆ ಪಿರ್ಯಾದಿ ಶ್ರೀ ಮುಕ್ತುಂ ಮೊಹಿದ್ದೀನ್ ತಂದೆ ಮೊಹ್ಮದ್ ಆದಮ್, ಪ್ರಾಯ-52 ವರ್ಷ, ವೃತ್ತಿ-ವ್ಯವಹಾರ, ಸಾ|| ವಿಜಯನಗರ, ತಾ: ದಾಂಡೇಲಿ ರವರು ದಿನಾಂಕ: 19-12-2021 ರಂದು 22-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 19-12-2021

at 00:00 hrs to 24:00 hrs

 

ಮಂಕಿ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 10/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಕುಮಾರ: ಲೋಚನ ತಂದೆ ಸತೀಶ ನಾಯ್ಕ, ಪ್ರಾಯ-3 1/2 ವರ್ಷ, ಸಾ|| ಡಿಪೋ, ಬೆರಂಕಿ, ತಾ: ಹೊನ್ನಾವರ. ಈತನು ದಿನಾಂಕ: 19-12-2021 ರಂದು ಮಧ್ಯಾಹ್ನ 13-00 ಗಂಟೆಯ ಸುಮಾರಿಗೆ ತನ್ನ ಮನೆ ಹತ್ತಿರ ಆಟವಾಡುತ್ತಾ ಇದ್ದವನು, ಮಧ್ಯಾಹ್ನ 16-15 ಗಂಟೆಯ ನಡುವಿನ ಅವಧಿಯಲ್ಲಿ ಆಟವಾಡುತ್ತಾ ಮನೆ ಸಮೀಪದಲ್ಲಿರುವ ದೋಣಿಗಳು ನಿಲ್ಲಿಸುವ ಶರಾವತಿ ನದಿ ದಡದ ಹತ್ತಿರ ಹೋಗಿ ನದಿ ದಡದಲ್ಲಿ ಆಟವಾಡುತ್ತಿದ್ದಾಗ ಆಕಸ್ಮಾತ್ ಕಾಲು ಜಾರಿ ನದಿ ನೀರಿನಲ್ಲಿ ಬಿದ್ದು ಮುಳುಗಿದವನು, ನೀರಿನಿಂದ ಮೇಲೆ ಬರಲಾಗದೇ ಮುಳುಗಿ ಮೃತಪಟ್ಟ ಬಗ್ಗೆ ಪಿರ್ಯಾದಿ ಶ್ರೀ ಮಾರುತಿ ತಂದೆ ನಾರಾಯಣ ನಾಯ್ಕ, ಪ್ರಾಯ-34 ವರ್ಷ, ವೃತ್ತಿ-ಪಾಸ್ಟಪುಡ್ ಅಂಗಡಿ, ಸಾ|| ಬಳಕೂರ, ಕೆಳಗಿನಕೇರಿ, ತಾ: ಹೊನ್ನಾವರ ರವರು ದಿನಾಂಕ: 19-12-2021 ರಂದು 17-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಮುಂಡಗೋಡ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 40/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತಳಾದ ಕುಮಾರಿ: ಮೇಘಾ ತಂದೆ ದತ್ತು ಗಾವಡೆ, ಪ್ರಾಯ-19 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಮೈನಳ್ಳಿ, ತಾ: ಮುಂಡಗೋಡ. ಪಿರ್ಯಾದಿಯ ತಂಗಿಯಾದ ಇವಳಿಗೆ ಎದೆನೋವು ಕಾಣಿಸಿಕೊಂಡು ಅಸ್ವಸ್ಥಳಾದವಳಿಗೆ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಿಸದೇ ದಿನಾಂಕ: 19-12-2021 ರಂದು ರಾತ್ರಿ 04-30 ಗಂಟೆಗೆ ಮೃತಪಟ್ಟಿರುತ್ತಾಳೆ. ಇದರ ಹೊರತು ತನ್ನ ತಂಗಿಯ ಮರಣದಲ್ಲಿ ಬೇರೇ ಯಾವುದೇ ಸಂಶಯ ಇರುವುದಿಲ್ಲ. ಮೃತದೇಹವು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ಶವಾಗಾರದಲ್ಲಿ ಇದ್ದು, ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಸಂದೀಪ ತಂದೆ ದತ್ತು ಗಾವಡೆ, ಪ್ರಾಯ-23 ವರ್ಷ, ವೃತ್ತಿ-ಇಲೆಕ್ಟ್ರಿಕಲ್ ಕೆಲಸ, ಸಾ|| ಮೈನಳ್ಳಿ, ತಾ: ಮುಂಡಗೋಡ ರವರು ದಿನಾಂಕ: 19-12-2021 ರಂದು 10-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

 

ಇತ್ತೀಚಿನ ನವೀಕರಣ​ : 25-12-2021 09:29 AM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080