ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 19-02-2021

at 00:00 hrs to 24:00 hrs

 

ದಾಂಡೇಲಿ ನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 21/2021, ಕಲಂ: 427, 504, 506 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಸಚೀನ್ ಚಲವಾದಿ, 2]. ಭಾರತಿ ಭಗವಂತ ಕಾಳೆ, 3]. ವಸಂತ ಚಲವಾದಿ, 4]. ಎಮ್. ಎನ್. ಚಲವಾದಿ, ಸಾ|| (ಎಲ್ಲರೂ) ವನಶ್ರೀ ನಗರ, ದಾಂಡೇಲಿ. ಈ ನಮೂದಿತ ಆರೋಪಿತರು ಕೂಡಿಕೊಂಡು ದಿನಾಂಕ: 18-02-2021 ರಂದು ಬೆಳಿಗ್ಗೆ 09-00 ಗಂಟೆಗೆ ದಾಂಡೇಲಿಯ ಪಟ್ಟಣದ ವನಶ್ರೀ ನಗರದಲ್ಲಿರುವ ಪಿರ್ಯಾದುದಾರರ ತಮ್ಮನ ಬಾಬ್ತು ಪ್ಲಾಟ್ ನಂ: 101 ರಲ್ಲಿ ಪಿರ್ಯಾದುದಾರರು ಜಾಗೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದು, ಸದ್ರಿ ಜಾಗೆಯಲ್ಲಿ ಸಿಮೆಂಟಿನ್ ಬ್ಲಾಕ್ ಗಳಿಂದ ನಿರ್ಮಿತವಾದ ಶೀಟಿನ ಮೇಲ್ಛಾವಣಿ ಇರುವ ಒಂದು ಶೆಡ್ ಇದ್ದು, ನಮೂದಿತ ಆರೋಪಿತರೆಲ್ಲರೂ ಕೂಡಿಕೊಂಡು ಏಕಾಏಕಿ ಬಂದು ಪಿಕಾಸಿಗಳಿಂದ ಮನೆಯ ಗೋಡೆಗಳನ್ನು ಕೆಡವಲು ಪ್ರಾರಂಭಿಸಿದಾಗ, ಪಿರ್ಯಾದುದಾರರು ಅದನ್ನು ತಡೆಯಲು ಹೋದಾಗ ಆರೋಪಿತರೆಲ್ಲರೂ ಪಿರ್ಯಾದಿಯನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈಯ್ದು, ಜೀವದ ಬೆದರಿಕೆ ಹಾಕಿದ್ದಲ್ಲದೇ, ಸಿಮೆಂಟಿನ ಗೋಡೆಗಳನ್ನು ಕೆಡವಿ ಲುಕ್ಸಾನ್ ಪಡಿಸಿರುತ್ತಾರೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ವಿ. ವಿ. ಅರ್ಜುನ್ ತಂದೆ ಬಾಲನ್, ಸಾ|| ವನಶ್ರೀ ನಗರ, ದಾಂಡೇಲಿ ರವರು ದಿನಾಂಕ: 19-02-2021 ರಂದು 18-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಮುಂಡಗೋಡ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 31/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಪ್ರಶಾಂತ ತಂದೆ ಸುಬ್ಬಾ ಮಡಿವಾಳ, ಸಾ|| ಮಂಜುಗುಣಿ, ತಾ: ಶಿರಸಿ (ಇಕೋ ಕಾರ್ ನಂ: ಕೆ.ಎ-31/ಎನ್-2580 ನೇದರ ಚಾಲಕ), 2]. ಮಂಜುನಾಥ ತಂದೆ ಭೀಮಪ್ಪ ಬಾಡರ, ಸಾ|| ತಾವರಗೇರಿ, ತಾ: ಮುಂಡಗೋಡ (ನೋಂದಣಿ ಸಂಖ್ಯೆ ಇಲ್ಲದೇ ಇರುವ ಟ್ರಾಕ್ಟರ್ ಚಾಲಕ). ಈ ನಮೂದಿತ ಆರೋಪಿತರಲ್ಲಿ ಆರೋಪಿ 1 ನೇಯವನು ತನ್ನ ಇಕೋ ಕಾರ್ ನಂ: ಕೆ.ಎ-21/ಎನ್-2580 ನೇದನ್ನು ಹಾಗೂ ನೋಂದಣಿ ಸಂಖ್ಯೆ ಇಲ್ಲದೇ ಇರುವ ಟ್ರಾಕ್ಟರ್ ಚಾಲಕನಾದ ಆರೋಪಿ 2 ನೇಯವನು ದಿನಾಂಕ: 17-02-2021 ರಂದು ರಾತ್ರಿ 10-30 ಗಂಟೆಗೆ ಮುಂಡಗೋಡ-ಶಿರಸಿ ರಸ್ತೆಯ ಸಾಲಗಾಂವ ಹತ್ತಿರ ತಮ್ಮ ತಮ್ಮ ವಾಹನಗಳನ್ನು ಅತೀವೇಗವಾಗಿ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿ ಡಾಂಬರ್ ರಸ್ತೆಯ ಮಧ್ಯದಲ್ಲಿ ಪರಸ್ಪರ ಒಬ್ಬರಿಗೊಬ್ಬರು ಢಿಕ್ಕಿ ಹೊಡೆದು ಅಪಘಾತ ಪಡಿಸಿಕೊಂಡು, ಕಾರಿನಲ್ಲಿದ್ದ ಶ್ರೀಮತಿ ಲಲಿತಾ ಶೇಟ್ ಇವರಿಗೆ ಗಾಯನೋವು ಪಡಿಸಿದ್ದಲ್ಲದೇ, ಸ್ವಯಂಕೃತ ಅಪಘಾತದಿಂದ ತಮಗೂ ಸಹ ಗಾಯನೋವು ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ಧೀರಜ ತಂದೆ ಸುಬ್ರಾಯ ನಾಯ್ಕ, ಪ್ರಾಯ-19 ವರ್ಷ, ವೃತ್ತಿ-ವಿದ್ಯಾರ್ಥಿ. ಸಾ|| ಹೊಸಪೇಟೆ, ಮಂಜುಗುಣಿ, ತಾ: ಶಿರಸಿ ರವರು ದಿನಾಂಕ: 19-02-2021 ರಂದು 12-10 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಹಳಿಯಾಳ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 47/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಶಿವಾಜಿ ತಂದೆ ಶಂಕರ ಚೌವ್ಹಾಣ, ಪ್ರಾಯ-28 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಜೋಡಹಿಂಗಣಿ, ದಾರೂರ, ಬೀಡ, ಮಹಾರಾಷ್ಟ್ರ (ಮೋಟಾರ್ ಸೈಕಲ್ ನಂ: ಎಮ್‍ಎಚ್-12/ಜಿ.ಎಲ್-472 ನೇದರ ಸವಾರ). ನಮೂದಿತ ಆರೋಪಿತನು ದಿನಾಂಕ: 19-02-2021 ರಂದು ತನ್ನ ಮೋಟಾರ್ ಸೈಕಲ್ ನಂ: ಎಮ್‍ಎಚ್-12/ಜಿ.ಎಲ್-472 ನೇದನ್ನು ಕಲಘಟಗಿ ಬದಿಯಿಂದ ಹಳಿಯಾಳ ಬದಿಗೆ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಮೋಟಾರ್ ಸೈಕಲನ್ನು ತನ್ನ ನಿಯಂತ್ರಣದಲ್ಲಿಟ್ಟುಕೊಳ್ಳದೇ, ಕಲಘಟಗಿ ಬದಿಯಿಂದ ಹಳಿಯಾಳ ಬದಿಗೆ ಹೋಗುತ್ತಿದ್ದ ಟ್ರ್ಯಾಕ್ಟರ್ ನಂ: ಕೆ.ಎ-65/ಟಿ-0874 ನೇದರ ಟ್ಯಾಂಕರಿಗೆ ಜೋಗನಕೊಪ್ಪ ಕ್ರಾಸ್ ಹತ್ತಿರ ಬೆಳಿಗ್ಗೆ 10-15 ಗಂಟೆಯ ಸುಮಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿದ ಪರಿಣಾಮ ಆರೋಪಿತನಿಗೆ ಹಣೆಯ ಎಡಬದಿಗೆ ಮತ್ತು ಆತನ ಮೋಟಾರ್ ಸೈಕಲ್ ಹಿಂಬದಿಯ ಸವಾರ ಗಣೇಶ ತಂದೆ ಮಾದು ಉಮ್ಮಪ್ಪ, ಈತನಿಗೆ ಹಣೆಯ ಬಲಭಾಗಕ್ಕೆ ಮತ್ತು ಮೂಗಿಗೆ ಗಾಯನೋವಾಗಿರುತ್ತದೆ. ಟ್ರ್ಯಾಕ್ಟರಿನ ಟ್ಯಾಂಕರಿಗೆ ನೋಂದಣಿ ಸಂಖ್ಯೆ ಇರುವುದಿಲ್ಲ ಎಂಬ ಬಗ್ಗೆ ಪಿರ್ಯಾದಿ ಶ್ರೀ ರಫೀಕ್ ತಂದೆ ಹಬೀಬಸಾಬ್ ಚೌಕಿದಾರ, ಪ್ರಾಯ-30 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಜೋಗನಕೊಪ್ಪ, ತಾ: ಹಳಿಯಾಳ ರವರು ದಿನಾಂಕ: 19-02-2021 ರಂದು 13-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಬನವಾಸಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 15/2021, ಕಲಂ: 279 304(ಎ) ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಶ್ರವಣಕುಮಾರ ತಂದೆ ಹನುಮಂತಪ್ಪ ಹುಳ್ಳಿ, ಪ್ರಾಯ-21 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ವೀರಾಪುರ, ಮಳಗಿ, ತಾ: ಮುಂಡಗೋಡ (ಮೋಟಾರ್ ಸೈಕಲ್ ನಂ: ಕೆ.ಎ-31/ಇ.ಸಿ-3868 ನೇದರ ಸವಾರ). ನಮೂದಿತ ಆರೋಪಿತನು ದಿನಾಂಕ: 19-02-2021 ರಂದು ಬೆಳಿಗ್ಗೆ 10-30 ಗಂಟೆಗೆ ಮಳಗಿ ಕಡೆಯಿಂದ ಶಿರಸಿ ಕಡೆಗೆ ತನ್ನ ಬಾಬ್ತು ಮೋಟಾರ್ ಸೈಕಲ್ ನಂ: ಕೆ.ಎ-31/ಇ.ಸಿ-3868 ನೇದನ್ನು ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಹುಡೇಲಕೊಪ್ಪ ಹತ್ತಿರ ತನ್ನ ಮೋಟಾರ್ ಸೈಕಲ್ ಮೇಲಿನ ನಿಯಂತ್ರಣ ತಪ್ಪಿ ರಸ್ತೆಯ ಮೇಲೆ ಮೋಟಾರ್ ಸೈಕಲ್ ಸಮೇತ ಬಿದ್ದು ತಲೆಗೆ ಮಾರಣಾಂತಿಕ ಗಾಯನೋವು ಪಡಿಸಿಕೊಂಡು ಮೃತಪಟ್ಟಿದ್ದು ಇರುತ್ತದೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಹನುಮಂತಪ್ಪ ತಂದೆ ಯಲ್ಲಪ್ಪ ಹುಳ್ಳಿ, ಪ್ರಾಯ-50 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ವೀರಾಪುರ, ಮಳಗಿ, ತಾ: ಮುಂಡಗೋಡ ರವರು ದಿನಾಂಕ: 19-02-2021 ರಂದು 13-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಬನವಾಸಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 16/2021, ಕಲಂ: ಹುಡುಗಿ ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಹುಡುಗಿ ಕುಮಾರಿ: ಕಾವ್ಯ ತಂದೆ ಪರಶುರಾಮ ಚನ್ನಯ್ಯ, ಪ್ರಾಯ-20 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಮನೆ ನಂ: 100, ಮೇಲಿನ ಅಂಡಗಿ, ತಾ: ಶಿರಸಿ. ಕಾಣೆಯಾದ ಇವಳು ಪಿರ್ಯಾದಿಯ ಮಗಳಾಗಿದ್ದು, ತನ್ನ ತಂದೆ-ತಾಯಿ, ಅಜ್ಜಿ, ಅಣ್ಣನೊಂದಿಗೆ ಕೂಡಿ ವಾಸವಾಗಿದ್ದು, ಕಳೆದ 4 ವರ್ಷಗಳ ಹಿಂದೆ ಹತ್ತನೆಯ ತರಗತಿಯಲ್ಲಿ ಓದಿ ಅನುತ್ತೀರ್ಣಳಾಗಿ ನಂತರ ಕೂಲಿ ಕೆಲಸ ಮಾಡಿಕೊಂಡಿದ್ದವಳು, ದಿನಾಂಕ: 16-02-2021 ರಂದು 22-00 ಗಂಟೆಯಿಂದ ದಿನಾಂಕ: 17-02-2021 ರಂದು 04-00 ಗಂಟೆಯ ನಡುವಿನ ಅವಧಿಯಲ್ಲಿ ತನ್ನ ವಾಸದ ಮನೆಯಿಂದ ಎಲ್ಲಿಯೋ ಹೋಗಿ ಕಾಣೆಯಾಗಿರುತ್ತಾಳೆ ಎಂಬ ಬಗ್ಗೆ ಪಿರ್ಯಾದಿ ಶ್ರೀಮತಿ ಅಕ್ಕಮ್ಮ ಕೋಂ. ಪರಶುರಾಮ ಚನ್ನಯ್ಯ, ಪ್ರಾಯ-47 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಮನೆ ನಂ: 100, ಮೇಲಿನ ಅಂಡಗಿ, ತಾ: ಶಿರಸಿ ರವರು ದಿನಾಂಕ: 19-02-2021 ರಂದು 20-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 19-02-2021

at 00:00 hrs to 24:00 hrs

 

ಕಾರವಾರ ಗ್ರಾಮೀಣ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 02/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ಮೊಹಮ್ಮದ್ ಯಾಕೂಬ್ ಅನ್ಸಾರಿ ತಂದೆ ಮೊಹಮ್ಮದ್ ಛೋಟು ಅನ್ಸಾರಿ, ಪ್ರಾಯ-63 ವರ್ಷ, ವೃತ್ತಿ-ವೆಲ್ಡರ್, ಸಾ|| ಕರ್ಕಬಾಗ್ ಪೋಸ್ಟ್ ಬವಾ, ಈಸ್ಟ್ ಪಾರಸಿ, ಧನಬಾಗ್, ಜಾರ್ಖಂಡ್, ಹಾಲಿ ಸಾ|| ನವಯುಗ ಇಂಜಿನಿಯರಿಂಗ್ ಕಂಪನಿ ಲಿಮಿಟೆಡ್ ಕಾಲೋನಿ, ತೋಡೂರು, ಕಾರವಾರ. ನಮೂದಿತ ಮೃತನು ನವಯುಗ ಇಂಜಿನಿಯರಿಂಗ್ ಕಂಪನಿ ಲಿಮಿಟೆಡ್ ನಲ್ಲಿ ವೆಲ್ಡರ್ ಅಂತಾ ಕೆಲಸ ಮಾಡಿಕೊಂಡಿದ್ದವನು, ದಿನಾಂಕ: 19-02-2021 ರಂದು ಬೆಳಗಿನ 10-30 ಗಂಟೆಗೆ ಕಾರವಾರದ ಅರ್ಗಾ ಸೀ-ಬರ್ಡ್ ನಲ್ಲಿರುವ ಕಂಪನಿಯ ಎಚ್.ಆರ್ ಆಫೀಸಿಗೆ ತನ್ನ ಊರಿಗೆ ಹೋಗುವ ಸಲುವಾಗಿ ವೇತನದ ಅಡ್ವಾನ್ಸ್ ಹಣ ಕೇಳಲು ಬಂದವನು, ಸಮಯ 11-00 ಗಂಟೆಯ ನಡುವಿನ ಅವಧಿಯಲ್ಲಿ ಸೀ-ಬರ್ಡ್ ಸೆಂಟ್ರಲ್ ಸ್ಟೋರ್ ಹತ್ತಿರ ಆಕಸ್ಮಿಕವಾಗಿ ಬಿದ್ದವನನ್ನು ಕಂಪನಿಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದರೂ ಕೂಡಾ ಸದರಿಯವನು ಹೃದಯಾಘಾತದಿಂದ ಮರಣ ಪಟ್ಟಿದ ಬಗ್ಗೆ 11-15 ಗಂಟೆಗೆ ಕಂಪನಿಯ ವೈದ್ಯರು ತಿಳಿಸಿದ ಬಗ್ಗೆ ಪಿರ್ಯಾದಿ ಶ್ರೀ ವೈ. ಶಿವತೇಜ ತಂದೆ ಮೋಹನರಾವ್, ಪ್ರಾಯ-29 ವರ್ಷ, ಸಾ|| ಅಮಲಪುರಂ, ಈಸ್ಟ್ ಗೋದಾವರಿ ಜಿಲ್ಲೆ, ಆಂಧ್ರಪ್ರದೇಶ, ಹಾಲಿ ಸಾ|| ಹಬ್ಬುವಾಡ, ಕಾರವಾರ ರವರು ದಿನಾಂಕ: 19-02-2021 ರಂದು 14-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಯಲ್ಲಾಪುರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 05/2021, ಕಲಂ: 174(ಸಿ) ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತಳಾದ ಶ್ರೀಮತಿ ಫಾತಿಮಾಬಿ ಕೋಂ. ಇಮಾಮಸಾಬ್ ಯಳ್ಳೂರ, ಪ್ರಾಯ-48 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕಾಳಮ್ಮನಗರ, ತಾ: ಯಲ್ಲಾಪುರ. ಪಿರ್ಯಾದಿಯವರ ತಾಯಿಯವರಾದ ಇವಳು ಕಳೆದ ಕೆಲ ವರ್ಷಗಳಿಂದ ‘ಬಿಸಿಲಿನಲ್ಲಿ ಕೆಲಸ ಮಾಡಿದರೆ ತನಗೆ ತಲೆ ಸುತ್ತು ಬರುತ್ತದೆ, ಆಯಾಸವಾಗುತ್ತದೆ’ ಅಂತಾ ಹೇಳಿ ಕಂಡ ಕಂಡಲ್ಲಿ ಮಲಗುತ್ತಿದ್ದವಳು, ದಿನಾಂಕ: 18-02-2021 ರಂದು ಮಧ್ಯಾಹ್ನ ಕಾಡಿಗೆ ಹೋಗಿ ಉರುವಲು ಕಟ್ಟಿಗೆ ತಗೆದುಕೊಂಡು ಬಂದು ಮನೆಯಲ್ಲಿ ಇಟ್ಟು ಸಾಯಂಕಾಲ 06-30 ಗಂಟೆಗೆ ‘ಸ್ನಾನ ಮಾಡಿ ಬರುತ್ತೇನೆ’ ಅಂತಾ ತನ್ನ ಮನೆಯಲ್ಲಿರುವ ಸ್ನಾನದ ಕೋಣೆಗೆ ಹೋದವಳು, ಸಮಯ 07-00 ಗಂಟೆ ಆದರೂ ಕೂಡಾ ಮರಳಿ ಬರದಿರುವುದರಿಂದ ಸಂಶಯಗೊಂಡ ಪಿರ್ಯಾದಿಯ ಅಣ್ಣ ರಫೀಖ್ ರವರು ಸ್ನಾನದ ಕೋಣೆಯ ಹತ್ತಿರ ಹೋಗಿ ನೋಡಿದಾಗ ಮೃತಳು ಮನೆಯ ಬಾತ್ ರೂಮಿನ ಮುಂಭಾಗದಲ್ಲಿಟ್ಟ ಸಿಂಟೆಕ್ಸ್ ಗೆ ಓರೆಯಾಗಿ ಕುಳಿತ ಸ್ಥಿತಿಯಲ್ಲಿದ್ದವಳಿಗೆ ರಫೀಖ್ ವರು ಅಲುಗಾಡಿಸಿ ನೋಡಲು ಮಾತನಾಡದಿರುವಾಗ, ಅವರನ್ನು ಖಾಸಗಿ ವಾಹನದಲ್ಲಿ ಯಲ್ಲಾಪುರದ ಸರಕಾರಿ ಆಸ್ಪತ್ರೆಗೆ ಒಯ್ದು ವೈದ್ಯರಿಂದ ಪರೀಕ್ಷಿಸಿದಾಗ ಅವಳು ಮೃತಪಟ್ಟ ಬಗ್ಗೆ ವೈದ್ಯರು ಖಾತ್ರ ಪಡಿಸಿರುತ್ತಾರೆ. ಘಟನಾ ಸ್ಥಳದಲ್ಲಿ ಸೆಣಬಿನ ಹಗ್ಗ ಕಂಡುಬಂದಿದ್ದು, ಮೃತಳ ಕುತ್ತಿಗೆಯಲ್ಲಿಯೂ ಸಹ ಹಗ್ಗ ನೆಟ್ಟಿದ ಗುರುತು ಇರುವುದರಿಂದ ಮೃತಳು ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ಮನನೊಂದು ಹಗ್ಗದಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಅಥವಾ ಇನ್ನಾವುದೋ ರೀತಿಯಲ್ಲಿ ಮೃತಪಟ್ಟಿದ್ದು, ಸದ್ರಿಯವರ ಮರಣದಲ್ಲಿ ಸಂಶಯ ಇದ್ದು ತನಿಖೆ ಆಗಬೇಕು ಎಂಬ ಬಗ್ಗೆ ಪಿರ್ಯಾದಿ ಶ್ರೀ ಮುಸ್ತಾಖಅಲಿ ತಂದೆ ಇಮಾಮಸಾಬ್ ಯಳ್ಳೂರ, ಪ್ರಾಯ-21 ವರ್ಷ, ವೃತ್ತಿ-ಸೆಂಟ್ರಿಂಗ್ ಕೆಲಸ, ಸಾ|| ಕಾಳಮ್ಮನಗರ, ತಾ: ಯಲ್ಲಾಪುರ ರವರು ದಿನಾಂಕ: 19-02-2021 ರಂದು 21-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

ಇತ್ತೀಚಿನ ನವೀಕರಣ​ : 20-02-2021 11:36 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080