Daily District Crime Report
Date:- 19-01-2022
at 00:00 hrs to 24:00 hrs
ಕದ್ರಾ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 02/2022, ಕಲಂ: ಹೆಂಗಸು ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಹೆಂಗಸು ಕುಮಾರಿ: ಕಾವೇರಿ ತಂದೆ ಹುಲ್ಲಪ್ಪ ಕುರುಬರ, ಪ್ರಾಯ-23 ವರ್ಷ, ಸಾ|| ಮನೆ ನಂ: 533/145, ಕೆ.ಪಿ.ಸಿ ಲೇಬರ್ ಕಾಲೋನಿ, ಕದ್ರಾ, ಕಾರವಾರ. ಪಿರ್ಯಾದಿಯವರ ಮಗಳಾದ ಇವಳಿಗೆ ಹೃದಯ ಹಾಗೂ ಕಿವಿಯ ಸಮಸ್ಯೆಯ ಕುರಿತು ಆರೋಗ್ಯ ಸರಿ ಇಲ್ಲದೇ ಇರುವುದರಿಂದ ಮನೆಯಲ್ಲಿಯೇ ಇರುತ್ತಿದ್ದವಳು. ದಿನಾಂಕ: 19-01-2022 ರಂದು 14-00 ಗಂಟೆಯಿಂದ 14-10 ಗಂಟೆಯ ನಡುವಿನ ಅವಧಿಯಲ್ಲಿ ಮನೆಯಲ್ಲಿ ಯಾರಿಗೂ ಹೇಳದೇ, ಕೇಳದೇ ಎಲ್ಲಿಯೋ ಹೋಗಿ, ಈವರೆಗೆ ಮರಳಿ ಮನೆಗೆ ಬಾರದೇ ಕಾಣೆಯಾಗಿರುತ್ತಾಳೆ. ಕಾರಣ ಸದ್ರಿ ಕಾಣೆಯಾದ ತನ್ನ ಮಗಳನ್ನು ಪತ್ತೆ ಮಾಡಿಕೊಡಬೇಕಾಗಿ ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಗುರುಮೂರ್ತಿ ತಂದೆ ಗೋಪಾಲಕೃಷ್ಣ ಹೆಗಡೆ, ಪ್ರಾಯ-56 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಉಚಗೇರಿ, ಪೊ: ಚಿಪಗೇರಿ, ತಾ: ಯಲ್ಲಾಪುರ ರವರು ದಿನಾಂಕ: 19-01-2022 ರಂದು 18-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಹೊನ್ನಾವರ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 26/2022, ಕಲಂ: 379 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ಹೊನ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯ ಹೊನ್ನಾವರ ತಾಲೂಕಿನ ಕಾಸರಕೋಡ ಹಿರೇಮಠದಲ್ಲಿರುವ ಪಿರ್ಯಾದಿಯವರ ಮನೆಯ ಎದುರಿಗೆ ಸಾನ್ವಿ ಫಾಸ್ಟ್ ಫುಡ್ ಹತ್ತಿರ ರಾಷ್ಟ್ರೀಯ ಹೆದ್ದಾರಿಯ ಮೇಲೆ ಪಿರ್ಯಾದಿಯ ತಂದೆಯವರಾದ ಶ್ರೀ ದೇವೇಂದ್ರ ತಾಂಡೇಲ ರವರು ಅ||ಕಿ|| 20,000/- ರೂಪಾಯಿ ಮೌಲ್ಯದ ತಮ್ಮ ಬಾಬ್ತು ಹೋಂಡಾ ಎಕ್ಟಿವಾ ಮೋಟಾರ್ ಸೈಕಲ್ ನಂ: ಕೆ.ಎ-30/ಆರ್-6102 ನೇದನ್ನು ದಿನಾಂಕ: 05-01-2022 ರಂದು 16-30 ಗಂಟೆಗೆ ಚಾವಿ ಸಹಿತ ಇಟ್ಟು ಮನೆಯೊಳಗೆ ಹೋಗಿ ಮರಳಿ 16-45 ಗಂಟೆಯ ಸುಮಾರಿಗೆ ಬರುವಷ್ಟರೊಳಗೆ ಕಳುವು ಮಾಡಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀ ಹರೀಶ ತಂದೆ ದೇವೇಂದ್ರ ತಾಂಡೇಲ, ಪ್ರಾಯ-34-ವರ್ಷ, ವೃತ್ತಿ-ಗೂಡಂಗಡಿ, ಸಾ|| ಹಿರೇಮಠ, ಕಾಸರಕೋಡ, ತಾ: ಹೊನ್ನಾವರ ರವರು ದಿನಾಂಕ: 19-01-2022 ರಂದು 12-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಹೊನ್ನಾವರ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 27/2022, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಗಣಪತಿ ತಂದೆ ದೇವು ಮುಕ್ರಿ, ಪ್ರಾಯ-47 ವರ್ಷ, ವೃತ್ತಿ-ಚಾಲಕ, ಸಾ|| ಕರ್ಕಿ, ಕೊಣಕಾರ, ತಾ: ಹೊನ್ನಾವರ (ಹೊನ್ನಾವರ ಪಟ್ಟಣ ಪಂಚಾಯತ ಟ್ರ್ಯಾಕ್ಟರ್ ನಂ: ಕೆ.ಎ-47/2631 ನೇದರ ಚಾಲಕ). ಈತನು ಹೊನ್ನಾವರ ಪಟ್ಟಣ ಪಂಚಾಯತ ವ್ಯಾಪ್ತಿಯ ಕಸ ವಿಲೇವಾರಿ ಮಾಡುವ ಟ್ರ್ಯಾಕ್ಟರ್ ನಂ: ಕೆ.ಎ-47/2631 ನೇದರ ಗುತ್ತಿಗೆ ಆಧಾರದ ಚಾಲಕನಾಗಿದ್ದು, ದಿನಾಂಕ: 13-01-2022 ರಂದು ಬೆಳಿಗ್ಗೆ 10-15 ಗಂಟೆಗೆ ಹೊನ್ನಾವರ ಪಟ್ಟಣದ ಎಮ್ಮೆಪೈಲ್ ಹತ್ತಿರ ರಸ್ತೆ ಬದಿಯ ಚರಂಡಿಯಲ್ಲಿನ ಹೂಳನ್ನು ತುಂಬಿಕೊಂಡು ಬರಲು ಹೋದಾಗ ಟ್ರ್ಯಾಕ್ಟರನ್ನು ರಸ್ತೆಯ ಸಮಾಂತರವಾಗಿ ನಿಲ್ಲಿಸಲು ಆರೋಪಿ ಟ್ರ್ಯಾಕ್ಟರ್ ಚಾಲಕನು ಒಮ್ಮೇಲೆ ಟ್ರ್ಯಾಕ್ಟರನ್ನು ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ರಸ್ತೆಯ ಬದಿಯ ಹೂಳನ್ನು ತುಂಬಲು ನಿಂತಿದ್ದ ಪಟ್ಟಣ ಪಂಚಾಯತ ಪೌರ ಕಾರ್ಮಿಕ ಶ್ರೀ ಜರ್ನಾಧನ ತಂದೆ ಗಣಪತಿ ಹರಿಜನ, ಸಾ|| ರಾಯಲಕೇರಿ, ತಾ: ಹೊನ್ನಾವರ, ಇವರಿಗೆ ಡಿಕ್ಕಿ ಪಡಿಸಿ ಆಪಘಾತ ಪಡಿಸಿ, ಜನಾರ್ಧನ ಈತನಿಗೆ ಬಲಗೈ ಮೊಣಕೈ ಹತ್ತಿರ, ಎಡಗಾಲಿನ ಮೊಣಕಾಲಿನ ಕೆಳಭಾಗದಲ್ಲಿ ಗಾಯನೋವು ಪಡಿಸಿದ್ದಲ್ಲದೇ, ಟ್ರ್ಯಾಕ್ಟರ್ ವಾಹನ ಜಖಂಗೊಳ್ಳಲು ಕಾರಣನಾದ ಟ್ರ್ಯಾಕ್ಟರ್ ನಂ: ಕೆ.ಎ-47-2631 ನೇದರ ಚಾಲಕನ ಮೇಲೆ ಮುಂದಿನ ಕಾನೂನು ಕ್ರಮ ತೆಗೆದುಕೊಳ್ಳಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಸುನೀಲ ತಂದೆ ಸುಭಾಷ ಗಾವಡೆ, ಪ್ರಾಯ-41 ವರ್ಷ, ವೃತ್ತಿ-ಕಿರಿಯ ಆರೋಗ್ಯ ನಿರೀಕ್ಷಕ, ಪಟ್ಟಣ ಪಂಚಾಯತ, ತಾ: ಹೊನ್ನಾವರ ರವರು ದಿನಾಂಕ: 19-01-2022 ರಂದು 16-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಹೊನ್ನಾವರ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 31/2022, ಕಲಂ: 323, 341, 307, 504, 506 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಮುಬಾರಕ್ ಅಬು ಮಹಮ್ಮದ್ ಶಾಹ್, ಪ್ರಾಯ-40 ವರ್ಷ, ವೃತ್ತಿ-ವ್ಯಾಪಾರ, ಸಾ|| ಚಂದಾವರ ಸೂಪರ್ ಮಾರ್ಕೆಟ್ ಹತ್ತಿರ, ತಾ: ಹೊನ್ನಾವರ, 2]. ಜೋನಿಟಾ ರೊಪಲ್ ಫರ್ನಾಂಡೀಸ್, ಪ್ರಾಯ-35 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಸೂಪರ್ ಮಾರ್ಕೆಟ್ ಹತ್ತಿರ, ಚಂದಾವರ, ತಾ: ಹೊನ್ನಾವರ, 3]. ಅಮ್ಜದ್ ತಂದೆ ಭಾಷು ಖಾನ್, ಪ್ರಾಯ-24 ವರ್ಷ, ವೃತ್ತಿ-ವ್ಯಾಪಾರ, ಸಾ|| ಚಂದಾವರ ನಾಕಾ ಹತ್ತಿರ, ಚಂದಾವರ, ತಾ: ಹೊನ್ನಾವರ. ಈ ನಮೂದಿತ ಆರೋಪಿತರು ಹಾಗೂ ಪಿರ್ಯಾದಿಯು ಹೊನ್ನಾವರ ತಾಲೂಕಿನ ಚಂದಾವರ ಗ್ರಾಮದವರಿದ್ದು, ಪಿರ್ಯಾದಿಯು ದಿನಾಂಕ: 19-01-2022 ರಂದು ಸಾಯಂಕಾಲ ಚಂದಾವರ ಗ್ರಾಮ ಪಂಚಾಯತ ಮೀಟಿಂಗಿಗೆ ಕಛೇರಿಗೆ ಹೋಗಿ ಮೀಟಿಂಗ್ ಮುಗಿದ ನಂತರ ಕಛೇರಿಯಿಂದ ಸಾಯಂಕಾಲ 05-00 ಗಂಟೆಯ ಸುಮಾರಿಗೆ ಹೊರಗೆ ಬರುತ್ತಿದ್ದಂತೆ ಆಗ ಅಲ್ಲಿಗೆ ಕಾರ್ ನಂ: ಕೆ.ಎ-20/ಎಮ್.ಬಿ-0232 ನೇದರಲ್ಲಿ ಬಂದ ಆರೋಪಿ 1, 2 ಮತ್ತು 3 ನೇಯವರು ಕಾರಿನಿಂದ ಕೆಳಗೆ ಇಳಿದಿದ್ದು, ಆಗ ಪಿರ್ಯಾದಿಯನ್ನು ನೋಡಿದ ಆರೋಪಿ 1 ನೇಯವನು ಒಮ್ಮೇಲೆ ಪಿರ್ಯಾದಿಯನ್ನು ಉದ್ದೇಶಿಸಿ ‘ಬೋಳಿ ಮಗನೇ, ಸೂಳೆ ಮಗನೇ, ನ್ಯಾಯಾಲಯದಲ್ಲಿ ನನ್ನ ವಿರುದ್ಧ ಚೆಕ್ ಬೌನ್ಸ್ ಪ್ರಕರಣ ದಾಖಲಿಸಿದ್ದಿಯಾ?’ ಅಂತಾ ಪಿರ್ಯಾದಿಗೆ ಅವಾಚ್ಯವಾಗಿ ಬೈಯುತ್ತಿದ್ದಾಗ, ಪಿರ್ಯಾದಿಯು ಆರೋಪಿ 1 ನೇಯವನಿಗೆ ‘ಹೌದು ನಿನಗೆ ನೋಟಿಸ್ ಕಳುಹಿಸಿದ್ದು, ನೀನು ನೋಟಿಸ್ ಸ್ವೀಕರಿಸಿದರೂ ಹಣ ನೀಡಿರುವುದಿಲ್ಲ. ಅದಕ್ಕಾಗಿ ನಾನು ಪ್ರಕರಣ ದಾಖಲಿಸಿದ್ದೇನೆ. ಅದನ್ನು ನ್ಯಾಯಾಲಯದಲ್ಲಿ ಬಗೆಹರಿಸಿಕೊಳ್ಳುವಾ’ ಅಂತಾ ಹೇಳಿದ್ದು, ಆಗ ಅದರಿಂದ ಸಿಟ್ಟಾದ ಆರೋಪಿ 1, 2 ಮತ್ತು 3 ನೇಯವರು ಪಿರ್ಯಾದಿಗೆ ಒಮ್ಮೇಲೆ ಅಡ್ಡಗಟ್ಟಿ ಹಿಡಿದು ‘ಸೂಳೆ ಮಗನೇ, ಬೋಳಿ ಮಗನೇ, ನಮ್ಮ ಮೇಲೆಯೇ ಪ್ರಕರಣದ ದಾಖಲಿಸುತ್ತಿಯಾ?’ ಅಂತಾ ಅವಾಚ್ಯವಾಗಿ ಬೈಯ್ದು, ಕೈಯಿಂದ ಮೈಮೇಲೆ ಹೊಡೆದಿದ್ದಲ್ಲದೇ, ಆರೋಪಿ 1 ನೇಯವನು ಅಲ್ಲಿಯೇ ಬದಿಯಲ್ಲಿದ್ದ ಒಂದು ಪಿಕಾಶಿಯನ್ನು ಎತ್ತಿ ಪಿರ್ಯಾದಿಗೆ ಕೊಲೆ ಮಾಡುವ ಉದ್ದೇಶದಿಂದಲೇ ಒಮ್ಮೇಲೆ ತಲೆಯ ಮೇಲೆ ಪಿಕಾಶಿಯನ್ನು ಜೋರಾಗಿ ಬೀಸಿದ್ದು, ಆಗ ಅದನ್ನು ನೋಡಿದ ಪಿರ್ಯಾದಿಯು ಪಿಕಾಶಿಯಿಂದ ಸ್ವಲ್ಪದರಲ್ಲಿ ತಪ್ಪಿಸಿಕೊಂಡಿದ್ದು, ಆಗ ಪಿಕಾಶಿಯು ನೆಲಕ್ಕೆ ಬಿದ್ದಿದ್ದು, ಅಗ ಪಿರ್ಯಾದಿಯು ಜೋರಾಗಿ ಕೂಗಿಕೊಂಡಾಗ ಅಲ್ಲಿ ಸೇರಿದ ಜನರು ಸೇರಿ ಪಿರ್ಯಾದಿಯನ್ನು ಆರೋಪಿತರಿಂದ ತಪ್ಪಿಸಿ ಹಾಕಿದ್ದು, ನಂತರ ಆರೋಪಿತರೆಲ್ಲರೂ ಪಿರ್ಯಾದಿಗೆ ‘ಇವತ್ತು ಬಚಾವಾದೆ. ಇನ್ನೊಂದು ದಿನ ನಿನಗೆ ಜೀವ ಸಮೇತ ಬಿಡುವುದಿಲ್ಲ. ಕೊಂದು ಬಿಸಾಡುತ್ತೇವೆ’ ಅಂತಾ ಕೊಲೆ ಬೆದರಿಕೆ ಹಾಕಿದ ಬಗ್ಗೆ ಪಿರ್ಯಾದಿ ಶ್ರೀ ಅಸಪ್‍ಅಲಿ ತಂದೆ ಅಬ್ದುಲ್ ಗಪೂರ್ ಘನಿ, ಪ್ರಾಯ-45 ವರ್ಷ, ವೃತ್ತಿ-ಗುತ್ತಿಗೆದಾರ, ಸಾ|| ನೂರಾನಿ ಮೊಹಲ್ಲಾ, ಚಂದಾವರ, ತಾ: ಹೊನ್ನಾವರ ರವರು ದಿನಾಂಕ: 19-01-2022 ರಂದು 21-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಮಂಕಿ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 09/2022, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ನಾಗೇಶ ತಂದೆ ಹನುಮಂತ ನಾಯ್ಕ, ಪ್ರಾಯ-35 ವರ್ಷ, ಸಾ|| ಕೆಪ್ಪನಹಿತ್ಲು, ಬಣಸಾಲೆ, ತಾ: ಹೊನ್ನಾವರ. ಈತನು ದಿನಾಂಕ: 19-01-2022 ರಂದು ಮದ್ಯಾಹ್ನ 12-45 ಗಂಟೆಗೆ ಮಂಕಿ ಪೊಲೀಸ್ ಠಾಣಾ ವ್ಯಾಪ್ತಿಯ ಬಣಸಾಲೆ ಮೀನು ಮಾರ್ಕೆಟ್ ಹತ್ತಿರ ಸಾರ್ವಜನಿಕ ರಸ್ತೆಯ ಬದಿಯಲ್ಲಿ ನಿಂತುಕೊಂಡು ಬರ-ಹೋಗುವ ಜನರಿಗೆ 01/- ರೂಪಾಯಿಗೆ 80/- ರೂಪಾಯಿ ಕೊಡುವುದಾಗಿ ಹೇಳಿ ಕೂಗಿ ಕರೆದು ಅವರಿಂದ ಓ.ಸಿ ಮಟಕಾ ಜೂಗಾರಾಟದ ಅಂಕೆ-ಸಂಖ್ಯೆಗಳ ಮೇಲೆ ಹಣವನ್ನು ಪಂಥವಾಗಿ ಕಟ್ಟಿಸಿ, ಹಣ ಪಡೆದು ಅವರಿಗೆ ಓ.ಸಿ ಮಟಕಾ ಅಂಕೆ-ಸಂಖ್ಯೆಯ ಚೀಟಿಯನ್ನು ಬರೆದು ಕೊಡುತ್ತಾ ಓ.ಸಿ ಮಟಕಾ ಜುಗಾರಾಟ ಆಡಿಸುತ್ತಿದ್ದಾಗ ದಾಳಿಯ ವೇಳೆ ಒಟ್ಟು ನಗದು ಹಣ 610/- ರೂಪಾಯಿಗಳು, ಓ.ಸಿ ಮಟಕಾ ಸಂಖ್ಯೆಗಳನ್ನು ಬರೆದ ಚೀಟಿ-1, ಬಾಲ್ ಪೆನ್-1 ಇವುಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಅಶೋಕ ಎಮ್. ಮಾಳಾಬಗಿ, ಪಿ.ಎಸ್.ಐ (ಕಾ&ಸು), ಮಂಕಿ ಪೊಲೀಸ್ ಠಾಣೆ ರವರು ದಿನಾಂಕ: 19-01-2022 ರಂದು 14-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಯಲ್ಲಾಪುರ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 13/2022, ಕಲಂ: ಹೆಂಗಸು ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಹೆಂಗಸು ಕುಮಾರಿ: ಶ್ರೀಲಕ್ಷ್ಮೀ ತಂದೆ ಮಧು ನಾಯ್ಕ, ಪ್ರಾಯ-21 ವರ್ಷ, ವೃತ್ತಿ-ವಿದ್ಯಾರ್ಥಿನಿ, ಸಾ|| ಮಜ್ಜಿಗೆಹಳ್ಳ ಪ್ಲಾಟ್, ಉಚಗೇರಿ ಗ್ರಾಮ, ತಾ: ಯಲ್ಲಾಪುರ. ಪಿರ್ಯಾದಿಯವರ ಮಗಳಾದ ಇವಳು ದಿನಾಂಕ: 18-01-2022 ರಂದು 11-00 ಗಂಟೆಯ ಅವಧಿಯಲ್ಲಿ ಯಲ್ಲಾಪುರ ತಾಲೂಕಿನ ಉಚಗೇರಿ ಗ್ರಾಮದ ಮಜ್ಜಿಗೆಹಳ್ಳದ ಬಸ್ ನಿಲ್ದಾಣದಿಂದ ಹೋದವಳು, ಈವರೆಗೂ ಮನೆಗೆ ಬಾರದೇ ಎಲ್ಲಿಯೋ ಹೋಗಿ P್ಫಣೆಯಾಗಿರುತ್ತಾಳೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಮಧು ತಂದೆ ವೇಲು ನಾಯ್ಕ, ಪ್ರಾಯ-46 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಮಜ್ಜಿಗೆಹಳ್ಳ ಪ್ಲಾಟ್, ಉಚಗೇರಿ ಗ್ರಾಮ, ತಾ: ಯಲ್ಲಾಪುರ ರವರು ದಿನಾಂಕ: 19-01-2022 ರಂದು 11-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 05/2022, ಕಲಂ: 324, 504, 506 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಪ್ರವೀಣ ತಂದೆ ಬಾಬು ಮಡಗಾಂವಕರ, ಸಾ|| ಅಯ್ಯಪ್ಪ ನಗರ, ತಾ: ಶಿರಸಿ. ಪಿರ್ಯಾದಿಯವರು ಈ ಹಿಂದಿನಿಂದಲೂ ಆರೋಪಿತನ ಚಿರೆ ಕಲ್ಲು ಲಾರಿಯಲ್ಲಿ ಹಮಾಲಿ ಕೆಲಸ ಮಾಡಿಕೊಂಡು ಬಂದಿದ್ದು, ದಿನಾಂಕ: 19-01-2022 ರಂದು ಪಿರ್ಯಾದಿಯವರು ಆರೋಪಿತನ ಲಾರಿಯಲ್ಲಿ ಹಮಾಲಿ ಕೆಲಸಕ್ಕೆ ಹೋಗದೇ ತನ್ನ ಪರಿಚಯದವರೊಂದಿಗೆ ಇನ್ನೊಂದು ಲಾರಿಯಲ್ಲಿ ಕೆಲಸಕ್ಕೆ ಹೋಗಿದ್ದಕ್ಕೆ ಆರೋಪಿತನು ಮಧ್ಯಾಹ್ನ 12-30 ಗಂಟೆಯ ಸುಮಾರಿಗೆ ಕರೆ ಮಾಡಿ, ‘ಕೆಲಸಕ್ಕೆ ಯಾಕೆ ಬರಲಿಲ್ಲಾ, ಕೂಡಲೇ ಬಾ’ ಎಂದು ತಿಳಿಸಿದಂತೆ, ಪಿರ್ಯಾದಿಯವರು ‘ತಾನು ಕೆಲಸದಲ್ಲಿ ಮಳಗಿಯಲ್ಲಿರುತ್ತೇನೆ, ಬರುತ್ತೇನೆ’ ಅಂತಾ ಹೇಳಿ ಕೆ.ಎಸ್.ಆರ್.ಟಿ.ಸಿ ಬಸ್ಸಿನÀಲ್ಲಿ ಇಸಳೂರಿಗೆ ಬಂದು ಇಳಿದಾಗ ಆರೋಪಿತನು ತನ್ನ ಓಮಿನಿಯಲ್ಲಿ ಶಿರಸಿಯ ಅಯ್ಯಪ್ಪನಗರದ ತನ್ನ ವಾಸದ ಮನೆಯ ಹತ್ತಿರ ಕರೆದುಕೊಂಡು ಬಂದು ಮಧ್ಯಾಹ್ನ 14-30 ಗಂಟೆಯ ಸುಮಾರಿಗೆ ‘ಈ ದಿವಸ ಕೆಲಸಕ್ಕೆ ಯಾಕೆ ಬರಲಿಲ್ಲಾ ಬೋಸಡಿ ಮಗನೆ, ಸೂಳೆ ಮಗನೆ’ ಅಂತಾ ಅವಾಚ್ಯವಾಗಿ ಬೈಯ್ದು, ಅಲ್ಲಿಯೇ ಇದ್ದ ಗಾಡಿಯ ಲಿವರ್ (ಕಬ್ಬಿಣದ ರಾಡ) ನಿಂದ ಭುಜಕ್ಕೆ, ಬೆನ್ನಿಗೆ ಹಾಗೂ ಕಾಲಿಗೆ ಹೊಡೆದು ಗಾಯನೊವುಂಟು ಮಾಡಿದ್ದಲ್ಲದೇ, ‘ಇನ್ನೂ ಮುಂದೆ ತನ್ನ ಕೆಲಸಕ್ಕೆ ಬರದೇ ಇದ್ದರೆ ನಿನಗೆ ಜೀವ ಸಹಿತ ಬಿಡುವುದಿಲ್ಲ’ ಅಂತಾ ಜೀವ ಬೆದರಿಕೆ ಹಾಕಿದ ಬಗ್ಗೆ ಪಿರ್ಯಾದಿ ಶ್ರೀ ನಾಗೇಶ ತಂದೆ ಈರೇಶ ವಡ್ಡರ, ಪ್ರಾಯ-26 ವರ್ಷ, ವೃತ್ತಿ-ಹಮಾಲಿ ಕೆಲಸ, ಸಾ|| ಖಾನ್ ನಗರ, ಗೌಡಳ್ಳಿ, ತಾ: ಶಿರಸಿ ರವರು ದಿನಾಂಕ: 19-01-2022 ರಂದು 20-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಮುಂಡಗೋಡ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 11/2022, ಕಲಂ: ಹೆಂಗಸು ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಹೆಂಗಸು ಕುಮಾರಿ: ರೇಣುಕಾ ತಂದೆ ರಾಮಚಂದ್ರ ಸಮ್ಮಸಗಿ, ಪ್ರಾಯ-18 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಕೊಳಗಿ, ತಾ: ಮುಂಡಗೋಡ. ಪಿರ್ಯಾದಿಯವರ ಮಗಳಾದ ಇವಳು ದಿನಾಂಕ: 17-01-2022 ರಂದು ಸಂಜೆ 07-00 ಗಂಟೆಯ ಸುಮಾರಿಗೆ ಮನೆಯ ಹಿತ್ತಲಿನಲ್ಲಿ ಪಾತ್ರೆ ಬೆಳಗಲು ಹೋದವಳು, ಯಾರಿಗೂ ಹೇಳದೆ ಕೇಳದೆ ಎಲ್ಲಿಯೋ ಹೋಗಿ ಕಾಣೆಯಾದವಳಿಗೆ ಊರಿನಲ್ಲಿ ಹಾಗೂ ಮುಂಡಗೋಡ ತಾಲೂಕಿನ ಗೋಟಗೋಡಿಕೊಪ್ಪ, ಕಲ್ಲಹಕ್ಕಲ, ಹರಗನಹಳ್ಳಿ ಮತ್ತು ಹಾನಗಲ್ ತಾಲೂಕಿನ ಡೊಳ್ಳೇಶ್ವರ, ಹೊಂಕಣ, ಸೊರಬಾ ತಾಲೂಕಿನ ಮೂಡಿ ಹಾಗೂ ಬೇರೆ ಬೇರೆ ಊರುಗಳಿಗೆ ಹೋಗಿ ಪಿರ್ಯಾದಿಯವರು ವಿಚಾರಿಸಿದರಲ್ಲಿ ಅವಳು ಪತ್ತೆಯಾಗಿರುವುದಿಲ್ಲ. ಅವಳಿಗೆ ಈವರೆಗೂ ಹುಡುಕಾಡಿ ಪತ್ತೆಯಾಗದೇ ಇದ್ದುದರಿಂದ ಸದ್ರಿ ಕಾಣೆಯಾದವಳನ್ನು ಹುಡುಕಿ ಕೊಡಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ರಾಮಚಂದ್ರ ತಂದೆ ಆನಂದಪ್ಪ ಸಮ್ಮಸಗಿ, ಪ್ರಾಯ-39 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಕೊಳಗಿ, ತಾ: ಮುಂಡಗೋಡ ರವರು ದಿನಾಂಕ: 19-01-2022 ರಂದು 11-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
======||||||||======
Daily District U.D Report
Date:- 19-01-2022
at 00:00 hrs to 24:00 hrs
ಅಂಕೋಲಾ ಪೊಲೀಸ್ ಠಾಣೆ
ಯು.ಡಿ.ಆರ್ ಸಂಖ್ಯೆಃ 05/2022, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಮಂಜುನಾಥ ತಂದೆ ರಾಮಚಂದ್ರ ನಾಯಕ, ಪ್ರಾಯ-38 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಜನತಾ ಕಾಲೋನಿ, ಅಡ್ಲೂರು, ತಾ: ಅಂಕೋಲಾ. ಈತನು ಅತಿಯಾಗಿ ಸಾರಾಯಿ ಕುಡಿಯುತ್ತಿದ್ದವನು, ದಿನಾಂಕ: 19-01-2022 ರಂದು ಮಧ್ಯಾಹ್ನ ಕೆಲಸದಿಂದ ಮನೆಗೆ ಬಂದವನು, ವಾಪಸ್ ಕೆಲಸಕ್ಕೆ ಹೋಗದೇ ಮನೆಯಲ್ಲಿಯೇ ಉಳಿದುಕೊಂಡಿದ್ದವನು, ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ರಾತ್ರಿ 08-30 ಗಂಟೆಯ ಸುಮಾರಿಗೆ ಮನೆಯಲ್ಲಿದ್ದ ತನ್ನ ಹೆಂಡತಿಗೆ ಮನೆಯ ಮುಂದಿನ ಗೇಟ್ ಹಾಕಲು ಕಳುಹಿಸಿ, ಮನೆಯಲ್ಲಿದ್ದ ಬೆಂಚ್ ಮೇಲೆ ಹತ್ತಿಕೊಂಡು ಮನೆಯ ಜಂತಿಗೆ ನೈಲಾನ್ ಹಗ್ಗದಿಂದ ಕುತ್ತಿಗೆಗೆ ನೇಣು ಹಾಕಿಕೊಂಡವನಿಗೆ ನಂತರ ಉಪಚಾರದ ಕುರಿತು ಅಂಕೋಲಾ ಆರ್.ಎನ್ ನಾಯಕ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ರಾತ್ರಿ 09-00 ಗಂಟೆಗೆ ಮೃತಪಟ್ಟಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಮಹೇಂದ್ರ ತಂದೆ ರಾಮಚಂದ್ರ ನಾಯಕ, ಪ್ರಾಯ-36 ವರ್ಷ, ವೃತ್ತಿ-ಚಾಲಕ, ಸಾ|| ಜನತಾ ಕಾಲೋನಿ, ಅಡ್ಲೂರು, ತಾ: ಅಂಕೋಲಾ ರವರು ದಿನಾಂಕ: 19-01-2022 ರಂದು 16-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆ
ಯು.ಡಿ.ಆರ್ ಸಂಖ್ಯೆಃ 02/2022, ಕಲಂ: 174(ಸಿ) ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನು ಸುಮಾರು 30-40 ವರ್ಷದೊಳಗಿನ ಪ್ರಾಯದ ಅಪರಿಚಿತ ಗಂಡಸ್ಸಾಗಿದ್ದು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಸುಮಾರು 5 ದಿನಗಳ ಹಿಂದಿನಿಂದ ಕಾಳಿ ನದಿಯಲ್ಲಿ ಶವವು ಕೊಳೆತ ಸ್ಥಿತಿಯಲ್ಲಿ ತೇಲಿ ಬಂದಿದ್ದು, ದಿನಾಂಕ: 19-01-2022 ರಂದು ಬೆಳಿಗ್ಗೆ 10-00 ಗಂಟೆಯ ಸಮಯಕ್ಕೆ ದಾಂಡೇಲಿಯ ಬಡಾಕಾನಶಿರಾಡಾ ಗ್ರಾಮದ ವ್ಯಾಪ್ತಿಯ ಮಿಜೆಂಟ್ ರೆಸಾರ್ಟ್ ನ ಹತ್ತಿರ ಹರಿಯುತ್ತಿರುವ ಕಾಳಿ ನದಿಯಲ್ಲಿ ಶವವು ತೇಲಿ ಬಂದಿದ್ದನ್ನು ಕಾಳಿ ನದಿಯ ಪಕ್ಕ ಇರುವ ದಬಾದಬಾ ಸ್ಥಳದ ಹತ್ತಿರ ನೀರಿನಲ್ಲಿ ಸಿಕ್ಕಿದ್ದು, ಸದರಿ ವ್ಯಕ್ತಿಯು ಮೃತಪಟ್ಟ ಬಗ್ಗೆ ಸಂಶಯ ಕಂಡು ಬರುತ್ತಿದ್ದು, ಈ ಕುರಿತು ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಅಶೋಕ ತಂದೆ ರಾಮಾ ನಾಯ್ಕ, ಪ್ರಾಯ-46 ವರ್ಷ, ವೃತ್ತಿ-ಬಿಸಿನೆಸ್, ಸಾ|| ಕೋಗಿಲಬನ, ತಾ: ದಾಂಡೇಲಿ ರವರು ದಿನಾಂಕ: 19-01-2022 ರಂದು 10-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಶಿರಸಿ ಗ್ರಾಮೀಣ ಪೊಲೀಸ್ ಠಾಣೆ
ಯು.ಡಿ.ಆರ್ ಸಂಖ್ಯೆಃ 02/2022, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಸುಬ್ರಮಣ್ಯ ತಂದೆ ವಿನಾಯಕ ಹೆಗಡೆ, ಪ್ರಾಯ-19, ವೃತ್ತಿ-ಬಿ.ಕಾಂ ಫಸ್ಟ್ ಇಯರ್ ವಿದ್ಯಾರ್ಥಿ, ಸಾ|| ಹೇರೂರ ಸಾಬ್ ಚಾಳ, ವಿಕಾಸ ಆಶ್ರಮ ಎದುರಿಗೆ, ತಾ: ಶಿರಸಿ. ಪಿರ್ಯಾದಿಯವರ ತಮ್ಮನ ಮಗನಾದ ಈತನು ದಿನಾಂಕ: 18-02-2022 ರಂದು ಬೆಳಿಗ್ಗೆ ಕಾಲೇಜಿಗೆ ಹೋಗಿ ನಂತರ ತನ್ನ ಸ್ನೇಹಿತರಾದ ಹೇರಂಬಾ ಮತ್ತು ಅಶ್ವತ್ ಇವರೊಂದಿಗೆ ಶಿರಸಿ ತಾಲೂಕಿನ ಜಡ್ಡಿಗದ್ದೆ ಸಮೀಪದ ಶಿವಗಂಗೆ ಫಾಲ್ಸ್ ಅನ್ನು ನೋಡಿ ವಾಪಸ್ ಮನೆಗೆ ಕಲ್ಲು ಬಂಡೆ ಮೇಲಿಂದ ನಡೆದುಕೊಂಡು ಬರುತ್ತಿರುವಾಗ ಮಧ್ಯಾಹ್ನ 02-45 ಗಂಟೆಯ ಸುಮಾರಿಗೆ ಆಕಸ್ಮಿಕವಾಗಿ ಕಾಲು ಜಾರಿ ಹರಿಯುವ ಆಳವಾದ ಗುಂಡಿಯ ನೀರಿನಲ್ಲಿ ಬಿದ್ದು ಈಜು ಬಾರದೇ ಒಳಗೆ ಮುಳುಗಿ ಕಾಣೆಯಾಗಿದ್ದವನು, ದಿನಾಂಕ: 19-01-2022 ರಂದು ಬೆಳಿಗ್ಗೆ 10-30 ಗಂಟೆಯ ಸುಮಾರಿಗೆ ಶವ ಸಿಕ್ಕಿರುತ್ತದೆ. ಈತನು ಶಿವಗಂಗೆ ಫಾಲ್ಸ್ ನಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಹರಿಯುವ ಆಳವಾದ ಗುಂಡಿಯ ನೀರಿನಲ್ಲಿ ಬಿದ್ದು ಈಜುಬಾರದೇ ಒಳಗೆ ಮುಳುಗಿ ಮೃತಪಟ್ಟಿರುತ್ತಾನೆ. ಇದರ ಹೊರತು ತನ್ನ ತಮ್ಮನ ಮಗನ ಸಾವಿನಲ್ಲಿ ಬೇರೇ ಯಾವುದೇ ಸಂಶಯ ಇರುವುದಿಲ್ಲ. ಈ ಕುರಿತು ಮುಂದಿನ ಕಾನುನು ಕ್ರಮ ಕೈಗೊಳ್ಳಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಗುರುಮೂರ್ತಿ ತಂದೆ ಗೋಪಾಲಕೃಷ್ಣ ಹೆಗಡೆ, ಪ್ರಾಯ-56 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಉಚಗೇರಿ, ಪೋ: ಚಿಪಗೇರಿ, ತಾ: ಯಲ್ಲಾಪುರ ರವರು ದಿನಾಂಕ: 19-01-2022 ರಂದು 12-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
======||||||||======