ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 19-07-2021

at 00:00 hrs to 24:00 hrs

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 195/2021, ಕಲಂ: 32, 34 ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ತುಳಸು ತಂದೆ ಮಾಸ್ತಿ ಮುಕ್ರಿ, ಪ್ರಾಯ-55 ವರ್ಷ, ವೃತ್ತಿ-ಗೂಡಂಗಡಿ ವ್ಯಾಪಾರ, ಸಾ|| ಬಸ್ತಿಮಕ್ಕಿ, ಕೆಕ್ಕಾರ, ತಾ: ಹೊನ್ನಾವರ. ಈತನು ದಿನಾಂಕ: 19-07-2021 ರಂದು 20-00 ಗಂಟೆಗೆ ಕೆಕ್ಕಾರ ಬಸ್ತಿಮಕ್ಕಿಯ ರಸ್ತೆಯ ಬದಿಯ ತನ್ನ ಅಂಗಡಿಯ ಮುಂಭಾಗದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಪರವಾನಿಗೆ ಇಲ್ಲದೇ 1). HAYWARDS CHEERS WHISKY ಅಂತಾ ಬರೆದ 90 ML ಅಳತೆಯ ಟೆಟ್ರಾ ಪ್ಯಾಕೆಟ್ ಗಳು-14 ಇದ್ದು, ಒಂದಕ್ಕೆ 35.13/- ರೂಪಾಯಿಯಂತೆ ಒಟ್ಟೂ 490/- ರೂಪಾಯಿ. 2). JOHN BULL WHISKY ಅಂತಾ ಬರೆದ 180 ML ಅಳತೆಯ ಪ್ಲಾಸ್ಟಿಕ್ ಬಾಟಲ್ ಗಳು-10 ಇದ್ದು, ಒಂದಕ್ಕೆ 55.97/- ರೂಪಾಯಿಯಂತೆ ಒಟ್ಟೂ 550/- ರೂಪಾಯಿ. 3). ಬಿಳಿ ಬಣ್ಣದ ಪ್ಲಾಸ್ಟಿಕ್ ಚೀಲ-01, ಅ||ಕಿ|| 00.00/- ರೂಪಾಯಿ. ಹೀಗೆ ಒಟ್ಟೂ 1,040/- ರೂಪಾಯಿ ಮೌಲ್ಯದ ಸರಾಯಿಯನ್ನು ಬಿಳಿ ಬಣ್ಣದ ಪ್ಲಾಸ್ಟಿಕ್ ಚೀಲದಲ್ಲಿ ಸಂಗ್ರಹಿಸಿಕೊಂಡು ಅಕ್ರಮವಾಗಿ ಮಾರಾಟ ಮಾಡುತ್ತಿದ್ದಾಗ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀಮತಿ ಸಾವಿತ್ರಿ ನಾಯಕ, ಪಿ.ಎಸ್.ಐ (ತನಿಖೆ-3), ಹೊನ್ನಾವರ ಪೊಲೀಸ್ ಠಾಣೆ ರವರು ದಿನಾಂಕ: 19-07-2021 ರಂದು 21-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಶಹರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 86/2021, ಕಲಂ: 4, 5, 7, 12 THE KARNATAKA PREVENTION OF SLAUGHTER AND PRESERVATION OF CATTLE ORDINANCE-2020 ನೇದ್ದರ ವಿವರ...... ನಮೂದಿತ ಆರೋಪಿತರು 1]. ಮಾದೇವ ತಂದೆ ಮಾಸ್ತಪ್ಪ ನಾಯ್ಕ, ಪ್ರಾಯ-55 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ರೈಲ್ವೇ ಸ್ಟೇಷನ್ ಹತ್ತಿರ, ಮುಟ್ಟಳ್ಳಿ, ತಾ: ಭಟ್ಕಳ, 2]. ಕೃಷ್ಣ ತಂದೆ ಮಾಸ್ತಪ್ಪ ನಾಯ್ಕ, ಪ್ರಾಯ-57 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ರೈಲ್ವೇ ಸ್ಟೇಷನ್ ಹತ್ತಿರ, ಮುಟ್ಟಳ್ಳಿ, ತಾ: ಭಟ್ಕಳ ಹಾಗೂ ಇತರರು. ಈ ನಮೂದಿತ ಆರೋಪಿತರು ಹಾಗೂ ಇತರೊಂದಿಗೆ ಕೂಡಿಕೊಂಡು ವಧೆ ಮಾಡುವ ಉದ್ದೇಶದಿಂದ 40,000/- ರೂಪಾಯಿ ಮೌಲ್ಯದ ಒಟ್ಟೂ 2 ಕೋಣಗಳನ್ನು ದಿನಾಂಕ: 19-07-2021 ರಂದು ಬೆಳಿಗ್ಗೆ 06-30 ಗಂಟೆಯ ಸುಮಾರಿಗೆ ಮುಟ್ಟಳ್ಳಿ ಕಡೆಯಿಂದ ಮುಟ್ಟಳ್ಳಿ ಬೈಪಾಸ್ ಕಡೆಗೆ ಯಾವುದೇ ಪಾಸ್ ಯಾ ಪರ್ಮಿಟ್ ಇಲ್ಲದೇ ಅಕ್ರಮವಾಗಿ ಸಾಗಾಟ ಮಾಡಿಕೊಂಡು ಹೋಗುವಾಗ ಭಟ್ಕಳ ಶಹರದ ಮುಟ್ಟಳ್ಳಿ ಬೈಪಾಸ್ ಹತ್ತಿರ ಕೋಣಗಳ ಸಮೇತ ಪಿರ್ಯಾದಿಯವರಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಎಚ್. ಬಿ. ಕುಡಗುಂಟಿ, ಪಿ.ಎಸ್.ಐ, ಭಟ್ಕಳ ಶಹರ ಪೊಲೀಸ್ ಠಾಣೆ ರವರು ದಿನಾಂಕ: 19-07-2021 ರಂದು 10-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

                      

ಸಿದ್ದಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 86/2021, ಕಲಂ: 323, 324, 341, 188, 504, 506, 447 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಬಲೀಂದ್ರ ದ್ಯಾವಾ ನಾಯ್ಕ, ಪ್ರಾಯ-46 ವರ್ಷ, ವೃತ್ತಿ-ಕೃಷಿ ಕೆಲಸ, 2]. ಈಶ್ವರ ಬೆಳ್ಳಾ ನಾಯ್ಕ, ಪ್ರಾಯ-56 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| (ಇಬ್ಬರೂ) ಹಸ್ವಿಗುಳಿ, ಕಿಬಳೆ ಗ್ರಾಮ, ತಾ: ಸಿದ್ದಾಪುರ. ಪಿರ್ಯಾದಿಗೆ ಸಿದ್ದಾಪುರ ತಾಲೂಕಿನ ಕೊಡ್ಕಣಿ ಹೊಬಳಿಯ ಕಿಬ್ಬಳೆ ಗ್ರಾಮದ ಸರ್ವೇ ನಂ: 83/1, 83/2, 83/3 ರಲ್ಲಿ ಬಾಗಾಯತ್ ಜಮೀನು ಇದ್ದು, ಅದರ ಅಭಿವೃಧ್ದಿಗೆ ಕಿಬಳೆ ಗ್ರಾಮದ ಬೆಟ್ಟದ ಸರ್ವೇ ನಂ: 82, 196(ಅ), 197 ರ ಕ್ಷೇತ್ರವನ್ನು ಬಿಟ್ಟಿದ್ದು, ಆರೋಪಿತರು ಹಸ್ವಿಗುಳಿ ಇವರಿಗೆ ಬೆಟ್ಟದಲ್ಲಿ ಯಾವುದೇ ಹಕ್ಕು ಇಲ್ಲದೇ ಇದ್ದರೂ ಪಿರ್ಯಾದಿಗೆ ಆತಂಕಿಸುತ್ತಾ ಬಂದಿದ್ದರಿಂದ ಪಿರ್ಯಾದುದಾರನು ಈ ಬಗ್ಗೆ ಅವರ ಮೇಲೆ ಮನಾಯಿ ಹುಕುಂ ನ್ನು ತಂದಿರುತ್ತಾನೆ. ಆದಾಗ್ಯೂ ಆರೋಪಿತರು ದಿನಾಂಕ: 08-07-2021 ರಂದು ಸಂಜೆ 05-00 ಗಂಟೆಯ ಸುಮಾರಿಗೆ ಪಿರ್ಯಾದಿಯು ಬೆಟ್ಟದಲ್ಲಿ ಕೆಲಸ ಮಾಡುತ್ತಿರುವಾಗ ಅಕ್ರಮ ಪ್ರವೇಶ ಮಾಡಿದ್ದಲ್ಲದೇ, ಉಪ್ಪಾಗಿ ಕಾಯಿಗಳನ್ನು ಕೊಯ್ಯುತ್ತಿರುವಾಗ ಪಿರ್ಯಾದಿಯು ಕೇಳಿದ್ದಕ್ಕೆ ಆರೋಪಿತರು ಪಿರ್ಯಾದಿಗೆ ಅವಾಚ್ಯವಾಗಿ ಬೈದು, ಪಿರ್ಯಾದಿಗೆ ಎಲ್ಲಿಗೂ ಹೋಗದಂತೆ ಗಟ್ಟಿಯಾಗಿ ಹಿಡಿದುಕೊಂಡು ಆತನಿಗೆ ನೆಲಕ್ಕೆ ಕೆಡವಿ ಬಡಿಗೆಯಿಂದ ಹೊಡೆದು, ಕೈಯಿಂದ ಹೊಡೆದ ಬಗ್ಗೆ ಪಿರ್ಯಾದಿ ಶ್ರೀ ಉಮೇಶ ತಂದೆ ಬಸ್ಯಾ ನಾಯ್ಕ, ಪ್ರಾಯ-39 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಹಸ್ವಿಗುಳಿ, ತಾ: ಸಿದ್ದಾಪುರ ರವರು ದಿನಾಂಕ: 19-07-2021 ರಂದು 16-35 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

                      

ಸಿದ್ದಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 87/2021, ಕಲಂ: 15(ಎ), 32(3) ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ಮಾಸ್ತ್ಯಾ ತಂದೆ ದ್ಯಾವಾ ನಾಯ್ಕ, ಪ್ರಾಯ-76 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಸುಂಕತ್ತಿ, ತಾ: ಸಿದ್ದಾಪುರ. ಈತನು ದಿನಾಂಕ: 19-07-2021 ರಂದು 16-00 ಗಂಟೆಗೆ ಸಿದ್ದಾಪುರ ತಾಲೂಕಿನ ಸುಂಕತ್ತಿ ಊರಿನ ಕೊಪ್ಪದ ಕೇರಿಯಲ್ಲಿರುವ ತನ್ನ ಮನೆಯ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಅನಧೀಕೃತವಾಗಿ ಸಾರ್ವಜನಿಕರಿಗೆ ಮುಕ್ತವಾಗಿ ಮದ್ಯಸೇವನೆ ಮಾಡಲು ಅವಕಾಶ ಮಾಡಿ ಕೊಟ್ಟಿದ್ದಾಗ ಪಿರ್ಯಾದಿಯವರು ಸಿಬ್ಬಂದಿಗಳೊಂದಿಗೆ ಸೇರಿ ದಾಳಿ ಮಾಡಿದಾಗ 1). Captain Martins Special Whisky, 90 ML ಅಂತಾ ಬರೆದ ಮದ್ಯ ತುಂಬಿದ 04 ಪ್ಯಾಕೆಟ್ ಗಳು, ತಲಾ 1 ಕ್ಕೆ 35.13/- ರೂಪಾಯಿಯಂತೆ ಒಟ್ಟೂ ಅ||ಕಿ|| 140/- ರೂಪಾಯಿ, 2). Captain Martins Special Whisky, 90 ML ಅಂತಾ ಬರೆದ 02 ಮದ್ಯದ ಖಾಲಿ ಪ್ಯಾಕೆಟ್ ಗಳು, ಅ||ಕಿ|| 00.00/- ರೂಪಾಯಿ ಹಾಗೂ 3). 2 ಪ್ಲ್ಯಾಸ್ಟಿಕ್ ಗ್ಲಾಸ್ ಗಳು, ಅ||ಕಿ|| 00.00/- ರೂಪಾಯಿ ನೇದವುಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಮಂಜೇಶ್ವರ ವಿ. ಚಂದಾವರ, ಪಿ.ಎಸ್.ಐ, ಸಿದ್ದಾಪುರ ಪೊಲೀಸ್ ಠಾಣೆ ರವರು ದಿನಾಂಕ: 19-07-2021 ರಂದು 17-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 19-07-2021

at 00:00 hrs to 24:00 hrs

 

ಅಂಕೋಲಾ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 37/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಅಪರಿಚಿತ ಶ್ರೀ ಮಂಜುನಾಥ ತಂದೆ ವಿಠಲ್ ಶೆಟ್ಟಿ, ಪ್ರಾಯ-51 ವರ್ಷ, ಸಾ|| ಕುಂದಾಪುರ, ಉಡುಪಿ ಎಂಬುವವನಾಗಿದ್ದು, ಈತನು ದಿನಾಂಕ: 19-07-2021 ರಂದು 18-00 ಗಂಟೆಯಿಂದ 21-00 ಗಂಟೆಯ ನಡುವಿನ ಅವಧಿಯಲ್ಲಿ ಅಂಕೋಲಾ ತಾಲೂಕಿನ ಹುಲಿದೇವರವಾಡಾದಲ್ಲಿರುವ ಕೊಂಕಣ ರೈಲ್ವೆ ಹಳಿಯ ಮೇಲೆ ಚಲಿಸುತ್ತಿರುವ ರೈಲಿನಲ್ಲಿ ಪ್ರಯಾಣಿಸುತ್ತಿದ್ದವನು, ಬಾಗಿಲ ಬಳಿ ನಿಂತುಕೊಂಡಿದ್ದಾಗ ಚಲಿಸುತ್ತಿರುವ ರೈಲಿನಿಂದ ಆಕಸ್ಮಿಕವಾಗಿ ಅಥವಾ ಇನ್ನಾವುದೋ ಕಾರಣದಿಂದ ಬಿದ್ದು ಮುಖಕ್ಕೆ ಮತ್ತು ಬಲಗಾಲಿಗೆ ಗಂಭೀರ ಸ್ವರೂಪದ ಗಾಯವಾಗಿ ಮೃತಪಟ್ಟಿರುತ್ತಾನೆಯೇ ಹೊರತು ಆತನ ಮರಣದಲ್ಲಿ ಬೇರೇ ಯಾವುದೇ ಸಂಶಯ ಇರುವುದಿಲ್ಲ. ಈ ಕುರಿತು ಮುಂದಿನ ಕಾನೂನು ಕ್ರಮವನ್ನು ಕೈಗೊಳ್ಳಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಚಿರಾಗ ತಂದೆ ದೀಪಕ ಅರ್ಗೇಕರ, ಪ್ರಾಯ-31 ವರ್ಷ, ವೃತ್ತಿ-ಮಾರುತಿ ಸುಜುಕಿ ಶೋರೂಮ್ ನಲ್ಲಿ ಸೂಪರವೈಸರ್, ಸಾ|| ಹುಲಿದೇವರವಾಡಾ, ತಾ: ಅಂಕೋಲಾ, ಹಾಲಿ ಸಾ|| ಕಸಬಾ ಕೇಣಿ, ಕೇಣಿ, ತಾ: ಅಂಕೋಲಾ ರವರು ದಿನಾಂಕ: 19-07-2021 ರಂದು 21-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಹೊನ್ನಾವರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 24/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಬೀರಾ ತಂದೆ ಮಂಜುನಾಥ ಹುಲಸ್ವಾರ, ಪ್ರಾಯ-51 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕೆಳಗಿನಪಾಳ್ಯ, ತಾ: ಹೊನ್ನಾವರ. ಪಿರ್ಯಾದಿಯ ತಂದೆಯಾದ ಇವರು ದಿನಾಂಕ: 17-07-2021 ರಂದು ಬೆಳಿಗ್ಗೆ 11-15 ಗಂಟೆಯ ಸುಮಾರಿಗೆ ಹೊರಗಡೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಗಡೆ ಹೋದವರು ಮನೆಗೆ ವಾಪಸ್ ಬರದೇ ಎಲ್ಲಿಯೋ ಹೋಗಿ ಕಾಣೆಯಾದ ಕುರಿತು ಪಿರ್ಯಾದಿಯವರು ಕಾಣೆಯಾದ ತನ್ನ ತಂದೆಯವರನ್ನು ಹುಡುಕಿ ಕೊಡುವಂತೆ ಕೋರಿ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದಂತೆ ಹೊನ್ನಾವರ ಪೊಲೀಸ್ ಠಾಣಾ ಗುನ್ನಾ ನಂ: 194/2021 ಕಲಂ: ಮನುಷ್ಯ ಕಾಣೆ ನೇದರಂತೆ ಪ್ರಕರಣದ ದಾಖಲಾಗಿದ್ದು ಇರುತ್ತದೆ,

      ದಿನಾಂಕ: 19-07-2021 ರಂದು ಬೆಳಿಗ್ಗೆ 07-00 ಗಂಟೆಗೆ ಹೊನ್ನಾವರ ತಾಲೂಕಿನ ತಾರಿಬಾಗಿ ಚರ್ಚ್ ರೋಡ್ ಹತ್ತಿರ ಶರಾವತಿ ನದಿಯ ದಂಡೆಯಲ್ಲಿ ಪಿರ್ಯಾದಿಯ ತಂದೆಯವರು ಮೃತರಾಗಿ ಮೃತದೇಹ ಪತ್ತೆಯಾಗಿದ್ದು, ದಿನಾಂಕ: 17-07-2021 ರಂದು ಬೆಳಿಗ್ಗೆ 11-15 ಗಂಟೆಯಿಂದ ದಿನಾಂಕ: 19-07-2021 ರಂದು 07-00 ಗಂಟೆಯ ನಡುವಿನ ಅವಧಿಯಲ್ಲಿ ಕಾಣೆಯಾದ ಶ್ರೀ ಬೀರಾ ತಂದೆ ಮಂಜುನಾಥ ಹುಲಸ್ವಾರ ಇವರು ಹೊನ್ನಾವರ ತಾಲೂಕಿನ ಚರ್ಚ್ ರೋಡ್ ಹತ್ತಿರ ತಾರಿಬಾಗಿಲನ ಶರಾವತಿ ನದಿಯ ಹತ್ತಿರ ಬಹಿರ್ದೆಸೆಗೋ ಅಥವಾ ಇನ್ನಾವುದೋ ಕಾರಣಕ್ಕೆ ನೀರಿಗೆ ಇಳಿದವರು, ನೀರಿನಲ್ಲಿ ಮುಳುಗಿ ಮೃತಪಟ್ಟು ಮೃತ ದೇಹವು ಪತ್ತೆಯಾಗಿದ್ದು, ಪಿರ್ಯಾದಿಯು ತನ್ನ ತಂದೆಯ ಸಾವಿನಲ್ಲಿ ಮತ್ತಾವುದೇ ಸಂಶಯ ಇರುವುದಿಲ್ಲ, ಮೃತದೇಹದ ಮೇಲೆ ಮುಂದಿನ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀಮತಿ ಉಷಾ ಕೋಂ. ರವಿ ಹುಲಸ್ವಾರ, ಪ್ರಾಯ-29 ವರ್ಷ, ವೃತ್ತಿ-ಕಂಪ್ಯೂಟರ್ ಆಪರೇಟರ್, ಸಾ|| ಕೆಳಗಿನಪಾಳ್ಯ, ತಾ: ಹೊನ್ನಾವರ ರವರು ದಿನಾಂಕ: 19-07-2021 ರಂದು 08-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======


 

 

ಇತ್ತೀಚಿನ ನವೀಕರಣ​ : 20-07-2021 06:01 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080