ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 19-11-2021

at 00:00 hrs to 24:00 hrs

 

ಕಾರವಾರ ಶಹರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 97/2021, ಕಲಂ: 324, 504, 506 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ದೀಪಕ ತಂದೆ ರಾಮಾ ಮೋರ್ಜೆ, ಸಾ|| ನದಿವಾಡ, ಕೋಡಿಭಾಗ, ಕಾರವಾರ. ಈತನು ಪಿರ್ಯಾದಿಯವರ ಗಂಡನ ಅಣ್ಣನಾಗಿದ್ದು, ಕಾರವಾರ ಕೋಡಿಬಾಗದ ನದಿವಾಡದಲ್ಲಿ ಪಿರ್ಯಾದಿಯವರ ಕುಟುಂಬ ಹಾಗೂ ಪಿರ್ಯಾದಿಯವರ ಗಂಡನ ಅಣ್ಣನ ಕುಟುಂಬದವರು ಕೂಡಿ ಒಂದೇ ಮನೆಯಲ್ಲಿ ವಾಸವಾಗಿರುತ್ತಾರೆ. ಹೀಗಿರುವಾಗ ದಿನಾಂಕ: 17-11-2021 ರಂದು ಬೆಳಿಗ್ಗೆ 09-30 ಗಂಟೆಯ ವೇಳೆಗೆ ನಮೂದಿತ ಆರೋಪಿತನು ಸುಖಾಸುಮ್ಮನೆ ಜಗಳ ತೆಗೆದು ‘ನೀವೆಲ್ಲರೂ ಸೇರಿ ನನ್ನ ಮನೆಯನ್ನು ಕಬ್ಜ ಮಾಡಿಕೊಂಡಿರುವಿರಿ. ಮನೆಯ ಹತ್ತಿರವಿರುವ ಗಣಪತಿ ಮಾಡುವ ಶೆಡ್ ನ್ನು ನನಗೆ ಕೊಡು, ಹಾಗೂ ಮನೆಯನ್ನೂ ಸಹ ನನ್ನ ಹೆಸರಿಗೆ ಮಾಡು’ ಅಂತಾ ಹೇಳಿದಾಗ ಪಿರ್ಯಾದಿಯವರ ಗಂಡ ವಿಷ್ಣುವರ್ಧನ್ ಇವರು ‘ನಿನ್ನ ಹೆಸರಿಗೆ ಅದನ್ನೆಲ್ಲಾ ಮಾಡಲಿಕ್ಕೆ ಆಗುವುದಿಲ್ಲ. ನಾವಿಬ್ಬರೂ ಸೇರಿ ಅದನ್ನು ಸಮನಾಗಿ ಹಂಚಿಕೊಳ್ಳೋಣ’ ಎಂದಾಗ ಆರೋಪಿತನು ಒಮ್ಮೆಲೇ ಸಿಟ್ಟಿಗೆದ್ದು ವಿಷ್ಣುವರ್ಧನ ಈತನಿಗೆ ಅವಾಚ್ಯ ಶಬ್ದಗಳಿಂದ ಬೈಯ್ದು, ಅಲ್ಲೇ ಪಕ್ಕದಲ್ಲಿದ್ದ ಕತ್ತಿಯಿಂದ ತಲೆಗೆ ಹೊಡೆದು ರಕ್ತದ ಗಾಯವನ್ನುಂಟು ಮಾಡಿ, ‘ನಿನ್ನನ್ನು ಜೀವ ಸಹಿತವಾಗಿ ಬಿಡುವುದಿಲ್ಲ’ ಅಂತಾ ಬೆದರಿಕೆ ಹಾಕಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀಮತಿ ಪ್ರಫುಲ್ಲಾ ವಿಷ್ಣುವರ್ಧನ್ ಮೋರ್ಜೆ, ಪ್ರಾಯ-33 ವರ್ಷ, ವೃತ್ತಿ-ಗೃಹಿಣಿ, ಸಾ|| ನದಿವಾಡಾ, ಕೋಡಿಬಾಗ, ಕಾರವಾರ ರವರು ದಿನಾಂಕ: 19-11-2021 ರಂದು 13-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಚಿತ್ತಾಕುಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 56/2021, ಕಲಂ: 32, 34 ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ಪ್ರಕಾಶ ತಂದೆ ರಾಯು ನಾಯ್ಕ, ಪ್ರಾಯ-45 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ನಾಗಪೊಂಡ, ಸದಾಶಿವಗಡ, ಕಾರವಾರ. ಈತನು ದಿನಾಂಕ: 19-11-2021 ರಂದು 14-40 ಗಂಟೆಗೆ ತನ್ನ ತಾಬಾ ಯಾವುದೇ ಪಾಸ್ ಅಥವಾ ಪರ್ಮಿಟ್ ಇಲ್ಲದೇ 1). GOA’S special Fenny COCONUT FENNY 750 ML for sale in Goa ಅಂತಾ ನಮೂದಿದ್ದ ಒಟ್ಟೂ ಸರಾಯಿ  ತುಂಬಿದ ಪ್ಲಾಸ್ಟಿಕ್ ಬಾಟಲಿ-09, ಒಂದು ಬಾಟಲಿಗೆ 200/- ರೂಪಾಯಿಯಂತೆ 09 ಬಾಟಲಿಗಳ ಬೆಲೆ 1,800/- ರೂಪಾಯಿ, 2). LIFE HOUSE premium blended malt WHISKY 750 ML for sale in Goa ಅಂತಾ ನಮೂದಿದ್ದ ಸರಾಯಿ ತುಂಬಿದ ಪ್ಲಾಸ್ಟಿಕ್ ಬಾಟಲಿ-08, ಒಂದು ಬಾಟಲಿಗೆ 200/- ರೂಪಾಯಿಯಂತೆ 08 ಬಾಟಲಿಗಳ ಬೆಲೆ 1,600/- ರೂಪಾಯಿ. ಒಟ್ಟೂ ಸುಮಾರು 3,400/- ರೂಪಾಯಿ ಬೆಲೆಬಾಳುವ ಗೋವಾ ರಾಜ್ಯ ತಯಾರಿಕೆಯ ಒಟ್ಟು 17 ಸರಾಯಿ ತುಂಬಿದ ಪ್ಲಾಸ್ಟಿಕ್ ಬಾಟಲಿಗಳನ್ನು ಎರಡು ಬಟ್ಟೆಯ ಚೀಲದಲ್ಲಿ ತುಂಬಿಕೊಂಡು ಸಾಗಾಟ ಮಾಡುತ್ತಿದ್ದಾಗ ಸದರಿ ಅಬಕಾರಿ ಸ್ವತ್ತುಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಗೋವಿಂದರಾಜ ಟಿ. ದಾಸರಿ, ಪೊಲೀಸ ವೃತ್ತ ನಿರೀಕ್ಷಕರು, ಕದ್ರಾ ವೃತ್ತ, ಕದ್ರಾ ರವರು ದಿನಾಂಕ: 19-11-2021 ರಂದು 16-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 141/2021, ಕಲಂ: 78(3) ಕರ್ನಾಟಕ ಪೊಲೀಸ್ ಕಾಯ್ದೆ ನೇದ್ದರ ವಿವರ...... ನಮೂದಿತ ಆರೋಪಿತ ವಿನೋದ ತಂದೆ ಮಹಾಬಲೇಶ್ವರ ಶೆಟ್ಟಿ, ಪ್ರಾಯ-23 ವರ್ಷ, ವೃತ್ತಿ-ವ್ಯಾಪಾರ, ಸಾ|| ಮೀನು ಮಾರುಕಟ್ಟೆ ಹತ್ತಿರ, ಸರ್ಪನಕಟ್ಟಾ, ತಾ: ಭಟ್ಕಳ. ಈತನು ದಿನಾಂಕ: 19-11-2021 ರಂದು 12-40 ಗಂಟೆಯ ಸಮಯಕ್ಕೆ ಭಟ್ಕಳದ ಸರ್ಪನಕಟ್ಟಾ ಮೀನು ಮಾರುಕಟ್ಟೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ತನ್ನ ಲಾಭಕ್ಕೋಸ್ಕರ 01/- ರೂಪಾಯಿಗೆ 70/- ರೂಪಾಯಿ ಕೊಡುವ ಶರತ್ತಿನ ಮೇಲೆ ಸಾರ್ವಜನಿಕರಿಂದ ಹಣ ಪಡೆದು ಅಂಕೆ-ಸಂಖ್ಯೆಗಳ ಮೇಲೆ ಹಣದ ಪಂಥ ಕಟ್ಟಿಸಿ ಓ.ಸಿ ಜುಗಾರಾಟ ನಡೆಸುತ್ತಿದ್ದಾಗ ಓ.ಸಿ ಚೀಟಿ-01, ಬಾಲ್ ಪೆನ್-01 ಹಾಗೂ ನಗದು ಹಣ 540/- ರೂಪಾಯಿಯೊಂದಿಗೆ ಆರೋಪಿತನು ಸ್ಥಳದಲ್ಲಿ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಕಮಾರಿ: ರತ್ನಾ ಎಸ್. ಕುರಿ, ಡಬ್ಲ್ಯೂ.ಪಿ.ಎಸ್.ಐ (ತನಿಖೆ), ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ ರವರು ದಿನಾಂಕ: 19-11-2021 ರಂದು 14-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ದಾಂಡೇಲಿ ನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 92/2021, ಕಲಂ: 323, 324, 504, 506 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ನಾಗರಾಜ ತಂದೆ ಮಾರುತಿ ಗಾಡಿವಡ್ಡರ, ಪ್ರಾಯ-23 ವರ್ಷ, ವೃತ್ತಿ-ರ್ಯಾಪ್ಟಿಂಗ್ ಕೆಲಸ, ಸಾ|| 5 ನೇ ಕ್ರಾಸ್, ಬಾಂಬೇಚಾಳ, ತಾ: ದಾಂಡೇಲಿ. ಈತನು ದಿನಾಂಕ: 18-11-2021 ರಂದು 22-30 ಗಂಟೆಯ ಸುಮಾರಿಗೆ ದಾಂಡೇಲಿಯ ಕೆ.ಸಿ ಸರ್ಕಲ್ ಹತ್ತಿರದ ನಾಜ್ ಹೋಟೆಲಿಗೆ ಊಟಕ್ಕೆ ಹೋದಾಗ ಯಾವುದೋ ವಿಷಯಕ್ಕೆ ಪಿರ್ಯಾದಿಯನ್ನು ಉದ್ದೇಶಿಸಿ ಏಕಾಏಕಿ ‘ಬೋಸಡಿಕೆ, ನನಗೆ ಆವಾಜ್ ಹಾಕುತ್ತೀಯಾ?’ ಅಂತಾ ಅವಾಚ್ಯವಾಗಿ ಬೈಯ್ಯುತ್ತಾ ಇರುವಾಗ ಪಿರ್ಯಾದಿಯು ‘ನನಗೆ ಯಾಕೆ ಬೈಯ್ಯುತ್ತಿಯಾ?’ ಅಂತಾ ಕೇಳಿದ್ದಕ್ಕೆ ಆರೋಪಿ ಮತ್ತು ಪಿರ್ಯಾದಿಗೆ ಮಾತಿಗೆ ಮಾತಾಗಿ ಇಬ್ಬರೂ ನಾಜ್ ಹೋಟೆಲಿನಿಂದ ಹೊರಗಡೆ ಬಂದಿದ್ದು, ಆರೋಪಿತನು ಕೈಯಿಂದ ಪಿರ್ಯಾದಿಯ ಮುಖಕ್ಕೆ ಹೊಡೆದಿದ್ದಲ್ಲದೇ, ತಾನು ಕೈಯಲ್ಲಿ ಹಿಡಿದುಕೊಂಡು ಬಂದಿದ್ದ ಗಾಜಿನ ಬಾಟಲಿಯನ್ನು ತೆಗೆದುಕೊಂಡು ಪಿರ್ಯಾದಿಯ ತಲೆಗೆ ಹೊಡೆದು ಗಾಯನೋವು ಪಡಿಸಿದ್ದಲ್ಲದೇ, ‘ನೀನು ಇವತ್ತು ಉಳಿದುಕೊಂಡೆ. ಇನ್ನೊಮ್ಮೆ ಸಿಕ್ಕಾಗ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ’ ಅಂತಾ ಜೀವದ ಬೆದರಿಕೆ ಹಾಕಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ನಾಗೇಂದ್ರ ತಂದೆ ರಾಜು ಪೂಜಾರಿ, ಪ್ರಾಯ-26 ವರ್ಷ, ವೃತ್ತಿ-ಅಮೆಜಾನ್ ದಲ್ಲಿ ಕೆಲಸ, ಸಾ|| ಬೈಕೋ ಡಾಕ್ಟರ್ ಮನೆಯ ಮುಂದೆ, ಟೌನ್ ಶಿಪ್, ತಾ: ದಾಂಡೇಲಿ ರವರು ದಿನಾಂಕ: 19-11-2021 ರಂದು 00-05 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಸಿದ್ದಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 145/2021, ಕಲಂ: 341, 324, 307, 426, 504, 506 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಸೋಮಶೇಖರ ತಂದೆ ಲಕ್ಷ್ಮಣ ನಾಯ್ಕ, ಪ್ರಾಯ-65 ವರ್ಷ, ವೃತ್ತಿ-ರೈತಾಬಿ ಕೆಲಸ, 2]. ವಾಸುದೇವ ತಂದೆ ಸೋಮಶೇಖರ ನಾಯ್ಕ, ಪ್ರಾಯ-29 ವರ್ಷ, ವೃತ್ತಿ-ನೌಕರಿ, 3]. ಕಾಳಿಪ್ರಸಾದ ತಂದೆ ಸೋಮಶೇಖರ ನಾಯ್ಕ, ಪ್ರಾಯ-31 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| (ಎಲ್ಲರೂ) ಕೊಂಡ್ಲಿ, ತಾ: ಸಿದ್ದಾಪುರ. ಈ ನಮೂದಿತ ಆರೋಪಿತರ ಪೈಕಿ ಆರೋಪಿ  1 ನೇಯವನು ಪಿರ್ಯಾದಿಯ ಖಾಸಾ ತಮ್ಮನಿದ್ದು,  ಆರೋಪಿ 2 ಹಾಗೂ 3 ನೇಯವರು ಆರೋಪಿ 1 ನೇಯವನ ಮಕ್ಕಳಿರುತ್ತಾರೆ. ಸದ್ರಿ ಆರೋಪಿತರು ಪಿರ್ಯಾದಿಗೆ ಹಾಗೂ ಪಿರ್ಯಾದಿಯ ಕುಟುಂಬದವರಿಗೆ ಒಂದಿಲ್ಲೊಂದು ರೀತಿಯಿಂದ ತೊಂದರೆ ನೀಡುತ್ತಾ ಬಂದಿದ್ದಲ್ಲದೇ, ಪಿರ್ಯಾದಿಯ ಪ್ರತ್ಯಕ್ಷ ಕಬ್ಜಾ ವೈವಾಟಿನಲ್ಲಿರುವ ಕೊಂಡ್ಲಿ ಗ್ರಾಮದ ಸರ್ವೇ ನಂ: 308ಅ ಪೈಕಿ ಅಜಮಾಸು 4-00-00 ಅತಿಕ್ರಮಣ ಕ್ಷೇತ್ರಕ್ಕೆ ಒಂದಿಲ್ಲೊಂದು ರೀತಿಯಿಂದ ತೊಂದರೆ ನೀಡುತ್ತಾ, ದಿನಾಂಕ: 16-10-2021 ರಂದು ಬೆಳಿಗ್ಗೆ 11-00 ಗಂಟೆಯ ಸುಮಾರಿಗೆ ಆರೋಪಿತರು ಕೆಲವರು ಅಪರಿಚಿತ ಗೂಂಡಾ ವ್ಯಕ್ತಿಗಳೊಂದಿಗೆ ಕತ್ತಿ, ಕೊಡಲಿ, ಬಡಿಗೆ ಮುಂತಾದ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಪಿರ್ಯಾದಿಯ ಕಬ್ಜಾ ವೈವಾಟಿನಲ್ಲಿರುವ ಕೊಂಡ್ಲಿ ಗ್ರಾಮದ ಸರ್ವೇ ನಂ: 308ಅ ಪೈಕಿ ಅಜಮಾಸು 4-00-00 ಕ್ಷೇತ್ರದಲ್ಲಿ ಅಕ್ರಮವಾಗಿ ಪ್ರವೇಶ ಮಾಡಿ, ಪಿರ್ಯಾದಿ ಹಾಗೂ ಪಿರ್ಯಾದಿಯ ಕುಟುಂಬದವರನ್ನು ಉದ್ದೇಶಿಸಿ ’ಬೋಳಿ ಮಗನೆ, ಸೂಳೆ ಮಗನೆ’ ಅಂತಾ ಅವಾಚ್ಯವಾಗಿ ಬೈಯ್ದು, ಕೊಲೆ ಮಾಡುವದಾಗಿ ಜೀವ ಬೇದರಿಕೆ ಹಾಕಿ, ಪಿರ್ಯಾದಿ ಹಾಗೂ ಪಿರ್ಯಾದಿಯ ಕುಟುಂಬದವರು ಅತಿಕ್ರಮಣ ಸ್ಥಳದಲ್ಲಿ ಬೆಳೆಸಿದ ತೆಂಗು, ಮಾವು, ಅಡಿಕೆ ಮುಂತಾದ ಬೆಲೆಬಾಳುವ 3-4 ವರ್ಷದ ಗಿಡಗಳನ್ನು ಕಿತ್ತು ಹಾಕಿ, ಬೇಲಿಯನ್ನು ಸಹ ಭಾಗಶಃ ನಾಶ ಪಡಿಸಿದ್ದು ಇರುತ್ತದೆ. ತದನಂತರ ಆರೋಪಿತರು ಪಿರ್ಯಾದಿ ಹಾಗೂ ಪಿರ್ಯಾದಿಯ ಮಗನಾದ ಬಾಲಚಂದ್ರ ಈಶ್ವರ ನಾಯ್ಕ ಇವರ ಮೈಮೇಲೆ ಏರಿ ಬಂದು ‘ನಿಮ್ಮನ್ನು ಜೀವ ಸಹಿತ ಬಿಡುವದಿಲ್ಲ.್ಲ ಈಗಲೇ ಕೊಲೆ ಮಾಡುತ್ತೇವೆ’ ಎನ್ನುವುದಾಗಿ ಹೇಳಿ ಆರೋಪಿ 1 ಮತ್ತು 2 ನೇಯವರು ಪಿರ್ಯಾದಿಯನ್ನು ಹಿಡಿದು ಪಿರ್ಯಾದಿಗೆ ಕೊಲೆ ಮಾಡುವುದಾಗಿ ಹೇಳಿ ಪಿರ್ಯಾದಿಯ ಶರ್ಟಿನ ಕಾಲರ್ ಹಿಡಿದು ಕುತ್ತಿಗೆ ಅದುಮಲು ಪ್ರಾರಂಭಿಸಿದ್ದು, ಆರೋಪಿ 3 ನೇಯವನು ಬಡಿಗೆಯಿಂದ ಪಿರ್ಯಾದಿಯ ಮಗನಾದ ಬಾಲಚಂದ್ರ ಈತನ ಕೈಗೆ ಹೊಡೆದು ಗಾಯನೋವು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಈಶ್ವರ ತಂದೆ ಲಕ್ಷ್ಮಣ ನಾಯ್ಕ, ಪ್ರಾಯ-65 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಕೊಂಡ್ಲಿ, ತಾ: ಸಿದ್ದಾಪುರ ರವರು ದಿನಾಂಕ: 19-11-2021 ರಂದು 17-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಬನವಾಸಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 110/2021, ಕಲಂ: 420 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ರಾಘವೇಂದ್ರ ತಂದೆ ಗೋವಿಂದ ಪೂಜಾರಿ, ಸಾ|| ಕುಂದಾಪುರ, ಉಡುಪಿ. ಈತನು ಪಿರ್ಯಾದಿಗೆ ಪರಿಚಯವಾದವನು, ‘ಅಬಕಾರಿ ಇಲಾಖೆಯಲ್ಲಿ ಪಿ.ಎಸ್.ಐ ಹುದ್ದೆ ಕೊಡಿಸುತ್ತೇನೆ. ಅದಕ್ಕೆ ಒಟ್ಟು 10 ಲಕ್ಷ ಹಣವನ್ನು ಕೊಡಬೇಕಾಗುತ್ತದೆ. ಮೊದಲು 3 ಲಕ್ಷ ಹಣವನ್ನು ಕೊಡಿ, ನಂತರ ನೇಮಕಾತಿ ಪತ್ರ ಬಂದ ಕೂಡಲೇ ಉಳಿದ ಹಣವನ್ನು ಕೊಡಿ’ ಎಂದು  2018 ರಲ್ಲಿ ಪಿರ್ಯಾದಿಯವರಿಗೆ ನಂಬಿಸಿ, ಪಿರ್ಯಾದಿಯ ಖಾತೆ ನಂ: 04911080XXXXX ನೇದರಿಂದ ಆರೋಪಿತನ ಹೆಸರಿಗೆ ಇರುವ ಎಚ್.ಡಿ.ಎಫ್.ಸಿ ಬ್ಯಾಂಕ್ ಖಾತೆ ನಂ: 50100186456554 ನೇದಕ್ಕೆ ದಿನಾಂಕ: 14-11-2018 ರಂದು 2,00,000/- ರೂಪಾಯಿ ಹಾಗೂ ದಿನಾಂಕ: 15-11-2018 ರಂದು ಅದೇ ಖಾತೆಗೆ 20,000/- ರೂಪಾಯಿ ಹಾಗೂ 23-01-2019 ರಂದು 50,000/- ರೂಪಾಯಿ, ದಿನಾಂಕ: 26-03-2019 ರಂದು 30,000/- ರೂಪಾಯಿ. ಹೀಗೆ ಒಟ್ಟೂ 3,00,000/- ರೂಪಾಯಿ ಪಡೆಕೊಂಡು, ಪಿರ್ಯಾದಿಯವರಿಗೆ ಈವರೆಗೆ ನೌಕರಿ ಕೊಡಿಸದೇ ಮತ್ತು ಪಿರ್ಯಾದಿವಯರು ನೀಡಿದ್ದ 3,00,000/- ರೂಪಾಯಿ ಹಣವನ್ನು ಸಹ ಮರಳಿ ನೀಡದೇ ಪಿರ್ಯಾದಿಯವರಿಗೆ ಮೋಸ ಮಾಡಿದ ಬಗ್ಗೆ ಪಿರ್ಯಾದಿ ಶ್ರೀ ರುದ್ರೇಶ ತಂದೆ ಫಾಲಾಕ್ಷಪ್ಪ ಕಲ್ಮಟ್ಲೇರ, ಪ್ರಾಯ-27 ವರ್ಷ, ವೃತ್ತಿ-ಖಾಸಗಿ ಕಂಪನಿಯಲ್ಲಿ ಕೆಲಸ, ಸಾ|| ಕಾಳಂಗಿ, ತಾ: ಶಿರಸಿ ರವರು ದಿನಾಂಕ: 19-11-2021 ರಂದು 19-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಬನವಾಸಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 111/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ದತ್ತಾತ್ರ್ರೇಯ ತಂದೆ ಧರ್ಮ ಮಡಿವಾಳ, ಪ್ರಾಯ-42 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಮಳಲಗಾಂವ, ತಾ: ಶಿರಸಿ, ಹಾಲಿ ಸಾ|| ಹಬ್ಬುವಾಡ, ಕಾರವಾರ (ಹೋಂಡಾ ಎಕ್ಟಿವಾ ಸ್ಕೂಟಿ ನಂ: ಕೆ.ಎ-31/ವಾಯ್-6584 ನೇದರ ಸವಾರ). ಈತನು ದಿನಾಂಕ: 10-11-2021 ರಂದು 15-30 ಗಂಟೆಗೆ ತನ್ನ ಹೋಂಡಾ ಎಕ್ಟಿವಾ ಸ್ಕೂಟಿ ನಂ: ಕೆ.ಎ-31/ವಾಯ್-6584 ನೇದರ ಹಿಂಬದಿಯಲ್ಲಿ ಪಿರ್ಯಾದಿಯವರನ್ನು ಕೂರಿಸಿಕೊಂಡು ಮಳಲಗಾಂವ ಕಡೆಯಿಂದ ಶಿರಸಿ ಕಡೆಗೆ ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿ, ಮಳಲಗಾಂವದ ಸೋಮನಕಟ್ಟೆ ರಸ್ತೆಯ ತಿರುವಿನ ರಸ್ತೆಯಲ್ಲಿ ತನ್ನ ಸ್ಕೂಟಿ ಮೇಲಿನ ನಿಯಂತ್ರಣ ಕಳೆದುಕೊಂಡು ಸ್ಕೂಟಿ ಸಮೇತ ಪಲ್ಟಿ ಪಡಿಸಿಕೊಂಡು, ತನಗೆ ತಲೆಗೆ ಮತ್ತು ಭುಜಕ್ಕೆ ರಕ್ತದ ಗಾಯನೋವು ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ವಿನಯ ತಂದೆ ಚಂದ್ರು ಮಡಿವಾಳ, ಪ್ರಾಯ-22 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕೋಟೇಶ್ವರ ದೇವಸ್ಥಾನ ಹತ್ತಿರ, ಹೆಮ್ಮಾಡಿ, ತಾ: ಯಲ್ಲಾಪುರ ರವರು ದಿನಾಂಕ: 19-11-2021 ರಂದು 21-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 19-11-2021

at 00:00 hrs to 24:00 hrs

 

ಯಲ್ಲಾಪುರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 38/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ರಾಜೇಂದ್ರ ತಂದೆ ಭೀಮರಾವ್ ಭಾಗೋಡಿ, ಪ್ರಾಯ-32 ವರ್ಷ, ವೃತ್ತಿ-ಪಿ.ಡಬ್ಲೂ.ಡಿ ಇಲಾಖೆ ನೌಕರ, ಸಾ|| ರಾಜಾಪೂರ ಇಟ್ಟಂಗಿ ಬಟ್ಟಿ, ಶಾಭಾಜಿ ರೋಡ್, ಗುಲ್ಬರ್ಗಾ, ಹಾಲಿ ಸಾ|| ಪಿ.ಡಬ್ಲ್ಯೂ.ಡಿ ಕ್ವಾರ್ಟರ್ಸ್, ತಾ: ಯಲ್ಲಾಪುರ. ಪಿರ್ಯಾದಿಯವರ ಗಂಡನಾದ ಈತನು ಯಲ್ಲಾಪುರ ಪಟ್ಟಣದ ಲೋಕೋಪಯೋಗಿ ಇಲಾಖೆಯಲ್ಲಿ ರಾತ್ರಿ ಆಫೀಸ್ ಕಾವಲು ಕರ್ತವ್ಯ ನಿರ್ವಹಿಸುತ್ತಾ ಇದ್ದವನು, ಕಳೆದ  ಒಂದು ತಿಂಗಳಿನಿಂದ ಎದೆನೋವಿನಿಂದ  ಬಳಲುತ್ತಿದ್ದವನು, ದಿನಾಂಕ: 18-11-2021 ರಂದು ಸಾಯಂಕಾಲ 05-30 ಗಂಟೆಗೆ ಮನೆಯಿಂದ ರಾತ್ರಿ ಕಛೇರಿ ಕಾವಲು ಕರ್ತವ್ಯಕ್ಕೆ ಯಲ್ಲಾಪುರ ಪಿ.ಡಬ್ಲೂ.ಡಿ ಕಛೇರಿಗೆ ಹೋಗಿ ರಾತ್ರಿ ಇಡೀ ಕರ್ತವ್ಯ ನಿರ್ವಹಿಸಿ, ದಿನಾಂಕ: 19-11-2021 ರಂದು ಬೆಳಿಗ್ಗೆ ಮನೆಗೆ ಬಂದು ಪ್ರೆಶ್ ಆಗಿ ಮತ್ತೆ 06-00 ಗಂಟೆಗೆ ಕರ್ತವ್ಯಕ್ಕೆ ಹೋಗಿ  ಪಿ.ಡಬ್ಲೂ.ಡಿ ಕಛೇರಿಯ ಕಾರ್ಯ ನಿರ್ವಾಹಕ ಅಭಿಯಂತರರ ಚೇಂಬರಿನಲ್ಲಿ ಆಕಸ್ಮಿಕವಾಗಿ ಬಿದ್ದೋ ಅಥವಾ ಇನ್ನಾವುದೋ ರೀತಿಯಿಂದ ಮೃತಪಟ್ಟಿದ್ದು, ಈ ಕುರಿತು ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀಮತಿ ಸೀಮಾ ಕೋಂ. ರಾಜೇಂದ್ರ ಭಾಗೋಡಿ, ಪ್ರಾಯ-26 ವರ್ಷ, ವೃತ್ತಿ-ಮನೆ ಕೆಲಸ, ಸಾ|| ರಾಜಾಪೂರ ಇಟ್ಟಂಗಿ, ಶಾಭಾಜಿ ರೋಡ್, ಗುಲ್ಬರ್ಗಾ, ಹಾಲಿ ಸಾ|| ಪಿ.ಡಬ್ಲ್ಯೂ.ಡಿ ಕ್ವಾರ್ಟರ್ಸ್, ತಾ: ಯಲ್ಲಾಪುರ ರವರು ದಿನಾಂಕ: 19-11-2021 ರಂದು 13-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಬನವಾಸಿ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 21/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಗಂಗಾಧರ ತಂದೆ ಫಕ್ಕೀರಪ್ಪ ಶೇಷಣ್ಣನವರ, ಪ್ರಾಯ-58 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ನರೂರ, ತಾ: ಶಿರಸಿ. ಈತನು ತಮ್ಮ ಗದ್ದೆಯಲ್ಲಿ ಬೆಳೆದ ಶುಂಠಿ ಹಾಗೂ ಭತ್ತದ ಬೆಳೆಗಳು ಅಕಾಲಿಕ ಮಳೆಯಿಂದ ಹಾಗೂ ರೋಗದ ಬಾಧೆಯಿಂದ ಹಾಳಾಗಿದ್ದು, ಇದನ್ನು ಮನಸ್ಸಿಗೆ ಹಚ್ಚಿಕೊಂಡು ಸಾಲವನ್ನು ತೀರಿಸುವುದು ಹೇಗೆ ಅಂತಾ ಮನನೊಂದು ಜೀವನದಲ್ಲಿ ಜಿಗುಪ್ಸೆ ಹೊಂದಿ, ದಿನಾಂಕ: 17-11-2021 ರಂದು ಸಂಜೆ 07-00 ಗಂಟೆಯಿಂದ 08-00 ಗಂಟೆಯ ನಡುವಿನ ಅವಧಿಯಲ್ಲಿ ತಮ್ಮ ಹೊಲದ ಗುಡಿಸಿಲಿನಲ್ಲಿ ಬೆಳೆಗೆ ಸಿಂಪಡಿಸುವ ಕೀಟನಾಶಕವನ್ನು ಸೇವಿಸಿದವನಿಗೆ, ಉಪಚಾರದ ಕುರಿತು  ಶಿರಸಿಯ ಸಿಟಿ ಸ್ಕ್ಯಾನ್ ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿ ಉಪಚಾರ ಫಲಕಾರಿಯಾಗದೇ ದಿನಾಂಕ: 19-11-2021 ರಂದು ಬೆಳಿಗ್ಗೆ 08-41 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ. ಇದರ ಹೊರತು ಅವರ ಮರಣದಲ್ಲಿ ಬೇರೇ ಯಾವುದೇ ಸಂಶಯ ಇರುವುದಿಲ್ಲ ಎಂಬ ಬಗ್ಗೆ ಪಿರ್ಯಾದಿ ಶ್ರೀ ದಯಾನಂದ ತಂದೆ ಗಂಗಾಧರ ಶೇಷಣ್ಣನವರ, ಪ್ರಾಯ-31 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ನರೂರ, ತಾ: ಶಿರಸಿ ರವರು ದಿನಾಂಕ: 19-11-2021 ರಂದು 10-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

======||||||||======

 

 

 

 

 

 

ಇತ್ತೀಚಿನ ನವೀಕರಣ​ : 21-11-2021 06:11 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080