Daily District Crime Report
Date:- 19-10-2021
at 00:00 hrs to 24:00 hrs
ಗೋಕರ್ಣ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 75/2021, ಕಲಂ: 279, 337, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಪಾಂಡುರಂಗ ತಂದೆ ವಿನಾಯಕ ಭಟ್ಟ, ಸಾ|| ಚಿನ್ನದಕೇರಿ, ಗೋಕರ್ಣ, ತಾ: ಕುಮಟಾ (ಹೋಂಡಾ ಎಕ್ಟಿವಾ ಮೋಟಾರ್ ಸೈಕಲ್ ನಂ: ಕೆ.ಎ-31/ಎಸ್-6343 ನೇದರ ಸವಾರ). ಈತನು ದಿನಾಂಕ: 18-10-2021 ರಂದು ಬೆಳಿಗ್ಗೆ 11-30 ಗಂಟೆಗೆ ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯ ದೇವಣ ಗ್ರಾಮದ ಹೊಸಕಟ್ಟಾ ಕ್ರಾಸ್ ಹತ್ತಿರ ಗೋಕರ್ಣದಿಂದ ಮಾದನಗೇರಿಯ ರಾಜ್ಯ ಹೆದ್ದಾರಿ ರಸ್ತೆಯ ಮೇಲೆ ತನ್ನ ಹೋಂಡಾ ಎಕ್ಟಿವಾ ಮೋಟಾರ್ ಸೈಕಲ್ ನಂ: ಕೆ.ಎ-31/ಎಸ್-6343 ನೇದನ್ನು ಹೊಸ್ಕಟ್ಟಾ ಕ್ರಾಸ್ ಹತ್ತಿರ ರಸ್ತೆಯ ತಿರುವಿನಲ್ಲಿ ಗೋಕರ್ಣ ಕಡೆಯಿಂದ ಮಾದನಗೇರಿ ಕಡೆಗೆ ಜೋರಾಗಿ ಚಲಾಯಿಸಿಕೊಂಡು ರಸ್ತೆಯ ತೀರಾ ಬಲಕ್ಕೆ ಬಂದವನು, ಮಾದನಗೇರಿ ಕಡೆಯಿಂದ ಗೋಕರ್ಣ ಕಡೆಗೆ ಬರುತ್ತಿದ್ದ ಮಿನಿ ಗೂಡ್ಸ್ ಲಾರಿ ನಂ: ಕೆ.ಎ-47/5581 ನೇದಕ್ಕೆ ಹಿಂಬದಿಯ ಬಲ ಸೈಡಿನ ಟಾಯರ್ ಹತ್ತಿರ ಬಂದು ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಮೋಟಾರ್ ಸೈಕಲ್ ಸವಾರನು ತನಗೆ ಬಲಗಾಲಿನ ಮಂಡಿಯ ಹತ್ತಿರ ಒಳಗಡೆ ಗಂಭೀರ ಸ್ವರೂಪದ ಗಾಯ ಮತ್ತು ಮೈ ಕೈಗೆ ಅಲ್ಲಲ್ಲಿ ತೆರಚಿದ ಗಾಯನೋವು ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ಮಹೇಶ ತಂದೆ ಉದ್ದಂಡ ನಾಯಕ, ಪ್ರಾಯ-40 ವರ್ಷ, ವೃತ್ತಿ-ವ್ಯಾಪಾರ, ಸಾ|| ಕೆಳಗಿನ ಹಿರೇಗುತ್ತಿ, ತಾ: ಕುಮಟಾ ರವರು ದಿನಾಂಕ: 19-10-2021 ರಂದು 18-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಹೊನ್ನಾವರ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 272/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ರವಿ ತಂದೆ ಶಿವಯ್ಯ ಶಟ್ಟಿ, ಪ್ರಾಯ-28 ವರ್ಷ, ವೃತ್ತಿ-ಚಾಲಕ, ಸಾ|| ಮೆಲಾಜಿಪುರ, ಪೋ: ಬದನಗುಪ್ಪೆ, ತಾ&ಜಿ: ಚಾಮರಾಜನಗರ (ಮಿನಿ ಬಸ್ ನಂ: ಕೆ.ಎ-10/ಎ-5439 ನೇದರ ಚಾಲಕ). ಈತನು ದಿನಾಂಕ: 18-10-2021 ರಂದು ತನ್ನ ಮಿನಿ ಬಸ್ ನಂ: ಕೆ.ಎ-10/ಎ-5439 ನೇದರಲ್ಲಿ ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲದಿಂದ ಚಿಕ್ಕಮಗಳೂರು, ಜೋಗ, ಮುರ್ಡೇಶ್ವರದ ಕರಾವಳಿ ಭಾಗಕ್ಕೆ ಪ್ರವಾಸಕ್ಕೆ ಎಂದು ಪಿರ್ಯಾದಿ ಮತ್ತು ಗಾಯಾಳುಗಳನ್ನು ಕರೆದುಕೊಂಡು ಬಂದವನು, ದಿನಾಂಕ: 18-10-2021 ರಂದು ಮಧ್ಯಾಹ್ನ 12-00 ಗಂಟೆಯ ಸುಮಾರಿಗೆ ಜೋಗದಿಂದ ಮುರ್ಡೇಶ್ವರಕ್ಕೆ ಹೋಗಲು ಮಿನಿ ಬಸ್ಸನ್ನು ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-69 ರ ಮೇಲೆ ಅತೀವೇಗವಾಗಿ ಚಲಾಯಿಸಿಕೊಂಡು ಬಂದವನು, ಹೊನ್ನಾವರ ತಾಲೂಕಿನ ಗೇರುಸೊಪ್ಪದ ಹಳೇ ಮಾಸ್ತಿಮನೆ ರೋಡ್ ಹತ್ತಿರ ರಸ್ತೆಯು ತಿರುವಿನಿಂದ ಕೂಡಿದ್ದರೂ ಸಹಿತ ತನ್ನ ಮಿನಿ ಬಸ್ಸನ್ನು ಅತೀವೇಗವಾಗಿ ಚಲಾಯಿಸಿ ಎದುರಿಗೆ ಬಂದ ವಾಹನವನ್ನು ತಪ್ಪಿಸಲು ನಿರ್ಲಕ್ಷ್ಯತನದಿಂದ ಮಿನಿ ಬಸ್ಸನ್ನು ರಸ್ತೆಯ ಎಡಕ್ಕೆ ಚಲಾಯಿಸಿ, ರಸ್ತೆಯ ಬದಿಯಲ್ಲಿ ಮಿನಿ ಬಸ್ಸನ್ನು ಪಲ್ಟಿ ಕೆಡವಿ, ಅಪಘಾತ ಪಡಿಸಿ, ಮಿನಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ 1). ಉಮೇಶ ತಂದೆ ಕೆಂಪಾಚಾರ, ಇವರಿಗೆ ಎಡಗೈ ಮಣಿಕಟ್ಟಿನ ಹತ್ತಿರ ಗಾಯವಾಗಿದ್ದು, 2). ರುಖ್ಮನರಾಜ ತಂದೆ ರಾಜಾಚಾರ, ಇವರಿಗೆ ಎಡಕಣ್ಣಿನ ಹತ್ತಿರ ಗಾಯವಾಗಿದ್ದು, 3). ನಾಗೇಂದ್ರ ತಂದೆ ಶಾಂತಾಚಾರ, ತಲೆಗೆ ಗಾಯವಾಗಿದ್ದು, 4). ಬಿ. ಶಿವಕುಮಾರ ತಂದೆ ಕೆ. ಬೋಜರಾಜ, ಇವರಿಗೆ ಎಡಗೈ ಗಾಯವಾಗಿದ್ದು, 5). ಪದ್ಮಾ ಸಿ. ಕೋಂ. ಚಿನ್ನಪ್ಪಾಚಾರ, ಇವರಿಗೆ ಎಡ ಕಿವಿಯ ಹತ್ತಿರ ಗಾಯವಾಗಿದ್ದು, 6). ರಷ್ಮಿ ಎಸ್. ಕೋಂ. ನಾಗೇಂದ್ರ, ಇವರಿಗೆ ತಲೆಗೆ ಗಾಯವಾಗಿದ್ದು, ವಾಹನದಲ್ಲಿದ್ದ ಪಿರ್ಯಾದಿ ಹಾಗೂ ಇನ್ನುಳಿದವರಿಗೂ ಸಣ್ಣಪುಟ ಒಳ ಗಾಯನೋವು ಆಗಲು ಕಾರಣನಾಗಿದ್ದಲ್ಲದೇ, ಆರೋಪಿ ಮಿನಿ ಬಸ್ ಚಾಲಕನು ತನಗೂ ಸಹ ಗಾಯನೋವು ಪಡಿಸಿಕೊಂಡು ಮಿನಿ ಬಸ್ ಜಖಂ ಆಗಲು ಕಾರಣನಾದ ಬಗ್ಗೆ ಪಿರ್ಯಾದಿ ಶ್ರೀ ರವಿಕುಮಾರ ತಂದೆ ನಾಗನಾಯಕ, ಪ್ರಾಯ-23 ವರ್ಷ, ವೃತ್ತಿ-ಕ್ಲೀನರ್, ಸಾ|| ಕಂದಹಳ್ಳಿ, ಯಳಂದೂರು, ತಾ&ಜಿ: ಚಾಮರಾಜನಗರ ರವರು ದಿನಾಂಕ: 19-10-2021 ರಂದು 13-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಹೊನ್ನಾವರ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 273/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ನಾರಾಯಣ ತಂದೆ ಮಾರುತಿ ಬರಗುಂಡಿ, ಪ್ರಾಯ-58 ವರ್ಷ, ಸಾ|| ರಾಮಲಿಂಗಕಿಂಡ್ ಗಲ್ಲಿ, ಬೆಳಗಾವಿ (ಟಿಪ್ಪರ್ ವಾಹನ ನಂ: ಕೆ.ಎ-47/1871 ನೇದರ ಚಾಲಕ). ಈತನು ದಿನಾಂಕ: 19-10-2021 ರಂದು ಮಧ್ಯಾಹ್ನ 14-30 ಗಂಟೆಯ ಸಮಯಕ್ಕೆ ರಾಷ್ಟೀಯ ಹೆದ್ದಾರಿ ಸಂಖ್ಯೆ-69 ರಲ್ಲಿ ಗೇರುಸೊಪ್ಪದ ಘಟ್ಟ ಪ್ರದೇಶದಲ್ಲಿನ ವ್ಯೂ ಪಾಯಿಂಟ್ ಹತ್ತಿರದ ತಿರುವಿನಲ್ಲಿ ತಾನು ಚಲಾಯಿಸುತ್ತಿದ್ದ ಟಿಪ್ಪರ್ ವಾಹನ ನಂ: ಕೆ.ಎ-47/1871 ನೇದನ್ನು ಹೊನ್ನಾವರ ಕಡೆಯಿಂದ ಮಾವಿನಗುಂಡಿ ಕಡೆಗೆ ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಎದುರಿನಿಂದ ಬರುತ್ತಿದ್ದ ಟೊಯೋಟಾ ಫಾರ್ಚೂನರ್ ಕಾರ್ ನಂ: ಕೆ.ಎ-41/ಝೆಡ್-9899 ನೇದಕ್ಕೆ ಡಿಕ್ಕಿ ಪಡಿಸಿ, ಕಾರ್ ಚಾಲಕ ಮಧುಸೂಧನ ಆರ್. ತಂದೆ ರಾಮಾಂಜನಪ್ಪ, ಪ್ರಾಯ-40 ವರ್ಷ, ವೃತ್ತಿ-ವ್ಯಾಪಾರ, ಸಾ|| ಚಿಕ್ಕಜಾಲ, ಬೆಂಗಳೂರು ಇವರಿಗೆ ಬಲಗೈ ಭುಜಕ್ಕೆ ದುಃಖಾಪತ್ ಪಡಿಸಿದ್ದಲ್ಲದೇ, ಕಾರನ್ನು ಜಖಂಗೊಳಿಸಿದ ಬಗ್ಗೆ ಪಿರ್ಯಾದಿ ಶ್ರೀ ರಾಮಕೃಷ್ಣ ಸಿ. ಎನ್. ತಂದೆ ನಾಗರಾಜ ಸಿ. ಎನ್, ಪ್ರಾಯ-43 ವರ್ಷ, ವೃತ್ತಿ-ವ್ಯಾಪಾರ, ಸಾ|| ಆಂಜನೇಯ ಸ್ವಾಮಿ ದೇವಸ್ಥಾನದ ಹತ್ತಿರ, ಚಿಕ್ಕಜಾಲ, ಬೆಂಗಳೂರು ಉತ್ತರ-562157 ರವರು ದಿನಾಂಕ: 19-10-2021 ರಂದು 19-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಯಲ್ಲಾಪುರ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 185/2021, ಕಲಂ: 32(3) ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ಶಿವಾನಂದ ತಂದೆ ಪುರುಷೋತ್ತಮ ಶೇಟ್, ಪ್ರಾಯ-40 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ತೆಲಂಗಾರ, ತಾ: ಯಲ್ಲಾಪುರ. ಈತನು ದಿನಾಂಕ: 19-10-2021 ರಂದು ಸಾಯಂಕಾಲ 05-40 ಗಂಟೆಯ ಸುಮಾರಿಗೆ ತನಗೆ ಸಂಬಂಧಿಸಿದ ಯಲ್ಲಾಪುರ ತಾಲೂಕಿನ ತೆಲಂಗಾರ ಗ್ರಾಮದ ತನ್ನ ಮನೆಯ ಮುಂದೆ ಇರುವ ತಾತ್ಕಾಲಿಕ ಶೆಡ್ಡಿನಲ್ಲಿ ಯಾವುದೇ ಪಾಸ್ ಯಾ ಪರ್ಮಿಟ್ ಇಲ್ಲದೇ ಅನಧೀಕೃತವಾಗಿ ಸಾರ್ವಜನಿಕರಿಗೆ ಮದ್ಯ ಸೇವಿಸಲು ಅನುವು ಮಾಡಿಕೊಟ್ಟಿದ್ದ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿರ್ಯಾದಿ ಮತ್ತು ಸಿಬ್ಬಂದಿಯವರು ಪಂಚರೊಂದಿಗೆ ಸೇರಿ ದಾಳಿ ಮಾಡಿದಾಗ 1). ಖಾಲಿ ಪ್ಲಾಸ್ಟಿಕ್ ಗ್ಲಾಸ್-02, 2). ORIGINAL CHOICE-90 ML ಅಂತಾ ಲೇಬಲ್ ಇರುವ ಮದ್ಯದ ಖಾಲಿ ಪೌಚ್ ಗಳು-02, 3) ORIGINAL CHOICE-90 ML ನ ಸೀಲ್ಡ್ ಪೌಚ್ ಗಳು-04, ಅ||ಕಿ|| 144/- ರೂಪಾಯಿಗಳೊಂದಿಗೆ ಸಿಕ್ಕಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಸ||ತ|| ಕುಮಾರಿ: ಪ್ರಿಯಾಂಕಾ ನ್ಯಾಮಗೌಡ, ಡಬ್ಲ್ಯೂ.ಪಿ.ಎಸ್.ಐ, ಯಲ್ಲಾಪುರ ಪೊಲೀಸ್ ಠಾಣೆ ರವರು ದಿನಾಂಕ: 19-10-2021 ರಂದು 19-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 63/2021, ಕಲಂ: ಮಹಿಳೆ ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಮಹಿಳೆ ಕುಮಾರಿ: ಸದಾ ಪರಮಾಸ್ ತಂದೆ ಇಸ್ಮಾಯಿಲ್ ಪಟೇಲ, ಪ್ರಾಯ-19 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕನ್ನಡ ಶಾಲೆಯ ಹಿಂದುಗಡೆ, ಕೋಗಿಲಬನ, ತಾ: ದಾಂಡೇಲಿ. ಪಿರ್ಯಾದಿಯ ಮಗಳಾದ ಇವಳು ದಿನಾಂಕ: 18-10-2021 ರಂದು ಬೆಳಿಗ್ಗೆ 10-00 ಗಂಟೆಯ ಸಮಯಕ್ಕೆ ತಾನು ಬಟ್ಟೆ ಖರೀದಿ ಮಾಡಿಕೊಂಡು ಬರಲು ದಾಂಡೇಲಿಗೆ ಹೋಗಿ ಬರುವುದಾಗಿ ಪಿರ್ಯಾದಿಯ ಹತ್ತಿರ ಹೇಳಿ ಹೋದವಳು, ಈವರೆಗೂ ಮನೆಗೆ ಬಾರದೇ ತನ್ನ ಇರುವಿಕೆಯ ಬಗ್ಗೆ ಯಾರಿಗೂ ಹೇಳದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದು, ಅವಳನ್ನು ಕೋಗಿಲಬನ, ದಾಂಡೇಲಿ ಪಟ್ಟಣ ಹಾಗೂ ತಮ್ಮ ಸಂಬಂಧಿಕರ ಮನೆಯಾದ ಗೋವಾಕ್ಕೆ ಪೋನ್ ಮಾಡಿ ವಿಚಾರಿಸಲಾಗಿ ಕಾಣೆಯಾದವಳು ಈವರೆಗೆ ಪತ್ತೆಯಾಗದೆ ಇದ್ದುದ್ದರಿಂದ ಸದ್ರಿಯವಳಿಗೆ ಹುಡುಕಿ ಕೊಡುವಂತೆ ಕೋರಿದ ಬಗ್ಗೆ ಪಿರ್ಯಾದಿ ಶ್ರೀಮತಿ ಸಾಹೇರಾ ಇಸ್ಮಾಯಿಲ್ ಪಟೇಲ್, ಪ್ರಾಯ-45 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕನ್ನಡ ಶಾಲೆಯ ಹಿಂದುಗಡೆ, ಕೋಗಿಲಬನ ತಾ: ದಾಂಡೇಲಿ ರವರು ದಿನಾಂಕ: 19-10-2021 ರಂದು 16-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 64/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ವಿಕಾಸ ತಂದೆ ವಿನೋದ ದನಾಯಿ, ಪ್ರಾಯ-24 ವರ್ಷ, ವೃತ್ತಿ-ಖಾಸಗಿ ಕೆಲಸ, ಸಾ|| ಮೀನು ಮಾರ್ಕೆಟ್ ರಸ್ತೆ, ತಾ: ಹಳಿಯಾಳ (ಮೋಟಾರ್ ಸೈಕಲ್ ನಂ: ಕೆ.ಎ-22/ಎಚ್.ಸಿ-8776 ನೇದರ ಸವಾರ). ಈತನು ದಿನಾಂಕ: 17-10-2021 ರಂದು ಬೆಳಿಗ್ಗೆ 10-30 ಗಂಟೆಯ ಸುಮಾರಿಗೆ ತಾನೂ ಸವಾರಿ ಮಾಡುತ್ತಿದ್ದ ಮೋಟಾರ್ ಸೈಕಲ್ ನಂ: ಕೆ.ಎ-22/ಎಚ್.ಸಿ-8776 ನೇದರಲ್ಲಿ ಪಿರ್ಯಾದಿಯನ್ನು ಹಿಂದುಗಡೆ ಕೂಡ್ರಿಸಿಕೊಂಡು ದಾಂಡೇಲಿ ಕಡೆಯಿಂದ ಪಣಸೋಲಿ ಕಡೆಗೆ ಅತೀವೇಗವಾಗಿ ಹಾಗೂ ನಿಷ್ಕಾಳಜಿತನದಿಂದ ಮಾನವೀಯ ಪ್ರಾಣಕ್ಕೆ ಅಪಾಯಕಾರಿಯಾಗುವಂತೆ ಸವಾರಿ ಮಾಡಿಕೊಂಡು ಹೋಗುತ್ತಾ ಪಣಸೋಲಿ ಗ್ರಾಮಕ್ಕೆ ಹೋಗುವ ಕ್ರಾಸಿನಲ್ಲಿ ಮೋಟಾರ್ ಸೈಕಲ್ ಮೇಲಿನ ವೇಗವನ್ನು ನಿಯಂತ್ರಿಸಲಾಗದೇ ಮೋಟಾರ್ ಸೈಕಲ್ ಸ್ಕಿಡ್ ಆಗಿದ್ದರಿಂದ ಮೋಟಾರ್ ಸೈಕಲ್ ಸಹಿತ ರಸ್ತೆಯ ಮೇಲೆ ಬಿದ್ದು ಪಿರ್ಯಾದಿಗೆ ಬಲಗಣ್ಣಿನ ಹತ್ತಿರ ಹಾಗೂ ಹಣೆಯ ಮೇಲೆ ಸಾದಾ ಸ್ವರೂಪದ ಗಾಯನೋವು ಪಡಿಸಿದ್ದಲ್ಲದೇ, ಸ್ವಯಂಕೃತ ಅಪಘಾತದಿಂದ ತನಗೆ ಬೆನ್ನಿನ ಭಾಗಕ್ಕೆ ಒಳನೋವು ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ವಿನೋದ ತಂದೆ ದಶರಥ ಗೌಡಾ, ಪ್ರಾಯ-21 ವರ್ಷ, ವೃತ್ತಿ-ವೈಟ್ ಪ್ಲಾವರ್ ಹೋಂ ಸ್ಟೇ ದಲ್ಲಿ ಕೆಲಸ, ಸಾ|| ಹಳೇ ದಾಂಡೇಲಿ, ತಾ: ದಾಂಡೇಲಿ ರವರು ದಿನಾಂಕ: 19-10-2021 ರಂದು 18-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಮುಂಡಗೋಡ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 134/2021, ಕಲಂ: 279, 304(ಎ) ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಅಬ್ದುಲ್ ಘನಿ ತಂದೆ ಅಲ್ಲಿಸಾಬ್, ಪ್ರಾಯ-59 ವರ್ಷ, ವೃತ್ತಿ-ಚಾಲಕ, ಸಾ|| ಉರ್ದು ಸ್ಕೂಲ್ ಹತ್ತಿರ, ರಾಮನಬೈಲ್, ತಾ: ಶಿರಸಿ (ಕೆ.ಎಸ್.ಆರ್.ಟಿ.ಸಿ ಬಸ್ ನಂ: ಕೆ.ಎ-31/ಎಫ್-1415 ನೇದರ ಚಾಲಕ). ಈತನು ದಿನಾಂಕ: 19-10-2021 ರಂದು 13-30 ಗಂಟೆಯ ಸುಮಾರಿಗೆ ಶಿರಸಿ-ಮುಂಡಗೋಡ ರಸ್ತೆಯ ಕಲಕೊಪ್ಪ ಕ್ರಾಸ್ ಹಾಗೂ ಗೊಟಗೋಡಿಕೊಪ್ಪ ಕ್ರಾಸ್ ಮಧ್ಯ ಡಾಂಬರ್ ರಸ್ತೆಯ ಪಕ್ಕದ ಕಚ್ಚಾ ರಸ್ತೆಯಲ್ಲಿ ತಾನು ಚಲಾಯಿಸುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ನಂ: ಕೆ.ಎ-31/ಎಫ್-1415 ನೇದನ್ನು ಮುಂಡಗೋಡ ಕಡೆಯಿಂದ ಶಿರಸಿ ಕಡೆಗೆ ಅತೀವೇಗವಾಗಿ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಹೋಗಿ, ಡಾಂಬರ್ ರಸ್ತೆಯ ಪಕ್ಕದ ಕಚ್ಚಾ ರಸ್ತೆಯಲ್ಲಿ ತನ್ನ ಹೋಂಡಾ ಎಕ್ಟಿವಾ ಮೋಟಾರ್ ಸೈಕಲ್ ನಂ: ಕೆ.ಎ-47/ಕೆ-1444 ನೇದನ್ನು ನಿಲ್ಲಿಸಿಕೊಂಡು ನಿಂತಿದ್ದ ಅಬ್ದುಲ್ ಕರಿಂ ತಂದೆ ಅಬ್ದುಲ್ ರಹೆಮಾನಸಾಬ್ ಶಿರಗೋಡ, ಪ್ರಾಯ-60 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಹರಗನಹಳ್ಳಿ, ತಾ: ಮುಂಡಗೋಡ ಈತನಿಗೆ ಹಿಂದಿನಿಂದ ವೇಗವಾಗಿ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಅಬ್ದುಲ್ ಕರಿಂ ಈತನಿಗೆ ಮಾರಣಾಂತಿಕ ಗಾಯನೋವು ಪಡಿಸಿದ್ದು, ಸದ್ರಿಯವನನ್ನು ಚಿಕಿತ್ಸೆಗಾಗಿ ಮುಂಡಗೋಡದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದವನಿಗೆ ಹೆಚ್ಚಿನ ಚಿಕಿತ್ಸೆಗಾಗಿ ಕಿಮ್ಸ್ ಆಸ್ಪತ್ರೆ ಹುಬ್ಬಳ್ಳಿಗೆ ಕರೆದುಕೊಂಡು ಹೋಗುತ್ತಿರುವಾಗ ಮಾರ್ಗಮಧ್ಯ ಮೃತಪಟ್ಟಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಅಪ್ಸರ್ ತಂದೆ ಅಬ್ದುಲ್ ಮುನಾಪ್ ಆನವಟ್ಟಿ, ಪ್ರಾಯ-28 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಹರಗನಹಳ್ಳಿ, ತಾ: ಮುಂಡಗೋಡ ರವರು ದಿನಾಂಕ: 19-10-2021 ರಂದು 16-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
======||||||||======
Daily District U.D Report
Date:- 19-10-2021
at 00:00 hrs to 24:00 hrs
ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ
ಯು.ಡಿ.ಆರ್ ಸಂಖ್ಯೆಃ 19/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಪಿಂಟು, ಸಾ|| ಬಿಹಾರ. ಈತನು ಕಳೆದ 2-3 ದಿನಗಳಿಂದ ಪಿರ್ಯಾದಿಯ ಬೋಟ್ ನಂ: ND-KA-04-MM-2473 ನೇದರಲ್ಲಿ ಲೋಡ್ ಮಾಡುವ ಕೆಲಸ ಮಾಡಿಕೊಂಡಿದ್ದವನು, ದಿನಾಂಕ: 19-10-2021 ರಂದು ಮಧ್ಯರಾತ್ರಿ ಸುಮಾರು 01-30 ಗಂಟೆಯ ಸಮಯಕ್ಕೆ ಮಾವಿನಕುರ್ವಾ, ಬಂದರ್ ಧಕ್ಕೆಯಲ್ಲಿ ಒಂದು ಬೋಟಿನಿಂದ ಇನ್ನೊಂದು ಬೋಟಿಗೆ ದಾಟುತ್ತಿರುವಾಗ ಆಕಸ್ಮಿಕವಾಗಿ ಕಾಲು ಜಾರಿ ಸಮುದ್ರದ ನೀರಿಗೆ ಬಿದ್ದು ನೀರಿನಲ್ಲಿ ಮುಳುಗಿದ್ದು, ಸದ್ರಿಯವನ ಹುಡುಕಾಟದಲ್ಲಿ ಇದ್ದಾಗ ದಿನಾಂಕ: 19-10-2021 ರಂದು ಸಾಯಂಕಾಲ 16-00 ಗಂಟೆಗೆ ಬಂದರ್ ಧಕ್ಕೆಯ ಹತ್ತಿರ ಸಮುದ್ರದ ನೀರಿನಲ್ಲಿ ಮೃತದೇಹ ಸಿಕ್ಕ ಬಗ್ಗೆ ಪಿರ್ಯಾದಿ ಶ್ರೀ ಶಿವ ತಂದೆ ನಾರಾಯಣ ಖಾರ್ವಿ, ಪ್ರಾಯ-42 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ಮಾವಿನಕುರ್ವಾ, ಬಂದರ್, ತಾ: ಭಟ್ಕಳ ರವರು ದಿನಾಂಕ: 19-10-2021 ರಂದು 19-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ
ಯು.ಡಿ.ಆರ್ ಸಂಖ್ಯೆಃ 20/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ನಾಗೇಶ ತಂದೆ ಮಂಜಯ್ಯ ಭಟ್, ಪ್ರಾಯ-48 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಹೂತ್ಕಳ, ಕೋಟಖಂಡ, ಪೋ: ಮಾರುಕೇರಿ, ತಾ: ಭಟ್ಕಳ. ಪಿರ್ಯಾದಿಯ ತಮ್ಮನಾದ ಈತನು ದಿನಾಂಕ: 19-10-2021 ರಂದು 17-30 ಗಂಟೆಗೆ ತಮ್ಮ ಮನೆಯ ಮುಂದಿನ ತೋಟದಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾಗ ಕೊಕ್ಕೆಯನ್ನು ಕೈಯಲ್ಲಿ ಹಿಡಿದು ಹೀರೇಕಾಯಿ ಕೊಯ್ಯುತ್ತಿರುವಾಗ ಆಕಸ್ಮಾತ್ ಆಗಿ ಕೈಯಲ್ಲಿದ್ದ ಕೊಕ್ಕೆಯು ವಿದ್ಯುತ್ ತಂತಿಗೆ ತಗುಲಿ ಕೊಕ್ಕೆಯ ಮುಖಾಂತರ ಮೃತನ ಎದೆಯ ಎಡಭಾಗಕ್ಕೆ ವಿದ್ಯುತ್ ಸ್ವರ್ಶಿಸಿ, ಸ್ಥಳದಲ್ಲಿ ಕುಸಿದು ಬಿದ್ದವನಿಗೆ ಉಪಚಾರದ ಕುರಿತು ಭಟ್ಕಳದ ಸರಕಾರಿ ಆಸ್ಪತ್ರೆಗೆ ತಂದು ದಾಖಲಿಸುವ ಪೂರ್ವದಲ್ಲಿ ಮೃತಪಟ್ಟಿದ್ದು, ಇದರ ಹೊರತು ಮೃತನ ಮರಣದಲ್ಲಿ ಬೇರೇ ಯಾವುದೇ ಸಂಶಯ ಇರುವುದಿಲ್ಲ ಎಂಬ ಬಗ್ಗೆ ಪಿರ್ಯಾದಿ ಶ್ರೀ ಚಿದಂಬರ ತಂದೆ ಮಂಜಯ್ಯ ಭಟ್, ಪ್ರಾಯ-51 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಹೂತ್ಕಳ, ಕೋಟಖಂಡ, ಪೋ: ಮಾರುಕೇರಿ, ತಾ: ಭಟ್ಕಳ ರವರು ದಿನಾಂಕ: 19-10-2021 ರಂದು 20-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಮುಂಡಗೋಡ ಪೊಲೀಸ್ ಠಾಣೆ
ಯು.ಡಿ.ಆರ್ ಸಂಖ್ಯೆಃ 35/2021, ಕಲಂ: 174(ಸಿ) ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ನಿನ್ನು ತಂದೆ ಬಾಗು ಪೊಂಡೆ, ಪ್ರಾಯ-40 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಮರಗಡಿ, ದಡ್ಡಿ, ತಾ: ಮುಂಡಗೋಡ. ಸುದ್ದಿದಾರಳ ಗಂಡನಾದ ಈತನು ಸರಾಯಿ ಕುಡಿದು ಬಂದು ಹೆಂಡತಿ ಹಾಗೂ ಮಕ್ಕಳೊಂದಿಗೆ ಪ್ರತಿದಿನ ಜಗಳ ಮಾಡುತ್ತಿದ್ದವನು, ಸರಾಯಿ ಕುಡಿಯದಂತೆ ಬುದ್ಧಿಮಾತು ಹೇಳುತ್ತಿದ್ದುದರಿಂದ ಮನಸ್ಸಿಗೆ ಬೇಸರ ಮಾಡಿಕೊಂಡು ದಿನಾಂಕ: 19-10-2021 ರಂದು ಬೆಳಿಗ್ಗೆ 08-30 ಗಂಟೆಯಿಂದ 09-30 ಗಂಟೆಯ ಅವಧಿಯಲ್ಲಿ ಮನೆಯ ಎದುರು ಇರುವ ಕಾಡಿನಲ್ಲಿ ನೈಲಾನ್ ಹಗ್ಗದಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ. ಇದರ ಹೊರತು ಅವನ ಮರಣದ ಬಗ್ಗೆ ನಮಗೆ ಯಾವುದೇ ಸಂಶಯವಿರುವುದಿಲ್ಲ, ತನ್ನ ಗಂಡನ ಮೃತದೇಹವು ಮರಗಡಿಯ ಗೌಳಿ ದಡ್ಡಿಯಲ್ಲಿ ನಮ್ಮ ಮನೆಯ ಎದುರು ಇರುವ ಕಾಡಿನಲ್ಲಿಯೇ ಇರುತ್ತದೆ. ಈ ಕುರಿತು ಮುಂದಿನ ಕಾನೂನು ಕ್ರಮ ಜರುಗಿಸಲು ಕೋರಿದ ಬಗ್ಗೆ ಪಿರ್ಯಾದಿ ಶ್ರೀಮತಿ ಬೊಮ್ಮುಬಾಯಿ ಕೋಂ. ನಿನ್ನು ಪೊಂಡೆ, ಪ್ರಾಯ-35 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಮರಗಡಿ, ದಡ್ಡಿ, ತಾ: ಮುಂಡಗೋಡ ರವರು ದಿನಾಂಕ: 19-10-2021 ರಂದು 11-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
======||||||||======