ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 19-09-2021

at 00:00 hrs to 24:00 hrs

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 163/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಗೋಪಿ ತಂದೆ ಮುರುಗೇಶನ್, ಪ್ರಾಯ-26 ವರ್ಷ, ವೃತ್ತಿ-ಲಾರಿ ಚಾಲಕ, ಸಾ|| ಅಳಗಾರ ನಗರ, ಕರ್ಪಂಪಟ್ಟಿ, ತಾ: ಮುಸುರಿ, ಜಿ: ತಿರುಚ್ಚಿ, ತಮಿಳುನಾಡು ರಾಜ್ಯ (ಲಾರಿ ನಂ: ಕೆ.ಎ-01/ಎ-6676 ನೇದರ ಚಾಲಕ). ಈತನು ದಿನಾಂಕ: 19-09-2021 ರಂದು 04-00 ಗಂಟೆಗೆ ತನ್ನ ಲಾರಿ ನಂ: ಕೆ.ಎ-01/ಎ-6676 ನೇದನ್ನು ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ರಸ್ತೆಯಲ್ಲಿ ಅಂಕೋಲಾ ಕಡೆಯಿಂದ ಕುಮಟಾ ಕಡೆಗೆ ಅತೀವೇಗವಾಗಿ ಚಲಾಯಿಸಿಕೊಂಡು ಬಂದು, ಕುಮಟಾ ತಾಲೂಕಿನ ದಿವಗಿ ಊರಿನ ಶಿರಸಿ ಕ್ರಾಸ್ ಹತ್ತಿರ ತನ್ನ ಲಾರಿಯನ್ನು ಒಮ್ಮೇಲೆ ರಸ್ತೆಯ ಬಲಕ್ಕೆ ಚಲಾಯಿಸಿದ್ದನ್ನು ನೋಡಿ, ಕುಮಟಾ ಕಡೆಯಿಂದ ಅಂಕೋಲಾ ಕಡೆಗೆ ಹೋಗುತ್ತಿದ್ದ ಪಿರ್ಯಾದಿಯವರ ಲಾರಿ ನಂ: ಕೆ.ಎ-29/ಸಿ-0045 ನೇದರ ಚಾಲಕನು ತನ್ನ ವಾಹನವನ್ನು ಬಲಕ್ಕೆ ತೆಗೆದುಕೊಂಡರೂ ಸಹ ಆರೋಪಿ ಚಾಲಕನು ಲಾರಿಯ ಎಡಭಾಗಕ್ಕೆ ನಿಷ್ಕಾಳಜಿಯಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದರಿಂದ ಎರಡೂ ವಾಹನಗಳು ರಸ್ತೆಯ ಬದಿಯ ಗಟಾರದಲ್ಲಿ ಬಿದ್ದ ಪರಿಣಾಮವಾಗಿ ಪಿರ್ಯಾದಿಯವರಿಗೆ ಎಡಗೈಗೆ ಮತ್ತು ಬಲಗಾಲಿಗೆ ಹಾಗೂ ಲಾರಿ ಚಾಲಕ ಶ್ರೀ ಮಂಜುನಾಥ ತಂದೆ ಶರಣಪ್ಪಾ ಮಡಿವಾಳ ಇವರಿಗೆ ತಲೆಯ ಹಿಂಬದಿಗೆ ಮತ್ತು ಎರಡೂ ಕೈ ತೋಳುಗಳಿಗೆ ಗಾಯವಾಗಲು ಮತ್ತು ಎರಡು ವಾಹನಗಳು ಜಖಂ ಆಗಲು ಆರೋಪಿ ಚಾಲಕನೇ ಕಾರಣನಾದ ಬಗ್ಗೆ ಪಿರ್ಯಾದಿ ಶ್ರೀ ಶಿವಕುಮಾರ ತಂದೆ ಶರಣಪ್ಪಾ ಮಠ, ಪ್ರಾಯ-19 ವರ್ಷ, ವೃತ್ತಿ-ಲಾರಿ ಕ್ಲೀನರ್, ಸಾ|| ಕೂಡಲಸಂಗಮ, ಬಸವೇಶ್ವರಗುಡಿ ಹತ್ತಿರ, ತಾ: ಹುನಗುಂದ, ಜಿ: ಬಾಗಲಕೋಟೆ ರವರು ದಿನಾಂಕ: 19-09-2021 ರಂದು 12-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 115/2021, ಕಲಂ: 279, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಕೊಲ್ಲೂರು ತಂದೆ ಜಟ್ಟಾ ನಾಯ್ಕ, 45 ವರ್ಷ, ವೃತಿ: ಆಟೋ ಚಾಲಕ, ಸಾ|| ಕೋಕತಿ, ಬೆಂಗ್ರೆ, ತಾ: ಭಟ್ಕಳ (ಆಟೋ ರಿಕ್ಷಾ ನಂ: ಕೆ.ಎ-47/4674 ನೇದರ ಚಾಲಕ). ಈತನು ದಿನಾಂಕ: 15-09-2021 ರಂದು 14-00 ಗಂಟೆಯ ಸಮಯಕ್ಕೆ ತಾನು ಚಲಾಯಿಸಿಕೊಂಡು ಬಂದ ಆಟೋ ರಿಕ್ಷಾ ನಂ: ಕೆ.ಎ-47/4674 ನೇದನ್ನು ಭಟ್ಕಳ ಕಡೆಯಿಂದ ಶಿರಾಲಿ ಕಡೆಗೆ ಅತೀವೇಗವಾಗಿ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದವನು, ಶಿರಾಲಿಯ ದುರ್ಗಾ ಹೊಟೇಲ್ ಎದುರಿಗೆ ಒಮ್ಮೇಲೆ ನಾಯಿ ಅಡ್ಡ ಬಂದಿದ್ದರಿಂದ ಆಟೋ ರಿಕ್ಷಾದ ವೇಗ ನಿಯಂತ್ರಿಸದೇ ನಾಯಿಗೆ ಡಿಕ್ಕಿ ಹೊಡೆದು ಆಟೋ ರಿಕ್ಷಾ ಸಮೇತ ರಸ್ತೆಯ ಮೇಲೆ ಬಿದ್ದು, ತನ್ನ ಬಲಗಾಲಿನ ಮೊಣಕಾಲ ಕೆಳಗೆ ಭಾರೀ ಗಾಯನೋವು ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ಲೋಕೇಶ ತಂದೆ ರಾಮಾ ನಾಯ್ಕ, ಪ್ರಾಯ-38 ವರ್ಷ, ವೃತ್ತಿ-ಚಾಲಕ, ಸಾ|| ಕೊಲ್ಲುರಾಸರ ಮನೆ, ಗೊಂಚಿತ್ಲು, ಬೆಂಗ್ರೆ-2, ತಾ: ಭಟ್ಕಳ ರವರು ದಿನಾಂಕ: 19-09-2021 ರಂದು 13-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 149/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಕಾಂಶಿರಾಮ ತಂದೆ ಲಕ್ಷ್ಮಣ ರಾಠೋಡ, ಪ್ರಾಯ-27 ವರ್ಷ, ವೃತ್ತಿ-ಚಾಲಕ, ಸಾ|| ಬಂಗಾರಪ್ಪ ನಗರ, ಕಾರವಾರ (ಲಾರಿ ನಂ: ಕೆ.ಎ-22/ಡಿ-1436 ನೇದರ ಚಾಲಕ), 2]. ಮಡಿವಾಳಪ್ಪ ಗೌಡ ತಂದೆ ರಾಮನಗೌಡ ಬಿರಾದಾರ, ಪ್ರಾಯ-33 ವರ್ಷ, ವೃತ್ತಿ-ಚಾಲಕ (ಬಿಲ್ಲೆ ನಂ: 1784), ಸಾ|| ಕೆ.ಎಸ್.ಆರ್.ಟಿ.ಸಿ ಬಸ್ ಡಿಪೋ, ಕಾರವಾರ (ಎನ್.ಡಬ್ಲ್ಯೂ.ಕೆ.ಆರ್.ಟಿ.ಸಿ ಬಸ್ ನಂ: ಕೆ.ಎ-31/ಎಫ್-1545 ನೇದರ ಚಾಲಕ). ಈ ನಮೂದಿತ ಆರೋಪಿತರಲ್ಲಿ ಆರೋಪಿ 1 ನೇಯವನು ದಿನಾಂಕ: 19-09-2021 ರಂದು 12-00 ಗಂಟೆಗೆ ಯಲ್ಲಾಪುರ ತಾಲೂಕಿನ ಅರಬೈಲ್ ಘಟ್ಟದಲ್ಲಿ ಹಾದು ಹೋದ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-63 ರಲ್ಲಿ ತನ್ನ ಬಾಬ್ತು ಲಾರಿ ನಂ: ಕೆ.ಎ-22/ಡಿ-1436 ನೇದನ್ನು ಹುಬ್ಬಳ್ಳಿ ಕಡೆಯಿಂದ ಅಂಕೋಲಾ ಕಡೆಗೆ ಇಳಿಜಾರಿನ ತಿರುವಿನ ರಸ್ತೆಯಲ್ಲಿ ಅತೀವೇಗವಾಗಿ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದವನು, ತನಗಿಂತ ಮುಂದೆ ಹೋಗುತ್ತಿದ್ದ ಒಂದು ಲಾರಿಯನ್ನು ಓವರಟೇಕ್ ಮಾಡಿಕೊಂಡು ಬಂದು ಅದೇ ವೇಳೆಗೆ ಆರೋಪಿ 2 ನೇಯವನು ತನ್ನ ಬಾಬ್ತು ಎನ್,ಡಬ್ಲ್ಯೂ.ಕೆ.ಆರ್.ಟಿ.ಸಿ ಬಸ್ ನಂ: ಕೆ.ಎ-31/ಎಫ್-1545 ನೇದನ್ನು ಅಂಕೋಲಾ ಕಡೆಯಿಂದ ಹುಬ್ಬಳ್ಳಿ ಕಡೆಗೆ ಅತೀವೇಗವಾಗಿ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ತಿರುವಿನ ರಸ್ತೆಯಲ್ಲಿ ತನ್ನ ಸೈಡ್ ಬಿಟ್ಟು ಬಂದಿದ್ದರಿಂದ ಒಂದಕ್ಕೊಂದು ಪರಸ್ಪರ ಮುಂದಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿಕೊಂಡು ಎರಡು ವಾಹನಗಳನ್ನು ಜಖಂಗೊಳಿಸಿ, ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ 1). ಶ್ರೀಮತಿ ಹನೀಫಾ ಸೈಯದ್ ಕೋಂ. ಹುಸೇನಸಾಬ್ ಸೈಯದ್, 2). ಮಂಜುನಾಥ ತಂದೆ ಶಂಕರಪ್ಪ ಆರ್ಯರ, 3). ಶೃದ್ಧಾ ತಂದೆ ಸಂಜಯ ನಾಟೇಕರ, 4). ಸಾಕ್ಷಿ ತಂದೆ ಸಂಜಯ ನಾಟೇಕರ, 5). ಅಲೋಕರಾವ್ ತಂದೆ ಮಾರುತಿರಾವ್, 6). ಪ್ರತಿಭಾರಾವ್ ಕೋಂ. ಮಾರುತಿರಾವ್, 7). ಸ್ನೇಹಲ್ ತಂದೆ ಗಜಾನನರಾವ್, 8). ಗೀತಾ ತಂದೆ ದತ್ತಾ ನಾಯ್ಕ, 9). ಸೋಮಲಿಂಗ್ ತಂದೆ ವಿಠ್ಠಲ ಮಾದರ (ಬಸ್ ಕಂಡಕ್ಟರ್) ಇವರಿಗೆ ಗಾಯನೋವು ಪಡಿಸಿರುತ್ತಾರೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಮಹಮ್ಮದ್ ಅಲಿ ಸೈಯದ್ ತಂದೆ ಹುಸೇನ್ ಸಾಬ್ ಸೈಯದ್, ಪ್ರಾಯ-49 ವರ್ಷ, ವೃತ್ತಿ-ಚಾಲಕ, ಸಾ|| ಜನತಾ ಕಾಲನಿ, ಮಂಚಿಕೇರಿ, ತಾ: ಯಲ್ಲಾಪುರ, ಹಾಲಿ ಸಾ|| ನಾವೇಲಿ, ಗೋವಾ ರವರು ದಿನಾಂಕ: 19-09-2021 ರಂದು 16-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಬನವಾಸಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 88/2021, ಕಲಂ: 498(ಎ), 306 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ವಿಜಯೇಂದ್ರ ತಂದೆ ರಾಜಶೇಖರ ಪಾಟೀಲ್, ಸಾ|| ಮಳವತ್ತಿ, ತಾ: ಸಿದ್ದಾಪುರ. ಈತನಿಗೆ ದಿನಾಂಕ: 26-04-2019 ರಂದು ಶಿರಸಿ ತಾಲೂಕಿನ ಸಂತೋಳ್ಳಿ ಗ್ರಾಮದ ಮಲ್ಲಿಕಾರ್ಜುನ ಲೆಕ್ಕದ ಇವರ ಮಗಳಾದ ಶ್ರೀಮತಿ ಶಿಲ್ಪಾ ಇವರೊಂದಿಗೆ ಮದುವೆ ಮಾಡಿಕೊಟ್ಟಿದ್ದು, ಮದುವೆ ಮಾಡಿದ ಹೊಸದರಲ್ಲಿ ಇಬ್ಬರೂ ಅನೋನ್ಯವಾಗಿ ಜೀವನ ನಡೆಸಿಕೊಂಡು ಬಂದಿರುತ್ತಾರೆ. ಅವರಿಬ್ಬರ ಸಂಸಾರದಲ್ಲಿ ಅವರಿಗೆ ಒಂದು ಗಂಡು ಜನಿಸಿರುತ್ತದೆ. ತದನಂತರದಲ್ಲಿ ಆರೋಪಿತನು ಈತನು ಶಿಲ್ಪಾ ಇವಳ ಮೇಲೆ ಸಂಶಯ ಪಡುತ್ತಾ ಅವಳೊಂದಿಗೆ ಜಗಳ ಮಾಡಿ ಮಾನಸಿಕ ಕಿರಿಕಿರಿ ಮಾಡುತ್ತಾ ಬಂದಿರುವುದರಿಂದ ಪಿರ್ಯಾದಿಯ ಮನೆ ಕಡೆಯವರು ಆರೋಪಿತನಿಗೆ ಬುದ್ಧಿವಾದ ಹೇಳುತ್ತಾ ಬಂದಿರುತ್ತಾರೆ. ದಿನಾಂಕ: 11-09-2021 ರಂದು ಆರೋಪಿತನು ತನ್ನ ಹೆಂಡತಿಯಾದ ಶಿಲ್ಪಾ ಇವಳನ್ನು ತವರು ಮನೆಗೆ ತಂದು ಬಿಟ್ಟಿರುತ್ತಾನೆ. ದಿನಾಂಕ: 18-09-2021 ರಂದು 17-30 ಗಂಟೆಗೆ ಆರೋಪಿತನು ಶಿಲ್ಪಾ ಇವಳ ಮನೆಯಾದ ಸಂತೋಳ್ಳಿಗೆ ಬಂದು ಶಿಲ್ಪಾ ಇವಳೊಂದಿಗೆ ಜಗಳ ಮಾಡಿ ಅವಳ ಬಗ್ಗೆ ಇಲ್ಲಸಲ್ಲದ ಮಾತುಗಳನ್ನು ಆಡಿ ಅವಾಚ್ಯ ಶಬ್ದಗಳಿಂದ ಬೈಯ್ದು ಕೈಯಿಂದ ಹೊಡೆಬಡೆ ಮಾಡಿ ‘ನೀನು ನನ್ನ ಮನಗೆ ಬಂದರೂ ಅಷ್ಟೆ ಬಿಟ್ಟರೂ ಅಷ್ಟೆ, ಇದ್ದರೂ ಅಷ್ಟೆ, ಸತ್ತರೂ ಅಷ್ಟೆ’ ಅಂತಾ ಅವಳಿಗೆ ಹೇಳಿ ಮಾನಸಿಕವಾಗಿ ಕಿರಿಕಿರಿ ಮಾಡಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಚೋದನೆ ನೀಡಿದ್ದರಿಂದ, ಶಿಲ್ಪಾ ಇವಳು ಅದೇ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ಮನೆಯ ಬೆಡ್ ರೂಮಿನಲ್ಲಿರುವ ಸೀಲಿಂಗ್ ಫ್ಯಾನಿಗೆ ಸೀರೆಯಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ಮಲ್ಲಿಕಾರ್ಜುನ ತಂದೆ ಬಂಗಾರಪ್ಪ ಲೆಕ್ಕದ, ಪ್ರಾಯ-59 ವರ್ಷ, ವೃತ್ತಿ-ಅರಣ್ಯ ಇಲಾಖೆಯಲ್ಲಿ ಕೆಲಸ, ಸಾ|| ಸಂತೋಳ್ಳಿ, ಪೋ: ಕುಪ್ಪಗಡ್ಡೆ, ತಾ: ಶಿರಸಿ ರವರು ದಿನಾಂಕ: 19-09-2021 ರಂದು 00-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 19-09-2021

at 00:00 hrs to 24:00 hrs

 

ಅಂಕೋಲಾ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 54/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ವೆಂಕಟ್ರಮಣ ತಂದೆ ಸುಬ್ಬಾ ಸಿದ್ದಿ, ಪ್ರಾಯ-35 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಮಳಲಗಾಂವ್ (ಹಳವಳ್ಳಿ), ತಾ: ಅಂಕೋಲಾ. ನಮೂದಿತ ಮೃತನ ತಂದೆ-ತಾಯಿಯವರು ಮಾನಸಿಕವಾಗಿ ನೊಂದು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಈತನು ತಂದೆ-ತಾಯಿ ಆತ್ಮಹತ್ಯೆ ಮಾಡಿಕೊಂಡ ವಿಷಯವನ್ನು ಮನಸಿಗೆ ಹಚ್ಚಿಕೊಂಡು ಆತ್ಯಹತ್ಯೆಗೆ ಪ್ರಯತ್ನ ಮಾಡಿದ್ದನು. ಈತನು ಅಂದಿನಿಂದ ಅತಿಯಾಗಿ ಸಾರಾಯಿ ಕುಡಿಯುತ್ತಿದ್ದು, ಆಗಾಗ ಮಾನಸಿಕವಾಗಿ ಬಳಲುತ್ತಾ ಜನರಲ್ಲಿ ತಕರಾರು ಮಾಡಿಕೊಳ್ಳುತ್ತಿದ್ದನು. ಅದರಂತೆ ಕಳೆದ ಒಂದು ತಿಂಗಳ ಹಿಂದೆ ವತ್ಸಲಾ ಸಿದ್ದಿ ಇವರೊಂದಿಗೆ ತಂಟೆ ತಕರಾರು ಮಾಡಿಕೊಂಡಿದ್ದು, ವಿಪರೀತವಾಗಿ ಸರಾಯಿ ಕುಡಿದು ಮಾನಸಿಕವಾಗಿ ಬಳಲಿ ದಿನಾಂಕ: 19-09-2021 ರಂದು ಬೆಳಗಿನ ಜಾವ 03-00 ಗಂಟೆಯಿಂದ ಬೆಳಿಗ್ಗೆ 09-00 ಗಂಟೆಯ ನಡುವಿನ ಅವಧಿಯಲ್ಲಿ ತನ್ನ ವಾಸದ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀಮತಿ ಮಂಜುಳಾ ಸುಬ್ಬಾ ಸಿದ್ದಿ, ಪ್ರಾಯ-45 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಮಳಲಗಾಂವ್ (ಹಳವಳ್ಳಿ), ತಾ: ಅಂಕೋಲಾ ರವರು ದಿನಾಂಕ: 19-09-2021 ರಂದು 12-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 18/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ವೆಂಕಟರಮಣ ತಂದೆ ನಾಗಪ್ಪ ಗೊಂಡ, ಪ್ರಾಯ-51 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ದೋಣದಾರಿ, ವೆಂಕಟಾಪುರ, ಶಿರಾಲಿ, ತಾ: ಭಟ್ಕಳ. ಈತನು ರೈತಾಬಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದವನು, ದಿನಾಂಕ: 18-09-2021 ರಂದು ಸಾಯಂಕಾಲ 16-00 ಗಂಟೆಗೆ ತನ್ನ ಮನೆಯಿಂದ ಶಿರಾಲಿ ವೆಂಕಟಾಪುರ ನದಿ ದಡದ ಬಳಿ ಇದ್ದ ತಮ್ಮ ಜಮೀನಿನಲ್ಲಿ ಕೃಷಿ ಕೆಲಸಕ್ಕೆ ಹೋದವನು ರಾತ್ರಿಯಾದರೂ ಮನೆಗೆ ಬಾರದೇ ಇದ್ದು, ಈ ಬಗ್ಗೆ ಆತನ ಮನೆಯ ಜನರು ಹುಡುಕಾಟದಲ್ಲಿ ಇರುವಾಗ ಇಂದು ದಿನಾಂಕ: 19-09-2021 ರಂದು ಸಾಯಂಕಾಲ 16-45 ಗಂಟೆಗೆ ಮೃತನ ಶವವು ಶಿರಾಲಿಯ ವೆಂಕಟಾಪುರ ನದಿಯಲ್ಲಿ ದೊರೆತಿದ್ದು, ಮೃತನು ದಿನಾಂಕ: 18-09-2021 ರಂದು ಕೃಷಿ ಕೆಲಸಕ್ಕೆ ಹೋದವನು, ಕೃಷಿ ಕೆಲಸ ಮುಗಿಸಿ ಕೈಕಾಲು ತೊಳೆಯಲು ವೆಂಕಟಾಪುರ ನದಿಯಲ್ಲಿ ಇಳಿದಾಗ ಆಕಸ್ಮಿಕವಾಗಿ ನದಿ ನೀರಿನಲ್ಲಿ ಬಿದ್ದು ಮುಳುಗಿ ಮೃತಪಟ್ಟಿದ್ದು, ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಿದ ಬಗ್ಗೆ ಪಿರ್ಯಾದಿ ಶ್ರೀ ಶಂಕರ ತಂದೆ ನಾಗಪ್ಪ ಗೊಂಡ, ಪ್ರಾಯ-49 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ದೋಣದಾರಿ, ವೆಂಕಟಾಪುರ, ಶಿರಾಲಿ, ತಾ: ಭಟ್ಕಳ ರವರು ದಿನಾಂಕ: 19-09-2021 ರಂದು 17-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಯಲ್ಲಾಪುರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 30/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ನಾಗೇಶ ತಂದೆ ರಾಮಚಂದ್ರ ಭಟ್ಟ, ಪ್ರಾಯ-78 ವರ್ಷ, ವೃತ್ತಿ-ಮನೆ ಕೆಲಸ, ಸಾ|| ವಡ್ರಮನೆ ಗ್ರಾಮ, ನಾಗರಕಾನ್, ತಾ: ಯಲ್ಲಾಪುರ. ಪಿರ್ಯಾದಿಯವರ ತಂದೆಯವರಾದ ಇವರು ಕಳೆದ ಎರಡು ವರ್ಷಗಳಿಂದ ಹೊಟ್ಟೆನೋವಿನಿಂದ ಬಳಲುತ್ತಿದ್ದವರಿಗೆ ಔಷಧೋಪಚಾರ ಮಾಡಿದರೂ ಸಹ ಸರಿಯಾಗಿ ಗುಣಮುಖವಾಗದೇ ಇದ್ದುದರಿಂದ ಅದನ್ನೇ ಮನಸ್ಸಿಗೆ ಹಚ್ಚಿಕೊಂಡು ಬೇಜಾರಿನಿಂದ ಇದ್ದವರು, ದಿನಾಂಕ: 19-09-2021 ರಂದು ಬೆಳಿಗ್ಗೆ 09-30 ಗಂಟೆಯಿಂದ 18-30 ಗಂಟೆಯ ನಡುವಿನ ಅವಧಿಯಲ್ಲಿ ಯಲ್ಲಾಪುರ ತಾಲೂಕಿನ ಚಕ್ರಬೈಲ್ ಕೆರೆಯಲ್ಲಿ ಹಾರಿ ನೀರಿನಲ್ಲಿ ಮುಳುಗಿ (ಮೃತಪಟ್ಟಿರುತ್ತಾರೆ) ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ದತ್ತಾತ್ರೇಯ ತಂದೆ ನಾಗೇಶ ಭಟ್ಟ, ಪ್ರಾಯ-50 ವರ್ಷ, ವೃತ್ತಿ-ಕೃಷಿ ಕೆಲಸ ಸಾ|| ವಡ್ರಮನೆ ಗ್ರಾಮ, ನಾಗರಕಾನ್ ತಾ: ಯಲ್ಲಾಪುರ ರವರು ದಿನಾಂಕ: 19-09-2021 ರಂದು 20-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

ಇತ್ತೀಚಿನ ನವೀಕರಣ​ : 20-09-2021 06:29 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080