ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 20-04-2021

at 00:00 hrs to 24:00 hrs

 

ಚಿತ್ತಾಕುಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 29/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ಇಸ್ಮಾಯಿಲ್ ತಂದೆ ಮೊಹಮ್ಮದ್ ಮುಲ್ಲಾ, ಪ್ರಾಯ-53 ವರ್ಷ, ವೃತ್ತಿ-ಅಂಗಡಿ ವ್ಯಾಪಾರ, ಸಾ|| ತಾರಿವಾಡಾ, ಸದಾಶಿವಗಡ, ಕಾರವಾರ. ಈತನು ದಿನಾಂಕ: 19-04-2021 ರಂದು 17-15 ಘಂಟೆಗೆ ಸದಾಶಿವಗಡದ ತಾರಿವಾಡಾದ ಮೂರು ರಸ್ತೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ 01/- ರೂಪಾಯಿಗೆ 80/- ರೂಪಾಯಿ ಕೊಡುವುದಾಗಿ ಹೇಳಿ ಸಾರ್ವಜನಿಕರಿಂದ ಹಣವನ್ನು ಪಡೆದು ಆ ಹಣವನ್ನು ಅಂಕೆ-ಸಂಖ್ಯೆಗಳ ಮೇಲೆ ಪಂಥ ಕಟ್ಟಿ ಓ.ಸಿ ಚೀಟಿಯನ್ನು ಬರೆದು ಕೊಡುತ್ತಿದ್ದವನಿಗೆ ಹಿಡಿದು ಸದರಿಯವನಿಂದ ನಗದು ಹಣ 1,290/- ರೂಪಾಯಿ ಹಾಗೂ ಓ.ಸಿ ಜೂಗಾರಾಟದ ಸಲಕರಣೆಗಳಾದ ಅಂಕೆ-ಸಂಖ್ಯೆ ಬರೆದ ಚೀಟಿ ಮತ್ತು ಬಾಲ್ ಪೆನ್ ಅನ್ನು ವಶಪಡಿಸಿಕೊಂಡ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಪ್ರವೀಣ ಕುಮಾರ ಆರ್, ಪಿ.ಎಸ್.ಐ (ಕಾ&ಸು), ಚಿತ್ತಾಕುಲಾ ಪೊಲೀಸ್ ಠಾಣೆ ರವರು ದಿನಾಂಕ: 20-04-2021 ರಂದು 16-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಅಂಕೋಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 75/2021, ಕಲಂ: 279, 338 ಐಪಿಸಿ ಹಾಗೂ ಕಲಂ: 187 ಐ.ಎಮ್.ವಿ ಎಕ್ಟ್ ನೇದ್ದರ ವಿವರ...... ನಮೂದಿತ ಆರೋಪಿತನು ಯಾವುದೋ ಮೋಟಾರ್ ಸೈಕಲ್ ಸವಾರನಾಗಿದ್ದು, ಮೋಟಾರ್ ಸೈಕಲ್ ನಂಬರ್ ಹಾಗೂ ಸವಾರನ ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಈತನು ದಿನಾಂಕ: 11-04-2020 ರಂದು ರಾತ್ರಿ 20-15 ಗಂಟೆಯ ಸುಮಾರಿಗೆ ಅಂಕೋಲಾ ತಾಲೂಕಿನ ಬೆಲೆಕೇರಿಯಿಂದ ಬೆಲೇಕೇರಿ ಕ್ರಾಸ್ ಕಡೆಗೆ ಹಾಯ್ದಿರುವ ಡಾಂಬರ್ ರಸ್ತೆಯ ಮೇಲೆ ತನ್ನ ಮೋಟಾರ್ ಸೈಕಲನ್ನು ಅತೀವೇಗವಾಗಿ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಬೆಲೇಕೇರಿ ಕಡೆಯಿಂದ ಬೆಲೇಕೇರಿ ಕ್ರಾಸ್ ಕಡೆಗೆ ಯುವರಾಜ ತಂದೆ ಗಣಪತಿ ನಾಯ್ಕ, ಪ್ರಾಯ-19 ವರ್ಷ, ವೃತ್ತಿ-ಮನೆಯಲ್ಲಿ ಸಾ|| ದಂಡೆಭಾಗ, ಅವರ್ಸಾ, ತಾ: ಅಂಕೋಲಾ ಇತನು ಚಲಾಯಿಸಿಕೊಂಡು ಬರುತ್ತಿದ್ದಾ ಮೋಟಾರ್ ಸೈಕಲ್ ನಂ: ಕೆ.ಎ-30/ಕೆ-6145 ನೇದಕ್ಕೆ ಅಪಘಾತ ಪಡಿಸಿ, ಯುವರಾಜ ಈತನ ತಲೆಗೆ ಗಂಭೀರ ಸ್ವರೂಪದ ಗಾಯನೋವು ಪಡಿಸಿ, ತನ್ನ ಮೋಟಾರ್ ಸೈಕಲನ್ನು ಸ್ಥಳದಲ್ಲಿ ನಿಲ್ಲಿಸದೇ ಅಲ್ಲಿಂದ ಸವಾರಿ ಮಾಡಿಕೊಂಡು ಹೋಗಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಗಣಪತಿ ತಂದೆ ಲಕ್ಷ್ಮಣ ನಾಯ್ಕ, ಪ್ರಾಯ-45 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ದಂಡೆಭಾಗ, ಅವರ್ಸಾ, ತಾ: ಅಂಕೋಲಾ ರವರು ದಿನಾಂಕ: 20-04-2021 ರಂದು 15-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಅಂಕೋಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 76/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ರಾಜು ತಂದೆ ಭಾನು ನಾಯ್ಕ, ಪ್ರಾಯ-58 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕಣಸಿಗದ್ದೆ, ತಾ: ಅಂಕೋಲಾ. ಈತನು ದಿನಾಂಕ: 20-04-2021 ರಂದು 14-40 ಗಂಟೆಯ ಸುಮಾರಿಗೆ ಅಂಕೋಲಾ ಶಹರದ ಶಿರಸಿ ಅರ್ಬನ್ ಬ್ಯಾಂಕ್ ಹತ್ತಿರದ ಸಾರ್ವಜನಿಕ ರಸ್ತೆಯ ಬದಿಯಲ್ಲಿ ನಿಂತು ತನ್ನ ಲಾಭಕೋಸ್ಕರ ಬರ-ಹೋಗುವ ಸಾರ್ವಜನಿಕರನ್ನು ಕರೆಯುತ್ತಾ ತಮ್ಮ ತಮ್ಮ ಅದೃಷ್ಟದ ಸಂಖ್ಯೆಗಳ ಮೇಲೆ ಹಣ ಪಂಥ ಕಟ್ಟಿ ಅದೃಷ್ಟ ಸಂಖ್ಯೆ ತಾಗಿದರೆ 01/- ರೂಪಾಯಿಗೆ 80/- ರೂಪಾಯಿ ಕೊಡುವುದಾಗಿ ಹೇಳಿ ಅವರ ಮನವೊಲಿಸಿ, ಸಾರ್ವಜನಿಕರಿಂದ ಅಕ್ರಮವಾಗಿ ಹಣ ಪಡೆದು ಅವರು ಹೇಳಿದ ಅಂಕೆ-ಸಂಖ್ಯೆಯನ್ನು ತನ್ನ ಹತ್ತಿರ ಇರುವ ಚೀಟಿಯಲ್ಲಿ ಬರೆದುಕೊಂಡು ಓ.ಸಿ ಮಟಕಾ ಜೂಗಾರಾಟ ಆಡಿಸುತ್ತಿದ್ದಾಗ ನಗದು ಹಣ 1,090/- ರೂಪಾಯಿ ಹಾಗೂ ಇತರೆ ಓ.ಸಿ ಮಟಕಾ ಜೂಗಾರಾಟದ ಸಾಮಗ್ರಿಗಳಾದ 1). ಅಂಕೆ-ಸಂಖ್ಯೆ ಬರೆದ ಚೀಟಿ-01, 2). ಖಾಲಿ ಚೀಟಿಗಳು-04, 3). ಬಾಲ್ ಪೆನ್-01 ನೇದವುಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಕೃಷ್ಣಾನಂದ ಜಿ. ನಾಯ್ಕ, ಪೊಲೀಸ್ ನೀರೀಕ್ಷಕರು, ಅಂಕೋಲಾ ಪೊಲೀಸ್ ಠಾಣೆ ರವರು ದಿನಾಂಕ: 20-04-2021 ರಂದು 16-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಅಂಕೋಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 77/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ಪ್ರಕಾಶ ತಂದೆ ಲಕ್ಷ್ಮಣ ಆಗೇರ, ಪ್ರಾಯ-28 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಶಿರೂರು, ತಾ: ಅಂಕೋಲಾ. ಈತನು ದಿನಾಂಕ: 20-04-2021 ರಂದು 14-45 ಗಂಟೆಯ ಸುಮಾರಿಗೆ ಅಂಕೋಲಾ ತಾಲೂಕಿನ ಶಿರೂರಿನ ಶ್ರೀ ಬೀರ ದೇವಸ್ಥಾನದ ಹತ್ತಿರದ ಸಾರ್ವಜನಿಕ ರಸ್ತೆಯ ಬದಿಯಲ್ಲಿ ನಿಂತು ತನ್ನ ಲಾಭಕೋಸ್ಕರ ಬರ-ಹೋಗುವ ಸಾರ್ವಜನಿಕರನ್ನು ಕರೆಯುತ್ತಾ ತಮ್ಮ ತಮ್ಮ ಅದೃಷ್ಟದ ಸಂಖ್ಯೆಗಳ ಮೇಲೆ ಹಣ ಪಂಥ ಕಟ್ಟಿ ಅದೃಷ್ಟ ಸಂಖ್ಯೆ ತಾಗಿದರೆ 01/- ರೂಪಾಯಿಗೆ 80/- ರೂಪಾಯಿ ಕೊಡುವುದಾಗಿ ಹೇಳಿ ಅವರ ಮನವೊಲಿಸಿ, ಸಾರ್ವಜನಿಕರಿಂದ ಅಕ್ರಮವಾಗಿ ಹಣ ಪಡೆದು ಅವರು ಹೇಳಿದ ಅಂಕೆ-ಸಂಖ್ಯೆಯನ್ನು ತನ್ನ ಹತ್ತಿರ ಇರುವ ಚೀಟಿಯಲ್ಲಿ ಬರೆದುಕೊಂಡು ಓ.ಸಿ ಮಟಕಾ ಜೂಗಾರಾಟ ಆಡಿಸುತ್ತಿದ್ದಾಗ ನಗದು ಹಣ 1,080/- ರೂಪಾಯಿ ಹಾಗೂ ಇತರೆ ಓ.ಸಿ ಮಟಕಾ ಜೂಗಾರಾಟದ ಸಾಮಗ್ರಿಗಳಾದ 1). ಅಂಕೆ-ಸಂಖ್ಯೆ ಬರೆದ ಚೀಟಿ-01, 2). ಖಾಲಿ ಚೀಟಿಗಳು-04, 3). ಬಾಲ್ ಪೆನ್-01 ನೇದವುಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಸಂಪತ್ ಇ. ಸಿ, ಪಿ.ಎಸ್.ಐ, ಅಂಕೋಲಾ ಪೊಲೀಸ್ ಠಾಣೆ ರವರು ದಿನಾಂಕ: 20-04-2021 ರಂದು 16-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 118/2021, ಕಲಂ: 279 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಈರಪ್ಪ ತಂದೆ ಮಲಸಿದ್ದಪ್ಪ ವಾಲಿ, ಸಾ|| ತಿಮ್ಮಸಗಿ, ತಾ: ಬಾದಾಮಿ, ಜಿ: ಬಾಗಲಕೋಟೆ (ಲಾರಿ ನಂ: ಕೆ.ಎ-44/6370 ನೇದರ ಚಾಲಕ). ಈತನು ದಿನಾಂಕ: 19-4-2021 ರಂದು ಬೆಳಿಗ್ಗೆ 08-30 ಗಂಟೆಯ ಸಮಯಕ್ಕೆ ಹೊನ್ನಾವರ ತಾಲೂಕಿನ ಗೇರುಸೊಪ್ಪ ವ್ಯೂ ಪಾಯಿಂಟ್ ಹತ್ತಿರ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-69 ರಲ್ಲಿ ತಾನು ಚಲಾಯಿಸುತ್ತಿದ್ದ ಲಾರಿ ನಂ: ಕೆ.ಎ-44/6370 ನೇದನ್ನು ಸಾಗರ ಕಡೆಯಿಂದ ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ನಿಯಂತ್ರಣ ತಪ್ಪಿ ಲಾರಿಯನ್ನು ಪಲ್ಟಿಗೊಳಿಸಿ ಅಪಘಾತ ಪಡಿಸಿ, ಲಾರಿ ಹಾಗೂ ಲಾರಿಯಲ್ಲಿದ್ದ ಗ್ರಾನೈಟ್ಸ್ ಗಳನ್ನು ಜಖಂಗೊಳಿಸಿದ ಬಗ್ಗೆ ಪಿರ್ಯಾದಿ ಶ್ರೀ ವೆಂಕಟ್ರಮಣ ತಂದೆ ಮಹಾಬಲ ಗೌಡ, ಪ್ರಾಯ-34 ವರ್ಷ, ವೃತ್ತಿ-ಶ್ರೀದುರ್ಗಾ ಟೈಲ್ಸ್, ಚಂದಾವರ ಮಾಲಿಕರು, ಸಾ|| ತಲಗೇರಿ, ಚಂದಾವರ, ತಾ: ಹೊನ್ನಾವರ ರವರು ದಿನಾಂಕ: 20-04-2021 ರಂದು 12-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮಂಕಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 67/2021, ಕಲಂ: 87 ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ 1]. ಮಾದೇವ ಪರಶು ಹರಿಕಂತ್ರ, ಪ್ರಾಯ-39 ವರ್ಷ, ಸಾ|| ಬೈಲೂರ, ಬಿದ್ರಕೇರಿ, ತಾ: ಹೊನ್ನಾವರ, 2]. ದುರ್ಗಾದಾಸ ನಾರಾಯಣ ಮೊಗೇರ, ಪ್ರಾಯ-39 ವರ್ಷ, ಸಾ|| ಬಿದ್ರಕೇರಿ, ತಾ: ಹೊನ್ನಾವರ, 3]. ನಾಗರಾಜ ಜಟ್ಟ ನಾಯ್ಕ, ಪ್ರಾಯ-32 ವರ್ಷ, ಸಾ|| ಬಸ್ತಿ, ತೆರನಮಕ್ಕಿ, ಮುರ್ಡೇಶ್ವರ, ತಾ: ಭಟ್ಕಳ, 4]. ಮಾದೇವ ರಾಮ ಹರಿಕಂತ್ರ, ಪ್ರಾಯ-28 ವರ್ಷ, ಸಾ|| ಬೈಲೂರ, ಬಿದ್ರಕೇರಿ, ತಾ: ಹೊನ್ನಾವರ, 5]. ಮಹೇಂದ್ರ ಮಂಜುನಾಥ ನಾಯ್ಕ, ಪ್ರಾಯ-27 ವರ್ಷ, ಸಾ|| ಜಾಲಿ, ತಾ: ಭಟ್ಕಳ, 6]. ಸಂತೋಷ ತಂದೆ ತಿಮ್ಮಪ್ಪ ನಾಯ್ಕ, ಪ್ರಾಯ-29 ವರ್ಷ, ಸಾ|| ಬೈಲೂರು, ಮಡಿಕೇರಿ, ತಾ: ಹೊನ್ನಾವರ, 7]. ರಾಜು ತಂದೆ ಮಂಜಪ್ಪ ನಾಯ್ಕ, ಪ್ರಾಯ-30 ವರ್ಷ, ಸಾ|| ಬೈಲೂರು, ಮಡಿಕೇರಿ, ತಾ: ಹೊನ್ನಾವರ, 8]. ಈಶ್ವರ ನಾಗಪ್ಪ ನಾಯ್ಕ, ಪ್ರಾಯ-37 ವರ್ಷ, ಸಾ|| ಮಾವಳ್ಳಿ, ಮುರ್ಡೇಶ್ವರ, ತಾ: ಭಟ್ಕಳ, 9]. ಬಾಬು ದುರ್ಗಯ್ಯ ಗೊಂಡ, ಪ್ರಾಯ-40 ವರ್ಷ, ಸಾ|| ಹೆರ್ತಾರ, ತಾ: ಭಟ್ಕಳ, 10]. ತಿಮ್ಮಪ್ಪ ಮಾದೇವ ಮೊಗೇರ, ಪ್ರಾಯ-38 ವರ್ಷ, ಸಾ|| ಕೊಪ್ಪದಮಕ್ಕಿ, ಬಿದ್ರಕೇರಿ, ತಾ: ಹೊನ್ನಾವರ, 11]. ಸುರೇಶ ವೆಂಕಟ್ರಮಣ ಮೊಗೇರ, ಸಾ|| ಕೊಪ್ಪದಮಕ್ಕಿ, ತಾ: ಹೊನ್ನಾವರ. ಈ ನಮೂದಿತ ಆರೋಪಿತರು ತಮ್ಮ ತಮ್ಮ ಲಾಭಕ್ಕೋಸ್ಕರ ಮಂಕಿಯ ಕೊಪ್ಪದಮಕ್ಕಿಯ ಅಳವೆಯಲ್ಲಿರುವ ಗದ್ದೆ ಬಯಲಿನಲ್ಲಿ ದಿನಾಂಕ: 19-04-2021 ರಂದು 16-00 ಗಂಟೆಗೆ ಕೋಳಿ ಹುಂಜಗಳ ಮೇಲೆ ಹಣವನ್ನು ಪಂಥವಾಗಿಟ್ಟುಕೊಂಡು ಕೋಳಿ ಅಂಕ ಜೂಗಾರಾಟ ಆಡುತ್ತಿದ್ದಾಗ ಜೂಗಾರಾಟಕ್ಕೆ ಬಳಸಿದ ಕೋಳಿ ಹುಂಜ-3, ಅ||ಕಿ|| 600/- ರೂಪಾಯಿ ಹಾಗೂ ಜೂಗಾರಾಟಕ್ಕೆ ಬಳಸಿದ ಒಟ್ಟು ಹಣ 10,340/- ರೂಪಾಯಿಗಳ ಸಮೇತ ಆರೋಪಿ 1 ರಿಂದ 10 ನೇಯವರುಇ ಸೆರೆ ಸಿಕ್ಕಿದ್ದು ಹಾಗೂ ಆರೋಪಿ 11 ನೇಯವನು ಓಡಿ ಹೋದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಪರಮಾನಂದ ಬಿ. ಕೊಣ್ಣುರ, ಪಿ.ಎಸ್.ಐ, ಮಂಕಿ ಪೊಲೀಸ್ ಠಾಣೆ ರವರು ದಿನಾಂಕ: 20-04-2021 ರಂದು 16-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಶಹರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 53/2021, ಕಲಂ: 420 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಮೊಹಮ್ಮದ್ ಅಮಜತ್ ಸೈಯದ್ ತಂದೆ ಸೈಯದ್ ಹಾಶೀಮ್ ಸಾಹೀದ್, ಪ್ರಾಯ-48 ವರ್ಷ, ಸಾ|| ಮನೆ ನಂ: 70, ಸೈಯದ್ ಮಂಜಿಲ್, ಸಿದ್ದಿಕ್ ಸ್ಟ್ರೀಟ್, ತಾ: ಭಟ್ಕಳ. ಈತನು ಪ್ರಾದೇಶಿಕ ಪಾಸಪೋರ್ಟ್ ಕಚೇರಿ ಬೆಂಗಳೂರು ರವರು ತಿಳಿಸಿದಂತೆ ಪಾಸಪೋರ್ಟ್ ನಂ: L564586 ನೇದು ದಿನಾಂಕ: 02-06-1992 ಮತ್ತು ಪಾಸಪೋರ್ಟ್ ನಂ: V392392 ನೇದು ದಿನಾಂಕ: 25-01-1996 ಎರಡು ಪ್ರತ್ಯೇಕ ಪಾಸಪೋರ್ಟ್ ಗಳನ್ನು ತನ್ನ ಲಾಭಕ್ಕೋಸ್ಕರ ಪಡೆದುಕೊಂಡು ಮರೆಮಾಚಿ ದುರುಪಯೋಗ ಮಾಡಿದ ಬಗ್ಗೆ ಪಿರ್ಯಾದಿ ಸ||ತ|| ಶ್ರೀಮತಿ ಸುಮಾ ಬಿ, ಡಬ್ಲ್ಯೂ.ಪಿ.ಎಸ್.ಐ, ಭಟ್ಕಳ ಶಹರ ಪೊಲೀಸ್ ಠಾಣೆ ರವರು ದಿನಾಂಕ: 20-04-2021 ರಂದು 19-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಶಹರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 57/2021, ಕಲಂ: 4, 12 THE KARNATAKA PREVENTION OF SLAUGHTER AND PRESERVATION OF CATTLE ORDINANCE-2020 ಹಾಗೂ ಕಲಂ: 11(1)(D) PREVENTION OF CRUELTY TO ANIMALS ACT-1960 ಮತ್ತು ಕಲಂ: 192 ಎಮ್.ವಿ ಎಕ್ಟ್ ನೇದ್ದರ ವಿವರ...... ನಮೂದಿತ ಆರೋಪಿತ ಸಯ್ಯದ್ ಮೂಸಾ ತಂದೆ ಸಯ್ಯದ್ ಅಹ್ಮದ್, ಸಾ|| ಹನೀಪಾಬಾದ್, ಹೆಬಳೆ, ತಾ: ಭಟ್ಕಳ. ಈತನು ದಿನಾಂಕ: 20-04-2021 ರಂದು ಸಾಯಂಕಾಲ 18-15 ಗಂಟೆಯ ಸಮಯಕ್ಕೆ ಶಿರಾಲಿ ಕಡೆಯಿಂದ ಭಟ್ಕಳ ಕಡೆಗೆ ತಿಳಿ ಆಕಾಶ ನೀಲಿ ಬಣ್ಣದ ಮಾರುತಿ ಸ್ವಿಫ್ಟ್ ವಾಹನ ನಂ: ಕೆ.ಎ-04/ಎಮ್.ಎಫ್-8369 ನೇದರ ಹಿಂಬದಿಯ ಡಿಕ್ಕಿಯಲ್ಲಿ ಸೀಟ್ ಅನ್ನು ಫೋಲ್ಡಿಂಗ್ ಮಾಡಿ ಸುಮಾರು 1,500/- ರೂಪಾಯಿ ಬೆಲೆಯ ಹೋರಿ ಕರುವನ್ನು ಹಿಂಸಾತ್ಮಕವಾಗಿ ಕಟ್ಟಿ ವಧೆ ಮಾಡುವ ಉದ್ದೇಶದಿಂದ ನೀರು, ಹುಲ್ಲು ಕೊಡದೆ ವಾಹನದಲ್ಲಿ ಸಕ್ಷಮ ಪ್ರಾಧಿಕಾರದಿಂದ ವಾಹನದಲ್ಲಿ ಜಾನುವಾರು ಸಾಗಾಟ ಮಾಡಲು ಪರವಾನಿಗೆ ಪಡೆಯದೇ ಹನೀಪಾಬಾದ್ ಕ್ರಾಸ್ ಹತ್ತಿರ ಪೊಲೀಸರನ್ನು ನೋಡಿ ವಾಹನ ಬಿಟ್ಟು ಓಡಿ ಹೋದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಭರತಕುಮಾರ ವಿ, ಪಿ.ಎಸ್.ಐ (ಕಾ&ಸು), ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ ರವರು ದಿನಾಂಕ: 20-04-2021 ರಂದು 20-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 68/2021, ಕಲಂ: ಹೆಂಗಸು ಮತ್ತು ಮಗು ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದವರು 1]. ಶ್ರೀಮತಿ ರೊಹೀಣಿ ಕೋಂ. ಮಾರುತಿ ದೇಸಾಯಿ, ಪ್ರಾಯ–28 ವರ್ಷ, ವೃತ್ತಿ-ಮನೆ ಕೆಲಸ, ಸಾ|| ರವೀಂದ್ರ ನಗರ, ಶಿರಸಿ ರಸ್ತೆ, ತಾ: ಯಲ್ಲಾಪುರ, 2]. ಕುಮಾರ: ಮಂಜುನಾಥ ತಂದೆ ಮಾರುತಿ. ದೇಸಾಯಿ. ಪ್ರಾಯ–07 ವರ್ಷ, ವೃತ್ತಿ-ವಿದ್ಯಾರ್ಥಿ, ಸಾ|| ರವೀಂದ್ರ ನಗರ, ಶಿರಸಿ ರಸ್ತೆ, ತಾ: ಯಲ್ಲಾಪುರ. ಈ ನಮೂದಿತ ಕಾಣೆಯಾದವರಲ್ಲಿ 1 ನೇಯವರು ಪಿರ್ಯಾದುದಾರ ಹೆಂಡತಿಯಾಗಿದ್ದು, ಶ್ರೀಮತಿ ರೋಹಿಣಿ ರವರು ಮನೆ ಕೆಲಸ ಮಾಡಿಕೊಂಡು ಮನೆಯಲ್ಲಿ ಇರುತ್ತಿದ್ದವಳು, ಆಗಾಗ ಯಾರೊಂದಿಗೋ ಮೊಬೈಲಿನಲ್ಲಿ ಮಾತಾಡುತ್ತಿದ್ದವಳು ದಿನಾಂಕ: 06-04-2021 ರಂದು ಬೆಳಿಗ್ಗೆ 09-30 ಗಂಟೆಗೆ ಪಿರ್ಯಾದಿಯವರು ಗ್ಯಾರೇಜ್ ಕೆಲಸಕ್ಕೆ ಹೋದ ನಂತರ ಮಗನೊಂದಿಗೆ ಮನೆಯಲ್ಲಿ ಇದ್ದವಳು, ಅದೇ ದಿನ ಮದ್ಯಾಹ್ನ 02-00 ಗಂಟೆಗೆ ಪಿರ್ಯಾದಿ ಮಗ ಕುಮಾರ: ಮಂಜುನಾಥ ದೇಸಾಯಿ ರವರನ್ನು ಸಂಗಡ ಕರೆದುಕೊಂಡು ತನ್ನ ಮನೆಯ ಬಾಗಿಲ ಬೀಗ ಹಾಕಿ ಬೀಗದ ಕೀಯನ್ನು ಮನೆಯ ಬಾಗಿಲ ಮೇಲೆ ಇಟ್ಟು ಎಲ್ಲಿಗೋ ಹೋದವಳು, ಮರಳಿ ಮನೆಗೆ ಬರದೇ ಎಲ್ಲಿಯೋ ಹೋಗಿ ಇಬ್ಬರು ಕಾಣೆಯಾಗಿದ್ದು, ಕಾಣೆಯಾದವರನ್ನು ಹುಡುಕಿ ಕೊಡಲಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಮಾರುತಿ ತಂದೆ ಪರುಶರಾಮ ದೇಸಾಯಿ, ಪ್ರಾಯ–38 ವರ್ಷ, ವೃತ್ತಿ-ಮನೆ ಕೆಲಸ, ಸಾ|| ರವೀಂದ್ರ ನಗರ, ಶಿರಸಿ ರಸ್ತೆ, ತಾ: ಯಲ್ಲಾಪುರ ರವರು ದಿನಾಂಕ: 20-04-2021 ರಂದು 01-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 69/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಷಣ್ಮುಖಯ್ಯ ಬಸಯ್ಯ ಹಳಿಯಾಳಮಠ, ಪ್ರಾಯ-40 ವರ್ಷ, ವೃತ್ತಿ-ಚಾಲಕ, ಸಾ|| ಧಾರವಾಡ (ಇನೋವಾ ಕಾರ್ ನಂ: ಕೆ.ಎ-35/ಎಮ್-5830 ನೇದರ ಚಾಲಕ). ಈತನು ದಿನಾಂಕ: 20-04-2021 ರಂದು 14-00 ಗಂಟೆಯ ಸುಮಾರಿಗೆ ಯಲ್ಲಾಪುರ ತಾಲೂಕಿನ ಅರಬೈಲ್ ಘಟ್ಟದಲ್ಲಿ ಹಾದು ಹೋದ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-63 ರಲ್ಲಿ ತನ್ನ ಬಾಬ್ತು ಇನೋವಾ ಕಾರ್ ನಂ: ಕೆ.ಎ-35/ಎಮ್-5830 ನೇದನ್ನು ಹುಬ್ಬಳ್ಳಿ ಕಡೆಯಿಂದ ಅಂಕೋಲಾ ಕಡೆಗೆ ಇಳಿಜಾರಿನ ರಸ್ತೆಯಲ್ಲಿ ಅತೀವೇಗವಾಗಿ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದವನು, ತನ್ನ ಸೈಡ್ ಬಿಟ್ಟು ರಸ್ತೆಯ ತನ್ನ ಬಲಕ್ಕೆ ಬಂದು ಪಿರ್ಯಾದಿಯವರು ಅಂಕೋಲಾ ಕಡೆಯಿಂದ ಹುಬ್ಬಳ್ಳಿ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ ಬೊಲೆರೋ ಪಿಕಪ್ ವಾಹನ ನಂ: ಕೆ.ಎ-27/ಬಿ-8104 ನೇದರ ಮುಂದಿನ ಬಲಬದಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದರಿಂದ ಇನೋವಾ ಕಾರಿನಲ್ಲಿದ್ದ 6 ಜನರಿಗೆ ಹಾಗೂ ಆರೋಪಿತನು ತನಗೂ ಕೂಡಾ ಗಾಯನೋವು ಪಡಿಸಿಕೊಂಡಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಮಲ್ಲಿಕಾರ್ಜುನ ತಂದೆ ಚೆನ್ನವಿರಪ್ಪ ಕೊಬ್ರಿಶೆಟ್ರ, ಪ್ರಾಯ-35 ವರ್ಷ, ವೃತ್ತಿ-ಚಾಲಕ ಮತ್ತು ಮಾಲಕ, ಸಾ|| ಕಾಗಿನೆಲೆ, ಸಂತೆ ಓಣಿ, ತಾ: ಬ್ಯಾಡಗಿ, ಜಿ: ಹಾವೇರಿ ರವರು ದಿನಾಂಕ: 20-04-2021 ರಂದು 20-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಶಿರಸಿ ನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 22/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ವಿಶ್ವನಾಥ ತಂದೆ ನಂದಪ್ಪ ಶಿವಶಿಂಪ್ಪರ, ಸಾ|| ಗದಗ, ಹಾಲಿ ಸಾ|| ಹಂಚಿನಕೇರೆ, ತಾ: ಶಿರಸಿ (ಮೋಟಾರ್ ಸೈಕಲ್ ನಂ: ಕೆ.ಎ-09/ಎಚ್.ಬಿ-0295 ನೇದರ ಸವಾರ). ಈತನು ದಿನಾಂಕ-20-04-2021 ರಂದು ರಾತ್ರಿ 20-15 ಗಂಟೆಯ ಸುಮಾರಿಗೆ ಶಿರಸಿ ಶಹರದ ಬನವಾಸಿ ರಸ್ತೆಯ ಫಾರೆಸ್ಟ್ ಕಾಲೇಜ್ ಹತ್ತಿರ ತನ್ನ ಬಾಬ್ತು ಮೋಟಾರ್ ಸೈಕಲ್ ನಂ: ಕೆ.ಎ-09/ಎಚ್.ಬಿ-0295 ನೇದನ್ನು ಬನವಾಸಿ ಕಡೆಯಿಂದ ಶಿರಸಿ ಕಡೆಗೆ ಹೋಗಲು ಅತೀವೇಗವಾಗಿ ಮತ್ತು ಅಜಾಗರೂಕತೆಯಿಂದ ಪೂರ್ತಿ ತನ್ನ ಬಲ ಸೈಡಿಗೆ ಚಲಾಯಿಸಿಕೊಂಡು ಬಂದವನು, ಶಿರಸಿ ಕಡೆಯಿಂದ ಹಂಚಿಕೇರಿ ಕಡೆಗೆ ಹೋಗುತ್ತಿದ್ದ ಆಟೋ ರಿಕ್ಷಾ ನಂ: ಕೆ.ಎ-31/ಎ-0396 ನೇದಕ್ಕೆ ಮುಂದುಗಡೆಯಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಅದರ ಚಾಲಕನಾ ಪಿರ್ಯಾದಿಯ ಬಲಗೈ ಭುಜಕ್ಕೆ, ಬಲಗಾಲಿಗೆ ಹಾಗೂ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಪಿರ್ಯಾದಿಯ ಮಗ ಅಯಾನ್ ಇವನ ತಲೆಗೆ, ಕುತ್ತಿಗೆಗೆ, ಬಲಗೈಗೆ ಹಾಗೂ ದತ್ತಾತ್ರೇಯ ಇವರಿಗೂ ಸಹ ಮೈಮೇಲೆ ಅಲ್ಲಿಲ್ಲಿ ಗಾಯನೋವು ಪಡಿಸಿದ್ದಲ್ಲದೇ, ಆರೋಪಿ ಮೋಟಾರ್ ಸೈಕಲ್ ಸವಾರನು ತನಗೂ ಸಹ ಗಾಯನೋವು ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ಹಜರತಲಿ ತಂದೆ ಮೌಲಾಸಾಬ್ ಹಣಗಿಕಟ್ಟಿ, ಪ್ರಾಯ-35 ವರ್ಷ, ವೃತ್ತಿ-ಆಟೋ ಚಾಲಕ, ಸಾ|| ಹಂಚಿನಕೇರಿ, ತಾ: ಶಿರಸಿ ರವರು ದಿನಾಂಕ: 20-04-2021 ರಂದು 23-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಶಿರಸಿ ಹೊಸಮಾರುಕಟ್ಟೆ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 42/2021, ಕಲಂ: ಹೆಂಗಸು ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಹೆಂಗಸು ಕುಮಾರಿ: ಸೌಜನ್ಯ ತಂದೆ ಸುಬ್ರಾಯ ಮರಾಠೆ, ಪ್ರಾಯ-19 ವರ್ಷ, ವೃತ್ತಿ-ವಿದ್ಯಾರ್ಥಿ, ಸಾ|| ಹುಬ್ಬಳ್ಳಿ ರೋಡ್, ನೆಹರೂ ನಗರ, ತಾ: ಶಿರಸಿ. ಪಿರ್ಯಾದಿಯವರ ಮಗಳಾದ ಇವಳು ಶಿರಸಿಯ ರಾಯಪ್ಪ ಹುಲೇಕಲ್ ಕಾಲೇಜಿನಲ್ಲಿ ಬಿ.ಕಾಂ ಪ್ರಥಮ ವರ್ಷದಲ್ಲಿ ವ್ಯಾಸಾಂಗ ಮಾಡುತ್ತಿದ್ದವಳು, ಕೊರೋನಾ ರೋಗದ ಕಾರಣ ಕಾಲೇಜಿನಲ್ಲಿ ಆನಲೈನ್ ಕ್ಲಾಸ್ ಕೇಳಿಕೊಂಡು ಮನೆಯಲ್ಲಿರುತ್ತಿದ್ದವಳು, ದಿನಾಂಕ: 20-04-2021 ರಂದು ಬೆಳಿಗ್ಗೆ 10-30 ಗಂಟೆಯಿಂದ 11-30 ಗಂಟೆಯ ನಡುವಿನ ಅವಧಿಯಲ್ಲಿ ಮನೆಯಿಂದ ಹೋದವಳು, ಈವರೆಗೆ ಮನೆಗೆ ಬಾರದೇ ಸಂಬಂಧಿಕರ ಮನೆಗೂ ಹೋಗದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದು, ಕಾಣೆಯಾದ ತನ್ನ ಮಗಳನ್ನು ಪತ್ತೆ ಮಾಡಿಕೊಡಬೇಕು ಎಂಬ ಬಗ್ಗೆ ಪಿರ್ಯಾದಿ ಶ್ರೀಮತಿ ಲತಾ ಕೋಂ. ಸುಬ್ರಾಯ ಮರಾಠೆ, ಪ್ರಾಯ-42 ವರ್ಷ, ವೃತ್ತಿ-ಅಂಗನವಾಡಿ ಶಿಕ್ಷಕಿ, ಸಾ|| ಹುಬ್ಬಳ್ಳಿ ರಸ್ತೆ, ನೆಹರೂ ನಗರ, ತಾ: ಶಿರಸಿ ರವರು ದಿನಾಂಕ: 20-04-2021 ರಂದು 18-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ಹೊಸಮಾರುಕಟ್ಟೆ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 43/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ನಾಗರಾಜ ತಂದೆ ಶಂಕರ ಗಾಂವಕರ, ಪ್ರಾಯ-43 ವರ್ಷ, ವೃತ್ತಿ-ಗೌಂಡಿ ಕೆಲಸ, ಸಾ|| ಪಡ್ತಿ ಗಲ್ಲಿ, ತಾ: ಶಿರಸಿ. ಈತನು ದಿನಾಂಕ: 20-04-2021 ರಂದು 18-05 ಗಂಟೆಗೆ ಶಿರಸಿ ನಗರದ ಹೊಸಪೇಟೆ ರಸ್ತೆಯಲ್ಲಿ ಟಿ.ಎಸ್.ಎಸ್ ರಸ್ತೆಯ ಕ್ರಾಸ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ತನ್ನ ಲಾಭಕ್ಕೋಸ್ಕರ ಅದೃಷ್ಟದ ಅಂಕೆ-ಸಂಖ್ಯೆಗಳ ಮೇಲೆ ಹಣವನ್ನು ಪಂಥವಾಗಿ ಕಟ್ಟಿದರೆ 01/- ರೂಪಾಯಿಗೆ 80/- ರೂಪಾಯಿ ಹಣವನ್ನು ಕೊಡುತ್ತೇನೆ ಅಂತಾ ಹೇಳಿ ಜನರಿಗೆ ಕರೆದು ಜನರಿಂದ ಹಣವನ್ನು ಅದೃಷ್ಟದ ಅಂಕೆ-ಸಂಖ್ಯೆಗಳ ಪಂಥವಾಗಿ ಕಟ್ಟಿಸಿಕೊಂಡು ಓ.ಸಿ ಮಟಕಾ ಜೂಗಾರಾಟ ನಡೆಸುತ್ತಿರುವಾಗ ಪಿರ್ಯಾದಿಯವರು ಪಂಚರು ಮತ್ತು ಸಿಬ್ಬಂದಿಗಳೊಂದಿಗೆ ಸೇರಿ ದಾಳಿ ನಡೆಸಿದಾಗ ಓ.ಸಿ ಮಟಕಾ ಜೂಗಾರಾಟದಿಂದ ಸಂಗ್ರಹವಾದ ನಗದು ಹಣ 1,200/- ರೂಪಾಯಿ ಹಾಗೂ ಓ.ಸಿ ಜೂಗರಾಟಕ್ಕೆ ಬಳಸಿದ ಅಂಕೆ-ಸಂಖ್ಯೆ ಬರೆದ ಚೀಟಿ-01, ಅಕಿ|| 00.00/- ರೂಪಾಯಿ ಮತ್ತು ಬಾಲ್ ಪೆನ್-01, ಅ||ಕಿ|| 00.00/- ರೂಪಾಯಿ, 4). ಖಾಲಿ ಪೇಪರ್ ತುಂಡುಗಳು-07, ಅಕಿ|| 00.00/- ರೂಪಾಯಿ ನೇದವುಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಶ್ರೀ ನಾಗಪ್ಪ, ಪಿ.ಎಸ್.ಐ, ಶಿರಸಿ ಹೊಸಮಾರುಕಟ್ಟೆ ಪೊಲೀಸ್ ಠಾಣೆ ರವರು ದಿನಾಂಕ: 20-04-2021 ರಂದು 20-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ಹೊಸಮಾರುಕಟ್ಟೆ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 44/2021, ಕಲಂ: 15(ಎ), 32(3) ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ವಿಷ್ಣು ತಂದೆ ಸುಬ್ರಾಯ ನಾಜಗಾರ, ಪ್ರಾಯ-43 ವರ್ಷ, ವೃತ್ತಿ-ಚಹಾ ವ್ಯಾಪಾರ, ಸಾ|| ಮರಾಠಿಕೊಪ್ಪ, ತಾ: ಶಿರಸಿ. ಈತನು ದಿನಾಂಕ: 20-04-2021 ರಂದು 20-50 ಗಂಟೆಯ ಸುಮಾರಿಗೆ ಶಿರಸಿ ನಗರದ ಮರಾಠಿಕೊಪ್ಪ ಮುಖ್ಯ ರಸ್ತೆಯಲ್ಲಿ ರೇಷನ್ ಅಂಗಡಿಯ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಜನರಿಗೆ ಮುಕ್ತವಾಗಿ ಮದ್ಯವನ್ನು ಕುಡಿಯಲು ಅವಕಾಶ ಮಾಡಿಕೊಟ್ಟ ಕಾಲಕ್ಕೆ ಪಿರ್ಯಾದಿಯವರು ಪಂಚರು ಮತ್ತು ಸಿಬ್ಬಂದಿಗಳೊಂದಿಗೆ ಸೇರಿ ದಾಳಿ ಮಾಡಿದಾಗ 1). ವಿವಿಧ ಮುಖಬೆಲೆಯ ನಗದು ಹಣ 200/- ರೂಪಾಯಿ, 2). Haywards Cheers Whisky ಹೆಸರಿನ 90 ML ಅಳತೆಯ ಪ್ಯಾಕೆಟ್ ಗಳು-08, ತಲಾ ಒಂದಕ್ಕೆ 35.13/- ರೂಪಾಯಿಯಂತೆ ಒಟ್ಟೂ 281.04/- ರೂಪಾಯಿ, 3). ಮದ್ಯವನ್ನು ಕುಡಿಯಲು ಉಪಯೋಗಿಸಿದ Use & ಖಿhಡಿough Through Plastic Glass-5, ಅ||ಕಿ|| 00.00/- ರೂಪಾಯಿ, 4). 01 ಲೀಟರ್ ನೀರಿನ ಖಾಲಿ ಬಾಟಲಿಗಳು-02, ಅ||ಕಿ|| 00.00/- ರೂಪಾಯಿ ನೇದವುಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಶ್ರೀ ನಾಗಪ್ಪ, ಪಿ.ಎಸ್.ಐ, ಶಿರಸಿ ಹೊಸಮಾರುಕಟ್ಟೆ ಪೊಲೀಸ್ ಠಾಣೆ ರವರು ದಿನಾಂಕ: 20-04-2021 ರಂದು 22-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಸಿದ್ದಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 51/2021, ಕಲಂ: 87 ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ಬೂರ್ಯಾ ತಂದೆ ಚೌಡ ಗೊಂಡ, ಪ್ರಾಯ-38 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಹಾರೆಕೊಪ್ಪ, ತಾ: ಸಿದ್ದಾಪುರ, 2]. ಶಿವಕುಮಾರ ತಂದೆ ಮಂಜಾ ಒಕ್ಕಲಿಗ, ಪ್ರಾಯ-31 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಹಾರೆಕೊಪ್ಪ, ತಾ: ಸಿದ್ದಾಪುರ, 3]. ಕೃಷ್ಣ ತಂದೆ ಬಂಗಾರ್ಯ ಗೊಂಡ, ಪ್ರಾಯ-29 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಹಾರೆಕೊಪ್ಪ, ತಾ: ಸಿದ್ದಾಪುರ, 4]. ಜಯಕುಮಾರ ತಂದೆ ಶಿವರಾಮ ಒಕ್ಕಲಿಗ, ಪ್ರಾಯ-33 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಹಾರೆಕೊಪ್ಪ, ತಾ: ಸಿದ್ದಾಪುರ. ಈ ನಮೂದಿತ ಆರೋಪಿತರು ದಿನಾಂಕ: 20-04-2021 ರಂದು 17-00 ಗಂಟೆಗೆ ಸಿದ್ದಾಪುರ ತಾಲೂಕಿನ ಹಾರೆಕೊಪ್ಪಾದ ನೀಲಗೀರಿ ಪ್ಲಾಂಟೇಶನ್ ದಲ್ಲಿ ತಮ್ಮ ಅನ್ಯಾಯದ ಲಾಭಕ್ಕೋಸ್ಕರ ಅಂದರ್-ಬಾಹರ್ ಇಸ್ಪೀಟ್ ಜುಗಾರಾಟ ಆಡುತ್ತಿದ್ದಾಗ ಪಿರ್ಯಾದಿಯವರು ಸಿಬ್ಬಂದಿ ಹಾಗೂ ಪಂಚರೊಂದಿಗೆ ಸೇರಿ ದಾಳಿ ಮಾಡಿದಾಗ ಆರೋಪಿತರು 1). ನಗದು ಹಣ 4,200/- ರೂಪಾಯಿ, 2). 52 ಇಸ್ಪೀಟ್ ಎಲೆಗಳು, 3). ಮಂಡಕ್ಕೆ ಹಾಸಿದ್ದ ಒಂದು ಟವೆಲ್ ಇವುಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಮಹಂತಪ್ಪ ಜಿ. ಕುಂಬಾರ, ಪಿ.ಎಸ್.ಐ, ಸಿದ್ದಾಪುರ ಪೊಲೀಸ್ ಠಾಣೆ ರವರು ದಿನಾಂಕ: 20-04-2021 ರಂದು 20-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ರಾಮನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 41/2021, ಕಲಂ: 504, 323, 324, 427, 506 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಪ್ರವೀಣ ಸುಧೀರ, ಸಾ|| ರಾಮಲಿಂಗಾ ಗಲ್ಲಿ, ರಾಮನಗರ, ತಾ: ಜೋಯಿಡಾ. ಪಿರ್ಯಾದಿಯವರು ಹಾಗೂ ಪಿರ್ಯಾದಿಯವರ ಗೆಳೆಯನಾದ ಬಮ್ಮು ತಂದೆ ಬಾಗು ಪೊಂಡೆ, ಸಾ|| ತಿಂಬೋಲಿ, ತಾ: ಜೋಯಿಡಾ ಇವನು ಸೇರಿಕೊಂಡು ಎರಡು ತಿಂಗಳಿನಿಂದ ರಾಮನಗರದ ಭಾರತ ಪೆಟ್ರೋಲ್ ಬಂಕ್ ಹತ್ತಿರ ಇರುವ ಸೂಪಾ ಫ್ಯಾಮಿಲಿ ಡಾಬಾ ಹೊಟೇಲನ್ನು ನಡೆಸಿಕೊಂಡು ಹೋಗುತ್ತಿದ್ದು, ಹೀಗಿರುವಾಗ ದಿನಾಂಕ: 19-04-2021 ರಂದು ರಾತ್ರಿ 11-00 ಗಂಟೆಯ ಸುಮಾರಿಗೆ ಪಿರ್ಯಾದಿಯವರು ಅವರ ಸೂಪಾ ಫ್ಯಾಮಿಲಿ ಡಾಬಾದ ಡಾಬಾದಲ್ಲಿ ಕೆಲಸಗಾರರೊಂದಿಗೆ ಕೆಲಸ ಮಾಡುತ್ತಿದ್ದಾಗ ನಮೂದಿತ ಆರೋಪಿತನು ಪಿರ್ಯಾದಿಯವರ ಡಾಬಾಗೆ ಬಂದು ಊಟ ಮಾಡಿ, ಅಲ್ಲಿಂದ ದುಡ್ಡು ಕೊಡದೇ ಹಾಗೇ ಹೋಗುತ್ತಿದ್ದಾಗ ಪಿರ್ಯಾದಿಯವರು ‘ಉಟ ಮಾಡಿದ ಹಣ ಕೊಡು’ ಅಂತಾ ಕೇಳಿದಾಗ ಆರೋಪಿತನು ಪಿರ್ಯಾದಿಯವರಿಗೆ ಉದ್ದೇಶಿಸಿ ‘ಮಗನೇ ನಿನಗೆ ದುಡ್ಡು ಕೊಡಬೇಕಾ? ಬೋಸಡಿಕೇ, ರಾಂಡಿಚ್ಯಾ’ ಅಂತಾ ಅವಾಚ್ಯವಾಗಿ ಬೈಯುತ್ತಾ, ಪಿರ್ಯಾದಿಯವರ ಬೆನ್ನಿಗೆ ಕೈಯಿಂದ ಒಂದು ಏಟು ಹೊಡೆದನು, ಆಗ ಅಲ್ಲಿಯೇ ಇದ್ದ ಪಿರ್ಯಾದಿಯವರ ಡಾಬಾದ ಕೆಲಸಗಾರರು ಬಿಡಿಸಲು ಬಂದಾಗ, ಅವರಿಗೆ ‘ಬೋಸಡಿಕೆ, ನನಗೆ ಬಿಡಿಸಲಿಕ್ಕೆ ಬರುತ್ತೀರಾ? ಬಿಡಿಸಲಿಕ್ಕೆ ಬಂದರೆ ನಿಮಗೆ ಜೀವ ಸಹಿತ ಬಿಡುವುದಿಲ್ಲ’ ಅಂತಾ ಅವಾಚ್ಯವಾಗಿ ಬೈಯ್ದು ಧಮಕಿ ಹಾಕುತ್ತಾ, ‘ದುಡ್ಡು ಕೇಳುತ್ತೀಯಾ ಮಗನೆ? ನೀನು ಕನಿಷ್ಠ ಗವಳಿ ಸೂಳೆ ಮಗ ಇದ್ದೀಯಾ’ ಅಂತಾ ಅವಾಚ್ಯವಾಗಿ ಪಿರ್ಯಾದಿಯವರಿಗೆ ಬೈಯ್ದು, ಅಲ್ಲಿಯೇ ಪಕ್ಕದಲ್ಲಿ ಟೇಬಲ್ ಮೇಲಿದ್ದ ಊಟ ಮಾಡುವ ಪ್ಲೇಟಿನಿಂದ ಪಿರ್ಯಾದಿಯವರಿಗೆ ಒಂದು ಏಟು ಬೆನ್ನಿಗೆ ಹೊಡೆದು, ಪಿರ್ಯಾದಿಯವ ಡಾಬಾದ ಒಂದು ಟೇಬಲ್ ಹಾಗೂ ಊಟ ಮಾಡುವ ಒಂದು ಪ್ಲೇಟ್ ಅನ್ನು ಮುರಿದು ಹಾಕಿ, ‘ಬೋಸಡಿಕೆ ನಾನು ನಿನ್ನ ಡಾಬಾಗೆ ಬಂದರೇ ನನಗೆ ಫ್ರೀ ಆಗಿ ಊಟ ಕೊಡಬೇಕು. ಇಲ್ಲದಿದ್ದರೆ ನಿನಗೆ ಜೀವ ಸಹಿತ ಬಿಡುವುದಿಲ್ಲ’ ಅಂತಾ ಅಲ್ಲಿಂದ ಹೋಗುವಾಗ ಪಿರ್ಯಾದಿಯವರಿಗೆ ಜೀವ ಬೆದರಿಕೆ ಹಾಕಿ ಹೋದ ಬಗ್ಗೆ ಪಿರ್ಯಾದಿ ಶ್ರೀ ವಿಠ್ಠಲ ತಂದೆ ಸಾಜು ಪಾಟೀಲ, ಪ್ರಾಯ-26 ವರ್ಷ, ವೃತ್ತಿ-ಸೂಪಾ ಫ್ಯಾಮಿಲಿ ಡಾಬಾ ಮಾಲಿಕ, ಸಾ|| ದುರ್ಗಿ, ಪೋ: ಜಗಲಬೇಟ, ತಾ: ಜೋಯಿಡಾ ರವರು ದಿನಾಂಕ: 20-04-2021 ರಂದು 21-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 20-04-2021

at 00:00 hrs to 24:00 hrs

 

ಮುರ್ಡೇಶ್ವರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 09/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ಚಂದ್ರಹಾಸ ತಂದೆ ಹಾದಿಯಪ್ಪ ನಾಯ್ಕ, ಪ್ರಾಯ-38 ವರ್ಷ, ವೃತ್ತಿ-ವಾಚಮೆನ್ ಕೆಲಸ, ಸಾ|| ಹಾದಯ್ಯನ ಮನೆ, ಮುಲ್ಲಿ ಗದ್ದೆ, ಪೋ: ಕಾಯ್ಕಿಣಿ, ತಾ: ಭಟ್ಕಳ. ಪಿರ್ಯಾದಿಯ ತಮ್ಮನಾದ ಈತನು ಪಿರ್ಯಾದಿ ಮತ್ತು ಅವರ ಮನೆಯ ಜನರು ಮಧ್ಯಾಹ್ನ ಊಟ ಮಾಡಿ ಕುಳಿತುಕೊಂಡಾಗ ದಿನಾಂಕ: 20-04-2021 ರಂದು ಸುಮಾರು 16-15 ಗಂಟೆಗೆ ಮೃತನು ಯಾವೊದೋ ಒಂದು ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ಮನೆಯಿಂದ ಹಿಂದುಗಡೆಗೆ ಹೋಗಿದ್ದು, ಸಮಯ 16-30 ಗಂಟೆಗೆ ಪಿರ್ಯಾದಿಯು ಮೂತ್ರ ವಿಸರ್ಜನೆಗೆ ಅಂತ ದನದ ಕೊಟ್ಟಿಗೆಯ ಹತ್ತಿರ ಹೋದಾಗ ಚಂದ್ರಹಾಸ ಈತನು ನೈಲಾನ್ ಹಗ್ಗದಿಂದ ಕುತ್ತಿಗೆಗೆ ಉರುಳು ಹಾಕಿಕೊಂಡು ಮರದಲ್ಲಿ ನೇತಾಡುತ್ತಿರುವುದನ್ನು ಕಂಡಕೂಡಲೇ ಪಿರ್ಯಾದಿಯು ಬೊಬ್ಬೆ ಹೊಡೆದು ಮನೆಯ ಜನರೊಂದಿಗೆ ಸೇರಿ ಚಂದ್ರಹಾಸ ಈತನು ಕುತ್ತಿಗೆಗೆ ಉರುಳು ಹಾಕಿಕೊಂಡಿದ್ದ ಹಗ್ಗವನ್ನು ಕತ್ತಿಯಿಂದ ಕತ್ತರಿಸಿ ಕೆಳಗೆ ಇಳಿಸಿ, ಜೀವ ಇರಬಹುದು ಅಂತ ಒಂದು ಖಾಸಗಿ ವಾಹನದ ಮೇಲಾಗಿ ಮುರ್ಡೇಶ್ವರದ ಆರ್.ಎನ್.ಎಸ್ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿಯ ವೈದ್ಯರು ನೋಡಿ, ಭಟ್ಕಳದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲು ತಿಳಿಸಿದಂತೆ ಚಂದ್ರಹಾಸ ಈತನನ್ನು 18-30 ಗಂಟೆಗೆ ಭಟ್ಕಳದ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿನ ವೈದ್ಯರು ಪರೀಕ್ಷಿಸಿ ಚಂದ್ರಹಾಸ ಈತನು ಆಸ್ಪತ್ರೆಗೆ ತರುವ ಪೂರ್ವದಲ್ಲಿಯೇ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಕಾರಣ ಚಂದ್ರಹಾಸ ಈತನು ನೈಲಾನ್ ಹಗ್ಗದಿಂದ ಕುತ್ತಿಗೆಗೆ ಉರುಳು ಸುತ್ತಿಕೊಂಡು ಹಲಸಿನ ಮರಕ್ಕೆ ನೇಣು ಹಾಕಿಕೊಂಡು ಮೃತಪಟ್ಟ ಬಗ್ಗೆ ಪಿರ್ಯಾದಿ ಶ್ರೀ ಮಹಾಬಲೇಶ್ವರ ತಂದೆ ಹಾದಿಯಪ್ಪ ನಾಯ್ಕ, ಪ್ರಾಯ-44 ವರ್ಷ, ವೃತ್ತಿ-ಚಾಲಕ ಕೆಲಸ, ಸಾ|| ಹಾದಯ್ಯನ ಮನೆ, ಮುಲ್ಲಿ ಗದ್ದೆ, ಪೋ: ಕಾಯ್ಕಿಣಿ, ತಾ: ಭಟ್ಕಳ ರವರು ದಿನಾಂಕ: 20-04-2021 ರಂದು 21-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಸಿದ್ದಾಪುರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 17/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ಗಣಪತಿ ತಂದೆ ಈರಾ ನಾಯ್ಕ, ಪ್ರಾಯ-64 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಹಸ್ವಿಗುಳಿ, ಪೋ: ದೊಡ್ಮನೆ, ತಾ: ಸಿದ್ದಾಪುರ. ಪಿರ್ಯಾದಿಯ ತಂದೆಯಾದ ಈತನು ದಿನಾಂಕ: 20-04-2021 ರಂದು ಪಿರ್ಯಾದಿ ಮತ್ತು ಪಿರ್ಯಾದಿಯ ಚಿಕ್ಕಮ್ಮನ ಗಂಡ ನಾಗೇಶ ಈತನ ಜೊತೆ ಸೇರಿಕೊಂಡು ಸಿದ್ದಾಪುರ ತಾಲೂಕಿನ ಕೋಲಶಿ ಕ್ರಾಸ್ ಹತ್ತಿರ ಇರುವ ಪಿರ್ಯಾದಿಯ ಚಿಕ್ಕಮ್ಮನ ಮನೆಯ ಹತ್ತಿರದ ಹೊಳೆ ಸಾಲಿನಲ್ಲಿ ಚಿಕ್ಕಮ್ಮನವರ ತೋಟಕ್ಕೆ ಸೊಪ್ಪು ಮಾಡುತ್ತಿದ್ದು, ಮಧ್ಯಾಹ್ನ 12-45 ಗಂಟೆಯ ಸುಮಾರಿಗೆ ಪಿರ್ಯಾದಿಯ ತಂದೆಯು ಮಾವಿನ ಮರವನ್ನು ಹತ್ತಿ ಸೊಪ್ಪು ಕಡಿಯುತ್ತಿದ್ದಾಗ ಆಕಸ್ಮಿಕವಾಗಿ ಕೈ ಜಾರಿ ಮರದಿಂದ ನೆಲಕ್ಕೆ ಅಪ್ಪಳಿಸಿ ಬಿದ್ದು ಮಾರಣಾಂತಿಕ ಪೆಟ್ಟಾಗಿ ಬಿದ್ದವರನ್ನು ಸಿದ್ದಾಪುರದ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಮಧ್ಯಾಹ್ನ 14-45 ಗಂಟೆಯ ಸುಮಾರಿಗೆ ಪರೀಕ್ಷಿಸಿದ ವೈದ್ಯರು ತನ್ನ ತಂದೆಯು ದಾರಿ ಮಧ್ಯೆದಲ್ಲಿಯೇ ಮೃತಪಟ್ಟ ಬಗ್ಗೆ ಪಿರ್ಯಾದಿ ಶ್ರೀ ವಿನಾಯಕ ತಂದೆ ಗಣಪತಿ ನಾಯ್ಕ, ಪ್ರಾಯ-24 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಹಸ್ವಿಗುಳಿ, ಪೋ: ದೊಡ್ಮನೆ, ತಾ: ಸಿದ್ದಾಪುರ ರವರು ದಿನಾಂಕ: 20-04-2021 ರಂದು 15-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

ಇತ್ತೀಚಿನ ನವೀಕರಣ​ : 21-04-2021 04:54 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080