ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 20-12-2021

at 00:00 hrs to 24:00 hrs

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 218/2021, ಕಲಂ: 326, 504, 506 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಮಹೇಶ ತಂದೆ ಶಂಕರ ನಾಯ್ಕ, ಪ್ರಾಯ-36 ವರ್ಷ, ಸಾ|| ಮೂಡಕೇರಿ, ಹೆಗಡೆ, ತಾ: ಕುಮಟಾ. ದಿನಾಂಕ: 20-12-2021 ರಂದು ಸಾಯಂಕಾಲ-17-30 ಗಂಟೆಯಲ್ಲಿ ಪಿರ್ಯಾದುದಾರರು ಗಣೇಶ ನಾಯ್ಕ ಇವರ ಜೊತೆಯಲ್ಲಿ ತಮ್ಮ ಮನೆಯ ಹತ್ತಿರದಲ್ಲಿ ರಸ್ತೆಯ ರಿಪೇರಿ ಕೆಲಸವನ್ನು ಮಾಡಿದ್ದನ್ನು ನೋಡುತ್ತಾ ನಿಂತಿರುವಾಗ ನಮೂದಿತ ಆರೋಪಿತನು ‘ನೀವೇಕೆ ರಸ್ತೆ ರಿಪೇರಿ ಕೆಲಸವನ್ನು ನೋಡುತ್ತಿದ್ದಿರಿ? ಈ ಕೆಲಸ ನಿಮಗೆ ಸಂಬಂಧಿಸಿದ್ದಲ್ಲ. ಕೆಲಸವನ್ನು ನೋಡಲು ನೀವ್ಯಾರು ಬೋಳಿ ಮಕ್ಕಳು?’ ಅಂತಾ ಅವಾಚ್ಯ ಶಬ್ದಗಳಿಂದ ಬೈಯ್ದು, ಒಮ್ಮೆಲೇ ಪಿರ್ಯಾದಿಯ ಮೈ ಮೇಲೆ ಏರಿ ಬಂದು ಪಿರ್ಯಾದಿಯನ್ನು ದೂಡಿ ಹಾಕಿ ಎಡಗಾಲಿನ ಮೊಣಕಾಲಿಗೆ ತೆರಚಿದ ಗಾಯ ಪಡಿಸಿ, ಆತನ ಮೈ ಮೇಲೆ ಕುಳಿತು ಮುಖಕ್ಕೆ ಉಗುರಿನಿಂದ ಗೀರಿ, ಅಲ್ಲಿಯೇ ಇದ್ದ ಕಲ್ಲಿನಿಂದ ಪಿರ್ಯಾದಿಯ ಹಲ್ಲಿಗೆ ಹೊಡೆದು ಕೆಳ ದವಡೆಯ ಮುಂಭಾಗದ ಹಲ್ಲುಗಳನ್ನು ಮುರಿದು ತೀವೃ ಗಾಯನೋವು ಪಡಿಸಿದ್ದಲ್ಲದೇ ‘ಇನ್ನೊಮ್ಮೆ ನನ್ನ ಸುದ್ದಿಗೆ ಬಂದರೆ ನಿನ್ನನ್ನು ಕೊಲೆ ಮಾಡಿ ಬಿಡುತ್ತೇನೆ’ ಅಂತಾ ಜೀವ ಬೆದರಿಕೆ ಹಾಕಿದ ಬಗ್ಗೆ ಪಿರ್ಯಾದಿ ಶ್ರೀ ದಾಮೋದರ ತಂದೆ ಜಟ್ಟಿ ಪಟಗಾರ, ಪ್ರಾಯ-62 ವರ್ಷ, ವೃತ್ತಿ-ನಿವೃತ್ತ ನೌಕರ, ಸಾ|| ಮೂಡಕೇರಿ, ಹೆಗಡೆ, ತಾ: ಕುಮಟಾ ರವರು ದಿನಾಂಕ: 20-12-2021 ರಂದು 19-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 351/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಸಚಿನ ತಂದೆ ಕೃಷ್ಣ ನಾಯ್ಕ, ಪ್ರಾಯ-24 ವರ್ಷ, ವೃತ್ತಿ-ವೆಲ್ಡಿಂಗ್ ವರ್ಕ್, ಸಾ|| ಬಣಸಾಲೆ, ಮಂಕಿ, ತಾ: ಹೊನ್ನಾವರ (ಮೋಟಾರ್ ಸೈಕಲ್ ನಂ: ಕೆ.ಎ-47/ಡಬ್ಲ್ಯೂ-9580 ನೇದರ ಸವಾರ). ಈತನು ದಿನಾಂಕ: 20-12-2021  ರಂದು ಸಂಜೆ 07-00 ಗಂಟೆಗೆ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-69 ರಲ್ಲಿ ಕವಲಕ್ಕಿ ಪೆಟ್ರೋಲ್ ಬಂಕ್ ಹತ್ತಿರ ತಾನು ಚಲಾಯಿಸುತ್ತಿದ್ದ ಮೋಟಾರ್ ಸೈಕಲ್ ನಂ: ಕೆ.ಎ-47/ಡಬ್ಲ್ಯೂ-9580 ನೇದರ ಹಿಂಬದಿಯಲ್ಲಿ ಮತ್ತೊಬ್ಬ ಸವಾರನನ್ನು ಕೂರಿಸಿಕೊಂಡು ಕವಲಕ್ಕಿ ಕಡೆಯಿಂದ ಹೊನ್ನಾವರ ಕಡೆಗೆ ತಾನು ಚಲಾಯಿಸುತ್ತಿದ್ದ ಮೋಟಾರ್ ಸೈಕಲನ್ನು ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ತನ್ನ ಮುಂದಿನಿಂದ ಅಂದರೆ ಹೊನ್ನಾವರ ಕಡೆಯಿಂದ ಗೇರುಸೊಪ್ಪಾ ಕಡೆಗೆ ಹೋಗಲು ತನ್ನ ಮೋಟಾರ್ ಸೈಕಲ್ ಹಿಂಬದಿಗೆ ಒಂದು ಮಗು ಹಾಗೂ ಮಹಿಳೆಯನ್ನು ಕೂರಿಸಿಕೊಂಡು ಹೋಗುತ್ತಿದ್ದ ಮೋಟಾರ್ ಸೈಕಲ್ ನಂ: ಕೆ.ಎ-47/ಡಬ್ಲ್ಯೂ-8312 ನೇದಕ್ಕೆ ಎದುರಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಮೋಟಾರ್ ಸೈಕಲ್ ಸವಾರ ನೌಶಾದ ತಂದೆ ಖಾಜಾ ದಾವೂದ್, ಈತನಿಗೆ ಎಡಗಣ್ಣಿನ ಹತ್ತಿರ, ಮೂಗಿಗೆ ರಕ್ತಗಾಯ ಪಡಿಸಿ, ಎಡಗೈ ಹಾಗೂ ಎರಡು ಕಾಲಿಗೆ ಗಾಯ ಪಡಿಸಿ, ಹಿಂಬದಿ ಸವಾರ ಶ್ರೀಮತಿ ಸಫಾ ಕೋಂ. ನೌಶಾದ್ ದಾವೂದ್, ಇವರಿಗೆ ಬಲಗೈ ಹಾಗೂ ಕಾಲಿಗೆ ಗಾಯ ಪಡಿಸಿ, ನವಾಫಾ ತಂದೆ ನೌಶಾದ್, ಈತನಿಗೆ ತಲೆಗೆ ಮತ್ತು ಮೂಗಿಗೆ ರಕ್ತಗಾಯ ಪಡಿಸಿದ್ದಲ್ಲದೇ, ಆರೋಪಿ ಮೋಟಾರ್ ಸೈಕಲ್ ಸವಾರನು ತನಗೂ ಸಹ ಬಲಗೈ ಮುಂಗೈ ಹತ್ತಿರ ಪೆಟ್ಟು ಪಡಿಸಿಕೊಂಡು, ತನ್ನ ಮೋಟಾರ್ ಸೈಕಲ್ ಹಿಂಬದಿ ಸವಾರ ಮಣಿಕಂಠ ತಂದೆ ಗಣಪತಿ ನಾಯ್ಕ, ಈತನ ಹಣೆಗೆ ಮತ್ತು ಬಾಯಿಯ ಹತ್ತಿರ ಗಾಯ ಹಾಗೂ ಎಡಗೈ ಅಂಗೈ ಹತ್ತಿರ ಗಾಯ ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಮುಜಫರ್ ತಂದೆ ಯುಸೂಫ್ ಸಾಬ್, ಪ್ರಾಯ-41 ವರ್ಷ, ವೃತ್ತಿ-ಬಟ್ಟೆ ವ್ಯಾಪಾರ, ಸಾ|| ಮುಸ್ಲಿಂ ಕೇರಿ, ಸರಳಗಿ, ತಾ: ಹೊನ್ನಾವರ ರವರು ದಿನಾಂಕ: 20-12-2021 ರಂದು 20-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮಂಕಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 151/2021, ಕಲಂ: 454, 457, 380 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ದಿನಾಂಕ: 19-12-2021 ರಂದು 22-00 ಗಂಟೆಯಿಂದ ದಿನಾಂಕ: 20-12-2021 ರಂದು ಬೆಳಿಗ್ಗೆ 08-00 ಗಂಟೆಯ ನಡುವಿನ ಅವಧಿಯಲ್ಲಿ ಮಂಕಿಯ ದೊಡ್ಡಗುಂದದಲ್ಲಿರುವ ಹಜರತ್ ಮಗ್ದುಮ್ ಹವಲಿಯಾ ದರ್ಗಾದ ಬಾಗಿಲನ್ನು ಯಾವುದೋ ಗಟ್ಟಿ ಪದಾರ್ಥದಿಂದ ಮೀಟಿ ಚಾವಿ ಮುರಿದು ಒಳಗಡೆ ಪ್ರವೇಶಿಸಿ, ದರ್ಗಾದಲ್ಲಿ ಹೂತಿಟ್ಟ ಕಾಣಿಕೆ ಹುಂಡಿ ಹಾಗೂ ಗೋಡೆಗೆ ಅಳವಡಿಸಿದ ಕಾಣಿಕೆ ಹುಂಡಿಗಳ ಚಾವಿಯನ್ನು ಯಾವುದೋ ಗಟ್ಟಿ ಪದಾರ್ಥದಿಂದ ಒಡೆದು ತೆಗೆದು ಅವುಗಳಲ್ಲಿದ್ದ ಅಂದಾಜು 20,000/- ರೂಪಾಯಿ ನಗದು ಹಣವನ್ನು ಕಳುವು ಮಾಡಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀ ಅಹಮ್ಮದ್ ಭಾಷಾ ಹಬೀದಾ ತಂದೆ ಮೊಹಮ್ಮದ್ ಸಾಧಿಕ್, ಪ್ರಾಯ-63 ವರ್ಷ, ಸಾ|| ಮಾವಿನಕಟ್ಟಾ ರೋಡ್, ಫ್ಯಾಮಿಲಿ ಸೂಪರ್ ಮಾರ್ಕೆಟ್ ಹತ್ತಿರ, ಮಂಕಿ, ತಾ: ಹೊನ್ನಾವರ ರವರು ದಿನಾಂಕ: 20-12-2021 ರಂದು 16-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮಂಕಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 152/2021, ಕಲಂ: ಹೆಂಗಸು ಮತ್ತು ಮಗು ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದವರು 1]. ಶ್ರೀಮತಿ ಗೀತಾ ಕೋಂ. ಜೋಸೆಫ್ ರೋಡ್ರಗೀಸ್, ಪ್ರಾಯ-31 ವರ್ಷ, 2]. ಕುಮಾರ: ಜೋಶ್ವಾ ತಂದೆ ಜೋಸೆಫ್ ರೋಡ್ರಗೀಸ್, ಪ್ರಾಯ-4 ವರ್ಷ, ಸಾ|| (ಇಬ್ಬರೂ) ಕೆಳಗಿನೂರು, ತಾ: ಹೊನ್ನಾವರ. ನಮೂದಿತ ಕಾಣೆಯಾದವರಲ್ಲಿ ಶ್ರೀಮತಿ ಗೀತಾ ಕೋಂ. ಜೋಸೆಫ್ ರೋಡ್ರಗೀಸ್, ಇವಳು ದಿನಾಂಕ: 18-12-2021 ರಂದು ಬೆಳಿಗ್ಗೆ 11-30 ಗಂಟೆಯ ಸುಮಾರಿಗೆ ಮನೆಯಲ್ಲಿದ್ದ ತನ್ನ ಗಂಡನಾದ ಪಿರ್ಯಾದಿಗೆ ‘ತಾನು ತನ್ನ ತಾಯಿಯ ಮನೆಯಾದ ಯಲ್ಲಾಪುರಕ್ಕೆ ಹೋಗಿ ಬರುತ್ತೇನೆ’ ಅಂತಾ ಹೇಳಿ ಮನೆಯಲ್ಲಿದ್ದ ತನ್ನ ಬಟ್ಟೆಗಳನ್ನು ಸ್ಕೂಲ್ ಬ್ಯಾಗಿನಲ್ಲಿ ತುಂಬಿಕೊಂಡು ತನ್ನ ಕಿರಿಯ ಮಗನಾದ ಕುಮಾರ: ಜೋಶ್ವಾ ತಂದೆ ಜೋಸೆಫ್ ರೋಡ್ರಗೀಸ್, ಇವನಿಗೆ ಜೊತೆಯಲ್ಲಿ ಕರೆದುಕೊಂಡು ಹೋದವಳು, ತನ್ನ ತಾಯಿಯ ಮನೆಯಾದ ಯಲ್ಲಾಪುರಕ್ಕೆ ಹೋಗದೆ, ಸಂಬಂಧಿಕರ ಮನೆಗೂ ಹೋಗದೆ ಎಲ್ಲಿಗೋ ಹೋಗಿ ಈವರೆಗೆ ಮನೆಗೂ ಬರದೇ ಕಾಣೆಯಾಗಿದ್ದು, ಕಾಣೆಯಾದ ತನ್ನ ಹೆಂಡತಿ ಮತ್ತು ಮಗನನ್ನು ಹುಡುಕಿ ಕೊಡಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಜೋಸೆಫ್ ತಂದೆ ಅಂತೋನ್ ರೋಡ್ರಗೀಸ್, ಪ್ರಾಯ-41 ವರ್ಷ, ವೃತ್ತಿ-ಪಿಗ್ಮಿ ಕಲೆಕ್ಟರ್, ಸಾ|| ಕೆಳಗಿನೂರು, ತಾ: ಹೊನ್ನಾವರ ರವರು ದಿನಾಂಕ: 20-12-2021 ರಂದು 19-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಭಟ್ಕಳ ಶಹರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 169/2021, ಕಲಂ: 4, 5, 7, 12 THE KARNATAKA PREVENTION OF SLAUGHTER AND PRESERVATION OF CATTLE ORDINANCE-2020 ಮತ್ತು ಕಲಂ: 192(ಎ) ಎಮ್.ವಿ ಎಕ್ಟ್ ನೇದ್ದರ ವಿವರ...... ನಮೂದಿತ ಆರೋಪಿತರು 1]. ಮುಜಾಪರ್ ಹುಸೇನ್ ತಂದೆ ಪಕ್ರು, ಪ್ರಾಯ-39 ವರ್ಷ, ವೃತ್ತಿ-ದನದ ವ್ಯಾಪಾರ, ಸಾ|| ವಲ್ಕಿ, ಕಾರವಾರ, ಹಾಲಿ ಸಾ|| ಮೂಸಾ ನಗರ, 4 ನೇ ಕ್ರಾಸ್, ತಾ: ಭಟ್ಕಳ, 2]. ಅಬ್ದುಲ್ ರೆಹಮಾನ್ ತಂದೆ ಆರಿಪ್ ಭಾಷಾ, ಪ್ರಾಯ-49 ವರ್ಷ, ಸಾ|| ಆಜಾದ್ ನಗರ, 8 ನೇ ಕ್ರಾಸ್, ಜಾಲಿ, ತಾ: ಭಟ್ಕಳ. ಈ ನಮೂದಿತ ಆರೋಪಿತರು ಯಾವುದೇ ಪಾಸ್ ಅಥವಾ ಪರವಾನಿಗೆ ಅಥವಾ ದಾಖಲೆಗಳಿಲ್ಲದೇ, ವಧೆ ಮಾಡಿ ಮಾಂಸ ಮಾರಾಟ ಮಾಡುವ ಉದ್ದೇಶದಿಂದ ಸುಮಾರು 10,000/- ರೂಪಾಯಿ ಮೌಲ್ಯದ 1 ಹೋರಿ ಹಾಗೂ ತಪ್ಪಿಸಿಕೊಂಡು ಓಡಿ ಹೋದ ಮತ್ತೊಂದು ಹೋರಿ ಒಟ್ಟೂ 2 ಹೋರಿಗಳನ್ನು ವಾಹನ ನಂ: ಕೆ.ಎ-47/9970 ನೇದರಲ್ಲಿ ಹಿಂಸಾತ್ಮಕವಾಗಿ ಇಕ್ಕಟ್ಟಾಗಿ ಕಟ್ಟಿಕೊಂಡು ಸಾಗಾಟ ಮಾಡಿಕೊಂಡು ಹೋಗುವಾಗ ದಾಳಿಯ ಕಾಲಕ್ಕೆ ಆರೋಪಿ 2 ನೇಯವನು ಸೆರೆ ಸಿಕಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಎಚ್. ಬಿ. ಕುಡಗುಂಟಿ, ಪಿ.ಎಸ್.ಐ, ಭಟ್ಕಳ ಶಹರ ಪೊಲೀಸ್ ಠಾಣೆ ರವರು ದಿನಾಂಕ: 20-12-2021 ರಂದು 02-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ದಾಂಡೇಲಿ ನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 108/2021, ಕಲಂ: ಗಂಡಸು ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಗಂಡಸು ಶ್ರೀ ದಕ್ಷಿಣಾಮೂರ್ತಿ ತಂದೆ ಶಿವಾನಂದಶಾಸ್ತ್ರಿ ಕಾಶೀಕರ, ಪ್ರಾಯ-58 ವರ್ಷ, ವೃತ್ತಿ-ಡಬ್ಲ್ಯೂ.ಸಿ.ಪಿ.ಎಮ್ ನಲ್ಲಿ ಕೆಲಸ, ಸಾ|| ಎಕ್ಸಿಕ್ಯೂಟಿವ್ ಕ್ವಾರ್ಟರ್ಸ್, ಚೌಧರಿ ಗೇಟ್ ಹತ್ತಿರ, ದಾಂಡೇಲಿ. ಪಿರ್ಯಾದಿಯವರ ತಮ್ಮನಾದ ಇವರು ದಿನಾಂಕ: 05-12-2021 ರಂದು ಬೆಳಿಗ್ಗೆ 07-00 ಗಂಟೆಗೆ ದಾಂಡೇಲಿಯ ಡಬ್ಲ್ಯೂ.ಸಿ.ಪಿ.ಎಮ್ ಗೆ ಕೆಲಸಕ್ಕೆ ಹೋಗಿದ್ದಾಗ, ಆತನು 8 ದಿವಸ ರಜೆಯ ಮೇಲೆ ಬೆಂಗಳೂರಿಗೆ ಹೋಗಿ ಬಂದಿದ್ದರಿಂದ ಕೋವಿಡ್-19 ಪರಿಕ್ಷೆಯ ನೆಗೆಟಿವ್ ಪ್ರಮಾಣ ಪತ್ರ ತೆಗೆದುಕೊಂಡು ಬರುವಂತೆ ಕಂಪನಿಯಲ್ಲಿ ಆತನು ಕೆಲಸ ಮಾಡುವ ಡಿಪಾರ್ಟಮೆಂಟಿನ ಅಧಿಕಾರಿಗಳು ಮೌಖಿಕವಾಗಿ ತಿಳಿಸಿದ ನಂತರ ಕೋವಿಡ್-19 ಪರಿಕ್ಷೆ ಮಾಡಿಕೊಂಡು ಬರುವುದಾಗಿ ಹೇಳಿ ಹೋಗಿದ್ದವನು, ಅಲ್ಲಿಂದ ಎಲ್ಲಿಗೋ ಹೋಗಿ ಈವರೆಗೂ ಮನೆಗೆ ಮರಳಿ ಬಾರದೇ ಕಾಣೆಯಾಗಿದ್ದು, ಕಾಣೆಯಾಗಿರುವ ತನ್ನ ತಮ್ಮನನ್ನು ಹುಡುಕಿ ಕೊಡಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಮುಕುಂದ ತಂದೆ ಶಿವಾನಂದಶಾಸ್ತ್ರಿ ಕಾಶೀಕರ, ಪ್ರಾಯ-68 ವರ್ಷ, ವೃತ್ತಿ-ನಿವೃತ್ತ ನೌಕರ, ಸಾ|| ಮನೆ ನಂ: 35, ಬಿ.ಟಿ.ಎಮ್ ಲೇಔಟ್, ಎನ್.ಎಸ್ ಪಾಳ್ಯ, 20 ನೇ ಕ್ರಾಸ್, 7ಎ ಮೇನ್, ಬೆಂಗಳೂರು ರವರು ದಿನಾಂಕ: 20-12-2021 ರಂದು 18-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 20-12-2021

at 00:00 hrs to 24:00 hrs

 

ಅಂಕೋಲಾ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 61/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಮೋರಿಶ್ ಕುಲ್ಲು ತಂದೆ ಲೇಟ್: ಸಿಮೋನ್ ಕುಲ್ಲು, ಪ್ರಾಯ-36 ವರ್ಷ, ವೃತ್ತಿ-ಮೀನುಗಾರಿಕೆ ಕೆಲಸ, ಸಾ|| ತುರಬುಂಗಾ, ಉರೈತೋಲಿ, ಪೋ: ಲಾಸಿಯಾ, ತಾ: ಬಸಿಯಾ, ಜಿ: ಗುಲ್ಮಾ, ಜಾರ್ಖಂಡ ರಾಜ್ಯ. ಹಾಲಿ ಸಾ|| ಬೇಲೆಕೇರಿ, ತಾ: ಅಂಕೋಲಾ. ಈತನು ದಿನಾಂಕ: 18-12-2021 ರಂದು ಮಧ್ಯಾಹ್ನ 03-00 ಗಂಟೆಯಿಂದ ದಿನಾಂಕ: 20-12-2021 ರಂದು ಬೆಳಿಗ್ಗೆ 08-30 ಗಂಟೆಯ ನಡುವಿನ ಅವಧಿಯಲ್ಲಿ ಬೋಟ್ ಕಾಯಲು ಅಥವಾ ಇನ್ನಾವುದೋ ಕಾರಣದಿಂದ ಬೋಟಿನಿಂದ ಅರಬ್ಬಿ ಸಮುದ್ರದಲ್ಲಿ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟ ಸ್ಥಿತಿಯಲ್ಲಿ ಸಿಕ್ಕಿರುತ್ತಾನೆ. ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಂಡು ಶವವನ್ನು ಬಿಟ್ಟು ಕೊಡಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಆಸೀಫ್ ಸಮ್ಮದ್ ತಂದೆ ಪುನ್ಯಾ ಸಮ್ಮದ್, ಪ್ರಾಯ-21 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ಬೋರೋಸಿತಾ ಗ್ರಾಮ, ತಾ: ಮಹಾಬೂಮ್, ಜಿ: ಸಿಂಡಿಗಾ, ಜಾರ್ಖಂಡ ರಾಜ್ಯ, ಹಾಲಿ ಸಾ|| ಬೇಲೆಕೇರಿ, ತಾ: ಅಂಕೋಲಾ ರವರು ದಿನಾಂಕ: 20-12-2021 ರಂದು 13-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಅಂಕೋಲಾ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 62/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಶ್ರೀಹರಿ ಮಹತಾ ತಂದೆ ಗುರುಚರಣ ಮಹತಾ, ಪ್ರಾಯ-58 ವರ್ಷ, ವೃತ್ತಿ-ಐ.ಆರ್.ಬಿ ಪ್ಲಾಂಟ್ ಬಾಳೆಗುಳಿಯಲ್ಲಿ ಕೆಲಸ, ಸಾ|| ಬಾಬುರಾಮ್ ಪಾರ್ಥಾ ಜರಿಯಾ ಗ್ರಾಮ, ತಾ: ನಯಾಗ್ರಾಮ್, ಜಿ: ಪಶ್ವಿಮ ಮೇದಿನಿಪುರ, ಪಶ್ವಿಮ ಬಂಗಾಳ ರಾಜ್ಯ, ಹಾಲಿ ಸಾ|| ಐ.ಆರ್.ಬಿ ಪ್ಲಾಂಟ್, ಬಾಳೆಗುಳಿ, ತಾ: ಅಂಕೋಲಾ. ಇವರು ಅತಿಯಾಗಿ ಸಾರಾಯಿ ಕುಡಿಯುತ್ತಿದ್ದವರು, ದಿನಾಂಕ: 19-12-2021 ರಂದು ಮಧ್ಯಾಹ್ನ 02-00 ಗಂಟೆಯಿಂದ ಕೆಲಸಕ್ಕೆ ಹೋಗದೇ ಸರಿಯಾಗಿ ಊಟವನ್ನು ಮಾಡದೇ ಅತಿಯಾಗಿ ಸಾರಾಯಿ ಕುಡಿಯುತ್ತಿದ್ದವರು, ದಿನಾಂಕ: 20-12-2021 ರಂದು ಮಧ್ಯಾಹ್ನ 01-30 ಗಂಟೆಗೆ ತಾನು ಮಲಗುವ ರೂಮಿನಲ್ಲಿ ಮೃತಪಟ್ಟಿರುತ್ತಾರೆ. ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಂಡು ಶವವನ್ನು ಬಿಟ್ಟು ಕೊಡಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಸುನೀಲ್ ಮಹತಾ ತಂದೆ ಪಾಲು ಮೆಹತಾ, ಪ್ರಾಯ-21 ವರ್ಷ, ವೃತ್ತಿ-ಐ.ಆರ್.ಬಿ ಪ್ಲಾಂಟ್ ಬಾಳೆಗುಳಿಯಲ್ಲಿ ಕೆಲಸ, ಸಾ|| ಬನಸಿಯಾ ಸೋಲ್, ಪೋ: ಕಲಮಾಪುಕರಿಯಾ, ತಾ: ಪೂರ್ವ ಮೇದಿನಿಪುರ, ಜಿ: ಪಶ್ವಿಮ ಮೇದಿನಿಪುರ, ಪಶ್ವಿಮ ಬಂಗಾಳ ರಾಜ್ಯ, ಹಾಲಿ|| ಐ.ಆರ್.ಬಿ ಪ್ಲಾಂಟ್, ಬಾಳೆಗುಳಿ, ತಾ: ಅಂಕೋಲಾ ರವರು ದಿನಾಂಕ: 20-12-2021 ರಂದು 15-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಗೋಕರ್ಣ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 28/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ನಾಗೇಶ ತಂದೆ ಕಡಬಾ ಗೌಡ, ಪ್ರಾಯ-ಸುಮಾರು 68 ವರ್ಷ, ಸಾ|| ದೇವಣ, ತಾ: ಕುಮಟಾ. ಈತನು ಕಳೆದ 3 ವರ್ಷದ ಹಿಂದಿನಿಂದ ಮಾನಸಿಕ ಅಸ್ವಸ್ಥನಾಗಿ ಬಳಲುತ್ತಿದ್ದವನು, ಅಲ್ಲದೇ ಕಳೆದ ಒಂದುವರೆ ವರ್ಷದಿಂದ ದೃಷ್ಠಿ ದೋಷದಿಂದ ನರಳುತಿದ್ದು, ದಿನಾಂಕ: 19-12-2021 ರಂದು ಬೆಳಿಗ್ಗೆ 08-00 ಗಂಟೆಯಿಂದ ದಿನಾಂಕ: 20-12-2021 ರಂದು 12-30 ಗಂಟೆಯ ನಡುವಿನ ಅವಧಿಯಲ್ಲಿ ತನ್ನ ಮನೆಯ ಭಾಗಾಯತದಲ್ಲಿರುವ ನೆಲ ಬಾವಿಗೆ ಸಮಾನಾಂತರವಾಗಿರುವ ಬಾವಿಯ ಬಳಿ ಹೋದಾಗ ಆಕಸ್ಮಿಕವಾಗಿ ಆಯ ತಪ್ಪಿಯೋ ಅಥವಾ ಜೋಲಿ ತಪ್ಪಿ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟವನ ಶವವು ದಿನಾಂಕ: 20-12-2021 ರಂದು 12-30 ಗಂಟೆಗೆ ಬಾವಿಯಲ್ಲಿ ತೇಲುತಿದ್ದದ್ದು ಇರುತ್ತದೆ. ಇದರ ಹೊರತು ಮೃತನ ಮರಣದಲ್ಲಿ ಬೇರೆ ಯಾವುದೇ ಸಂಶಯ ಇರುವುದಿಲ್ಲ. ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಬೇಟೆ ತಂದೆ ನಾಗೇಶ ಗೌಡ, ಪ್ರಾಯ-36 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ದೇವಣ, ತಾ: ಕುಮಟಾ ರವರು ದಿನಾಂಕ: 20-12-2021 ರಂದು 13-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಹೊನ್ನಾವರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 49/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಜುಲಫಿಕರ್ ತಂದೆ ಅಬ್ದುಲ್ ಮುನಾಫ್ ಸಾಬ್ ಬಾವಿಕಟ್ಟಿ, ಪ್ರಾಯ-30 ವರ್ಷ, ವೃತ್ತಿ-ಗಾರೆ ಕೆಲಸ, ಸಾ|| ದೇವಿಹೊಸೂರ, ಹಾವೇರಿ. ಪಿರ್ಯಾದಿಯ ತಮ್ಮನಾದ ಈತನು ಹೊನ್ನಾವರ ತಾಲೂಕಿನ ಉಪ್ಪೋಣಿಯಲ್ಲಿ ಕಟ್ಟಡ ಕಾಮಗಾರಿ ಕೆಲಸಕ್ಕೆ ಹೋಗಿದ್ದವನು, ದಿನಾಂಕ: 18-12-2021 ರಂದು 14-00 ಗಂಟೆಗೆ ಉಪ್ಪೋಣಿಯಿಂದ ಸಂಶಿಗೆ ಬರಲು ದೋಣಿಯ ಮೇಲೆ ಶರಾವತಿ ನದಿ ದಾಟುವಾಗ ನದಿಯಲ್ಲಿ ಈಜುವ ಸಲುವಾಗಿ ದೋಣಿಯಿಂದ ನದಿಯಲ್ಲಿ ಹಾರಿದವನು ನೀರಿನಲ್ಲಿ ಮುಳುಗಿ ಕಾಣೆಯಾಗಿದ್ದು, ಈ ಬಗ್ಗೆ ಹೊನ್ನಾವರ ಪೊಲೀಸ್ ಠಾಣಾ ಅಪರಾಧ ಸಂಖ್ಯೆ: 350/2021 ಕಲಂ: ಮನುಷ್ಯ ಕಾಣೆ (ಗಂಡಸು ಕಾಣೆ) ನೇದಕ್ಕೆ ಪ್ರಕರಣ ದಾಖಲಾಗಿದ್ದು ಇರುತ್ತದೆ. ಕಾಣೆಯಾದ ನನ್ನ ತಮ್ಮನು ದಿನಾಂಕ: 20-12-2021 ರಂದು ಬೆಳಿಗ್ಗೆ 09-00 ಗಂಟೆಗೆ ಹೊನ್ನಾವರ ತಾಲೂಕಿನ ಹೆರೆಂಗಡಿ ಖುರ್ವಾ ಬ್ರಿಡ್ಜ್ ಹತ್ತಿರ ನದಿಯಲ್ಲಿ ನೀರಿನಲ್ಲಿ ಮುಳುಗಿ ಮೃತನಾಗಿ ಪತ್ತೆಯಾಗಿದ್ದು, ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಅಬ್ದುಲ್ ವಹೀದ್ ತಂದೆ ಅಬ್ದುಲ್ ಮುನಾಫ್ ಬಾವಿಕಟ್ಟಿ, ಪ್ರಾಯ-32 ವರ್ಷ, ವೃತ್ತಿ-ವ್ಯಾಪಾರ, ಸಾ|| ದೇವಿಹೊಸೂರ, ಹಾವೇರಿ ರವರು ದಿನಾಂಕ: 20-12-2021 ರಂದು 10-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಸಿದ್ದಾಪುರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 43/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಮಹೇಶ ತಂದೆ ಮಂಜುನಾಥ ನಾಯ್ಕ, ಪ್ರಾಯ-30 ವರ್ಷ, ವೃತ್ತಿ-ಧಾರವಾಡದ ಹೋಟೆಲಿನಲ್ಲಿ ಕೆಲಸ, ಸಾ|| ಶಿರಗಳ್ಳೆ, ತಾರಖಂಡ ಗ್ರಾಮ, ಪೋ: ಸೋವಿವನಕೊಪ್ಪಾ, ತಾ: ಸಿದ್ದಾಪುರ. ಈತನು ಪಿರ್ಯಾದಿಯ ಹಿರಿಯ ಮಗನಿದ್ದು, ಮನೆ ಕಟ್ಟಿ ಹಣ ಖಾಲಿಯಾಗಿದ್ದವನಿಗೆ ಇತ್ತೀಚೆಗೆ ಮದುವೆ ಮಾತುಕತೆಯಾಗಿತ್ತು. ಧಾರವಾಡದ ಖಾಸಗಿ ಹೋಟೆಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಮೃತನಿಗೆ ಮದುವೆಗೆ ಹಣ ಹೇಗೆ ಹೊಂದಿಸುವುದು ಅಂತಾ ಹಣಕಾಸಿನ ಸಮಸ್ಯೆಯನ್ನು ಮನಸ್ಸಿಗೆ ಹಚ್ಚಿಕೊಂಡಿದ್ದವನು, ದಿನಾಂಕ: 19-12-2021 ರಂದು ಬೆಳಿಗ್ಗೆ ತೋಟಕ್ಕೆ ಕೆಲಸಕ್ಕೆ ಹೋಗಿ ಮಧ್ಯಾಹ್ನ 03-00 ಗಂಟೆಗೆ ಮನೆಗೆ ಹೋಗುತ್ತೇನೆ ಅಂತಾ ಹೇಳಿ ತೋಟದಿಂದ ಬಂದಿದ್ದನು. ಆದರೆ ಮನೆಗೂ ಬಾರದೇ ಕಾಣೆಯಾಗಿದ್ದವನಿಗೆ ಹುಡುಕಾಡುತ್ತಿರುವಾಗ ದಿನಾಂಕ: 20-12-2021 ರಂದು ಬೆಳಿಗ್ಗೆ 07-30 ಗಂಟೆಗೆ ಅವನ ಮನೆಯ ಹಿಂದಿರುವ ಬೆಟ್ಟದಲ್ಲಿರುವ ಮರಕ್ಕೆ ನೇಣು ಹಾಕಿಕೊಂಡು ಮೃತಪಟ್ಟ ಸ್ಥಿತಿಯಲ್ಲಿ ಸಿಕ್ಕಿದ್ದು, ಸೂಕ್ಷ್ಮ ಸ್ವಭಾದವನಾದ ಮೃತನು ತನ್ನ ಮದುವೆಗೆ ಉಂಟಾದ ಹಣದ ಅಡಚಣೆಯ ಸಮಸ್ಯೆಯನ್ನೋ ಅಥವಾ ಇನ್ನಾವುದೋ ಸಮಸ್ಯೆಯನ್ನು ಮನಸ್ಸಿಗೆ ಹಚ್ಚಿಕೊಂಡು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ. ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಮಂಜುನಾಥ ತಂದೆ ಭರ್ಮಾ ನಾಯ್ಕ, ಪ್ರಾಯ-56 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಶಿರಗಳ್ಳೆ, ತಾರಖಂಡ ಗ್ರಾಮ, ಪೋ: ಸೋವಿವನಕೊಪ್ಪಾ, ತಾ: ಸಿದ್ದಾಪುರ ರವರು ದಿನಾಂಕ: 20-12-2021 ರಂದು 11-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

 

 

 

ಇತ್ತೀಚಿನ ನವೀಕರಣ​ : 25-12-2021 06:07 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080