ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 20-02-2021

at 00:00 hrs to 24:00 hrs

 

ಗೋಕರ್ಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 17/2021, ಕಲಂ: 379 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ದಿನಾಂಕ: 14-02-2021 ರಂದು ರಾತ್ರಿ 21-00 ಗಂಟೆಯಿಂದ ದಿನಾಂಕ: 15-02-2021 ರಂದು ಬೆಳಿಗ್ಗೆ 08-00 ಗಂಟೆಯ ನಡುವಿನ ಅವಧಿಯಲ್ಲಿ ಪಿರ್ಯಾದಿಯ ಬಾಬ್ತು ಸುಮಾರು 65,000/- ರೂಪಾಯಿ ಮೌಲ್ಯದ ಬಜಾಜ್ ಪಲ್ಸರ್ ಮೋಟಾರ್ ಸೈಕಲ್ ನಂ: ಕೆ.ಎ-47/ಡಬ್ಲ್ಯೂ-1745 ನೇದನ್ನು ಕುಮಟಾ ತಾಲೂಕಿನ ಹಿರೇಗುತ್ತಿ ಗ್ರಾಮದ ಶ್ರೀ ಉಲ್ಲಾಸ ಕಾಂತಾ ನಾಯಕ ರವರ ಮನೆಯ ಕಂಪೌಂಡ್ ಒಳಗಡೆ ನಿಲ್ಲಿಸಿಟ್ಟಿದ್ದನ್ನು ಕಳವು ಮಾಡಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀ ಗಣಪತಿ ತಂದೆ ದಂಡು ಪಟಗಾರ, ಪ್ರಾಯ-30 ವರ್ಷ, ವೃತ್ತಿ-ವ್ಯಾಪಾರ, ಸಾ|| ಪಟಗಾರಕೊಪ್ಪ, ಹಿರೇಗುತ್ತಿ, ತಾ: ಕುಮಟಾ ರವರು ದಿನಾಂಕ: 20-02-2021 ರಂದು 12-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 44/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ರಾಜೇಶ ತಂದೆ ಗಣಪೇ ಗೌಡ, ಪ್ರಾಯ-26 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕೊಳಗದ್ದೆ, ಖರ್ವಾ, ತಾ: ಹೊನ್ನಾವರ (ಸ್ಕೂಟರ್ ನಂ: ಕೆ.ಎ-47/ವಿ-2857 ನೇದರ ಸವಾರ). ನಮೂದಿತ ಆರೋಪಿತನು ದಿನಾಂಕ: 20-2-2021 ರಂದು ಬೆಳಿಗ್ಗೆ 09-20 ಗಂಟೆಯ ಸಮಯಕ್ಕೆ ಹೊನ್ನಾವರ ತಾಲೂಕಿನ ಹಡಿನಬಾಳ ಗ್ರಾಮದ ಮಸಕಲಮಕ್ಕಿ ಕ್ರಾಸ್ ಹತ್ತಿರ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-69 ರ ಮೇಲೆ ತಾನು ಚಲಾಯಿಸುತ್ತಿದ್ದ ಸ್ಕೂಟರ್ ನಂ: ಕೆ.ಎ-47/ವಿ-2857 ನೇದನ್ನು ಗೇರುಸೊಪ್ಪ ಕಡೆಯಿಂದ ಹೊನ್ನಾವರ ಕಡೆಗೆ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿಯು ಚಲಾಯಿಸುತ್ತಿದ್ದ ವಾಹನವನ್ನು ಓವರಟೇಕ್ ಮಾಡಿ ಮುಂದೆ ಹೋಗಿ, ಮುಂದೆ ಹೋಗುತ್ತಿದ್ದ ಒಂದು ಬಸ್ ಅನ್ನು ಓವರಟೇಕ್ ಮಾಡಲು ಹೋಗಿ ಒಮ್ಮೆಲೆ ತನ್ನ ಸ್ಕೂಟರನ್ನು ಬಲಬದಿಗೆ ಚಲಾಯಿಸಿ ಎದುರಿನಿಂದ ತನ್ನ ಬದಿಯಿಂದ ನಿಧಾನವಾಗಿ ಬರುತ್ತಿದ್ದ ಪೊಲೀಸ ಜೀಪ್ ನಂ: ಕೆ.ಎ-30/ಜಿ-0489 ನೇದರ ಚಾಲಕನು ಅಪಘಾತವನ್ನು ತಪ್ಪಿಸಲು ಜೀಪನ್ನು ರಸ್ತೆಯ ಎಡಬದಿಯಲ್ಲಿ ತೆಗೆದುಕೊಂಡು ನಿಲ್ಲಿಸಿದರೂ ಸಹ ಆರೋಪಿ ಸ್ಕೂಟರ್ ಸವಾರನು ನಿಯಂತ್ರಣ ತಪ್ಪಿ ಜೀಪಿನ ಎಡಬದಿಯ ಹೆಡ್ ಲೈಟಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಜೀಪನ್ನು ಜಖಂಗೊಳಿಸಿದ್ದಲ್ಲದೆ, ಆರೋಪಿ ಸ್ಕೂಟರ್ ಸವವಾರನು ತನ್ನ ಸೊಂಟಕ್ಕೆ ಸಾದಾ ಸ್ವರೂಪದ ಗಾಯ ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ರಮೇಶ ತಂದೆ ತಿಮ್ಮಪ್ಪ ನಾಯ್ಕ, ಪ್ರಾಯ-32 ವರ್ಷ, ವೃತ್ತಿ-ವ್ಯಾಪಾರ, ಸಾ|| ತುಂಬೊಳ್ಳಿ, ಜಲವಳ್ಳಿ, ತಾ: ಹೊನ್ನಾವರ ರವರು ದಿನಾಂಕ: 20-02-2021 ರಂದು 10-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 46/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಜುಬೇರ್ ತಂದೆ ಇಬ್ರಾಹಿಂ ಡೆಕ್ಷಿ, ಪ್ರಾಯ 26 ವರ್ಷ. ಸಾ|| ಕಾಸರಕೋಡ, ಟೊಂಕಾ, ತಾ: ಹೊನ್ನಾವರ (ಇಕೋ ವಾಹನ ನಂ: ಕೆ.ಎ-47/ಎಮ್-6266 ನೇದರ ಚಾಲಕ). ನಮೂದಿತ ಆರೋಪಿತನು ದಿನಾಂಕ: 20-02-2021 ರಂದು 20-00 ಗಂಟೆಯ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-69 ರಲ್ಲಿ ಹೊನ್ನಾವರ ಶಹರದ ವೈಭವ ಹೊಟೇಲ್ ಹತ್ತಿರ ತನ್ನ ಬಾಬ್ತು ಇಕೋ ವಾಹನ ನಂ: ಕೆ.ಎ-47/ಎಮ್-6266 ನೇದನ್ನು ಹೊನ್ನಾವರ ಶಹರದ ಕಡೆಯಿಂದ ಗೇರುಸೊಪ್ಪ ಕಡೆಗೆ ಅತೀವೇಗವಾಗಿ ಹಾಗೂ ಅಜಾರೂಕತೆಯಿಂದ ಚಲಾಯಿಸಿಕೊಂಡು ಹೋಗಿ ತನ್ನ ಮುಂದಿನಿಂದ ಹೋಗುತ್ತಿದ್ದ ಒಂದು ವಾಹನವನ್ನು ಓವರಟೇಕ್ ಮಾಡಲು ಹೋಗಿ, ಇಕೋ ವಾಹನವನ್ನು ಒಮ್ಮೇಲೆ ರಸ್ತೆಯ ಬಲಕ್ಕೆ ಚಲಾಯಿಸಿ ಹೊನ್ನಾವರ ಪ್ರಭಾತನಗರದ ಕಡೆಯಿಂದ ಹೊನ್ನಾವರ ಶಹರದ ಕಡೆಗೆ ಪಿರ್ಯಾದಿಯು ಚಲಾಯಿಸಿಕೊಂಡು ಬರುತ್ತಿದ್ದ ಆಟೋ ರಿಕ್ಷಾ ನಂ: ಕೆಎ-47/9375 ನೇದಕ್ಕೆ ಮುಂದಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಪಿರ್ಯಾದಿಯ ಮೂಗಿಗೆ, ಬಲಗೈ ಮೊಣಗಂಟಿನ ಕೆಳಗೆ ಹಾಗೂ ಎಡಗಾಲಿನ ಮೊಣಗಂಟಿನ ಕೆಳಗೆ ಗಾಯ ಪಡಿಸಿದ್ದಲ್ಲದೇ, ಆರೋಪಿತನು ತಾನೂ ಸಹ ತನ್ನ ಮೈಮೇಲೆ ಅಲ್ಲಲ್ಲಿ ಪೆಟ್ಟನ್ನುಂಟು ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ಮಹ್ಮದ್ ಆಕೀಬ್ ತಂದೆ ಮಹ್ಮದ್ ರಫೀಕ್ ಶೇಖ್. ಪ್ರಾಯ-29 ವರ್ಷ, ವೃತ್ತಿ-ಆಟೋ ರಿಕ್ಷಾ ಚಾಲಕ, ಸಾ|| ಅಸೂರಖಾನ್ ಗಲ್ಲಿ, ತಾ: ಹೊನ್ನಾವರ ರವರು ದಿನಾಂಕ: 20-02-2021 ರಂದು 22-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮಂಕಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 23/2021, ಕಲಂ: 457, 380 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಸಿದ್ದಪ್ಪ ತಂದೆ ಸಿದ್ದರಾಯ ಕುಂಬಾರ, ಪ್ರಾಯ-40 ವರ್ಷ, ಸಾ|| ಕಣಬರಗಿ, ಬೆಳಗಾವಿ. ನಮೂದಿತ ಆರೋಪಿತನು ದಿನಾಂಕ: 20-02-2021 ರಂದು ಬೆಳಿಗ್ಗೆ 06-30 ಗಂಟೆಯ ಸುಮಾರಿಗೆ ಅಪ್ಸರಕೊಂಡದಲ್ಲಿರುವ ಶ್ರೀ ಕನ್ನಜ್ಜಿ ಕಟಾಕ್ಷ ದೇವರ ಮುಂದೆ ಭಕ್ತರು ಹಾಕಿರುವ 11 ಹರಕೆ ಗಂಟೆಗಳು, ಅಂದಾಜು ಮೌಲ್ಯ 3,500/- ರೂಪಾಯಿ ನೇದವುಗಳನ್ನು ಕಳುವು ಮಾಡಿ ಒಂದು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಕೊಂಡು ಓಡಿ ಹೊಗುತ್ತಿರುವಾಗ ಅಪ್ಸರಕೊಂಡದ ಗಾರ್ಡಿನಲ್ಲಿ ಸಿಕ್ಕ ಬಗ್ಗೆ ಪಿರ್ಯಾದಿ ಮಂಜುನಾಥ ತಿಮ್ಮಪ್ಪ ಗೌಡ, ಪ್ರಾಯ-51ವರ್ಷ, ವೃತ್ತಿ-ಕೂಲಿ/ರೈತಾಬಿ ಕೆಲಸ, ಸಾ|| ಅಪ್ಸರಕೊಂಡ, ತಾ: ಹೊನ್ನಾವರ ರವರು ದಿನಾಂಕ: 20-02-2021 ರಂದು 13-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮಂಕಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 24/2021, ಕಲಂ: 143, 147, 341, 504, 506, 323 ಸಹಿತ 149 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ನಾಗರಾಜ ಗಣಪತಿ ಆಚಾರ್ಯ @ ಶರ್ಮಾ ಇಡಗುಂಜಿ, ಪ್ರಾಯ-32 ವರ್ಷ, 2]. ರಾಘವೇಂದ್ರ ಗಣಪತಿ ಆಚಾರ್ಯ ಇಡಗುಂಜಿ ಪ್ರಾಯ-36 ವರ್ಷ, 3]. ಜನಾರ್ಧನ ಮಂಜುನಾಥ ಆಚಾರ್ಯ, ಪ್ರಾಯ-49 ವರ್ಷ, 4]. ದಿನೇಶ ಕೃಷ್ಣ ಆಚಾರ್ಯ ಇಡಗುಂಜಿ, ಪ್ರಾಯ-20 ವರ್ಷ, 5]. ವಿನಾಯಕ ರಾಮಚಂದ್ರ ಆಚಾರ್ಯ ಇಡಗುಂಜಿ, ಪ್ರಾಯ-25 ವರ್ಷ, ಸಾ|| (ಎಲ್ಲರೂ) ಇಡಗುಂಜಿ, ತಾ: ಹೊನ್ನಾವರ. ಈ ನಮೂದಿತ ಆರೋಪಿತರ ಪೈಕಿ ಆರೋಪಿ 1 ನೇಯವನು ಗೋಕರ್ಣದ ಕಾಳಿಕಾಂಬಾ ಕಮ್ಮಟೇಶ್ವರ ದೇವಸ್ಥಾನದ ಕಮಿಟಿಯವರು ದೇವಸ್ಥಾನದ ಪೂಜಾರಿ ಕೆಲಸದಿಂದ ತೆಗೆದ ಬಗ್ಗೆ ಸಿಟ್ಟಿನಲ್ಲಿದ್ದವನು, ದಿನಾಂಕ: 19-02-2021 ರಂದು 21-00 ಗಂಟೆಗೆ ಕೆಳಗಿನ ಇಡಗುಂಜಿ ರಸ್ತೆಯಲ್ಲಿ ಏಕೋದ್ದೇಶದಿಂದ ಇನ್ನುಳಿದ ಆರೋಪಿತರೊಂದಿಗೆ ಅಕ್ರಮವಾಗಿ ಸೇರಿಕೊಂಡು, ಇಡಗುಂಜಿ ದೇವಸ್ಥಾನದ ಜಾತ್ರೆಗೆ ಬಂದು ಮರಳಿ ಹೊನ್ನಾವರ ಕಡೆಗೆ ಹೋಗುತಿದ್ದ ಪಿರ್ಯಾದಿಯ ಕಾರಿಗೆ  ಸ್ಕೂಟರನ್ನು ಅಡ್ಡವಾಗಿಟ್ಟು ತಡೆದು ನಿಲ್ಲಿಸಿ, ಕಾರಿನಲ್ಲಿದ್ದ ಪಿರ್ಯಾದಿ ಹಾಗೂ ಪಿರ್ಯಾದಿಯ ಗಂಡ ಮಧುಕರ ಆಚಾರ್ಯ ಇವರಿಗೆ ಅವಾಚ್ಯ ಶಬ್ದಗಳಿಂದ  ಬೈಯ್ದು, ಕಾರಿನಿಂದ ಇಳಿದ ಪಿರ್ಯಾದಿಯ ಮೈಧುನ ಮಹೇಶ ಆಚಾರ್ಯ ಇವನಿಗೆ ಆರೋಪಿ 3 ನೇಯವನು ಕುತ್ತಿಗೆಗೆ ಕೈ ಹಾಕಿ ದೂಡಿದ್ದಲ್ಲದೇ, ಆರೋಪಿತರೆಲ್ಲರೂ ಸೇರಿ ‘ಬೋಳಿ ಮಗನೆ ನಿನ್ನನ್ನು ನೋಡಿಕೊಳ್ಳುತ್ತೇವೆ, ದೇವಸ್ಥಾನದ  ಕಮಿಟಿಯನ್ನು ನೋಡಿಕೊಳ್ಳುತ್ತೇವೆ’ ಅಂತಾ ಜೀವ ಬೆದರಿಕೆ ಹಾಕಿದ ಬಗ್ಗೆ ಪಿರ್ಯಾದಿ ಶ್ರೀಮತಿ ಪ್ರಮೀಳಾ ಕೋಂ. ಮಧುಕರ ಆಚಾರ್ಯ, ಪ್ರಾಯ-48 ವರ್ಷ, ವೃತ್ತಿ-ಮನೆವಾರ್ತೆ, ಸಾ|| ತುಳಸಿನಗರ, ಬಂದರ್ ರೋಡ್, ತಾ: ಹೊನ್ನಾವರ ರವರು ದಿನಾಂಕ: 20-02-2021 ರಂದು 19-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ದಾಂಡೇಲಿ ನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 22/2021, ಕಲಂ: 279, 337 ಐಪಿಸಿ ಹಾಗೂ ಕಲಂ: 187 ಎಮ್.ವಿ ಎಕ್ಟ್ ನೇದ್ದರ ವಿವರ...... ನಮೂದಿತ ಆರೋಪಿತನು ಟ್ರ್ಯಾಕ್ಸ್ ವಾಹನ ನಂ: ಕೆ.ಎ-35/ಎ-0102 ನೇದರ ಚಾಲಕನಾಗಿದ್ದು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ನಮೂದಿತ ಆರೋಪಿತನು ದಿನಾಂಕ: 20-02-2021 ರಂದು 19-00 ಗಂಟೆಗೆ ದಾಂಡೇಲಿಯ ಸುಭಾಷ ನಗರದ ಮಸೀದಿಗಿಂತ ಸ್ವಲ್ಪ ಹಿಂದೆ ಹಾದು ಹೋದ ಡಾಂಬರ್ ರಸ್ತೆಯ ಮೇಲೆ ತನ್ನ ಬಾಬ್ತು ಟ್ರ್ಯಾಕ್ಸ್ ವಾಹನ ನಂ: ಕೆ.ಎ-35/ಎ-0102 ನೇದನ್ನು ದಾಂಡೇಲಿಯ ಆಜಾದ್ ನಗರ ಕ್ರಾಸ್ ಕಡೆಯಿಂದ ಅಂಬೇವಾಡಿ ಕಡೆಗೆ ಮಾನವೀಯ ಪ್ರಾಣಕ್ಕೆ ಅಪಾಯವಾಗುವಂತೆ ಅತೀವೇಗವಾಗಿ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ವಾಹನವನ್ನು ತನ್ನ ನಿಯಂತ್ರಣದಲ್ಲಿಟ್ಟುಕೊಳ್ಳದೇ ದಾಂಡೇಲಿಯ ಸುಭಾಷ ನಗರದ ಮಸೀದಿಗಿಂತ ಸ್ವಲ್ಪ ಹಿಂದೆ ರಸ್ತೆಯ ಎಡ ಸೈಡಿನಿಂದ ನಡೆದುಕೊಂಡು ಹೊರಟಿದ್ದ ಗಾಯಾಳು ಸಿದ್ದಪ್ಪ ಕಾವೇರಿ ರವರಿಗೆ ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಸಿದ್ದಪ್ಪ ಕಾವೇರಿ ರವರ ಎಡಗೈಗೆ ರಕ್ತ ಗಾಯ, ಎಡಗಾಲಿಗೆ ಮತ್ತು ಎಡಗಾಲಿನ ಮೊಣಗಂಟಿನ ಹತ್ತಿರ ತೆರಚಿದ ರಕ್ತಗಾಯ ಪಡಿಸಿ, ಅಪಘಾತ ಪಡಿಸಿದ ನಂತರ ಅಪಘಾತದ ಸ್ಥಳದಲ್ಲಿ ಆರೋಪಿತನು ತನ್ನ ಟ್ರ್ಯಾಕ್ಸ್ ವಾಹನವನ್ನು ಸ್ಥಳದಲ್ಲಿ ನಿಲ್ಲಿಸದೇ ಚಲಾಯಿಸಿಕೊಂಡು ಹೋಗಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಸಾವಂತ ಕುಮಾರ ತಂದೆ ನರಸಪ್ಪ ಭೋವಿವಡ್ಡರ, ಪ್ರಾಯ 45 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಪರಿಜ್ಞಾನ ಶಾಲೆಯ ಹತ್ತಿರ, ಗಾಂಧಿನಗರ, ದಾಂಡೇಲಿ ರವರು ದಿನಾಂಕ: 20-02-2021 ರಂದು 20-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಶಿರಸಿ ಹೊಸಮಾರುಕಟ್ಟೆ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 18/2021, ಕಲಂ: ಹುಡುಗಿ ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಹುಡುಗಿ ಕುಮಾರಿ: ಫಾತಿಮಾ ತಂದೆ ಅಬ್ದುಲ್ ಸುಕೂರು ಖಾಜಿ, ಪ್ರಾಯ-22 ವರ್ಷ, ಸಾ|| ಲಯನ್ಸ್ ನಗರ, ತಾ: ಶಿರಸಿ. ಪಿರ್ಯಾದಿಯವರ ಮಗಳಾದ ಇವಳು ಡಿಪ್ಲೋಮಾ ಪದವಿ ಪಡೆದುಕೊಂಡು ಮನೆಯಲ್ಲಿದ್ದವಳು, ದಿನಾಂಕ: 19-02-2021 ರಂದು 15-30 ಗಂಟೆಯಿಂದ 16-00 ಗಂಟೆಯ ನಡುವಿನ ಅವಧಿಯಲ್ಲಿ ಮನೆಯಿಂದ ಹೋದವಳು, ಈವರೆಗೆ ಮನೆಗೆ ಬಾರದೇ ಸಂಬಂಧಿಕರ ಮನೆಗೂ ಹೋಗದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದು, ಕಾಣೆಯಾದ ತನ್ನ ಮಗಳಿಗೆ ಈವರೆಗೆ ಸಂಬಂಧಿಕರು ಮತ್ತು ಅವಳ ಗೆಳತಿಯರಲ್ಲಿ ವಿಚಾರಿಸಿದರು ಪತ್ತೆಯಾಗದ ಕಾಣೆಯಾದ ತನ್ನ ಮಗಳನ್ನು ಪತ್ತೆ ಮಾಡಿ ಕೊಡಬೇಕು ಅಂತಾ ಪಿರ್ಯಾದಿ ಶ್ರೀಮತಿ ಮಮ್ತಾಜ್ ಕೋಂ. ಅಬ್ದುಲ್ ಸುಕುರ್ ಖಾಜಿ, ಪ್ರಾಯ-55 ವರ್ಷ, ವೃತ್ತಿ-ಗೃಹಿಣಿ, ಸಾ|| ಲಯನ್ಸ್ ನಗರ, ತಾ: ಶಿರಸಿ ರವರು ದಿನಾಂಕ: 20-02-2021 ರಂದು 12-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಸಿದ್ದಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 24/2021, ಕಲಂ: ಹುಡುಗ ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಹುಡುಗ ಕುಮಾರ: ದಯಾನಂದ ತಂದೆ ವೀರಭದ್ರ ಗೌಡ, ಪ್ರಾಯ; 26 ವರ್ಷ, ವೃತ್ತಿ-ನಿರುದ್ಯೋಗಿ, ಸಾ|| ಹಾಳದಕಟ್ಟಾ, ಕೊಂಡ್ಲಿ, ಸಿದ್ದಾಪುರ ಶಹರ. ಪಿರ್ಯಾದಿಯ ಕಿರಿಯ ಮಗನಾದ ಈತನು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದವನು, ದಿನಾಂಕ: 15-02-2021 ರಂದು ಬೆಳಿಗ್ಗೆ 10-00 ಗಂಟೆಗೆ ಮನೆಯಿಂದ ಮೋಟಾರ್ ಸೈಕಲ್ ನಂ: ಕೆ.ಎ-15/ಎಲ್-4372 ನೇದನ್ನು ತೆಗೆದುಕೊಂಡು ಹೋಗಿದ್ದವನು, ಈವರೆಗೆ ಮನೆಗೆ ಬಾರದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದರಿಂದ ತನ್ನ ಮಗನಿಗೆ ಹುಡುಕಿ ಕೊಡಬೇಕೆಂದು ಪಿರ್ಯಾದಿ ಶ್ರೀ ವೀರಭದ್ರ ತಂದೆ ಮೂಕಪ್ಪ ಗೌಡ, ಪ್ರಾಯ; 60 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಹಾಳದಕಟ್ಟಾ, ಕೊಂಡ್ಲಿ, ಸಿದ್ದಾಪುರ ಶಹರ ರವರು ದಿನಾಂಕ: 20-02-2021 ರಂದು 12-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ರಾಮನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 16/2021, ಕಲಂ: 379 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ದಿನಾಂಕ: 16-02-2021 ರಂದು 15-30 ಗಂಟೆಯಿಂದ 17-30 ನಡುವಿನ ಅವಧಿಯಲ್ಲಿ ಪಿರ್ಯಾದಿಯವರು ತಮ್ಮ ಬಾಬ್ತು ಕೆಂಪು ಬಣ್ಣದ ಹುಂಡೈ ಗ್ರ್ಯಾಂಡ್ ಐ-10 ಕಾರ್ ನಂ: ಕೆ.ಎ-25/ಎಮ್.ಸಿ-5460 ನೇದರಲ್ಲಿ ತಮ್ಮ ಫ್ಯಾಮಿಲಿ ಫ್ರೆಂಡ್ಸ್ ಆಗಿರುವ ಗೀತಾ ಮೆಣಸಗಿ, ಸುನಂದಾ ಪೂಜಾರಿ, ಜ್ಯೋತಿ ದೊಡ್ಡಮನಿ ಮತ್ತು ಗಿರೀಜಾ ಮೆಣಸಗಿ ರವರನ್ನು ಲಗುನಾ ವಾಟರ್ ಸ್ಪೋರ್ಟ್ಸ್ ಗೆ ರ್ಯಾಪ್ಟಿಂಗಗೆಂದು ಕರೆದುಕೊಂಡು ಬಂದು ತಮ್ಮ ಕಾರನ್ನು ಲಗುನಾ ವಾಟರ್ ಸ್ಪೋರ್ಟ್ಸ್ ದ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿ, ಸದರ ಕಾರಿನಲ್ಲಿ 1). ನಗದು ಹಣ 15,000/- ರೂಪಾಯಿ, 2). ಮೊಬೈಲ್ಗಳು-03 (ಸ್ಯಾಮಸಂಗ್ ಎ-50, ವಿವೋ ಹಾಗೂ ರೆಡ್ಮಿ), ಅ||ಕಿ|| 30,000/- ರೂಪಾಯಿ, 3). ರ್ಯಾಡೋ ಕಂಪನಿಯ ಕೈ ಗಡಿಯಾರ-01, ಅ||ಕಿ|| 10,000/- ರೂಪಾಯಿ, 4). ಎಸ್.ಬಿ.ಐ ಬ್ಯಾಂಕ್ ಖಾತೆ ನಂ: 332868XXXXX ನೇದರ ಎ.ಟಿ.ಎಮ್ ಕಾರ್ಡ್-01, 5). ಅಂದಾಜು 2 ಗ್ರಾಂ ನ ಕಿವಿ ಓಲೆ-1 ಜೊತೆ (ಬೆಂಡೋಲೆ), ಅ||ಕಿ|| 10,000/- ರೂಪಾಯಿ, 6). ಕೆಂಪು ಬಣ್ಣದ ವ್ಯಾನಿಟಿ ಬ್ಯಾಗ್-01, ಅ||ಕಿ|| 00.00/- ರೂಪಾಯಿ, ಒಟ್ಟು ಅಜಮಾಸ 65,000/- ರೂಪಾಯಿಗಳು. ಈ ಸ್ವತ್ತುಗಳನ್ನು ಇಟ್ಟು ಕಾರ್ ಲಾಕ್ ಮಾಡಿಕೊಂಡು ರ್ಯಾಪ್ಟಿಂಗ್ ಗೆ ಹೋಗಿ, ರ್ಯಾಪ್ಟಿಂಗ್ ಮುಗಿಸಿಕೊಂಡು 17-30 ಗಂಟೆಯ ಸುಮಾರಿಗೆ ಮರಳಿ ಕಾರ್ ಹತ್ತಿರ ಬಂದು ನೋಡಲಾಗಿ, ಕಾರಿನ ಎಡಬದಿಯ ಹಿಂದಿನ ಗಾಜನ್ನು ಒಡೆದು ಕಾರಿನಲ್ಲಿಟ್ಟಿದ್ದ ಸ್ವತ್ತುಗಳನ್ನು ಕಳುವು ಮಾಡಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀ ನವೀನ ತಂದೆ ವಿಜಯಕುಮಾರ ಅಂಗಡಿ, ಪ್ರಾಯ-28 ವರ್ಷ, ವೃತ್ತಿ-ಖಾಸಗಿ ಕೆಲಸ, ಸಾ|| ಕುಮಾರೇಶ್ವರ ನಗರ, ಧಾರವಾಡ ರವರು ದಿನಾಂಕ: 20-02-2021 ರಂದು 18-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 20-02-2021

at 00:00 hrs to 24:00 hrs

 

ಅಂಕೋಲಾ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 10/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ರಾಜು ತಂದೆ ರಾಮಾ ನಾಯ್ಕ, ಪ್ರಾಯ-40 ವರ್ಷ, ವೃತ್ತಿ-ಗಂಡಿ ಕೆಲಸ, ಸಾ|| ಬೇಳಾಬಂದರ, ತಾ: ಅಂಕೋಲಾ. ಈತನು ದಿನಾಲೂ ಸರಾಯಿ ಕುಡಿಯುತ್ತಿದ್ದವನು, ದಿನಾಂಕ: 18-02-2021 ರಂದು ರಾತ್ರಿ ಸರಾಯಿ ಕುಡಿದು ಅಂಕೋಲಾ ತಾಲೂಕಿನ ಬೇಳಾಬಂದರದಲ್ಲಿರುವ ತನ್ನ ಮನೆಗೆ ಬಂದವನು ಸರಾಯಿ ಕುಡಿದ ನಿಶೆಯಲ್ಲಿಯೋ ಅಥವಾ ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ರಾತ್ರಿ 08-00 ಗಂಟೆಗೆ ಮನೆಯಲ್ಲಿರುವ ಇಲಿ ಪಾಷಾಣವನ್ನು ತಿಂದವನಿಗೆ ಉಪಚಾರದ ಕುರಿತು ಅಂಕೋಲಾದ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು, ಅಲ್ಲಿಂದ ಹೆಚ್ಚಿನ ಉಪಚಾರಕ್ಕಾಗಿ ಕಾರವಾರದ ಜಿಲ್ಲಾ ಅಸ್ಪತ್ರೆಗೆ ದಾಖಲಾದವನು, ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ: 20-02-2021 ರಂದು ಬೆಳಗಿನ ಜಾವ 02-30 ಗಂಟೆಗೆ ಮೃತಪಟ್ಟಿರುತ್ತಾನೆ. ಈ ಕುರಿತು ಮುಂದಿನ ಕಾನೂನು ಕ್ರಮವನ್ನು ಕೈಗೊಂಡು ಮೃತದೇಹವನ್ನು ಬಿಟ್ಟುಕೊಡಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ವಿಜಯ ತಂದೆ ಕೃಷ್ಣ ನಾಯ್ಕ, ಪ್ರಾಯ-53 ವರ್ಷ, ವೃತ್ತಿ-ಅಂಗಡಿ ವ್ಯಾಪಾರ, ಸಾ|| ಬೇಳಾಬಂದರ, ತಾ: ಅಂಕೋಲಾ ರವರು ದಿನಾಂಕ: 20-02-2021 ರಂದು 09-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಗೋಕರ್ಣ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 04/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ಅಭಿಷೇಕ್ ತಂದೆ ವೆಂಕಟ್ರಮಣ ಪಟಗಾರ, ಪ್ರಾಯ-22 ವರ್ಷ, ವೃತ್ತಿ-ಖಾಸಗಿ ಕೆಲಸ, ಸಾ|| ಬರ್ಗಿ, ತಾ: ಕುಮಟಾ. ಈತನು ದಿನಾಂಕ: 19-02-2021 ರ 20-00 ಗಂಟೆಯಿಂದ ದಿನಾಂಕ: 20-02-2021 ರಂದು ಬೆಳಿಗ್ಗೆ 07-00 ಗಂಟೆ ನಡುವಿನ ಅವಧಿಯಲ್ಲಿ ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯ ಬರ್ಗಿ ಗ್ರಾಮದ ಕೊಂಕಣ ರೈಲ್ವೆ ಹಳಿ ಕಿಲೋ ಮೀಟರ್ ಕಲ್ಲು ನಂ: 545/3 ನೇದರ ಹಳಿ ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಯಾವುದೋ ಚಲಿಸುತ್ತಿರುವ ರೈಲ್ವೆ ಬಡಿದು ಗಂಭೀರ ಸ್ವರೂಪದ ಗಾಯವಾಗಿ ಮೃತಪಟ್ಟಿರುತ್ತಾನೆಯೇ ಹೊರತು ಮೃತನ ಮರಣದಲ್ಲಿ ಬೇರೇ ಯಾವುದೇ ಸಂಶಯ ಇರುವುದಿಲ್ಲ ಎಂಬ ಬಗ್ಗೆ ಪಿರ್ಯಾದಿ ಶ್ರೀ ವೆಂಕಟ್ರಮಣ ತಂದೆ ಶಿವರಾಮ ಪಟಗಾರ, ಪ್ರಾಯ-52 ವರ್ಷ, ವೃತ್ತಿ-ಚಾಲಕ, ಸಾ|| ಬರ್ಗಿ, ತಾ: ಕುಮಟಾ ರವರು ದಿನಾಂಕ: 20-02-2021 ರಂದು 09-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

ಇತ್ತೀಚಿನ ನವೀಕರಣ​ : 22-02-2021 05:10 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080