ದೈನಂದಿನ ಜಿಲ್ಲಾ ಅಪರಾಧ ವರದಿ
ದಿನಾಂಕ:- 20-01-2022
at 00:00 hrs to 24:00 hrs
ಅಂಕೋಲಾ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 07/2022, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಮಂಜುನಾಥ ತಂದೆ ಅದಾನಪ್ಪ ಚಾಕ್ರಿ, ಪ್ರಾಯ-20 ವರ್ಷ, ವೃತ್ತಿ-ಲಾರಿ ಚಾಲಕ, ಸಾ|| ಬೈಯಾಪುರ, ತಾ: ಲಿಂಗಸೂರು, ಜಿ: ರಾಯಚೂರು (ಲಾರಿ ನಂ: ಕೆ.ಎ-36/ಬಿ-9495 ನೇದರ ಚಾಲಕ). ಈತನು ತನ್ನ ಲಾರಿ ನಂ: ಕೆ.ಎ-36/ಬಿ-9495 ನೇದನ್ನು ದಿನಾಂಕ: 20-01-2022 ರಂದು ಬೆಳಿಗ್ಗೆ 07-45 ಗಂಟೆಗೆ ಅಂಕೋಲಾ ತಾಲೂಕಿನ ಅಡ್ಲೂರ ಗ್ರಾಮದಲ್ಲಿ ಹಾಯ್ದಿರುವ ಡಾಂಬರ್ ರಸ್ತೆಯಲ್ಲಿ ಅಂಕೋಲಾ ಕಡೆಯಿಂದ ಯಲ್ಲಾಪುರದ ಕಡೆಗೆ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗಿ ಯಲ್ಲಾಪುರ ಕಡೆಯಿಂದ ಅಂಕೋಲಾದ ಕಡೆಗೆ ಪಿರ್ಯಾದಿಯವರು ಚಲಾಯಿಸಿಕೊಂಡು ಬರುತ್ತಿದ್ದ ಸೀ-ಬರ್ಡ್ ಬಸ್ ನಂ: ಕೆ.ಎ-01/ಎಚ್-4121 ನೇದಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಬಸ್ ಕ್ಲೀನರ್ ಶ್ರೀ ಬಸವರಾಜ ತಂದೆ ಯಮನಪ್ಪ ಬೆಳ್ಳಂಕ್ಕಿ, ಪ್ರಾಯ-23 ವರ್ಷ, ಸಾ|| ತವಾಷಿ, ತಾ: ಅಥಣಿ, ಜಿ: ಬೆಳಗಾವಿ ಇವರಿಗೆ ಬಲಗಾಲಿಗೆ ಸಾದಾ ಸ್ವರೂಪದ ಗಾಯನೋವು ಪಡಿಸಿರುತ್ತಾನೆ ಮತ್ತು ತನಗೂ ಕೂಡ ಮುಖಕ್ಕೆ ಸಾದಾ ಸ್ವರೂಪದ ಗಾಯನೋವು ಪಡಿಸಿಕೊಂಡಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಪುಟ್ಟರಾಜು ಎನ್. ಡಿ. ತಂದೆ ದೊಡ್ಡ ಈರಯ್ಯ, ಪ್ರಾಯ-23 ವರ್ಷ, ವೃತ್ತಿ-ಬಸ್ ಚಾಲಕ, ಸಾ|| ನಾಯಕನಪಾಳ್ಯ, ಪೋ: ವೀರಗೌಡನದೊಡ್ಡಿ, ತಾ: ಮಾಗಡಿ, ಜಿ: ರಾಮನಗರ ರವರು ದಿನಾಂಕ: 20-01-2022 ರಂದು 13-20 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಅಂಕೋಲಾ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 08/2022, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ಶ್ಯಾಮ ತಂದೆ ಗೋಪಿನಾಥ ಬಂಟ, ಪ್ರಾಯ-35 ವರ್ಷ, ವೃತ್ತಿ-ಗೂಡಂಗಡಿ ವ್ಯಾಪಾರ, ಸಾ|| ಕಟ್ಟಿಗೆ ಡಿಪೋ ಹತ್ತಿರ, ಕೇಣಿ, ತಾ: ಅಂಕೋಲಾ. ಈತನು ದಿನಾಂಕ: 20-01-2022 ರಂದು 15-30 ಗಂಟೆಯ ಸುಮಾರಿಗೆ ಅಂಕೋಲಾ ತಾಲೂಕಿನ ಕೇಣಿ ಗ್ರಾಮದ ಕೇಣಿ ಮೈದಾನದ ಹತ್ತಿರ ಗಾಬಿತಕೇಣಿ ರಸ್ತೆಯ ಬದಿಯ ಸಾರ್ವಜನಿಕ ಸ್ಥಳದಲ್ಲಿ ತನ್ನ ಲಾಭಕ್ಕೋಸ್ಕರ ರಸ್ತೆಯಲ್ಲಿ ಬರ-ಹೋಗುವ ಸಾರ್ವಜನಿಕರಿಗೆ ಅದೃಷ್ಟ ಸಂಖ್ಯೆ ತಾಗಿದರೆ 01/- ರೂಪಾಯಿಗೆ 80/- ರೂಪಾಯಿ ಕೊಡುವುದಾಗಿ ಹೇಳುತ್ತಾ, ಸಾರ್ವಜನಿಕರಿಂದ ಹಣ ಪಡೆದು ತನ್ನ ಹತ್ತಿರ ಇರುವ ಹಾಳೆಯಲ್ಲಿ ಅಂಕೆ-ಸಂಖ್ಯೆ ಬರೆದುಕೊಂಡು ಓ.ಸಿ ಮಟಕಾ ಜೂಗಾರಾಟ ಆಡುತ್ತಿದ್ದಾಗ ವಿವಿಧ ಮುಖಬೆಲೆಯ ನಗದು ಹಣ 2,035/- ರೂಪಾಯಿ ಮತ್ತು ಓ.ಸಿ ಜೂಗಾರಾಟದ ಸಲಕರಣೆಯೊಂದಿಗೆ ದಾಳಿಯ ಕಾಲಕ್ಕೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಪ್ರೇಮನಗೌಡ ಪಾಟೀಲ್, ಪಿ.ಎಸ್.ಐ (ತನಿಖೆ), ಅಂಕೋಲಾ ಪೊಲೀಸ್ ಠಾಣೆ ರವರು ದಿನಾಂಕ: 20-01-2022 ರಂದು 17-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಮುಂಡಗೋಡ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 13/2022, ಕಲಂ: 279, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಗೂಡುಸಾಬ್ ತಂದೆ ರಾಜೇಸಾಬ್ ಇಟ್ಟಂಗಿ, ಪ್ರಾಯ-40 ವರ್ಷ, ವೃತ್ತಿ-ಚಾಲಕ, ಸಾ|| ನಾಗನೂರ, ತಾ: ಮುಂಡಗೋಡ (ಅಪೇ ವಾಹನ ನಂ: ಕೆ.ಎ-31/8727 ನೇದರ ಚಾಲಕ). ಈತನು ದಿನಾಂಕ: 15-01-2022 ರಂದು ಸಾಯಂಕಾಲ 07-30 ಗಂಟೆಯ ಸುಮಾರಿಗೆ ಬಾಬ್ತು ತನ್ನ ಅಪೇ ವಾಹನ ನಂ: ಕೆ.ಎ-31/8727 ನೇದನ್ನು ಕಾತೂರ ಹಾಗೂ ನಾಗನೂರ ಗ್ರಾಮಗಳ ಮಧ್ಯ ಇರುವ ಹಳ್ಳದ ಹತ್ತಿರ ಡಾಂಬರ್ ರಸ್ತೆಯ ಮೇಲೆ ಅತೀವೇಗವಾಗಿ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿ ನಾಗನೂರ ಗ್ರಾಮದ ಕಡೆಯಿಂದ ಕಾತೂರ ಗ್ರಾಮದ ಕಡೆಗೆ ಬರುತ್ತಿದ್ದ ಮೋಟಾರ್ ಸೈಕಲ್ ನಂ: ಕೆ.ಎ-31/ಡಬ್ಲ್ಯೂ-5783 ನೇದಕ್ಕೆ ಡಿಕ್ಕಿ ಹೊಡೆಸಿ ಅಪಘಾತ ಪಡಿಸಿ, ಮೋಟಾರ್ ಸೈಕಲ್ ಸವಾರನಾದ ಅಬ್ದುಲ್ ಯಾಸೀನ್ ತಂದೆ ನೂರ್‍ಅಹ್ಮದ್ ಶಿಗ್ಗಾಂವ್ ಹಾಗೂ ಹಿಂಬದಿ ಸವಾರನಾದ ಮಹ್ಮದ್ ಜಾಫರ್ ತಂದೆ ಮೆಹಬೂಬ್ ಅಲಿ ಜಮಖಂಡಿ ಇವರಿಗೆ ಭಾರೀ ಸ್ವರೂಪದ ಗಾಯನೋವು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ರಮೇಶ ತಂದೆ ತಿಪ್ಪಣ್ಣ ಜನಗೇರಿ, ಪ್ರಾಯ-49 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ನಾಗನೂರ, ತಾ: ಮುಂಡಗೋಡ ರವರು ದಿನಾಂಕ: 20-01-2022 ರಂದು 17-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಸಿದ್ದಾಪುರ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 07/2022, ಕಲಂ: 417, 420 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಪದ್ದಿ @ ಪ್ರದೀಪ ತಂದೆ ಮರಿಯಪ್ಪಾ ನಾಯ್ಕ, ಸಾ|| ಹೊಸೂರು, ಸಿದ್ದಾಪುರ ಶಹರ. ಈತನು ದಿನಾಂಕ: 12-12-2021 ರಂದು ಪಿರ್ಯಾದಿಗೆ ನಕಲಿ ಬಂಗಾರದ ಹಾರವೊಂದನ್ನು ತೋರಿಸಿ ‘ಇದು ಅಸಲಿ ಬಂಗಾರದ ಹಾರ, 3 ಲಕ್ಷ ರೂಪಾಯಿ ಕಿಮ್ಮತ್ತಿನದು. ನಿನಗೆ 30,000/- ರೂಪಾಯಿಗೆ ಕೊಡುತ್ತೇನೆ’ ಅಂತಾ ಹೇಳಿ ದಿನಾಂಕ: 15-12-2021 ರಂದು ಸಿದ್ದಾಪುರ ಶಹರದ ಸೊರಬಾ ರಸ್ತೆಯಲ್ಲಿ ಬರುವ ಸಾಯಿನಗರ ಕ್ರಾಸ್ ಹತ್ತಿರ ಪಿರ್ಯಾದಿಯಿಂದ 3,000/- ರೂಪಾಯಿ ಹಣವನ್ನು ಪಡೆದು ಪಿರ್ಯಾದಿಗೆ ಮಾರಾಟ ಮಾಡಿದ್ದು, ತದನಂತರ ಪಿರ್ಯಾದಿಯು ಜನೆವರಿ ತಿಂಗಳಿನಲ್ಲಿ 1,000/- ರೂಪಾಯಿ ಹಾಗೂ 500/- ರೂಪಾಯಿಯಂತೆ ಅವನಿಗೆ ಹಣವನ್ನು ನೀಡಿದ್ದು, ತದನಂತರ ಎರಡು ಬಾರಿ ತಲಾ 1,000/- ರೂಪಾಯಿಯಂತೆ ಆರೋಪಿತನು ಹೇಳಿದಂತೆ ಸಿದ್ದಾಪುರ ಶಹರದ ಭಗತಸಿಂಗ್ ಸರ್ಕಲಿನಲ್ಲಿರುವ ಮಧು ಚಿಕನ್ ಶಾಪ್ ನವನ ಮೊಬೈಲಿಗೆ ಫೋನ್ ಪೇ ಮಾಡಿದ್ದು, ಹೀಗೆ ಒಟ್ಟು 6,500/- ರೂಪಾಯಿ ಹಣವನ್ನು ಸಂದಾಯ ಮಾಡಿರುತ್ತಾನೆ. ತದನಂತರ ದಿನಾಂಕ: 20-01-2022 ರಂದು ಸಂಜೆ ಸಿದ್ದಾಪುರದ ಬಂಗಾರದ ಅಂಗಡಿಯೊಂದರಲ್ಲಿ ಆ ಹಾರವನ್ನು ತೋರಿಸಿದಾಗ ಅದು ನಕಲಿ ಅಂತಾ ತಿಳಿದು ಬಂದಿದ್ದು, ಕಾರಣ ಆರೋಪಿತನು ಪಿರ್ಯಾದಿಗೆ ಅಸಲಿ ಬಂಗಾರದ ಹಾರ ಅಂತಾ ಹೇಳಿ ಮೋಸತನದಿಂದ ನಕಲಿ ಹಾರವನ್ನು ಪಿರ್ಯಾದಿಗೆ ಮಾರಿ ಹಣವನ್ನು ಪಡೆದುಕೊಂಡು ವಂಚಿಸಿದ ಬಗ್ಗೆ ಪಿರ್ಯಾದಿ ಶ್ರೀ ಶಿವಪ್ಪಾ ತಂದೆ ಸೀತಾರಾಮ ಗೊಂಡಾ, ಪ್ರಾಯ-34 ವರ್ಷ, ವೃತ್ತಿ-ಸೆಂಟ್ರಿಂಗ್ ಕೆಲಸ, ಸಾ|| ತ್ಯಾರ್ಸಿ ಗ್ರಾಮ, ತಾ: ಸಿದ್ದಾಪುರ ರವರು ದಿನಾಂಕ: 20-01-2022 ರಂದು 19-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಬನವಾಸಿ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 07/2022, ಕಲಂ: 15(ಎ), 32(3) ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ಮಂಜುನಾಥ ತಂದೆ ಈಶ್ವರ ನಾಯ್ಕ, ಪ್ರಾಯ-46 ವರ್ಷ, ವೃತ್ತಿ-ಚಾಲಕ, ಸಾ|| ಕೊರ್ಲಕಟ್ಟಾ, ತಾ: ಶಿರಸಿ. ಈತನು ದಿನಾಂಕ: 20-01-2022 ರಂದು 18-00 ಗಂಟೆಗೆ ಕೊರ್ಲಕಟ್ಟಾ ಗ್ರಾಮದ ತನ್ನ ಮನೆಯ ಪಕ್ಕದ ಸಾರ್ವಜನಿಕ ಸ್ಥಳದ ತಾತ್ಕಾಲಿಕ ಶೆಡ್ಡಿನಲ್ಲಿ ಸಾರ್ವಜನಿಕರಿಗೆ ಮದ್ಯ ಸೇವಿಸಲು ಅನುವು ಮಾಡಿಕೊಡುತ್ತಿರುವಾಗ ಅಬಕಾರಿ ಸ್ವತ್ತುಗಳಾದ 1). Haywards Cheers Whisky 90 ML ಟೆಟ್ರಾ ಪ್ಯಾಕೆಟ್ ಗಳು-10, ಅ||ಕಿ|| 351.3/- ರೂಪಾಯಿ, 2). Haywards Cheers Whisky 90 ML ಅಂತಾ ಲೇಬಲ್ ಮದ್ಯದ ಖಾಲಿ ಟೆಟ್ರಾ ಪ್ಯಾಕ್-05, ಅ||ಕಿ|| 00.00/- ರೂಪಾಯಿ, 3). ನಗದು ಹಣ 220/- ರೂಪಾಯಿ, 4). ಪ್ಲಾಸ್ಟಿಕ್ ಲೋಟ-02, ಅ||ಕಿ|| 00.00/- ರೂಪಾಯಿ ಇವುಗಳನ್ನು ಪಿರ್ಯಾದಿಯವರು ದಾಳಿ ಮಾಡಿ ವಶಕ್ಕೆ ಪಡೆದುಕೊಂಡ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಹಣಮಂತ ಬಿರಾದಾರ, ಪಿ.ಎಸ್.ಐ (ಕಾ&ಸು), ಬನವಾಸಿ ಪೊಲೀಸ್ ಠಾಣೆ ರವರು ದಿನಾಂಕ: 20-01-2022 ರಂದು 19-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
======||||||||======
ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ
ದಿನಾಂಕ:- 20-01-2022
at 00:00 hrs to 24:00 hrs
ಕಾರವಾರ ಶಹರ ಪೊಲೀಸ್ ಠಾಣೆ
ಯು.ಡಿ.ಆರ್ ಸಂಖ್ಯೆಃ 04/2022, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಸಂತೋಷ ತಂದೆ ರೋಹಿದಾಸ ಗೌಂಡೇಕರ, ಪ್ರಾಯ-24 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಗಾವಂಡೆವಾಡ, ಕಳಸಾಯಿ, ತಾ: ಜೋಯಿಡಾ. ಪಿರ್ಯಾದಿಯ ಈತನು ಗೋವಾದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದವನು, ಕಳೆದ 02-03 ದಿನಗಳ ಹಿಂದೆ ಜ್ವರದ ಮಾತ್ರೆ ಅಂತಾ ತಿಳಿದು ಯಾವುದೋ ಪದಾರ್ಥವನ್ನು ತಿಂದು ಅಸ್ವಸ್ಥಗೊಂಡವನು, ಮಡಗಾಂವ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ತದನಂತರ ದಿನಾಂಕ: 18-01-2022 ರಂದು ರಾತ್ರಿ ಮನೆಗೆ ಬರುತ್ತಿರುವಾಗ ಆರೋಗ್ಯದಲ್ಲಿ ಏರುಪೇರು ಆಗಿದ್ದರಿಂದ ಚಿಕಿತ್ಸೆಯ ಕುರಿತು ಜಿಲ್ಲಾ ಆಸ್ಪತ್ರೆ ಕಾರವಾರದಲ್ಲಿ ದಾಖಲಿಸಿ, ಚಿಕಿತ್ಸೆಯಲ್ಲಿರುವಾಗ ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ: 19-01-2022 ರಂದು ಸಾಯಂಕಾಲ 18-00 ಗಂಟೆಗೆ ಜಿಲ್ಲಾ ಆಸ್ಪತ್ರೆ ಕಾರವಾರದಲ್ಲಿ ಮೃತಪಟ್ಟಿರುತ್ತಾನೆ. ಇದರ ಹೊರತು ತನ್ನ ಮಗನ ಮರಣದಲ್ಲಿ ಬೇರೇ ಯಾವುದೇ ಸಂಶಯವಿರುವುದಿಲ್ಲ. ಈ ಕುರಿತು ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ರೋಹಿದಾಸ ತಂದೆ ಗುರ್ಕೋ ಗೌಂಡೇಕರ, ಪ್ರಾಯ-45 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಗಾವಂಡೆವಾಡ, ಕಳಸಾಯಿ, ತಾ: ಜೋಯಿಡಾ ರವರು ದಿನಾಂಕ: 20-01-2022 ರಂದು 10-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
======||||||||======