ದೈನಂದಿನ ಜಿಲ್ಲಾ ಅಪರಾಧ ವರದಿ
ದಿನಾಂಕ:- 20-07-2021
at 00:00 hrs to 24:00 hrs
ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 92/2021, ಕಲಂ: 341, 323, 324, 307, 504, 506 ಸಹಿತ 34 ಐಪಿಸಿ ಹಾಗೂ ಕಲಂ: 3(1)(r)(s)(2)(va) SC/ST (Preventiion Of Atrocities) Amendment Act-2015 ನೇದ್ದರ ವಿವರ...... ನಮೂದಿತ ಆರೋಪಿತರು 1]. ಜಗದೀಶ ವಾಸು ಮೊಗೇರ, ಸಾ|| ಗಾಂಧಿನಗರ, ಹೆಬಳೆ, ತಾ: ಭಟ್ಕಳ, 2]. ಈಶ್ವರ @ ಸಣ್ಣತಮ್ಮ ರಾಮಾ ನಾಯ್ಕ, ಸಾ|| ಹುರಳಿಸಾಲ, ತಾ: ಭಟ್ಕಳ. ಈ ನಮೂದಿತ ಆರೋಪಿತರು ಸೇರಿಕೊಂಡು ದಿನಾಂಕ: 19-07-2021 ರಂದು ರಾತ್ರಿ 08-45 ಗಂಟೆಯ ಸಮಯಕ್ಕೆ ಭಟ್ಕಳದ ಹೆಬಳೆ ಗಾಂಧಿನಗರ ಸರ್ಕಲ್ ಹತ್ತಿರ ಇರುವ ಜಯಂತ ನಾಯ್ಕ ಇವರ ಹೊಟೇಲ್ ಎದುರಿಗೆ ಪಿರ್ಯಾದಿ ಮತ್ತು ಪಿರ್ಯಾದಿಯ ಗೆಳೆಯರಾದ ದಿನೇಶ ರಾಮಾ ಗೊಂಡ ಹಾಗೂ ಮಾದೇವ ಮಾಸ್ತಿ ಗೊಂಡ ಇವರಿಗೆ ಅಡ್ಡಗಡ್ಡಿ ತಡೆದು, ಅವರನ್ನು ಉದ್ದೇಶಿಸಿ ‘ಲೇ ಗೊಂಡ ಸೂಳೆ ಮಕ್ಕಳಾ’ ಅಂತಾ ಅವಾಚ್ಯ ಶಬ್ದಗಳಿಂದ ಬೈಯ್ದು, ಅವರಿಗೆ ಜಾತಿ ನಿಂದನೆ ಮಾಡಿ, ದಿನೇಶ ಗೊಂಡ ಮತ್ತು ಮಾದೇವ ಗೊಂಡ ಇವರಿಗೆ ಇಬ್ಬರೂ ಆರೋಪಿತರು ಸೇರಿಕೊಂಡು ಕೈಯಿಂದ ಹೊಡೆದು ಅವರ ಶರ್ಟ್ ಹಿಡಿದು ಎಳೆದಾಡಿದಲ್ಲದೇ, ಆರೋಪಿ 2 ನೇಯವನು ಒಂದು ಸಣ್ಣ ಚಾಕುವಿನಿಂದ ಕೊಲೆ ಮಾಡುವ ಉದ್ದೇಶದಿಂದ ದಿನೇಶ ರಾಮಾ ಗೊಂಡ, ಪ್ರಾಯ-24 ವರ್ಷ, ಈತನ ಬೆನ್ನಿನ ಎಡಭಾಗದಲ್ಲಿ ಚಾಕುವಿನಿಂದ ಜೋರಾಗಿ ತಿವಿದು ತೀವ್ರ ರಕ್ತಗಾಯ ಪಡಿಸಿದ್ದಲ್ಲದೇ, ಕೊಲೆ ಮಾಡುವುದಾಗಿ ಜೀವದ ಬೆದರಿಕೆ ಹಾಕಿ ಚಾಕು ಸಮೇತ ಇಬ್ಬರೂ ಆರೋಪಿತರು ತಮ್ಮ ಪ್ಯಾಸೆಂಜರ್ ಆಟೋ ರಿಕ್ಷಾ ನಂ: ಕೆ.ಎ-47/ಎ-1014 ನೇದನ್ನು ಚಲಾಯಿಸಿಕೊಂಡು ತೆಂಗಿನಗುಂಡಿ ಬೀಚ್ ಕಡೆಗೆ ಹೋದ ಬಗ್ಗೆ ಪಿರ್ಯಾದಿ ಶ್ರೀ ಸಂತೋಷ ತಂದೆ ನಾಗಯ್ಯ ಗೊಂಡ, ಪ್ರಾಯ-28 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಹೆರಿಕೇರಿ, ನಾಗಯ್ಯನ ಮನೆ, ಹೆಬಳೆ, ತಾ: ಭಟ್ಕಳ ರವರು ದಿನಾಂಕ: 20-07-2021 ರಂದು 00-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಹಳಿಯಾಳ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 124/2021, ಕಲಂ: 279, 337, 304(ಎ) ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಮಹೇಶ ತಂದೆ ಮಹಾದೇವ ದಂಡಿ, ಪ್ರಾಯ-24 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಬಿ.ಕೆ ಹಳ್ಳಿ, ತಾ: ಹಳಿಯಾಳ (ಮೋಟಾರ್ ಸೈಕಲ್ ನಂ: ಕೆಎ-65/ಇ-9074 ನೇದರ ಸವಾರ). ಈತನು ಪಿರ್ಯಾದಿಯ ತಮ್ಮನಾಗಿದ್ದು, ದಿನಾಂಕ: 17-07-2021 ರಂದು ತನ್ನ ಮೋಟಾರ್ ಸೈಕಲ್ ನಂ: ಕೆಎ-65/ಇ-9074 ನೇದರ ಮೇಲೆ ತನ್ನ ತಾಯಿಯಾದ ಶ್ರೀಮತಿ ಲಲಿತಾ ಕೋಂ. ಮಹಾದೇವ ದಂಡಿ, ಪ್ರಾಯ-48 ವರ್ಷ, ವೃತ್ತಿ-ಗೃಹಿಣಿ, ಸಾ|| ಬಿ.ಕೆ ಹಳ್ಳಿ, ತಾ: ಹಳಿಯಾಳ (ಮೃತೆ) ಇವಳಿಗೆ ಕೂಡ್ರಿಸಿಕೊಂಡು ಹಳಿಯಾಳ ಬದಿಯಿಂದ ಅಳ್ನಾವರ ಬದಿಗೆ ತನ್ನ ಮೋಟಾರ್ ಸೈಕಲನ್ನು ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಸಮಯ 15-30 ಗಂಟೆಯ ಸುಮಾರಿಗೆ ಹಳಿಯಾಳ ತಾಲೂಕಿನ ತೇರಗಾಂವ ಗ್ರಾಮದ ಹತ್ತಿರ ನಾಯಿಯೊಂದು ಮೋಟಾರ್ ಸೈಕಲಿಗೆ ಅಡ್ಡ ಬಂದಾಗ ಮೋಟಾರ್ ಸೈಕಲನ್ನು ತನ್ನ ನಿಯಂತ್ರಣದಲ್ಲಿ ಇಟ್ಟುಕೊಳ್ಳದೇ ಮೋಟಾರ್ ಸೈಕಲನ್ನು ರಸ್ತೆಯ ಮೇಲೆ ಬೀಳಿಸಿ, ಅಪಘಾತ ಪಡಿಸಿದ ಪರಿಣಾಮ ಶ್ರೀಮತಿ ಲಲಿತಾ ಇವಳ ತಲೆಗೆ ಒಳಪೆಟ್ಟು, ಬೆನ್ನಿಗೆ ತೆರಚಿದ ಗಾಯ ಹಾಗೂ ಆರೋಪಿತನಿಗೆ ಬಲ ಮೊಣಗಂಟಿನ ಹತ್ತಿರ ಗಾಯವಾಗಿದ್ದು, ಶ್ರೀಮತಿ ಲಲಿತಾ ಇವಳು ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ಸದ್ರಿಯವರಿಗೆ ಹಳಿಯಾಳದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ, ವೈದ್ಯರ ಸಲಹೆಯಂತೆ ಶ್ರೀಮತಿ ಲಲಿತಾ ಇವಳಿಗೆ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆಯಲ್ಲಿದ್ದ ಶ್ರೀಮತಿ ಲಲಿತಾ ಇವಳು ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ: 20-07-2021 ರಂದು 12-00 ಗಂಟೆಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು ಇರುತ್ತದೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಮಂಜುನಾಥ ತಂದೆ ಮಹಾದೇವ ದಂಡಿ, ಪ್ರಾಯ-26 ವರ್ಷ, ವೃತ್ತಿ-ಇಲೆಕ್ಟ್ರಾನಿಕ್ ಮೆಕ್ಯಾನಿಕ್, ಸಾ|| ಬಿ.ಕೆ ಹಳ್ಳಿ, ತಾ: ಹಳಿಯಾಳ ರವರು ದಿನಾಂಕ: 20-07-2021 ರಂದು 14-50 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಹಳಿಯಾಳ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 125/2021, ಕಲಂ: ಮಹಿಳೆ ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಮಹಿಳೆ ಕುಮಾರಿ: ನೇಹಾ ತಂದೆ ಶಿವಾಜಿ ಕೊಲೇಕರ, ಪ್ರಾಯ-19 ವರ್ಷ, ವೃತ್ತಿ-ವಿದ್ಯಾರ್ಥಿನಿ, ಸಾ|| ನೀರಲಗಾ ಗ್ರಾಮ, ತಾ: ಹಳಿಯಾಳ. ಪಿರ್ಯಾದಿಯವರ ತಂಗಿಯಾದ ಇವಳು ಹಳಿಯಾಳ ತಾಲೂಕಿನ ಹವಗಿ ಗ್ರಾಮದ ಡಿಗ್ರಿ ಕಾಲೇಜ್ ನಲ್ಲಿ ಬಿ.ಎ-1 ನೇ ವರ್ಷದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದವಳು, ದಿನಾಂಕ: 19-07-2021 ರಂದು ಬೆಳಿಗ್ಗೆ 09-00 ಗಂಟೆಗೆ ತಾನು ಕಾಲೇಜಿಗೆ ಹೋಗಿ ಲೈಬ್ರರಿ ಬುಕ್ ಕೊಟ್ಟು ಬರುತ್ತೇನೆ ಅಂತಾ ಹಳಿಯಾಳ ತಾಲೂಕಿನ ಹವಗಿ ಗ್ರಾಮದ ತನ್ನ ಮನೆಯಲ್ಲಿ ಹೇಳಿ ಹೋದವಳು, ಇಲ್ಲಿಯವರೆಗೆ ವಾಪಸ್ ಮನೆಗೆ ಬಾರದೇ ಸಂಬಂಧಿಕರ ಮನೆಗೂ ಹೋಗದೇ ಎಲ್ಲಿಯೋ ಹೋಗಿ ಕಾಣೆಯಾಗಿರುತ್ತಾಳೆ. ಸದ್ರಿ ಕಾಣೆಯಾದವಳನ್ನು ಹುಡುಕಿ ಕೊಡಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಮಂಜುನಾಥ ತಂದೆ ಶಿವಾಜಿ ಕೊಲೇಕರ, ಪ್ರಾಯ-23 ವರ್ಷ, ವೃತ್ತಿ-ಶುಗರ್ ಫ್ಯಾಕ್ಟರಿ ಕೆಲಸ, ಸಾ|| ನೀರಲಗಾ, ತಾ: ಹಳಿಯಾಳ ರವರು ದಿನಾಂಕ: 20-07-2021 ರಂದು 17-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಹಳಿಯಾಳ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 126/2021, ಕಲಂ: ಮಹಿಳೆ ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಮಹಿಳೆ ಶ್ರೀಮತಿ ಭಾರತಿ ಕೋಂ. ರಮೇಶ ಪವಾರ, ಪ್ರಾಯ-30 ವರ್ಷ, ವೃತ್ತಿ-ಗೃಹಿಣಿ, ಸಾ|| ಮುನವಳ್ಳಿ ಗ್ರಾಮ, ತಾ: ಸವದತ್ತಿ, ಜಿ: ಬೆಳಗಾವಿ. ಪಿರ್ಯಾದಿಯವರ ಮಗಳಾದ ಇವಳು ತನ್ನ ತವರು ಮನೆಯಾದ ಹಳಿಯಾಳ ತಾಲೂಕಿನ ಶಿವಪುರ ಗ್ರಾಮಕ್ಕೆ ಕಳೆದ ಸುಮಾರು 3 ತಿಂಗಳ ಹಿಂದೆ ಬಂದು ತನ್ನ ತವರು ಮನೆಯಲ್ಲಿಯೇ ಉಳಿದುಕೊಂಡಿದ್ದವಳು, ತನ್ನ ತವರು ಮನೆಯಿಂದ ದಿನಾಂಕ: 17-07-2021 ರಂದು ಸಂಜೆ 18-00 ಗಂಟೆಯ ಸುಮಾರಿಗೆ ಮನೆಯಲ್ಲಿ ಯಾರಿಗೂ ಹೇಳದೇ ಕೇಳದೇ ಹೋದವಳು ವಾಪಸ್ ಮನೆಗೆ ಬಾರದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದು, ಕಾಣೆಯಾದವಳನ್ನು ಹುಡುಕಿ ಕೊಡುವಂತೆ ಕೋರಿದ ಬಗ್ಗೆ ಪಿರ್ಯಾದಿ ಶ್ರೀ ಮಹಾದೇವ ತಂದೆ ಜೀವಪ್ಪ ಮೊಕಾಶಿ, ಪ್ರಾಯ-48 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಶಿವಪುರ ಗ್ರಾಮ, ತಾ: ಹಳಿಯಾಳ ರವರು ದಿನಾಂಕ: 20-07-2021 ರಂದು 17-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
======||||||||======
ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ
ದಿನಾಂಕ:- 20-07-2021
at 00:00 hrs to 24:00 hrs
ಪ್ರಕರಣಗಳು ದಾಖಲಾಗಿರುವುದಿಲ್ಲ....
======||||||||======