ದೈನಂದಿನ ಜಿಲ್ಲಾ ಅಪರಾಧ ವರದಿ
ದಿನಾಂಕ:- 20-06-2021
at 00:00 hrs to 24:00 hrs
ಕುಮಟಾ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 119/2021, ಕಲಂ: 279, 337, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಗಿರೀಶ ತಂದೆ ಶ್ರೀನಿವಾಸ, ಪ್ರಾಯ-45 ವರ್ಷ, ಸಾ|| ಮಾರುತಿ ನಗರ, ತಾಳಗುಪ್ಪಾ, ತಾ: ಸಾಗರ, ಜಿ: ಶಿವಮೊಗ್ಗಾ (ಮಾರುತಿ ಓಮಿನಿ ವಾಹನ ನಂ: ಕೆ.ಎ-17/ಎಮ್-8435 ನೇದರ ಚಾಲಕ). ಈತನು ದಿನಾಂಕ: 20-06-2021 ರಂದು ಬೆಳಿಗ್ಗೆ 07-00 ಗಂಟೆಯ ಸುಮಾರಿಗೆ ತನ್ನ ಮಾರುತಿ ಒಮಿನಿ ವಾಹನ ನಂ: ಕೆ.ಎ-17/ಎಮ್-8435 ನೇದನ್ನು ಕುಮಟಾ ಕಡೆಯಿಂದ ಅಂಕೊಲಾ ಕಡೆಗೆ ಹೋಗಲು ಅತೀವೇಗವಾಗಿ ಚಲಾಯಿಸಿಕೊಂಡು ಬಂದು, ಕುಮಟಾದ ಹೊಸ ಬಸ್ ನಿಲ್ದಾಣದ ಹತ್ತಿರ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ಮೇಲೆ ರಸ್ತೆಯಲ್ಲಿ ವಾಹನಗಳ ದಟ್ಟಣೆ ಇದ್ದರೂ ಕೂಡಾ ವಾಹನದ ವೇಗವನ್ನು ನಿಯಂತ್ರಿಸದೇ ರಸ್ತೆಯಲ್ಲಿದ್ದ ಹೊಂಡವನ್ನು ತಪ್ಪಿಸಲು ಒಮ್ಮೆಲೇ ನಿಷ್ಕಾಳಜಿಯಿಂದ ರಸ್ತೆಯ ಬಲಕ್ಕೆ ಚಲಾಯಿಸಿ, ತನ್ನ ಮುಂದಿನಿಂದ ಅಂದರೆ ಅಂಕೋಲಾ ಕಡೆಯಿಂದ ಕುಮಟಾ ಕಡೆಗೆ ಬರುತ್ತಿದ್ದ ಆಫೇ ಗೂಡ್ಸ್ ರಿಕ್ಷಾಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ ಪರಿಣಾಮವಾಗಿ ಗೂಡ್ಸ್ ರಿಕ್ಷಾ ಪಲ್ಟಿಯಾಗಿ ರಸ್ತೆಯ ಎಡಕ್ಕೆ ಎಡಮಗ್ಗುಲಾಗಿ ಬಿದ್ದ ಪರಿಣಾಮ ಗೂಡ್ಸ್ ರಿಕ್ಷಾ ಚಾಲಕನಾದ ಅಲ್ವಿನ್ ತಂದೆ ಡೂಮಿಂಗ್ ಲೋಫಿಸ್, ಪ್ರಾಯ-47 ವರ್ಷ, ಸಾ|| ಗುಂದ, ತಾ: ಕುಮಟಾ ಇವರಿಗೆ ಹಣೆಗೆ, ತುಟಿಯ ಮೇಲ್ಭಾಗಕ್ಕೆ ಮತ್ತು ಎಡಗಾಲಿನ ಪಾದಕ್ಕೆ ಗಾಯವಾಗಲು ಮತ್ತು ಆರೋಪಿ ಚಾಲಕನು ತನಗೆ ಹೊಟ್ಟೆಗೆ, ಬೆನ್ನಿಗೆ ಗಂಭೀರ ಗಾಯವಾಗಲು ಮತ್ತು ಒಳನೋವು ಆಗಲು ಕಾರಣನಾಗಿದ್ದಲ್ಲದೇ, ಎರಡೂ ವಾಹನಗಳು ಜಖಂ ಆಗಲು ಆರೋಪಿ ಚಾಲಕನೇ ಕಾರಣನಾದ ಬಗ್ಗೆ ಪಿರ್ಯಾದಿ ಶ್ರೀ ಅರುಣ ತಂದೆ ರಾಮನಾಥ ನಾಯ್ಕ, ಪ್ರಾಯ-62 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಎ.ಪಿ.ಎಮ್.ಸಿ ರಸ್ತೆ, ತಾ: ಕುಮಟಾ ರವರು ದಿನಾಂಕ: 20-06-2021 ರಂದು 12-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಶಿರಸಿ ಗ್ರಾಮೀಣ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 55/2021, ಕಲಂ: 143, 269, 270 ಸಹಿತ 149 ಐಪಿಸಿ ಹಾಗೂ ಕಲಂ: 87 ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ಕೃಷ್ಣಾ ತಿಪ್ಪಾ ನಾಯ್ಕ, ಪ್ರಾಯ-42 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಮಾವಿನಸಾರ, ಪೋ: ಬಪ್ಪನಳ್ಳಿ, ತಾ: ಶಿರಸಿ, 2]. ಮಂಜುನಾಥ ಜೋಗಾ ನಾಯ್ಕ, ಪ್ರಾಯ-40 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಬಪ್ಪನಳ್ಳಿ, ತಾ: ಶಿರಸಿ, 3]. ವೆಂಕಟೇಶ ಮಂಜಾ ದೇವಾಡಿಗ, ಪ್ರಾಯ-48 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಜಂಬೆಕೊಪ್ಪ, ಪೋ: ಬಪ್ಪನಳ್ಳಿ, ತಾ: ಶಿರಸಿ, 4]. ಮಂಜುನಾಥ ಕೃಷ್ಣಾ ನಾಯ್ಕ, ಪ್ರಾಯ-47 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಇಸಳೂರು, ತಾ: ಶಿರಸಿ, 5]. ಅಬ್ದುಲ್ ಬಶೀರ್ ಮರದಾನಸಾಬ್ ಗೌಡಳ್ಳಿ, ಪ್ರಾಯ-47 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಗೌಡಳ್ಳಿ, ಪೋ: ಇಸಳೂರು, ತಾ: ಶಿರಸಿ. ಈ ನಮೂದಿತ ಆರೋಪಿತರು ದಿನಾಂಕ: 20-06-2021 ರಂದು 16-15 ಗಂಟೆಯ ಸಮಯಕ್ಕೆ ಬಪ್ಪನಳ್ಳಿ ಗ್ರಾಮದ ಜಂಬೆಕೊಪ್ಪ ಊರಿಗೆ ಹೋಗುವ ಕ್ರಾಸ್ ಹತ್ತಿರ ಗಣಪತಿ ಕೂಡ್ರಿಸುವ ಮಂಟಪದ ಹಿಂದೆ ಇರುವ ಅರಣ್ಯ ಪ್ರದೇಶದಲ್ಲಿ ಅಕ್ರಮ ಕೂಟವನ್ನು ಮಾಡಿಕೊಂಡು ಜನರ ಪ್ರಾಣಕ್ಕೆ ಅಪಾಯಕಾರಕವಾದ ಕೋವಿಡ್-19 ರೋಗದ ಸೋಂಕನ್ನು ಹರಡಿಸುವ ದ್ವೇಷಪೂರಕ ಉದ್ದೇಶದಿಂದ ರೋಗ ನಿರೋಧಕ ನಿರ್ಬಂಧ ನಿಯಮವನ್ನು ಉಲ್ಲಂಘಿಸಿ ಮತ್ತು ಕೊರೋನಾ ರೋಗದ ಸೋಂಕು ಹರಡುವುದನ್ನು ತಡೆಯಲು ಕೈಗೊಳ್ಳಬೇಕಾದ ಮುಂಜಾಗೃತ ಕ್ರಮಗಳನ್ನು ತೆಗೆದುಕೊಳ್ಳದೇ ನಿರ್ಲಕ್ಷ್ಯತನದಿಂದ ಜನರ ಪ್ರಾಣ ಮತ್ತು ದೈಹಿಕ ಸುರಕ್ಷತೆಗೆ ಅಪಾಯವನ್ನುಂಟು ಮಾಡುವ ಕೃತ್ಯವನ್ನು ಮಾಡಿದ್ದರಿಂದ ಹಾಗೂ ತಮ್ಮ ತಮ್ಮ ಲಾಭಕ್ಕೋಸ್ಕರ ಇಸ್ಪೀಟ್ ಎಲೆಗಳ ಮೇಲಿನ ಅದೃಷ್ಟದ ಆಟವಾದ ಅಂದರ್-ಬಾಹರ್ ಇಸ್ಪೀಟ್ ಜೂಗಾರಾಟ ಆಡುತ್ತಿದ್ದಾಗ, ಇಸ್ಪೀಟ್ ಜೂಗರಾಟದ ಸಲಕರಣೆಗಳಾದ ಇಸ್ಪೀಟ್ ಎಲೆಗಳು-52, ಒಟ್ಟೂ ನಗದು ಹಣ 5,400/- ರೂಪಾಯಿ ಹಾಗೂ ಮಂಡಕ್ಕೆ ಹಾಸಿದ ಕಂಬಳಿ-01, ಇವುಗಳೊಂದಿಗೆ ಸ್ಥಳದಲ್ಲಿಯೇ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಶ್ಯಾಮ್ ವಿ. ಪಾವಸ್ಕರ್, ಪಿ.ಎಸ್.ಐ (ಕ್ರೈಂ), ಶಿರಸಿ ಗ್ರಾಮೀಣ ಪೊಲೀಸ್ ಠಾಣೆ ರವರು ದಿನಾಂಕ: 20-06-2021 ರಂದು 18-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 40/2021, ಕಲಂ: 279, 227, 304(ಎ) ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ನಾಗರಾಜ ತಂದೆ ಗಿರಮಲ್ಲಪ್ಪ ಹುಂಬಿ, ಪ್ರಾಯ-23 ವರ್ಷ, ವೃತ್ತಿ-ಚಾಲಕ, ಸಾ|| ವೀರಭದ್ರ ದೇವಸ್ಥಾನದ ಹತ್ತಿರ, ಬೆಳವಡಿ, ತಾ: ಬೈಲಹೊಂಗಲ, ಜಿ: ಬೆಳಗಾವಿ (ಕ್ರೂಸರ್ ವಾಹನ ನಂ: ಕೆ.ಎ-24/6231 ನೇದರ ಚಾಲಕ). ಈತನು ದಿನಾಂಕ: 20-06-2021 ರಂದು ಬೆಳಗಿನ ಜಾವ 01-00 ಗಂಟೆಯ ಸಮಯಕ್ಕೆ ತಾನು ಚಾಲನೆ ಮಾಡುತ್ತಿದ್ದ ಕ್ರೂಸರ್ ವಾಹನ ನಂ: ಕೆ.ಎ-24/6231 ನೇದನ್ನು ಪೊಟೋಳಿ ಗ್ರಾಮದ ಕಡೆಯಿಂದ ಜೋಯಿಡಾ ಕಡೆಗೆ ಅತೀವೇಗವಾಗಿ ಹಾಗೂ ನಿಷ್ಕಾಳಜೀತನದಿಂದ ಚಾಲನೆ ಮಾಡಿಕೊಂಡು ಹೋಗುತ್ತಾ ತಾಂಬಡೆ ಗ್ರಾಮದ ಹತ್ತಿರ ರಸ್ತೆಯ ಪಕ್ಕದಲ್ಲಿಯ ಅರಣ್ಯದಲ್ಲಿನ ಒಂದು ಮರಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ವಾಹನದಲ್ಲಿದ್ದ ಉಳಿದ 07 ಜನರಿಗೆ ಸಾದಾ ಸ್ವರೂಪದ ಗಾಯನೋವು ಪಡಿಸಿದ್ದಲ್ಲದೇ, ವಿಜಯ ತಂದೆ ವಿಠ್ಠಲ ಪೀಸೆ, ಸಾ|| ಬೆಳವಾಡಿ, ತಾ: ಬೈಲಹೊಂಗಲ್, ಜಿ: ಬೆಳಗಾವಿ ಈತನಿಗೆ ಎಡಬದಿಯ ಹಣೆಯ ಭಾಗಕ್ಕೆ ಮತ್ತು ಮುಖದ ಭಾಗಕ್ಕೆ ಭಾರೀ ಸ್ವರೂಪದ ಗಾಯನೋವು ಪಡಿಸಿ ಮರಣ ಪಡಿಸಿದ್ದಲ್ಲದೇ, ಆರೋಪಿ ಚಾಲಕನು ತನಗೂ ಸಹ ಸ್ವಯಂಕೃತ ಅಪಘಾತದಿಂದ ಎದೆಯ ಭಾಗಕ್ಕೆ ಒಳನೋವು ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ಸಂತೋಷ ತಂದೆ ನಿಂಗಪ್ಪ ಕಿರ್ಕಸಾಲಿ, ಪ್ರಾಯ-19 ವರ್ಷ, ವೃತ್ತಿ-ಹೊಟೇಲ ವ್ಯಾಪಾರ, ಸಾ|| ವೀರಭದ್ರ ದೇವಸ್ಥಾನದ ಹತ್ತಿರ, ಬೆಳವಡಿ, ತಾ: ಬೈಲಹೊಂಗಲ, ಜಿ: ಬೆಳಗಾವಿ ರವರು ದಿನಾಂಕ: 20-06-2021 ರಂದು 07-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಬನವಾಸಿ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 60/2021, ಕಲಂ: 32, 34 ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತರು 1]. ಬಂಗಾರಪ್ಪ ರಾಮಣ್ಣ ಕೊರಚರ, ಪ್ರಾಯ-65 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಸಂತೆ ಮಾರುಕಟ್ಟೆ, ದಾಸನಕೊಪ್ಪ, ತಾ: ಶಿರಸಿ, 2]. ಜಾಕೀರ್ ಹುಸೇನ್ ಅಲ್ಲಾಭಕ್ಷ, ವೃತ್ತಿ-ಗಣೇಶ ವೈನ್ಸ್ ಶಾಪ್ ಮ್ಯಾನೇಜರ್, ಸಾ|| ದಾಸನಕೊಪ್ಪ, ತಾ: ಶಿರಸಿ. ದಿನಾಂಕ: 20-06-2021 ರಂದು ಬೆಳಿಗ್ಗೆ 08-30 ಗಂಟೆಗೆ ಪಿರ್ಯಾದಿಯವರು ಖಚಿತ ಬಾತ್ಮಿಯೊಂದಿಗೆ ಸಿಬ್ಬಂದಿಯವರೊಂದಿಗೆ ಸೇರಿ ದಾಸನಕೊಪ್ಪದ ಆರೋಪಿ 1 ನೇಯವನ ಮನೆಯ ಪಕ್ಕದ ಕುರಿ ಶೆಡ್ಡಿನಲ್ಲಿ ದಾಳಿ ಮಾಡಿ, ಆರೋಪಿ 1 ನೇಯವನು HAYWARDS CHEERS WHISKY ಅಂತಾ ಲೇಬಲ್ ಇರುವ 90 ML ಅಳತೆಯ 3 ಸೀಲ್ ಸರಾಯಿ ಬಾಕ್ಸ್ ಮತ್ತು HAYWARDS CHEERS WHISKY ಅಂತಾ ಲೇಬಲ್ ಇರುವ 90 ML ಅಳತೆಯ 48 ಟೆಟ್ರಾ ಪ್ಯಾಕೆಟ್ ಗಳನ್ನು ಆರೋಪಿ 2 ನೇಯವನಲ್ಲಿ ಖರೀದಿ ಮಾಡಿ ಯಾವುದೇ ಪಾಸ್ ಯಾ ಪರ್ಮಿಟ್ ಇಲ್ಲದೇ ಮಾರಾಟ ಹಾಗೂ ಸಾಗಾಟ ಮಾಡುವ ಉದ್ದೇಶದಿಂದ ತನ್ನ ತಾಬಾದಲ್ಲಿ ಇಟ್ಟುಕೊಂಡಾಗ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ರಾಮಚಂದ್ರ ನಾಯಕ, ಪೊಲೀಸ್ ವೃತ್ತ ನಿರೀಕ್ಷಕರು, ಶಿರಸಿ ವೃತ್ತ, ಶಿರಸಿ ರವರು ದಿನಾಂಕ: 20-06-2021 ರಂದು 10-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಬನವಾಸಿ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 61/2021, ಕಲಂ: 279, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಶಂಭುಲಿಂಗಪ್ಪ ತಂದೆ ಮುರಗೇಶಪ್ಪ ಹರವಿ, ಸಾ|| ಚಿಕ್ಕಾಂಶಿ, ಹೊಸೂರ, ತಾ: ಹಾನಗಲ್, ಜಿ: ಹಾವೇರಿ (ಇನೋವಾ ಕಾರ್ ನಂ: ಕೆ.ಎ-22/ಪಿ-5397 ನೇದರ ಚಾಲಕ). ಈತನು ದಿನಾಂಕ: 20-06-2021 ರಂದು ಮಧ್ಯಾಹ್ನ 02-45 ಗಂಟೆಯ ಸುಮಾರಿಗೆ ದಾಸನಕೊಪ್ಪ-ಹಾವೇರಿ ರಸ್ತೆಯ ಕಾಳಂಗಿ ಕ್ರಾಸ್ ಹತ್ತಿರ ತನ್ನ ಇನೋವಾ ಕಾರ್ ನಂ: ಕೆ.ಎ-22/ಪಿ-5397 ನೇದನ್ನು ಹಾವೇರಿ ಕಡೆಯಿಂದ ದಾಸನಕೊಪ್ಪ ಕಡೆಗೆ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ದಾಸನಕೊಪ್ಪ ಕಡೆಯಿಂದ ಹಾವೇರಿ ಕಡೆಗೆ ಹೋಗುತ್ತಿದ್ದ ಮೋಟಾರ್ ಸೈಕಲ್ ನಂ: ಕೆ.ಎ-27/ಕ್ಯೂ-1663 ನೇದರ ಸವಾರನಾದ ಆನಂದ ತಂದೆ ಹನುಮಂತಪ್ಪ ಶಕುನಳ್ಳಿ, ಸಾ|| ಸಾವಿಕೇರಿ, ತಾ: ಹಾನಗಲ್, ಜಿ: ಹಾವೇರಿ ಈತನಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಆನಂದ ಶಕುನಳ್ಳಿ ಈತನ ಎಡಗಾಲಿಗೆ ಗಂಭೀರ ಸ್ವರೂಪದ ರಕ್ತಗಾಯ ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ರಾಜಪ್ಪಗೌಡ ತಂದೆ ಸಿದ್ದನಗೌಡ ಪಾಟೀಲ, ಪ್ರಾಯ-40 ವರ್ಷ, ವೃತ್ತಿ-ಗಾರೆ ಕೆಲಸ, ಸಾ|| ಕಾಳಂಗಿ, ತಾ: ಶಿರಸಿ ರವರು ದಿನಾಂಕ: 20-06-2021 ರಂದು 16-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
======||||||||======
ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ
ದಿನಾಂಕ:- 20-06-2021
at 00:00 hrs to 24:00 hrs
ಪ್ರಕರಣಗಳು ದಾಖಲಾಗಿರುವುದಿಲ್ಲ....
======||||||||======