ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 20-03-2021

at 00:00 hrs to 24:00 hrs

 

ಕಾರವಾರ ಶಹರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 41/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ಚಿಂತಾಮಣಿ ತಂದೆ ಕೃಷ್ಣ ಗೌಡ, ಪ್ರಾಯ-37 ವರ್ಷ, ವೃತ್ತಿ-ಅಂಗಡಿ ವ್ಯವಹಾರ, ಸಾ|| ಇಸ್ಕಾನ ದೇವಸ್ಥಾನದ ಹತ್ತಿರ, ಹಬ್ಬುವಾಡ,  ಕಾರವಾರ. ನಮೂದಿತ ಆರೋಪಿತನು ದಿನಾಂಕ: 19-03-2021 ರಂದು 17-30 ಗಂಟೆಗೆ ತೇಲಿ ರಾಮಜೀ ರಸ್ತೆಯ ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡು ತನ್ನ ಲಾಭದ ಸಲುವಾಗಿ 01/- ರೂಪಾಯಿಗೆ 80/- ರೂಪಾಯಿ ಕೊಡುವ ಶರತ್ತಿನ ಮೇಲೆ ಅದೃಷ್ಠದ ಅಂಕೆ-ಸಂಖ್ಯೆಗಳ ಮೇಲೆ ಪಂಥ ಕಟ್ಟಿ ಜನರಿಂದ ಹಣ ಪಡೆದು ಓ.ಸಿ ಮಟಕಾ ಜೂಜಾಟ ನಡೆಸುತ್ತಿರುವ ಕಾಲಕ್ಕೆ ಪಿರ್ಯಾದಿಯವರು ಸಿಬ್ಬಂದಿಗಳೊಂದಿಗೆ ಸೇರಿ ದಾಳಿ ಮಾಡಿ ಹಿಡಿದು, ದಾಳಿಯ ಕಾಲ ಆರೋಪಿತನಿಂದ 1). ಒಟ್ಟೂ ನಗದು ಹಣ 1,560/- ರೂಪಾಯಿ, 2). ಓ.ಸಿ ಮಟಕಾ ಜೂಜಾಟದ ಅಂಕೆ-ಸಂಖ್ಯೆ ಬರೆದ ಚೀಟಿ-01, 3). ಬಾಲ್ ಪೆನ್–01 ನೇದವುಗಳನ್ನು ವಶಕ್ಕೆ ಪಡೆದುಕೊಂಡಿದ್ದು, ಆರೋಪಿತನು ಓ.ಸಿ ಮಟಕಾ ಜೂಜಾಟ ಆಡಿಸುತ್ತಿರುವಾಗ ದಾಳಿಯ ಕಾಲ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಸಂತೋಷಕುಮಾರ ಎಮ್, ಪಿ.ಎಸ್.ಐ, ಕಾರವಾರ ಶಹರ ಪೊಲೀಸ್ ಠಾಣೆ ರವರು ದಿನಾಂಕ: 20-03-2021 ರಂದು 17-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕಾರವಾರ ಶಹರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 42/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ಮಂಜುನಾಥ ತಂದೆ ಬಾಲಕೃಷ್ಣ ಆಚಾರ್ಯ, ಪ್ರಾಯ-40 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಬಿ.ಎಸ್.ಎಲ್.ಎನ್ ಕಚೇರಿ ಹತ್ತಿರ, ಕಾರವಾರ. ನಮೂದಿತ ಆರೋಪಿತನು ದಿನಾಂಕ: 19-03-2021 ರಂದು 19-30 ಗಂಟೆಗೆ ಕಾರವಾರದ ಕುಠಿನ್ಹೋ ರಸ್ತೆಯ ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡು ತನ್ನ ಲಾಭದ ಸಲುವಾಗಿ 01/- ರೂಪಾಯಿಗೆ 80/- ರೂಪಾಯಿ ಕೊಡುವ ಷರತ್ತಿನ ಮೇಲೆ ಅದೃಷ್ಠದ ಅಂಕೆ-ಸಂಖ್ಯೆಗಳ ಮೇಲೆ ಪಂಥ ಕಟ್ಟಿ ಜನರಿಂದ ಹಣ ಪಡೆದು ಓ.ಸಿ ಮಟಕಾ ಜೂಜಾಟ ನಡೆಸುತ್ತಿರುವ ಕಾಲಕ್ಕೆ ಪಿರ್ಯಾದಿಯವರು ಸಿಬ್ಬಂದಿಗಳೊಂದಿಗೆ ಸೇರಿ ದಾಳಿ ಮಾಡಿ ಹಿಡಿದು, ದಾಳಿಯ ಕಾಲ ಆರೋಪಿತನಿಂದ 1). ಒಟ್ಟೂ ನಗದು ಹಣ 1,680/- ರೂಪಾಯಿ, 2). ಓ.ಸಿ. ಮಟಕಾ ಜೂಜಾಟದ ಅಂಕೆ ಸಂಖ್ಯೆ ಬರೆದ ಚೀಟಿ-01, 3), ಬಾಲ್ ಪೆನ್–01 ನೇದವುಗಳನ್ನು ವಶಕ್ಕೆ ಪಡೆದುಕೊಂಡಿದ್ದು, ಆರೋಪಿತನು ಓ,ಸಿ ಮಟಕಾ ಜೂಜಾಟ ಆಡಿಸುತ್ತಿರುವಾಗ ದಾಳಿಯ ಕಾಲ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಸಂತೋಷಕುಮಾರ ಎಮ್, ಪಿ.ಎಸ್.ಐ, ಕಾರವಾರ ಶಹರ ಪೊಲೀಸ್ ಠಾಣೆ ರವರು ದಿನಾಂಕ: 20-03-2021 ರಂದು 18-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 09/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ಜನಾರ್ಧನ ತಂದೆ ತುಕಾರಾಮ ಕೊಳಂಬಕರ, ಪ್ರಾಯ-48 ವರ್ಷ, ಸಾ|| ಜೋಶಿವಾಡಾ, ಕೆರವಡಿ. ತಾ: ಕಾರವಾರ. ನಮೂದಿತ ಆರೋಪಿತನು ದಿನಾಂಕ: 20-03-2021 ರಂದು 13-35 ಗಂಟೆಯ ಸಮಯಕ್ಕೆ ಮಲ್ಲಾಪುರದ ಕುರ್ನಿಪೇಟಯಲ್ಲಿರುವ ಜೆ.ಕೆ ಟೇಲರ್ಸ್ ಅಂಗಡಿಯ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ತನ್ನ ಲಾಭಕ್ಕೋಸ್ಕರ ಓ.ಸಿ ಮಟಕಾ ಜೂಗಾರಾಟ ನಡೆಸಿ, ಓ.ಸಿ ಅಂಕೆ-ಸಂಖ್ಯೆಗಳನ್ನು ಬರೆದುಕೊಟ್ಟು ಸಾರ್ವಜನಿಕರಿಂದ ಹಣವನ್ನು ಪಡೆದುಕೊಂಡು ಓ.ಸಿ ಮಟಕಾ ಜೂಗಾರಾಟ ನಡೆಸುತ್ತಿದ್ದಾಗ ಜೂಗಾರಾಟದಿಂದ ಸಂಪಾದಿಸಿದ ನಗದು ಹಣ 3,765/- ರೂಪಾಯಿ ಹಾಗೂ ಜೂಗಾರಾಟದ ಸಲಕರಣೆಗಳ ಸಮೇತ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ರಾಜಶೇಖರ ಬಿ. ಸಾಗನೂರು, ಪಿ.ಎಸ್.ಐ, ಮಲ್ಲಾಪುರ ಪೊಲೀಸ್ ಠಾಣೆ ರವರು ದಿನಾಂಕ: 20-03-2021 ರಂದು 15-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಅಂಕೋಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 52/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ಜೊರ್ಜ್ ತಂದೆ ಪೀಟರ್ ಪಿಳ್ಳೈ, ಪ್ರಾಯ-57 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಆನಂದಗಿರಿ, ಪುರ್ಲಕ್ಕಿಬೇಣ, ತಾ: ಅಂಕೋಲಾ. ನಮೂದಿತ ಆರೋಪಿತನು ದಿನಾಂಕ: 20-03-2021  ರಂದು ಬೆಳಿಗ್ಗೆ 13-30 ಗಂಟೆಯ ಸುಮಾರಿಗೆ ಅಂಕೋಲಾ ಶಹರದ ವಂದಿಗೆಯ ಚತುಷ್ಪಥ ರಸ್ತೆಯ ಫ್ಲೈ-ಓವರ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ನಿಂತು ತನ್ನ ಲಾಭಕ್ಕೋಸ್ಕರ ಬರ-ಹೋಗುವ ಸಾರ್ವಜನಿಕರನ್ನು ಕರೆಯುತ್ತಾ ತಮ್ಮ ತಮ್ಮ ಅದೃಷ್ಟದ ಸಂಖ್ಯೆಗಳ ಮೇಲೆ ಹಣದ ಪಂಥ ಕಟ್ಟಿಸಿ, ಅದೃಷ್ಟದ ಸಂಖ್ಯೆ ತಾಗಿದರೆ 01/- ರೂಪಾಯಿಗೆ 80/- ರೂಪಾಯಿಗೆ ಕೊಡುವುದಾಗಿ ಹೇಳಿ ಅವರ ಮನವೊಲಿಸಿ, ಸಾರ್ವಜನಿಕರಿಂದ ಅಕ್ರಮವಾಗಿ ಹಣ ಪಡೆದು ಅವರು ಹೇಳಿದ ಅಂಕೆ-ಸಂಖ್ಯೆಯನ್ನು ತನ್ನ ಹತ್ತಿರ ಇರುವ ಚೀಟಿಯಲ್ಲಿ ಬರೆದುಕೊಂಡು ಓ.ಸಿ ಮಟಕಾ ಜೂಗಾರಾಟ ಆಡಿಸುತ್ತಿದ್ದಾಗ ದಾಳಿಯ ಕಾಲ ಓ.ಸಿ ಮಟಕಾ ಜೂಗಾರಾಟದ ಸಲಕರಣೆಗಳಾದ ಓ.ಸಿ ಚೀಟಿ, ಬಾಲ್ ಪೆನ್ ಹಾಗೂ ನಗದು ಹಣ 1,175/- ರೂಪಾಯಿಯೊಂದಿಗೆ ಆರೋಪಿತನು ಸೆರೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಪ್ರೇಮನಗೌಡ ಪಾಟೀಲ್, ಪಿ.ಎಸ್.ಐ, ಅಂಕೋಲಾ ಪೊಲೀಸ್ ಠಾಣೆ ರವರು ದಿನಾಂಕ: 20-03-2021 ರಂದು 15-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.  

 

ಅಂಕೋಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 53/2021, ಕಲಂ: 3, 25(1B)(a) ಭಾರತೀಯ ಆಯುಧ ಅಧಿನಿಯಮ-1959 ನೇದ್ದರ ವಿವರ...... ನಮೂದಿತ ಆರೋಪಿತ ಯಂಕು ತಂದೆ ರೋಮು ಗೌಡ, ಪ್ರಾಯ-44 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಬಲಿಗದ್ದೆ, ಶಿರಗುಂಜಿ, ತಾ: ಅಂಕೋಲಾ. ನಮೂದಿತ ಆರೋಪಿತನು ದಿನಾಂಕ: 20-03-2021 ರಂದು 16-30 ಗಂಟೆಯ ಸುಮಾರಿಗೆ ಅಂಕೋಲಾ ತಾಲೂಕಿನ ಶಿರಗುಂಜಿ ಗ್ರಾಮದ ಬಾಲಿಗದ್ದೆಯಲ್ಲಿ ಯಾವುದೇ ಲೈಸನ್ಸ್ ಇಲ್ಲದೇ ಸುಮಾರು 3,000/- ರೂಪಾಯಿ ಮೌಲ್ಯದ ಅಕ್ರಮ ನಾಡ ಬಂದೂಕನ್ನು ತನ್ನ ತಾಬಾದಲ್ಲಿ ಇಟ್ಟುಕೊಂಡಿದ್ದಾಗ ದಾಳಿಯ ಕಾಲಕ್ಕೆ ಬಂದೂಕಿನೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಸಂಪತ್ ಇ. ಸಿ, ಪಿ.ಎಸ್.ಐ-01, ಅಂಕೋಲಾ ಪೊಲೀಸ್ ಠಾಣೆ ರವರು ದಿನಾಂಕ: 20-03-2021 ರಂದು 16-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 54/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ಕೇಶವ ತಂದೆ ತಿಮ್ಮಣ್ಣ ಗೌಡ, ಪ್ರಾಯ-42 ವರ್ಷ, ವೃತ್ತಿ-ಚಾಲಕ, ಸಾ|| ಉಪ್ಪಿನ ಗಣಪತಿ, ತಾ: ಕುಮಟಾ. ನಮೂದಿತ ಆರೋಪಿತನು ದಿನಾಂಕ: 19-03-2021  ರಂದು ಬೆಳಿಗ್ಗೆ 15-45 ಗಂಟೆಗೆ ಕುಮಟಾದ ಮೀನು ಮಾರುಕಟ್ಟೆ ರಸ್ತೆಯ ದ್ವಾರಕಾ ಹೊಟೇಲ್ ಎದುರು ಸಾರ್ವಜನಿಕ ಸ್ಥಳದಲ್ಲಿ ನಿಂತು ತನ್ನ ಲಾಭಕ್ಕೋಸ್ಕರ ಬರ-ಹೋಗುವ ಜನರಿಗೆ 01/- ರೂಪಾಯಿಗೆ 80/- ರೂಪಾಯಿ ಕೊಡುವುದಾಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆದು ಅಂಕೆ-ಸಂಖ್ಯೆಗಳ ಮೇಲೆ ಹಣವನ್ನು ಪಂಥ ಕಟ್ಟಿಸಿ ಓ.ಸಿ ಚೀಟಿ ಬರೆದು ಓ.ಸಿ ಮಟಕಾ ಜೂಗಾರಾಟ ನಡೆಸುತ್ತಿದ್ದಾಗ ದಾಳಿಯ ಕಾಲ ಓ.ಸಿ ಚೀಟಿ-01, ಅ||ಕಿ|| 00.00/- ರೂಪಾಯಿ, ಬಾಲ್ ಪೆನ್-01, ಅ||ಕಿ|| 00.00/- ರೂಪಾಯಿ ಹಾಗೂ ನಗದು ಹಣ 2,850/- ರೂಪಾಯಿಯೊಂದಿಗೆ ಆರೋಪಿತನು ಸೆರೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಆನಂದಮೂರ್ತಿ ಸಿ, ಪಿ.ಎಸ್.ಐ (ಕಾ&ಸು), ಕುಮಟಾ ಪೊಲೀಸ್ ಠಾಣೆ ರವರು ದಿನಾಂಕ: 20-03-2021 ರಂದು 17-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 55/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ಲಕ್ಷ್ಮಣ ತಂದೆ ಸುಕ್ರು ಪಟಗಾರ, ಪ್ರಾಯ-52 ವರ್ಷ, ಸಾ|| ಗುಡೆಅಂಗಡಿ, ತಾ: ಕುಮಟಾ. ನಮೂದಿತ ಆರೋಪಿತನು ದಿನಾಂಕ: 19-03-2021 ರಂದು 18-45 ಗಂಟೆಗೆ ಗುಡೆಅಂಗಡಿಯ ಮಹಾಸತಿ ಕಟ್ಟೆಯ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ನಿಂತು ತನ್ನ ಲಾಭಕ್ಕಾಗಿ ಬರ-ಹೋಗುವ ಜನರಿಗೆ ಕರೆದು 01/- ರೂಪಾಯಿಗೆ 80/- ರೂಪಾಯಿ ಕೊಡುವುದಾಗಿ ಹೇಳಿ ಜನರಿಂದ ಹಣವನ್ನು ಪಡೆದುಕೊಂಡು ಅದನ್ನು ಅಂಕೆ-ಸಂಖ್ಯೆಗಳ ಮೇಲೆ ಪಂಥ ಕಟ್ಟಿ ಓ.ಸಿ ಮಟಕಾ ಜುಗಾರಾಟ ನಡೆಸುತ್ತಿದ್ದಾಗ ನಗದು ಹಣ 1,340/- ರೂಪಾಯಿ ಹಾಗೂ ಓ.ಸಿ ಜೂಗಾರಾಟದ ಸಲಕರಣೆಗಳೊಂದಿಗೆ ದಾಳಿಯ ವೇಳೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಆನಂದಮೂರ್ತಿ ಸಿ, ಪಿ.ಎಸ್.ಐ (ಕಾ&ಸು), ಕುಮಟಾ ಪೊಲೀಸ್ ಠಾಣೆ ರವರು ದಿನಾಂಕ: 20-03-2021 ರಂದು 19-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 82/2021, ಕಲಂ: 323, 324, 504, 506 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ವೀರೇಂದ್ರ ತಂದೆ ರೋಕಿ ಲೋಬೊ, ಪ್ರಾಯ-38 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಮನೆ ನಂ: 86, ಕೊಡಾಣಿ, ತಾ: ಹೊನ್ನಾವರ. ನಮೂದಿತ ಆರೋಪಿತನು ಪಿರ್ಯಾದಿಯ ತಮ್ಮನಿದ್ದು, ವಿಪರೀತ ಕುಡಿತದ ಚಟ ಮಾಡಿಕೊಂಡು ತನ್ನ ತಂದೆಯೊಂದಿಗೆ ಯಾವಾಗಲೂ ಆಸ್ತಿಯಲ್ಲಿ ಪಾಲು ನೀಡುವಂತೆ ಜಗಳ ಮಾಡಿ ಅವಾಚ್ಯವಾಗಿ ಬೈಯ್ದು ಮಾಡುತ್ತಿದ್ದವನು, ದಿನಾಂಕ: 19-3-2021 ರಂದು ರಾತ್ರಿ 22-00 ಗಂಟೆಯ ಸಮಯಕ್ಕೆ ತಂದೆಯೊಂದಿಗೆ ಆಸ್ತಿಯಲ್ಲಿ ಪಾಲು ನೀಡುವಂತೆ ಜಗಳ ತೆಗೆದು ತಂದೆಗೆ ‘ಬೇವರ್ಸಿ’ ಅಂತ ಅವಾಚ್ಯವಾಗಿ ಬೈಯ್ಯುತ್ತಿದ್ದಾಗ ಪಿರ್ಯಾದಿಯು ‘ನೀನು ಸರಿ ಹೋದರೆ ನಿನಗೆ ಆಸ್ತಿ ಪಾಲು ನೀಡುತ್ತಾರೆ. ನೀನು ಜಗಳ ಮಾಡಿದರೆ ಪೊಲೀಸರಿಗೆ ಪೋನ್ ಮಾಡುತ್ತೇನೆ’ ಅಂತಾ ಪೋನಿನಲ್ಲಿ ಮಾತನಾಡುತ್ತಿದ್ದಾಗ ಆರೋಪಿತನು ಒಮ್ಮೇಲೆ ಸಿಟ್ಟಿನಿಂದ ಕತ್ತಿಯನ್ನು ಪಿರ್ಯಾದಿಯ ಕಡೆಗೆ ಬೀಸಿ ಒಗೆದು, ಅಲ್ಲಿಯೇ ಇದ್ದ ಒಂದು ಬಡಿಗೆಯಿಂದ ಪಿರ್ಯಾದಿಯ ಮೈಮೇಲೆ ಹೊಡೆದು, ಹಾಗೆ ಕೈಯಿಂದ ಸಹ ಮೈಮೇಲೆ ಹೊಡೆದಿದ್ದಲ್ಲದೇ, ‘ನಿನಗೆ ಇಷ್ಟಕ್ಕೆ ಬಿಡುವುದಿಲ್ಲ. ಬೇವರ್ಸಿ, ರಾಂಡೇ ಪುತ್, ನಿನ್ನನ್ನು ಒಂದು ದಿನ ಕೊಂದು ಹಾಕಿ ಜೈಲಿಗೆ ಹೋಗುತ್ತೇನೆ’ ಅಂತ ಜೀವದ ಬೆದರಿಕೆ ಹಾಕಿದ ಬಗ್ಗೆ ಪಿರ್ಯಾದಿ ಶ್ರೀ ರವೀಂದ್ರ ತಂದೆ ರೋಕಿ ಲೋಬೊ, ಪ್ರಾಯ-43 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಮನೆ ನಂ: 86, ಕೊಡಾಣಿ, ತಾ: ಹೊನ್ನಾವರ ರವರು ದಿನಾಂಕ: 20-03-2021 ರಂದು 01-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮುರ್ಡೇಶ್ವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 29/2021, ಕಲಂ: 454, 457, 380 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ದಿನಾಂಕ: 19-03-2021 ರಂದು ಸಂಜೆ 05-30 ಗಂಟೆಯಿಂದ ದಿನಾಂಕ: 20-03-2021 ರಂದು ಬೆಳಿಗ್ಗೆ 09-00 ಗಂಟೆಯ ನಡುವಿನ ಅವಧಿಯಲ್ಲಿ ಪಿರ್ಯಾದುದಾರರು ರೈತ ಸಂಪರ್ಕ ಕೇಂದ್ರ ಮಾವಳ್ಳಿ-1 ಮುರ್ಡೇಶ್ವರದಲ್ಲಿ ಸಹಾಯಕ ಕೃಷಿ ಅಧಿಕಾರಿ ಅಂತಾ ಕೆಲಸ ಮಾಡಿಕೊಂಡಿದ್ದ ರೈತ ಸಂಪರ್ಕ ಕೇಂದ್ರದಲ್ಲಿ 15 ರಿಂದ 20 ಗುಂಟೆ ಕೃಷಿ ಜಮೀನು ಇದ್ದವರಿಗೆ ಮೂಲ ಭತ್ತ ಬೆಳೆಗಾರರಾದವರಿಗೆ ಕೃಷಿ ಇಲಾಖೆಯಿಂದ 50% ಸರ್ಕಾರದ ಸಹಾಯ ಧನದಲ್ಲಿ 344 ಪಾಲಿಥಿನ್ ತಾಡಪತ್ರೆಗಳು ಸರ್ಕಾರದಿಂದ ಬಂದಿದ್ದು, ಅದರಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ 20 ಪಾಲಿಥಿನ್ ತಾಡಪತ್ರೆಗಳು ಆಫೀಸಿನಲ್ಲಿ ಇಟ್ಟಿದ್ದು ಉಳಿದವುಗಳನ್ನು ಪಕ್ಕದಲ್ಲಿರುವ ಗೋಡೌನ್ ನಲ್ಲಿ ಇಟ್ಟಿದ್ದು ಇರುತ್ತದೆ. ನಮೂದಿತ ಆರೋಪಿತರು ದಿನಾಂಕ: 19-03-2021 ರಂದು ಸಂಜೆ 05-30 ಗಂಟೆಯಿಂದ ದಿನಾಂಕ: 20-03-2021 ರಂದು ಬೆಳಿಗ್ಗೆ 09-00 ಗಂಟೆಯ ನಡುವಿನ ಅವಧಿಯಲ್ಲಿ ರೈತ ಸಂಪರ್ಕ ಕೇಂದ್ರದ ಮುಂದಿನ ಬಾಗಿಲಿನ ಬೀಗ ಮುರಿದು ಒಳ ಹೊಕ್ಕಿ ಆಫೀಸಿನಲ್ಲಿಟ್ಟಿದ್ದ ಅ||ಕಿ|| 39,000/- ರೂಪಾಯಿ ಕಿಮ್ಮತ್ತಿನ 8 ಮೀಟರ ಉದ್ದ 6 ಮೀಟರ್ ಅಗಲದ ಒಟ್ಟು 20 ಪಾಲಿಥಿನ ತಾಡಪತ್ರೆಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ. ತಾಡಪತ್ರೆಗಳನ್ನು ಕಳುವು ಮಾಡಿಕೊಂಡು ಹೋದ ಆರೋಪಿತರನ್ನು ಪತ್ತೆ ಹಚ್ಚಿ ಕಾನೂನಿನಂತೆ ಕ್ರಮ ಕೈಗೊಳ್ಳಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀಮತಿ ಮೇಘನಾ ಕೋಂ. ಕಿರಣಕುಮಾರ, ಪ್ರಾಯ-27 ವರ್ಷ, ವೃತ್ತಿ-ಸಹಾಯಕ ಕೃಷಿ ಅಧಿಕಾರಿ, ಸಾ|| ಉಪ್ಪುಂದ ಗ್ರಾಮ, ತಾ: ಬೈಂದೂರ, ಜಿ: ಉಡುಪಿ ರವರು ದಿನಾಂಕ: 20-03-2021 ರಂದು 17-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಮುರ್ಡೇಶ್ವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 30/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ಹರಿಶ್ಚಂದ್ರ ತಂದೆ ಮಾದೇವ ನಾಯ್ಕ, ಪ್ರಾಯ-42 ವರ್ಷ, ವೃತ್ತಿ-ಬೀಡಾ ಅಂಗಡಿ ವ್ಯಾಪಾರ, ಸಾ|| ಕೆಂಚರಮನೆ, ಹೆರಾಡಿ ರಸ್ತೆ, ತೆರ್ನಮಕ್ಕಿ, ಕಾಯ್ಕಿಣಿ, ತಾ: ಭಟ್ಕಳ. ನಮೂದಿತ ಆರೋಪಿತನು ದಿನಾಂಕ: 20-03-2021 ರಂದು 16-00 ಗಂಟೆಗೆ ತನ್ನ ಗೂಡಂಗಡಿಯ ಎದುರಿನ ಸಾರ್ವಜನಿಕ ಸ್ಥಳದಲ್ಲಿ ತನ್ನ ಲಾಭಕ್ಕೋಸ್ಕರ ಬರ-ಹೋಗುವ ಜನರನ್ನು ಸೇರಿಸಿಕೊಂಡು ಓ.ಸಿ ಮಟಕಾ ಜೂಗಾರಾಟ ನಡೆಸುತ್ತಿರುವಾಗ ಓ.ಸಿ ಮಟಕಾ ಜೂಗಾರಾಟದ ಸಲಕರಣೆಗಳಾದ ಅಂಕೆ-ಸಂಖ್ಯೆ ಬರೆದ ಚೀಟಿ-01, ಬಾಲ್ ಪೆನ್-01 ಹಾಗೂ ನಗದು ಹಣ 1,200/- ರೂಪಾಯಿಯೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ರವೀಂದ್ರ ಬಿರಾದಾರ, ಪಿ.ಎಸ್.ಐ (ಕಾ&ಸು), ಮುರ್ಡೇಶ್ವರ ಪೊಲೀಸ್ ಠಾಣೆ ರವರು ದಿನಾಂಕ: 20-03-2021 ರಂದು 17-50 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮುರ್ಡೇಶ್ವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 31/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ವಿಷ್ಣು ತಂದೆ ವೆಂಕಟ್ರಮಣ ನಾಯ್ಕ, ಪ್ರಾಯ-38 ವರ್ಷ, ವೃತ್ತಿ-ಗೂಡಂಗಡಿ ವ್ಯಾಪಾರ, ಸಾ|| ಹೊಸ್ಮನೆ, ದೇವಿಕಾನ, ಬಸ್ತಿ ಕಾಯ್ಕಿಣಿ, ತಾ: ಭಟ್ಕಳ. ನಮೂದಿತ ಆರೋಪಿತನು ದಿನಾಂಕ: 20-03-2021 ರಂದು 19-15 ಗಂಟೆಗೆ ಬಸ್ತಿ ರೈಲ್ವೇ ಬ್ರಿಡ್ಜ್ ನ ಬದಿಯಲ್ಲಿ ರಸ್ತೆ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ತನ್ನ ಲಾಭಕ್ಕೋಸ್ಕರ ಬರ-ಹೋಗುವ ಜನರನ್ನು ಸೇರಿಸಿಕೊಂಡು ಓ.ಸಿ ಮಟಕಾ ಜೂಗಾರಾಟ ನಡೆಸುತ್ತಿರುವಾಗ ಓಸಿ ಮಟಕಾ ಜೂಗಾರಾಟದ ಸಲಕರಣೆಗಳಾದ ಅಂಕೆ-ಸಂಖ್ಯೆ ಬರೆದ ಚೀಟಿ-01, ಬಾಲ್ ಪೆನ್-01 ಹಾಗೂ ನಗದು ಹಣ 1,300/- ರೂಪಾಯಿಯೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ರವೀಂದ್ರ ಬಿರಾದಾರ, ಪಿ.ಎಸ್.ಐ (ಕಾ&ಸು), ಮುರ್ಡೇಶ್ವರ ಪೊಲೀಸ್ ಠಾಣೆ ರವರು ದಿನಾಂಕ: 20-03-2021 ರಂದು 20-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಶಹರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 33/2021, ಕಲಂ: 4, 12 THE KARNATAKA PREVENTION OF SLAUGHTER & PRESERVATION OF CATTLE ORDINANCE-2020 ಹಾಗೂ ಕಲಂ: 11(1) (D) PREVENTION OF CRUELTY TO ANIMALS ACT-1960 ಮತ್ತು ಕಲಂ: 192(ಎ) ಎಮ್.ವಿ ಎಕ್ಟ್ ನೇದ್ದರ ವಿವರ...... ನಮೂದಿತ ಆರೋಪಿತರು 1]. ಇಸ್ಮಾಯಿಲ್ @ ಹವ್ವಾ ಇಸ್ಮಾಯಿಲ್ ತಂದೆ ಮೊಹಮ್ಮದ್ ಹುಸೇನ್, ಪ್ರಾಯ-47 ವರ್ಷ, ವೃತ್ತಿ-ದನದ ಮಾಂಸದ ವ್ಯಾಪಾರ, ಸಾ|| ಸಿದ್ದೀಕ್ ಸ್ಟ್ರೀಟ್, ಹವ್ವಾ ಮಂಜಿಲ್, ತಾ: ಭಟ್ಕಳ, 2]. ಆದಮ್ ಶೇಖ್, ಸಾ|| ಭಟ್ಕಳ. ಈ ನಮೂದಿತ ಆರೋಪಿತರು ವಧೆ ಮಾಡುವ ಉದ್ದೇಶದಿಂದ 94,000/- ರೂಪಾಯಿ ಮೌಲ್ಯದ 10 ಜಾನುವಾರು (3 ಆಕಳು, 5 ಹೋರಿ ಮತ್ತು 2 ಹೋರಿ ಕರು) ಗಳನ್ನು ಯಾವುದೇ ಪಾಸ್ ಯಾ ಪರವಾನಿಗೆ ಇಲ್ಲದೇ ಬೊಲೆರೋ ವಾಹನ ನಂ: ಕೆ.ಎ-15/9284 ನೇದರಲ್ಲಿ ಒಂದಕ್ಕೊಂದು ತಾಗುವ ರೀತಿಯಲ್ಲಿ ಕಟ್ಟಿ ಅವುಗಳಿಗೆ ನೀರು ಮೇವು ನೀಡದೆ ಉಸಿರಾಟಕ್ಕೆ ತೊಂದರೆಯಾಗುವ ರೀತಿಯಲ್ಲಿ ಹಿಂಸಾತ್ಮಕ ರೀತಿಯಲ್ಲಿ ತುಂಬಿಕೊಂಡು ಸಾಗಾಟ ಮಾಡಿಕೊಂಡು ಹೋಗುವಾಗ ದಿನಾಂಕ: 20-03-2021 ರಂದು ಮಧ್ಯಾಹ್ನ 14-30 ಗಂಟೆಯ ಸುಮಾರಿಗೆ ಭಟ್ಕಳ ಶಹರದ ಡೊಂಗರಪಳ್ಳಿಯ ಹನುಮಂತ ದೇವಸ್ಥಾನದ ಹತ್ತಿರ ದಾಳಿ ಕಾಲಕ್ಕೆ ಪಿರ್ಯಾದಿಯವರಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಎಚ್. ಬಿ. ಕುಡಗುಂಟಿ, ಪಿ.ಎಸ್.ಐ, ಭಟ್ಕಳ ಶಹರ ಪೊಲೀಸ್ ಠಾಣೆ ರವರು ದಿನಾಂಕ: 20-03-2021 ರಂದು 16-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 42/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ವಾಸುದೇವ ತಂದೆ ಮಾಸ್ತಯ್ಯ ನಾಯ್ಕ, ಪ್ರಾಯ-31 ವರ್ಷ, ಸಾ|| ಮಾವಿನಮರದ ಮನೆ, ಗಂಜಿಕೇರಿ, ತಾ: ಭಟ್ಕಳ (ಮೋಟಾರ್ ಸೈಕಲ್ ನಂ: ಕೆ.ಎ-47/ಎಲ್-2141 ನೇದರ ಸವಾರ). ನಮೂದಿತ ಆರೋಪಿತನು ದಿನಾಂಕ: 07-12-2020 ರಂದು 19-15 ಗಂಟೆಯ ಸಮಯಕ್ಕೆ ತಾನು ಚಲಾಯಿಸಿಕೊಂಡು ಬಂದ ಮೋಟಾರ್ ಸೈಕಲ್ ನಂ: ಕೆ.ಎ-47/ಎಲ್-2141 ನೇದನ್ನು ಗೊರಟೆ ಕ್ರಾಸ್ ಕಡೆಯಿಂದ ಗಂಜಿಕೇರಿ ಕಡೆಗೆ ಅತೀವೇಗವಾಗಿ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದವನು ಮಾವಿನಗದ್ದೆ ಗೊರಟೆ ಕ್ರಾಸ್ ಹತ್ತಿರ ಎದುರುಗಡೆಯಿಂದ ಪಿರ್ಯಾದಿಯವರ ಮಗ ಅಶೋಕ ತಂದೆ ಅಣ್ಣಪ್ಪ ನಾಯ್ಕ ಇವರು ಚಲಾಯಿಸಿಕೊಂಡು ಬರುತ್ತಿದ್ದ ಮೋಟಾರ್ ಸೈಕಲ್ ನಂ: ಕೆ.ಎ-30/ಜೆ-8847 ನೇದಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಪಿರ್ಯಾದಿಯವರ ಮಗ ಅಶೋಕ ತಂದೆ ಅಣ್ಣಪ್ಪ ನಾಯ್ಕ ಇವರಿಗೆ ಎಡಗಾಲಿನ ಮೊಣಗಂಟಿನ ಹತ್ತಿರ ಮೂಳೆ ಮುರಿತದ ತೀವೃ ಸ್ವರೂಪದ ರಕ್ತಗಾಯ ಪಡಿಸಿ, ತನ್ನ ಮೋಟಾರ್ ಸೈಕಲ್ ಹಿಂಬದಿ ಸವಾರನ ತಲೆಗೆ ತೀವೃ ಸ್ವರೂಪದ ಗಾಯ ಪಡಿಸಿ, ತನಗೂ ಸಹ ಸಾದಾ ಸ್ವರೂಪದ ಗಾಯ ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ಅಣ್ಣಪ್ಪ ತಂದೆ ಮಾಸ್ತಯ್ಯ ನಾಯ್ಕ, ಪ್ರಾಯ-60 ವರ್ಷ, ಸಾ|| ಗಂಜಿಕೇರಿ, ಗೊರಟೆ, ತಾ: ಭಟ್ಕಳ ರವರು ದಿನಾಂಕ: 20-03-2021 ರಂದು 17-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಹಳಿಯಾಳ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 67/2021, ಕಲಂ: 323, 324 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಟಿಪ್ಪುಸುಲ್ತಾನ್ ಅಕ್ಬರ್ ಗಡಾದ, 2]. ಶ್ರೀಮತಿ ಮಾಸಾಬಿ ಅಕ್ಬರ್ ಗಡಾದ, 3]. ಅಸ್ಲಂ ಅಕ್ಬರ್ ಗಡಾದ, 4]. ಹುಸ್ತಾದ್ ಅಕ್ಬರ್ ಗಡಾದ, 5]. ರಜಿಯಾ, ಸಾ|| (ಎಲ್ಲರೂ) ಹೊಸವಟ್ನಾಳ, ತಾ: ಹಳಿಯಾಳ. ಪಿರ್ಯಾದಿಯವರು ತಮ್ಮ ಮಗಳಾದ ಶ್ರೀಮತಿ ಮೂಬಿನಾ ಇವರಿಗೆ 03-05-2018 ರಂದು ಆರೋಪಿ 1 ನೇಯವನೊಂದಿಗೆ ತಮ್ಮ ಸಂಪ್ರದಾಯದಂತೆ ಮದುವೆ ಮಾಡಿಕೊಟ್ಟಿದ್ದು, ದಿನಾಂಕ: 21-03-2021 ರಂದು ಪಿರ್ಯಾದಿಯ ಮಗನ ಮದುವೆ ನಿಶ್ಚಿತಾರ್ಥ ಇರುವುದರಿಂದ ದಿನಾಂಕ: 14-03-2021 ರಂದು 12-30 ಗಂಟೆಗೆ ಪಿರ್ಯಾದಿಯವರು ತಮ್ಮ ಮಗಳಿಗೆ ಕರೆಯಲು ಹಳಿಯಾಳ ತಾಲೂಕಿನ ಹೊಸವಟ್ನಾಳ ಗ್ರಾಮದಲ್ಲಿರುವ ತನ್ನ ಅಳಿಯನ ಮನೆಗೆ ಬಂದಾಗ, ಆರೋಪಿತರೆಲ್ಲರೂ ಸಂಗನಮತ ಮಾಡಿಕೊಂಡು ಬಂದು ಪಿರ್ಯಾದಿಯೊಂದಿಗೆ ಜಗಳ ತೆಗೆದು ‘ನಿನ್ನ ಮಗಳನ್ನು ಕಳಿಸುವುದಿಲ್ಲ’ ಅಂತಾ ಹೇಳಿ ಕೈಯಿಂದ ಎಲ್ಲರೂ ಪಿರ್ಯಾದಿಯ ಮೈಮೇಲೆ ಹೊಡೆದು ದುಃಖಾಪತ್ ಪಡಿಸಿದ್ದಲ್ಲದೇ, ದಿನಾಂಕ: 16-03-2021 ರಂದು ಮಧ್ಯಾಹ್ನ 12-30 ಗಂಟೆಗೆ ಪಿರ್ಯಾದಿಯವರು ಪುನಃ ತಮ್ಮ ಮಗಳನ್ನು ಕರೆಯಲು ಬಂದಾಗ ಆರೋಪಿ 3 ನೇಯವನುತ ಕಟ್ಟಿಗೆಯ ಬಡಿಗೆಯಿಂದ ಪಿರ್ಯಾದಿಯ ಮೈಮೇಲೆ ಹೊಡೆದು ಸಾಧಾರಣ ಸ್ವರೂಪದ ದುಃಖಾಪತ್ ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಅಕ್ಬರಬಾಷಾ ತಂದೆ ಬವರಸಾಬ್ ಕೌಜಲಗಿ, ಪ್ರಾಯ-50 ವರ್ಷ, ವೃತ್ತಿ-ಮೆಕ್ಯಾನಿಕ್ ಕೆಲಸ, ಸಾ|| ಅಮನ್ ನಗರ, 2 ನೇ ಕ್ರಾಸ್, ರಜಾಕ್ ಕಾಲೋನಿ, ಬೆಳಗಾವಿ ರವರು ದಿನಾಂಕ: 20-03-2021 ರಂದು 18-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಹಳಿಯಾಳ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 68/2021, ಕಲಂ: 143, 147, 148, 323, 324, 504 ಸಹಿತ 149 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಅಕ್ಬರಸಾಬ್ ಬವರಸಾಬ್ ಕೌಜಲಗಿ, 2]. ಸೈನಾಜ್, 3]. ಮೋಹಿನಸಾಬ್ ಕೌಜಲಗಿ, 4]. ಅಸ್ಲಂ ಅಕ್ಬರಬಾಷಾ ಕೌಜಲಗಿ, 5]. ಇಮಾಮಹುಸೇನ್ ಅಲ್ಲಾಸಾಬಬ್ ಯರಗಟ್ಟಿ, 6]. ಶ್ರೀಮತಿ ಕಾತುನಬಿ ಇಮಾಮಹುಸೇನ್ ಯರಗಟ್ಟಿ, 7]. ಶಾರೂಕ್, 8]. ಶಾವಿಜ್, ಸಾ|| (ಎಲ್ಲರೂ) ಅಮನ ನಗರ, ರಜೀಯಾ ಕಾಲೋನಿ, ಬೆಳಗಾವಿ. ಪಿರ್ಯಾದಿಯವರು ತಮ್ಮ ಮಗನಾದ ಟಿಪ್ಪುಸುಲ್ತಾನ್ ಇವನಿಗೆ ಮೋಬೀನಾ ಅಕ್ಬರಬಾಷಾ ಕೌಜಲಗಿ, ಸಾ|| ಬೆಳಗಾವಿ ಇವರೊಂದಿಗೆ 2018 ನೇ ಸಾಲಿನಲ್ಲಿ ಮದುವೆ ಮಾಡಿಸಿದ್ದು, ಮೋಬಿನಾ ಇವರ ಮನೆಯವರಾದ ನಮೂದಿತ ಆರೋಪಿತರು ‘ತಮ್ಮ ಮಗಳು ಗಂಡನ ಮನೆಯಾದ ಹಳಿಯಾಳ ತಾಲೂಕಿನ ಹೊಸವಟ್ನಾಳದಲ್ಲಿ ಇರುವುದು ಬೇಡ, ಅಳಿಯ ಮತ್ತು ಮಗಳು ಇಬ್ಬರೂ ಬೆಳಗಾವಿಯಲ್ಲಿಯೇ ಇರಲಿ’ ಅಂತಾ ಆಗಾಗ ಪಿರ್ಯಾದಿ ಮತ್ತು ಪಿರ್ಯಾದಿಯ ಮನೆಯವರೊಂದಿಗೆ ಜಗಳವಾಡುತ್ತಾ ಬಂದವರು, ದಿನಾಂಕ: 14-03-2021 ರಂದು 12-30 ಗಂಟೆಗೆ ಗೈರ್ ಕಾಯ್ದೆಶೀರ್ ಮಂಡಳಿಯಾಗಿ ಅಕ್ರಮಕೂಟ ರಚಿಸಿಕೊಂಡು, ಹಳಿಯಾಳ ತಾಲೂಕಿನ ಹೊಸವಟ್ನಾಳಕ್ಕೆ ಬಂದು ಪಿರ್ಯಾದಿಯೊಂದಿಗೆ ಜಗಳ ತೆಗೆದು ‘ರಂಡೆ, ಚಿನಾಲಿ’ ಅಂತಾ ಅವಾಚ್ಯವಾಗಿ ಬೈಯ್ದು ಕೈಯಿಂದ ಮತ್ತು ಕಲ್ಲು ಬಡಿಗೆಯಿಂದ ಪಿರ್ಯಾದಿಗೆ ಮತ್ತು ಪಿರ್ಯಾದಿ ಮಗ ಮಹಮ್ಮದ್ ಹುಸ್ತಾದಅಲಿ ಇವರಿಗೆ ಹೊಡೆದು ದುಃಖಾಪತ್ ಪಡಿಸಿದ್ದಲ್ಲದೇ, ‘ನಿಮಗೆ ಬಿಡುವುದಿಲ್ಲ’ ಅಂತಾ ಜೀವ ಬೆದರಿಕೆ ಹಾಕಿದ ಬಗ್ಗೆ ಪಿರ್ಯಾದಿ ಶ್ರೀಮತಿ ಮಾಸಾಬಿ ಕೋಂ. ಅಕ್ಬರ್ ಗಡಾದ, ಪ್ರಾಯ-51 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಹೊಸವಟ್ನಾಳ, ತಾ: ಹಳಿಯಾಳ ರವರು ದಿನಾಂಕ: 20-03-2021 ರಂದು 21-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಸಿದ್ದಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 34/2021, ಕಲಂ: 454, 457, 380 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ  ಯಾರೋ ಕಳ್ಳರು ದಿನಾಂಕ: 19-03-2021 ರ ರಾತ್ರಿ 19-00 ಗಂಟೆಯಿಂದ ದಿ: 20-03-2021 ರ ಬೆಳಿಗ್ಗೆ 09-00 ಗಂಟೆಯ ನಡುವಿನ ಅವಧಿಯಲ್ಲಿ ಸಿದ್ದಾಪುರ ತಾಲೂಕಿನ ಕವಂಚೂರಿನಲ್ಲಿರುವ ಪಿರ್ಯಾದಿಯ ಮನೆಯ ಮುಂದಿನ ಬಾಗಿಲಿಗೆ ಹಾಕಿದ ಬೀಗವನ್ನು ಯಾವುದೋ ವಸ್ತುವಿನಿಂದ ಮೀಟಿ ತೆಗೆದು ಮುರಿದು ಒಳ ಹೊಕ್ಕಿ ಮನೆಯಲ್ಲಿನ ಕಪಾಟಿನಲ್ಲಿದ್ದ ಒಟ್ಟು 175 ಗ್ರಾಂ ತೂಕದ ಅ||ಕಿ|| 5,25,000/- ರೂಪಾಯಿ ಮೌಲ್ಯದ ಬಂಗಾರ ಹಾಗೂ ನಗದು ಹಣ 70,000/- ರೂಪಾಯಿ. ಹೀಗೆ ಒಟ್ಟು 5,95,000/- ರೂಪಾಯಿ ಬೆಲೆಬಾಳುವ ಸ್ವತ್ತನ್ನು ಕಳುವು ಮಾಡಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀಮತಿ ಮಂಗಳಾ ಕೋಂ. ಶಂಕರ ಗೌಡ ಪಾಟೀಲ್, ಪ್ರಾಯ-66 ವರ್ಷ, ವೃತ್ತಿ-ಮನೆವಾರ್ತೆ, ಸಾ|| ಕವಂಚೂರು, ತಾ: ಸಿದ್ದಾಪುರ ರವರು ದಿನಾಂಕ: 20-03-2021 ರಂದು 15-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಸಿದ್ದಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 35/2021, ಕಲಂ: 279, 337, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಉಮೇಶ ತಂದೆ ಲಕ್ಷ್ಮಣ ಭಟ್ಟ, ಪ್ರಾಯ-49 ವರ್ಷ, ಸಾ|| ಕಾನಗೋಡ, ತಾ: ಸಿದ್ದಾಪುರ (ಕಾರ್ ನಂ: ಕೆ.ಎ-19/ಎಮ್.ಇ-9932 ನೇದರ ಚಾಲಕ). ನಮೂದಿತ ಆರೋಪಿತನು ದಿನಾಂಕ: 20-03-2021 ರಂದು ಮಧ್ಯಾಹ್ನ ತನ್ನ ಕಾರ್ ನಂ: ಕೆ.ಎ-19/ಎಮ್.ಇ-9932 ನೇದನ್ನು ಸಿದ್ದಾಪುರ-ಕುಮಟಾ ಮುಖ್ಯ ರಸ್ತೆಯಲ್ಲಿ ಸಿದ್ದಾಪುರ ಕಡೆಯಿಂದ ಕುಮಟಾ ಕಡೆಗೆ ಅತೀವೇಗವಾಗಿ ಹಾಗೂ ನಿಷ್ಕಾಳಜೀತನದಿಂದ ಚಲಾಯಿಸಿಕೊಂಡು ಬರುತ್ತಿದ್ದವನು, ಮಧ್ಯಾಹ್ನ 14-30 ಗಂಟೆಯ ಸುಮಾರಿಗೆ ಸಿದ್ದಾಪುರ ತಾಲೂಕಿನ ಭುವನಗಿರಿಯ ಬಸ್ ನಿಲ್ದಾಣದ ಹತ್ತಿರ ಎದುರಿನಿಂದ ಅಂದರೆ ಕುಮಟಾ ಕಡೆಯಿಂದ ಗಾಯಾಳು ರವಿ ತಂದೆ ಬಲೀಂದ್ರ ನಾಯ್ಕ, ಈತನು ಚಲಾಯಿಸಿಕೊಂಡು ಹೋಗುತ್ತಿದ್ದ ಮೋಟಾರ್ ಸೈಕಲ್ ನಂ: ಕೆ.ಎ-03/ಎಚ್.ಜಿ-3418 ನೇದಕ್ಕೆ ಢಿಕ್ಕಿ ಹೊಡೆದು ಅಪಘಾತ ಪಡಿಸಿ, ಮೋಟಾರ್ ಸೈಕಲಿನ ಹಿಂಬದಿ ಸವಾರಳಾದ ಪಿರ್ಯಾದಿಯ ಎರಡೂ ಕಾಲಿಗೆ, ಎಡಗೈಗೆ ಹಾಗೂ ಪಿರ್ಯಾದಿಯ ಮಗನಾದ ತೇಜಸ್ ಈತನ ತಲೆಗೆ ಗಾಯನೋವು ಮತ್ತು ಪಿರ್ಯಾದಿಯ ಮಗಳಾದ ಕು: ಮಾನ್ಯ ಇವಳ ಬಲಗಾಲಿಗೆ ತೀವೃ ಸ್ವರೂಪದ ಗಾಯನೋವು ಹಾಗೂ ಮೋಟಾರ್ ಸೈಕಲ್ ಚಲಾಯಿಸುತ್ತಿದ್ದ ಪಿರ್ಯಾದಿಯ ಗಂಡ ಗಾಯಾಳು ರವಿ ಈತನ ತಲೆಗೆ ಮತ್ತು ಹಣೆಗೆ ತೀವೃ ಸ್ವರೂಪದ ಗಾಯನೋವು ಪಡಿಸಿದ್ದಲ್ಲದೇ, ಆರೋಪಿತನ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಗಾಯಾಳು ಲಕ್ಷ್ಮಣ ಭಟ್ಟ ಇವರಿಗೂ ಸಹ ತಲೆಗೆ ಗಾಯನೋವು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀಮತಿ ಲೋಲಾಕ್ಷಿ ಕೋಂ. ರವಿ ನಾಯ್ಕ, ಪ್ರಾಯ-38 ವರ್ಷ, ವೃತ್ತಿ-ಮನೆವಾರ್ತೆ, ಸಾ|| ಅಬ್ಬಿಗದ್ದೆ, ಪೋ : ಬಿಳಗಿ,  ತಾ: ಸಿದ್ದಾಪುರ ರವರು ದಿನಾಂಕ: 20-03-2021 ರಂದು 15-40 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 20-03-2021

at 00:00 hrs to 24:00 hrs

 

ಗೋಕರ್ಣ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 07/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನು ಅಜಮಾಸು 55 ರಿಂದ 60 ವರ್ಷ ಪ್ರಾಯದ ಅಪರಿಚಿತ  ಗಂಡಸ್ಸಾಗಿದ್ದು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಈತನು ಎಲ್ಲಿಯೋ ನೀರಿಗೆ ಬಿದ್ದವನು ಅಥವಾ ಬೋಟ್ ಮೇಲಿಂದ ಕಾಲು ಜಾರಿ ಬಿದ್ದವನೋ ನೀರಿನಲ್ಲಿ ಮುಳುಗಿ ಮೃತಪಟ್ಟು ಶವವು ದಿನಾಂಕ: 20-03-2021 ರಂದು ಮಧ್ಯಾಹ್ನ 14-45 ಗಂಟೆಯ ಸುಮಾರಿಗೆ ಗೋಕರ್ಣದ ಅಘನಾಶಿನಿ ನದಿಯ ಆಳವೆ ಹಾಗೂ ಪ್ಯಾರಾಡೈಸ್ ಬೀಚ್ ಸಮೀಪ ಸಮುದ್ರದಲ್ಲಿ ಡಬ್ಬಾಗಿ ಬಿದ್ದು ನೀರಿನಲ್ಲಿ ತೇಲುತಿದ್ದಾಗ, ಸಮುದ್ರ ಗಸ್ತು ಕರ್ತವ್ಯದಲ್ಲಿದ್ದ ಪಿರ್ಯಾದಿಯು ಸದರ ಶವವನ್ನು ನೋಡಿ ಮೇಲಾಧಿಕಾರಿಗಳಿಗೆ ತಿಳಿಸಿ, ಇಲಾಖಾ ಬೋಟಿನಲ್ಲಿ ಶವವನ್ನು ಸುರಕ್ಷಿತವಾಗಿ ತದಡಿ ಮೀನುಗಾರಿಕಾ ಧಕ್ಕೆಗೆ ತಂದಿದ್ದು, ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಪಿರ್ಯಾದಿ ಶ್ರೀ ಈರಣ್ಣ ತಂದೆ ನಿಂಗಪ್ಪ ಹರಿಜನ, ಪ್ರಾಯ-37 ವರ್ಷ, ವೃತ್ತಿ-ಸಿವಿಲ್ ಪೊಲೀಸ್ ಕಾನಸ್ಟೇಬಲ್, ಕರಾವಳಿ ಕಾವಲು ಪೊಲೀಸ್ ಠಾಣೆ ಕುಮಟಾ ರವರು ದಿನಾಂಕ: 20-03-2021 ರಂದು 16-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಹೊನ್ನಾವರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 09/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ಮಹಾಬಲೇಶ್ವರ ಕೆ. ಎಸ್. ತಂದೆ ಸರ್ವೇಶ್ವರ ಭಟ್ಟ, ಪ್ರಾಯ-45 ವರ್ಷ, ವೃತ್ತಿ-ಖಾಸಗಿ ಕಂಪನಿಯಲ್ಲಿ ನೌಕರ, ಸಾ|| ಕಡತೋಕಾ, ತಾ: ಹೊನ್ನಾವರ. ಪಿರ್ಯಾದಿಯ ಮಗನಾದ ಈತನು ಪಿಡ್ಸ್ ಖಾಯಿಲೆಯಿಂದ ಬಳಲುತ್ತಿದ್ದವನು, ತನಗೆ ಮದುವೆಯಾಗಲಿಲ್ಲ ಅಂತಾ ಜೀವನದಲ್ಲಿ ಜಿಗುಪ್ಸೆಗೊಂಡು ಮಾನಸಿಕವಾಗಿ ನೊಂದುಕೊಂಡಿದ್ದವನು, ದಿನಾಂಕ: 20-03-2021 ರಂದು ಬೆಳಗ್ಗೆ 07-00 ಗಂಟೆಯಿಂದ 09-00 ಗಂಟೆಯ ನಡುವಿನ ಅವಧಿಯಲ್ಲಿ ತನ್ನ ಮನೆಯ ಮಾಳಿಗೆಯ ಜಂತಿಗೆ ನೈಲಾನ್ ಹಗ್ಗ ಕಟ್ಟಿಕೊಂಡು ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಇದರ ಹೊರತು ನನ್ನ ಮಗನ ಮರಣದಲ್ಲಿ ಬೇರೇ ಯಾವುದೇ ಸಂಶಯ ಇರುವುದಿಲ್ಲ. ಈ ಕುರಿತು ಮುಂದಿನ ಕಾನೂನು ಕ್ರಮ ಕೈಕೊಳ್ಳುವಂತೆ ಕೋರಿದ ಬಗ್ಗೆ ಪಿರ್ಯಾದಿ ಶ್ರೀ ಸರ್ವೇಶ್ವರ ತಂದೆ ಮಹಾಬಲೇಶ್ವರ ಭಟ್ಟ, ಪ್ರಾಯ-70 ವರ್ಷ. ವೃತ್ತಿ-ರೈತಾಬಿ ಕೆಲಸ, ಸಾ|| ಕಡತೋಕಾ, ತಾ: ಹೊನ್ನಾವರ ರವರು ದಿನಾಂಕ: 20-03-2021 ರಂದು 11-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಶಿರಸಿ ಹೊಸಮಾರುಕಟ್ಟೆ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 03/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನು ಸುಮಾರು 35-40 ವರ್ಷ ಪ್ರಾಯದ ಅಪರಿಚಿತ ವ್ಯಕ್ತಿಯಾಗಿದ್ದು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ದಿನಾಂಕ: 20-03-2021 ರಂದು ಬೆಳಿಗ್ಗೆ 06-00 ಗಂಟೆಯ ಸುಮಾರಿಗೆ ಪಿರ್ಯಾದಿಯವರು ಕೋಟೆಕೆರೆ ದಡದಲ್ಲಿ ವಾಕಿಂಗ್ ಮಾಡುತ್ತಿರುವಾಗ ಕೋಟೆಕೆರೆಯ ನೀರಿನಲ್ಲಿ ಅಜಮಾಸು 35-40 ವರ್ಷ ವಯಸ್ಸಿನ ಓರ್ವ ಗಂಡಸಿನ ಹೆಣ ತೇಲುತ್ತಿರುವುದು ನೋಡಿ, ಪಿರ್ಯಾದಿಯವರು ಕೆರೆಯ ನೀರಿನಲ್ಲಿ ತೇಲುತ್ತಿದ್ದ ಹೆಣದ ಮುಖ ಚಹರೆ ಪರಿಶೀಲಿಸಿ ನೋಡಲಾಗಿ ಗುರುತು ಪರಿಚಯ ಸಿಗಲಿಲ್ಲ ಮತ್ತು ಕೆರೆಯ ಮೆಟ್ಟಿಲಿನ ಹತ್ತಿರ ಒಂದು ಕಪ್ಪು ಬಣ್ಣದ ಪ್ಯಾಂಟ್, ಬಿಳಿ ಬಣ್ಣದ ಉದ್ದ ತೋಳಿನ ಅಂಗಿ ಮತ್ತು ಕಪ್ಪು ಬಣ್ಣದ ಬೂಟ್ ಇದ್ದು, ಅಲ್ಲಿ ಸೇರಿದ ಜನರಲ್ಲಿ ಯಾರು ನೀರಿನಲ್ಲಿ ತೇಲುತ್ತಿದ್ದ ಮೃತ ವ್ಯಕ್ತಿಯ ಪರಿಚಯ ಮಾಡಿರುವುದಿಲ್ಲ. ಕಾರಣ ಮೃತ ಅನಾಮಧೇಯ ವ್ಯಕ್ತಿಯು ಸುಮಾರು ಎರಡು ದಿನದ ಹಿಂದೆ ಈಜಾಡಲೋ ಅಥವಾ ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದಲೋ ಕೋಟೆಕೆರೆಯಲ್ಲಿ ಹಾರಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು, ಇದರ ಹೊರತು ಬೇರೆ ಯಾವುದೇ ಸಂಶಯ ಇರುವುದಿಲ್ಲ. ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಅನ್ವರ್ ತಂದೆ ಮಹ್ಮದ್ ಹುಸೇನ್ ನಮಾಜಿ, ಪ್ರಾಯ-38 ವರ್ಷ, ವೃತ್ತಿ-ಹೊಟೇಲ್ ವ್ಯಾಪಾರ, ಸಾ|| ನೆಹರೂ ನಗರ, ತಾ: ಶಿರಸಿ ರವರು ದಿನಾಂಕ: 20-03-2021 ರಂದು 06-20 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

ಇತ್ತೀಚಿನ ನವೀಕರಣ​ : 22-03-2021 08:44 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080