ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 20-05-2021

at 00:00 hrs to 24:00 hrs

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 109/2021, ಕಲಂ: 380, 454, 457 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ದಿನಾಂಕ: 18-05-2021 ರಂದು ಮಧ್ಯಾಹ್ನ 12-30 ರಿಂದ ದಿನಾಂಕ: 19-05-2021 ರಂದು ಬೆಳಿಗ್ಗೆ 10-00 ಗಂಟೆಯ ನಡುವಿನ ಅವಧಿಯಲ್ಲಿ ಕುಮಟಾ ತಾಲೂಕಿನ ಕಲ್ಲಬ್ಬೆ ಗ್ರಾಮದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ‘ನಲಿ ಕಲಿ’ ಕೊಠಡಿಯ ಬೀಗ ಮುರಿದು ಒಳ ಹೊಕ್ಕಿ, 1). ಕೊಠಡಿಯಲ್ಲಿದ್ದ ಡೆಲ್ ಕಂಪನಿಯ ಸಿಪಿಯು-03, ಅ||ಕಿ|| 15,000/- ರೂಪಾಯಿ, 2). ಏಸರ್ ಕಂಪನಿಯ ಸಿಪಿಯು-02, ಅ||ಕಿ|| 10,000/- ರೂಪಾಯಿ, 3). ಏಸರ್ ಕಂಪನಿಯ ಮೊನಿಟರ್-01, ಅ||ಕಿ|| 2,000/- ರೂಪಾಯಿ, 4). ಡೆಲ್ ಕಂಪನಿಯ ಮೊನಿಟರ್-02, ಅ||ಕಿ|| 6,000/- ರೂಪಾಯಿ, 5). ವಿಂಟೆಕ್ ಕಂಪನಿಯ ಯು.ಪಿ.ಎಸ್-01, ಅ||ಕಿ|| 2,000/- ರೂಪಾಯಿ, 6). ವಿ-ಗಾರ್ಡ್ ಕಂಪನಿಯ ಯು.ಪಿ.ಎಸ್-01, ಅ||ಕಿ|| 2,000/- ರೂಪಾಯಿ, 7). ಎಂಪ್ಲಿಪಾಯರ್ (ಮೈಕ್ ವಿತ್ ಕೇಬಲ್)-01, ಅ||ಕಿ|| 5,000/- ರೂಪಾಯಿ, 8). ಕೀ-ಬೋರ್ಡ್-04, ಅ||ಕಿ|| 2,000/- ರೂಪಾಯಿ, 9). ಮೌಸ್-04, ಅ||ಕಿ|| 400/- ರೂಪಾಯಿ. ಇವುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುವ ಬಗ್ಗೆ ಪಿರ್ಯಾದಿ ಶ್ರೀಮತಿ ಮಂಗಲಾ ತಂದೆ ನಾಗಪ್ಪ ಹೆಗಡೆ, ಪ್ರಾಯ-44 ವರ್ಷ, ವೃತ್ತಿ-ಪ್ರಭಾರ ಮುಖ್ಯ ಶಿಕ್ಷಕಿ, ಸಾ|| ಕಲ್ಲಬ್ಬೆ, ತಾ: ಕುಮಟಾ ರವರು ದಿನಾಂಕ: 20-05-2021 ರಂದು 09-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 149/2021, ಕಲಂ: 279, 337, 338, 304(ಎ) ಐಪಿಸಿ ಮತ್ತು ಕಲಂ: 187 ಎಮ್.ವಿ ಎಕ್ಟ್ ನೇದ್ದರ ವಿವರ...... ನಮೂದಿತ ಆರೋಪಿತನು ಗ್ಯಾಸ್ ಟ್ಯಾಂಕರ್ ಲಾರಿ ನಂ: ಕೆ.ಎ-01/ಎ.ಎಫ್-2686 ನೇದರ ಚಾಲಕನಾಗಿದ್ದು, ಚಾಲಕನ ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ನಮೂದಿತ ಆರೋಪಿತನು ದಿನಾಂಕ: 20-05-2021 ರಂದು ತನ್ನ ಗ್ಯಾಸ್ ಟ್ಯಾಂಕರ್ ಲಾರಿ ನಂ: ಕೆ.ಎ-01/ಎ.ಎಫ್-2686 ನೇದನ್ನು ಮಂಗಳೂರು ಕಡೆಯಿಂದ ಕುಮಟಾ ಕಡೆಗೆ ಅತಿವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದವನು, ದಿನಾಂಕ: 20-05-2021 ರಂದು ಸುಮಾರು 16-00 ಗಂಟೆಗೆ ಹೊನ್ನಾವರದ ರಾಮತೀರ್ಥ ಕ್ರಾಸ್ ಹತ್ತಿರ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ರಸ್ತೆಯಲ್ಲಿ ತನ್ನ ಲಾರಿಯನ್ನು ನಿಷ್ಕಾಳಜಿತನದಿಂದ ಒಮ್ಮೇಲೆ ರಸ್ತೆಯ ಬಲಕ್ಕೆ ಚಲಾಯಿಸಿ, ಎದುರಿನಿಂದ ಅಂದರೆ ಗೋಕರ್ಣ ಕಡೆಯಿಂದ ಹೊನ್ನಾವರ ಕಡೆಗೆ ಜಾನು ತಂದೆ ದತ್ತಾ ನಾಯ್ಕ, ಪ್ರಾಯ-45 ವರ್ಷ, ವೃತ್ತಿ-ಆಂಬ್ಯುಲೆನ್ಸ್ ಚಾಲಕ, ಸಾ|| ಮಹಾಸತಿ ಕಾಲೋನಿ, ಬಗ್ಗೋಣ ಕ್ರಾಸ್, ತಾ: ಕುಮಟಾ, ಈತನು ಚಲಾಯಿಸಿಕೊಂಡು ಬರುತ್ತಿದ್ದ ಆಂಬುಲೆನ್ಸ್ ವಾಹನ ನಂ: ಕೆ.ಎ-47/ಎ-0633 ನೇದಕ್ಕೆ ಮುಂದಿನಿಂದ ಢಿಕ್ಕಿ ಹೊಡೆದು ಅಪಘಾತ ಪಡಿಸಿ, ಆಂಬ್ಯುಲೆನ್ಸ್ ನಲ್ಲಿ ಚಿಕಿತ್ಸೆಯ ಕುರಿತು ಪ್ರಯಾಣಿಸುತ್ತಿದ್ದ ರಾಮಕೃಷ್ಣ ತಂದೆ ಗಣಪತಿ ಪ್ರಸಾದ, ಪ್ರಾಯ-70 ವರ್ಷ, ವೃತ್ತಿ-ಪುರೋಹಿತ, ಸಾ|| ಹೊಸ ಬಸ್ ನಿಲ್ದಾಣದ ಹತ್ತಿರ, ಗೋಕರ್ಣ, ತಾ: ಕುಮಟಾ, ಇವರಿಗೆ ಗಂಭೀರ ಸ್ವರೂಪದ ಗಾಯ ಪಡಿಸಿ, ಚಿಕಿತ್ಸೆಯ ಕುರಿತು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ವೈದ್ಯರು 16-30 ಗಂಟೆಗೆ ಮೃತಪಟ್ಟ ಬಗ್ಗೆ ಖಾತ್ರಿ ಪಡಿಸಿದ್ದು, ಸದರಿ ರಾಮಕೃಷ್ಣ ಇವರಿಗೆ ಮರಣವನ್ಮ್ನಂಟು ಪಡಿಸಿದ್ದಲ್ಲದೇ, ಆಂಬುಲೆನ್ಸ್ ಚಾಲಕ ಜಾನು ತಂದೆ ದತ್ತಾ ನಾಯ್ಕ, ಈತನಿಗೆ ಗಂಭೀರ ಸ್ವರೂಪದ ಗಾಯ ಪಡಿಸಿ, ಆಂಬುಲೆನ್ಸ್ ನಲ್ಲಿ ಪೇಶಂಟ್ ಜೊತೆ ಇದ್ದ ಪಿರ್ಯಾದಿ ಮತ್ತು ಸುಮನಾ ತಂದೆ ರಾಮ ಗೌಡ, ಪ್ರಾಯ-50 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ತಾಳಮಕ್ಕಿ ಶಾಲೆಯ ಹತ್ತಿರ, ಗೋಕರ್ಣ, ತಾ: ಕುಮಟಾ ಇವರಿಗೆ ಸಾದಾ ಸ್ವರೂಪದ ಗಾಯನೋವು ಪಡಿಸಿ, ಆರೋಪಿ ಗ್ಯಾಸ್ ಟ್ಯಾಂಕರ್ ಲಾರಿ ಚಾಲಕನು ತನ್ನ ಗ್ಯಾಸ್ ಟ್ಯಾಂಕರ್ ಲಾರಿಯನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿ ಆಗಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಬಾಲಚಂದ್ರ ತಂದೆ ಗಣಪತಿ ಪ್ರಸಾದ, ಪ್ರಾಯ-37 ವರ್ಷ, ವೃತ್ತಿ-ಪುರೋಹಿತ, ಸಾ|| ಹೊಸ ಬಸ್ ನಿಲ್ದಾಣದ ಹತ್ತಿರ, ಗೋಕರ್ಣ, ತಾ: ಕುಮಟಾ ರವರು ದಿನಾಂಕ: 20-05-2021 ರಂದು 18-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ಹೊಸಮಾರುಕಟ್ಟೆ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 49/2021, ಕಲಂ: 32, 34 ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ನಾಗರಾಜ ತಂದೆ ಕೃಷ್ಣಪ್ಪ ಬೋವಿ, ಪ್ರಾಯ-51 ವರ್ಷ, ವೃತ್ತಿ-ಚಾಲಕ, ಸಾ|| ಕಸ್ತೂರಬಾ ನಗರ, ಚೌಡೇಶ್ವರಿ ಕಾಲೋನಿ, ತಾ: ಶಿರಸಿ. ಈತನು ದಿನಾಂಕ: 20-05-2021 ರಂದು 19-00 ಗಂಟೆಗೆ ಶಿರಸಿ ನಗರದ ಕಸ್ತೂರಬಾ ನಗರದ ಚೌಡೇಶ್ವರಿ ಕಾಲೋನಿ ರಸ್ತೆಯ 02 ನೇ ಕ್ರಾಸ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ  Haywards Cheers Whisky ಎಂಬ ಹೆಸರಿನ 90 ML ಅಳತೆಯ ಮದ್ಯ ತುಂಬಿದ ಪ್ಯಾಕೆಟ್ ಗಳು-89, ತಲಾ ಒಂದಕ್ಕೆ 35.13/- ರೂಪಾಯಿಯಂತೆ ಒಟ್ಟೂ 3,126.57/- ರೂಪಾಯಿ ನೇದನ್ನು ಹಳದಿ ಬಣ್ಣದ ಕೈ ಚೀಲದಲ್ಲಿ ಯಾವುದೇ ಪಾಸ್ ಅಥವಾ ಪರ್ಮಿಟ್ ಇಲ್ಲದೇ ಅಕ್ರಮವಾಗಿ ಸಾಗಾಟ ಮತ್ತು ಮಾರಾಟ ಮಾಡಲು ತನ್ನ ಸ್ವಾಧೀನದಲ್ಲಿಟ್ಟುಕೊಂಡಿರುವಾಗ ಪಿರ್ಯಾದಿಯವರು ಪಂಚರ ಸಮಕ್ಷಮ ಸಿಬ್ಬಂದಿಗಳ ಜೊತೆಯಲ್ಲಿ ದಾಳಿ ಮಾಡಿದಾಗ ಸೆರೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀಮತಿ ಜಯಶ್ರೀ ಎಸ್, ಶಾನಭಾಗ, ಪಿ.ಎಸ್.ಐ (ಕ್ರೈಂ), ಶಿರಸಿ ಹೊಸಮಾರುಕಟ್ಟೆ ಪೊಲೀಸ್ ಠಾಣೆ ರವರು ದಿನಾಂಕ: 20-05-2021 ರಂದು 20-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 30/2021, ಕಲಂ: 269, 271 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತೆ ಶ್ರೀಮತಿ ಸರಸ್ವತಿ ಕೃಷ್ಣ ಮಸಳೆಗಾರ, ಪ್ರಾಯ-40 ವರ್ಷ, ವೃತ್ತಿ-ಶಾಪ್ ಕೀಪರ್, ಸಾ|| ದಾಂಡೇಲಪ್ಪಾ ದೇವಸ್ಥಾನದ ಕಮಾನಿನ ಹತ್ತಿರ, ಹಾಲಮಡ್ಡಿ, ದಾಂಡೇಲಿ. ದೇಶಾದ್ಯಂತ ಕೋವಿಡ್-19 ಕೊರೋನಾ ವೈರಸ್ ಸಾಂಕ್ರಾಮಿಕ ಖಾಯಿಲೆ ಹರಡುತ್ತಿದ್ದು, ಕೋವಿಡ್-19 ಖಾಯಿಲೆಯ 2 ನೇ ಅಲೆ ಹೆಚ್ಚಾಗಿರುವುದರಿಂದಾಗಿ ಖಾಯಿಲೆ ನಿಯಂತ್ರಣಕ್ಕಾಗಿ ಮಾನ್ಯ ಸರಕಾರ ಹಾಗೂ ಜಿಲ್ಲಾಧಿಕಾರಿಗಳು, ಉತ್ತರ ಕನ್ನಡ ಜಿಲ್ಲೆ, ಕಾರವಾರ ರವರು ದಿನಾಂಕ: 16-05-2021 ರಿಂದ 24-05-2021 ರವರೆಗೆ ಹೆಚ್ಚುವರಿ ಕ್ರಮ ಕೈಗೊಳ್ಳಲು ಆದೇಶಿಸಿ ದಾಂಡೇಲಿ ನಗರವನ್ನು ವಿಶೇಷ ಕಂಟೈನಮೆಂಟ್ ಜೋನ್ ಆಗಿ ಘೋಷಿಸಿ ಅಂಗಡಿಗಳಲ್ಲಿ ವ್ಯಾಪಾರ ವಹಿವಾಟನ್ನು ನಿಷೇಧಿಸಿದ್ದರೂ ಸಹ ನಮೂದಿತ ಆರೋಪಿತಳು ತನ್ನ ಕಿರಾಣಿ ಅಂಗಡಿಯನ್ನು ತೆರೆದು, ತನ್ನ ಕಿರಾಣಿ ಅಂಗಡಿಗೆ ಬಂದಿದ್ದ ಗ್ರಾಹಕರಿಗೆ ಕಿರಾಣಿ ಸಾಮಾನುಗಳನ್ನು ಮಾರಾಟ ಮಾಡಿದರೆ, ಅಲ್ಲಿ ಜನರು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳದೇ, ಸಾಂಕ್ರಾಮಿಕ ರೋಗ ಒಬ್ಬರಿಂದ ಒಬ್ಬರಿಗೆ ಹರಡಿ ಪ್ರಾಣಕ್ಕೆ ತೊಂದರೆ ಆಗಬಹುದು ಅಂತಾ ಗೊತ್ತಿದ್ದರೂ ಸಹ ದಿನಾಂಕ: 20-05-2021 ರಂದು 11-00 ಗಂಟೆಯಿಂದ 11-05 ಗಂಟೆಯವರೆಗೆ ದಾಂಡೇಲಿಯ ಹಾಲಮಡ್ಡಿ ಗ್ರಾಮದ ದಾಂಡೇಲಪ್ಪಾ ದೇವಸ್ಥಾನದ ಕಮಾನಿನ ಹತ್ತಿರ ಇರುವ ತನ್ನ ಕಿರಾಣಿ ಅಂಗಡಿಯನ್ನು ತೆರೆದು ವ್ಯಾಪಾರ ವಹಿವಾಟು ನಡೆಸಿದ ಬಗ್ಗೆ ಪಿರ್ಯಾದಿ ಶ್ರೀ ಸತೀಷ ತಂದೆ ಪಡಿಯಪ್ಪ ಪೂಜಾರ, ಪ್ರಾಯ-34 ವರ್ಷ, ವೃತ್ತಿ-ಗ್ರೇಡ್-1 ಕಾರ್ಯದರ್ಶಿ, ಆಲೂರು ಗ್ರಾಮ ಪಂಚಾಯತ್, ಸಾ|| ಗ್ರಾಮ ಪಂಚಾಯತ್ ಕಾರ್ಯಾಲಯ, ಆಲೂರು, ದಾಂಡೇಲಿ ರವರು ದಿನಾಂಕ: 20-05-2021 ರಂದು 12-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ದಾಂಡೇಲಿ ನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 52/2021, ಕಲಂ: 269, 271 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಇಸ್ಮಾಯಿಲ್ ತಂದೆ ಇಬ್ರಾಹಿಂ ಬೆಳಗಾವಿ, ಪ್ರಾಯ-45 ವರ್ಷ, ವೃತ್ತಿ-ಕಿರಾಣಿ ವ್ಯಾಪಾರ, ಸಾ|| 3 ನಂಬರ್ ಗೇಟ್ ಹತ್ತಿರ, ಹಳಿಯಾಳ ರಸ್ತೆ, ದಾಂಡೇಲಿ. ಈತನು ಜಗತ್ತಿನಾದ್ಯಂತ ಕೊರೋನಾ ವೈರಸ್ ಸಾಂಕ್ರಾಮಿಕ ರೋಗ ಹರಡಿಕೊಂಡಿದ್ದು, ಅದು ಭಾರತ ದೇಶದಲ್ಲಿಯೂ ವ್ಯಾಪಕವಾಗಿ ಹರಡುತ್ತಿದ್ದು, ಕರ್ನಾಟಕ ರಾಜ್ಯ ಸರಕಾರವು ದಿನಾಂಕ: 10-05-2021 ರಿಂದ 15 ದಿನಗಳ ಕಾಲ ಜನತಾ ಲಾಕಡೌನ್ ಘೊಷಣೆ ಮಾಡಿದ್ದಲ್ಲದೇ, ಮಾನ್ಯ ಜಿಲ್ಲಾಧಿಕಾರಿಗಳು, ಉತ್ತರ ಕನ್ನಡ ಜಿಲ್ಲೆ, ಕಾರವಾರ ರವರು ದಿನಾಂಕ: 16-05-2021 ರಿಂದ 24-05-2021 ರವರೆಗೆ ಹೆಚ್ಚುವರಿ ಕ್ರಮ ಕೈಗೊಳ್ಳಲು ಆದೇಶಸಿದ್ದಲ್ಲದೇ, ದಾಂಡೇಲಿ ನಗರದಲ್ಲಿ ಕೋವಿಡ್-19 ಪ್ರಕರಣಗಳು ಗಣನೀಯವಾಗಿ ಹೆಚ್ಚಾಗಿದ್ದರಿಂದ ದಾಂಡೇಲಿ ನಗರವನ್ನು ವಿಶೇಷ ಕಂಟೈನಮೆಂಟ್ ಜೋನ್ ಆಗಿ ಘೋಷಿಸಿ ಕೊರೋನಾ ವೈರಸ್ ಸಾಂಕ್ರಾಮಿಕ ರೋಗ ಒಬ್ಬರಿಂದ ಒಬ್ಬರಿಗೆ ಹರಡದಂತೆ ಸೂಕ್ತ ಕ್ರಮ ಕೈಗೊಳ್ಳಲು ಎಲ್ಲ ವ್ಯಾಪಾರ ವಹಿವಾಟುಗಳನ್ನು ಬಂದ್ ಮಾಡಿ ಜನರು ತಿರುಗಾಡದಂತೆ ಲಾಕಡೌನ್ ಘೋಷಣೆ ಮಾಡಿದ್ದರೂ ಸಹ, ನಮೂದಿತ ಆರೋಪಿತನು ದಿನಾಂಕ: 20-05-2021 ರಂದು 15-30 ಗಂಟೆಗೆ ದಾಂಡೇಲಿಯ ಹಳಿಯಾಳ ರಸ್ತೆಯ ನದೀಮ್ ಮೊಬೈಲ್ ಅಂಗಡಿಯ ಪಕ್ಕದಲ್ಲಿರುವ ತನ್ನ ಕಿರಾಣಿ ಅಂಗಡಿಯನ್ನು ತೆರೆದು ವ್ಯಾಪಾರ ಮಾಡಿದರೇ ಅಲ್ಲಿ ಜನರು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳದೇ ಒಟ್ಟಾಗಿ ಮುಗಿ ಬಿದ್ದು, ಸಾಂಕ್ರಾಮಿಕ ರೋಗ ಒಬ್ಬರಿಂದೊಬ್ಬರಿಗೆ ಹರಡಿ ಪ್ರಾಣಕ್ಕೆ ತೊಂದರೆ ಆಗಬಹುದು ಅಂತಾ ಗೊತ್ತಿದ್ದರೂ ಸಹ ಉದ್ದೇಶಪೂರ್ವಕವಾಗಿ ಲಾಕಡೌನ್ ಘೋಷಣೆಯನ್ನು ಮಾಡಿದ ಸರ್ಕಾರದ ಆದೇಶವನ್ನು ಉಲ್ಲಂಘಿಸಿ, ತಾನು ವ್ಯಾಪಾರ ಮಾಡುವ ಕಿರಾಣಿ ಅಂಗಡಿಯನ್ನು ತೆರೆದು ದಾಂಡೇಲಿ ನಗರದಲ್ಲಿ ಪ್ರಾಣಕ್ಕೆ ತೊಂದರೆಯನ್ನುಂಟು ಮಾಡುವ ಕೊರೋನಾ ವೈರಸ್ ಸಾಂಕ್ರಾಮಿಕ ರೋಗ ಹರಡುವಂತೆ ಮಾಡಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಯಲ್ಲಪ್ಪ ಎಸ್, ಪಿ.ಎಸ್.ಐ, ದಾಂಡೇಲಿ ನಗರ ಪೊಲೀಸ್ ಠಾಣೆ ರವರು ದಿನಾಂಕ: 20-05-2021 ರಂದು 17-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ದಾಂಡೇಲಿ ನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 53/2021, ಕಲಂ: 269, 271 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಇಮ್ಯಾನುವೆಲ್ ತಂದೆ ಜೋಸೆಫ್ ಮೆಲ್ಲಂ, ಪ್ರಾಯ-36 ವರ್ಷ, ವೃತ್ತಿ-ಐಸ್ ಕ್ರೀಂ ವ್ಯಾಪಾರ, ಸಾ|| ಸುಭಾಷ ನಗರ, ದಾಂಡೇಲಿ. ಈತನು ಜಗತ್ತಿನಾದ್ಯಂತ ಕೊರೋನಾ ವೈರಸ್ ಸಾಂಕ್ರಾಮಿಕ ರೋಗ ಹರಡಿಕೊಂಡಿದ್ದು, ಅದು ಭಾರತ ದೇಶದಲ್ಲಿಯೂ ವ್ಯಾಪಕವಾಗಿ ಹರಡುತ್ತಿದ್ದು, ಅದರಂತೆ ಕರ್ನಾಟಕ ರಾಜ್ಯ ಸರಕಾರವು ಜನತಾ ಲಾಕಡೌನ್ ಘೊಷಣೆ ಮಾಡಿ ಆದೇಶಿಸಿದ್ದು, ಮಾನ್ಯ ಜಿಲ್ಲಾಧಿಕಾರಿಗಳು, ಉತ್ತರ ಕನ್ನಡ ಜಿಲ್ಲೆ, ಕಾರವಾರ ರವರು ದಿನಾಂಕ: 16-05-2021 ರಿಂದ 24-05-2021 ರವರೆಗೆ ಹೆಚ್ಚುವರಿ ಕ್ರಮ ಕೈಗೊಳ್ಳಲು ಆದೇಶಿಸಿ, ದಾಂಡೇಲಿ ನಗರವನ್ನು ವಿಶೇಷ ಕಂಟೈನಮೆಂಟ್ ಜೋನ್ ಆಗಿ ಘೋಷಿಸಿ, ಅಂಗಡಿಗಳಲ್ಲಿ ವ್ಯಾಪಾರ ವಹಿವಾಟನ್ನು ನಿಷೇಧಿಸಿದ್ದು ಇರುತ್ತದೆ. ಆದರೆ ನಮೂದಿತ ಆರೋಪಿತನು ತಾನು ಅಂಗಡಿಯನ್ನು ತೆರೆದು ವ್ಯಾಪಾರ ಮಾಡಿದರೆ ಅಲ್ಲಿ ಜನರು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳದೇ, ಸಾಂಕ್ರಾಮಿಕ ರೋಗ ಒಬ್ಬರಿಂದ ಒಬ್ಬರಿಗೆ ಹರಡಿ ಪ್ರಾಣಕ್ಕೆ ತೊಂದರೆ ಆಗಬಹುದು ಅಂತಾ ಗೊತ್ತಿದ್ದರೂ ಸಹ ದಿನಾಂಕ: 20-05-2021 ರಂದು 17-20 ಗಂಟೆಯಿಂದ 17-30 ಗಂಟೆಯವರೆಗೆ ದಾಂಡೇಲಿಯ ಚೌಧರಿ ಗೇಟ್ ಹತ್ತಿರವಿರುವ ಹ್ಯಾಂಗ್ಯೋ ಐಸ್ ಕ್ರೀಂ ಅಂಗಡಿಯನ್ನು ತೆರೆದು ವ್ಯಾಪಾರ ನಡೆಸಿದ ಬಗ್ಗೆ ಪಿರ್ಯಾದಿ ಸ||ತ|| ಶ್ರೀಮತಿ ಮಹಾದೇವಿ ಜಿ. ನಾಯ್ಕೋಡಿ, ಪಿ.ಎಸ್.ಐ (ಕ್ರೈಂ), ದಾಂಡೇಲಿ ನಗರ ಪೊಲೀಸ್ ಠಾಣೆ ರವರು ದಿನಾಂಕ: 20-05-2021 ರಂದು 18-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 20-05-2021

at 00:00 hrs to 24:00 hrs

 

ಹೊನ್ನಾವರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 18/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಕುಮಾರ: ಪ್ರಜ್ವಲ ತಂದೆ ಗೋಪಾಲ ಉಪ್ಪಾರ, ಪ್ರಾಯ-15 ವರ್ಷ, ವೃತ್ತಿ-ಮನೆವಾರ್ತೆ, ಸಾ|| ಉಪ್ಪಾರಕೇರಿ, ಸರಳಗಿ, ತಾ: ಹೊನ್ನಾವರ, ಈತನು ಪಿರ್ಯಾದಿ ಮಗನಾಗಿದ್ದು, ದಿನಾಂಕ: 19-5-2021 ರಂದು ಮಧ್ಯಾಹ್ನ 12-00 ಗಂಟೆಗೆ ವಿಪರೀತ ಮಳೆ ಗಾಳಿ ಇದ್ದ ವೇಳೆಯಲ್ಲಿ ತನ್ನ ಅಜ್ಜನ ಮನೆಗೆ ಹೋಗಿ ಬರುವುದಾಗಿ ಮನೆಯಲ್ಲಿ ತಿಳಿಸಿ ಹೋದವನು, ತನ್ನ ಮನೆ ಹತ್ತಿರದ ಶರಾವತಿ ನದಿ ಕೋಡಿಗೆ ಹಾಕಿದ ಸಂಕ ದಾಟುತ್ತಿದ್ದಾಗ ಮಳೆ ಗಾಳಿಯ ರಭಸಕ್ಕೆ ಆಕಸ್ಮಿಕವಾಗಿ ಕಾಲು ಜಾರಿ ನದಿಗೆ ಬಿದ್ದು ಮುಳುಗಿದ್ದವನು, ದಿನಾಂಕ: 20-5-2021 ರಂದು 13-30 ಗಂಟೆಗೆ ನದಿಯಲ್ಲಿ ಹುಡುಕಾಟದಲ್ಲಿದ್ದಾಗ ಮೃತಪಟ್ಟ ಸ್ಥಿತಿಯಲ್ಲಿ ಸಿಕ್ಕಿದ್ದು, ಇದರ ಹೊರತು ಈತನ ಮರಣದಲ್ಲಿ ಬೇರೆ ಯಾವುದೇ ಸಂಶಯ ಇರುವುದಿಲ್ಲ ಎಂಬ ಬಗ್ಗೆ ಪಿರ್ಯಾದಿ ಶ್ರೀ ಗೋಪಾಲ ತಂದೆ ಶನಿಯಾರ ಉಪ್ಪಾರ, ಪ್ರಾಯ-50 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಉಪ್ಪಾರಕೇರಿ, ಸರಳಗಿ, ತಾ: ಹೊನ್ನಾವರ ರವರು ದಿನಾಂಕ: 20-05-2021 ರಂದು 14-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

ಇತ್ತೀಚಿನ ನವೀಕರಣ​ : 21-05-2021 01:03 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080