ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 20-11-2021

at 00:00 hrs to 24:00 hrs

 

ಸಂಚಾರ ಪೊಲೀಸ್ ಠಾಣೆ ಕಾರವಾರ

ಅಪರಾಧ ಸಂಖ್ಯೆಃ 26/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ವಿಶೇಷ ಪಂಘಲ್ ತಂದೆ ವಿನೋದಕುಮಾರ, ಪ್ರಾಯ-23 ವರ್ಷ, ವೃತ್ತಿ-ಭಾರತೀಯ ನೌಕಾ ಪಡೆಯಲ್ಲಿ ನೌಕರಿ, ಸಾ|| ನೇವಲ್ ಬೇಸ್, ಅರ್ಗಾ, ಕಾರವಾರ (ಹುಂಡೈ ಐ-20 ಕಾರ್ ನಂ: ಎಚ್.ಆರ್-14/ಸಿ-0707 ನೇದರ ಚಾಲಕ). ಈತನು ದಿನಾಂಕ: 19-11-2021 ರಂದು ರಾತ್ರಿ 20-25 ಗಂಟೆಯಿಂದ 20-35 ಗಂಟೆಯ ಅವಧಿಯಲ್ಲಿ ತನ್ನ ಹುಂಡೈ ಐ-20 ಕಾರ್ ನಂ: ಎಚ್.ಆರ್-14/ಸಿ-0707 ನೇದರ ಚಾಲಕನ ಪಕ್ಕದ ಸೀಟಿನಲ್ಲಿ ಕೂರಿಸಿಕೊಂಡು ಪಣಜಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರಲ್ಲಿ ಸದಾಶಿವಗಡ ಕಡೆಯಿಂದ ಕಾರವಾರ ಕಡೆಗೆ ಬರುವ ಏಕಮುಖ ಸಂಚಾರ ರಸ್ತೆಯಲ್ಲಿ ಬರುವಾಗ ಉಡುಪಿ ಕೆಫೆ ಹೋಟೆಲಿನ ಎದುರುಗಡೆ ಆರೋಪಿ ಚಾಲಕನು ತನ್ನ ಕಾರನ್ನು ಅತೀವೇಗವಾಗಿ ಹಾಗು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದವನು, ತಾನು ಚಲಾಯಿಸುತ್ತಿದ್ದ ಕಾರಿನ ವೇಗವನ್ನು ನಿಯಂತ್ರಿಸಲಾಗದೇ ಉಡುಪಿ ಕೆಫೆ ಹೋಟೆಲಿನ ಎದುರುಗಡೆ ಇರುವ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ರಸ್ತೆಯ ಬದಿಯ ಡಿವೈಡರಿಗೆ ತಾನು ಚಲಾಯಿಸುತ್ತಿದ್ದ ಕಾರಿನ ಎಡಬದಿಯ ಭಾಗದಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಕಾರು ಡಿವೈಡರಿಗೆ ಡಿಕ್ಕಿ ಹೊಡೆದ ರಭಸಕ್ಕೆ ರಸ್ತೆಯ ಪಕ್ಕದಲ್ಲಿ ಅಳವಡಿಸಿದ ಕಬ್ಬಿಣದ ತಡೆಗೋಡೆಯು ಬುಡ ಸಮೇತ ಕಿತ್ತು ಹೋಗಿ, ಕಾರು ಉಡುಪಿ ಕೆಫೆ ಹೋಟೆಲಿನ ಎದುರಗಡೆ ಇರುವ ಸರ್ವಿಸ್ ರಸ್ತೆಯಲ್ಲಿ ಪಲ್ಟಿಯಾಗಿ ಬೀಳುವಂತೆ ಅಪಘಾತ ಮಾಡಿ, ಕಾರಿನಲಿದ್ದ ಪಿರ್ಯಾದಿಯವರಿಗೆ ತಲೆಯ ಹಿಂದಿನ ಬಲಭಾಗದಲ್ಲಿ ರಕ್ತಗಾಯ ಹಾಗು ಒಳನೋವು ಮತ್ತು ಎಡಗೈ ಮೊಣಕೈ ಹತ್ತಿರ ಒಳನೋವು ಪಡಿಸಿದ್ದಲ್ಲದೇ, ಆರೋಪಿ ಚಾಲಕನು ತನಗೂ ಸಹ ಬಲಗೈ ಮುಷ್ಠಿಯ ಹತ್ತಿರ ರಕ್ತಗಾಯ ಹಾಗೂ ಒಳನೋವು ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ಅಜೀತ ತಂದೆ ರಘುವೀರ ಸಿಂಗ್, ಪ್ರಾಯ-23 ವರ್ಷ, ವೃತ್ತಿ-ಭಾರತೀಯ ನೌಕಾ ಪಡೆಯಲ್ಲಿ ನೌಕರಿ. ಸಾ|| ನೇವಲ್ ಬೇಸ್, ಅರ್ಗಾ, ಕಾರವಾರ ರವರು ದಿನಾಂಕ: 20-11-2021 ರಂದು 13-10 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಅಂಕೋಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 173/2021, ಕಲಂ: 32, 34 ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ದೇವರಾಜ ತಂದೆ ಲಕ್ಷ್ಮಣ ಸಿದ್ದಿ, ಪ್ರಾಯ-21 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಹಳೇ ಕಲ್ಲೇಶ್ವರ, ಕಲ್ಲೇಶ್ವರ, ತಾ: ಅಂಕೋಲಾ. ಈತನು ದಿನಾಂಕ: 20-11-2021  ರಂದು 16-30 ಗಂಟೆಯ ಸುಮಾರಿಗೆ ಅಂಕೋಲಾ ತಾಲೂಕಿನ ಹಳೇ ಕಲ್ಲೇಶ್ವರದ ಕೋನಾಳ ಕ್ರಾಸ್ ಹತ್ತಿರ ಕೋಳಿ ಫಾರ್ಮ್ ಎದುರು ಸಾರ್ವಜನಿಕ ರಸ್ತೆಯ ಬದಿಯಲ್ಲ್ಲಿ ಯಾವುದೇ ಪಾಸ್ ಅಥವಾ ಪರವಾನಿಗೆ ಇಲ್ಲದೇ ಸುಮಾರು 4,423.92/- ರೂಪಾಯಿ ಮೌಲ್ಯದ ಕರ್ನಾಟಕ ರಾಜ್ಯದ ಸರಾಯಿಯ 180 ML ನ OLD TAVERN Whisky ಸ್ಯಾಚೆಟ್ ಗಳು-10, 180 ML ನ BANGALORE WHISKY ಸ್ಯಾಚೆಟ್ ಗಳು-17, 90 ML ನ Original choice ಸ್ಯಾಚೆಟ್ ಗಳು-44 ಮತ್ತು 180 ML ನ IMPERIAL BLUE SUPERIOR GRAIN WHISKY ಸರಾಯಿ ಬಾಟಲಿಗಳು-05. ಇವುಗಳನ್ನು ಅಕ್ರಮವಾಗಿ ಸಾಗಾಟ ಮಾಡಿಕೊಂಡು ತಂದು ಮಾರಾಟ ಮಾಡುತ್ತಿದ್ದಾಗ ದಾಳಿಯ ಕಾಲಕ್ಕೆ ಸ್ವತ್ತುಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಪ್ರೇಮನಗೌಡ ಪಾಟೀಲ, ಪಿ.ಎಸ್.ಐ (ತನಿಖೆ), ಅಂಕೋಲಾ ಪೊಲೀಸ್ ಠಾಣೆ ರವರು ದಿನಾಂಕ: 20-11-2021 ರಂದು 19-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಗೋಕರ್ಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 84/2021, ಕಲಂ: 32, 34 ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತೆ ಶ್ರೀಮತಿ ಶೀಲಾ ಪಾಂಡುರಂಗ ಚೋಡನಕರ್, ಸಾ|| ದುಬ್ಬನಶಶಿ, ಗೋಕರ್ಣ, ತಾ: ಕುಮಟಾ. ಇವಳು ದಿನಾಂಕ: 20-11-2021 ರಂದು 18-15 ಗಂಟೆಗೆ ಕುಮಟಾ ತಾಲೂಕಿನ ಗೋಕರ್ಣ ಪೊಲೀಸ್ ಠಾಣೆ ವ್ಯಾಪ್ತಿಯ ದುಬ್ಬನಶಶಿ ಗ್ರಾಮದಲ್ಲಿ ತನ್ನ ಮನೆ ಎದುರಿನ ಶಾಲೆಯ ರಸ್ತೆಯ ಮೇಲೆ ತನ್ನ ಬಳಿ ಯಾವುದೇ ಪಾಸ್ ಅಥವಾ ಪರವಾನಿಗೆ ಇಲ್ಲದೇ ಕರ್ನಾಟಕ ರಾಜ್ಯದಲ್ಲಿ ಮಾರಾಟಕ್ಕಿರುವ 1). Haywards Cheers Whisky ಅಂತಾ ಬರೆದಿರುವ 90 ML ನ 37 ಮದ್ಯದ ಪ್ಯಾಕೆಟ್ ಗಳು, 2) Original Choice Deluxe Whisky ಅಂತಾ ಬರೆದಿರುವ 90 ML ನ 10 ಮದ್ಯದ ಪ್ಯಾಕೆಟ್ ಗಳು, ಒಟ್ಟೂ 1,645/- ರೂಪಾಯಿ ಮೌಲ್ಯದ ಮದ್ಯದ ಪ್ಯಾಕೆಟ್ ಗಳನ್ನು ಅಕ್ರಮವಾಗಿ ಸಾಗಾಟ ಮಾಡಿಕೊಂಡು ಬಂದು ಮಾರಾಟ ಮಾಡಲು ತನ್ನ ವಶದಲ್ಲಿಟ್ಟುಕೊಂಡಿದಾಗ ಪಿರ್ಯಾದಿಯವರು ದಾಳಿ ಮಾಡಿದ ಕಾಲಕ್ಕೆ ಓಡಿ ಹೋದ ಬಗ್ಗೆ ಪಿರ್ಯಾದಿ ಸ||ತ|| ಶ್ರೀಮತಿ ಸುಧಾ ಟಿ. ಅಘನಾಶಿನಿ, ಡಬ್ಲ್ಯೂ.ಪಿ.ಎಸ್.ಐ (ತನಿಖೆ), ಗೋಕರ್ಣ ಪೊಲೀಸ್ ಠಾಣೆ ರವರು ದಿನಾಂಕ: 20-11-2021 ರಂದು 20-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 204/2021, ಕಲಂ: 279, 337, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ನಾಗರಾಜ್ ಎಮ್. ಪಿ. ತಂದೆ ಪೆರುಮಾಳಪ್ಪ, ಪ್ರಾಯ-44 ವರ್ಷ, ವೃತ್ತಿ-ಗ್ಯಾಸ್ ಏಜೆನ್ಸಿ ಮಾಲಕ ಮತ್ತು ಚಾಲಕ, ಸಾ|| ಮಾಳೂರು, ಕೋಲಾರ (ಕಾರ್ ನಂ: ಕೆ.ಎ-01/ಎಮ್.ಎಚ್-1352 ನೇದರ ಚಾಲಕ). ದಿನಾಂಕ: 19-11-2021 ರಂದು 21-30 ಗಂಟೆಯ ಸುಮಾರಿಗೆ ಪಿರ್ಯಾದಿಯವರು ಶ್ರೀಕುಮಾರ್ ಬಸ್ ಮೇಲಾಗಿ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-69 ರ ಮಾರ್ಗವಾಗಿ ಕುಮಟಾ ಕಡೆಯಿಂದ ಶಿರಸಿ ಕಡೆಗೆ ಹೋಗುತ್ತಿದ್ದಾಗ ಕತಗಾಲ ಸಮೀಪ ಎದುರಿನಿಂದ ಅಂದರೆ ಶಿರಸಿ ಕಡೆಯಿಂದ ಕುಮಟಾ ಕಡೆಗೆ ಬರುತ್ತಿದ್ದ ಕಾರ್ ನಂ: ಕೆ.ಎ-01/ಎಮ್.ಎಚ್-1352 ನೇದರ ಆರೋಪಿ ಚಾಲಕನು ತನ್ನ ಕಾರನ್ನು ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಸ್ಥಳದಲ್ಲಿ ರಸ್ತೆಯು ಸ್ವಲ್ಪ ತಿರುವು ಇದ್ದರೂ ಸಹ ಮುಂದೆ ಹೋಗುತ್ತಿದ್ದ ಬೇರೆ ವಾಹನವನ್ನು ಓವರಟೇಕ್ ಮಾಡಿ ಬಂದು, ಕಾರನ್ನು ನಿಯಂತ್ರಣ ಮಾಡದೇ ವೇಗದಿಂದ ಶ್ರೀಕುಮಾರ ಬಸ್ಸಿನ ಮುಂದಿನ ಎಡಬದಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಕಾರಿನಲ್ಲಿದ್ದ ಪವನ ಎಮ್. ಎನ್. ಇವರಿಗೆ ಮುಖಕ್ಕೆ, ಹಲ್ಲಿಗೆ, ದವಡೆಗೆ ಹೆಚ್ಚು ಗಾಯ ಮತ್ತು ಮಾನಸ್ ಎಮ್. ಎಸ್. ಇವರಿಗೆ ಮುಖಕ್ಕೆ ಹಾಗೂ ಶ್ರೀಮತಿ ಲತಾ ಆರ್. ಇವರಿಗೆ ಮುಖಕ್ಕೆ, ಸಾದಾ ಗಾಯನೋವು ಪಡಿಸಿದ್ದಲ್ಲದೇ, ಆರೋಪಿ ಚಾಲಕನು ತನಗೂ ಸಹ ಗಾಯನೋವು ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ಸಾಹೀಲ್ ತಂದೆ ನಾಗೇಶ ಮಡಿವಾಳ, ಪ್ರಾಯ-24 ವರ್ಷ, ವೃತ್ತಿ-ಕ್ಲೀನರ್, ಸಾ|| ಕೋಡಾಣಿ, ತಾ: ಹೊನ್ನಾವರ ರವರು ದಿನಾಂಕ: 20-11-2021 ರಂದು 09-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮಂಕಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 139/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ತಿಮ್ಮಪ್ಪ ತಂದೆ ಶಂಭು ಗೌಡ, ಪ್ರಾಯ-32 ವರ್ಷ, ಸಾ|| ಗುಣವಂತೆ ಸರ್ಕಲ್ ಹತ್ತಿರ, ತಾ: ಹೊನ್ನಾವರ. ಈತನು ದಿನಾಂಕ: 20-11-2021 ರಂದು 19-45 ಗಂಟೆಗೆ ಮಂಕಿ ಪೊಲೀಸ್ ಠಾಣಾ ವ್ಯಾಪ್ತಿಯ ಗುಣವಂತೆ ಸರ್ಕಲ್ ಹತ್ತಿರ ಕರಾವಳಿ ಹೋಟೆಲ್ ಪಕ್ಕದಲ್ಲಿಯ ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡು ಬರ-ಹೋಗುವ ಜನರಿಗೆ 01/- ರೂಪಾಯಿಗೆ 80/- ರೂಪಾಯಿ ಕೊಡುವುದಾಗಿ ಹೇಳಿ ಕೂಗಿ ಕರೆದು ಅವರಿಂದ ಓ.ಸಿ ಮಟಕಾ ಜೂಗಾರಾಟದ ಅಂಕೆ-ಸಂಖ್ಯೆಗಳ ಮೇಲೆ ಹಣವನ್ನು ಪಂಥವಾಗಿ ಕಟ್ಟಿಸಿ, ಹಣ ಪಡೆದು ಅವರಿಗೆ ಓ.ಸಿ ಮಟಕಾ ಅಂಕೆ-ಸಂಖ್ಯೆಯ ಚೀಟಿಯನ್ನು ಬರೆದು ಕೊಡುತ್ತಾ ಓ.ಸಿ ಮಟಕಾ ಜುಗಾರಾಟ ಆಡಿಸುತ್ತಿದ್ದಾಗ ದಾಳಿಯ ವೇಳೆ ಒಟ್ಟು ನಗದು ಹಣ 800/- ರೂಪಾಯಿ, ಓ.ಸಿ ಮಟಕಾ ಅಂಕೆ-ಸಂಖ್ಯೆಗಳನ್ನು ಬರೆದ ಚೀಟಿ-1, ಬಾಲ್ ಪೆನ್-1 ಇವುಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಅಶೋಕ ಎಮ್. ಮಾಳಾಬಗಿ, ಪಿ.ಎಸ್.ಐ (ಕಾ&ಸು), ಮಂಕಿ ಪೊಲೀಸ್ ಠಾಣೆ ರವರು ದಿನಾಂಕ: 20-11-2021 ರಂದು 21-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 142/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಭರತ ತಂದೆ ರಾಮಾ ಜೋಗಿ, ಸಾ|| ಕೊಟೇಶ್ವರ, ತಾ: ಕುಂದಾಪುರ, ಜಿ: ಉಡುಪಿ (ಮಾರುತಿ ರಿಟ್ಜ್ ಕಾರ್ ನಂ: ಕೆ.ಎ-20/ಪಿ-5366 ನೇದರ ಚಾಲಕ). ಈತನು ದಿನಾಂಕ: 20-11-2021 ರಂದು ಮಧ್ಯಾಹ್ನ 12-45 ಗಂಟೆಯ ಸಮಯಕ್ಕೆ ತಾನು ಚಲಾಯಿಸಿಕೊಂಡು ಬಂದ ಮಾರುತಿ ರಿಟ್ಜ್ ಕಾರ್ ನಂ: ಕೆ.ಎ-20/ಪಿ-5366 ನೇದನ್ನು ಕುಂದಾಪುರ ಕಡೆಯಿಂದ ಭಟ್ಕಳ ಕಡೆಗೆ ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದವನು, ಕಾರಿನ ವೇಗವನ್ನು ನಿಯಂತ್ರಿಸದೇ ಒಮ್ಮೆಲೇ ರಸ್ತೆಯ ಪಕ್ಕದಲ್ಲಿದ್ದ ನಿಲ್ಲಿಸಿದ್ದ ಪಿರ್ಯಾದಿಯ ಪ್ಯಾಸೆಂಜರ್ ಆಟೋ ರಿಕ್ಷಾ ನಂ: ಕೆ.ಎ-47/8195 ನೇದಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ನಂತರ ಅಲ್ಲಿಯೇ ಮಹಾಗಣಪತಿ ಸರ್ವಿಸ್ ಸ್ಟೇಷನ ಹತ್ತಿರ ನಿಂತುಕೊಂಡಿದ್ದ ಮಹೀಂದ್ರಾ ಬೊಲೆರೋ ಪಿಕಅಪ್ ವಾಹನ ನಂ:  ಕೆ.ಎ-47/9986 ನೇದಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದಲ್ಲದೇ, ಈ ಅಪಘಾತದಲ್ಲಿ ತನಗೆ ಹಾಗೂ ತನ್ನ ಮಾರುತಿ ರಿಟ್ಜ್ ಕಾರ ನಂ: ಕೆ.ಎ-20/ಪಿ-5366 ನೇದರಲ್ಲಿ ಪ್ರಯಾಣಿಸುತ್ತಿದ್ದ 1). ಪಾರ್ಥೇಶ ಮಂಜುನಾಥ ಮೊಗವೀರ, ಸಾ|| ಕುಂದಾಪುರ, ಉಡುಪಿ ಈತನಿಗೆ ಗದ್ದದ ಭಾಗ ಮತ್ತು ಕಾಲಿಗೆ, 2). ರಾಮಚಂದ್ರ ಚಂದ್ರಶೇಖರ ಶೇಟ್, ಸಾ|| ಬಸ್ರೂರ್, ಕುಂದಾಪುರ, ಉಡುಪಿ ಈತನಿಗೆ ಬಲಗೈಗೆ ಮತ್ತು ಬೆರಳಿಗೆ ರಕ್ತ ಗಾಯ, 3). ನೂತನ ಮಂಜುನಾಥ ಮಡಿವಾಳ, ಸಾ|| ಕೋಟೇಶ್ವರ, ಕುಂದಾಪುರ, ಉಡುಪಿ ಈತನಿಗೆ ಬಲಗೈಗೆ ಗಾಯವಾಗಿದ್ದು ಹಾಗೂ 4). ಸುಮಂತ ಗೋಪಾಲ ಮಡಿವಾಳ, ಸಾ|| ಕೋಟೇಶ್ವರ, ಕುಂದಾಪುರ, ಉಡುಪಿ ಈತನಿಗೆ ದುಃಖಾಪತ್ ಪಡಿಸಿ, ಈ ಅಪಘಾತದಲ್ಲಿ ತನ್ನ ವಾಹನ ಹಾಗೂ ಪಿರ್ಯಾದಿಯ ಪ್ಯಾಸೆಂಜರ್ ಆಟೋ ರಿಕ್ಷಾ ನಂ: ಕೆ.ಎ-47/8195 ಹಾಗೂ ಮಹೀಂದ್ರಾ ಬೊಲೆರೋ ಪಿಕಅಪ್ ವಾಹನ ನಂ: ಕೆ.ಎ-47/9986 ನೇದನ್ನು ಜಖಂಗೊಳಿಸಿದ ಬಗ್ಗೆ ಬಗ್ಗೆ ಪಿರ್ಯಾದಿ ಶ್ರೀ ಅಣ್ಣಪ್ಪ ತಂದೆ ಸೋಮಯ್ಯ ನಾಯ್ಕ, ಪ್ರಾಯ-46 ವರ್ಷ, ವೃತ್ತಿ-ಆಟೋ ಚಾಲಕ, ಸಾ|| ಬೆಳಕೆ, ಅಭಿಹಿತ್ತಲು, ತಾ: ಭಟ್ಕಳ ರವರು ದಿನಾಂಕ: 20-11-2021 ರಂದು 17-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 82/2021, ಕಲಂ: ಹೆಂಗಸು ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಹೆಂಗಸು ಶ್ರೀಮತಿ ಕಾವ್ಯಶ್ರೀ ವಿನಾಯಕ ಜೋಗಳೆಕರ, ಪ್ರಾಯ-20 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಕೊಳಗಿಬೀಸ್, ತಾ: ಶಿರಸಿ. ಪಿರ್ಯಾದಿಯ ಹೆಂಡತಿಯಾದ ಇವಳು ದಿನಾಂಕ: 17-11-2021 ರಂದು ಬೆಳಿಗ್ಗೆ 12-30 ಗಂಟೆಗೆ ಅನಾರೋಗ್ಯದ ನಿಮಿತ್ತ ಪಂಡಿತ ಸಾರ್ವಜನಿಕ ಆಸ್ಪತ್ರೆಗೆ ಮಾವನೊಂದಿಗೆ ಬಂದವಳು, ಮಾವನನ್ನು ತರಕಾರಿ ತರಲೆಂದು ಪೇಟೆಗೆ ಕಳುಹಿಸಿ, ತಾನು ಯಾರಿಗೂ ಹೇಳದೇ ಕೇಳದೇ ಎಲ್ಲಿಯೋ ಹೋಗಿದ್ದು, ಈವರೆಗೂ ವಾಪಸ್ ಮನೆಗೂ ಬಾರದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದು, ಸದ್ರಿ ಕಾಣೆಯಾದ ತನ್ನ ಹೆಂಡತಿಯನ್ನು ಹುಡುಕಿ ಕೊಡಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ವಿನಾಯಕ ತಂದೆ ಸೀತಾರಾಮ ಜೋಗಳೇಕರ, ಪ್ರಾಯ-30 ವರ್ಷ, ವೃತ್ತಿ-ಸಿವಿಲ್ ಕಾಂಟ್ರ್ಯಾಕ್ಟರ್, ಸಾ|| ಕೊಳಗಿಬೀಸ್, ತಾ: ಶಿರಸಿ ರವರು ದಿನಾಂಕ: 20-11-2021 ರಂದು 11-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಶಿರಸಿ ನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 82/2021, ಕಲಂ: ಹೆಂಗಸು ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಹೆಂಗಸು ಕುಮಾರಿ: ಶಿವಗಂಗಾ @ ಶಿಲ್ಪಾ ತಂದೆ ಬಸವರಾಜ ಪಾಟೀಲ್, ಪ್ರಾಯ-21 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಟಿ.ಎಸ್.ಎಸ್ ರಸ್ತೆ, ತಾ: ಶಿರಸಿ. ಪಿರ್ಯಾದಿಯ ಮಗಳಾದ ಇವಳು ಕಳೆದ ಸಾಲಿನಲ್ಲಿ ಕಾಮರ್ಸ್ ವಿದ್ಯಾಭ್ಯಾಸವನ್ನು ಮುಗಿಸಿಕೊಂಡು ಮನೆಯಲ್ಲಿಯೇ ಇದ್ದು, ಮನೆ ಕೆಲಸ ಮಾಡಿಕೊಂಡು ಬಂದವಳು ಇರುತ್ತಾಳೆ. ಇವಳಿಗೆ ಅವಳ ಒಪ್ಪಿಗೆ ಪಡೆದುಕೊಂಡು ಮದುವೆ ಮಾತುಕತೆ ನಡೆಸಿದ್ದು ಇರುತ್ತದೆ. ಈ ನಡುವೆ ಮನೆ ಕೆಲಸವನ್ನು ಚೆನ್ನಾಗಿ ಕಲಿಯಬೇಕು. ಬೆಳಿಗ್ಗೆ ಬೇಗನೆ ಎದ್ದು ಮನೆ ಕೆಲಸ ಮಾಡು ಅಂತಾ ಪಿರ್ಯಾದಿಯವರು ಬುದ್ಧಿವಾದ ಹೇಳುತ್ತಾ ಬಂದಿದ್ದಕ್ಕೆ, ತನ್ನ ತಾಯಿಯೊಂದಿಗೆ ವಾದ ವಿವಾದ ಮಾಡುತ್ತಾ ಬಂದವಳಿದ್ದು, ದಿನಾಂಕ: 17-11-2021 ರಂದು ಮನೆಯಲ್ಲಿ ತನ್ನ ತಂಗಿ ಒಬ್ಬಳೇ ಇರುವಾಗ ಬೆಳಿಗ್ಗೆ 10-30 ಗಂಟೆಯ ಸುಮಾರಿಗೆ ಅವಳ ಮಾತನ್ನು ಕೇಳದೇ ತಾನು ಮನೆ ಬಿಟ್ಟು ಹೊಗುತ್ತೇನೆ ಅಂತಾ ಹೇಳಿ, ತನ್ನ ಪರ್ಸನ್ನು ಕೈಯಲ್ಲಿ ಹಿಡಿದುಕೊಂಡು ಮನೆಯಿಂದ ಎಲ್ಲಿಯೋ ಹೋದವಳು, ಈವರೆಗೆ ಮನೆಗೆ ಬಾರದೇ ಸಂಬಂಧಿಕರ ಮನೆಗೆ ಹೋಗದೇ ಎಲ್ಲಿಯೋ ಹೋಗಿ ಕಾಣೆಯಗಿರುತ್ತಾಳೆ. ಸದ್ರಿ ಕಾಣೆಯಾದ ತನ್ನ ಮಗಳನ್ನು ಹುಡುಕಿ ಕೊಡಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀಮತಿ ಬಸವ್ವಾ ಕೋಂ. ಬಸವರಾಜ ಪಾಟೀಲ್, ಪ್ರಾಯ-42 ವರ್ಷ, ವೃತ್ತಿ-ವಕಾರಿಯಲ್ಲಿ ಕೆಲಸ, ಸಾ|| ಟಿ.ಎಸ್.ಎಸ್ ರಸ್ತೆ, ತಾ: ಶಿರಸಿ ರವರು ದಿನಾಂಕ: 20-11-2021 ರಂದು 12-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಸಿದ್ದಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 146/2021, ಕಲಂ: 324 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಮಂಜುನಾಥ ಹೆಗಡೆ, ಪ್ರಾಯ-68 ವರ್ಷ, 2]. ಮಹಾಬಲೇಶ್ವರ ಮಂಜುನಾಥ ಹೆಗಡೆ, ಸಾ|| (ಇಬ್ಬರೂ) ತಾರಿಮಡ್ಕಿ, ಕ್ಯಾದಗಿ ಗ್ರಾಮ, ತಾ: ಸಿದ್ದಾಪುರ. ಈ ನಮೂದಿತ ಆರೋಪಿತರ ಪೈಕಿ ಆರೋಪಿ 1 ನೇಯವನು ಪಿರ್ಯಾದಿಯ ಅಕ್ಕನ ಗಂಡನ ತಮ್ಮನಿದ್ದು, ಆರೋಪಿ 2 ನೇಯವನು ಆರೋಪಿ 1 ನೇಯವನ ಮಗನಿರುತ್ತಾನೆ. ಪಿರ್ಯಾದಿಯು ಕಳೆದ 2011 ರಿಂದ ತನ್ನ ಅಕ್ಕನ ಮನೆಯಾದ ಸಿದ್ದಾಪುರ ತಾಲೂಕಿನ ತಾರಿಮಡ್ಕಿಯಲ್ಲಿ ಬಂದು ವಾಸವಾಗಿರುತ್ತಾರೆ, ಪಿರ್ಯಾದಿಯ ಅಕ್ಕನ ಗಂಡ ತೀರಿಕೊಂಡಿದ್ದು, ಆರೋಪಿತರು ಮೊದಲಿನಿಂದಲೂ ಗದ್ದೆ, ತೋಟ ಹಾಗೂ ದಾರಿಯ ವಿಷಯವಾಗಿ ಪಿರ್ಯಾದಿಯ ಅಕ್ಕನೊಂದಿಗೆ ತಂಟೆ ತಕರಾರು ಮಾಡುತ್ತಾ ಬಂದವರಿದ್ದು, ಅಲ್ಲದೇ ಪಿರ್ಯಾದಿಯ ಮೇಲೆ ದ್ವೇಷದಿಂದ ಇದ್ದವರಿದ್ದು, ದಿನಾಂಕ: 20-11-2021 ರಂದು ಬೆಳಿಗ್ಗೆ 11-00 ಗಂಟೆಯ ಸುಮಾರಿಗೆ ಪಿರ್ಯಾದಿಯು ತನ್ನ ಅಕ್ಕನ ಮನೆಯಿಂದ ತೋಟಕ್ಕೆ ಅಡಿಕೆ ಆರಿಸಲೆಂದು ತೋಟದ ದಾರಿಯಲ್ಲಿ ಹೋಗುತ್ತಿರುವಾಗ  ತೋಟದ ಮೇಲ್ಬದಿಯಲ್ಲಿ ಮರೆಯಾಗಿ ಕುಳಿತುಕೊಂಡಿದ್ದ ಆರೋಪಿ 1 ನೇಯವನು  ಏಕಾಏಕಿ ಪಿರ್ಯಾದಿಯತ್ತ ಕಲ್ಲನ್ನು ಬೀಸಿ ಹೊಡೆದು, ಪಿರ್ಯಾದಿಯ ಬಲಗಾಲಿಗೆ ಗಾಯನೋವು ಪಡಿಸಿದ್ದು. ಅಲ್ಲದೇ ಆರೋಪಿ 2 ನೇಯವನು ಸಹ ಪಿರ್ಯಾದಿಗೆ ಹೊಡೆಯಲೆಂದು ತನ್ನ ತಂದೆಯಾದ ಆರೋಪಿ 1 ನೇಯವನ ಸಂಗಡ ಬಂದ ಬಗ್ಗೆ ಪಿರ್ಯಾದಿ ಶ್ರೀ ಚಂದ್ರಶೇಖರ ತಂದೆ ರಾಮಚಂದ್ರ ಹೆಗಡೆ, ಪ್ರಾಯ-52 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಹಳದೋಟ, ತಾ: ಸಿದ್ದಾಪುರ, ಹಾಲಿ ಸಾ|| ತಾರಿಮಡ್ಕಿ, ಕ್ಯಾದಗಿ ಗ್ರಾಮ, ತಾ: ಸಿದ್ದಾಪುರ ರವರು ದಿನಾಂಕ: 20-11-2021 ರಂದು 17-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಬನವಾಸಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 112/2021, ಕಲಂ: 279, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ದಿನೇಶ ಬಿ. ಡಿ, ಸಾ|| ತುಮಕೂರು (ಗ್ರೀನ್ ಲೈನ್ ಕಂಪನಿಯ ಬಸ್ ನಂ: ಕೆ.ಎ-51/ಎ.ಎಫ್-1546 ನೇದರ ಚಾಲಕ). ಈತನು ದಿನಾಂಕ: 20-11-2021 ರಂದು 00-30 ಗಂಟೆಗೆ ಬಾಬ್ತು ಗ್ರೀನ್ ಲೈನ್ ಕಂಪನಿಯ ಬಸ್ ನಂ: ಕೆ.ಎ-51/ಎ.ಎಫ್-1546 ನೇದನ್ನು ಶಿರಸಿ ಕಡೆಯಿಂದ ಮಳಗಿ ಕಡೆಗೆ ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ವಡಗೇರಿ ಗ್ರಾಮದ ಬಳಿ ಬಸ್ಸನ್ನು ರಸ್ತೆಯ ತೀರ ಬಲಕ್ಕೆ ಚಲಾಯಿಸಿ, ಮಳಗಿ ಕಡೆಯಿಂದ ಶಿರಸಿ ಕಡೆಗೆ ಬರುತ್ತಿದ್ದ ಓಮಿನಿ ಕಾರ್ ನಂ: ಕೆ.ಎ-31/ಎಮ್-4453 ನೇದಕ್ಕೆ ಡಿಕ್ಕಿ ಹೊಡೆದು ರಸ್ತೆ ಅಪಘಾತ ಪಡಿಸಿ, ಪಿರ್ಯಾದಿಯವರಿಗೆ ಬಲಗಾಲ ತೊಡೆಗೆ ಮೂಳೆ ಮೂರಿತ ಮತ್ತು ಮೈಮೇಲೆ ಅಲ್ಲಲ್ಲಿ ರಕ್ತದ ಗಾಯ ಮತ್ತು ಓಮಿನಿ ಚಲಾಯಿಸುತ್ತಿದ್ದ ಎನ್. ನಾಗರಾಜಪ್ಪ ಇವರಿಗೆ ಬಲಗಾಲಿನ ಮೂಳೆ ಮುರಿತ ಹಾಗೂ ತಲೆಗೆ ರಕ್ತದ ಗಾಯ ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಶಿವಾನಂದ ತಂದೆ ಸುಂದರ ಬಿಂಗೇರ್, ಪ್ರಾಯ-51 ವರ್ಷ, ವೃತ್ತಿ-ಕಾರ್ಪೆಂಟರ್ ಕೆಲಸ, ಸಾ|| ಟಿ.ಎಸ್.ಎಸ್ ರಸ್ತೆ, ಜಯನಗರ, ತಾ: ಶಿರಸಿ ರವರು ದಿನಾಂಕ: 20-11-2021 ರಂದು 10-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಬನವಾಸಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 113/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ರಾಜಪ್ಪ ತಂದೆ ಮೇಘಪ್ಪ ಲಮಾಣಿ, ಪ್ರಾಯ-62 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕಾಮನಹಳ್ಳಿ ತಾಂಡಾ, ತಾ: ಮಂತಗಿ, ಜಿ: ಹಾವೇರಿ (ಮೋಟಾರ್ ಸೈಕಲ್ ನಂ: ಕೆ.ಎ-31/ಇ.ಸಿ-7349 ನೇದರ ಸವಾರ). ಈತನು ದಿನಾಂಕ: 16-11-2021 ರಂದು ಸಾಯಂಕಾಲ 05-30 ಗಂಟೆಗೆ ತನ್ನ ಮೋಟಾರ್ ಸೈಕಲ್ ನಂ: ಕೆ.ಎ-31/ಇ.ಸಿ-7349 ನೇದನ್ನು ಶಿರಸಿ-ಸಮ್ಮಸಗಿ ರಸ್ತೆಯಲ್ಲಿ ಶಿರಸಿ ಕಡೆಯಿಂದ ಮೋಟಾರ್ ಸೈಕಲನ್ನು ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ದಾಸನಕೊಪ್ಪದ ಇಂಡಿಯನ್ ಓವರಸೀಸ್ ಬ್ಯಾಂಕ್ ಹತ್ತಿರ ರಸ್ತೆಯಲ್ಲಿ ತನ್ನ ಮೋಟಾರ್ ಸೈಕಲ್ ಮೇಲಿನ ನಿಯಂತ್ರಣ ಕಳೆದುಕೊಂಡು ಮೋಟಾರ್ ಸೈಕಲ್ ಸ್ಕಿಡ್ ಮಾಡಿ ಕೆಡವಿ ಅಪಘಾತ ಪಡಿಸಿಕೊಂಡು, ತನ್ನ ತಲೆಗೆ, ಬಲಗೈ ಭುಜಕ್ಕೆ ಹಾಗೂ ಮೈಮೇಲೆ ಅಲ್ಲಲ್ಲಿ ಗಾಯನೋವು ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ಮಂಜುನಾಥ ತಂದೆ ರಮೇಶ ಲಮಾಣಿ, ಪ್ರಾಯ-25 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಮನೆ ನಂ: 18, ಕಾಮನಹಳ್ಳಿ ತಾಂಡಾ, ತಾ: ಮಂತಗಿ, ಜಿ: ಹಾವೇರಿ ರವರು ದಿನಾಂಕ: 20-11-2021 ರಂದು 14-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಬನವಾಸಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 114/2021, ಕಲಂ: 15(ಎ), 32(3) ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ಮಹೇಶ ತಂದೆ ಮುತ್ತಪ್ಪ ನಾಯ್ಕ, ಪ್ರಾಯ-34 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಅಚಿಡಗಿ, ತಾ: ಶಿರಸಿ. ಈತನು ದಿನಾಂಕ: 20-11-2021 ರಂದು 17-35 ಗಂಟೆಗೆ ಶಿರಸಿ ತಾಲೂಕಿನ ಅಂಡಗಿಯ ತನ್ನ ಮನೆಯ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ತಾತ್ಕಾಲಿಕ ಶೆಡ್ ನಿರ್ಮಿಸಿ ಸಾರ್ವಜನಿಕರಿಗೆ ಮದ್ಯ ಸೇವಿಸಲು ಅನುವು ಮಾಡಿಕೊಟ್ಟಿರುವಾಗ ದಾಳಿ ಮಾಡಿದಾಗ 1). HAYWARDS CHEERS WHISKY, 90 ML ಅಂತಾ ಲೇಬಲ್ ಇರುವ ಸೀಲ್ಡ್ ಟೆಟ್ರಾ ಪ್ಯಾಕ್ ಗಳು-08, ಅ||ಕಿ|| 281.04/- ರೂಪಾಯಿ 2). HAYWARDS CHEERS WHISKY, 90 ML ಅಂತಾ ಲೇಬಲ್ ಇದ್ದ ಮದ್ಯದ ಖಾಲಿ ಟೆಟ್ರಾ ಪ್ಯಾಕ್ ಗಳು-04, ಅ||ಕಿ|| 00.00/- ರೂಪಾಯಿ, 3). ನಗದು ಹಣ 140/- ರೂಪಾಯಿ. 4). ಪ್ಲಾಸ್ಟಿಕ್ ಗ್ಲಾಸುಗಳು-02, ಅ||ಕಿ|| 00.00/- ರೂಪಾಯಿ ಇವುಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಹಣಮಂತ ಎಸ್. ಬಿರಾದಾರ, ಪಿ.ಎಸ್.ಐ (ಕಾ&ಸು), ಬನವಾಸಿ ಪೊಲೀಸ್ ಠಾಣೆ ರವರು ದಿನಾಂಕ: 20-11-2021 ರಂದು 19-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 20-11-2021

at 00:00 hrs to 24:00 hrs

 

ಯಾವುದೇ ಪ್ರಕರಣಗಳು ದಾಖಲಾಗಿರುವುದಿಲ್ಲ....

 

======||||||||======

 

 

 

 

 

 

ಇತ್ತೀಚಿನ ನವೀಕರಣ​ : 22-11-2021 06:39 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080