ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 20-10-2021

at 00:00 hrs to 24:00 hrs

 

ಕಾರವಾರ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 45/2021, ಕಲಂ: 506 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ತಿಮ್ಮರಾಯಪ್ಪ ರಂಗಸ್ವಾಮಿ, ವೃತ್ತಿ-ಪೋರಮ್ಯಾನ್ ನಂ: 1616293, ಎನ್.ಪಿ.ಸಿ.ಐ.ಎಲ್ ಕೈಗಾ, ಸಾ|| ಟೌನಶಿಪ್, ಕೈಗಾ, ಕಾರವಾರ. ಈತನು ಕೈಗಾ ಎನ್.ಪಿ.ಸಿ.ಐ.ಎಲ್ ದಲ್ಲಿ ಪೋರಮ್ಯಾನ್ ಅಂತಾ ಕರ್ತವ್ಯ ನಿರ್ವಹಿಸುತ್ತಿದ್ದು, ಕೈಗಾ ಎನ್.ಪಿ.ಸಿ.ಐ.ಎಲ್ ಕೆಲಸದ ವಿಷಯದ ಸಂಬಂಧ ಪಿರ್ಯಾದಿಯವರೊಂದಿಗೆ ಸಿಟ್ಟಿನಲ್ಲಿದ್ದವನು, ದಿನಾಂಕ: 07-10-2021 ರಂದು 17-50 ಗಂಟೆಯ ಸಮಯಕ್ಕೆ ಪಿರ್ಯಾದಿ ಮತ್ತು ಪಿರ್ಯಾದಿಯ ಹೆಂಡತಿ ಶ್ರೀಮತಿ ಲಕ್ಷ್ಮೀ ಉಡುಪಿಯಿಂದ ರೈಲ್ವೇ ಮೇಲಾಗಿ ಕಾರವಾರದ ಶಿರವಾಡ ರೈಲ್ವೇ ಸ್ಟೇಶನಗೆ ಬಂದು ಅಲ್ಲಿ ವೆಹಿಕಲ್ ಪಾರ್ಕಿಂಗ್ ಕೌಂಟರ್ ಹತ್ತಿರ ಹಣ ನೀಡಿ ಟಿಕೆಟ್ ತೆಗೆದುಕೊಳ್ಳುವಾಗ ಅಲ್ಲಿಗೆ ಆರೋಪಿತನು ಬಂದು ಪಿರ್ಯಾದಿಗೆ ಉದ್ದೇಶಿಸಿ ಜೀವ ಬೆದರಿಕೆ ಹಾಕಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಟಿ. ರಮೇಶ, ಪ್ರಾಯ-41 ವರ್ಷ, ವೃತ್ತಿ-ಟೆಕ್ನೀಶಿಯನ್ ನಂ: 1618504, ಎನ್.ಪಿ.ಸಿ.ಐ.ಎಲ್ ಕೈಗಾ, ಸಾ|| ಕ್ವಾರ್ಟರ್ಸ್ ನಂ: ಎಚ್/1/ಇ, ಟೌನಶಿಪ್, ಕೈಗಾ, ಕಾರವಾರ ರವರು ದಿನಾಂಕ: 20-10-2021 ರಂದು 13-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕಾರವಾರ ಶಹರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 84/2021, ಕಲಂ: 32, 34 ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ವಿನಾಯಕ ತಂದೆ ಮೋಹನ ಪೆಡ್ನೇಕರ್, ಪ್ರಾಯ-50 ವರ್ಷ, ವೃತ್ತಿ-ಅಂಗಡಿ ವ್ಯಾಪಾರ, ಸಾ|| ಅಳವೆವಾಡಾ, ಕೋಡಿಬಾಗ, ಕಾರವಾರ. ಈತನು ದಿನಾಂಕ: 20-10-2021 ರಂದು 10-35 ಘಂಟೆಯ ಸುಮಾರಿಗೆ ಕೋಡಿಬಾಗ, ಅಳವೆವಾಡಾ ಮಾರುತಿ ದೇವಸ್ಥಾನದ ಆರ್ಕ್ ದಿಂದ ಸ್ವಲ್ಪ ದೂರದಲ್ಲಿ ಹೊಳೆದಂಡೆಗೆ ಹೋಗುವ ಸಾರ್ವಜನಿಕ ಸ್ಥಳದಲ್ಲಿ ತನ್ನ ತಾಬಾ ಯಾವುದೇ ಪಾಸ್ ಅಥವಾ ಪರ್ಮಿಟ್ ಪಡೆದುಕೊಳ್ಳದೇ, ಗೋವಾ ರಾಜ್ಯ ತಯಾರಿಕೆಯ 1). Goa Palm Fenny, 2). REAL’S WHISKY, 3). McDowells No.1 ORIGINAL Whisky, 4). OLD MONK, XXX RUM-750 ML ಅಂತಾ ನಮೂದಿರುವ ಸುಮಾರು 5,400/- ರೂಪಾಯಿ ಬೆಲೆಬಾಳುವ ಗೋವಾ ಸರಾಯಿ ತುಂಬಿದ ಬಾಟಲಿಗಳನ್ನು ತನ್ನ ತಾಬಾ ಇಟ್ಟುಕೊಂಡು ಸಾಗಾಟ ಮಾಡುವ ತಯಾರಿಯಲ್ಲಿದ್ದವನನ್ನು ಪಿರ್ಯಾದಿಯವರು ಸಿಬ್ಬಂದಿಯವರೊಂದಿಗೆ ಸೇರಿ ದಾಳಿ ನಡೆಸಿ ಸ್ವತ್ತುಗಳೊಂದಿಗೆ ವಶಕ್ಕೆ ಪಡೆದುಕೊಂಡ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಸಿದ್ದಪ್ಪ ಎಸ್. ಬಿಳಗಿ, ಪೊಲೀಸ್ ನಿರೀಕ್ಷಕರು, ಕಾರವಾರ ಶಹರ ಪೊಲೀಸ್ ಠಾಣೆ ರವರು ದಿನಾಂಕ: 20-10-2021 ರಂದು 12-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 188/2021, ಕಲಂ: ಗಂಡಸು ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಗಂಡಸು ಶ್ರೀ ನಾಗರಾಜ ತಂದೆ ಮಾಸ್ತಿ ಕೊರಾರ, ಪ್ರಾಯ-38 ವರ್ಷ, ವೃತ್ತಿ-ಯಲ್ಲಾಪುರ ಮುನ್ಸಿಪಾಲ್ಟಿಯಲ್ಲಿ ದಿನಗೂಲಿ ಪೌರ ಕಾರ್ಮಿಕ ಕೆಲಸ, ಸಾ|| ನೂತನ ನಗರ, ಜಡ್ಡಿ, ಭಟ್ ಕ್ಲಿನಿಕ್ ಹತ್ತಿರ, ತಾ: ಯಲ್ಲಾಪುರ. ಪಿರ್ಯಾದುದಾರರ ಗಂಡನಾದ ಈತನು ಯಲ್ಲಾಪುರದ ಮುನ್ಸಿಪಾಲಿಟಿಯಲ್ಲಿ ದಿನಗೂಲಿ ಕೆಲಸ ಮಾಡುತ್ತಿದ್ದವನು, ದಿನಾಂಕ: 09-10-2021 ರಂದು ಬೆಳಿಗ್ಗೆ 09-00 ಗಂಟೆಗೆ ಕೆಲಸಕ್ಕೆ ಹೊಗುತ್ತೇನೆ ಅಂತಾ ಮನೆಯಲ್ಲಿ ಹೇಳಿ ಹೋದವನು, ಕೆಲಸಕ್ಕೆ ಹೋಗದೇ ಈವರೆಗೂ ಮರಳಿ ಮನೆಗೂ ಬರದೇ ಎಲ್ಲಿಗೋ ಹೋಗಿ ಕಾಣೆಯಾಗಿದ್ದು, ಸದ್ರಿ ಕಾಣೆಯಾದ ತನ್ನ ಗಂಡನನ್ನು ಹುಡುಕಿ ಕೊಡುವಂತೆ ಕೋರಿದ ಬಗ್ಗೆ ಪಿರ್ಯಾದಿ ಶ್ರೀಮತಿ ಸುಧಾ ತಂದೆ ನಾಗರಾಜ ಕೊರಾರ, ಪ್ರಾಯ-35 ವರ್ಷ, ವೃತ್ತಿ-ಮನೆ ಕೆಲಸ, ಸಾ|| ನೂತನ ನಗರ, ಜಡ್ಡಿ, ಭಟ್ ಕ್ಲಿನಿಕ್ ಹತ್ತಿರ, ತಾ: ಯಲ್ಲಾಪುರ ರವರು ದಿನಾಂಕ: 20-10-2021 ರಂದು 19-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 104/2021, ಕಲಂ: 279, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಮಹೇಂದ್ರ ತಂದೆ ಶ್ರೀಧರ ಹೆಗಡೆ, ಪ್ರಾಯ-20 ವರ್ಷ, ಸಾ|| ಸೋಂದಾ, ತಾ: ಶಿರಸಿ (ಮೋಟಾರ್ ಸೈಕಲ್ ನಂ: ಕೆ.ಎ-31/ವಿ-8659 ನೇದರ ಸವಾರ). ಈತನು ದಿನಾಂಕ: 20-10-2021 ರಂದು 11-20 ಗಂಟೆಯ ಸುಮಾರಿಗೆ ತನ್ನ ಮೋಟಾರ್ ಸೈಕಲ್ ನಂ: ಕೆ.ಎ-31/ವಿ-8659 ನೇದನ್ನು ಕುಮಟಾ ಕಡೆಯಿಂದ ಶಿರಸಿ ಕಡೆಗೆ ಅತೀವೇಗವಾಗಿ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದವನು, ಶಿರಸಿ-ಕುಮಟಾ ರಸ್ತೆಯಿಂದ ಕುಮಟಾ ಕಡೆಯಿಂದ ಬಂದು, ಹಿಂಬದಿ ವಾಹನಗಳ ಸವಾರರಿಗೆ ಬಲಬದಿಯ ಇಂಡಿಕೇಟರ್ ಸಿಗ್ನಲ್ ಕೊಟ್ಟು ಕೊಳಗಿಬೀಸ್ ಕ್ರಾಸಿನಿಂದ ಹೇರೂರು ರಸ್ತೆಯ ಕಡೆಗೆ ಹೊರಟಿದ್ದ ಮೋಟಾರ್ ಸೈಕಲ್ ನಂ: ಕೆ.ಎ-31/ಯು-2160 ನೇದರ ಹಿಂಬದಿಗೆ ಡಿಕ್ಕಿ ಹೊಡೆದು ಅಪಘಾತವನ್ನುಂಟು ಮಾಡಿ ಮೋಟಾರ್ ಸೈಕಲ್ ಜಖಂಗೊಳಿಸಿ, ಆರೋಪಿ ಮೋಟಾರ್ ಸೈಕಲ್ ಸವಾರನು ತಾನೂ ಸಹ ಗಾಯನೋವು ಪಡಿಸಿಕೊಂಡು ಮೋಟಾರ್ ಸೈಕಲ್ ನಂ: ಕೆ.ಎ-31/ಯು-2160 ನೇದರ ಸವಾರನಾದ ರಾಧಾಕೃಷ್ಣ ತಂದೆ ವೆಂಕಟೇಶ ಕಾಮತ್ ಈತನ ಬಲಗಾಲಿಗೆ ಗಂಭೀರ ಸ್ವರೂಪದ ಗಾಯನೋವು ಪಡಿಸಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ವಿನಯ ತಂದೆ ಪ್ರಭಾಕರ ನಾಯಕ, ಪ್ರಾಯ-51 ವರ್ಷ, ವೃತ್ತಿ-ಮೆಕ್ಯಾನಿಕಲ್ ಕೆಲಸ, ಸಾ|| ಅಮ್ಮಿನಳ್ಳಿ, ಪೋ: ಅಮ್ಮಿನಳ್ಳಿ, ತಾ: ಶಿರಸಿ ರವರು ದಿನಾಂಕ: 20-10-2021 ರಂದು 13-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮುಂಡಗೋಡ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 135/2021, ಕಲಂ: 87 ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ವಾಸಪ್ಪ ತಂದೆ ಸಂಕಪ್ಪ ಗೊಲ್ಲರ್, ಪ್ರಾಯ-22 ವರ್ಷ, ವೃತ್ತಿ-ಹಮಾಲಿ ಕೆಲಸ, ಸಾ|| ಭದ್ರಾಪುರ, ತಾ: ಮುಂಡಗೋಡ, 2]. ರವಿ ತಂದೆ ಗುಡ್ಡಪ್ಪ ನಿರಮನಿ, ಪ್ರಾಯ-30 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಹಳ್ಳದಮನಿ, ಕೊಡಂಬಿ, ತಾ: ಮುಂಡಗೋಡ, 3]. ಚಂದ್ರಪ್ಪ ತಂದೆ ವೆಂಕಪ್ಪ ವಡ್ಡರ, ಪ್ರಾಯ-50 ವರ್ಷ, ವೃತ್ತಿ-ಗೌಂಡಿ ಕೆಲಸ, ಸಾ|| ಕೊಡಂಬಿ, ತಾ: ಮುಂಡಗೋಡ, 4]. ದಿನೇಶ ತಂದೆ ತಮ್ಮಣ್ಣ ನಾಯ್ಕ, ಸಾ|| ಭದ್ರಾಪುರ, ತಾ: ಮುಂಡಗೋಡ, 5]. ನಾಗರಾಜ ತಂದೆ ಮಾರುತಿ, ಸಾ|| ಭದ್ರಾಪುರ, ತಾ: ಮುಂಡಗೋಡ, 6]. ಮಂಜುನಾಥ ತಂದೆ ಮಲ್ಲೇಶಿ ಶಕನಳ್ಳಿ, ಸಾ|| ಭದ್ರಾಪುರ, ತಾ: ಮುಂಡಗೋಡ, 7]. ಮಂಜುನಾಥ ತಂದೆ ತಿಪ್ಪಣ್ಣ ಭಜಂತ್ರಿ, ಸಾ|| ಕೊಡಂಬಿ, ತಾ: ಮುಂಡಗೋಡ, 8]. ನಾಗರಾಜ ತಂದೆ ಭೀಮಣ್ಣ್ಣ ಭಜಂತ್ರಿ, ಸಾ|| ಕೊಡಂಬಿ, ತಾ: ಮುಂಡಗೋಡ, 9]. ನಾಗಲಿಂಗ ತಂದೆ ಮಾನಪ್ಪ ಬಡಗೇರ, ಸಾ|| ಕೊಡಂಬಿ, ತಾ: ಮುಂಡಗೋಡ. ಈ ನಮೂದಿತ ಆರೋಪಿತರು ದಿನಾಂಕ: 20-10-2021 ರಂದು ಮಧ್ಯಾಹ್ನ 12-00 ಗಂಟೆಗೆ ಮುಂಡಗೋಡ ತಾಲೂಕಿನ ಕೊಡಂಬಿ ಗ್ರಾಮದಲ್ಲಿ ರಾಮಾಪುರಕ್ಕೆ ಹೋಗುವ ರಸ್ತೆಯ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ತಮ್ಮ ಲಾಭದ ಸಲುವಾಗಿ ಇಸ್ಪೀಟ್ ಎಲೆಗಳ ಮೇಲೆ ಹಣವನ್ನು ಪಂಥವಾಗಿ ಕಟ್ಟಿ ಅಂದರ್-ಬಾಹರ್ ಇಸ್ಪೀಟ್ ಜುಗಾರಾಟ ಆಡುತ್ತಾ ನಗದು ಹಣ 1,500/- ರೂಪಾಯಿ ಹಾಗೂ ಜುಗಾರಾಟದ ಸಲಕರಣೆಗಳಾದ 01 ನ್ಯೂಸ್ ಪೇಪರ್ (ಅ||ಕಿ|| 00.00/- ರೂಪಾಯಿ), 52 ಇಸ್ಪೀಟ್ ಎಲೆಗಳು (ಅ||ಕಿ|| 00.00/- ರೂಪಾಯಿ) ನೇದವುಗಳೊಂದಿಗೆ ಆರೋಪಿ 1 ರಿಂದ 3 ನೇಯವರು ಸಿಕ್ಕಿದ್ದು ಹಾಗೂ ಇನ್ನುಳಿದ ಆರೋಪಿ 4 ರಿಂದ 9 ನೇಯವರು ದಾಳಿಯ ಕಾಲಕ್ಕೆ ಓಡಿ ಹೋಗಿರುತ್ತಾರೆ ಎಂಬ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಸಿದ್ದಪ್ಪ ಎಸ್. ಸಿಮಾನಿ, ಪೊಲೀಸ್ ನಿರೀಕ್ಷಕರು, ಮುಂಡಗೋಡ ಪೊಲೀಸ್ ಠಾಣೆ ರವರು ದಿನಾಂಕ: 20-10-2021 ರಂದು 14-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 20-10-2021

at 00:00 hrs to 24:00 hrs

 

ಹೊನ್ನಾವರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 41/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ತುಳಸು ತಂದೆ ಗೋಳಿ ಗೌಡ, ಪ್ರಾಯ-74 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಅಪ್ಪೇಕೇರಿ, ಹಳದೀಪುರ, ತಾ: ಹೊನ್ನಾವರ. ಪಿರ್ಯಾದಿಯ ದೊಡ್ಡಪ್ಪನಾದ ಇವರು ವಿಪರೀತ ಸರಾಯಿ ಕುಡಿಯುವ ಚಟದವರಾಗಿದ್ದು, ಕಳೆದ ಕೆಲವು ವರ್ಷಗಳಿಂದ ಬಿಪಿ ಕಾಯಿಲೆಯಿಂದಾಗಿ ಅಶಕ್ತರಾಗಿದ್ದವರು, ದಿನಾಂಕ: 20-10-2021 ರಂದು 19-00 ಗಂಟೆಗೆ ಮನೆಗೆ ಹೋಗುವಾಗ ರೈಲ್ವೆ ಹಳಿಯನ್ನು ದಾಟುತ್ತಿರುವಾಗ ಆಕಸ್ಮಿಕವಾಗಿ ರೈಲ್ವೆ ಹಳಿಯ ಮೇಲೆ ಬಿದ್ದಿದ್ದು, ಅದೇ ವೇಳೆಗೆ ಬಂದ ಪಂಚಗಂಗಾ ಎಕ್ಸಪ್ರೆಸ್ ಕಾರವಾರ TO ಬೆಂಗಳೂರು ರೈಲು ತನ್ನ ದೊಡ್ಡಪ್ಪನ ತಲೆಯ ಮೇಲೆ ಹಾಯ್ದು ಹೋಗಿ ಮೃತಪಟ್ಟಿದ್ದು, ಇದರ ಹೊರತು ಅವರ ಸಾವಿನಲ್ಲಿ ಬೇರೆ ಯಾವುದೇ ಸಂಶಯ ಇರುವುದಿಲ್ಲ. ಈ ಕುರಿತು ಮೃತದೇಹದ ಮೇಲೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಈಶ್ವರ ತಂದೆ ಗೋಳಿಬೀರಾ ಗೌಡ, ಪ್ರಾಯ-34 ವರ್ಷ, ವೃತ್ತಿ-ಎಸ್.ಡಿ.ಎಮ್ ಕಾಲೇಜಿನಲ್ಲಿ ಕಂಪ್ಯೂಟರ್ ಕೆಲಸ, ಸಾ|| ಅಪ್ಪೇಕೇರಿ, ಹಳದೀಪುರ, ತಾ: ಹೊನ್ನಾವರ ರವರು ದಿನಾಂಕ: 20-10-2021 ರಂದು 20-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಯಲ್ಲಾಪುರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 33/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಅಯ್ಯಪ್ಪ ತಂದೆ ಪುಂಡಲಿಕ ಗೊಂದಳೆ, ಪ್ರಾಯ-30 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ನರೇಸರ ಪೋ: ಕುಂದರ್ಗಿ, ತಾ: ಯಲ್ಲಾಪುರ. ಪಿರ್ಯಾದಿಯ ಅಣ್ಣನಾದ ಈತನು ವಿಪರೀತ ಸರಾಯಿ ಕುಡಿಯುವ ಚಟವುಳ್ಳವನಾಗಿದ್ದು, ಮನೆಗೆ ಕುಡಿದು ಬಂದು ಗಲಾಟೆ ಮಾಡುತ್ತಿದ್ದನು, ಅಲ್ಲದೇ ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ಜೀವನದಲ್ಲಿ ಜಿಗುಪ್ಸೆಗೊಂಡವನು, ದಿನಾಂಕ: 19-10-2021 ರಂದು 22-30 ಗಂಟೆಯಿಂದ ದಿನಾಂಕ: 20-10-21 ರಂದು ಬೆಳಿಗ್ಗೆ ಸಮಯ ಸುಮಾರು 07-00 ಗಂಟೆಯ ನಡುವಿನ ಅವಧಿಯಲ್ಲಿ ಯಲ್ಲಾಪುರ ತಾಲೂಕಿನ ನರೇಸರ ಗ್ರಾಮವಾದ ತನ್ನ ಮನೆಯ ಜಂತಿಗೆ ನೈಲಾನ್ ಹಗ್ಗದಿಂದ ಕುತ್ತಿಗೆಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ದತ್ತಾತ್ರೇಯ ತಂದೆ ಪುಂಡಲಿಕ ಗೊಂದಳೆ, ಪ್ರಾಯ-28 ವರ್ಷ, ವೃತ್ತಿ-ಖಾಸಗಿ ಕೆಲಸ, ಸಾ|| ನರೇಸರ, ಪೋ: ಕುಂದರ್ಗಿ, ತಾ: ಯಲ್ಲಾಪುರ ರವರು ದಿನಾಂಕ: 20-10-2021 ರಂದು 10-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

ಇತ್ತೀಚಿನ ನವೀಕರಣ​ : 23-10-2021 06:43 AM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080