ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 20-09-2021

at 00:00 hrs to 24:00 hrs

 

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 116/2021, ಕಲಂ: 324, 427, 504, 506 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಪಾಂಡುರಂಗ ತಂದೆ ನಾರಾಯಣ ನಾಯ್ಕ, ಸಾ|| ಭೈರುಂಡಿ ಮನೆ, ಕಟಗೇರಿ, ಬೆಳಕೆ, ತಾ: ಭಟ್ಕಳ. ಈತನು ಹಾಗೂ ಪಿರ್ಯಾದಿಯು ದೂರದ ಸಂಬಂಧಿಗಳಾಗಿದ್ದು, ಆರೋಪಿತನು ಕಳೆದ 15 ವರ್ಷಗಳಿಂದ ವಿನಾ ಕಾರಣ ಪಿರ್ಯಾದಿಯವರ ಮೇಲೆ ದ್ವೇಷದಿಂದ ಇದ್ದವನು, ಆಗಾಗ ಅವರೊಂದಿಗೆ ಜಗಳ ಮಾಡಲು ಯತ್ನಿಸುತ್ತಾ ಬಂದಿದ್ದನು. ದಿನಾಂಕ: 19-09-2021 ರಂದು ಪಿರ್ಯಾದಿಯವರು ತಮ್ಮ ಬಾಬ್ತು ಟಾಟಾ ಏಸ್ ವಾಹನ ನಂ: ಕೆ.ಎ-47/8769 ನೇದರಲ್ಲಿ ಗೊರಟೆ ಕ್ರಾಸಿನಿಂದ ಹೊನ್ನೆಮಡಿ ರಸ್ತೆಯಲ್ಲಿ ಹೋಗುತ್ತಿರುವಾಗ ಆರೋಪಿತನು ಮೋಟಾರ್  ಸೈಕಲ್ ಮೇಲೆ ಬಂದವನು, ಪಿರ್ಯಾದಿಯವರ ವಾಹನದ ಸೈಡ್ ಮಿರರ್ ಅನ್ನು ಕೈಯಿಂದ ಬಡಿದು ಮುಂದಕ್ಕೆ ಹೋಗುತ್ತಾ ಗುರಾಯಿಸಿಕೊಂಡು ಹೋಗಿದ್ದನು. ಪುನಃ ಪಿರ್ಯಾದಿಯವರು ಹೊನ್ನೆಮಡಿ ರಸ್ತೆಯಲ್ಲಿ ವಾಪಸ್ ಬರುತ್ತಾ ರಸ್ತೆ ಮಧ್ಯದಲ್ಲಿ ಪರಿಚಯದವರಾದ ಗಣೇಶ ನಾಯ್ಕ ರವರೊಂದಿಗೆ ಮಾತನಾಡುತ್ತಾ ನಿಂತಿದ್ದಾಗ ಆರೋಪಿತನು ಬಿಳಿ ಬಣ್ಣದ ಕಾರಿನಲ್ಲಿ ಬಂದವನು, ಪಿರ್ಯಾದಿಯ ಬಳಿ ಬಂದು ತನ್ನ ಕಾರನ್ನು ನಿಲ್ಲಿಸಿ, ಕಾರಿನಲ್ಲಿ ತಂದಿದ್ದ ಬೆತ್ತದ ಬಡಿಗೆಯನ್ನು ತನ್ನ ಕೈಯಲ್ಲಿ ಹಿಡಿದು ಪಿರ್ಯಾದಿಯವರ ತಲೆಯ ಮೇಲೆ ಹೊಡೆದು ನೋವನ್ನುಂಟು ಪಡಿಸಿ, ‘ಬೋಳಿ ಮಗನೆ’ ಅಂತ ಅವಾಚ್ಯವಾಗಿ ಬೈಯ್ದು, ಅದೇ ಬಡಿಗೆಯಿಂದ ಪಿರ್ಯಾದಿಯವರ ಎಡಗಾಲಿನ ಮೇಲೆ ಹೊಡೆದು ನೋವನ್ನುಂಟು ಪಡಿಸಿ, ‘ಒಂದು ದಿನ ನಿನ್ನ ಮೇಲೆ ಕಾರನ್ನು ಹತ್ತಿಸಿ ಸಾಯಿಸುತ್ತೇನೆ’ ಎನ್ನುವುದಾಗಿ ಜೀವದ ಬೆದರಿಕೆಯನ್ನು ಹಾಕಿ, ಅಲ್ಲಿಯೇ ನಿಂತಿದ್ದ ಪಿರ್ಯಾದಿಯವರ ಟಾಟಾ ಏಸ್ ವಾಹನದ ಮುಂಬದಿಯ ಗಾಜನ್ನು ಬಡಿಗೆಯಿಂದ ಹೊಡೆದು ಒಡೆದು, ವಾಹನದ ಮೇಲೆ ಸಹ ಹೊಡೆದು ಪಿರ್ಯಾದಿಯವರಿಗೆ ಸುಮಾರು 6,000/- ರೂಪಾಯಿಯಷ್ಟು ನಷ್ಟ ಪಡಿಸಿ ಅಲ್ಲಿಂದ ಹೊರಟು ಹೋದ ಬಗ್ಗೆ ಪಿರ್ಯಾದಿ ಶ್ರೀ ರಾಮ ತಂದೆ ಜಟ್ಟಪ್ಪ ನಾಯ್ಕ, ಪ್ರಾಯ-49 ವರ್ಷ, ವೃತ್ತಿ-ಚಾಲಕ, ಸಾ|| ಅಜ್ಜಿಮನೆ, ಹೊನ್ನೆಮಡಿ, ತಾ: ಭಟ್ಕಳ ರವರು ದಿನಾಂಕ: 20-09-2021 ರಂದು 16-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಜೋಯಿಡಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 37/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ಮಂಜುನಾಥ ತಂದೆ ರಾಮಾ ಗಾವಡಾ, ಪ್ರಾಯ-39 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಜನತಾ ಕಾಲೋನಿ, ತಾ: ಜೋಯಿಡಾ. ಈತನು ದಿನಾಂಕ: 20-09-2021 ರಂದು 11-55 ಗಂಟೆಯ ಸುಮಾರಿಗೆ ತನ್ನ ಲಾಭಕ್ಕೋಸ್ಕರ ಜೋಯಿಡಾ ತಾಲೂಕಿನ ಜನತಾ ಕಾಲೋನಿಯ ಹನುಮಾನ್ ದೇವಸ್ಥಾನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬರಿಗೆ ಅನ್ಯಾಯದ ಲಾಭ ಇನ್ನೊಬ್ಬರಿಗೆ ಅನ್ಯಾಯದ ನಷ್ಟವಾಗುವಂತೆ ಸಾರ್ವಜನಿಕರಿಂದ ಹಣವನ್ನು ಸ್ವೀಕರಿಸಿಕೊಂಡು ಓ.ಸಿ ಚೀಟಿ ಬರೆಯುತ್ತಿದ್ದಾಗ ನಗದು ಹಣ 930/- ರೂಪಾಯಿ, ಬಾಲ್ ಪೆನ್-01 ಹಾಗೂ ಅಂಕೆ-ಸಂಖ್ಯೆ ಬರೆದ ಓ.ಸಿ ಚೀಟಿ-01, ಇವುಗಳ ಸಮೇತ ಪಿರ್ಯಾದಿಯವರಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಶ್ರೀಮತಿ ಮಂಜುಳಾ ಎಸ್, ರಾವೋಜಿ, ಡಬ್ಲ್ಯೂ.ಪಿ.ಎಸ್.ಐ (ಕಾ&ಸು, ಸಂಚಾರ), ಜೋಯಿಡಾ ಪೊಲೀಸ್ ಠಾಣೆ ರವರು ದಿನಾಂಕ: 20-09-2021 ರಂದು 13-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಜೋಯಿಡಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 38/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ರಾಜು ತಂದೆ ಪ್ರೇಮಾನಂದ ನಾಯ್ಕ ಪ್ರಾಯ-36 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಜನತಾ ಕಾಲೋನಿ, ತಾ: ಜೋಯಿಡಾ. ಈತನು ದಿನಾಂಕ: 20-09-2021 ರಂದು 14-25 ಗಂಟೆಯ ಸುಮಾರಿಗೆ ತನ್ನ ಲಾಭಕ್ಕೋಸ್ಕರ ಜೋಯಿಡಾ ತಾಲೂಕಿನ ನಗರಭಾವಿ ಪೆಟ್ರೋಲ್ ಬಂಕ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬರಿಗೆ ಅನ್ಯಾಯದ ಲಾಭ ಇನ್ನೊಬ್ಬರಿಗೆ ಅನ್ಯಾಯದ ನಷ್ಟವಾಗುವಂತೆ ಸಾರ್ವಜನಿಕರಿಂದ ಹಣವನ್ನು ಸ್ವೀಕರಿಸಿಕೊಂಡು ಓ.ಸಿ ಚೀಟಿ ಬರೆಯುತ್ತಿದ್ದಾಗ ನಗದು ಹಣ 1,150/- ರೂಪಾಯಿ, ಬಾಲ್ ಪೆನ್-01 ಹಾಗೂ ಅಂಕೆ-ಸಂಖ್ಯೆ ಬರೆದ ಓ.ಸಿ ಚೀಟಿ-01, ಇವುಗಳ ಸಮೇತ ಪಿರ್ಯಾದಿಯವರಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಶ್ರೀಮತಿ ಮಂಜುಳಾ ಎಸ್, ರಾವೋಜಿ, ಡಬ್ಲ್ಯೂ.ಪಿ.ಎಸ್.ಐ (ಕಾ&ಸು, ಸಂಚಾರ), ಜೋಯಿಡಾ ಪೊಲೀಸ್ ಠಾಣೆ ರವರು ದಿನಾಂಕ: 20-09-2021 ರಂದು 15-40 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 150/2021, ಕಲಂ: 279, 304(ಎ) ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಕೆ. ಆನಂದ ತಂದೆ ವೆಂಕಟ ನಾಯ್ಕ, ಪ್ರಾಯ-51 ವರ್ಷ, ವೃತ್ತಿ-ಬಸ್ ಚಾಲಕ, ಸಾ|| ಶ್ರೀ ತುಳಸಿ, ಮನೆ ನಂ: 533, ಬಿ-6, ಚಿಕನಸಾಲ ರೋಡ್, ತಾ: ಕುಂದಾಪುರ, ಜಿ: ಉಡುಪಿ (ಬಸ್ ನಂ: ಕೆ.ಎ-51/ಎ.ಎಫ್-9490 ನೇದರ ಚಾಲಕ). ಈತನು ದಿನಾಂಕ: 20-09-2021 ರಂದು ರಾತ್ರಿ 01-00 ಗಂಟೆಯ ಸುಮಾರಿಗೆ ತನ್ನ ಬಸ್ ನಂ: ಕೆ.ಎ-51/ಎ.ಎಫ್-9490 ನೇದನ್ನು ಹುಬ್ಬಳ್ಳಿ ಕಲಘಟಗಿ ಕಡೆಯಿಂದ ಯಲ್ಲಾಪುರ ಕಡೆಗೆ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಹೋಗಿ ಯಲ್ಲಾಪೂರ ತಾಲೂಕಿನ ಬಿಸಗೋಡ ಕ್ರಾಸ್ ಹತ್ತಿರ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-63 ರಲ್ಲಿ ಇರುವ ಸಣ್ಣ ತಿರುವಿನಲ್ಲಿ ತನ್ನ ಮುಂದೆ ರಸ್ತೆಯ ಎಡಬದಿಯಿಂದ ಬಲಬದಿಗೆ ನಡೆದುಕೊಂಡು ರಸ್ತೆ ದಾಟುತ್ತಿದ್ದ ಪಿರ್ಯಾದಿಯ ದೊಡ್ಡಪ್ಪನ ಮಗ: ರವಿ ತಂದೆ ನಾರಾಯಣ ಸಿದ್ದಿ, ಸಾ|| ಅರಬೈಲ್, ತಾ: ಯಲ್ಲಾಪುರ ಈತನಿಗೆ ಡಿಕ್ಕಿ ಮಾಡಿ, ಅಪಘಾತ ಪಡಿಸಿದ್ದರಿಂದಲೇ ಈ ಅಪಘಾತವಾಗಿ ಪಿರ್ಯಾದಿಯ ದೊಡ್ಡಪ್ಪನ ಮಗ: ರವಿ ಸಿದ್ದಿ ಈತನ ತಲೆಗೆ ಭಾರೀ ಸ್ವರೂಪದ ಗಾಯ ಪೆಟ್ಟು ಆಗಿ ಸ್ಥಳದಲ್ಲೇ ಮೃತಪಟ್ಟ ಬಗ್ಗೆ ಪಿರ್ಯಾದಿ ಶ್ರೀ ವಿಜಯ ತಂದೆ ಜುಮ್ಮಾ ಸಿದ್ದಿ, ಪ್ರಾಯ-25 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಜನತಾ ಕಾಲೋನಿ, ಅರಬೈಲ್, ತಾ: ಯಲ್ಲಾಪುರ ರವರು ದಿನಾಂಕ: 20-09-2021 ರಂದು 06-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 64/2021, ಕಲಂ: 379 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ದಿನಾಂಕ: 17-09-2021 ರಂದು ರಾತ್ರಿ 23-15 ಗಂಟೆಯಿಂದ ದಿನಾಂಕ: 17-09-2021 ರಾತ್ರಿ 23-30 ಗಂಟೆಯ ನಡುವಿನ ಅವಧಿಯಲ್ಲಿ ಶಿರಸಿ ಶಹರದ ಮಾರಿಕಾಂಬಾ ನಗರದ 5 ನೇ ಕ್ರಾಸಿನಲ್ಲಿರುವ ಜೈ ತಂದೆ ಜಗದೀಶ ಗೆಹ್ಲೋತ್ ರವರು ವಾಸಿಸುವ ಬಾಡಿಗೆ ಮನೆಯ ಮುಂದಿನ ರಸ್ತೆಯ ಬದಿಯಲ್ಲಿ ನಿಲ್ಲಿಸಿಟ್ಟಿದ್ದ ಪಿರ್ಯಾದಿಯ ಬಾಬ್ತು ಅ||ಕಿ|| 40,000/- ರೂಪಾಯಿ ಮೌಲ್ಯದ ಮಹೀಂದ್ರಾ ಕಂಪನಿಯ CENTURO ಮೋಟಾರ್ ಸೈಕಲ್ ನಂ: ಕೆ.ಎ-31/ಗಿ-2414 ನೇದನ್ನು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀ ದೇವಾನಂದ ತಂದೆ ಕೃಷ್ಣ ಸೌಣೂರು, ಪ್ರಾಯ-28 ವರ್ಷ, ವೃತ್ತಿ-ಮಾರುತಿ ಮೆಡಿಕಲ್ ನಲ್ಲಿ ಕೆಲಸ, ಸಾ|| 5 ನೇ ಅಡ್ಡ ರಸ್ತೆ, ಕನ್ನಡ ಶಾಲೆ ಹಿಂದುಗಡೆ, ಶ್ರೀರಾಮ ಕಾಲೋನಿ, ತಾ: ಶಿರಸಿ ರವರು ದಿನಾಂಕ: 20-09-2021 ರಂದು 11-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಸಿದ್ದಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 118/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ನಾಗರಾಜ ತಂದೆ ರಾಮ ಗೊಂಡ, ಪ್ರಾಯ-38 ವರ್ಷ, ಸಾ|| ವಡಗೇರಿ, ಶಿರಳಗಿ, ತಾ: ಸಿದ್ದಾಪುರ (ಮೋಟಾರ್ ಸೈಕಲ್ ನಂ: ಕೆ.ಎ-15/ಇ.ಇ-6644 ನೇದರ ಸವಾರ). ಈತನು ದಿನಾಂಕ: 20-09-2021 ರಂದು ಸಾಯಂಕಾಲ ಮೋಟಾರ್ ಸೈಕಲ್ ನಂ: ಕೆ.ಎ-15/ಇ.ಇ-6644 ನೇದನ್ನು ಸಿದ್ದಾಪುರ-ಕುಮಟಾ ಮುಖ್ಯ ರಸ್ತೆಯಲ್ಲಿ ಸಿದ್ದಾಪುರ ಕಡೆಯಿಂದ ಕುಮಟಾ ಕಡೆಗೆ ಅತೀವೇಗವಾಗಿ ಹಾಗೂ ನಿಷ್ಕಾಳಜೀತನದಿಂದ ಚಲಾಯಿಸಿಕೊಂಡು ಹೋಗುತ್ತಿದ್ದವನು 16-15 ಗಂಟೆಯ ಸುಮಾರಿಗೆ ಸಿದ್ದಾಪುರ ತಾಲೂಕಿನ ಭುವನಗಿರಿ ಹತ್ತಿರ ಅವನ ಮುಂದೆ ಹೋಗುತ್ತಿದ್ದ ಓಮಿನಿಯನ್ನು ನಿಷ್ಕಾಳಜೀತನದಿಂದ ಓವರಟೇಕ್ ಮಾಡಿ ಮೋಟಾರ್ ಸೈಕಲನ್ನು ಪೂರ್ತಿ ಅವನ ಬಲಕ್ಕೆ ಚಲಾಯಿಸಿ, ಎದುರಿನಿಂದ ಶ್ರೀನಿವಾಸ ಕೆ. ಪಾಟೀಲ್ ಇವರು ಚಲಾಯಿಸಿಕೊಂಡು ಬರುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ನಂ: ಕೆ.ಎ-42/ಎಫ್-927 ನೇದರ ಮುಂದಿನ ಬಲ ಮೂಲೆಗೆ ಢಿಕ್ಕಿ ಹೊಡೆದು ಅಪಘಾತ ಪಡಿಸಿ, ಆರೋಪಿ ಮೋಟಾರ್ ಸೈಕಲ್ ಸವಾರನು ತನ್ನ ತಲೆಗೆ, ಕೈಗೆ ಹಾಗೂ ಕಾಲಿಗೆ ಗಾಯನೋವು ಪಡಿಸಿಕೊಂಡಿದ್ದಲ್ಲದೇ, ಮೋಟಾರ್ ಸೈಕಲ್ ಹಿಂಬದಿ ಸವಾರಳಾದ ಶ್ರೀಮತಿ ದಿವ್ಯಾ ಕೋಂ. ನಾಗರಾಜ ಗೊಂಡ, ಪ್ರಾಯ-30 ವರ್ಷ, ಸಾ|| ವಡಗೇರಿ, ಶಿರಳಗಿ, ತಾ: ಸಿದ್ದಾಪುರ ಇವರ ಬಲಗೈಗೆ ಹಾಗೂ ಬಲಗಾಲಿಗೆ ಗಾಯನೋವು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಭರತೇಶ ತಂದೆ ಶ್ರೀಕಾಂತ ದೊಡ್ಡಬೊಮ್ಮಣ್ಣವರ, ಪ್ರಾಯ-47 ವರ್ಷ, ವೃತ್ತಿ-ಕೆ.ಎಸ್.ಆರ್.ಟಿ ಬಸ್ ಚಾಲಕ ಕಂ. ನಿರ್ವಾಹಕ (ಬ್ಯಾಡ್ಜ್ ನಂ: 1793), ಸಾ|| ಬಸ್ತವಾಡ, ತಾ&ಜಿ: ಬೆಳಗಾವಿ, ಹಾಲಿ ಸಾ|| ಕೆ.ಎಸ್.ಆರ್.ಟಿ.ಸಿ ಬಸ್ ಡಿಪೋ, ತಾ: ಶಿರಸಿ ರವರು ದಿನಾಂಕ: 20-09-2021 ರಂದು 17-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಸಿದ್ದಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 119/2021, ಕಲಂ: 465, 468, 419, 420 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ 1]. ಶ್ರೀಮತಿ ಅನಸೂಯಾ ಕೋಂ. ವಿಜಯಕುಮಾರ ನಾಯ್ಕ, ಸಾ|| ಮೆಣಸಿ, ತಾ: ಸಿದ್ದಾಪುರ, ಹಾಲಿ ಸಾ|| ಬೆಂಗಳೂರು, 2]. ಗೋವಿಂದ ನಾಗಾ ನಾಯ್ಕ, ಸಾ|| ಚಂದ್ರಘಟಗಿ, ತಾ: ಸಿದ್ದಾಪುರ. ಪಿರ್ಯಾದಿಯ ತಂದೆಯಿಂದ ಪಿತ್ರಾರ್ಜಿತವಾಗಿ ಸಿದ್ಧಾಪುರ ತಾಲೂಕಿನ ಕುಳಿಬಿಡು ಗ್ರಾಮದ ಸರ್ವೇ ನಂ: 15/1 ಕ್ಷೇತ್ರ 1 ಎಕರೆ 5 ಗುಂಟೆ 8 ಆಣೆ ಆಸ್ತಿಯಿರುತ್ತದೆ ಪಿರ್ಯಾದಿಗೆ ಇದ್ದ ಇಬ್ಬರೂ ಅಣ್ಣಂದಿರು ಹಾಗೂ ಒಬ್ಬಳು ಅಕ್ಕ ಈಗಾಗಲೇ ಮೃತಪಟ್ಟಿದ್ದು, ಅವರ ಮಕ್ಕಳು ಜೀವಂತವಿರುತ್ತಾರೆ. ಸದರ ಆಸ್ತಿಯನ್ನು ಪಿರ್ಯಾದಿಯ ಮೃತ ಎರಡನೆಯ ಅಣ್ಣ ಚೌಡಾ ನಾಗಾ ನಾಯ್ಕ, ಈತನ ಹೆಂಡತಿ ಗೌರಿ ಹಾಗೂ ಆಕೆಯ ಮಕ್ಕಳಾದ ಗೋದಾವರಿ ಮತ್ತು ಅನಸೂಯಾ (ಆರೋಪಿ 1) ಇವರು ಅನುಭವಿಸುತ್ತಾ ಬಂದಿದ್ದರು. ಪಿರ್ಯಾದಿಯು ಪಿತ್ರಾರ್ಜಿತವಾಗಿ ಬಂದ ಆಸ್ತಿಯನ್ನು ಪಾಲು ಮಾಡಿಕೊಳ್ಳಲು ಕೇಳಲು ಹೋದರೆ ಅವನೊಂದಿಗೆ ತಕರಾರು ಮಾಡುತ್ತಾ ಬಂದಿದ್ದರು. ಅವರ ಪೈಕಿ ಪಿರ್ಯಾದಿಯ ಮೃತ ಅಣ್ಣ ಚೌಡನ ಎರಡನೇನೆ ಮಗಳಾದ ಆರೋಪಿ 1 ನೇಯವಳು ಪಿರ್ಯಾದಿಗೆ ಪಿತ್ರಾರ್ಜಿತವಾಗಿ ಬರುವಂತಹ ಆಸ್ತಿಯನ್ನು ಸಂಪೂರ್ಣವಾಗಿ ಮೋಸತನದಿಂದ ತಾನೇ ಒಬ್ಬಳೇ ಕಬಳಿಸುವ ಉದ್ದೇಶವನ್ನು ಹೊಂದಿದ್ದವಳು, ಪಿರ್ಯಾದಿಯ ಹೆಸರಿನಂತೆ ಹೆಸರಿರುವ ಅವನದೇ ಸರಿಸಮಾರು ವಯಸ್ಸಿರುವ ಸಿದ್ಧಾಪುರ ತಾಲೂಕಿನ ಚಂದ್ರಘಟಗಿ ನಿವಾಸಿಯಾದ ಆರೋಪಿ 2 ನೇಯವನಿಗೆ ಹುಡುಕಿ ಅವನ ಆಧಾರ್ ಕಾರ್ಡ್ ಅನ್ನು ಬಳಸಿಕೊಂಡು ದಿನಾಂಕ: 13-07-2021 ರಂದು ಪಿರ್ಯಾದಿ ಹಾಗೂ ಆರೋಪಿತಳ ತಾಯಿ ಮತ್ತು ಅಕ್ಕ ಇವರು ತನ್ನ ಹೆಸರಿಗೆ ಪೂರ್ತಿ ಆಸ್ತಿಯ ಹಕ್ಕು ತ್ಯಾಗ ಪತ್ರವನ್ನು ಬರೆದು ಕೊಟ್ಟಂತೆ ನಕಲಿ ಹಕ್ಕು ತ್ಯಾಗ ಪತ್ರವನ್ನು ಸೃಷ್ಟಿಸಿ, ಆರೋಪಿ 2 ನೇಯವನೇ ತನ್ನ ಚಿಕ್ಕಪ್ಪ (ಪಿರ್ಯಾದಿ) ಎಂದು ಹಾಗೂ ತನ್ನ ತಾಯಿ ಗೌರಿ ಮತ್ತು ಅಕ್ಕ ಗೋದಾವರಿ ಇವರನ್ನು ಸಿದ್ಧಾಪುರ ಶಹರದ ಸಬ್ ರಜಿಸ್ಟ್ರಾರ್ ಆಫೀಸಿನಲ್ಲಿ ಹಾಜರು ಪಡಿಸಿ, ಹಕ್ಕು ತ್ಯಾಗ ಪತ್ರವನ್ನು ನೋಂದಾವಣಿ ಮಾಡಿಸಿ ಆರ್.ಟಿ.ಸಿ ಯಲ್ಲಿ ಪೂರ್ತಿ ಆಸ್ತಿ ಅವಳ ಹೆಸರಿಗೆ ನಮೂದಾಗುವಂತೆ ಮೋಸತನದಿಂದ ನಕಲಿ ದಾಖಲೆ ಸೃಷ್ಟಿಸಿದ್ದು, ಅವಳ ಚಿಕ್ಕಪ್ಪನ (ಪಿರ್ಯಾದಿಯ) ಹೆಸರಿಗೆ ಮತ್ತು ವಯಸ್ಸಿಗೆ ಹೋಲಿಕೆಯಾಗುವ ರೀತಿಯಲ್ಲಿರುವ ಆರೋಪಿ 2 ನೇಯವನು ಅವಳ ಚಿಕ್ಕಪ್ಪನೆಂದು ಸಿದ್ದಾಪುರದ ಸಬ್ ರಜಿಸ್ಟ್ರಾರ್ ಆಫೀಸಿನಲ್ಲಿ ಹಾಜರಾಗಿ ಅವಳ ಮೋಸತನದ ಕೃತ್ಯಕ್ಕೆ ಸಹಕರಿಸಿದ್ದು, ಈ ಬಗ್ಗೆ ಆರೋಪಿತರ ಮೇಲೆ ಕಾನೂನಿನಂತೆ ಕ್ರಮ ಜರುಗಿಸಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಗೋವಿಂದ ತಂದೆ ನಾಗಾ ನಾಯ್ಕ, ಪ್ರಾಯ-65 ವರ್ಷ, ವೃತ್ತಿ-ನಿವೃತ್ತ ಕೆ.ಇ.ಬಿ ನೌಕರ, ಸಾ|| ಮೆಣಸಿ, ತಾ: ಸಿದ್ದಾಪುರ, ಹಾಲಿ ಸಾ|| ಹರಿಗೆ, ಚಾನಲ್ ಎರಿಯಾ, 2 ನೇ ಕ್ರಾಸ್, ವಿದ್ಯಾನಗರ, ಶಿವಮೊಗ್ಗ ರವರು ದಿನಾಂಕ: 20-09-2021 ರಂದು 22-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 20-09-2021

at 00:00 hrs to 24:00 hrs

 

ಮುರ್ಡೇಶ್ವರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 25/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತಳಾದ ಶ್ರೀಮತಿ ಮಂಜಮ್ಮಾ ಕೋಂ. ನಾಗಪ್ಪ ನಾಯ್ಕ, ಪ್ರಾಯ-70 ವರ್ಷ, ಸಾ|| ಬಡಕು ಮನೆ, ಹೆರಾಡಿ, ಪೋ: ಕಾಯ್ಕಿಣಿ, ತಾ: ಭಟ್ಕಳ. ಪಿರ್ಯಾದಿಯ ದೂರದ ಸಂಬಂಧಿಯಾದ ಇವಳು ಮಾನಸಿ ಖಿನ್ನತೆಗೆ ಒಳಗಾಗಿ ಕೆಲವು ವರ್ಷಗಳಿಂದ ಕಾಯ್ಕಿಣಿ, ಎಣ್ಣೆಬೋಳೆ, ದೇವಿಕಾನ್, ಹೀಗೆ ಮುರ್ಡೇಶ್ವರದ ಸುತ್ತಮುತ್ತಲಿನ ಅನೇಕ ಊರುಗಳಲ್ಲಿ ತಿರುಗಾಡುತ್ತಾ ಅಲ್ಲಿ ಇಲ್ಲಿ ಬೇಡಿಕೊಂಡು ಚಹಾ, ತಿಂಡಿ, ಊಟ ಮಾಡಿಕೊಂಡಿದ್ದವಳು, ದಿನಾಂಕ: 20-09-2021 ರಂದು ಮುರ್ಡೇಶ್ವರದ ಬಸ್ತಿ ಕನ್ನಡ ಶಾಲೆಯ ಹಿಂದುಗಡೆ ರೈಲ್ವೇ ಹಳಿಯ ಮೇಲೆ ನಡೆದುಕೊಂಡು ಹೋಗುತ್ತಿರುವಾಗ ಮುರ್ಡೇಶ್ವರ ಕಡೆಯಿಂದ ಭಟ್ಕಳ ಕಡೆಗೆ ಚಲಿಸುವ ರೈಲು ಮಧ್ಯಾಹ್ನ 12-45 ಗಂಟೆಯ ಸುಮಾರಿಗೆ ಬಡಿದು ಮೃತಪಟ್ಟಿದ್ದು, ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ವೇಂಕಟೇಶ ತಂದೆ ನಾರಾಯಣ ನಾಯ್ಕ, ಪ್ರಾಯ-41 ವರ್ಷ, ವೃತ್ತಿ-ಕೋಳಿ ಅಂಗಡಿ ವ್ಯಾಪಾರ, ಸಾ|| ಎಣ್ಣೆಬೋಳೆ, ದೇವಿಕಾನ್, ಪೋ: ಕಾಯ್ಕಿಣಿ, ತಾ: ಭಟ್ಕಳ ರವರು ದಿನಾಂಕ: 20-09-2021 ರಂದು 13-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 06/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀಮತಿ ಅಶ್ವಿನಿ @ ಲಲಿತಾ ಕೋಂ. ಸಂಜು ಗಾವಡೆ, ಪ್ರಾಯ-33 ವರ್ಷ, ವೃತ್ತಿ-ಗೃಹಿಣಿ, ಸಾ|| ಕೇರವಾಡ, ತಾ: ದಾಂಡೇಲಿ. ಮೃತಳಾದ ಇವಳು ಅತೀಯಾಗಿ ಸಾರಾಯಿ ಕುಡಿಯುತ್ತಿದ್ದವಳು, ಸಾರಾಯಿ ಕುಡಿಯುವ ಚಟದಿಂದ ಅನಾರೋಗ್ಯದಿಂದ ಬಳಲುತ್ತಿದ್ದವಳು, ತನಗಿದ್ದ ಸಾರಾಯಿ ಕುಡಿಯುವ ಚಟ ಹಾಗೂ ತನಗಿದ್ದ ಖಾಯಿಲೆಯಿಂದ ಮಾನಸಿಕವಾಗಿ ನೊಂದು, ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ: 19-09-2021 ರಂದು ರಾತ್ರಿ 11-00 ಗಂಟೆಯಿಂದ ದಿನಾಂಕ: 20-09-2021 ರಂದು ಬೆಳಿಗ್ಗೆ 08-00 ಗಂಟೆಯ ನಡುವಿನ ಅವಧಿಯಲ್ಲಿ ತನ್ನ ಮನೆಯ ಜಂತಿಗೆ ವೇಲ್ ಕಟ್ಟಿ ತನ್ನ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾಳೆ. ಇದರ ಹೊರತು ಅವಳ ಮರಣದಲ್ಲಿ ಬೇರೆ ಯಾವುದೇ ಸಂಶಯ ಇರುವುದಿಲ್ಲ ಎಂಬ ಬಗ್ಗೆ ಪಿರ್ಯಾದಿ ಶ್ರೀ ಮಂಜುನಾಥ ತಂದೆ ಬಸವಂತ ಶಿಂಧೆ, ಪ್ರಾಯ-38 ವರ್ಷ, ವೃತ್ತಿ-ಶ್ರೇಯಸ್ ಪೇಪರ್ ಮಿಲ್ ನಲ್ಲಿ ಕೆಲಸ, ಸಾ|| ಕೇರವಾಡ, ತಾ: ದಾಂಡೇಲಿ ರವರು ದಿನಾಂಕ: 20-09-2021 ರಂದು 10-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಮುಂಡಗೋಡ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 31/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಪರಶುರಾಮಪ್ಪ ತಂದೆ ಗುತ್ತೆಪ್ಪ ಬಾಳೇರ್, ಪ್ರಾಯ-68 ವರ್ಷ, ಸಾ|| ಕೊಡಂಬಿ, ತಾ: ಮುಂಡಗೋಡ. ಸುದ್ದಿದಾರನ ತಂದೆಯಾದ ಈತನು ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ದಿನಾಂಕ: 19-09-2021 ರಂದು ಬೆಳಗಿನ ಜಾವ 04-00 ಗಂಟೆಯ ಸುಮಾರಿಗೆ ಭತ್ತದ ಹೊಲಕ್ಕೆ ಸಿಂಪಡಿಸಲು ತಂದು ಇಟ್ಟಿದ್ದ ಕ್ರಿಮಿನಾಶಕ ಔಷಧಿಯನ್ನು ಸೇವಿಸಿ ಅಸ್ವಸ್ಥನಾದವನಿಗೆ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಿಸದೇ ದಿನಾಂಕ: 19-09-2021 ರಂದು ಸಾಯಂಕಾಲ 06-55 ಗಂಟೆಗೆ ಮೃತಪಟ್ಟಿರುತ್ತಾನೆ. ಇದರ ಹೊರತು ತನ್ನ ತಂದೆಯ ಮರಣದಲ್ಲಿ ಯಾವುದೇ ಸಂಶಯ ಇರುವುದಿಲ್ಲ. ಮೃತದೇಹವು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ಶವಾಗಾರದಲ್ಲಿ ಇರುತ್ತದೆ. ಈ ಕುರಿತು ಮುಂದಿನ ಸೂಕ್ತ ತನಿಖೆ ಕೈಗೊಳ್ಳಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಕೃಷ್ಣ ತಂದೆ ಪರಶುರಾಮಪ್ಪ ಬಾಳೇರ್, ಪ್ರಾಯ-32 ವರ್ಷ. ವೃತ್ತಿ-ಕೂಲಿ ಕೆಲಸ, ಸಾ|| ಹಳ್ಳದಮನಿ, ಕೊಡಂಬಿ, ತಾ: ಮುಂಡಗೋಡ ರವರು ದಿನಾಂಕ: 20-09-2021 ರಂದು 12-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

ಇತ್ತೀಚಿನ ನವೀಕರಣ​ : 21-09-2021 04:30 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080