ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 21-04-2021

at 00:00 hrs to 24:00 hrs

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 94/2021, ಕಲಂ: 302 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಮಂಜುನಾಥ ತಂದೆ ಲಕ್ಷ್ಮಣ ಶಾನಭಾಗ, ಪ್ರಾಯ-54 ವರ್ಷ, ವೃತ್ತಿ-ರೈತಾಬಿ ಮತ್ತು ಅಡಿಗೆ ಕೆಲಸ, ಸಾ|| ಉಪ್ಪಿನಪಟ್ಟಣ, ಕತಗಾಲ, ತಾ: ಕುಮಟಾ. ಈತನು ದಿನಾಂಕ: 20-04-2021 ರಂದು 21-30 ಗಂಟೆ ಪೂರ್ವದಲ್ಲಿ ತನ್ನ ಮಗಳು ಮಾಯಾ ಇವಳ ತಲೆಗೆ ಆಪರೇಷನ್ ಮಾಡಿಸುವ ವಿಚಾರದಲ್ಲಿ ತನ್ನ ಹೆಂಡತಿ ಶ್ರೀಮತಿ ಮಮತಾ ಮಂಜುನಾಥ ಶಾನಭಾಗ, ಪ್ರಾಯ-37 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಉಪ್ಪಿನಪಟ್ಟಣ, ಕತಗಾಲ, ತಾ: ಕುಮಟಾ ಇವಳೊಂದಿಗೆ ಆಗಾಗ ಜಗಳ ತೆಗೆದು ಗಲಾಟೆ ಮಾಡಿ, ಅವಳಿಗೆ ತೊಂದರೆ ಕೊಡುತ್ತಾ ಬಂದವನು, ಅವಳನ್ನು ಕೊಲೆ ಮಾಡುವ ಉದ್ದೇಶದಿಂದ ಅವಳ ಕುತ್ತಿಗೆ ಹಿಚುಕಿ ಅಥವಾ ಬಟ್ಟೆ ಕಟ್ಟಿ ಕೊಲೆ ಮಾಡಿದ ಬಗ್ಗೆ ಪಿರ್ಯಾದಿ ಶ್ರೀ ದಾಮೋದರ ತಂದೆ ಮರ್ತು ಶಾನಭಾಗ, ಪ್ರಾಯ-33 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಹುಡಗೋಡ, ಜಂಬೊಳ್ಳಿ ಕ್ರಾಸ್, ಹಡಿನಬಾಳ, ತಾ: ಹೊನ್ನಾವರ ರವರು ದಿನಾಂಕ: 21-04-2021 ರಂದು 06-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 120/2021, ಕಲಂ: 87 ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ಸಿಂಜಾವ್ ತಂದೆ ಪಾರಸ್ಕ್ ಮಿರಾಂಡಾ, ಪ್ರಾಯ-59 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ನಗರಬಸ್ತಿಕೇರಿ, ಗೇರುಸೊಪ್ಪಾ, ತಾ: ಹೊನ್ನಾವರ, 2]. ಶ್ರೀಪಾದ ತಂದೆ ಕಾಳು ನಾಯ್ಕ, ಪ್ರಾಯ-56 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಉಪ್ಪಿನಗೋಳಿ, ಗೇರುಸೊಪ್ಪಾ, ತಾ: ಹೊನ್ನಾವರ, 3]. ಪ್ರವೀಣ ತಂದೆ ಈಶ್ವರ ನಾಯ್ಕ, ಪ್ರಾಯ-28 ವರ್ಷ, ವೃತ್ತಿ-ಚಾಲಕ, ಸಾ|| ನಗರಬಸ್ತಕೇರಿ, ಗೇರುಸೊಪ್ಪಾ, ತಾ: ಹೊನ್ನಾವರ, 4]. ಮಹೇಶ ತಂದೆ ತಿಮ್ಮಪ್ಪ ನಾಯ್ಕ, ಪ್ರಾಯ-40 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಮೊಗೆಹಳ್ಳ, ಗೇರುಸೊಪ್ಪಾ, ತಾ: ಹೊನ್ನಾವರ, 5]. ಮಾರುತಿ ತಂದೆ ಕನ್ಯ ಅಂಬಿಗ, ಪ್ರಾಯ-28 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ನಗರಬಸ್ತಕೇರಿ, ಗೇರುಸೊಪ್ಪಾ, ತಾ: ಹೊನ್ನಾವರ, 6]. ಸುಬ್ರಾಯ ತಂದೆ ಗಣಪಯ್ಯ ನಾಯ್ಕ, ಪ್ರಾಯ-50 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಬಹುರ, ಸರಳಗಿ, ತಾ: ಹೊನ್ನಾವರ. ಈ ನಮೂದಿತ ಆರೋಪಿತರೆಲ್ಲರೂ ದಿನಾಂಕ: 21-04-2021 ರಂದು 01-00 ಗಂಟೆಗೆ ಹೊನ್ನಾವರ ತಾಲೂಕಿನ ಗೇರುಸೊಪ್ಪಾ ನಗರಬಸ್ತಿಕೇರಿಯ ತಲತೋಟದ ಸಾರ್ವಜನಿಕ ಅರಣ್ಯ ಪ್ರದೇಶದಲ್ಲಿ ಇಸ್ಪೀಟ್ ಎಲೆಗಳ ಮೇಲೆ ಹಣವನ್ನು ಪಂಥವನ್ನಾಗಿ ಕಟ್ಟಿ ತಮ್ಮ ತಮ್ಮ ಲಾಭಕ್ಕೋಸ್ಕರ ಇಸ್ಪೀಟ್ ಅಂದರ್-ಬಾಹರ್ ಜುಗಾರಾಟ ಆಡುತ್ತಿದ್ದಾಗ ದಾಳಿಯ ವೇಳೆ 1). ನೆಲಕ್ಕೆ ಹಾಸಿದ ಪೇಪರ್ ಮಂಡ-01, ಅ||ಕಿ|| 00.00/- ರೂಪಾಯಿ, 2). ವಿವಿಧ ಮುಖ ಬೆಲೆಯ ಒಟ್ಟೂ ನಗದು ಹಣ 8,960/- ರೂಪಾಯಿ, 3). ಒಟ್ಟೂ ಇಸ್ಪೀಟ್ ಎಲೆಗಳು-52, ಅ||ಕಿ|| 00.00/- 4). ಅರ್ಧ ಉರಿದ ಮೇಣದ ಬತ್ತಿ ತುಂಡುಗಳು-04, ಅ||ಕಿ|| 00.00/- ರೂಪಾಯಿ ನೇದವುಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಶಶಿಕುಮಾರ ಸಿ. ಆರ್, ಪಿ.ಎಸ್.ಐ (ಕಾ&ಸು-1), ಹೊನ್ನಾವರ ಪೊಲೀಸ್ ಠಾಣೆ ರವರು ದಿನಾಂಕ: 21-04-2021 ರಂದು 16-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮಂಕಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 68/2021, ಕಲಂ: 380 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ದಿನಾಂಕ: 21-04-2021 ರಂದು ಬೆಳಿಗ್ಗೆ 10-30 ಗಂಟೆಯಿಂದ 11-00 ಗಂಟೆಯ ನಡುವಿನ ಅವಧಿಯಲ್ಲಿ ಪಿರ್ಯಾದಿಯು ಹೊರ ಬಂದು ಅಂಗಡಿ ಪಕ್ಕದಲ್ಲಿರುವ ಕಬ್ಬಿಣದ ರಾಡನ್ನು ಗಿರಾಕಿಗೆ ತೂಕ ಮಾಡಿ ಕೊಡುವುದನ್ನು ಗಮನಿಸಿದ ಆರೋಪಿತ ಕಳ್ಳರು ಪಿರ್ಯಾದಿಯ ಅಂಗಡಿಯ ಒಳಗೆ ಹೋಗಿ ಅಂಗಡಿಯ ಕೌಂಟರ್ ಟೇಬಲಿನ ಕ್ಯಾಷ್ ಡ್ರಾವರ್ ನಲ್ಲಿಟ್ಟ ನಗದು 1,94,000/- ರೂಪಾಯಿಗಳನ್ನು ಕಳುವು ಮಾಡಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀ ಫ್ರಾನ್ಸಿಸ್ ತಂದೆ ಡುಮಿಂಗ್ ಡಿಸೋಜಾ, ಪ್ರಾಯ-30 ವರ್ಷ, ವೃತ್ತಿ-ಹಾರ್ಡವೇರ್ ಅಂಗಡಿ, ಸಾ|| ನಗರಮನೆ, ಶೇಡಿಮೂಲೆ, ತಾ: ಹೊನ್ನಾವರ ರವರು ದಿನಾಂಕ: 21-04-2021 ರಂದು 13-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮುರ್ಡೇಶ್ವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 41/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ದೀಪಕ ತಂದೆ ಮಂಜುನಾಥ ನಾಯ್ಕ, ಪ್ರಾಯ-26 ವರ್ಷ, ವೃತ್ತಿ-ಗೂಡಂಗಡಿ ವ್ಯಾಪಾರ, ಸಾ|| ತೆಂಗಾರ, ಬೈಲೂರ, ತಾ: ಭಟ್ಕಳ. ಈತನು ದಿನಾಂಕ: 21-04-2021 ರಂದು 18-05 ಗಂಟೆಗೆ ಮುರ್ಡೇಶ್ವರ ಠಾಣಾ ವ್ಯಾಪ್ತಿಯ ಮುರ್ಡೇಶ್ವರದ ಕೆ.ಎಸ್.ಆರ್.ಟಿ.ಸಿ ಬಸ್ ಸ್ಟ್ಯಾಂಡ್ ಹತ್ತಿರದ ಶ್ರೀ ನಾಟ್ಯ ಗಣೇಶ ಮೊಬೈಲ್ ಅಂಗಡಿಯ ಪಕ್ಕದ ತನ್ನ ಗೂಡಂಗಡಿಯ ಎದುರಿನ ಸಾರ್ವಜನಿಕ ಸ್ಥಳದಲ್ಲಿ ತನ್ನ ಲಾಭಕ್ಕೋಸ್ಕರ ಬರ-ಹೋಗುವ ಜನರನ್ನು ಸೇರಿಸಿಕೊಂಡು ಓ.ಸಿ ಮಟಕಾ ಜೂಗಾರಾಟ ನಡೆಸುತ್ತಿರುವಾಗ ಪಿರ್ಯಾದಿಯವರು ಠಾಣಾ ಸಿಬ್ಬಂದಿಗಳು ಹಾಗೂ ಪಂಚರ ಜೊತೆ ಸೇರಿ ದಾಳಿ ಮಾಡಿದ ಕಾಲಕ್ಕೆ ಓ.ಸಿ ಮಟಕಾ ಜೂಗಾರಾಟದ ಸಲಕರಣೆಗಳಾದ ಅಂಕೆ-ಸಂಖ್ಯೆ ಬರೆದ ಚೀಟಿ-01, ಬಾಲ್ ಪೆನ್-01 ಹಾಗೂ ನಗದು ಹಣ 340/- ರೂಪಾಯಿ ನೇದವುಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ರವೀಂದ್ರ ಎಮ್. ಬಿರಾದಾರ ಪಿ.ಎಸ್.ಐ (ಕಾ&ಸು), ಮುರ್ಡೇಶ್ವರ ಪೊಲೀಸ್ ಠಾಣೆ ರವರು ದಿನಾಂಕ: 21-04-2021 ರಂದು 19-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 58/2021, ಕಲಂ: 4, 12 THE KARNATAKA PREVENTION OF SLAUGHTER AND PRESERVATION OF CATTLE ORDINANCE-2020 ಮತ್ತು ಕಲಂ: 192 ಎಮ್.ವಿ ಎಕ್ಟ್ ಹಾಗೂ ಕಲಂ: 379, 429 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಸಾಧಿಕ್ ತಂದೆ ಬಾಬಾಜಾನ್ ಲೋಹಾರ, ಪ್ರಾಯ-25 ವರ್ಷ, ವೃತ್ತಿ-ಚಾಲಕ, ಸಾ|| ಕೋಟೆಕೆರೆ ಓಣಿ, ತಾ: ಹಾನಗಲ್, ಜಿ: ಹಾವೇರಿ, 2]. ಮಹ್ಮದ್ ರಿಜ್ವಾನ್ ತಂದೆ ಹುಸೇನಸಾಬ್ ಮನವಳ್ಳಿ, ಪ್ರಾಯ-19 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕಂಚಗಾರ ಓಣಿ, ತಾ: ಹಾನಗಲ್, ಜಿ: ಹಾವೇರಿ. ಈ ನಮೂದಿತ ಆರೋಪಿತರು ದಿನಾಂಕ 21-04-2021 ರಂದು ಬೆಳಿಗ್ಗೆ 11-30 ಗಂಟೆಯ ಸಮಯಕ್ಕೆ ಸಿಲ್ವರ್ ಬಣ್ಣದ ಇನೋವಾ ಕಾರ್ ನಂ: ಕೆ.ಎ-25/ಪಿ-3357 ನೇದರ ಹಿಂಬದಿಯಲ್ಲಿ ಸುಮಾರು 80,000/- ರೂಪಾಯಿ ಮೌಲ್ಯದ ಸುಮಾರು 400 ಕೆ.ಜಿ ಆಗುವಷ್ಟು ದನದ ಮಾಂಸವನ್ನು ಮಾರಾಟ ಮಾಡುವ ಉದ್ದೇಶದಿಂದ ವಾಹನದಲ್ಲಿ ಸಕ್ಷಮ ಪ್ರಾಧಿಕಾರದಿಂದ ಸಾಗಾಟ ಮಾಡಲು ಪರವಾನಿಗೆ ಪಡೆಯದೇ ಎಲ್ಲಿಂದಲೋ ಕಳುವು ಮಾಡಿಕೊಂಡು ವಾಹನದಲ್ಲಿ ತುಂಬಿ ಸಾಗಾಟ ಮಾಡುತ್ತಿದ್ದಾಗ ಶಿರಾಲಿ ಚೆಕ್ ಪೋಸ್ಟಿನಲ್ಲಿ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಎಚ್. ಓಂಕಾರಪ್ಪ, ಪಿ.ಎಸ್.ಐ, ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ ರವರು ದಿನಾಂಕ: 21-04-2021 ರಂದು 13-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 71/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಶಿವಾಜಿ ತಂದೆ ಸೋಮಣ್ಣ ಕಾಂಬಳೆ, ಪ್ರಾಯ-47 ವರ್ಷ, ವೃತ್ತಿ-ಚಾಲಕ, ಸಾ|| ಹೊಸಳ್ಳಿ, ತಾ: ಯಲ್ಲಾಪುರ (ಲಾರಿ ನಂ: ಕೆ.ಎ-47/2129 ನೇದರ ಚಾಲಕ). ಈತನು ದಿನಾಂಕ: 21-04-2021 ರಂದು ಬೆಳಿಗ್ಗೆ ಸುಮಾರು 11-45 ಗಂಟೆಗೆ ಯಲ್ಲಾಪುರ ತಾಲೂಕಿನ ತಾಟಾವಾಳ ಗ್ರಾಮದಲ್ಲಿ ಹಾದು ಹೋದ ರಾಜ್ಯ ಹೆದ್ದಾರಿ ಸಂಖ್ಯೆ-93 ರಲ್ಲಿ ತನ್ನ ಬಾಬ್ತು ಲಾರಿ ನಂ: ಕೆ.ಎ-47/2129 ನೇದನ್ನು ಯಲ್ಲಾಪುರ ಕಡೆಯಿಂದ ಹಳಿಯಾಳ ಕಡೆಗೆ ಅತೀವೇಗವಾಗಿ ಮತ್ತು ನಿಷ್ಕಾಳಜಿಯಿಂದ ಚಲಾಯಿಸಿಕೊಂಡು ಬಂದು, ಯಾವುದೇ ಲೈಟ್ ಹಾಗೂ ಸಿಗ್ನಲ್ ನೀಡದೇ, ತನ್ನ ವಾಹನವನ್ನು ಒಮ್ಮಲೇ ಎಡಬದಿಗೆ ತಿರುಗಿಸಿದರಿಂದ, ಅದೇ ವೇಳೆಗೆ ತನ್ನ ಹಿಂದೆ ಯಲ್ಲಾಪುರ ಕಡೆಯಿಂದ ಹಳಿಯಾಳ ಕಡೆಗೆ ಪಿರ್ಯಾದಿಯವರು ಚಲಾಯಿಸಿಕೊಂಡು ಬರುತ್ತಿದ್ದ ಮೋಟಾರ್ ಸೈಕಲ್ ನಂ: ಕೆ.ಎ-63/ಜೆ-3971 ನೇದಕ್ಕೆ ಲಾರಿಯ ಹಿಂಬದಿಯ ಬಾಡಿ ತಾಗಿಸಿ ಪಿರ್ಯಾದಿಯವರಿಗೆ ಮೋಟಾರ್ ಸೈಕಲ್ ಸಮೇತ ರಸ್ತೆಯಲ್ಲಿ ಬೀಳಿಸುವಂತೆ ಮಾಡಿ, ಪಿರ್ಯಾದಿಯವರ ಮೈ ಕೈಗೆ ಗಾಯನೋವು ಪಡಿಸಿ, ಎರಡು ವಾಹನಗಳನ್ನು ಜಖಂಗೊಳಿಸಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ರಾಘವೇಂದ್ರ ತಂದೆ ದೇವೇಂದ್ರ ವಾಡಕರ, ಪ್ರಾಯ-27 ವರ್ಷ, ವೃತ್ತಿ-ಕ್ಷೌರಿಕ ಕೆಲಸ, ಸಾ|| ಟೌನ್ ಶಿಪ್, ಬಾಂಬೆಚಾಳ, ದಾಂಡೇಲಿ ರವರು ದಿನಾಂಕ: 21-04-2021 ರಂದು 22-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಬನವಾಸಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 44/2021, ಕಲಂ: 15(ಎ), 32(3) ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ರಾಜಗೋಪಾಲ ತಂದೆ ಕನ್ನಪ್ಪ ಅಂಬಿಗ, ಪ್ರಾಯ-53 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಮೊಗವಳ್ಳಿ, ತಾ: ಶಿರಸಿ. ಈತನು ದಿನಾಂಕ: 21-04-2019 ರಂದು 18-30 ಗಂಟೆಗೆ ಮೊಗವಳ್ಳಿ ಊರಿನ ತನ್ನ ಮನೆಯ ಎದುರಿನ ಸಾರ್ವಜನಿಕ ಸ್ಥಳದ ತಾತ್ಕಾಲಿಕ ಶೆಡ್ಡಿನಲ್ಲಿ ಸಾರ್ವಜನಿಕರಿಗೆ ಮದ್ಯ ಸೇವಿಸಲು ಅನುವು ಮಾಡಿಕೊಡುತ್ತಿರುವಾಗ HAYWARDS CHEERS WHISKY-90 ML ಅಳತೆಯ ಟೆಟ್ರಾ ಪ್ಯಾಕೆಟ್ ಗಳು-04, ಅ||ಕಿ|| 141/- ರೂಪಾಯಿ, HAYWARDS CHEERS WHISKY-90 ML ಅಳತೆಯ ಖಾಲಿ ಟೆಟ್ರಾ ಪ್ಯಾಕೆಟ್ ಗಳು-02, ಅ||ಕಿ|| 00.00/- ರೂಪಾಯಿ, ಪ್ಲಾಸ್ಟಿಕ್ ಗ್ಲಾಸ್-02, ಅ||ಕಿ|| 00.00/- ರೂಪಾಯಿ ಹಾಗೂ ನಗದು ಹಣ 110/- ರೂಪಾಯಿ ನೇದವು ಗಳೊಂದಿಗೆ ಪಿರ್ಯಾದಿಯವರು ದಾಳಿ ಮಾಡಿ ಕಾಲಕ್ಕೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಹಣಮಂತ ಬಿರಾದಾರ, ಪಿ.ಎಸ್.ಐ (ಕಾ&ಸು), ಬನವಾಸಿ ಪೊಲೀಸ್ ಠಾಣೆ ರವರು ದಿನಾಂಕ: 21-04-2021 ರಂದು 20-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 21-04-2021

at 00:00 hrs to 24:00 hrs

 

ಅಂಕೋಲಾ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 24/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ಗಜಾನನ ತಂದೆ ಶಂಕರ ನಾಯ್ಕ, ಪ್ರಾಯ-65 ವರ್ಷ, ವೃತ್ತಿ-ಅರಣ್ಯ ಇಲಾಖೆ ನಿವೃತ್ತ ನೌಕರ, ಸಾ|| ಬೇಳಾಬಂದರ, ತಾ: ಅಂಕೋಲಾ. ಪಿರ್ಯಾದಿಯ ತಂದೆಯಾದ ಈತನು ಸುಮಾರು 3 ವರ್ಷಗಳ ಹಿಂದೆ ತನ್ನ ತಮ್ಮ ವಿನಾಯಕ ಈತನು ಮೃತಪಟ್ಟಿರುವ ವಿಷಯವನ್ನು ಅತೀಯಾಗಿ ಮನಸ್ಸಿಗೆ ಹಚ್ಚಿಕೊಂಡು ಚಿಂತಿಸುತ್ತಿದ್ದವರು, ದಿನಾಂಕ: 21-04-2021 ರಂದು ಬೆಳಿಗ್ಗೆ ಅಂಕೋಲಾ ಪೇಟೆಯಲ್ಲಿ ಕೆಲಸವಿರುವುದಾಗಿ ಹೇಳಿ ಹೋದವರು ಸಮಯ 12-00 ಗಂಟೆಯಿಂದ 13-30 ಗಂಟೆಯ ನಡುವಿನ ಅವಧಿಯಲ್ಲಿ ಯಾವುದೋ ಕಾರಣಕ್ಕೆ ಅಂಕೋಲಾ ತಾಲೂಕಿನ ಹಟ್ಟಿಕೇರಿ ಗ್ರಾಮದಲ್ಲಿರುವ ಕೊಂಕಣ ರೈಲ್ವೇ ಹಳಿಯ ಹತ್ತಿರ ಹೋದವರು, ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ರೈಲ್ವೇ ಹಳಿಯ ಮೇಲೆ ತಲೆಯನ್ನು ಇಟ್ಟು ಚಲಿಸುತ್ತಿರುವ ರೈಲಿಗೆ ಸಿಕ್ಕಿ ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಮಾರುತಿ ತಂದೆ ಗಜಾನನ ನಾಯ್ಕ, ಸಾ|| ಬೇಳಾಬಂದರ, ತಾ: ಅಂಕೋಲಾ ರವರು ದಿನಾಂಕ: 21-04-2021 ರಂದು 14-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಕುಮಟಾ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 11/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ಜಟ್ಟಿ ತಂದೆ ನಾಗು ಮುಕ್ರಿ, ಪ್ರಾಯ-55 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಹಳಕಾರ, ತಾ: ಕುಮಟಾ. ಪಿರ್ಯಾದಿಯು ತನ್ನ ತಂದೆ ಹಾಗೂ ಇತರೆ ಕೆಲಸಗಾರರೊಂದಿಗೆ ಹೊಲನಗದ್ದೆಯ ರಾಮಚಂದ್ರ ನಾರಾಯಣ ಪಟಗಾರ ಇವರ ಗದ್ದೆಯಲ್ಲಿ ಬಾವಿ ತೋಡುವ ಕೆಲಸಕ್ಕೆ ಹೋದವರು, ಬಾವಿಯ ಒಳಗೆ ಇಳಿದು 7 ಅಡಿ ಬಾವಿ ತೆಗೆದು ಮಣ್ಣು ತುಂಬಿ ಮೇಲಕ್ಕೆ ಕೊಡುತ್ತಿದ್ದವರು, ಬಾವಿಯಿಂದ ಮೇಲಕ್ಕೆ ಬಂದು ಎಲ್ಲರೊಂದಿಗೆ ಟೀ ಕುಡಿದು ನಂತರ ಬಾವಿಯೊಳೆಗೆ ಇಳಿದು ಎಲೆ ಅಡಿಕೆ ಹಾಕಿಕೊಂಡು ಪುನಃ ಕೆಲಸ ಮಾಡುತ್ತಿದ್ದಾಗ 12-00 ಗಂಟೆಯ ಸುಮಾರಿಗೆ ಕುಸಿದು ಬಿದ್ದವನಿಗೆ ವೈದ್ಯಕೀಯ ಉಪಚಾರದ ಕುರಿತು ಕುಮಟಾದ ಪಂಡಿತ್ ಆಸ್ಪತ್ರೆಗೆ ದಾಖಲಿಸಿದ್ದು, ಸಮಯ 12-15 ಗಂಟೆಗೆ ಅಲ್ಲಿ ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದು, ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಲು ವಿನಂತಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ಗಿರೀಶ ತಂದೆ ಜಟ್ಟಿ ಮುಕ್ರಿ, ಪ್ರಾಯ-23 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಹಳಕಾರ, ತಾ: ಕುಮಟಾ ರವರು ದಿನಾಂಕ: 21-04-2021 ರಂದು 13-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಮುರ್ಡೇಶ್ವರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 10/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ವೆಂಕಟೇಶ ತಂದೆ ಸುಕ್ರಯ್ಯ ದೇವಡಿಗ, ಪ್ರಾಯ-28 ವರ್ಷ, ವೃತ್ತಿ-ಹೊಟೇಲ್ ಕೆಲಸ, ಸಾ|| ಜೋಗಿ ಮನೆ, ಚಿಟ್ಟಿಹಕ್ಲ್, ಬೊಗ್ರಿಜಡ್ಡು, ಬೆಂಗ್ರೆ 1, ತಾ: ಭಟ್ಕಳ. ಪಿರ್ಯಾದಿಯ ತಮ್ಮನಾದ ಈತನು ಕಳೆದ 13 ವರ್ಷಗಳಿಂದ ಪೂಣಾದಲ್ಲಿ ಹೊಟೇಲ್ ಕೆಲಸ ಮಾಡಿಕೊಂಡಿದ್ದವನು, ಊರಿನಲ್ಲಿ ಏನಾದರು ಕಾರ್ಯಕ್ರಮ ಇದ್ದರೆ ವರ್ಷಕ್ಕೆ ಒಂದು ಬಾರಿ ಊರಿಗೆ ಬಂದು ಹೋಗುತಿದ್ದನು. ಮೃತ ವೆಂಕಟೇಶ ಈತನು ಕಳೆದ 5-6 ದಿವಸಗಳ ಹಿಂದೆ ಪೂಣಾದಿಂದ ಮುರ್ಡೇಶ್ವರಕ್ಕೆ ಬಂದು ಪೂಣಾದಲ್ಲಿ ಕೊರೋನಾ ಹೆಚ್ಚಾಗಿರುವುದರಿಂದ ಮನೆಗೆ ಹೋಗದೆ ಮುರ್ಡೇಶ್ವರದ ಪೆಟ್ರಿಶಿಯಾ ಲಾಡ್ಜಿನಲ್ಲಿ ರೂಮ್ ಮಾಡಿಕೊಂಡು ಉಳಿದುಕೊಂಡಿದ್ದವನು, ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ದಿನಾಂಕ: 21-01-2021 ರಂದು 17-30 ಗಂಟೆಯಿಂದ 20-30 ಗಂಟೆಯ ನಡುವಿನ ಅವಧಿಯಲ್ಲಿ ಪೆಟ್ರಿಶಿಯಾ ಲಾಡ್ಜಿನ ರೂಮ್ ನಂ: 105 ರಲ್ಲಿ ಕಿಟಕಿಯ ಮೇಲ್ಬದಿಯ ಕಬ್ಬಿಣದ ಸರಳಿಗೆ ಒಂದು ಟವೆಲ್ ಕಟ್ಟಿ, ಟವೆಲಿನ ಇನ್ನೊಂದು ತುದಿಯನ್ನು ತನ್ನ ಕುತ್ತಿಗೆಗೆ ಕಟ್ಟಿಕೊಂಡು ತನ್ನ ಕಾಲುಗಳನ್ನು ಮುಂದಕ್ಕೆ ಸರಿಸಿ ಕುತ್ತಿಗೆಗೆ ಉರುಳು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಗಣಪತಿ ತಂದೆ ಸುಕ್ರಯ್ಯ ದೇವಡಿಗ, ಪ್ರಾಯ-37 ವರ್ಷ, ವೃತ್ತಿ-ಮೇಸ್ತ್ರಿ ಕೆಲಸ, ಸಾ|| ಜೋಗಿ ಮನೆ, ಚಿಟ್ಟಿಹಕ್ಲ್, ಬೊಗ್ರಿಜಡ್ಡು, ಬೆಂಗ್ರೆ 1, ತಾ: ಭಟ್ಕಳ ರವರು ದಿನಾಂಕ: 21-04-2021 ರಂದು 22-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

ಇತ್ತೀಚಿನ ನವೀಕರಣ​ : 22-04-2021 05:53 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080