Daily District Crime Report
Date:- 21-04-2022
at 00:00 hrs to 24:00 hrs
ಕಾರವಾರ ಶಹರ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 26/2022, ಕಲಂ: 87 ಕರ್ನಾಟಕ ಪೊಲೀಸ್ ಎಕ್ಟ್ ನೇದ್ದರ ವಿವರ...... ನಮೂದಿತ ಆರೋಪಿತರು 1]. ವಿಜಯ ತಂದೆ ನರೇಂದ್ರ ವೆಂಗುಲೇಕರ, ಪ್ರಾಯ-28 ವರ್ಷ, ವೃತ್ತಿ-ಆಟೋ ಚಾಲಕ, ಸಾ|| ಕೆ.ಇ.ಬಿ ರಸ್ತೆ, ಕೋಣೆವಾಡಾ, ಕಾರವಾರ, 2]. ಸುರೇಶ ತಂದೆ ಭೀಮರೆಡ್ಡಿ ಪಾಟೀಲ್, ಪ್ರಾಯ-34 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಗಾಂಧಿನಗರ, ಗದಗ, ಹಾಲಿ ಸಾ|| ಮುರಳೀಧರ ಮಠದ ಹತ್ತಿರ, ಕಾರವಾರ, 3]. ಶ್ರೀನಿವಾಸ ತಂದೆ ಸುಬ್ರಾಯ ಶೆಟ್ಟಿ, ಪ್ರಾಯ-48 ವರ್ಷ, ವೃತ್ತಿ-ಅಡುಗೆ ಕೆಲಸ, ಸಾ|| ಬಾಂಡಿಸಿಟ್ಟಾ, ಕಾರವಾರ, 4]. ಕಲ್ಪೇಶ ತಂದೆ ಶೇಖರ ಉಳ್ವೇಕರ್, ಪ್ರಾಯ-34 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕೆ.ಇ.ಬಿ ಹತ್ತಿರ, ಕೋಣೆವಾಡಾ, ಕಾರವಾರ, 5]. ಹಸನ್ ತಂದೆ ಬಾಷಾ ಅತ್ತರ್, ಪ್ರಾಯ-24 ವರ್ಷ, ವೃತ್ತಿ-ರಿಕ್ಷಾ ಚಾಲಕ, ಸಾ|| ಕೆ.ಇ.ಬಿ ಹತ್ತಿರ, ಕೋಣೆವಾಡಾ, ಕಾರವಾರ, 6]. ಜಾಕೀರ್ ತಂದೆ ಅಬ್ದುಲ್ ಮಕಾಂದಾರ್, ಪ್ರಾಯ-26 ವರ್ಷ, ವೃತ್ತಿ-ತರಕಾರಿ ವ್ಯಾಪಾರ, ಸಾ|| ಶಿರವಾಡ, ಕಾರವಾರ, 7]. ಲಕ್ಷ್ಮಣ ರಾಜು ವಡ್ಡರ್, ಪ್ರಾಯ-35 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಬಂಗಾರಪ್ಪ ನಗರ, ಶಿರವಾಡ, ಕಾರವಾರ. ಈ ನಮೂದಿತ ಆರೋಪಿತರು ದಿನಾಂಕ: 20-04-2022 ರಂದು 16-20 ಗಂಟೆಗೆ ಕಾರವಾರ ಗಾಂಧಿನಗರದ ಒಳ ಚರಂಡಿ ಶುದ್ಧೀಕರಣ ಘಟಕದ ಹತ್ತಿರ ರಸ್ತೆಯ ಪಕ್ಕ ಗಿಡ-ಗಂಟಿಗಳ ಮಧ್ಯೆ ಸಾರ್ವಜನಿಕ ಸ್ಥಳದಲ್ಲಿ ಜೊತೆಗೂಡಿ ಗುಂಪಾಗಿ ಕುಳಿತು ಅಂದರ್-ಬಾಹರ್ ಎಂಬ ಇಸ್ಪೀಟ್ ಜುಗಾರಾಟ ಆಡುತ್ತಿದ್ದಾಗ ಪಿರ್ಯಾದಿಯವರು ಪಂಚರೊಂದಿಗೆ ಸೇರಿ ದಾಳಿ ನಡೆಸಿ, ಆರೋಪಿ 1 ರಿಂದ 3 ನೇಯವರನ್ನು ಹಾಗೂ ಅಂದರ್-ಬಾಹರ್ ಜುಗಾರಾಟಕ್ಕೆ ಬಳಸಿದ ಒಟ್ಟೂ ನಗದು ಹಣ 1,740/- ರೂಪಾಯಿ ಹಾಗೂ 52 ಇಸ್ಪೀಟ್ ಎಲೆಗಳು ಮತ್ತು ಸಿಮೆಂಟ್ ಚೀಲದೊಂದಿಗೆ ಆರೋಪಿ 1 ರಿಂದ 3 ನೇಯವರನ್ನು ವಶಕ್ಕೆ ಪಡೆದುಕೊಂಡಿದ್ದು, ದಾಳಿಯ ವೇಳೆ ಆರೋಪಿ 4 ರಿಂದ 7 ನೇಯವರು ಓಡಿ ಹೋಗಿ ಪರಾರಿಯಾದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಸಂತೋಷಕುಮಾರ ಎಮ್, ಪಿ.ಎಸ್.ಐ, ಕಾರವಾರ ಶಹರ ಪೊಲೀಸ್ ಠಾಣೆ ರವರು ದಿನಾಂಕ: 21-04-2022 ರಂದು 12-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಕಾರವಾರ ಶಹರ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 27/2022, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್ ನೇದ್ದರ ವಿವರ...... ನಮೂದಿತ ಆರೋಪಿತರು 1]. ಜೋನ್ ಶಾಂತಾ ಫರ್ನಾಂಡಿಸ್, ಪ್ರಾಯ-50 ವರ್ಷ, ವೃತ್ತಿ-ಅಂಗಡಿ ವ್ಯಾಪಾರ, ಸಾ|| ಹೈ ಚರ್ಚ್ ಹತ್ತಿರ, ದೋಬಿಘಾಟ್ ರಸ್ತೆ, ಕಾರವಾರ, 2]. ವಿನಾಯಕ ನೊಗಾ ಹರಿಕಂತ್ರ, ಸಾ|| ಸೀಬರ್ಡ್ ಕಾಲೋನಿ, ಚಿತ್ತಾಕುಲಾ, ಕಾರವಾರ. ಈ ನಮೂದಿತ ಆರೋಪಿತರಲ್ಲಿ ಆರೋಪಿ 1 ನೇಯವನು ದಿನಾಂಕ: 20-04-2022 ರಂದು 17-15 ಘಂಟೆಗೆ ತನ್ನ ಲಾಭದ ಸಲುವಾಗಿ ಕಾರವಾರ ಬೈತಕೋಲ್ ಪೋರ್ಟ್ ಹತ್ತಿರ ಪೋಸ್ಟ್ ಆಫೀಸ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ 01/- ರೂಪಾಯಿಗೆ 80/- ರೂಪಾಯಿ ಕೊಡುವ ಷರತ್ತಿನ ಮೇಲೆ ಓ.ಸಿ ಮಟಕಾ ಜೂಜಾಟದ ಅದೃಷ್ಟದ ಅಂಕೆ-ಸಂಖ್ಯೆಗಳ ಮೇಲೆ ಪಂಥ ಕಟ್ಟಿ ಸಾರ್ವಜನಿಕರಿಂದ ಹಣ ಪಡೆದುಕೊಂಡು ಓ.ಸಿ ಚೀಟಿ ಬರೆದುಕೊಟ್ಟು ಓ.ಸಿ ಮಟಕಾ ಜೂಜಾಟ ನಡೆಸುತ್ತಿರುವಾಗ ದಾಳಿಯ ಕಾಲ ಅಂಕೆ-ಸಂಖ್ಯೆ ಬರೆದ ಕಾಗದ, ಬಾಲ್ ಪೆನ್ ಮತ್ತು ನಗದು ಹಣ 1,100/- ರೂಪಾಯಿಯೊಂದಿಗೆ ಸೆರೆ ಸಿಕ್ಕಿದ್ದು ಹಾಗೂ ಸದರಿ ಹಣವನ್ನು ಆರೋಪಿ 2 ನೇಯವನಿಗೆ ಕೊಡುತ್ತಿದ್ದುದಾಗಿ ತಿಳಿಸಿದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಸಿದ್ದಪ್ಪಾ ಎಸ್. ಬಿಳಗಿ, ಪೊಲೀಸ್ ನಿರೀಕ್ಷಕರು, ಕಾರವಾರ ಶಹರ ಪೊಲೀಸ್ ಠಾಣೆ ರವರು ದಿನಾಂಕ: 21-04-2022 ರಂದು 12-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಕಾರವಾರ ಶಹರ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 28/2022, ಕಲಂ: 32, 34 ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ಹನುಮಂತ ತಂದೆ ಬಸಪ್ಪ ಮಾಸ್ತಕಟ್ಟಿ, ಪ್ರಾಯ-27 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ನೀರಲಕೊಪ್ಪ, ಕುಷ್ಟಗಿ, ಕೊಪ್ಪಳ, ಹಾಲಿ ಸಾ|| ಗುನಗಿವಾಡಾ, ಕಾರವಾರ. ಈತನು ದಿನಾಂಕ: 21-04-2022 ರಂದು 13-10 ಘಂಟೆಯ ಸುಮಾರಿಗೆ ಕಾರವಾರ ಬಸ್ ಸ್ಟ್ಯಾಂಡ್ ಹತ್ತಿರ ಹೆಗೆಡೆಕಟ್ಟಾ ಆಸ್ಪತ್ರೆ ಪಕ್ಕದ ಮೈನಕೇರಿ ಓಣಿ ಬಳಿ ಸಾರ್ವಜನಿಕ ಸ್ಥಳದಲ್ಲಿ ತನ್ನ ತಾಬಾ ಯಾವುದೇ ಪಾಸ್ ಅಥವಾ ಪರ್ಮಿಟ್ ಇಟ್ಟುಕೊಳ್ಳದೇ ಸುಮಾರು 2,250/- ರೂಪಾಯಿ ಬೆಲೆಬಾಳುವ ಗೋವಾ ರಾಜ್ಯ ತಯಾರಿಕೆಯ LIGHT HORSE Premium blended malt WHISKY 750 ML, for sale in Goa ಅಂತಾ ನಮೂದಿರುವ 15 ಸರಾಯಿ ತುಂಬಿದ ಬಾಟಲಿಗಳನ್ನು ತನ್ನ ತಾಬಾ ಇಟ್ಟುಕೊಂಡು ಸಾಗಾಟ ಮಾಡುವ ತಯಾರಿಯಲ್ಲಿರುವಾಗ ಪಿರ್ಯಾದಿಯವರು ಸಿಬ್ಬಂದಿಯವರೊಂದಿಗೆ ಸೇರಿ ದಾಳಿ ನಡೆಸಿ ಸ್ವತ್ತುಗಳೊಂದಿಗೆ ಆರೋಪಿತನನ್ನು ವಶಕ್ಕೆ ಪಡೆದುಕೊಂಡ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಸಂತೋಷಕುಮಾರ ಎಮ್, ಪಿ.ಎಸ್.ಐ, ಕಾರವಾರ ಶಹರ ಪೊಲೀಸ್ ಠಾಣೆ ರವರು ದಿನಾಂಕ: 21-04-2022 ರಂದು 15-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಕಾರವಾರ ಶಹರ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 28/2022, ಕಲಂ: 32, 34 ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತೆ ಶ್ರೀಮತಿ ಸಾವಿತ್ರಿ ಕೋಂ. ಹುವಾ ಹರಿಕಂತ್ರ, ಪ್ರಾಯ-47 ವರ್ಷ, ವೃತ್ತಿ-ಮೀನು ವ್ಯಾಪಾರ, ಸಾ|| ಲಿಂಗಾ ಮುಂಗಾ ರೋಡ್ ಹತ್ತಿರ, ಹರಿಕಂತ್ರವಾಡಾ, ಕಾರವಾರ. ಇವಳು ದಿನಾಂಕ: 21-04-2022 ರಂದು 14-15 ಘಂಟೆಯ ಸುಮಾರಿಗೆ ಕಾರವಾರದ ಲಿಂಗಾ ಮುಂಗಾ ರೋಡ್ ಸಮೀಪ ಹರಿಕಂತ್ರವಾಡಕ್ಕೆ ಹೋಗುವ ಓಣಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ತನ್ನ ತಾಬಾ ಯಾವುದೇ ಪಾಸ್ ಅಥವಾ ಪರ್ಮಿಟ್ ಇಟ್ಟುಕೊಳ್ಳದೇ ಸುಮಾರು 5,250/- ರೂಪಾಯಿ ಬೆಲೆಬಾಳುವ ಗೋವಾ ರಾಜ್ಯ ತಯಾರಿಕೆಯ LIGHT HORSE Premium blended malt WHISKY, 750 ML ಅಂತಾ ನಮೂದಿರುವ 23 ಸರಾಯಿ ತುಂಬಿದ ಬಾಟಲಿಗಳು ಹಾಗೂ ಉಔಂ GOA Special Fenny, 750 ML for sale in Goa ಅಂತಾ ನಮೂದಿರುವ 12 ಸರಾಯಿ ತುಂಬಿದ ಬಾಟಲಿಗಳನ್ನು ತನ್ನ ತಾಬಾ ಇಟ್ಟುಕೊಂಡು ಸಾಗಾಟ ಮಾಡುವ ತಯಾರಿಯಲ್ಲಿರುವಾಗ ಪಿರ್ಯಾದಿಯವರು ಸಿಬ್ಬಂದಿಯವರೊಂದಿಗೆ ಸೇರಿ ದಾಳಿ ನಡೆಸಿ ಸ್ವತ್ತುಗಳೊಂದಿಗೆ ಆರೋಪಿತಳನ್ನು ವಶಕ್ಕೆ ಪಡೆದುಕೊಂಡ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಕುಷ್ಣಗೌಡ ಅರಕೇರಿ, ಪಿ.ಎಸ್.ಐ, ಕಾರವಾರ ಶಹರ ಪೊಲೀಸ್ ಠಾಣೆ ರವರು ದಿನಾಂಕ: 21-04-2022 ರಂದು 16-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಅಂಕೋಲಾ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 69/2022, ಕಲಂ: 15(ಎ), 32(3) ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ಅವಿನಾಶ ತಂದೆ ಗುರು ನಾಯ್ಕ, ಪ್ರಾಯ-28 ವರ್ಷ, ವೃತ್ತಿ-ಹೊಟೇಲ್ ವ್ಯಾಪಾರ, ಸಾ|| ಐ.ಟಿ.ಐ ಕಾಲೇಜ್ ಹತ್ತಿರ, ಬೇಳಾಬಂದರ, ತಾ: ಅಂಕೋಲಾ. ಈತನು ದಿನಾಂಕ: 21-04-2022 ರಂದು 13-45 ಗಂಟೆಯ ಸುಮಾರಿಗೆ ಅಂಕೋಲಾ ತಾಲೂಕಿನ ಬಾಳೇಗುಳಿಯ ಕೃಷ್ಣಾಪುರ ಕ್ರಾಸ್ ಹತ್ತಿರ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ಬದಿಯಲ್ಲಿ ಇರುವ ತನ್ನ ಸಮೃದ್ಧಿ ಹೊಟೇಲಿನಲ್ಲಿ ಯಾವುದೇ ಪಾಸ್ ಅಥವಾ ಪರವಾನಿಗೆ ಪಡೆದುಕೊಳ್ಳದೇ ತನ್ನ ಲಾಭಕ್ಕಾಗಿ ಅನಧೀಕೃತವಾಗಿ ತನ್ನ ಹೊಟೇಲಿನ ಹಿಂಬಂದಿಯ ಕುಳಿತುಕೊಳ್ಳುವ ಕಟ್ಟೆಯ ಮೇಲೆ ಸಾರ್ವಜನಿಕರಿಗೆ ಸರಾಯಿ ಕುಡಿಯಲು ಅವಕಾಶ ಮಾಡಿಕೊಟ್ಟಿದ್ದಲ್ಲದೇ, ದಾಳಿಯ ಕಾಲಕ್ಕೆ ಸುಮಾರು 531/- ರೂಪಾಯಿ ಮೌಲ್ಯದ ತಲಾ 180 ML £À BAGPIPER DULUXE WHISKY ಸ್ಯಾಚೆಟ್ ಗಳು-05, BAGPIPER DULUXE WHISKY ಅಂತಾ ಲೇಬಲ್ ಇರುವ ಖಾಲಿ ಸ್ಯಾಚೆಟ್ ಗಳು-02, ಗಾಜಿನ ಗ್ಲಾಸಗಳು-2, ನೀರಿನ ಖಾಲಿ ಪ್ಲಾಸ್ಟಿಕ್ ಬಾಟಲಿ-01 ಮತ್ತು ನಗದು ಹಣ 200/- ರೂಪಾಯಿಯೊಂದಿಗೆ ಸಿಕ್ಕ ಬಗೆ ಪಿರ್ಯಾದಿ ಸ||ತ|| ಶ್ರೀ ಸಂತೋಷ ಶೆಟ್ಟಿ, ಪೊಲೀಸ್ ನಿರೀಕ್ಷಕರು, ಅಂಕೋಲಾ ಪೊಲೀಸ್ ಠಾಣೆ ರವರು ದಿನಾಂಕ: 21-04-2022 ರಂದು 13-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಅಂಕೋಲಾ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 70/2022, ಕಲಂ: 32, 34 ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತರು 1]. ನಾಸೀರುದ್ದೀನ್ ತಂದೆ ರಾಜಾಸಾಬ್ ಸೈಯದ್, ಪ್ರಾಯ-30 ವರ್ಷ, ವೃತ್ತಿ-ಕಿರಾಣಿ ಅಂಗಡಿ ಕೆಲಸ, ಸಾ|| ಸುಂಕಸಾಳ, ತಾ: ಅಂಕೋಲಾ, 2]. ಶ್ರೀಮತಿ ನಮೀಜಾ ಗಂಡ ರಾಜಾಸಾಬ್ ಸೈಯದ್, ಪ್ರಾಯ-52 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಸುಂಕಸಾಳ, ತಾ: ಅಂಕೋಲಾ. ಈ ನಮೂದಿತ ಆರೋಪಿತರು ದಿನಾಂಕ: 21-04-2022 ರಂದು 16-45 ಗಂಟೆಯ ಸುಮಾರಿಗೆ ಅಂಕೋಲಾ ತಾಲೂಕಿನ ಸುಂಕಸಾಳ ಗ್ರಾಮದ ಬಸ್ ನಿಲ್ದಾಣದ ಹತ್ತಿರದಲ್ಲಿ ಯಾವುದೇ ಪಾಸ್ ಅಥವಾ ಪರವಾನಿಗೆ ಇಲ್ಲದೇ ಸುಮಾರು 3,372/- ರೂಪಾಯಿ ಮೌಲ್ಯದ ಕರ್ನಾಟಕ ರಾಜ್ಯದ ತಲಾ 90 ML ನ HAYWARDS CHEERS WHISKY ಸ್ಯಾಚೆಟ್ ಗಳು-96. ಇವುಗಳನ್ನು ಅಕ್ರಮವಾಗಿ ಸಾಗಾಟ ಮಾಡಿಕೊಂಡು ತಂದು ಮಾರಾಟ ಮಾಡುತ್ತಿದ್ದಾಗ ದಾಳಿಯ ಕಾಲಕ್ಕೆ ಸ್ವತ್ತುಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಪ್ರವೀಣಕುಮಾರ ಆರ್, ಪಿ.ಎಸ್.ಐ (ಕಾ&ಸು), ಅಂಕೋಲಾ ಪೊಲೀಸ್ ಠಾಣೆ ರವರು ದಿನಾಂಕ: 21-04-2022 ರಂದು 19-25 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಗೋಕರ್ಣ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 23/2022, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್ ನೇದ್ದರ ವಿವರ...... ನಮೂದಿತ ಆರೋಪಿತ ಸಾಯಿನಾಥ ತಂದೆ ಗಣಪತಿ ಭಂಡಾರಿ, ಪ್ರಾಯ-1 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಮೇಲಿನ ಹಿರೇಗುತ್ತಿ, ತಾ: ಕುಮಟಾ. ಈತನು ದಿನಾಂಕ: 21-04-2022 ರಂದು 13-45 ಗಂಟೆಯ ಸುಮಾರಿಗೆ ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯ ಹಿರೇಗುತ್ತಿ ಗ್ರಾಮದ ಕೊಂಕಣ ಮಾಸ್ತಿ ದೇವಸ್ಥಾನದ ಎದುರಿನ ರಾಷ್ಟ್ರೀಯ ಹೆದ್ದಾರಿಯ ರಸ್ತೆ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಅಂಕೆ-ಸಂಖ್ಯೆಗಳ ಮೇಲೆ ಹಣದ ಪಂಥವನ್ನು ಜನರಿಂದ ಕಟ್ಟಿಸಿಕೊಂಡು ಅವರಿಗೆ ಓ.ಸಿ ಚೀಟಿ ಬರೆದುಕೊಡುವಾಗ ಪಿರ್ಯಾದಿಯವರು ದಾಳಿ ಮಾಡಿದ ಕಾಲಕ್ಕೆ 1). ಅಂಕೆ-ಸಂಖ್ಯೆ ಬರೆದ ಹಾಳೆ-01, 2) ಅಂಕೆ-ಸಂಖ್ಯೆ ಬರೆದುಕೊಡಲು ಇಟ್ಟುಕೊಂಡಿದ್ದ ಖಾಲಿ ಚೀಟಿಗಳು-03, 3). ಬಾಲ್ ಪೆನ್-01, 4). ವಿವಿಧ ಮೌಲ್ಯದ ನಗದು ಹಣ 2,360/- ರೂಪಾಯಿಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ವಸಂತ ಆರ್. ಆಚಾರ್ಯ, ಪೊಲೀಸ್ ನಿರೀಕ್ಷಕರು, ಗೋಕರ್ಣ ಪೊಲೀಸ್ ಠಾಣೆ ರವರು ದಿನಾಂಕ: 21-04-2022 ರಂದು 19-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಕುಮಟಾ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 87/2022, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್ ನೇದ್ದರ ವಿವರ...... ನಮೂದಿತ ಆರೋಪಿತರು 1]. ರಾಮಾ ತಂದೆ ಮಾಸ್ತಿ ದೇಶಭಂಡಾರಿ, ಪ್ರಾಯ-50 ವರ್ಷ, ವೃತ್ತಿ-ಸೆಂಟ್ರಿಂಗ್ ಕೆಲಸ, ಸಾ|| ಅಳಕೋಡ, ಕತಗಾಲ, ತಾ: ಕುಮಟಾ, 2]. ಅಂತೋನಿ ತಂದೆ ಪ್ರಾನ್ಸಿಸ್ ಪಿಂಟೋ, ಪ್ರಾಯ-50 ವರ್ಷ, ವೃತ್ತಿ-ಗೌಂಡಿ ಕೆಲಸ, ಸಾ|| ಅಳಕೋಡ, ಕತಗಾಲ, ತಾ: ಕುಮಟಾ. ಈ ನಮೂದಿತ ಆರೋಪಿತರಲ್ಲಿ ಆರೋಪಿ 1 ನೇಯವನು ದಿನಾಂಕ: 21-04-2022 ರಂದು 11-25 ಗಂಟೆಗೆ ಕುಮಟಾ ತಾಲೂಕಿನ ಕತಗಾಲ ಕಬ್ಬರಗಿ ಕ್ರಾಸ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ತನ್ನ ಅನ್ಯಾಯದ ಲಾಭಕ್ಕಾಗಿ ಬರ-ಹೋಗುವ ಜನರಿಗೆ 01/- ರೂಪಾಯಿಗೆ 80/- ರೂಪಾಯಿ ಕೊಡುವುದಾಗಿ ಹೇಳಿ ಜನರಿಂದ ಹಣವನ್ನು ಪಡೆದುಕೊಂಡು ಅದನ್ನು ಅಂಕೆ-ಸಂಖ್ಯೆಗಳ ಮೇಲೆ ಪಂಥ ಕಟ್ಟಿ ಓ.ಸಿ ಮಟಕಾ ಜುಗಾರಾಟ ನಡೆಸುತ್ತಿದ್ದಾಗ ನಗದು ಹಣ 1,580/- ರೂಪಾಯಿ ಹಾಗೂ ಓ.ಸಿ ಆಟದ ಸಲಕರಣೆಗಳೊಂದಿಗೆ ದಾಳಿಯ ವೇಳೆ ಸಿಕ್ಕಿದ್ದು ಹಾಗೂ ಓ.ಸಿ ಮಟಕಾ ಜುಗಾರಾಟದಿಂದ ಸಂಗ್ರಹವಾದ ಹಣವನ್ನು ಓ.ಸಿ ಬುಕ್ಕಿಯಾದ ಆರೋಪಿ 2 ನೇಯವನಿಗೆ ಕೊಡುತ್ತಿದ್ದುದಾಗಿ ತಿಳಿಸಿದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ತಿಮ್ಮಪ್ಪಾ ನಾಯ,್ಕ ಪೋಲಿಸ್ ನಿರೀಕ್ಷಕರು, ಕುಮಟಾ ಪೊಲೀಸ್ ಠಾಣೆ ರವರು ದಿನಾಂಕ: 21-04-2022 ರಂದು 18-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಮುಂಡಗೋಡ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 68/2022, ಕಲಂ: 279, 338, 304(ಎ) ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಮಂಜುನಾಥ ತಂದೆ ಈರಪ್ಪ ಭೋವಿ, ಪ್ರಾಯ-31 ವರ್ಷ, ವೃತ್ತಿ-ಚಾಲಕ, ಸಾ|| ವಡ್ಡರ ಓಣಿ, ತಾ: ಮುಂಡಗೋಡ (ಟಾಟಾ ಏಸ್ ವಾಹನ ನಂ: ಕೆ.ಎ-25/ಸಿ-5779 ನೇದರ ಚಾಲಕ). ಈತನು ದಿನಾಂಕ: 21-04-2022 ರಂದು ಬೆಳಿಗ್ಗೆ 10-00 ಗಂಟೆಯ ಸುಮಾರಿಗೆ ತನ್ನ ಟಾಟಾ ಏಸ್ ವಾಹನ ನಂ: ಕೆ.ಎ-25/ಸಿ-5779 ನೇದನ್ನು ಮುಂಡಗೋಡ ತಾಲೂಕಿನ ಯಲ್ಲಾಪುರ-ಮುಂಡಗೋಡ ರಸ್ತೆಯ ಬಾಳೆಹಳ್ಳಿ ಕ್ರಾಸ್ ಹತ್ತಿರ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ, ರಸ್ತೆಯ ಪಕ್ಕದ ವಿದ್ಯುತ್ ಕಂಬಕ್ಕೆ ಡಿಕ್ಕಿ ಪಡಿಸಿ, ವಾಹನವನ್ನು ಪಲ್ಟಿ ಹೊಡಿಸಿ ಅಪಘಾತ ಪಡಿಸಿ, ವಾಹನದಲ್ಲಿದ್ದ ಪ್ರಯಾಣಿಕರಿಗೆ ಭಾರೀ ಸ್ವರೂಪದ ಗಾಯನೋವು ಪಡಿಸಿ, ಮಳು ತಂದೆ ಮಾಂಬು ಗಾವಡೆ, ಪ್ರಾಯ-21 ವರ್ಷ, ವೃತ್ತಿ-ಟಾಟಾ ಏಸ್ ವಾಹನದ ಕ್ಲೀನರ್, ಸಾ|| ಬಡ್ಡಿಗೇರಿ, ತಾ: ಮುಂಡಗೋಡ ಈತನನ್ನು ಭಾರೀ ಗಾಯನೋವಿನಿಂದ ಮೃತಪಡುವಂತೆ ಮಾಡಿದ್ದಲ್ಲದೇ, ತನ್ನ ಸ್ವಯಂಕೃತ ಅಪಘಾತದಿಂದ ತನ್ನ ಸೊಂಟ ಹಾಗೂ ಎದೆಯ ಹತ್ತಿರ ಭಾರೀ ಸ್ವರೂಪದ ಗಾಯನೋವು ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ಜಾನು ತಂದೆ ದೂಳು ಗಾವಡೆ, ಪ್ರಾಯ-45 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಬಡ್ಡಿಗೇರಿ, ತಾ: ಮುಂಡಗೋಡ ರವರು ದಿನಾಂಕ: 21-04-2022 ರಂದು 13-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
======||||||||======
Daily District U.D Report
Date:- 21-04-2022
at 00:00 hrs to 24:00 hrs
No Cases Reported....
======||||||||======