ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 21-08-2021

at 00:00 hrs to 24:00 hrs

 

ಗೋಕರ್ಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 60/2021, ಕಲಂ: ಗಂಡಸು ಕಾಣೆ  ನೇದ್ದರ ವಿವರ...... ನಮೂದಿತ ಕಾಣೆಯಾದ ಗಂಡಸು ಶ್ರೀ ಕುಮಾರ ತಂದೆ ಶೇಖಪ್ಪ ಕಮಾಟಿ, ಪ್ರಾಯ-39 ವರ್ಷ, ವೃತ್ತಿ-ತರಕಾರಿ ವ್ಯಾಪಾರ, ಸಾ|| ಕಮಟಗೇರಿ ಓಣಿ, ತಾ: ಹಾನಗಲ್, ಜಿ: ಹಾವೇರಿ. ಈತನು ದಿನಾಂಕ: 21-08-2021 ರಂದು ಮಧ್ಯಾಹ್ನ 13-45 ಗಂಟೆಯ ಸುಮಾರಿಗೆ ಗೋಕರ್ಣದ ಓಂ ಬೀಚಿನ ಸಮುದ್ರದ ತೀರದ ಕಲ್ಲು ಬಂಡೆಗಳ ಮೇಲೆ ನಿಂತುಕೊಂಡು ತನ್ನ ಮೊಬೈಲ್ ಪೋನಿನಲ್ಲಿ ಸೆಲ್ಫೀ ಫೋಟೋ ತೆಗೆಯಲು ಹೋದಾಗ ಆಕಸ್ಮಿಕವಾಗಿ ಬಂದ ದೊಡ್ಡ ಅಲೆಯ ರಭಸಕ್ಕೆ ಕಾಲು ಜಾರಿ ಸಮುದ್ರದ ನೀರಿನಲ್ಲಿ ಬಿದ್ದವನು, ಈಜಾಡಲಾಗದೇ ಸಮುದ್ರದ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದು, ಆತನನ್ನು ಇಲ್ಲಿಯವರೆಗೂ ಹುಡುಕಿದರು ಪತ್ತೆಯಾಗಿಲ್ಲವಾಗಿದ್ದು, ಸದ್ರಿಯವನನ್ನು ಹುಡುಕಿ ಕೊಡಲು ಕೋರಿದ ಬಗ್ಗೆ ಪಿರ್ಯಾದಿ ಶ್ರೀ ಬಸಪ್ಪ ತಂದೆ ರಾಮಣ್ಣ ಬೊಮ್ಮನಹಳ್ಳಿ, ಪ್ರಾಯ-32 ವರ್ಷ, ವೃತ್ತಿ-ಬಿಲ್ಡಿಂಗ್ ಕಟ್ಟುವ ಕೆಲಸ, ಸಾ|| ಕಮಟಗೇರಿ ಓಣಿ, ತಾ: ಹಾನಗಲ್, ಜಿ: ಹಾವೇರಿ ರವರು ದಿನಾಂಕ: 21-08-2021 ರಂದು 21-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮಂಕಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 114/2021, ಕಲಂ: 279, 304(ಎ) ಐಪಿಸಿ  ನೇದ್ದರ ವಿವರ...... ನಮೂದಿತ ಆರೋಪಿತ ಪ್ರಶಾಂತ ತಂದೆ ರಮೇಶ ಸಿಡ್ಲಿ, ಪ್ರಾಯ-26 ವರ್ಷ, ವೃತ್ತಿ-ಚಾಲಕ, ಸಾ|| ಕೋಟಾರ, ತಿಕೋಟಾ, ಬಿಜಾಪುರ (ಬೊಲೆರೋ ವಾಹನ ನಂ: ಕೆ.ಎ-28/ಡಿ-3589 ನೇದರ ಚಾಲಕ). ಈತನು ದಿನಾಂಕ: 21-08-2021 ರಂದು ಬೆಳಗ್ಗಿನ ಜಾವ 03-00 ಗಂಟೆಗೆ ಮಂಕಿಯ ಪೆಟ್ರೋಲ್ ಬಂಕ್ ಮುಂದೆ ಹಾದು ಹೋದ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ರಸ್ತೆಯ ಮೇಲೆ ಹೊನ್ನಾವರ ಕಡೆಯಿಂದ ಮುರ್ಡೇಶ್ವರ ಕಡೆಗೆ ತನ್ನ ಬೊಲೆರೋ ವಾಹನ ನಂ: ಕೆ.ಎ-28/ಡಿ-3589 ನೇದನ್ನು ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಚಾಲನೆ ಮಾಡಿಕೊಂಡು ಬಂದವನು, ಒಮ್ಮೇಲೆ ರಸ್ತೆಯ ಎಡಬದಿಯಲ್ಲಿರುವ ಮಣ್ಣಿನ ಜಾಗೆಯಲ್ಲಿ ವಾಹನವನ್ನು ಚಲಾಯಿಸಿ, ಮಣ್ಣಿನ ಜಾಗೆಯಲ್ಲಿ ಬಹಿರ್ದೆಸೆಗೆ ಕುಳಿತುಕೊಂಡಿರುವ ಮಲ್ಲೆಪುಲಾ ಶಾಂಬಾ ಸಿವಡು ತಂದೆ ಎಮ್. ಶಿವಲಿಂಗಮ್, ಸಾ|| ಗುವ್ವಲಕುಂಟಾ, ಕರ್ನೂಲ್, ಆಂಧ್ರಪ್ರದೇಶ ಈತನಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಅವನ ತಲೆಗೆ ರಕ್ತಗಾಯ ಪಡಿಸಿ ಸ್ಥಳದಲ್ಲಿಯೇ ಮರಣವನ್ನುಂಟು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಶೇಖ್ ಸದ್ದಾಂ ತಂದೆ ಶೇಖ್ ವಕೀಲ, ಪ್ರಾಯ-30 ವರ್ಷ, ವೃತ್ತಿ-ಲಾರಿ ಚಾಲಕ, ಸಾ|| ಆತ್ಮಾಪುರ, ಕರ್ನೂಲ್, ಆಂಧ್ರಪ್ರದೇಶ ರವರು ದಿನಾಂಕ: 21-08-2021 ರಂದು 04-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಶಹರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 96/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ವೆಂಕಟೇಶ ತಂದೆ ದುರ್ಗಪ್ಪ ನಾಯ್ಕ, ಪ್ರಾಯ-39 ವರ್ಷ ವೃತ್ತಿ-ಸೆಂಟ್ರಿಂಗ್ ಕೆಲಸ, ಸಾ|| ದೊಡ್ಮನೆ, ಜಾಲಿ, ತಾ: ಭಟ್ಕಳ (ಮೋಟಾರ್ ಸೈಕಲ್ ನಂ: ಕೆ.ಎ-47/ಕ್ಯೂ-1287 ನೇದರ ಸವಾರ). ಈತನು ದಿನಾಂಕ: 20-08-221 ರಂದು ಬೆಳಿಗ್ಗೆ 10-00 ಗಂಟೆಯ ಸುಮಾರಿಗೆ ಭಟ್ಕಳ ಶಹರದ ತಲಗೇರಿ ರಸ್ತೆಯ ದೇವಿನಗರ ಕ್ರಾಸ್ ಹತ್ತಿರ ತನ್ನ ಮೋಟಾರ್ ಸೈಕಲ್ ನಂ: ಕೆ.ಎ-47/ಕ್ಯೂ-1287 ನೇದರ ಹಿಂಬದಿಯಲ್ಲಿ ತನ್ನ ಅಣ್ಣ ಶ್ರೀ ನಾಗಪ್ಪ ತಂದೆ ದುರ್ಗಪ್ಪ ನಾಯ್ಕ, ಪ್ರಾಯ-40 ವರ್ಷ, ವೃತ್ತಿ-ಲೈನಮೆನ್ ಕೆಲಸ, ಸಾ|| ತಲಗೇರಿ, ಜಾಲಿ, ತಾ: ಭಟ್ಕಳ ಇವರನ್ನು ಕೂಡ್ರಿಸಿಕೊಂಡು ಸದ್ರಿ ಮೋಟಾರ್ ಸೈಕಲನ್ನು ಭಟ್ಕಳದ ತಲಗೇರಿಯಿಂದ ದೇವಿನಗರ ಕಡೆಗೆ ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಮೋಟಾರ್ ಸೈಕಲಿಗೆ ಒಮ್ಮೇಲೆ ಬ್ರೇಕ್ ಹಾಕಿದ್ದರಿಂದ ಮೋಟಾರ್ ಸೈಕಲ್ ಮೇಲಿನ ನಿಯಂತ್ರಣ ತಪ್ಪಿ ರಸ್ತೆಯ ಮೇಲೆ ಪಲ್ಟಿ ಮಾಡಿ ಅಪಘಾತ ಪಡಿಸಿ, ಮೋಟಾರ್ ಸೈಕಲ್ ಹಿಂಬದಿ ಕುಳಿತ ಶ್ರೀ ನಾಗಪ್ಪ ತಂದೆ ದುರ್ಗಪ್ಪ ನಾಯ್ಕ ಇವರ ಬೆನ್ನಿನ ಮೂಳೆ ತುಂಡಾಗುವಂತೆ ಗಾಯನೋವು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಮಾದೇವ ತಂದೆ ಮಾಸ್ತಪ್ಪ ನಾಯ್ಕ, ಪ್ರಾಯ-42 ವರ್ಷ, ವೃತ್ತಿ-ಪಾನಶಾಪ್ ಅಂಗಡಿ ವ್ಯಾಪಾರ, ಸಾ|| ತಲಗೇರಿ, ಜಾಲಿ, ತಾ: ಭಟ್ಕಳ ರವರು ದಿನಾಂಕ: 21-08-2021 ರಂದು 18-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 52/2021, ಕಲಂ: 420, 465, 468, 471, 463 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಸಯ್ಯದ್ ಮುಜಮಿಲ್ ಮನ್ಸೂರ್, ಸಾ|| ಮುಸ್ಲಿಂ ಗಲ್ಲಿ, ತಾ: ಶಿರಸಿ. ಈತನು ಶಿರಸಿ ಶಹರದ ಮುಸ್ಲಿಂ ಗಲ್ಲಿಯ ವಾರ್ಡ್ ನಂ: 14, ಉಡುಪಿ ಹೊಟೇಲ್ ಪಕ್ಕದಲ್ಲಿ ಬೇಬಿ ಕೇರ್ (ಖಾದಿ ಸ್ಟಾರ್) ಹಾಗೂ ಶಿರಸಿ ಸೇವಾ ಸಿಂಧು ಕೇಂದ್ರ ಎಂಬ ಹೆಸರಿನ ಅಂಗಡಿಯನ್ನು ಇಟ್ಟುಕೊಂಡು ದಿನಾಂಕ: 13-08-2021 ರಂದು ಮಧ್ಯಾಹ್ನ 01-30 ಗಂಟೆಯ ಪೂರ್ವದಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಸದರ ಅಂಗಡಿಯಲ್ಲಿ ಸರ್ಕಾರಿ ದಾಖಲೆಗಳಾದ ಆಧಾರ್ ಕಾರ್ಡ್, ಪಡಿತರ ಚೀಟಿ, ಪಾನ್ ಕಾರ್ಡ್, ಜನನ-ಮರಣ ಪ್ರಮಾಣ ಪತ್ರಗಳ ದಾಖಲಾತಿಗಳನ್ನು ನಕಲಿ ಸೃಷ್ಠಿಸಿ, ತಿದ್ದುಪಡಿ ಮಾಡಿ, ಸರ್ಕಾರಕ್ಕೆ ಹಾಗೂ ಸಾರ್ವಜನಿಕರಿಗೆ ಮೋಸ ಮತ್ತು ವಂಚನೆ ಮಾಡುತ್ತಿದ್ದ ಬಗ್ಗೆ ಪಿರ್ಯಾದಿ ಶ್ರೀ ಕೇಶವ ಎಮ್. ಚೌಗುಲೆ, ಪ್ರಾಯ-43 ವರ್ಷ, ವೃತ್ತಿ-ಪೌರಾಯುಕ್ತರು, ನಗರಸಭೆ, ಶಿರಸಿ, ಸಾ|| ಸರ್ಕಾರಿ ವಸತಿ ಗೃಹ, ಯಲ್ಲಾಪುರ ರಸ್ತೆ, ತಾ: ಶಿರಸಿ ರವರು ದಿನಾಂಕ: 21-08-2021 ರಂದು 13-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 21-08-2021

at 00:00 hrs to 24:00 hrs

 

ಪ್ರಕರಣಗಳು ದಾಖಲಾಗಿರುವುದಿಲ್ಲ....

 

======||||||||======

 

 

 

ಇತ್ತೀಚಿನ ನವೀಕರಣ​ : 23-08-2021 01:14 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080