ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 21-12-2021

at 00:00 hrs to 24:00 hrs

 

ಸಂಚಾರ ಪೊಲೀಸ್ ಠಾಣೆ ಕಾರವಾರ

ಅಪರಾಧ ಸಂಖ್ಯೆಃ 32/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಪ್ರಶಾಂತ ತಂದೆ ಬಾಳಸು ಕದಂ, ಪ್ರಾಯ-44 ವರ್ಷ, ವೃತ್ತಿ-ಖಾಸಗಿ ಕೆಲಸ, ಸಾ|| ಸದಾಶಿವಗಡ, ಕಾರವಾರ (ಹೋಂಡಾ ಸಿಟಿ ಕಾರ್ ನಂ: ಕೆ.ಎ-51/ಎಮ್.ಬಿ-0803 ನೇದರ ಚಾಲಕ). ದಿನಾಂಕ: 15-12-2021 ರಂದು ಬೆಳಗ್ಗೆ 11-15 ಗಂಟೆಯಲ್ಲಿ ಪಿರ್ಯಾದಿಯ ಗಂಡನವರಾದ ಶಶಿಕುಮಾರ ತಂದೆ ವಸಂತ ಹೊಸಾಳಿಕರ, ಪ್ರಾಯ-69 ವರ್ಷ, ವೃತ್ತಿ-ನಿವೃತ್ತ ನೌಕರ, ಸಾ|| ಹೊಸಾಳಿ, ಮುಡಗೇರಿ, ಕಾರವಾರ ಇವರು ತನ್ನ ಮೋಟಾರ್ ಸ್ಕೂಟರ್ ನಂ: ಕೆ.ಎ-30/ಎಲ್-9611 ನೇದರ ಮೇಲೆ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ರಸ್ತೆಯ ಮುಖಾಂತರ ಕಾರವಾರದ ಸಂತೆ ಪೇಟೆಯಿಂದ ಸದಾಶಿವಗಡ ಕಡೆಗೆ ತನ್ನ ಮನೆಗೆ ಮರಳಿ ಹೋಗುತ್ತಿರುವಾಗ ಕಾರವಾರದ ಖಾಫ್ರೀ ದೇವಸ್ಥಾನ ಹತ್ತಿರ ಸದಾಶಿವಗಡ ಕಡೆಯಿಂದ ಕಾರವಾರ ಕಡೆಗೆ ಬರುತ್ತಿದ್ದ ಹೋಂಡಾ ಸಿಟಿ ಕಾರ್ ನಂ: ಕೆ.ಎ-51/ಎಮ್.ಬಿ-0803 ನೇದರ ಆರೋಪಿ ಚಾಲಕನು ತನ್ನ ಕಾರನ್ನು ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದವನು, ತನ್ನ ಕಾರಿನ ಎದುರಿನಿಂದ ಬರುತ್ತಿದ್ದ ಪಿರ್ಯಾದಿಯ ಗಂಡನವರ ಮೋಟಾರ್ ಸ್ಕೂಟರಿಗೆ ತನ್ನ ಕಾರಿನ ಮುಂದಿನ ಬಲಭಾಗದಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಪಿರ್ಯಾದಿಯ ಗಂಡನವರು ಮೋಟಾರ್ ಸ್ಕೂಟರ್ ಸಮೇತ ರಸ್ತೆಯ ಮೇಲೆ ಬೀಳುವಂತೆ ಮಾಡಿ, ಶಶಿಕುಮಾರ ತಂದೆ ವಸಂತ ಹೊಸಾಳಿP್ಪರ, ಇವರಿಗೆ ತಲೆಯ ಹಿಂಭಾಗದಲ್ಲಿ ಗಾಯ ಹಾಗೂ ಒಳನೋವು, ಬಲಗಾಲಿನ ಮಂಡಿಯ ಕೆಳಗೆ ತೆರಚಿದ ಗಾಯ, ಬಲಗಾಲಿನ ಪಾದದ ಹಿಂದುಗಡೆ ತೆರಚಿದ ಗಾಯ, ಬಲಗೈ ಬೆರಳಿಗೆ ತೆರಚಿದ ಗಾಯ ಹಾಗೂ ಎಡಬದಿಯ ಪಕ್ಕಡೆಗೆ ಒಳನೋವು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀಮತಿ ನಂದಾ ಕೋಂ ಶಶಿಕುಮಾರ ಹೋಸಾಳಿಕರ, ಪ್ರಾಯ-55 ವರ್ಷ, ವೃತ್ತಿ-ಸರ್ಕಾರಿ ಶಾಲಾ ಶಿಕ್ಷಕಿ, ಸಾ|| ಹೊಸಾಳಿ, ಮುಡಗೇರಿ, ಕಾರವಾರ ರವರು ದಿನಾಂಕ: 21-12-2021 ರಂದು 06-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 219/2021, ಕಲಂ: 341, 323, 324, 427, 504, 506 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು ಮೋಟಾರ್ ಸೈಕಲ್ ನಂ: ಕೆ.ಎ-47/ವಿ-4968 ನೇದರಲ್ಲಿ ಬಂದ 25 ರಿಂದ 30 ವರ್ಷ ಪ್ರಾಯದ ಒಳಗಿನ ಇಬ್ಬರು ಅಪರಿಚಿತ ಯುವಕರಾಗಿದ್ದು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ದಿನಾಂಕ: 21-12-2021 ರಂದು ಸಾಯಂಕಾಲ ಪಿರ್ಯಾದಿಯವರು ತನ್ನ ಬಾಬ್ತು ಮೋಟಾರ್ ಸೈಕಲ್ ನಂ: ಕೆ.ಎ-20/ಇ.ಇ-2029 ನೇದರ ಹಿಂಬದಿಯಲ್ಲಿ ತನ್ನ ಹೆಂಡತಿ ಅನುಸೂಯಾ ಇವರಿಗೆ ಕೂರಿಸಿಕೊಂಡು ತನ್ನ ಹೆಂಡತಿಯ ತಂಗಿಯ ಮನೆಗೆ ಹೋಗಲು ಕಾಗಲ ಕಡೆಯಿಂದ ಹೆಗಡೆ ಕಡೆಗೆ ಹೊರಟು ಸಾಯಂಕಾಲ 04-30 ಗಂಟೆಯ ಸುಮಾರಿಗೆ ಹಳಕಾರ ರಸ್ತೆಯ ಗುನಗಾಕೇರಿ ಹತ್ತಿರ ತಲುಪಿದಾಗ ಅದೇ ವೇಳೆಗೆ ಮೋಟಾರ್ ಸೈಕಲ್ ನಂ: ಕೆ.ಎ-47/ವಿ-4968 ನೇದರಲ್ಲಿ ಬಂದ ನಮೂದಿತ ಆರೋಪಿತರು ಪಿರ್ಯಾದಿಯ ಮೋಟಾರ್ ಸೈಕಲ್ ಮುಂದಿನಿಂದ ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ಚಲಾಯಿಸುತ್ತಿದ್ದಾಗ, ಪಿರ್ಯಾದಿಯವರು ಆರೋಪಿ ಮೋಟಾರ್ ಸೈಕಲ್ ಸವಾರರಿಗೆ ‘ಯಾಕೆ ಆ ರೀತಿಯಾಗಿ ಮೋಟಾರ್ ಸೈಕಲ್ ಚಲಾಯಿಸಿ ಇನ್ನೊಬ್ಬರಿಗೆ ತೊಂದರೆ ಮಾಡುತ್ತಿರಾ?’ ಅಂತಾ ಹೇಳಿದ್ದಕ್ಕೆ, ಅಷ್ಟಕ್ಕೆ ಸಿಟ್ಟಾದ ಆರೋಪಿ ಮೋಟಾರ್ ಸೈಕಲ್ ಸವಾರರು ಪಿರ್ಯಾದಿಯ ಮೋಟಾರ್ ಸೈಕಲನ್ನು ಬೆನ್ನತ್ತಿ ಅಡ್ಡಗಟ್ಟಿ ತಡೆದು, ಪಿರ್ಯಾದಿಯನ್ನು ಉದ್ದೇಶಿಸಿ ‘ಬೋಳಿ ಮಗನೇ, ಸೂಳಾ ಮಗನೇ, ನಮಗೆ ಹೇಳಲು ನೀನು ಯಾರು?’ ಅಂತಾ ಅವಾಚ್ಯ ಶಬ್ದಗಳಿಂದ ಬೈಯ್ದು, ಆರೋಪಿ ಮೋಟಾರ್ ಸೈಕಲ್ ಸವಾರನು ತಾನು ಚಲಾಯಿಸುತ್ತಿದ್ದ ಮೋಟಾರ್ ಸೈಕಲ್ ಚಾವಿಯಿಂದ ಪಿರ್ಯಾದಿಗೆ ಎಡಗೆನ್ನೆಯ ಮೇಲೆ ಚುಚ್ಚಿ ಗಾಯನೋವು ಪಡಿಸಿದ್ದು, ಮೋಟಾರ್ ಸೈಕಲ್ ಹಿಂಬದಿಯ ಇನ್ನೊಬ್ಬ ಆರೋಪಿ ಸವಾರನು ತನ್ನ ಕೈಯಿಂದ ಪಿರ್ಯಾದಿಗೆ ಬೆನ್ನಿನ ಮೇಲೆ ಹೊಡೆದು, ಪಿರ್ಯಾದಿಯ ಕನ್ನಡಕವನ್ನು ಮುರಿದು ಲುಕ್ಸಾನ್ ಪಡಿಸಿ, ‘ನಿಮ್ಮನ್ನು ಇಷ್ಟಕ್ಕೆ ಬಿಡುವುದಿಲ್ಲ’ ಅಂತಾ ಬೆದರಿಕೆ ಹಾಕಿದ ಬಗ್ಗೆ ಪಿರ್ಯಾದಿ ಶ್ರೀ ಪರಮೇಶ್ವರ ತಂದೆ ರಾಮಾ ನಾಯ್ಕ, ಪ್ರಾಯ-48 ವರ್ಷ, ವೃತ್ತಿ-ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕ, ಸಾ|| ಕಾಗಲ, ತಾ: ಕುಮಟಾ ರವರು ದಿನಾಂಕ: 21-12-2021 ರಂದು 19-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 325/2021, ಕಲಂ: 341, 323, 504, 506 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಅಜೀತ ತಂದೆ ಮುಕುಂದ ನಾಯ್ಕ, ಪ್ರಾಯ-39 ವರ್ಷ, ಸಾ|| ಚಂಡೇಶ್ವರ, ಹಳದಿಪುರ, ತಾ: ಹೊನ್ನಾವರ. ದಿನಾಂಕ: 21-12-2021 ರಂದು ಬೆಳಿಗ್ಗೆ ಪಿರ್ಯಾದಿಯವರು ನವಿಲಗೋಣದ ನಾರಾಯಣ ವಿಶ್ವೇಶ್ವರ ಭಟ್ಟ ರವರ ಜಾಗೆ ಸರ್ವೇ ನಂ: 371/2(ಅ)/1 ನೇದರಲ್ಲಿ ಸತೀಶ ತಂದೆ ಸುರೇಶ ಶೇಟ್, ಸಾ|| ಹೊನ್ನಾವರ ರವರು ಮಣ್ಣನ್ನು ತೆಗೆದು ಟಿಪ್ಪರ್ ವಾಹನದ ಮೂಲಕ ಸಾಗಾಟ ಮಾಡುತ್ತಿದ್ದಾಗ ಟಿಪ್ಪರ್ ವಾಹನದಲ್ಲಿ ಮಣ್ಣನ್ನು ಚಿಪ್ಪೆಹಕ್ಕಲ ರಸ್ತೆಯಲ್ಲಿ ಸಾಗಾಟ ಮಾಡುತ್ತಿದ್ದರಿಂದ ರಸ್ತೆಯಲ್ಲಿ ಓಡಾಡುತ್ತಿದ್ದ ಜನರಿಗೆ ಹಾಗೂ ಶಾಲೆಗೆ ಹೋಗುವ ಮಕ್ಕಳಿಗೆ ತೊಂದರೆ ಉಂಟಾಗುತ್ತಿದ್ದರಿಂದ ಪಿರ್ಯಾದಿಯವರು ಈ ಬಗ್ಗೆ ಗ್ರಾಮ ಲೆಕ್ಕಿಗರಾದ ವೈಷ್ಣವಿ ದೇಶಬಂಡಾರಿ, ಇವರಿಗೆ ಮಣ್ಣು ಸಾಗಾಟವನ್ನು ತಡೆಯುವಂತೆ ತಿಳಿಸಿದ್ದರಿಂದ ಅವರು ಮಣ್ಣು ತೆಗೆಯುವ ಸ್ಥಳಕ್ಕೆ ಹೋಗಿ ಜಾಗದ ಮಾಲಿಕರಿಗೆ ಹಾಗೂ ಮಣ್ಣನ್ನು ಸಾಗಾಟ ಮಾಡುತ್ತಿದ್ದ ಸತೀಶ ಶೇಟ್ ರವರಿಗೆ ಸೂಕ್ತ ಸುರಕ್ಷಾ ಕ್ರಮವನ್ನು ಅನುಸರಿಸಿ, ನಿಯಮಾನುಸಾರ ಅನುಮತಿ ಪಡೆದು ಮಣ್ಣು ಸಾಗಾಟ ನಡೆಸುವಂತೆ ತಿಳಿಸಿ ಬಂದಿದ್ದರು. ಇದರಿಂದ ಸಿಟ್ಟಾದ ಹಳದಿಪುರ ಗ್ರಾಮ ಪಂಚಾಯತ ಅಧ್ಯಕ್ಷರಾದ ನಮೂದಿತ ಆರೋಪಿತನು ಪಿರ್ಯಾದಿಯವರು ನವಿಲಗೋಣ ಗ್ರಾಮ ಪಂಚಾಯತದಲ್ಲಿದ್ದಾಗ 10-30 ಗಂಟೆಯ ಸಮಯಕ್ಕೆ ಅಲ್ಲಿಗೆ ಬಂದು ‘ಬೋಳಿ ಮಗನೆ, ಮಣ್ಣನ್ನು ತೆಗೆಸುವುದನ್ನು ನಿಲ್ಲಿಸಲು ನೀನು ಯಾರು?’ ಅಂತಾ ಹೇಳಿ ಪಿರ್ಯಾದಿಗೆ ಅಡ್ಡಗಟ್ಟಿ, ಎಡಗೆನ್ನೆ ಮೇಲೆ ಕೈಯಿಂದ ಮೂರು ನಾಲ್ಕು ಸಲ ಹ್ರೆಡೆದು, ಹಾಗೆ ‘ಸೂಳಾ ಮಗನೆ, ನಮ್ಮ ತಂಟೆಗೆ ಬಂದರೆ ನಿನಗೆ ಸುಮ್ಮನೆ ಬಿಡುವುದಿಲ್ಲ. ನಿನ್ನನ್ನು ಕೊಂದು ಬಿಸಾಡುತ್ತೇವೆ’ ಅಚಿತಾ ಜೀವದ ಬೆದರಿಕೆ ಹಾಕಿ ಹೋದ ಬಗ್ಗೆ ಪಿರ್ಯಾದಿ ಶ್ರೀ ರವಿ ತಂದೆ ನಾಗಪ್ಪ ನಾಯ್ಕ, ಪ್ರಾಯ-43 ವರ್ಷ, ವೃತ್ತಿ-ಅಂಗಡಿ ವ್ಯಾಪಾರ, ಸಾ|| ಚಿಪ್ಪೆಹಕ್ಕಲ, ನವಿಲಗೋಣ, ತಾ: ಹೊನ್ನಾವರ ರವರು ದಿನಾಂಕ: 21-12-2021 ರಂದು 14-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮುರ್ಡೇಶ್ವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 111/2021, ಕಲಂ: 379, 285, 406, 420 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ವನೀಸ್ ಕುಮಾರ ತಂದೆ ಸೀನಪ್ಪ ಗೌಡ, ಪ್ರಾಯ-32 ವರ್ಷ, ಸಾ|| ಗೊದ್ದು ಪೋಸ್ಟ್, ತಾ: ಸಕಲೇಶಪುರ, ಜಿ: ಹಾಸನ (ಟ್ಯಾಂಕರ್ ಲಾರಿ ನಂ: ಕೆ.ಎ-19/ಎ.ಡಿ-0537 ನೇದರ ಚಾಲಕ), 2]. ಯಶವಂತ ತಂದೆ ಪೊನ್ನಪ್ಪ, ಪ್ರಾಯ-19 ವರ್ಷ, ಸಾ|| ತಾಕೇರಿ ಗ್ರಾಮ/ಪೋಸ್ಟ್, ತಾ: ಸೋಮಾರಪೇಟೆ, ಜಿ: ಕೊಡಗು (ಟ್ಯಾಂಕರ ಲಾರಿ ನಂ: ಕೆ.ಎ-19/ಎ.ಡಿ-0537 ನೇದರ ಕ್ಲೀನರ್), 3]. ಹೊನ್ನೆ ಗೌಡ ತಂದೆ ಭೈರೆ ಗೌಡ, ಪ್ರಾಯ-38 ವರ್ಷ, ಸಾ|| ಹಂಪನಕುಪ್ಪೆ ಪೋಸ್ಟ್/ಗ್ರಾಮ, ತಾ: ಆಲೂರು, ಜಿ: ಹಾಸನ (ಟ್ಯಾಂಕರ್ ಲಾರಿ ನಂ: ಕೆ.ಎ-31/ಬಿ-7191 ನೇದರ ಚಾಲಕ), 4]. ಮನು ತಂದೆ ಎಚ್. ವಿ. ಧರ್ಮೇಶ, ಪ್ರಾಯ-37 ವರ್ಷ, ಸಾ|| ಹಂಪನಕುಪ್ಪೆ ಗ್ರಾಮ, ಪೋ: ಕಿರೆಗಡಲು, ತಾ: ಆಲೂರು, ಜಿ: ಹಾಸನ (ಟ್ಯಾಂಕರ್ ಲಾರಿ ನಂ: ಕೆ.ಎ-31/ಬಿ-7191 ನೇದರ ಕ್ಲೀನರ್), 5]. ಚಂದನಕುಮಾರ ತಂದೆ ದಿವಾಕರ ಎಚ್. ಕೆ, ಪ್ರಾಯ-26 ವರ್ಷ, ಸಾ|| ಹೆಗ್ಗದ್ದೆ, ತಾ: ಸಕಲೇಶಪುರ, ಜಿ: ಹಾಸನ (ಟ್ಯಾಂಕರ್ ಲಾರಿ ನಂ: ಕೆ.ಎ-31/ಬಿ-7191 ನೇದರ ಕ್ಲೀನರ್), 6]. ವೆಂಕಟೇಶ, ಸಾ|| ಬೈಂದೂರು, ಉಡುಪಿ, 7]. ಮೋಹನ ಪೂಜಾರಿ, ಸಾ|| ಬೈಂದೂರು, ಉಡುಪಿ, 8]. ಇಕ್ಬಾಲ್, ಸಾ|| ಮಂಗಳೂರು, 9]. ರಾಜು, ಸಾ|| ಮೈಸೂರು. ಈ ನಮೂದಿತ ಆರೋಪಿತರಲ್ಲಿ ಆರೋಪಿ 1 ರಿಂದ 5 ನೇಯವರು ಸೇರಿಕೊಂಡು ದಿನಾಂಕ: 21-12-2021 ರಂದು ಬೆಳಿಗ್ಗೆ 02-50 ಗಂಟೆಗೆ ಮುರ್ಡೇಶ್ವರದ ಗುಮ್ಮನಹಕ್ಲ ಎಂಬಲ್ಲಿ ರೈಲ್ವೇ ಬ್ರಿಡ್ಜ್ ಸಮೀಪ ರೈಲ್ವೇ ಟ್ರ್ಯಾಕ್ ಒಡ್ಡಿನ ಮರೆಯಲ್ಲಿ ಡಾಂಬರ್ ತುಂಬಿದ ಟ್ಯಾಂಕರ್ ಲಾರಿ ನಂ: ಕೆ.ಎ-19/ಎ.ಡಿ-0537 ನೇದರ ಪಕ್ಕದಲ್ಲಿ ಟ್ಯಾಂಕರ್ ಲಾರಿ ನಂ: ಕೆ.ಎ-31/ಬಿ-7191 ನೇದನ್ನು ನಿಲ್ಲಿಸಿ ಕಳ್ಳತನದಿಂದ ಡಾಂಬರ್ ತೆಗೆಯಲು ಪ್ರಾರಂಭಿಸಿ, ಡಾಂಬರ್ ದಹ್ಯ ವಸ್ತು ಮತ್ತು ಬೆಂಕಿ ಹತ್ತಿಕೊಂಡು ಉರಿದು ಮನುಷ್ಯನ ಪ್ರಾಣಕ್ಕೆ ಅಪಾಯವುಂಟು ಮಾಡುವ ಸಾಧ್ಯತೆ ಇರುವ ಕುರಿತು ಗೊತ್ತಿದ್ದು ಕೂಡಾ ಆರೋಪಿತರು ನಿರ್ಲಕ್ಷ್ಯ ವಹಿಸಿ, ಡಾಂಬರನ್ನು ಕಳ್ಳತನದಿಂದ ತೆಗೆದು ಇನ್ನೊಂದು ಟ್ಯಾಂಕರಿನಲ್ಲಿ ಸಾಗಾಟ ಮಾಡಿ ಆರೋಪಿ 6 ರಿಂದ 9 ನೇಯವರಿಗೆ ಮಾರಾಟ ಮಾಡಿ, ಬಂದ ದುಡ್ಡನ್ನು ಹಂಚಿಕೊಳ್ಳುವುದಾಗಿ ಒಪ್ಪಿಕೊಂಡಿದ್ದರಿಂದ ಗೋವಾ ಟಾನ್ಸಪೋರ್ಟ್ ಕಂಪನಿಗೆ ಮೋಸ ಮಾಡುವ ಉದ್ದೇಶದಿಂದ ಡಾಂಬರ್ ತೆಗೆಯುತ್ತಿದ್ದಾಗ ಟ್ಯಾಂಕರ್ ಲಾರಿ ಸಮೇತ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಪರಮಾನಂದ ಬಿ ಕೊಣ್ಣೂರ, ಪಿ.ಎಸ್.ಐ (ತನಿಖೆ), ಮುರ್ಡೇಶ್ವರ ಪೊಲೀಸ್ ಠಾಣೆ ರವರು ದಿನಾಂಕ: 21-12-2021 ರಂದು 05-35 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 157/2021, ಕಲಂ: 279, 337 ಐಪಿಸಿ ಮತ್ತು ಕಲಂ: 187 ಎಮ್.ವಿ ಎಕ್ಟ್ ನೇದ್ದರ ವಿವರ...... ನಮೂದಿತ ಆರೋಪಿತ ಮೋಹನ ತಂದೆ ದೇವಯ್ಯ ನಾಯ್ಕ, ಪ್ರಾಯ-34 ವರ್ಷ, ಸಾ|| ಬೆಳಕೆ, ತಾ: ಭಟ್ಕಳ (ಟೆಂಪೋ ಟ್ರಾವೆಲರ್ ವಾಹನ ನಂ: ಕೆ.ಎ-44/7595 ನೇದರ ಚಾಲಕ). ಈತನು ದಿನಾಂಕ: 07-08-2021 ರಂದು 13-15 ಗಂಟೆಗೆ ಬಾಬ್ತು ಟೆಂಪೋ ಟ್ರಾವೆಲರ್ ವಾಹನ ನಂ: ಕೆ.ಎ-44/7595 ನೇದನು ಭಟ್ಕಳ ಕಡೆಯಿಂದ ಹೊನ್ನಾವರ ಕಡೆಗೆ ಅತೀವೇಗವಾಗಿ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಹೋಗಿ, ಅದರ ವೇಗ ನಿಯಂತ್ರಿಸಲಾಗದೇ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ಡಾಂಬರ್ ರಸ್ತೆಯಲ್ಲಿ ಶಿರಾಲಿಯ ಬೃಂದಾವನ ಹೋಟೆಲ್ ಹತ್ತಿರ ಎದುರಿನಿಂದ  ಬರುತ್ತಿದ್ದ ಪಿರ್ಯಾದಿಯ ಮೋಟಾರ್ ಸೈಕಲ್ ನಂ: ಕೆ.ಎ-47/ವಿ-4770  ನೇದಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಪಿರ್ಯಾದಿಯವರ  ಬಲಗಾಲಿನ ಹಿಮ್ಮಡಿಗೆ, ಮೊಣಗಂಟಿಗೆ ಭಾರೀ ಗಾಯ ಪಡಿಸಿದ್ದಲ್ಲದೇ, ಆರೋಪಿ ಚಾಲಕನು ಅಪಘಾತವಾಗಿದ್ದನ್ನು ನೋಡಿಯೂ ಸಹ ತನ್ನ ವಾಹನವನ್ನು ಸ್ಥಳದಲ್ಲಿ ನಿಲ್ಲಿಸದೇ ಚಲಾಯಿಸಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀ ಧನಂಜಯ ತಂದೆ ಮಾದೇವ ನಾಯ್ಕ, ಪ್ರಾಯ-34 ವರ್ಷ, ವೃತ್ತಿ-ಹಮಾಲಿ ಕೆಲಸ, ಸಾ|| ಅಜೊಡಿ, ಹಿತ್ಲಮನೆ, ಮೂಡ ಶಿರಾಲಿ, ತಾ: ಭಟ್ಕಳ ರವರು ದಿನಾಂಕ: 21-12-2021 ರಂದು 19-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 230/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಗುರುಪ್ರಸಾದ ತಂದೆ ನಾರಾಯಣ ಸಿದ್ದಿ, ಪ್ರಾಯ-22 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಮೇಲಿನಮೂಲೆ, ಕೆಳಾಸೆ, ತಾ: ಯಲ್ಲಾಪುರ (ಹೊಸದಾದ ನಂಬರ್ ನಮೂದಿರದ ಮೋಟಾರ್ ಸೈಕಲ್ ಸವಾರ). ಈತನು ದಿನಾಂಕ: 19-12-2021 ರಂದು 20-10 ಗಂಟೆಯ ಸುಮಾರಿಗೆ  ಯಲ್ಲಾಪುರ ತಾಲೂಕಿನ ಉಪಳೇಶ್ವರ ನಂದೊಳ್ಳಿ ಕ್ರಾಸಿನಲ್ಲಿ ಹಾದು ಹೋದ ಖಾನಾಪುರ-ತಾಳಗುಪ್ಪ ರಾಜ್ಯ ಹೆದ್ದಾರಿ ಸಂಖ್ಯೆ-93 ರಲ್ಲಿ ತನ್ನ ಬಾಬ್ತು ಹೊಸದಾದ ನಂಬರ್ ನಮೂದಿರದ ಮೋಟಾರ್ ಸೈಕಲನ್ನು ಶಿರಸಿ ಕಡೆಯಿಂದ ಯಲ್ಲಾಪುರ ಕಡೆಗೆ ಅತೀವೇಗವಾಗಿ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು, ಮೋಟಾರ್ ಸೈಕಲನ್ನು ತನ್ನ ನಿಯಂತ್ರಣದಲ್ಲಿಟ್ಟುಕೊಳ್ಳದೇ ಅದೇ ವೇಳೆ ಯಲ್ಲಾಪುರ ಕಡೆಯಿಂದ ಶಿರಸಿ ಕಡೆಗೆ ಬರುತ್ತಿದ್ದ ಮೋಟಾರ್ ಸೈಕಲ್ ನಂ: ಕೆ.ಎ-31/ಎಲ್-5022 ನೇದಕ್ಕೆ ಎದುರಿನಿಂದ ಡಿಕ್ಕಿ ಹೊಡೆದು, ಅಪಾಘಾತ ಪಡಿಸಿ, ಮೋಟಾರ್ ಸೈಕಲ್ ಸವಾರನಾದ ಸಾಕ್ಷಿದಾರ ಗೋಪಾಲಕೃಷ್ಣ ತಂದೆ ಸೀತಾರಾಮ ಹೆಗಡೆ, ಇವರ ಎಡಗಾಲಿನ ಮಂಡಿಯ ಕೆಳಗೆ ಗಾಯನೋವು ಪಡಿಸಿ, ಅದೇ ಮೋಟಾರ್ ಸೈಕಲ್ ಹಿಂಬದಿಯ ಸೀಟಿನಲ್ಲಿ ಕುಳಿತ ಸಾಕ್ಷಿದಾರ ಶ್ರೀರಾಮ ತಂದೆ ಗೋಪಾಲಕೃಷ್ಣ ಹೆಗಡೆ, ಇವರಿಗೂ ಸಹ ಎಡಗಾಲಿನ ಮಂಡಿಯ ಕೆಳಗೆ ಗಾಯನೋವು ಪಡಿಸಿದ್ದಲ್ಲದೇ, ಆರೋಪಿತನು ತನ್ನ ಮೋಟಾರ್ ಸೈಕಲ್ ಹಿಂಬದಿಯಲ್ಲಿ ಕುಳಿತ ಸಾಕ್ಷಿದಾರರಾದ ರಮೇಶ ತಂದೆ ನರಸಿಂಹ ಸಿದ್ದಿ, ಪ್ರಾಯ-24 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕಕ್ಕಳ್ಳಿ, ತಾ: ಶಿರಸಿ ಹಾಗೂ ಪ್ರೇಮಾನಂದ ಸಿದ್ದಿ, ಇವರಿಗೆ ಮೈ ಕೈಗೆ ಗಾಯನೋವು ಪಡಿಸಿದ್ದಲ್ಲದೇ, ಆರೋಪಿ ಮೋಟಾರ್ ಸೈಕಲ್ ಸವಾರನು ತನಗೂ ಸಹ ಮೈ ಕೈಗೆ ಗಾಯನೋವು ಪಡಿಸಿಕೊಂಡು ಎರಡು ವಾಹನಗಳನ್ನು ಜಖಂಗೊಳಿಸಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಚಂದ್ರಶೇಖರ ತಂದೆ ತಿಮ್ಮಣ್ಣ ಹೆಗಡೆ, ಪ್ರಾಯ-50 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಬಲೆಕಣಿ, ಗೋಳಿಗದ್ದೆ, ಪೋ: ನಂದೊಳ್ಳಿ, ತಾ|| ಯಲ್ಲಾಪುರ ರವರು ದಿನಾಂಕ: 21-12-2021 ರಂದು 12-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 231/2021, ಕಲಂ: 279, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಫಾರೂಖ್ ಅಬ್ದುಲ್ ತಂದೆ ಅಬ್ದುಲ್ ರಹಿಮ್, ಪ್ರಾಯ-30 ವರ್ಷ, ವೃತ್ತಿ-ಪಂಕ್ಚರ್ ತೆಗೆಯುವ ಕೆಲಸ, ಸಾ|| ಜನತಾ ಕಾಲೋನಿ, ಇಡಗುಂದಿ, ತಾ: ಯಲ್ಲಾಪುರ (ಮೋಟಾರ್ ಸೈಕಲ್ ನಂ: ಕೆ.ಎ-31/ಇ.ಸಿ-9970 ನೇದರ ಸವಾರ). ಈತನು ದಿನಾಂಕ: 05-12-2021 ರಂದು 13-00 ಗಂಟೆಗೆ ಯಲ್ಲಾಪುರ ಪಟ್ಟಣದ ಬೆಲ್ ರಸ್ತೆಯಲ್ಲಿ ಹಾದು ಹೋದ ರಾಜ್ಯ ಹೆದ್ದಾರಿ ಸಂಖ್ಯೆ-06 ರಲ್ಲಿ ತನ್ನ ಬಾಬ್ತು ಮೋಟಾರ್ ಸೈಕಲ್ ನಂ: ಕೆ.ಎ-31/ಇ.ಸಿ-9970 ನೇದನ್ನು ಯಲ್ಲಾಪುರ ಬಸ್ ನಿಲ್ದಾಣದ ಕಡೆಯಿಂದ ಸಂಕಲ್ಪ ಕ್ರಾಸ್ ಕಡೆಗೆ ಅತೀವೇಗವಾಗಿ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದವನು, ರಸ್ತೆಯ ಬದಿಯಲ್ಲಿ ನಿಂತಿದ್ದ ಪಿರ್ಯಾದಿಯವರ ಮಗನಾದ ಮಂಜುನಾಥ ತಂದೆ ಚೆನ್ನಬಸಪ್ಪ ಕುಷ್ಣಮ್ಮನವರ, ಪ್ರಾಯ-5 ವರ್ಷ, ಸಾ|| ಜಿನ್ನೂರ, ತಾ: ಕಲಘಟಗಿ, ಜಿ: ಧಾರವಾಡ, ಈತನಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಅವನ ಬಲಗಾಲಿಗೆ ತೀವ್ರ ಸ್ವರೂಪದ ರಕ್ತಗಾಯ, ಮುಖಕ್ಕೆ ತೆರಚಿದ ಗಾಯನೋವು ಪಡಿಸಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಚೆನ್ನಬಸಪ್ಪ ತಂದೆ ತಿಪ್ಪಣ್ಣ ಕುಷ್ಣಮ್ಮನವರ, ಪ್ರಾಯ-44 ವರ್ಷ, ವೃತ್ತಿ-ತರಕಾರಿ ವ್ಯಾಪಾರ, ಸಾ|| ಜಿನ್ನೂರ, ತಾ: ಕಲಘಟಗಿ, ಜಿ: ಧಾರವಾಡ ರವರು ದಿನಾಂಕ: 21-12-2021 ರಂದು 18-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ದಾಂಡೇಲಿ ನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 109/2021, ಕಲಂ: 454, 457, 380 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ದಿನಾಂಕ: 13-12-2021 ರಂದು ರಾತ್ರಿ 09-30 ಗಂಟೆಯಿಂದ ದಿನಾಂಕ: 14-12-2021 ರಂದು ಬೆಳಿಗ್ಗೆ 09-00 ಗಂಟೆಯ ನಡುವಿನ ಅವಧಿಯಲ್ಲಿ ಪಿರ್ಯಾದಿಯವರ ಮೊಬೈಲ್ ರಿಪೇರಿ ಅಂಗಡಿಯ ಮೇಲ್ಛಾವಣಿಗೆ ಅಳವಡಿಸಿದ ಸಿಮೆಂಟ್ ಶೀಟನ್ನು ಮುರಿದು ಅಂಗಡಿಯ ಒಳ ಹೊಕ್ಕು ಪಿರ್ಯಾದಿಯವರು ಅಂಗಡಿಯ ಉಪಯೋಗಕ್ಕೆಂದು ಇಟ್ಟಿರುವ 1). ಜಿಯೋ ಕೀ ಪ್ಯಾಡ್ ಮೊಬೈಲ್ ಸೆಟ್ ವಿಥ್ ಸಿಮ್-1 (ಅ||ಕಿ|| 500/- ರೂಪಾಯಿ), 2). ರಿಪೇರಿಗೆ ಬಂದ ಮೊಬೈಲಗಳು-05 (ಅ||ಕಿ|| 5,000/- ರೂಪಾಯಿ), 3). ವಿವಿಧ ಕಂಪನಿಯ ಮೊಬೈಲ್ ಬ್ಯಾಟರಿಗಳು-05 (ಅ||ಕಿ|| 1,000/- ರೂಪಾಯಿ), 4). ಅಂಗಡಿಯ ಡ್ರಾವರನಲ್ಲಿ ಇಟ್ಟಿರುವ ನಗದು ಹಣ 5,500/-ರೂಪಾಯಿ. ಹೀಗೆ ಸುಮಾರು 6,500/- ರೂಪಾಯಿ ಕಿಮ್ಮತ್ತಿನ ಸ್ವತ್ತುಗಳು ಹಾಗೂ ನಗದು ಹಣ 5,500/- ರೂಪಾಯಿಗಳನ್ನು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀ ವಿಶ್ವನಾಥ ತಂದೆ ಕುಬೇಂದ್ರ ಕಲಾಲ್, ಪ್ರಾಯ-38 ವರ್ಷ, ವೃತ್ತಿ-ಮೊಬೈಲ್ ರಿಪೇರಿ ಅಂಗಡಿ, ಸಾ|| ಪಾಟೀಲ್ ನರ್ಸಿಂಗ್ ಹೋಮ್ ಹಿಂದುಗಡೆ, 14 ನೇ ಬ್ಲಾಕ್, ದಾಂಡೇಲಿ ರವರು ದಿನಾಂಕ: 21-12-2021 ರಂದು 18-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ರಾಮನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 90/2021, ಕಲಂ: 436, 427 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ರಾಹುಲ ತಂದೆ ಪ್ರಹ್ಲಾದ ಕಲ್ಮನಕರ, 2]. ರತನ ತಂದೆ ಪ್ರಹ್ಲಾದ ಕಲ್ಮನಕರ, ಸಾ|| (ಇಬ್ಬರೂ) ಜಗಲಬೇಟ, ತಾ: ಜೋಯಿಡಾ. ಪಿರ್ಯಾದಿಯವರು ಧಾರವಾಡದಲ್ಲಿ ವಾಸವಾಗಿದ್ದವರು, ಕಳೆದ ಎರಡು ವರ್ಷಗಳಿಂದ ತನ್ನ ತಮ್ಮಂದಿರ ಜೊತೆ ಜಗಲಬೇಟದಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಾಗಿದ್ದು, ಪಿರ್ಯಾದಿಯವರ ತಮ್ಮ: ಬಸವರಾಜ ಸುಳ್ಳೊಳ್ಳಿ ರವರು ಜಗಲಬೇಟ ಗ್ರಾಮದ ರಾಮನಿಂಗ ದೇವಸ್ಥಾನದ ಹತ್ತಿರ ಜಾಗವನ್ನು ಖರೀದಿ ಮಾಡಿ, ಅಲ್ಲಿ ಮನೆಯನ್ನು ಕಟ್ಟಿಸುತ್ತಿದ್ದು, ಮನೆಯು ಇನ್ನು ಕಾಮಗಾರಿ ಹಂತದಲ್ಲಿದ್ದು, ದಿನಾಂಕ: 19-12-2021 ರಂದು ಸಾಯಂಕಾಲ 07-30 ಗಂಟೆಯಿಂದ 08-00 ಗಂಟೆಯ ಅವಧಿಯಲ್ಲಿ ಅವರಿಗೆ ಆಗದ ಯಾರೋ ದುಷ್ಕರ್ಮಿಗಳು ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದು, ಪಿರ್ಯಾದಿಯವರ ಮನೆಯ ಜನರಿಗೆ ವಿಷಯ ತಿಳಿದು ಸ್ಥಳಕ್ಕೆ ಹೋಗಿ ಬೆಂಕಿ ನಂದಿಸುವಷ್ಟರಲ್ಲಿ ಅಜಮಾಸ 12 ರಿಂದ 15 ಸಾವಿರ ರೂಪಾಯಿ ಮೌಲ್ಯದ ಪ್ಲಾಸ್ಟಿಕ್ ಸಿಂಟ್ಯಾಕ್ಸ್ ಗಳು-02, ಹಾಸಿಗೆಗಳು ಹಾಗೂ ಮನೆಯ ಮೇಲ್ಛಾವಣಿ ಸುಟ್ಟಿದ್ದು, ಇದನ್ನು ಯಾರು ಮಾಡಿದ್ದಾರೆ ಅಂತಾ ಯಾರು ಸಹ ನೋಡಿರುವುದಿಲ್ಲ. ಆದರೆ ಧಾರವಾಡದಲ್ಲಿದ್ದ ನಾವು ಜಗಲಬೇಟದಲ್ಲಿ ಉಳಿದುಕೊಂಡು ಮನೆ ಕಟ್ಟಿಸಿಕೊಳ್ಳುತ್ತಾ ಇರುವುದರಿಂದ ನಮ್ಮ ಮೇಲೆ ಜಗಲಬೇಟದ ನಮ್ಮ ಪರಿಚಯದವರಾದ ನಮೂದಿತ ಆರೋಪಿತರು ಇವರು ಹಗೆತನ ಸಾಧಿಸುತ್ತಾ ಇದ್ದು, ಅವರ ಮೇಲೆ ನಮಗೆ ಸಂಶಯ ಇರುತ್ತದೆ. ಈ ಕುರಿತು ಸೂಕ್ತ ತನಿಖೆ ಮಾಡಿ ಆರೋಪಿತರಿಗೆ ಶಿಕ್ಷೆಗೆ ಒಳಪಡಿಸಬೇಕೆಂದು ಕೋರಿದ ಬಗ್ಗೆ ಪಿರ್ಯಾದಿ ಶ್ರೀಮತಿ ವಿಜಯಲಕ್ಷ್ಮೀ ತಂದೆ ಪುನ್ನಪ್ಪಾ ಸುಳ್ಳೊಳ್ಳಿ, ಪ್ರಾಯ-52 ವರ್ಷ, ವೃತ್ತಿ-ಗೃಹಿಣಿ, ಸಾ|| ಜಗಲಬೇಟ, ತಾ: ಜೋಯಿಡಾ ರವರು ದಿನಾಂಕ: 21-12-2021 ರಂದು 15-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 21-12-2021

at 00:00 hrs to 24:00 hrs

 

ಹೊನ್ನಾವರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 50/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಉಲ್ಲಾಸ ತಂದೆ ಸುಬ್ರಾಯ ನಾಯ್ಕ, ಪ್ರಾಯ-50 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ದೊಡ್ಡಗುಂದ, ಮಂಕಿ, ತಾ: ಹೊನ್ನಾವರ. ಪಿರ್ಯಾದಿಯ ತಮ್ಮನಾದ ಈತನು ವಿಪರೀತ ಕುಡಿತದ ಚಟ ಹೊಂದಿದ್ದವನು, ಭಿಕ್ಷೆ ಬೇಡುತ್ತಾ ತಿರುಗುತ್ತಿದ್ದವನು, ಯಾವುದೋ ಅನಾರೋಗ್ಯಕ್ಕೆ ಒಳಗಾಗಿ ದಿನಾಂಕ: 20-12-2021 ರಂದು 22-00 ಗಂಟೆಯಿಂದ ದಿನಾಂಕ: 21-12-2021 ರಂದು ಬೆಳಿಗ್ಗೆ 07-45 ಗಂಟೆಯ ನಡುವಿನ ಅವಧಿಯಲ್ಲಿ ಹೊನ್ನಾವರ ಪಟ್ಟಣದ ಅಶೂರಖಾನ್ ಗಲ್ಲಿಯಲ್ಲಿನ ಮಲ್ಲಿಕಾ ಲಾಡ್ಜ್ ಕಾಂಪ್ಲೆಕ್ಸಿನ ಇಂಡಿ ಕ್ಯಾಶ್ ಎ.ಟಿ.ಎಮ್ ಎದುರಿನಲ್ಲಿ ಮಲಗಿದ್ದಲ್ಲಿಯೇ ಮೃತ ಪಟ್ಟಿದ್ದು, ಇದರ ಹೊರತು ತನ್ನ ತಮ್ಮನ ಸಾವಿನಲ್ಲಿ ಬೇರೆ ಯಾವುದೇ ಸಂಶಯ ಇರುವುದಿಲ್ಲ. ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ರಾಮದಾಸ ತಂದೆ ಸುಬ್ರಾಯ ನಾಯ್ಕ, ಪ್ರಾಯ-55 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ದೊಡ್ಡಗುಂದ, ಮಂಕಿ, ತಾ: ಹೊನ್ನಾವರ ರವರು ದಿನಾಂಕ: 21-12-2021 ರಂದು 09-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಹೊನ್ನಾವರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 51/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಸಚೀನ ತಂದೆ ಕಳಕಪ್ಪ ದೇಸಾಯಿ, ಪ್ರಾಯ-23 ವರ್ಷ, ವೃತ್ತಿ-ವಾಚಮೆನ್ ಕೆಲಸ, ಸಾ|| ಶಿರಗುಂಪಿ, ತಾ: ಯಲಬುರ್ಗಾ, ಜಿ: ಕೊಪ್ಪಳ, ಹಾಲಿ ಸಾ|| ವಿಜಯನಗರ, ಹುಬ್ಬಳ್ಳಿ. ಪಿರ್ಯಾದಿಯ ಮಗನಾದ ಈತನು ಟೈಫಾಯ್ಡ್ ಕಾಯಿಲೆಯಿಂದ ಬಳಲುತ್ತಿದ್ದವನು, ಅದೇ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ಬೇಸರದಿಂದ ಇರುತ್ತಿದ್ದವನು, ದಿನಾಂಕ: 20-12-2021 ರಂದು 12-00 ಗಂಟೆಯಿಂದ ದಿನಾಂಕ: 21-12-2021 ರಂದು 09-00 ಗಂಟೆಯ ನಡುವಿನ ಅವಧಿಯಲ್ಲಿ ಹೊನ್ನಾವರ ತಾಲೂಕಿನ ಶರಾವತಿ ನದಿಯಲ್ಲಿ ಹಾರಿ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದು, ಇದರ ಹೊರತು ತನ್ನ ಮಗನ ಸಾವಿನಲ್ಲಿ ಬೇರೆ ಯಾವುದೇ ಸಂಶಯ ಇರುವುದಿಲ್ಲ. ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಕಳಕಪ್ಪ ತಂದೆ ರುದ್ರಪ್ಪ ದೇಸಾಯಿ, ಪ್ರಾಯ-55 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಶಿರಗುಂಪಿ, ತಾ: ಯಲಬುರ್ಗಾ, ಜಿ: ಕೊಪ್ಪಳ. ಹಾಲಿ ಸಾ|| ವಿಜಯನಗರ, ಹುಬ್ಬಳ್ಳಿ ರವರು ದಿನಾಂಕ: 21-12-2021 ರಂದು 15-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಮಂಕಿ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 11/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತ ನು ಸುಮಾರು 50 ರಿಂದ 55 ವರ್ಷ ಪ್ರಾಯದ ಅಪರಿಚಿತ ಗಂಡಸ್ಸಾಗಿದ್ದು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಈತನು ದಿನಾಂಕ: 20-12-2021 ರಿಂದ ದಿನಾಂಕ: 21-12-2021 ರ ಬೆಳಿಗ್ಗೆ 10-30 ಗಂಟೆಯ ನಡುವಿನ ಅವಧಿಯಲ್ಲಿ ಎಲ್ಲಿಯೋ ಅರಬ್ಬೀ ಸಮುದ್ರದಲ್ಲಿ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು, ಮೃತದೇಹವು ಸಮುದ್ರದಲ್ಲಿ ತೇಲುತ್ತಾ ಮಂಕಿಯ ಮಡಿ ಗುಡ್ಡದ ಕೆಳಗೆ ಅರಬ್ಬೀ ಸಮುದ್ರದಲ್ಲಿ ಇದ್ದಾಗ, ಮೀನುಗಾರಿಕೆಗೆ ಹೋದ ಸ್ಥಳೀಯರು ಮೃತದೇಹವನ್ನು ನೋಡಿ ಹೊನ್ನಾವರದ ಕರಾವಳಿ ಕಾವಲು ಪಡೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿದಂತೆ, ಅರಬ್ಬೀ ಸಮುದ್ರದಲ್ಲಿ ಪೆಟ್ರೋಲಿಂಗ್ ಕರ್ತವ್ಯ ಮಾಡುತ್ತಿದ್ದ ಕರಾವಳಿ ಕಾವಲು ಪಡೆಯ ಬೋಟಿನಲ್ಲಿದ್ದ ಸಿಬ್ಬಂದಿಯವರು ಮೃತದೇಹವನ್ನು ಸ್ಥಳದಿಂದ ಎತ್ತಿಕೊಂಡು ಮಡಿಯ ಸಮುದ್ರ ದಡದಲ್ಲಿ ತಂದು ಇಟ್ಟಿದ್ದು, ಈ ಕುರಿತು ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಮೋತ್ಯಾ ತಂದೆ ಮಂಜುನಾಥ ಖಾರ್ವಿ, ಪ್ರಾಯ-48 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ಮಂಕಿ, ದೇವರಗದ್ದೆ, ತಾ: ಹೊನ್ನಾವರ ರವರು ದಿನಾಂಕ: 21-12-2021 ರಂದು 13-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಮುರ್ಡೇಶ್ವರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 31/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ನಾರಾಯಣ ತಂದೆ ರಾಮ ದೇವಡಿಗ, ಪ್ರಾಯ-51 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಮೋಳಿನಮನೆ, ಶಿರಾಲಿ-1, ತಾ: ಭಟ್ಕಳ, ಹಾಲಿ ಸಾ|| ಬಂಗಾರಮಕ್ಕಿ, ಬೇಂಗ್ರೆ-2, ತಾ: ಭಟ್ಕಳ. ಪಿರ್ಯಾದಿಯ ತಂದೆಯವರಾದ ಇವರು ತನ್ನ ಮಗನಾದ ನಾಗರಾಜ ಈತನು ಕಳೆದ 4 ತಿಂಗಳಿಂದ ಮೆದುಳಿನ ಕಾಯಿಲೆಯಿಂದ ಬಳಲುತ್ತಿದ್ದರಿಂದ, ಇದೇ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ಮನೆಯ ದನದ ಕೊಟ್ಟಿಗೆಯಲ್ಲಿ ಹೂವಿನ ಗಿಡಗಳಿಗೆ ಸಿಂಪಡಿಸುವ ಕ್ರಿಮಿನಾಶಕವನ್ನು ಸೇವಿಸಿಕೊಂಡು ಅಸ್ವಸ್ಥನಾದವರಿಗೆ ಉಪಚಾರದ ಕುರಿತು ಭಟ್ಕಳದ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿಯ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಉಪಚಾರಕ್ಕೆ ದಾಖಲಿಸಿದ್ದು, ಚಿಕಿತ್ಸೆಯಲ್ಲಿದ್ದವರು ಉಪಚಾರ ಫಲಿಸದೇ ದಿನಾಂಕ: 21-12-2021 ರಂದು 02-04 ಗಂಟೆಗೆ ಮೃತಪಟ್ಟಿದ್ದು, ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಮಾರುತಿ ತಂದೆ ನಾರಾಯಣ ದೇವಡಿಗ ಪ್ರಾಯ-24 ವರ್ಷ, ವೃತ್ತಿ-ಹೂವಿನ ವ್ಯಾಪಾರ, ಸಾ|| ಮೋಳಿನಮನೆ, ಶಿರಾಲಿ-1, ತಾ: ಭಟ್ಕಳ, ಹಾಲಿ ಸಾ|| ಬಂಗಾರಮಕ್ಕಿ, ಬೇಂಗ್ರೆ-2, ತಾ: ಭಟ್ಕಳ ರವರು ದಿನಾಂಕ: 21-12-2021 ರಂದು 16-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ರಾಮನಗರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 17/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನು ಸುಮಾರು 35 ರಿಂದ 40 ವರ್ಷ ಪ್ರಾಯದ ಅಪರಿಚಿತ ವ್ಯಕ್ತಿಯಾಗಿದ್ದು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಈತನು ಎಲ್ಲಿಂದಲೋ ಬಂದವನು ತನಗಿದ್ದ ಯಾವುದೋ ಮಾನಸಿಕ ಚಿಂತೆಯಿಂದ ದಿನಾಂಕ: 21-12-2021 ರಂದು ಬೆಳಿಗ್ಗೆ 08-15 ಗಂಟೆಯಿಂದ 09-15 ಗಂಟೆಯ ಅವಧಿಯಲ್ಲಿ ತನ್ನ ತಲೆಗೆ ಕಟ್ಟಿಕೊಂಡಿದ್ದ ವೇಲಿನಿಂದ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ. ಇದರ ಹೊರತು ಅವನ ಸಾವಿನಲ್ಲಿ ಬೇರೆ ಯಾವುದೇ ರೀತಿಯ ಸಂಶಯ ಇರುವುದಿಲ್ಲ. ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಬಸೀರ್ ತಂದೆ ರಸೀದ್ ಖಾನಜಾದೆ, ಪ್ರಾಯ-31 ವರ್ಷ, ವೃತ್ತಿ-ಮೆಕ್ಯಾನಿಕ್, ಸಾ|| ನವಗ್ರಾಮ ಕಾಲೋನಿ, ರಾಮನಗರ, ತಾ: ಜೋಯಿಡಾ ರವರು ದಿನಾಂಕ: 21-12-2021 ರಂದು 11-20 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

 

 

ಇತ್ತೀಚಿನ ನವೀಕರಣ​ : 26-12-2021 05:23 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080