ದೈನಂದಿನ ಜಿಲ್ಲಾ ಅಪರಾಧ ವರದಿ
ದಿನಾಂಕ:- 21-02-2021
at 00:00 hrs to 24:00 hrs
ಕಾರವಾರ ಶಹರ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 33/2021, ಕಲಂ: 323 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಮಂಜುನಾಥ ಬಾಂದೋಡ್ಕರ, ಸಾ|| ಕಾರವಾರ. ದಿನಾಂಕ: 21-02-2021 ರಂದು 10-05 ಗಂಟೆಯ ಸುಮಾರಿಗೆ ಪಿರ್ಯಾದಿಯವರ ತಂದೆಯವರಾದ ಗಾಯಾಳು ಶ್ರೀ ಘನಶ್ಯಾಮ ವಿಠ್ಠಲ್ ತಾಮ್ಸೆ, ಸಾ|| ಮಕ್ಕಿವಾಡ, ಸದಾಶಿವಗಡ, ಕಾರವಾರ ಇವರು ದಿನಾಂಕ: 18-02-2021 ರಂದು ತಮ್ಮ ಬಾಬ್ತು ಟಾಟಾ ಏಸ್ ವಾಹನ ನಂ: ಕೆ.ಎ-30/ಎ-0619 ನೇದರಲ್ಲಿ ಸದಾಶಿವಗಡದಿಂದ ಸೆಂಟ್ರಿಂಗ್ ಸಾಮಾನು ಹೇರಿಕೊಂಡು ಕಾರವಾರ ಕೋಡಿಬಾಗ ಕಡೆಗೆ ಬರುತ್ತಾ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಖಾಫ್ರಿ ದೇವಸ್ಥಾನದ ಹತ್ತಿರ ಭದ್ರಾ ಹೊಟೇಲಿನ ಬಳಿ ತಮ್ಮ ವಾಹನವನ್ನು ನಿಲ್ಲಿಸುತ್ತಿರುವಾಗ ದ್ವಿಚಕ್ರ ವಾಹನ ಸವಾರನಾದ ನಮೂದಿತ ಆರೋಪಿತನು ಒಮ್ಮೇಲೆ ಏನನ್ನೂ ಹೇಳದೆ ಏನೂ ಮಾತನಾಡದೆ ಘನಶ್ಯಾಮ ಇವರಿಗೆ ಕೆನ್ನೆಯ ಮೇಲೆ ಹೊಡೆದು ಕಾಲಿನಿಂದ ತುಳಿದು ದುಃಖಾಪತ್ ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀಮತಿ ದೀಪಾ ಮಾಲಸೇಕರ, ಪ್ರಾಯ-32 ವರ್ಷ, ಸಾ|| ಮಕ್ಕಿವಾಡ, ಸದಾಶಿವಗಡ, ಕಾರವಾರ ರವರು ದಿನಾಂಕ: 21-02-2021 ರಂದು 20-35 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಮಂಕಿ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 25/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಬಸವನಗೌಡ ಬಿರಾದಾರ, ಸಾ|| ವಿಜಯಪುರ (ಈಚರ ವಾಹನ ನಂ: ಕೆ.ಎ-20/ಎ.ಎ-4169 ನೇದರ ಚಾಲಕ). ನಮೂದಿತ ಆರೋಪಿತನು ದಿನಾಂಕ: 21-02-2021 ರಂದು 00-30 ಗಂಟೆಗೆ ಮಂಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಹಕ್ಕಲಕೇರಿ ಹತ್ತಿರ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರಸ್ತೆಯಲ್ಲಿ ತನ್ನ ಈಚರ ವಾಹನ ನಂ: ಕೆ.ಎ-20/ಎ.ಎ-4169 ನೇದನ್ನು ಭಟ್ಕಳ ಕಡೆಯಿಂದ ಹೊನ್ನಾವರ ಕಡೆಗೆ ಹೋಗಲು ಅತೀವೇಗವಾಗಿ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬೇರೊಂದು ವಾಹನಕ್ಕೆ ಓವರಟೇಕ್ ಮಾಡಲು ಹೋಗಿ ಮುಂದೆ ಹೋಗುತ್ತಿದ್ದ ಪಿರ್ಯಾದಿಯ ಬೊಲೆರೋ ವಾಹನ ನಂ: ಕೆ.ಎ-47/8343 ನೇದಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಪಿರ್ಯಾದಿಯ ವಾಹನದಲ್ಲಿದ್ದ ರಾಮು ಮಂಜು ಗೌಡ ಹಾಗೂ ಹರೀಶ ಗಜಾನನ ನಾಯ್ಕ ಇವರಿಗೆ ತಲೆಗೆ ಹಾಗೂ ಮೈಕೈಗೆ ಗಾಯನೋವು ಪಡಿಸಿದ್ದಲ್ಲದೇ, ಆರೋಪಿ ಚಾಲಕನು ತನಗೂ ಸಹ ತನ್ನ ಬಲಗಾಲಿಗೆ ಒಳನೋವು ಮತ್ತು ತುಟಿಗೆ ರಕ್ತಗಾಯ ಪಡಿಸಿಕೊಂಡು, ವಾಹನಗಳನ್ನು ಜಖಂ ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಹನುಮಂತ ತಂದೆ ನಾಗಪ್ಪ ಗೌಡ, ವೃತ್ತಿ-ಹೆಸ್ಕಾಂದಲ್ಲಿ ವಾಹನ ಚಾಲಕನಾಗಿ ಕೆಲಸ, ಸಾ|| ಕಾಸರಕೋಡ, ತಾ: ಹೊನ್ನಾವರ ರವರು ದಿನಾಂಕ: 21-02-2021 ರಂದು 10-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಯಲ್ಲಾಪುರ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 27/2021, ಕಲಂ: 87 ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ಅನ್ವರ್ ಭಾಷಾ ತಂದೆ ಹಟೇಲಸಾಬ್ ತಾಳಿಕೋಟೆ, ಪ್ರಾಯ-34 ವರ್ಷ, ವೃತ್ತಿ-ಮೀನು ವ್ಯಾಪಾರ, ಸಾ|| ಇಂದಿರಾನಗರ ಕಿರವತ್ತಿ, ತಾ: ಯಲ್ಲಾಪುರ, 2]. ಮೌಲಾಲಿ ತಂದೆ ಶರೀಫ್ಸಾಬ್ ನದಾಫ್, ಪ್ರಾಯ-35 ವರ್ಷ, ವೃತ್ತಿ-ಗೌಂಡಿ ಕೆಲಸ, ಸಾ|| ಇಂದಿರಾನಗರ, ಕಿರವತ್ತಿ, ತಾ: ಯಲ್ಲಾಪುರ, 3]. ರಾಮಚಂದ್ರ ತಂದೆ ಸುಬ್ರಾಯ ನಾಯ್ಕ, ಪ್ರಾಯ-36 ವರ್ಷ, ವೃತ್ತಿ-ಚಾಲಕ, ಸಾ|| ಜಯಂತಿನಗರ, ಕಿರವತ್ತಿ, ತಾ: ಯಲ್ಲಾಪುರ, 4]. ಸಂದೀಪ ತಂದೆ ತುಕಾರಾಮ ರೋಕಡೆ, ಪ್ರಾಯ-32 ವರ್ಷ, ವೃತ್ತಿ-ಮೀನು ವ್ಯಾಪಾರ, ಸಾ|| ನೇಮಿಣಿ ಗಲ್ಲಿ, ಕಿರವತ್ತಿ, ತಾ: ಯಲ್ಲಾಪುರ, 5]. ರವಿ ತಂದೆ ನಾರಾಯಣ ನಾಯ್ಕ, ಪ್ರಾಯ-30 ವರ್ಷ, ವೃತ್ತಿ-ಗೌಂಡಿ ಕೆಲಸ, ಸಾ|| ಇಂದಿರಾನಗರ, ಕಿರವತ್ತಿ, ತಾ: ಯಲ್ಲಾಪುರ, 6]. ಅರುಣ ತಂದೆ ಹರಿಶ್ಚಂದ್ರ ಮಿರಾಶಿ, ಪ್ರಾಯ-40 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಇಂದಿರಾನಗರ, ಕಿರವತ್ತಿ, ತಾ: ಯಲ್ಲಾಪುರ, 7]. ರಾಜೇಸಾಬ್ ತಂದೆ ದಾವೂಲಸಾಬ್ ಕಲಘಟಗಿ, ಸಾ|| ಕಿರವತ್ತಿ, ತಾ: ಯಲ್ಲಾಪುರ. ಈ ನಮೂದಿತ ಆರೋಪಿತರು ಸೇರಿಕೊಂಡು ಯಲ್ಲಾಪುರ ತಾಲೂಕಿನ ಕರಿಯವ್ವನಗುಂಡಿ ಊರಿಗೆ ಹೋಗುವ ರಸ್ತೆಯ ಪಕ್ಕದ ಖುಲ್ಲಾ ಸಾರ್ವಜನಿಕ ಬೆಟ್ಟದ ಜಾಗದಲ್ಲಿ ರಟ್ಟನ್ನು ಹಾಸಿಕೊಂಡು ಇಸ್ಪೀಟ್ ಎಲೆಗಳ ಮೇಲೆ ಅಂದರ್-ಬಾಹರ್ ಜುಗಾರಾಟ ಆಡುತ್ತಿದ್ದಾಗ ದಿನಾಂಕ: 20-02-2021 ರಂದು 19-15 ಗಂಟೆಗೆ ಪಿರ್ಯಾದುದಾರರು ತಮ್ಮ ಸಿಬ್ಬಂದಿಯವರು ಮತ್ತು ಪಂಚರೊಂದಿಗೆ ಕೂಡಿ ದಾಳಿ ನಡೆಸಿದ ಕಾಲಕ್ಕೆ ಜುಗಾರಾಟದ ನಗದು ಹಣ 3,920/- ರೂಪಾಯಿ ಹಾಗೂ ಸ್ವತ್ತುಗಳೊಂದಿಗೆ ಮೇಲೆ ಆರೋಪಿ 1 ರಿಂದ 5 ನೇಯವರು ಸೆರೆ ಸಿಕ್ಕಿದ್ದು ಹಾಗೂ ಆರೋಪಿ 6 ಮತ್ತು 7 ನೇಯವರು ಓಡಿ ಹೋಗಿರುತ್ತಾರೆ ಎಂಬ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಸುರೇಶ ಎಚ್. ಯಳ್ಳೂರು, ಪಿ.ಎಸ್.ಐ, ಯಲ್ಲಾಪುರ ಪೊಲೀಸ್ ಠಾಣೆ ರವರು ದಿನಾಂಕ: 21-02-2021 ರಂದು 09-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಯಲ್ಲಾಪುರ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 28/2021, ಕಲಂ: 279, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಉಮೇಶ ತಂದೆ ರಾಮದಾಸ್ ಬ್ಶೆತಖೋಲ್, ಪ್ರಾಯ-45 ವರ್ಷ, ವೃತ್ತಿ-ಚಾಲಕ, ಸಾ|| ಕೆ.ಇ.ಬಿ ಹತ್ತಿರ, ತಾ: ಅಂಕೋಲಾ (ಕಾರ್ ನಂ: ಕೆ.ಎ-30/ಎಮ್-8625 ನೇದರ ಚಾಲಕ). ನಮೂದಿತ ಆರೋಪಿತನು ದಿನಾಂಕ: 21-02-2021 ರಂದು 10-15 ಗಂಟೆಯ ಸುಮಾರಿಗೆ ಯಲ್ಲಾಪುರ ತಾಲೂಕಿನ ಮಾವಳ್ಳಿ ಕ್ರಾಸ್ ಹತ್ತಿರ ಹಾದು ಹೋದ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-63 ರಲ್ಲಿ ತನ್ನ ಬಾಬ್ತು ಕಾರ್ ನಂ: ಕೆ.ಎ-30/ಒ-8625 ನೇದನ್ನು ಯಲ್ಲಾಪುರ ಕಡೆಯಿಂದ ಅಂಕೋಲಾ ಕಡೆಗೆ ಅತೀವೇಗವಾಗಿ ಮತ್ತು ನಿಷ್ಕಾಳಜಿಯಿಂದ ಚಲಾಯಿಸಿಕೊಂಡು ಬಂದು, ತನ್ನ ವಾಹನವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳದೇ ತನ್ನ ಮುಂದಿನಿಂದ ಹೋಗುತ್ತಿದ್ದ ಟ್ರಕ್ ಅನ್ನು ಓವರಟೇಕ್ ಮಾಡಲು ಹೋಗಿ, ಅದೇ ವೇಳೆ ಹುಬ್ಬಳ್ಳಿ ಕಡೆಯಿಂದ ಯಲ್ಲಾಪುರ ಕಡೆಗೆ ತನ್ನ ರಸ್ತೆಯ ಸೈಡಿನಿಂದ ನಿಧಾನವಾಗಿ ಪಿರ್ಯಾದಿಯವರು ಚಲಾಯಿಸಿಕೊಂಡು ಬರುತ್ತಿದ್ದ ಕಾರ್ ನಂ: ಕೆ.ಎ-25/ಎಮ್.ಸಿ-7084 ನೇದಕ್ಕೆ ಎದುರಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಪಿರ್ಯಾದಿಯವರ ಮೈಕೈಗೆ ಗಾಯನೋವು ಪಡಿಸಿ, ತನ್ನ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಸಾಕ್ಷಿದಾರ ಉದಯ ತಂದೆ ನಾರಾಯಣ ನಾಯ್ಕ, ಸಾ|| ಐ.ಟಿ.ಐ ಕಾಲೇಜ್ ಹತ್ತಿರ, ತಾ: ಅಂಕೋಲಾ ಇವರ ಮೈಕೈಗೆ ಗಾಯನೋವು ಪಡಿಸಿದ್ದಲ್ಲದೇ, ಆರೋಪಿ ಚಾಲಕನು ತನಗೂ ಸಹ ತನ್ನ ಮೈಕೈಗೆ ಗಾಯನೋವು ಪಡಿಸಿ, ಎರಡು ವಾಹನಗಳನ್ನು ಜಖಂಗೊಳಿಸಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಪ್ರಸಾದ ತಂದೆ ದೇವಪ್ಪ ನಾಯ್ಕ, ಪ್ರಾಯ-41 ವರ್ಷ, ವೃತ್ತಿ-ವಕೀಲರು, ಸಾ|| ಮನೆ ನಂ: 155, ಕೆನರಾ ಬ್ಯಾಂಕ್ ಎದುರು, ನಾರಾಯಾಣಪುರ, ಧಾರವಾಡ ರವರು ದಿನಾಂಕ: 21-02-2021 ರಂದು 16-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ರಾಮನಗರ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 17/2021, ಕಲಂ: 4, 12 The Karnataka Prevention of Slaughter and Preservation of Cattle Ordinance Act--2020 ಮತ್ತು ಕಲಂ: 11(1)(D) Prevention of Cruelty to Animal Act-1960 ನೇದ್ದರ ವಿವರ...... ನಮೂದಿತ ಆರೋಪಿತರು 1]. ರಿಯಾಜ್ ಅಹ್ಮದ್ ತಂದೆ ಅಬ್ದುಲ್ ಮುಜೀರ್ ಹಿರೇಕರ್, ಪ್ರಾಯ-50 ವರ್ಷ, ವೃತ್ತಿ-ಚಾಲಕ, ಸಾ|| ನಂದಗಡ, ತಾ: ಖಾನಾಪುರ, ಜಿ: ಬೆಳಗಾವಿ, 2]. ಅಬ್ದುಲ್ ರೆಹಮಾನ್ ಖಾನಸಾಬ್ ಬೇಪಾರಿ. ಸಾ|| ನಂದಗಡ, ತಾ: ಖಾನಾಪುರ, ಜಿ: ಬೆಳಗಾವಿ. ಈ ನಮೂದಿತ ಆರೋಪಿತರಲ್ಲಿ ಆರೋಪಿ 1 ನೇಯವನು ದಿನಾಂಕ: 21-02-2021 ರಂದು ನಂದಗಡದಿಂದ ಆರೋಪಿ 2 ನೇಯವನಿಂದ ದನದ ಮಾಂಸವನ್ನು ಟಾಟಾ ಕಂಪನಿಯ 207 ಪಿಕಅಪ್ ವಾಹನ ನಂ: ಕೆ.ಎ-19/ಡಿ-3120 ನೇದರಲ್ಲಿ ಹಾಕಿಕೊಂಡು ಮಾರಾಟ ಮಾಡಿ ಲಾಭಗಳಿಸುವ ಉದ್ದೇಶದಿಂದ ಗೋವಾಕ್ಕೆ ಸಾಗಾಟ ಮಾಡುತ್ತಿರುವಾಗ ದಿನಾಂಕ: 21-02-2021 ರಂದು ಬೆಳಿಗ್ಗೆ 10-05 ಗಂಟೆಗೆ ಅನಮೋಡ ಅಬಕಾರಿ ಚೆಕ್ ಪೋಸ್ಟಿನಲ್ಲಿ ಬರ್ಡ್ ಫ್ಲ್ಯೂ (ಹಕ್ಕಿಜ್ವರ) ದ ನಿಮಿತ್ಯ ಕೋಳಿಗಳನ್ನು ತೆಗೆದುಕೊಂಡು ಹೋಗುವ ವಾಹನಗಳನ್ನು ತಪಾಸಣೆ ಮಾಡುವ ಕರ್ತವ್ಯದಲ್ಲಿದ್ದ ವಿನಾಯಕ ಮೊರ್ಲೇಕರ, ವೆಟರ್ನರಿ ಅಸಿಸ್ಟಂಟ್, ಜಗಲಬೇಟ, ತಾ: ಜೊಯಿಡಾ ರವರು ನೋಡಿ ತಿಳಿಸಿದ್ದು, ಅದರಂತೆ ಪಿರ್ಯಾದಿಯವರು ಪಂಚರು ಹಾಗೂ ಸಿಬ್ಬಂದಿಯವರೊಂದಿಗೆ ಹೋಗಿ ಆರೋಪಿ 1 ನೇಯವನು ಟಾಟಾ ಕಂಪನಿಯ 207 ಪಿಕಅಪ್ ವಾಹನ ನಂ: ಕೆ.ಎ-19/ಡಿ-3120 ನೇದರಲ್ಲಿ ದನಗಳ ಮಾಂಸವನ್ನು ಸಾಗಾಟ ಮಾಡುವಾಗ ಸಿಕ್ಕಿದ್ದು ಹಾಗೂ ಆರೋಪಿ 1 ನೇಯವನಿಂದ ದನದಮಾಂಸ ಹಾಗೂ ವಾಹನವನ್ನು ಜಪ್ತ ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಕಿರಣ ಬಿ. ಪಾಟೀಲ, ಪಿ.ಎಸ್.ಐ (ಕಾ&ಸು), ರಾಮನಗರ ಪೊಲೀಸ್ ಠಾಣೆ ರವರು ದಿನಾಂಕ: 21-02-2021 ರಂದು 14-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
======||||||||======
ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ
ದಿನಾಂಕ:- 21-02-2021
at 00:00 hrs to 24:00 hrs
ಕಾರವಾರ ಶಹರ ಪೊಲೀಸ್ ಠಾಣೆ
ಯು.ಡಿ.ಆರ್ ಸಂಖ್ಯೆಃ 05/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ಕುಷ್ಠ ತಂದೆ ಬಿಶೋ ವೇಲಿಪ್, ಪ್ರಾಯ-58 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಮನೆ ನಂ: 312, ಶ್ರೀದೇವಿ ಗರವಾಯ್ ದೇವಸ್ಥಾನದ ಹತ್ತಿರ, ವೇಲಿಪವಾಡ, ಬಾಳಿ, ಕಾಣಕೋಣ, ಗೋವಾ. ಈತನು ದಿನಾಂಕ: 17-02-2021 ರಂದು ಮಧ್ಯಾಹ್ನ 13-00 ಗಂಟೆಗೆ ತನ್ನ ಮನೆಯಿಂದ ಕಾರವಾರಕ್ಕೆ ಬಂದವನು, ದಿನಾಂಕ: 20-02-2021 ರಂದು ರಾತ್ರಿ 22-00 ಗಂಟೆಗೆ ಕಾರವಾರ ಕುಟಿನ್ಹೋ ರಸ್ತೆಯಲ್ಲಿರುವ ಓಂ ಲಾಡ್ಜಿನಲ್ಲಿ ಉಳಿದುಕೊಂಡಿದ್ದು, ದಿನಾಂಕ 21-02-2021 ರಂದು ರಾತ್ರಿ 02-30 ಗಂಟೆಗೆ ‘ತನಗೆ ಯಾಕೋ ದೇಹದಲ್ಲಿ ತೊಂದರೆಯಾಗುತ್ತಿದೆ, ನಾನು ಹೋಗುತ್ತೇನೆ’ ಅಂತ ಹೇಳಿ ಲಾಡ್ಜಿನಿಂದ ಹೊರಗೆ ಬಂದು ಹೊರಗಡೆ ಕುಳಿತುಕೊಂಡವನು ಒದ್ದಾಟ ಮಾಡುತ್ತಾ ನೆಲದ ಮೇಲೆ ಬಿದ್ದುಕೊಂಡಿದ್ದು, ಆತನಿಗೆ ಫಿಡ್ಸ್ ಬಂದಂತಾಗಿ ಬಾಯಿಯಿಂದ ನೊರೆ ಬಂದಿದ್ದನ್ನು ಕಂಡು ಲಾಡ್ಜಿನ ಸಿಬ್ಬಂದಿ ಉಪಚರಿಸುವಷ್ಟರಲ್ಲಿಯೇ ಆತನು ಮೃತಪಟ್ಟಿದ್ದು, ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳುವ ಕುರಿತು ಪಿರ್ಯಾದಿ ಶ್ರೀ ಮೋನೊ ತಂದೆ ಬಿಶೋ ವೇಲಿಪ್, ಪ್ರಾಯ-60 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಮನೆ ನಂ: 119, ಶಿರಲಿಮ್, ಬಾರಕೆಮ್, ಕ್ವೀಪೆಮ್, ದಕ್ಷೀಣ ಗೋವಾ, ಗೋವಾ ರವರು ದಿನಾಂಕ: 21-02-2021 ರಂದು 12-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
======||||||||======