ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 21-01-2022

at 00:00 hrs to 24:00 hrs

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 32/2022, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ದೀಪಕ ತಂದೆ ಶೇಖರ ನಾಯ್ಕ, ಪ್ರಾಯ-24 ವರ್ಷ, ವೃತ್ತಿ-ಚಾಲಕ, ಸಾ|| 16 ನೇ ಮೈಲಕಲ್, ತಾ: ಸಿದ್ದಾಪುರ (ಟಿಪ್ಪರ್ ಲಾರಿ ನಂ: ಕೆ.ಎ-17/ಎ-9451 ನೇದರ ಚಾಲಕ). ಈತನು ದಿನಾಂಕ: 20-01-2022 ರಂದು ಬೆಳಿಗ್ಗೆ 06-30 ಗಂಟೆಯ ಸಮಯಕ್ಕೆ ಹೊನ್ನಾವರ ಉಪ್ಪೋಣಿಯಲ್ಲಿ ಹಾದು ಹೋದ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-69 ರಲ್ಲಿ ತಾನು ಚಲಾಯಿಸುತ್ತಿದ್ದ ಟಿಪ್ಪರ್ ಲಾರಿ ನಂ: ಕೆ.ಎ-17/ಎ-9451 ನೇದನ್ನು ಹೊನ್ನವರ ಕಡೆಯಿಂದ ಗೇರುಸೊಪ್ಪ ಕಡೆಗೆ ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಹೆದ್ದಾರಿಯಲ್ಲಿ ದನ ಅಡ್ಡ ಬಂದಿದ್ದರಿಂದ ಒಮ್ಮೇಲೆ ನಿರ್ಲಕ್ಷ್ಯತನದಿಂದ ಬ್ರೇಕ್ ಹಾಕಿ ಟಿಪ್ಪರ್ ನಿಯಂತ್ರಣ ತಪ್ಪಿ ಪಲ್ಟಿಗೊಳಿಸಿ ಅಪಘಾತ ಪಡಿಸಿ, ಟಿಪ್ಪರ್ ಲಾರಿ ಕ್ಲೀನರ್ ಶ್ರೀಕಂಠ ತಂದೆ ರಂಗಪ್ಪಾ ಬೋವಿ, ಸಾ|| 16 ನೇ ಮೈಲಕಲ್, ಸಿದ್ದಾಪುರ ಇವರಿಗೆ ಕೈಗೆ ದುಃಖಾಪತ್ ಪಡಿಸಿದ್ದಲ್ಲದೇ, ತನಗೆ ತೆರಚಿದ ಗಾಯನೋವು ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ಸಂತೋಷ ತಂದೆ ಕೃಷ್ಣ ಶೆಟ್ಟಿ, ಪ್ರಾಯ-37 ವರ್ಷ, ವೃತ್ತಿ-ವ್ಯಾಪಾರ, ಸಾ|| ಗಿಡ್ಡಮಾವಿನಕಟ್ಟಾ, ತಾ: ಶಿರಸಿ ರವರು ದಿನಾಂಕ: 21-01-2022 ರಂದು 15-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 14/2022, ಕಲಂ: 379 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ದಿನಾಂಕ: 14-01-2022 ರಂದು ರಾತ್ರಿ 23-30 ಗಂಟೆಯಿಂದ ದಿನಾಂಕ: 15-01-2022 ರಾತ್ರಿ 00-30 ಗಂಟೆಯ ನಡುವಿನ ಅವಧಿಯಲ್ಲಿ ಪಿರ್ಯಾದಿಯು ಸವಣಗೇರಿಯಲ್ಲಿರುವ ತನ್ನ ಸಂಬಂಧಿಕರ ಮನೆಯ ಖುಲ್ಲಾ ಜಾಗದಲ್ಲಿ ಒಣಗಿಸಲು ಹಾಕಿದ್ದ ಸುಮಾರು ಒಂದೂವರೆ  ಕ್ವಿಂಟಾಲ್ ಕೆಂಪು ಅಡಿಕೆ, ಅ||ಕಿ|| 60,000/- ರೂಪಾಯಿ ಬೆಲೆಯ ಸ್ವತ್ತನ್ನು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀ ಮುಜಾಫರ್ ತಂದೆ ರಾಜೇಸಾಬ್ ಹಸ್ನಾಬಾದಿ, ಪ್ರಾಯ-34 ವರ್ಷ, ವೃತ್ತಿ-ಅಡಿಕೆ ವ್ಯಾಪಾರ, ಸಾ|| ಕಸ್ತೂರಬಾ ನಗರ, ತಾ: ಶಿರಸಿ ರವರು ದಿನಾಂಕ: 21-01-2022 ರಂದು 14-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಸಿದ್ದಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 08/2022, ಕಲಂ: 87 ಕರ್ನಾಟಕ ಪೊಲೀಸ್ ತಿದ್ದುಪಡಿ ಅಧಿನಿಯಮ-2021 ನೇದ್ದರ ವಿವರ...... ನಮೂದಿತ ಆರೋಪಿತರು 1]. ಮಂಜುನಾಥ ಶನೇಶ್ವರ ಗೌಡ, ಪ್ರಾಯ-38 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಇಟಗಿ, ತಾ: ಸಿದ್ದಾಪುರ, 2]. ಶ್ರೀಕಾಂತ ಕೃಷ್ಣಪ್ಪ ನಾಯ್ಕ, ಪ್ರಾಯ-42 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಇಟಗಿ, ತಾ: ಸಿದ್ದಾಪುರ, 3]. ಅಣ್ಣಪ್ಪ ರಾಮಾ ಮಡಿವಾಳ, ಪ್ರಾಯ-33 ವರ್ಷ, ವೃತ್ತಿ-ಪಾನಿಪುರಿ ಅಂಗಡಿ, ಸಾ|| ಹೆಗ್ಗೆಕೊಪ್ಪ, ತಾ: ಸಿದ್ದಾಪುರ, 4]. ತಿಮ್ಮಾ ಕನ್ನಾ ಮಡಿವಾಳ, ಪ್ರಾಯ-55 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಹೆಗ್ಗೆಕೊಪ್ಪ, ತಾ: ಸಿದ್ದಾಪುರ, 5]. ವಿನಾಯಕ ಬಂಗಾರ್ಯ ಗೌಡ, ಪ್ರಾಯ-33 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಕಟ್ಟೆಕೈ, ತಾ: ಸಿದ್ದಾಪುರ, 6]. ಚಂದ್ರು ಹುಲಿಯಾ ನಾಯ್ಕ, ಪ್ರಾಯ-55 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಹರ್ಕನಳ್ಳಿ, ತಾ: ಸಿದ್ದಾಪುರ, 7]. ಅಣ್ಣಪ್ಪಾ ಕೆರಿಯಾ ನಾಯ್ಕ, ಪ್ರಾಯ-41 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಹಲಗೇರಿ, ತಾ: ಸಿದ್ದಾಪುರ, 8]. ಬಂಗಾರ್ಯ ತಿಮ್ಮಾ ಮಡಿವಾಳ, ಪ್ರಾಯ-59 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಮುಗದೂರು, ತಾ: ಸಿದ್ದಾಪುರ, 9]. ಗಣಪತಿ ಕನ್ನಾ ಮರಲಗಿ, ಪ್ರಾಯ-50 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಮರಲಗಿ, ತಾ: ಸಿದ್ದಾಪುರ, 10]. ಕೃಷ್ಣ ಭೀಮಪ್ಪ ಲಮಾಣಿ, ಪ್ರಾಯ-30 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಶಿಗ್ಗಾಂವ, ಹಾವೇರಿ ಹಾಗೂ ಇನ್ನೂ ಇತರರು. ಈ ನಮೂದಿತ ಆರೋಪಿತರು ದಿನಾಂಕ: 21-01-2022 ರಂದು 16-00 ಗಂಟೆಗೆ ಸಿದ್ದಾಪುರ ತಾಲೂಕಿನ ಮರಲಗಿ ಗ್ರಾಮದ ಆಲೆಮನೆ ದಿಂಬದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಅಂದರ್-ಬಾಹರ್ ಇಸ್ಪೀಟ್ ಜುಗಾರಾಟ ಆಡುತ್ತಿದ್ದಾಗ ಪಿರ್ಯಾದಿಯವರು ಹಾಗೂ ಠಾಣಾ ಸಿಬ್ಬಂದಿಯವರು ಮತ್ತು ಪಂಚರೊಂದಿಗೆ ಸೇರಿ ದಾಳಿ ಮಾಡಿದಾಗ ಆರೋಪಿತರ ಆರೋಪಿ 1 ರಿಂದ 10 ನೇಯವರು 1). ನಗದು ಹಣ 9,570/- ರೂಪಾಯಿ, 2). 52 ಇಸ್ಪೀಟ್ ಎಲೆಗಳು, 3). ಮಂಡಕ್ಕೆ ಹಾಸಿದ್ದ ಒಂದು ಪ್ಲಾಸ್ಟಿಕ್ ತಾಡಪತ್ರೆ ಇವುಗಳೊಂದಿಗೆ ಸಿಕ್ಕಿದ್ದು ಹಾಗೂ ಇನ್ನಿತರ ಆರೋಪಿತರು ದಾಳಿಯ ಕಾಲಕ್ಕೆ ಓಡಿ ಹೋಗಿ ಪರಾರಿಯಾದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಕುಮಾರ ಕೆ, ಪೊಲೀಸ್ ನಿರೀಕ್ಷಕರು, ಸಿದ್ದಾಪುರ ಪೊಲೀಸ್ ಠಾಣೆ ರವರು ದಿನಾಂಕ: 21-01-2022 ರಂದು 18-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 21-01-2022

at 00:00 hrs to 24:00 hrs

 

ಕಾರವಾರ ಶಹರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 05/2022, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಪ್ರಸಾದ ತಂದೆ ಸದಾನಂದ ವಾರಕರ, ಪ್ರಾಯ-42 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ತಾಮಸೆವಾಡಾ, ಕೋಡಿಭಾಗ, ಕಾರವಾರ. ಪಿರ್ಯಾದಿಯ ತಂಗಿಯ ಮಗನಾದ ಈತನು ದಿನಾಂಕ: 20-01-2022 ರಂದು ಮಧ್ಯಾಹ್ನ 02-00 ಗಂಟೆಯ ಸುಮಾರಿಗೆ ನಂದನಗದ್ದಾದ ಶಮಾದೇವಿ ದೇವಸ್ಥಾನದ ಹತ್ತಿರ ಕಾಳಿ ನದಿಯ ದಡದಲ್ಲಿ ಚಿಪ್ಪಿಕಲ್ಲು ತೆಗೆಯುತ್ತಿದ್ದವನು, ಚಿಪ್ಪಿಕಲ್ಲು ತೆಗೆಯುತ್ತಾ ಕಾಳಿ ನದಿಯ ನಡುವೆ ಹೋದವನು ಆಯತಪ್ಪಿ ನದಿಯಲ್ಲಿ ಮುಳುಗಿ ಕಾಣೆಯಾದವನು, ದಿನಾಂಕ: 21-01-2022 ರಂದು 11-00 ಗಂಟೆಗೆ ಅರಬ್ಬಿ ಸಮುದ್ರದ ಲೇಡಿಸ್ ಬೀಚ್ ಹತ್ತಿರ ಮೃತಪಟ್ಟ ಸ್ಥಿತಿಯಲ್ಲಿ ಸಿಕ್ಕವನನ್ನು ಕರಾವಳಿ ಕಾವಲು ಪಡೆಯ ಬೋಟ್ ಸಹಾಯದಿಂದ ಪೊಲೀಸರು ಮತ್ತು ಪಿರ್ಯಾದಿಯವರು ಕಾರವಾರ ಅಲಿಗದ್ದಾದ ಸಮುದ್ರದ ದಡಕ್ಕೆ ತಂದಿದ್ದು, ಆತನು ನನ್ನ ತಂಗಿಯ ಮಗನಾಗಿದ್ದು, ನನ್ನ ತಂಗಿಯ ಮಗನು ಚಿಪ್ಪಿಕಲ್ಲು ತೆಗೆಯಲು ಹೋದವನು, ಕಾಳಿ ನದಿಯ ನೀರಿನಲ್ಲಿ ಆಯ ತಪ್ಪಿ ಮುಳುಗಿ ಮೃತಪಟ್ಟಿರುವ ಬಗ್ಗೆ ಕಂಡುಬರುತ್ತದೆ. ಇದರ ಹೊರತು ಆತನ ಮರಣದಲ್ಲಿ ಬೇರೆ ಯಾವುದೇ ಸಂಶಯವಿರುವುದಿಲ್ಲ. ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಗೋಕುಲದಾಸ ತಂದೆ ಯಶ್ವಂತ ಕೋಳಮಕರ್, ಪ್ರಾಯ-61 ವರ್ಷ, ವೃತ್ತಿ-ಚಾಲಕ, ಸಾ|| ಸಿದ್ದರ, ಹುಡುಗರವಾಡ, ಕಾರವಾರ ರವರು ದಿನಾಂಕ: 21-01-2022 ರಂದು 12-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಚಿತ್ತಾಕುಲಾ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 04/2022, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಜಾನ್ ತಂದೆ ಮಾರ್ಷಲ್ ಡಿಸೋಜ್, ಪ್ರಾಯ-25 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ವೇಗಸವಾಡ, ಚರ್ಚವಾಡ, ಚಿತ್ತಾಕುಲಾ, ಕಾರವಾರ. ಪಿರ್ಯಾದಿಯ ಅಳಿಯನಾದ ಈತನು ಬಿ.ಕಾಂ ಪದವೀಧರನಾಗಿದ್ದು ತನ್ನ ಓದಿಗೆ ಸರಿಯಾದ ಉದ್ಯೋಗ ಸಿಗಲಿಲ್ಲವೆಂದು ಬೇಸರದಲ್ಲಿದ್ದವನು, ಮಾನಸಿಕವಾಗಿ ಮನನೊಂದುಕೊಂಡಿದ್ದವನು ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ದಿನಾಂಕ: 18-01-2022 ರಂದು 10-45 ಗಂಟೆಗೆ ಕಾಳಿ ಸೇತುವೆಯ ಮೇಲಿನಿಂದ ಸಮುದ್ರಕ್ಕೆ ಹಾರಿ ನೀರಿನಲ್ಲಿ ಮುಳುಗಿದವನು, ದಿನಾಂಕ: 21-01-2022 ರಂದು 14-00 ಗಂಟೆಯ ಸುಮಾರಿಗೆ ಮೃತದೇಹವು ಕೂರ್ಮಗಡದ ಸಮೀಪ ನಿರಿನಲ್ಲಿ ಸಿಕ್ಕಿದ್ದನ್ನು, ಪೊಲೀಸರು ಮತ್ತು ಕರಾವಳಿ ಕಾವಲು ಪಡೆಯವರ ಸಹಾಯದಿಂದ ಬೋಟಿನಲ್ಲಿ ತೆಗೆದುಕೊಂಡು ತಂದು ಕಾರವಾರದ ಅಲಿಗದ್ದಾ ಸಮುದ್ರ ತೀರದಲ್ಲಿ ಇಟ್ಟಿದ್ದು, ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಪಿರ್ಯಾದಿ ಶ್ರೀ ಪೌಲ್ ತಂದೆ ಬಸ್ತ್ಯಾಂವ್ ಗೋಮ್ಸ್, ಪ್ರಾಯ-36 ವರ್ಷ, ವೃತ್ತಿ-ಗಾರೆ ಕೆಲಸ, ಸಾ|| ವೇಗಸವಾಡಾ, ಚರ್ಚವಾಡಾ, ಸದಾಶಿವಗಡ, ಕಾರವಾರ ರವರು ದಿನಾಂಕ: 21-01-2022 ರಂದು 14-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

 

ಇತ್ತೀಚಿನ ನವೀಕರಣ​ : 12-03-2022 05:24 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080