ದೈನಂದಿನ ಜಿಲ್ಲಾ ಅಪರಾಧ ವರದಿ
ದಿನಾಂಕ:- 21-07-2021
at 00:00 hrs to 24:00 hrs
ಅಂಕೋಲಾ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 110/2021, ಕಲಂ: 143, 147, 148, 323, 324, 504, 506 ಸಹಿತ 149 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಲಕ್ಷ್ಮಣ ರಾಮಾ ಗೌಡ, 2]. ಮುಕುಂದ ರಾಮಾ ಗೌಡ, 3]. ಶ್ರೀಧರ ರಾಮಾ ಗೌಡ, 4]. ಹರೀಶ ಲಕ್ಷ್ಮಣ ಗೌಡ, 5]. ಸೋಮಾ ಮುಕುಂದ ಗೌಡ, 6]. ಮಹೇಶ ಮುಕುಂದ ಗೌಡ, ಸಾ|| (ಎಲ್ಲರೂ) ಮಳೆಮನೆ, ಬೆಳಂಬಾರ, ತಾ: ಅಂಕೋಲಾ. ಅಂಕೋಲಾ ತಾಲೂಕಿನ ಬೆಳಂಬಾರದ ಮಳೆಮನೆಯಲ್ಲಿರುವ ಪಿರ್ಯಾದಿಯ ಗದ್ದೆಯಿಂದ ನೀರು ಆರೋಪಿ 1 ನೇಯವನ ಗದ್ದೆಯ ಮೂಲಕ ಹಿಂದಿನ ಅನಾದಿ ಕಾಲದಿಂದ ಹೋಗುತ್ತಾ ಬಂದಿದ್ದು, ಆರೋಪಿ 1 ಹಾಗೂ ಇತರೆ ಆರೋಪಿತರು ಅವರ ಬೆಳೆ ಬೆಳೆಯುವ ಸಲುವಾಗಿ ಪಿರ್ಯಾದಿಯ ಗದ್ದೆಯಿಂದ ಹರಿಯುವ ನೀರು ಅವರ ಗದ್ದೆಗೆ ಹೋಗದಂತೆ ಕಲ್ಲು ಮತ್ತು ಮಣ್ಣಿನ ಚೀಲ ಹಾಕಿ ತಡೆ ಹಿಡಿದು ನಿಲ್ಲಿಸಿದ್ದು, ಇದರಿಂದ ಪಿರ್ಯಾದಿಯ ಗದ್ದೆಯಲ್ಲಿ ಬೆಳೆ ಬೆಳೆಯಲು ಆಗದೆ ಪಿರ್ಯಾದಿಯು ಆರೋಪಿತರಿಗೆ ಹಲವು ಬಾರಿ ತಿಳಿಸಿದರೂ ಸಹ ಅವರೆಲ್ಲರೂ ಅದನ್ನೇ ಮುಂದುವರೆಸುತ್ತಾ ಬಂದಿದ್ದು, ದಿನಾಂಕ: 21-07-2021 ರಂದು ಬೆಳಿಗ್ಗೆ 06-30 ಗಂಟೆಯ ಸುಮಾರಿಗೆ ಪಿರ್ಯಾದಿ ಮತ್ತು ಪಿರ್ಯಾದಿಯ ತಂದೆ ಚಂದ್ರು ಕುಸ್ಲು ಗೌಡ ರವರು ಕೂಡಿ ಮಳೆಮನೆಯಲ್ಲಿರುವ ತಮ್ಮ ಗದ್ದೆಗೆ ಉಳುಮೆ ಮಾಡಲು ಹೋದಾಗ ಗದ್ದೆಯಲ್ಲಿ ನೀರು ತುಂಬಿದ್ದರಿಂದ ಉಳುಮೆ ಮಾಡಲು ಸಾಧ್ಯವಾಗದೇ, ಆರೋಪಿ 1 ನೇಯವನು ಹಾಗೂ ಅವನ ಸಹೋದರರಾದ ಇತರೆ ಆರೋಪಿತರು ಕಲ್ಲು ಮತ್ತು ಮಣ್ಣಿನ ಚೀಲ ಹಾಕಿ ಕಟ್ಟಿದ್ದ ನೀರನ್ನು ಬಿಡುತ್ತಿರುವಾಗ ಎಲ್ಲಾ ಆರೋಪಿತರು ಅಕ್ರಮಕೂಟ ಸೇರಿಕೊಂಡು ಬಂದು ‘ಕಟ್ಟಿದ್ದ ನೀರನ್ನು ಯಾಕೆ ಬಿಡುತ್ತಿರಾ, ಬೋಳಿ ಮಕ್ಕಳಾ, ಸೂಳೆ ಮಕ್ಕಳಾ’ ಅಂತಾ ಅವಾಚ್ಯವಾಗಿ ಬೈಯ್ದು ಆರೋಪಿ 1 ನೇಯವನು ತಾನು ತಂದಿದ್ದ ಕಟ್ಟಿಗೆಯ ದೊಣ್ಣೆಯಿಂದ ಪಿರ್ಯಾದಿಯ ತಂದೆಗೆ ಕುತ್ತಿಗೆಯ ಹಿಂದೆ ಮತ್ತು ಮುಖದ ಮೇಲೆ ಹೊಡೆದಿದ್ದು, ಆಗ ಪಿರ್ಯಾದಿಯು ಆರೋಪಿತರಿಗೆ ‘ತಮ್ಮ ತಂದೆಗೆ ಯಾಕೆ ಹೊಡೆಯುತ್ತೀರಿ?’ ಅಂತಾ ಕೇಳಿದಾಗ ಉಳಿದ ಆರೋಪಿತರೆಲ್ಲರೂ ಸೇರಿ ಪಿರ್ಯಾದಿಗೆ ಕೆನ್ನೆಗೆ ಹಾಗೂ ಮೈ ಮೇಲೆ ಕೈಯಿಂದ ಮತ್ತು ಕಾಲಿನಿಂದ ಹೊಡೆದು ದುಃಖಾಪತ್ ಪಡಿಸಿದ್ದಲ್ಲದೇ, ಪಿರ್ಯಾದಿ ಮತ್ತು ಪಿರ್ಯಾದಿಯ ತಂದೆಯವರು ಕೂಗಿಕೊಂಡಾಗ ಅಕ್ಕಪಕ್ಕದ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದವರು ಓಡಿ ಬಂದು ಪಿರ್ಯಾದಿ ಮತ್ತು ಪಿರ್ಯಾದಿಯ ತಂದೆಯವರಿಗೆ ಇನ್ನೂ ಹೊಡೆಯದಂತೆ ತಪ್ಪಿಸಿದಾಗ ಎಲ್ಲಾ ಆರೋಪಿತರು ಅಲ್ಲಿಂದ ಹೋಗುತ್ತಾ ‘ಈ ದಿವಸ ಬಚಾವ್ ಆದ್ರಿ, ಇನ್ನೊಮ್ಮೆ ನೀರಿನ ತಂಟೆಗೆ ಬಂದರೆ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ. ಇದೇ ಗದ್ದೆಯಲ್ಲಿ ಕೊಂದು ಹಾಕುತ್ತೇವೆ’ ಅಂತಾ ಜೀವ ಬೆದರಿಕೆ ಹಾಕಿದ ಬಗ್ಗೆ ಪಿರ್ಯಾದಿ ಶ್ರೀ ಬುದ್ಧು ತಂದೆ ಚಂದ್ರು ಗೌಡ, ಪ್ರಾಯ-37 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಮಳೆಮನೆ, ಬೆಳಂಬಾರ, ತಾ: ಅಂಕೋಲಾ ರವರು ದಿನಾಂಕ: 21-07-2021 ರಂದು 13-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಮಂಕಿ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 102/2021, ಕಲಂ: 32, 34 ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ಕೇಶವ ತಂದೆ ರಾಮ ನಾಯ್ಕ, ಪ್ರಾಯ-ಅಂದಾಜು 50 ವರ್ಷ, ಸಾ|| ದಬ್ಬೊಡ, ಚಿತ್ತಾರ, ತಾ: ಹೊನ್ನಾವರ. ಈತನು ದಿನಾಂಕ: 21-07-2021 ರಂದು 12-10 ಗಂಟೆಗೆ ದಬ್ಬೊಡದಲ್ಲಿರುವ ತನ್ನ ಅಂಗಡಿಯ ಪಕ್ಕದಲ್ಲಿನ ರಸ್ತೆ ಬದಿಯ ಸಾರ್ವಜನಿಕ ಸ್ಥಳದಲ್ಲಿ ನಿಂತು ತನ್ನ ಲಾಭಕ್ಕಾಗಿ 90 ML ಅಳತೆಯ HAYWARDS CHEERS WHISKEY ಅಂತಾ ಬರೆದ ಸರಾಯಿ ಇದ್ದ ಪ್ಯಾಕೆಟ್-40 (ಅ||ಕಿ|| 1,400/- ರೂಪಾಯಿಗಳು) ಹಾಗೂ 180 ML ಅಳತೆಯ OLD TAVERAN WHISKEY ಅಂತಾ ಬರೆದ ಸರಾಯಿ ಇದ್ದ ಪ್ಯಾಕೆಟ್-8 (ಅ||ಕಿ|| 688/- ರೂಪಾಯಿಗಳು) ಗಳನ್ನು ಕಪ್ಪು ಬಣ್ಣದ ಪ್ಲಾಸ್ಟಿಕ್ ಕ್ಯಾರಿ ಬ್ಯಾಗಿನಲ್ಲಿ ಇಟ್ಟುಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದವನು, ದಾಳಿಯ ವೇಳೆ ಸರಾಯಿ ಪ್ಯಾಕೆಟ್ ಗಳಿದ್ದ ಕ್ಯಾರಿ ಬ್ಯಾಗನ್ನು ಸ್ಥಳದಲ್ಲಿ ಬಿಟ್ಟು ಓಡಿ ಹೋದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಅಶೋಕ ಮಾಳಾಬಗಿ, ಪಿ.ಎಸ್.ಐ (ಕಾ&ಸು), ಮಂಕಿ ಪೊಲೀಸ್ ಠಾಣೆ ರವರು ದಿನಾಂಕ: 21-07-2021 ರಂದು 14-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 93/2021, ಕಲಂ: 4, 12 THE KARNATAKA PREVENTION OF SLAUGHTER AND PRESERVATION OF CATTLE ORDINANCE-2020 ಹಾಗೂ ಕಲಂ: 429 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು ಯಾರೋ ಅಪರಿಚಿತರಾಗಿದ್ದು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಈ ನಮೂದಿತ ಆರೋಪಿತರು ದಿನಾಂಕ: 20-07-2017 ರಂದು 16-00 ಗಂಟೆಯ ಸಮಯಕ್ಕೆ ಭಟ್ಕಳದ ತಾಲೂಕಿನ ಕೊಟಖಂಡ ಗ್ರಾಮದ ಗುಡ್ಡೆಕಟ್ಟೆ ಬೇಣದಲ್ಲಿ ಪಿರ್ಯಾದಿಯವರಿಗೆ ಸೇರಿದ ಸುಮಾರು ಅ||ಕಿ|| 15,000/- ರೂಪಾಯಿ ಮೌಲ್ಯದ ಕಪ್ಪು ಬಣ್ಣದ ದನವನ್ನು ಹಿಂಸಾತ್ಮಕವಾಗಿ ವಧೆ ಮಾಡಿ ಅದರ ರುಂಡವನ್ನು ಕತ್ತರಿಸಿ ದನದ ಹೊಟ್ಟೆಯ ಭಾಗವನ್ನು ಚಾಕುವಿನಿಂದ ಕೊಯ್ದು ಹಾಕಿ ಪಿರ್ಯಾದಿಯನ್ನು ನೋಡಿ ಇಬ್ಬರೂ ಸ್ಥಳದಿಂದ ಓಡಿ ಹೋದ ಬಗ್ಗೆ ಪಿರ್ಯಾದಿ ಶ್ರೀ ಸುಕ್ರ ತಂದೆ ಸಣ್ಣು ಗೊಂಡ, ಪ್ರಾಯ-45 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಕೊಟಖಂಡ, ತಾ: ಭಟ್ಕಳ ರವರು ದಿನಾಂಕ: 21-07-2021 ರಂದು 10-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 94/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಸತೀಶ ಪಿ. ಎಸ್. ತಂದೆ ಪಿ. ಸೀನಾ, ಸಾ|| ಪಾರಂಪಳ್ಳಿ, ಸಾಲಿಗ್ರಾಮ, ಉಡುಪಿ (ಈಚರ್ ಕಂಟೇನರ ವಾಹನ ನಂ: ಕೆ.ಎ-01/ಎ.ಜೆ-8493 ನೇದರ ಚಾಲಕ). ಈತನು ದಿನಾಂಕ: 21-07-2017 ರಂದು 15-15 ಗಂಟೆಯ ಸಮಯಕ್ಕೆ ತಾನು ಚಲಾಯಿಸಿಕೊಂಡು ಬಂದ ಈಚರ್ ಕಂಟೆನರ ವಾಹನ ನಂ: ಕೆ.ಎ-01/ಎ.ಜೆ-8493 ನೇದನ್ನು ಭಟ್ಕಳ ಕಡೆಯಿಂದ ಕುಂದಾಪುರ ಕಡೆಗೆ ಅತೀವೇಗವಾಗಿ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದವನ್ನು ಅದರ ವೇಗವನ್ನು ನಿಯಂತ್ರಿಸದೇ ಹಿಂದಿನಿಂದ ಬರುತ್ತಿದ್ದ ಪಿರ್ಯಾದಿಯ ಹೀರೋ ಸ್ಲೆಂಡರ್ ಪ್ರೋ ಮೋಟಾರ ಸೈಕಲ್ ನಂ: ಕೆ.ಎ-47/ಕ್ಯೂ5706 ನೇದಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದರ ಪರಿಣಾಮ ಈ ಅಪಘಾತದಲ್ಲಿ ಹೀರೋ ಸ್ಲೆಂಡರ್ ಪ್ರೋ ಮೋಟಾರ ಸೈಕಲ್ ನಂ: ಕೆ.ಎ-47/ಕ್ಯೂ-5706 ನೇದರ ಸವಾರನಾದ ಪಿರ್ಯಾದಿಗೆ ಎಡಗಾಲು ಮತ್ತು ಎದೆಯ ಭಾಗಕ್ಕೆ ಹಾಗೂ ಮೋಟಾರ್ ಸೈಕಲ್ ಹಿಂಬದಿಯಲ್ಲಿ ಕುಳಿತುಕೊಂಡಿದ್ದ ಗಣೇಶ ತಂದೆ ಮಾದೇವ ನಾಯ್ಕ ಇವರಿಗೆ ತೊಡೆಯ ಭಾಗಕ್ಕೆ ಮತ್ತು ಸೊಂಟಕ್ಕೆ ಪೆಟ್ಟು ಪಡಿಸಿ, ಆರೋಪಿ ಚಾಲಕನು ಮೋಟಾರ್ ಸೈಕಲನ್ನು ಜಖಂಗೊಳಿಸಿದ ಬಗ್ಗೆ ಪಿರ್ಯಾದಿ ಶ್ರೀ ರಾಮಚಂದ್ರ ತಂದೆ ರಾಮಾ ನಾಯ್ಕ, ಪ್ರಾಯ-36 ವರ್ಷ, ವೃತ್ತಿ-ಯಲ್ವಡಿಕವೂರ ಪಂಚಾಯತದಲ್ಲಿ ಕ್ಲರ್ಕ್, ಸಾ|| ಗೊಳಿಬಿಳೂರು, ಪೋ: ಯಲ್ವಡಿಕವೂರ, ತಾ: ಭಟ್ಕಳ ರವರು ದಿನಾಂಕ: 21-07-2021 ರಂದು 10-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಹಳಿಯಾಳ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 127/2021, ಕಲಂ: 403, 406, 409, 420, 465, 467 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ವಿನೋದ ತಂದೆ ವಿಲಾಸ ಮಿಂಡೋಲ್ಕರ್, ವೃತ್ತಿ-ಗ್ರಾಮೀಣ ಅಂಚೆ ಸೇವಕ ಶಾಖಾ ಅಂಚೆ ಪಾಲಕ (GDS BPM), ಹುಣಸವಾಡ, ಸಾ|| ತೆರಗಾಂವ, ತಾ: ಹಳಿಯಾಳ. ಈತನು ಗ್ರಾಮೀಣ ಅಂಚೆ ಸೇವಕ ಶಾಖಾ ಅಂಚೆ ಪಾಲಕ ಅಂತ ಅಂಚೆ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದವನು, ಅವನಿಗೆ ದಾಂಡೇಲಿ ಉಪ ಅಂಚೆ ವಿಭಾಗದ ತೆರಗಾಂವ ಉಪ ಅಂಚೆ ಕಛೇರಿಯ ವ್ಯಾಪ್ತಿಗೆ ಒಳಪಡುವ ಹುಣಸವಾಡ ಶಾಖಾ ಅಂಚೆ ಗ್ರಾಮೀಣ ಅಂಚೆ ಪಾಲಕ ಅಂತ ನೇಮಕ ಮಾಡಿದ್ದು, ಸದರಿಯವನು ದಿನಾಂಕ: 28-01-2016 ರಂದು ಶ್ರೀ ಅಣ್ಣಪ್ಪ ವೆಂಕಟೇಶ ರೆಡೆಕರ ಇವರು ತಮ್ಮ ಆರ್.ಡಿ ಖಾತೆ ನಂ: 2083669587 (ಹಳೆ ಸಂಖ್ಯೆ: 72965) ಮತ್ತು ಆರ್.ಡಿ ಖಾತೆ ನಂ: 2083677964 (ಹಳೆ ಸಂಖ್ಯೆ: 74289) ನೇದವುಗಳಿಗೆ ಪ್ರತಿ ಖಾತೆಗೆ 621/- ರೂಪಾಯಿಯಂತೆ ಜಮಾ ಮಾಡಲು ನೀಡಿದ ಒಟ್ಟು 1,242/- ರೂಪಾಯಿಯನ್ನು ಅಂಚೆ ಕಚೇರಿಯ ಲೆಕ್ಕಕ್ಕೆ ಜಮಾ ಮಾಡದೇ ತನ್ನ ಸ್ವಂತಕ್ಕೆ ಬಳಸಿಕೊಂಡಿರುತ್ತಾನೆ. ಅಲ್ಲದೇ ದಿನಾಂಕ: 10-03-2017 ರಂದು ಶ್ರೀಮತಿ ಪಾರ್ವತಿ ಮಡಿವಾಳ ಇವರು ಮುದ್ದತು ಠೇವಣಿ ಮಾಡಲು ನೀಡಿದ 60,000/- ರೂಪಾಯಿ ಹಣವನ್ನು ಪಡೆದು ಅವರಿಗೆ ರಶೀದಿ ನೀಡಿ, ಸದರ ಹಣವನ್ನು ಅಂಚೆ ಕಚೇರಿಯ ಲೆಕ್ಕಕ್ಕೆ ಜಮಾ ಮಾಡದೇ ತನ್ನ ಸ್ವಂತಕ್ಕೆ ಬಳಸಿಕೊಂಡು, ತನಗೆ ಪಾಸಬುಕ್ ವಿತರಿಸಲು ಅಧಿಕಾರವಿಲ್ಲದಿದ್ದರೂ ಸದ್ರಿಯವರಿಗೆ ದಿನಾಂಕ: 18-07-2017 ರಂದು ಅಂಚೆ ಇಲಾಖೆಯ ಒಂದು ಪಾಸಬುಕ್ ನಲ್ಲಿ ತನ್ನ ಎಸ್.ಬಿ ಖಾತೆಯ ನಂಬರ್ ನಮೂದಿಸಿ ನೀಡಿರುತ್ತಾನೆ. ಹೀಗೆ ಆರೋಪಿತನು ಖಾತೆದಾರರಿಂದ ಪಡೆದ ಒಟ್ಟು 61,242/- ರೂಪಾಯಿಗಳನ್ನು ಅಂಚೆ ಕಚೇರಿಯ ಲೆಕ್ಕಕ್ಕೆ ಜಮಾ ಮಾಡದೆ ತನ್ನ ಸ್ವಂತಕ್ಕೆ ಬಳಸಿಕೊಂಡು, ಸದ್ರಿ ಖಾತೆದಾರರಿಗೆ ಹಾಗೂ ಅಂಚೆ ಇಲಾಖೆಗೆ ಮೋಸ ಮತ್ತು ನಂಬಿಕೆ ದ್ರೋಹ ಮಾಡಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಪ್ರವೀಣ ತಂದೆ ಫಕೀರಪ್ಪ ಅಜಗಣ್ಣನವರ, ಪ್ರಾಯ-34 ವರ್ಷ, ವೃತ್ತಿ-ಅಂಚೆ ನಿರೀಕ್ಷಕರು, ದಾಂಡೇಲಿ ಅಂಚೆ ಉಪವಿಭಾಗ, ದಾಂಡೇಲಿ, ಸಾ|| ಮದಿಹಾಳ, ಧಾರವಾಡ ರವರು ದಿನಾಂಕ: 21-07-2021 ರಂದು 18-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
======||||||||======
ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ
ದಿನಾಂಕ:- 21-07-2021
at 00:00 hrs to 24:00 hrs
ಪ್ರಕರಣಗಳು ದಾಖಲಾಗಿರುವುದಿಲ್ಲ....
======||||||||======