ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 21-06-2021

at 00:00 hrs to 24:00 hrs

 

ಚಿತ್ತಾಕುಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 21/2021, ಕಲಂ: 279, 304(ಎ) ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಅಜಿತ ತಂದೆ ರಾಮದಾಸ ನಾಯ್ಕ, ಪ್ರಾಯ-ಸುಮಾರು 45 ವರ್ಷ, ಸಾ|| ಬಿಡ್ತುಲಭಾಗ, ಸದಾಶಿವಗಡ, ಕಾರವಾರ (ಮೋಟಾರ್ ಸೈಕಲ್ ನಂ: ಕೆ-30/ಕೆ-0603 ನೇದರ ಸವಾರ). ದಿನಾಂಕ: 21-06-2021 ರಂದು ಪಿರ್ಯಾದಿಯು ಅಸ್ನೋಟಿ ಸಾವಂತವಾಡದ ಮನೆಯಲ್ಲಿ ತಾನು ನಿದ್ರೆಯಿಂದ ಮಧ್ಯರಾತ್ರಿ 01-30 ಗಂಟೆಯ ಸುಮಾರಿಗೆ ನೀರು ಕುಡಿಯಲು ಎದ್ದಾಗ ಮನೆಯ ಹೊರಗೆ ‘ಧಡ್’ ಎಂಬ ಜೋರಾದ ಶಬ್ದ ಕೇಳಿ ಹೊರಗೆ ಬಂದು ನೊಡಿದಾಗ ಮೋಟಾರ್ ಸೈಕಲ್ ನಂ: ಕೆ.ಎ-30/ಕೆ-0603 ನೇದರ ಸವಾರನಾದ ನಮೂದಿತ ಆರೋಪಿತನು ಅತೀವೇಗದಲ್ಲಿದ್ದ ತನ್ನ ಮೋಟಾರ್ ಸೈಕಲನ್ನು ನಿಯಂತ್ರಿಸಲು ಸಾಧ್ಯವಾಗದೇ ಯಾವುದೋ ಪ್ರಾಣಿಗೆ ಡಿಕ್ಕಿ ಪಡಿಸಿ, ಮೋಟಾರ್ ಸೈಕಲ್ ಸಮೇತ ರಸ್ತೆಯ ಮೇಲೆ ಬಿದ್ದು ತನ್ನ ತಲೆಗೆ ಬಲವಾದ ರಕ್ತಗಾಯ ಪಡಿಸಿಕೊಂಡಿದ್ದು, ಪಿರ್ಯಾದಿಯವರು ಸ್ಥಳೀಯರ ಸಹಾಯದಿಂದ ಉಪಚರಿಸಿದರು ಕೂಡಾ ನಮೂದಿತ ಆರೋಪಿ ಮೋಟಾರ್ ಸೈಕಲ್ ಸವಾರನು ಸ್ಥಳದಲ್ಲಿಯೇ ಮೃತನಾದ ಬಗ್ಗೆ ಪಿರ್ಯಾದಿ ಶ್ರೀ ಮನೋಜ ತಂದೆ ಕೃಷ್ಣ ಗಡ್ಕರ, ಪ್ರಾಯ-43 ವರ್ಷ, ವೃತ್ತಿ-ಚಾಲಕ, ಸಾ|| ಸಾವಂತವಾಡ, ಅಸ್ನೋಟಿ, ಕದ್ರಾ, ಕಾರವಾರ ರವರು ದಿನಾಂಕ: 21-06-2021 ರಂದು 02-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 169/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಕಾರ್ತಿಕ ತಂದೆ ಕಮಲಾಕರ ಮೇಸ್ತಾ, ಪ್ರಾಯ-23 ವರ್ಷ, ಸಾ|| ಕೆರೆಕಲ್ಲು, ರಾಕ್, ತಾ: ಕಾರ್ಕಳ, ಜಿ: ಉಡುಪಿ (ಮೋಟಾರ್ ಸೈಕಲ್ ನಂ: ಕೆ.ಎ-19/ಇ.ಸಿ-631 ನೇದರ ಸವಾರ). ಈತನು ದಿನಾಂಕ: 21-6-2021 ರಂದು ಮಧ್ಯಾಹ್ನ 14-15 ಗಂಟೆಯ ಸಮಯಕ್ಕೆ ತಾನು ಚಲಾಯಿಸುತ್ತಿದ್ದ ಮೋಟಾರ್ ಸೈಕಲ್ ನಂ: ಕೆ.ಎ-19/ಇ.ಸಿ-631 ನೇದನ್ನು ಹೊನ್ನಾವರದ ಶರಾವತಿ ಸರ್ಕಲ್‍ನಲ್ಲಿ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರಲ್ಲಿ ಕುಮಟಾ ಕಡೆಯಿಂದ ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಒಮ್ಮೇಲೆ ತನ್ನ ಬಲಬದಿಗೆ ಮೋಟಾರ್ ಸೈಕಲನ್ನು ಚಲಾಯಿಸಿ, ನಮ್ಮ ಇನೋವಾ ಕಾರ್ ನಂ: ಕೆ.ಎ-47/ಎಂ-5808 ನೇದಕ್ಕೆ ಡಿಕ್ಕಿ ಪಡಿಸಿ, ಕಾರಿನ ಮುಂಬದಿ ಬಂಪರ್ ಜಖಂಗೊಳಿಸಿದ್ದಲ್ಲದೇ, ಆರೋಪಿ ಮೋಟಾರ್ ಸೈಕಲ್ ಸವಾರನು ತನಗೂ ಸಹ ತೆರಚಿದ ಗಾಯನೋವು ಹಾಗೂ ದುಃಖಾಪತ್ ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ಹರಿಶ್ಚಂದ್ರ ತಂದೆ ನಾಗೇಶ ನಾಯ್ಕ, ಪ್ರಾಯ-54 ವರ್ಷ, ವೃತ್ತಿ-ಇಂಜಿನೀಯರ್, ಸಾ|| ಕೊಪ್ಪಳಕರವಾಡಿ, ತಾ: ಕುಮಟಾ ರವರು ದಿನಾಂಕ: 21-06-2021 ರಂದು 17-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 170/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಸಂಭಾಜಿ ತಂದೆ ಮಹಾದೇವ ವರೂಟೆ, ಪ್ರಾಯ-39 ವರ್ಷ, ವೃತ್ತಿ-ಲಾರಿ ಚಾಲಕ, ಸಾ|| ತೆಲವಾಡಿ ಪತ್ರಾ ಚಾಳ, ನ್ಯೂ ಪ್ರಭಾದೇವಿ ರೋಡ್, ವಾಕಡಿ ಹತ್ತಿರ, ಮುಂಬೈ, ಮಹಾರಾಷ್ಟ್ರ, ಹಾಲಿ ಸಾ|| ರಾಸಾಯಿ ಸೆಂಡೂರ, ತಾ: ಚಿಕ್ಕೋಡಿ, ಜಿ: ಬೆಳಗಾವಿ (ಲಾರಿ ನಂ: ಕೆ.ಎ-23/ಎ-8711 ನೇದರ ಚಾಲಕ). ಈತನು ದಿನಾಂಕ: 21-06-2021 ರಂದು ಬೆಳಗ್ಗೆ 07-30 ಗಂಟೆಯ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರಲ್ಲಿ ಹೊನ್ನಾವರ ಶಹರದ ಮಿನಿ ವಿಧಾನಸೌಧದ ಎದುರಿಗೆ ತನ್ನ ಬಾಬ್ತು ಲಾರಿ ನಂ: ಕೆ.ಎ-23/ಎ-8311 ನೇದನ್ನು ಕುಮಟಾ ಕಡೆಯಿಂದ ಭಟ್ಕಳ ಕಡೆಗೆ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿಯು ಹೊನ್ನಾವರ ಕಡೆಯಿಂದ ಕಾಸರಕೋಡ ಕಡೆಗೆ ನಿಧಾನವಾಗಿ ಚಲಾಯಿಸಿಕೊಂಡು ಹೋಗುತ್ತಿದ್ದ ಕಾರ್ ನಂ: ಕೆಎ-19/ಎಮ್.ಡಿ-2018 ನೇದಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಪಿರ್ಯಾದಿಯ ಮೂಗಿಗೆ ಗಾಯ ಪಡಿಸಿದ್ದಲ್ಲದೇ, ತಲೆಗೆ, ಬಲಗೈ ಮೊಣಗಂಟಿಗೆ ಹಾಗೂ ಬಲಗಾಲಿನ ಮೊಣಗಂಟಿಗೆ ಕೆಳಗೆ ಒಳಪೆಟ್ಟು ಪಡಿಸಿ, ಪಿರ್ಯಾದಿಯ ಕಾರನ್ನು ಜಖಂ ಪಡಿಸಿದ ಬಗ್ಗೆ ಪಿರ್ಯಾದಿ ಡಾ|| ರಾಜು ತಂದೆ ಟಾಕರಪ್ಪ ಮಾಳಗಿಮನಿ, ಪ್ರಾಯ-38 ವರ್ಷ, ವೃತ್ತಿ-ಉಪನ್ಯಾಸಕರು, ಸಾ|| ಪ್ರಭಾತನಗರ, ಕೆ.ಎಚ್.ಬಿ ಕಾಲೋನಿ, ತಾ: ಹೊನ್ನಾವರ ರವರು ದಿನಾಂಕ: 21-06-2021 ರಂದು 18-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಶಹರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 73/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ವಿಲ್ಫ್ರೆಡ್ ತಂದೆ ಸಾಲ್ವದಾರ್ ರೋಡ್ರಗೀಸ್, ಪ್ರಾಯ-29 ವರ್ಷ, ಸಾ|| ಕೆಳಗಿನೂರು, ಕಾಸರಕೋಡ, ತಾ: ಹೊನ್ನಾವರ (ಖಾಸಗಿ ಆಂಬ್ಯುಲೆನ್ಸ್ ವಾಹನ ನಂ: ಕೆ.ಎ-47/5744 ನೇದರ ಚಾಲಕ). ಈತನು ದಿನಾಂಕ: 20-06-2021 ರಂದು 17-15 ಗಂಟೆಯ ಸುಮಾರಿಗೆ ಭಟ್ಕಳ ಶಹರದ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ರಸ್ತೆಯ ಶಂಷುದ್ದೀನ ಸರ್ಕಲಿನಲ್ಲಿ ತಾನು ಚಲಾಯಿಸುತ್ತಿದ್ದ ಖಾಸಗಿ ಆಂಬ್ಯುಲೆನ್ಸ್ ವಾಹನ ನಂ: ಕೆ.ಎ-47/5744 ನೇದನ್ನು ಹೊನ್ನಾವರ ಕಡೆಯಿಂದ ಕುಂದಾಪುರದ ಕಡೆಗೆ ಅತೀವೇಗವಾಗಿ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗುತ್ತಾ ಅದೇ ದಿಸೆಯಲ್ಲಿ ಅಂದರೆ ಭಟ್ಕಳ ಶಹರದ ಕಾಮಾಕ್ಷಿ ಪೆಟ್ರೋಲ್ ಬಂಕ್ ಕಡೆಯಿಂದ ಭಟ್ಕಳ ಶಹರದ ಹೊಸ ಬಸ್ ನಿಲ್ದಾಣದ ಕಡೆಗೆ ಪಿರ್ಯಾದಿಯವರು ಚಲಾಯಿಸಿಕೊಂಡು ಹೋಗುತ್ತಿದ್ದ ಆಟೋ ರಿಕ್ಷಾ ನಂ: ಕೆ.ಎ-47/3584 ನೇದಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಪಿರ್ಯಾದಿಯವರಿಗೆ ಸಾದಾ ಸ್ವರೂಪದ ಗಾಯನೋವು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ನಾಗರಾಜ ತಂದೆ ತಿಮ್ಮಪ್ಪ ಬಾಗಲ @ ದೇವಾಡಿಗ, ಪ್ರಾಯ-45 ವರ್ಷ, ವೃತ್ತಿ-ಆಟೋ ಚಾಲಕ, ಸಾ|| ಪಾಯರವುಡ್ ಡಿಪೋ ಹತ್ತಿರ, ಮುಂಡಳ್ಳಿ, ತಾ: ಭಟ್ಕಳ ರವರು ದಿನಾಂಕ: 21-06-2021 ರಂದು 17-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಶಹರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 74/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಬಸವರಾಜ ತಂದೆ ಶೀನಾ ಶೆಟ್ಟಿಗಾರ, ಪ್ರಾಯ-54 ವರ್ಷ, ವೃತ್ತಿ-ವಾಸ್ತು ಸಲಹೆಗಾರರು, ಸಾ|| ಓಂ ಶ್ರೀ ಕುದುರೆ ಕೆರೆಬೆಟ್ಟು ಕೋಟೇಶ್ವರ, ತಾ: ಕುಂದಾಪುರ, ಜಿ: ಉಡುಪಿ (ಕಾರ್ ನಂ: ಕೆ.ಎ-20/ಎಮ್.ಬಿ-4706 ನೇದರ ಚಾಲಕ). ಈತನು ದಿನಾಂಕ: 21-06-2021 ರಂದು 14-45 ಗಂಟೆಯ ಸುಮಾರಿಗೆ ಭಟ್ಕಳ ಶಹರದ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ರಸ್ತೆಯ ಮುಟ್ಟಳ್ಳಿ ಬೈಪಾಸ್ ಹತ್ತಿರ ತನ್ನ ಕಾರ್ ನಂ: ಕೆ.ಎ-20/ಎಮ್.ಬಿ-4706 ನೇದನ್ನು ಹೊನ್ನಾವರ ಕಡೆಯಿಂದ ಕುಂದಾಪುರದ ಕಡೆಗೆ ಅತೀವೇಗವಾಗಿ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗುತ್ತಾ ಭಟ್ಕಳ ಶಹರದ ಪುರವರ್ಗದ ಕಡೆಯಿಂದ ಭಟ್ಕಳ ಶಹರದ ಕಡೆಗೆ ಪಿರ್ಯಾದಿಯವರು ಚಲಾಯಿಸಿಕೊಂಡು ಬರುತ್ತಿದ್ದ ಆಟೋ ರಿಕ್ಷಾ ನಂ: ಕೆ.ಎ-47/ಎ-2170 ನೇದಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಪಿರ್ಯಾದಿಯವರಿಗೆ ಹಾಗೂ ಪಿರ್ಯಾದಿಯವರ ಆಟೋ ರಿಕ್ಷಾದಲ್ಲಿದ್ದ ಶ್ರೀ ಭುವನ ತಂದೆ ಮಾರುತಿ ದೇವಾಡಿಗ, ಪ್ರಾಯ-21 ವರ್ಷ, ವೃತ್ತಿ-ಮೆಕ್ಯಾನಿಕಲ್ ಕೆಲಸ, ಸಾ|| ಸಣ್ಣಬಲಸೆ, ಬೈಲೂರು, ಮುರ್ಡೇಶ್ವರ, ತಾ: ಭಟ್ಕಳ ಇವರಿಗೆ ಸಾದಾ ಸ್ವರೂಪದ ಗಾಯನೋವು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಸತೀಶ ತಂದೆ ರಾಮಾ ದೇವಾಡಿಗ, ಪ್ರಾಯ-31 ವರ್ಷ, ವೃತ್ತಿ-ಆಟೋ ಚಾಲಕ, ಸಾ|| ಸಣ್ಣಬಲಸೆ, ಬೈಲೂರು, ಮುರ್ಡೇಶ್ವರ, ತಾ: ಭಟ್ಕಳ ರವರು ದಿನಾಂಕ: 21-06-2021 ರಂದು 18-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 85/2021, ಕಲಂ: 379 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ದಿನಾಂಕ: 13-06-2021 ರಂದು ರಾತ್ರಿ 10-00 ಗಂಟೆಯಿಂದ ದಿನಾಂಕ: 14-06-2021 ರ ಬೆಳಿಗ್ಗೆ 06-00 ಗಂಟೆಯ ನಡುವಿನ ಅವಧಿಯಲ್ಲಿ ಭಟ್ಕಳ ತಾಲೂಕಿನ ಬೆಳಕೆ ಹೊಳೆಗದ್ದೆಯ ಪಿರ್ಯಾದಿಯವರ ಮನೆಯ ಎದುರಿನ ಸಾರ್ವಜನಿಕ ರಸ್ತೆಯ ಮೇಲೆ ನಿಲ್ಲಿಸಿಟ್ಟ ಸುಮಾರು 4,000/- ರೂಪಾಯಿ ಮೌಲ್ಯದ  ಪಿರ್ಯಾದಿಯ ಬಾಬ್ತು ಬಜಾಜ್ ಸಿಟಿ-100 ಮೋಟಾರ್ ಸೈಕಲ್ ನಂ: ಕೆ.ಎ-47/ಇ-1066 ನೇದನ್ನು ಕಳುವು ಮಾಡಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀ ವೆಂಕಟೇಶ ತಂದೆ ಜೋಗಿ ನಾಯ್ಕ, ಪ್ರಾಯ-38 ವರ್ಷ, ವೃತ್ತಿ-ವ್ಯಾಪಾರ, ಸಾ|| ಧರ್ಮಕಟ್ಟೆಮನೆ, ಹೊಳೆಗದ್ದೆ, ಗೊರಟೆ ಕ್ರಾಸ್, ಬೆಳಕೆ, ತಾ: ಭಟ್ಕಳ ರವರು ದಿನಾಂಕ: 21-06-2021 ರಂದು 20-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 99/2021, ಕಲಂ: 25(1ಬಿ) ಭಾರತೀಯ ಆಯುಧ ಅಧಿನಿಯಮ-1959 ನೇದ್ದರ ವಿವರ...... ನಮೂದಿತ ಆರೋಪಿತ ದೊಂಡು ತಂದೆ ಬಾಬು ಪಟಕಾರೆ, ಪ್ರಾಯ-26 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಬೊಂಬಡಿಕೊಪ್ಪ, ಪೋ: ಕಿರವತ್ತಿ, ತಾ: ಯಲ್ಲಾಪುರ. ಈತನು ಯಲ್ಲಾಪುರ ತಾಲೂಕಿನ ಬೊಂಬಡಿಕೊಪ್ಪ ಗ್ರಾಮದಲ್ಲಿರುವ ತನ್ನ ಮನೆಯ ಹಿತ್ತಲಿನಲ್ಲಿ ಒಂಟಿ ನಳಿಕೆಯ ನಾಡ ಬಂದೂಕನ್ನು ಯಾವುದೇ ಅಧೀಕೃತ ಪರವಾನಿಗೆ ಇಲ್ಲದೇ ಅನಧೀಕೃತವಾಗಿ ಇಟ್ಟುಕೊಂಡಿರುವಾಗ ದಿನಾಂಕ: 21-06-2021 ರಂದು 14-15 ಗಂಟೆಗೆ ದಾಳಿಯ ವೇಳೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಮಂಜುನಾಥ ಎಸ್. ಗೌಡರ್, ಪಿ.ಎಸ್.ಐ, ಯಲ್ಲಾಪುರ ಪೊಲೀಸ್ ಠಾಣೆ ರವರು ದಿನಾಂಕ: 21-06-2021 ರಂದು 16-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 100/2021, ಕಲಂ: 279, 283, 337, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಗಂಗಾಧರ ತಂದೆ ಹನುಮಂತ್, ಪ್ರಾಯ-23 ವರ್ಷ, ಸಾ|| ಅಧೋನಿ, ವಾಲ್ಮಿಕಿ ನಗರ, ಆಂಧ್ರ ಪ್ರದೇಶ (ಮಹೀಂದ್ರಾ ಕ್ಸೈಲೋ ಕಾರ್ ನಂ: ಎ.ಪಿ-21/ಬಿ.ಎನ್-4500 ನೇದರ ಚಾಲಕ), 2]. ಮಲ್ಲಿಕಾರ್ಜುನ ತಂದೆ ಪರುಶರಾಮಪ್ಪಾ ಜೊಗಿನ್, ಪ್ರಾಯ-24 ವರ್ಷ, ವೃತ್ತಿ-ಲಾರಿ ಚಾಲಕ, ಸಾ|| ತಿಮ್ಮಾಪುರ, ತಾ&ಜಿ: ಗದಗ (ಲಾರಿ ನಂ: ಕೆ.ಎ-27/ಬಿ-6612 ನೇದರ ಚಾಲಕ). ಈ ನಮೂದಿತ ಆರೋಪಿತರಲ್ಲಿ ಆರೋಪಿ 1 ನೇಯವನು ದಿನಾಂಕ: 20-06-2021 ರಂದು ರಾತ್ರಿ 11-00 ಗಂಟೆಗೆ ಯಲ್ಲಾಪುರ ತಾಲೂಕಿನ ಹೊಸಳ್ಳಿ ಗ್ರಾಮದಿಂದ ಹಿಂದೆ ಹುಬ್ಬಳ್ಳಿ ಕಡೆಗೆ 01 ಕಿ.ಮೀ ಅಂತರದಲ್ಲಿ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-63 ರಲ್ಲಿ ತನ್ನ ಲಾರಿ ನಂ: ಕೆ.ಎ-27/ಬಿ-6612 ನೇದನ್ನು  ಯಲ್ಲಾಪುರ ಕಡೆಗೆ ಮುಖ ಮಾಡಿ ಸಿಗ್ನಲ್ ಲೈಟ್ ಹಾಕದೇ ಯಾವುದೇ ಮುಂಜಾಗೃತಾ ಕ್ರಮ ವಹಿಸದೇ ರಸ್ತೆಯ ಮೇಲೆ ಓಡಾಡುವ ಇತರೇ ವಾಹನಗಳಿಗೆ ಅಡೆತಡೆ ಉಂಟಾಗುವಂತೆ ನಿಲ್ಲಿಸಿಟ್ಟಿದ್ದಾಗ ಆರೋಪಿ 2 ನೇಯವನು ತನ್ನ ಮಹೀಂದ್ರಾ ಕ್ಸೈಲೋ ಕಾರ್ ನಂ: ಎ.ಪಿ-21/ಬಿ.ಎನ್-4500 ನೇದರಲ್ಲಿ ಸಾಕ್ಷಿದಾರ ಶ್ರೀ ಪಂಪಾಪತಿ ತಂದೆ ಈರಣ್ಣಾ, ಶ್ರೀಮತಿ ಪೂರ್ಣಿಮಾ, ಕೋಂ. ಪಂಪಾಪತಿ, ಶ್ರೀಮತಿ ರತ್ನಮ್ಮಾ ಕೋಂ. ಈರಣ್ಣಾ, ಕು: ಕೀರ್ತನಾ, ಪ್ರಾಯ-22 ವರ್ಷ, ಕು: ಶ್ರೀನಾಥ, ಪ್ರಾಯ-23 ವರ್ಷ ರವರನ್ನು ಕೂಡ್ರಿಸಿಕೊಂಡು ಹುಬ್ಬಳ್ಳಿ ಕಡೆಯಿಂದ ಯಲ್ಲಾಪುರ ಕಡೆಗೆ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆಯ ಮೇಲೆ ನಿಂತ ಲಾರಿ ನಂ: ಕೆ.ಎ-27/ಬಿ-6612 ನೇದಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ವಾಹನದಲ್ಲಿದ್ದ ಸಾಕ್ಷಿದಾರರಾದ ಶ್ರೀ ಪಂಪಾಪತಿ ಮತ್ತು ಕು: ಕಿರ್ತನಾ ರವರಿಗೆ ಭಾರೀ ಗಾಯ ಮತ್ತು ಉಳಿದವರಿಗೆ ಸಾದಾ ಗಾಯ ಪಡಿಸಿ, ಆರೋಪಿತನು ತನಗೂ ಸಹ ಸಾದಾ ಗಾಯನೋವು ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ಎಮ್. ಮಧುಸೂದನ್ ತಂದೆ ಎಮ್. ರಾಮುಡು, ಪ್ರಾಯ-42 ವರ್ಷ, ವೃತ್ತಿ-ವ್ಯಾಪಾರ, ಸಾ|| ಅಧೋನಿ, ಎಸ್.ಬಿ.ಐ ಕಾಲೋನಿ, ಆಂಧ್ರ ಪ್ರದೇಶ ರವರು ದಿನಾಂಕ: 21-06-2021 ರಂದು 18-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 101/2021, ಕಲಂ: 269, 270 ಸಹಿತ 149 ಐಪಿಸಿ ಹಾಗೂ ಕಲಂ: 87 ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ಅಶೋಕ ತಂದೆ ವೆಂಕಟ್ರಮಣ ಶೇಟ್, ಪ್ರಾಯ-47 ವರ್ಷ, ವೃತ್ತಿ-ಅಕ್ಕಸಾಲಿಗ ಕೆಲಸ ಸಾ|| ಶಾರದಾ ಗಲ್ಲಿ, ತಾ: ಯಲ್ಲಾಪುರ, 2]. ಮಂಜುನಾಥ ತಂದೆ ದಾಮೋದರ ಹೆಗಡೆ, ಪ್ರಾಯ-47 ವರ್ಷ, ವೃತ್ತಿ-ವ್ಯಾಪಾರ, ಸಾ|| ಬಿಸಗೋಡ, ತಾ: ಯಲ್ಲಾಪುರ, 3]. ಮಹಾಬಲೇಶ್ವರ ತಂದೆ ನರಸಿಂಹ ಭಟ್, ಪ್ರಾಯ-47 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಹಳವಳ್ಳಿ, ಪೋ: ಹಳವಳ್ಳಿ, ತಾ: ಯಲ್ಲಾಪುರ, 4]. ನಾರಾಯಣ ತಂದೆ ಚೂಡಿಯಾ ಮರಾಠಿ, ಪ್ರಾಯ-40 ವರ್ಷ, ವೃತ್ತಿ-ವ್ಯಾಪಾರ, ಸಾ|| ಹಿತ್ಲಕಾರಗದ್ದೆ, ತಾ: ಯಲ್ಲಾಪುರ, 5]. ಶ್ರೀಕಾಂತ ಹೆಬ್ಬಾರ, ಸಾ|| ಕಳೆಚೆ, ತಾ: ಯಲ್ಲಾಪುರ. ಈ ನಮೂದಿತ ಆರೋಪಿತರು ದಿನಾಂಕ: 21-06-2021 ರಂದು 21-00 ಗಂಟೆಯ ಸುಮಾರಿಗೆ ಯಲ್ಲಾಪುರ ತಾಲೂಕಿನ ಕವಡಿಕೇರಿ ಬಸ್ ನಿಲ್ದಾಣದ ಹತ್ತಿರ ಇರುವ ಅರಣ್ಯ ಪ್ರದೇಶದಲ್ಲ್ಲಿ ಕೊರೋನಾ ರಾತ್ರಿ ಕರ್ಫ್ಯೂ (ಲಾಕಡೌನ್) ಜಾರಿ ಮಾಡಿದ ಬಗ್ಗೆ ತಿಳಿದಿದ್ದರೂ ಸಹ ಜನರ ಪ್ರಾಣಕ್ಕೆ ಅಪಾಯಕಾರಕವಾದ ಕೋವಿಡ್-19 ರೋಗದ ಸೋಂಕನ್ನು ಹರಡಿಸುವ ದ್ವೇಷಪೂರಕ ಉದ್ದೇಶದಿಂದ, ರೋಗ ನಿರೋಧಕ ನಿರ್ಬಂಧ ನಿಯಮವನ್ನು ಉಲ್ಲಂಘಿಸಿ ಮತ್ತು ಕೊರೋನಾ ರೋಗದ ಸೋಂಕನ್ನು ಹರಡುವುದನ್ನು ತಡೆಯಲು ಕೈಗೊಳ್ಳಬೇಕಾದ ಮುಂಜಾಗೃತ ಕ್ರಮಗಳನ್ನು ತೆಗೆದುಕೊಳ್ಳದೇ ನಿರ್ಲಕ್ಷ್ಯತನದಿಂದ ಜನರ ಪ್ರಾಣ ಮತ್ತು ದೈಹಿಕ ಸುರಕ್ಷತೆಗೆ ಅಪಾಯವನ್ನುಂಟು ಮಾಡುವ ಕೃತ್ಯವನ್ನು ಮಾಡಿದ್ದರಿಂದ ಹಾಗೂ ತಮ್ಮ ಲಾಭಕ್ಕೋಸ್ಕರ ಇಸ್ಪೀಟ್ ಎಲೆಗಳ ಮೇಲಿನ ಅದೃಷ್ಟದ ಆಟವಾದ ಅಂದರ್-ಬಾಹರ್ ಇಸ್ಪೀಟ್ ಜುಗಾರಾಟ ಆಡುತ್ತಿದ್ದಾಗ, ಅಂದರ್-ಬಾಹರ್ ಇಸ್ಪೀಟ್ ಜುಗಾರಾಟದ ಸಲಕರಣೆಗಳಾದ ಇಸ್ಪೀಟ್ ಎಲೆಗಳು-52, ಒಟ್ಟೂ ನಗದು ಹಣ 8,350/-ರೂಪಾಯಿ ಮತ್ತು ಮಂಡಕ್ಕೆ ಹಾಸಿದ ಕಂಬಳಿ-1, ಮೇಣದ ಬತ್ತಿ-01, ಕಡ್ಡಿ ಪೊಟ್ಟಣ-01 ಇವುಗಳೊಂದಿಗೆ ಆರೋಪಿ 1 ರಿಂದ 4 ನೇಯವರು ಸ್ಥಳದಲ್ಲಿಯೇ ಸೆರೆ ಸಿಕ್ಕಿದ್ದು ಹಾಗೂ ಆರೋಪಿ 5 ನೇಯವನು ಓಡಿ ಹೋಗಿ ಪರಾರಿಯಾದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಮಂಜುನಾಥ ಎಸ್ ಗೌಡರ್, ಪಿ.ಎಸ್.ಐ, ಯಲ್ಲಾಪುರ ಪೊಲೀಸ್ ಠಾಣೆ ರವರು ದಿನಾಂಕ: 21-06-2021 ರಂದು 23-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 21-06-2021

at 00:00 hrs to 24:00 hrs

 

ಯಲ್ಲಾಪುರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 15/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತಳಾದ ಶ್ರೀಮತಿ ಅನಸೂಯಾ ಕೋಂ. ಸುಬ್ರಾಯ ಭಟ್, ಪ್ರಾಯ-82 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಹಾಸಣಗಿ, ತಾ: ಯಲ್ಲಾಪುರ. ಪಿರ್ಯಾದಿಯವರ ತಾಯಿಯಾದ ಇವರು ದಿನಾಂಕ: 21-06-2021 ರಂದು 13-15 ಗಂಟೆಯಿಂದ 14-45 ಗಂಟೆಯ ನಡುವಿನ ಅವಧಿಯಲ್ಲಿ ಹಾಸಣಗಿಯಲ್ಲಿರುವ ತನ್ನ ಮನೆಯ ಹಿತ್ತಲಿನಲ್ಲಿರುವ ಬಾವಿಯ ಹತ್ತಿರ ನೀರು ತರಲು ಅಥವಾ ಇನ್ಯಾವುದೋ ಕಾರಣಕ್ಕೆ  ಹೋದವಳು ಆಕಸ್ಮಿಕವಾಗಿ ಕಾಲು ಜಾರಿ ಅಥವಾ ಇನ್ಯಾವುದೋ ರೀತಿಯಲ್ಲಿ ಬಾವಿಯಲ್ಲಿ ಬಿದ್ದು, ಬಾವಿಯ ನೀರಿನಲ್ಲಿ ಮುಳುಗಿ ಮೃತಪಟ್ಟಿರುತ್ತಾಳೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಜನಾರ್ಧನ ತಂದೆ ಸುಬ್ರಾಯ ಭಟ್ಟ, ಪ್ರಾಯ-56 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಹಾಸಣಗಿ, ತಾ: ಯಲ್ಲಾಪುರ ರವರು ದಿನಾಂಕ: 21-06-2021 ರಂದು 17-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಯಲ್ಲಾಪುರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 16/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ಗೋಪಾಲ ತಂದೆ ಕೃಷ್ಣ ನಾಯ್ಕ, ಪ್ರಾಯ-58 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಹೆಮ್ಮಾಡಿಕುಂಬ್ರಿ, ತಾ: ಯಲ್ಲಾಪುರ. ಪಿರ್ಯಾದಿಯವರ ತಂದೆಯವರಾದ ಇವರು ದಿನಾಂಕ: 20-06-2021 ರಂದು 22-30 ಗಂಟೆಗೆ ತನ್ನ ಮನೆಯಿಂದ ಹೊರಗೆ ಹೋದವರು ಯಲ್ಲಾಪುರ ತಾಲೂಕಿನ ಹೆಮ್ಮಾಡಿಕುಂಬ್ರಿ ಊರಿನಲ್ಲಿ ಹೊಸದಾಗಿ ಕಟ್ಟುತ್ತಿರುವ ಬ್ರಿಡ್ಜಿನ ಬದಿಯಲ್ಲಿ ಇರುವ ಹಳ್ಳದಲ್ಲಿ ದಾಟುತ್ತಿರುವಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಹಳ್ಳದ ನೀರಿನಲ್ಲಿ ಮುಳುಗಿ ಮೃತಪಟ್ಟವನ ಶವವು ದಿನಾಂಕ: 21-06-2021 ರಂದು 14-00 ಗಂಟೆಗೆ ಸಿಕ್ಕಿರುತ್ತದೆ. ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ವಿನಾಯಕ ತಂದೆ ಗೋಪಾಲ ನಾಯ್ಕ, ಪ್ರಾಯ-29 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಹೆಮ್ಮಾಡಿಕುಂಬ್ರಿ, ತಾ: ಯಲ್ಲಾಪುರ ರವರು ದಿನಾಂಕ: 21-06-2021 ರಂದು 17-35 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

ಇತ್ತೀಚಿನ ನವೀಕರಣ​ : 22-06-2021 07:28 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080