ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 21-03-2021

at 00:00 hrs to 24:00 hrs

 

ಕದ್ರಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 05/2021, ಕಲಂ: 279, 337, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಪ್ರಶಾಂತ ತಂದೆ ನರಸಿಂಹ ಶೇಟ್, ಪ್ರಾಯ-44 ವರ್ಷ, ಕೆ.ಪಿ.ಸಿ. ನೌಕರ, ಸಾ|| ಕೆ.ಪಿ.ಸಿ ಕಾಲೋನಿ, ಕದ್ರಾ, ಕಾರವಾರ (ಹುಂಡೈ ಗ್ರಾಂಡ್ ಐ-10 ಕಾರ್ ನಂ: ಕೆ.ಎ-30/ಎಮ್-6668 ನೇದರ ಚಾಲಕ). ನಮೂದಿತ ಆರೋಪಿತನು ದಿನಾಂಕ: 21-03-2021 ರಂದು 15-25 ಗಂಟೆಗೆ ತನ್ನ ಹುಂಡೈ ಗ್ರಾಂಡ್ ಐ-10 ಕಾರ್ ನಂ: ಕೆ.ಎ-30/ಎಮ್-6668 ನೇದನ್ನು ಕಾರವಾರ ಕಡೆಯಿಂದ ಕದ್ರಾ ಕಡೆಗೆ ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದವನು ಮೇಲಿನ ಬಾಳ್ನಿಯ ಹತ್ತಿರ ಹೆದ್ದಾರಿ ಸಂಖ್ಯೆ-34 ರ ರಸ್ತೆಯ ಮೇಲೆ ಕದ್ರಾ ಕಡೆಯಿಂದ ಕಾರವಾರ ಕಡೆಗೆ ತನ್ನ ಎಡಬದಿಯಿಂದ ಮೋಟಾರ್ ಸೈಕಲ್ ನಂ: ಕೆ.ಎ-30/ಎಸ್-6646 ನೇದರ ಹಿಂಬದಿಯಲ್ಲಿ ಅಲ್ಕಾ ಗಜಾನನ ವೇಳಿಪ್ ಇವಳನ್ನು ಕೂಡ್ರಿಸಿಕೊಂಡು ಬರುತ್ತಿದ್ದ ದೀಪಕ ತಂದೆ ಪ್ರಭಾಕರ ಗಾಂವಕರ, ಪ್ರಾಯ-29 ವರ್ಷ, ಇವನ ಮೋಟಾರ್ ಸೈಕಲಿಗೆ ಮುಂದಿನ ಸೈಡಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ದೀಪಕ ಈತನ ಮೈಕೈಗೆ ತೆರಚಿದ ಗಾಯನೋವು ಮತ್ತು ಅಲ್ಕಾಳಿಗೆ ಬಲಗಾಲು ಮುರಿಯುವಂತೆ ಹಾಗೂ ಮೈ ಕೈಗೆ ಗಾಯನೋವು ಪಡಿಸಿದ್ದಲ್ಲದೇ, ತನ್ನ ಕಾರಿನಲ್ಲಿದ್ದ ತನ್ನ ಮಗ ಪ್ರಜ್ವಲನ ಕಾಲಿಗೆ ತೆರಚಿದ ಗಾಯ ಹಾಗೂ ತನ್ನ ಹಣೆಯ ಹತ್ತಿರ ತೆರಚಿದ ಗಾಯನೋವು ಪಡಿಸಿಕೊಂಡಿದ್ದಲ್ಲದೇ, ಎರಡೂ ವಾಹನಗಳನ್ನು ಜಖಂಗೊಳಿಸಿದ ಬಗ್ಗೆ ಪಿರ್ಯಾದಿ ಶ್ರೀ ಸಂತೋಷ ತಂದೆ ಶಿವಾ ಗಾಂವಕರ, ಪ್ರಾಯ-40 ವರ್ಷ, ವೃತ್ತಿ-ಗುತ್ತಿಗೆದಾರ, ಸಾ|| ಮಡಕರ್ಣಿ, ಭೈರಾ, ಕದ್ರಾ, ಕಾರವಾರ ರವರು ದಿನಾಂಕ: 21-03-2021 ರಂದು 16-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 56/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ಚೇತನ ತಂದೆ ಶಿವಪ್ಪ ಉಪ್ಪಾರ, ಪ್ರಾಯ-31 ವರ್ಷ, ವೃತ್ತಿ-ಕ್ರೇನ್ ಕೆಲಸ, ಸಾ|| ಸಿದ್ದನಬಾವಿ, ತಾ: ಕುಮಟಾ. ನಮೂದಿತ ಆರೋಪಿತನು ದಿನಾಂಕ: 20-03-2021 ರಂದು-15-15 ಗಂಟೆಗೆ ಕುಮಟಾದ ಹೊಳೆಗದ್ದೆಯ ರಾಮನಗಿಂಡಿ ಕ್ರಾಸ್ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ನಿಂತು ರಸ್ತೆಯಲ್ಲಿ ಬರ-ಹೋಗುವ ಜನರಿಗೆ 01/- ರೂಪಾಯಿಗೆ 80/- ರೂಪಾಯಿ ಕೊಡುವುದಾಗಿ ಕೂಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆದು ಅಂಕೆ-ಸಂಖ್ಯೆಗಳ ಮೇಲೆ ಹಣವನ್ನು ಪಂಥ ಕಟ್ಟಿ ಓ.ಸಿ ಚೀಟಿ ಬರೆದು ಓ.ಸಿ ಮಟಕಾ ಜುಗರಾಟ ನಡೆಸುತ್ತಿದ್ದಾಗ ದಾಳಿಯ ಕಾಲ 1). ನಗದು ಹಣ 2,130/- ರೂಪಾಯಿ, 2). ಅಂಕೆ-ಸಂಖ್ಯೆ ಬರೆದ ಚೀಟಿ-01, ಅ||ಕಿ|| 00.00/- ರೂಪಾಯಿ, 3). ಬಾಲ್ ಪೆನ್-01 ಅ||ಕಿ|| 00.00/- ರೂಪಾಯಿ ಸಮೇತ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಆನಂದಮೂರ್ತಿ ಸಿ, ಪಿ.ಎಸ್.ಐ (ಕಾ&ಸು-01), ಕುಮಟಾ ಪೊಲೀಸ್ ಠಾಣೆ ರವರು ದಿನಾಂಕ: 21-03-2021 ರಂದು 18-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 57/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ಅಂತೋನ್ ತಂದೆ ಕುಸ್ತಾನ್ ಫರ್ನಾಂಡೀಸ್, ಪ್ರಾಯ-42 ವರ್ಷ, ವೃತ್ತಿ-ಗಾರೆ ಕೆಲಸ, ಸಾ|| ಹೈಟೆಕ್ ಆಸ್ಪತ್ರೆ ಹತ್ತಿರ, ತಾ: ಕುಮಟಾ. ನಮೂದಿತ ಆರೋಪಿತನು ದಿನಾಂಕ: 20-03-2021 ರಂದು-17-20 ಗಂಟೆಗೆ ಕುಮಟಾದ ಉಪ್ಪಿನ ಗಣಪತಿ ಕ್ರಾಸ್ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ನಿಂತು ರಸ್ತೆಯಲ್ಲಿ ಬರ-ಹೋಗುವ ಜನರಿಗೆ 01/- ರೂಪಾಯಿಗೆ 80/-ರೂಪಾಯಿ ಕೊಡುವುದಾಗಿ ಕೂಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆದು ಅಂಕೆ-ಸಂಖ್ಯೆಗಳ ಮೇಲೆ ಹಣವನ್ನು ಪಂಥಕಟ್ಟಿ ಓ.ಸಿ ಚೀಟಿ ಬರೆದು ಓ.ಸಿ ಮಟಕಾ ಜುಗರಾಟ ನಡೆಸುತ್ತಿದ್ದಾಗ ದಾಳಿಯ ಕಾಲ 1). ನಗದು ಹಣ 2090/- ರೂಪಾಯಿ, 2). ಅಂಕೆ-ಸಂಖ್ಯೆ ಬರೆದ ಚೀಟಿ-01, ಅ||ಕಿ|| 00.00/- ರೂಪಾಯಿ, 3). ಬಾಲ್ ಪೆನ್-01 ಅ||ಕಿ|| 00.00/- ರೂಪಾಯಿ ಸಮೇತ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ರವಿಗುಡ್ಡಿ, ಪಿ.ಎಸ್.ಐ (ಕಾ&ಸು-02), ಕುಮಟಾ ಪೊಲೀಸ್ ಠಾಣೆ ರವರು ದಿನಾಂಕ: 21-03-2021 ರಂದು 19-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 83/2021, ಕಲಂ: 454, 457, 380 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ದಿನಾಂಕ: 20-03-2021 ರಂದು 20-45 ಗಂಟೆಯಿಂದ ದಿನಾಂಕ: 21-03-2021 ರಂದು ಬೆಳಿಗ್ಗೆ 07-10 ಗಂಟೆಯ ನಡುವಿನ ಅವಧಿಯಲ್ಲಿ ಹಳದಿಪುರ, ಅಗ್ರಹಾರ ನವಿಲಗೋಣ ಕ್ರಾಸಿನಲ್ಲಿರುವ ಪಿರ್ಯಾದಿಯವರಿಗೆ ಸಂಬಂಧಿಸಿದ ಕಿರಾಣಿ ಅಂಗಡಿಯ ಮುಂದಿನ ಶೆಟರ್ಸ್ ಬಾಗಿಲಿಗೆ ಹಾಕಿದ್ದ ಬೀಗವನ್ನು ಯಾವುದೋ ಗಟ್ಟಿಯಾದ ವಸ್ತುವಿನಿಂದ ಒಡೆದು ತೆಗೆದು ಒಳಗೆ ಹೋಗಿ ಅಂಗಡಿಯ ಕ್ಯಾಷ್ ಡ್ರಾವರನ್ನು ಸಹ ಒಡೆದು ಅದರೊಳಗಿದ್ದಂತಹ ಸುಮಾರು 1,35,000/- ರೂಪಾಯಿಗಳನ್ನು ಕಳವು ಮಾಡಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀ ನಿತ್ಯಾನಂದ ತಂದೆ  ಹರಿ ಪೈ, ಪ್ರಾಯ-36 ವರ್ಷ, ವೃತ್ತಿ-ಕಿರಾಣಿ ಅಂಗಡಿ, ಸಾ|| ಅಗ್ರಹಾರ, ಹಳದಿಪುರ, ತಾ: ಹೊನ್ನಾವರ ರವರು ದಿನಾಂಕ: 21-03-2021 ರಂದು 13-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಜೋಯಿಡಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 18/2021, ಕಲಂ: 279 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಸಾಗರ ತಂದೆ ಶೇಖರಯ್ಯ ಹಿರೇಮಠ, ಪ್ರಾಯ-21 ವರ್ಷ, ಸಾ|| ಮಾಡಗೇರಿ, ತಾ: ರೋಣ, ಜಿ: ಗದಗ (ಕಾರ್ ನಂ: ಕೆ.ಎ-25/ಡಿ-2633 ನೇದರ ಚಾಲಕ). ನಮೂದಿತ ಆರೋಪಿತನು ದಿನಾಂಕ: 20-03-2021 ರಂದು 16-30 ಗಂಟೆಗೆ ತನ್ನ ಬಾಬ್ತು ಕಾರ್ ನಂ: ಕೆ.ಎ-25/ಡಿ-2633 ನೇದನ್ನು ಉಳವಿ ಕಡೆಯಿಂದ ದಾಂಡೇಲಿ ಕಡೆಗೆ ಅತೀವೇಗವಾಗಿ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ನಂದಿಗದ್ದೆ ಗ್ರಾಮ ಪಂಚಾಯತನ ದೇಸಾಯಿವಾಡ ಗ್ರಾಮದ ಹತ್ತಿರದ ರಸ್ತೆಯ ತಿರುವಿನಲ್ಲಿ ತನ್ನ ವಾಹನವನ್ನು ನಿಯಂತ್ರಣಕ್ಕೆ ತರದೆ ಪಲ್ಟಿ ಪಡಿಸಿ, ಅಪಘಾತವುಂಟು ಪಡಿಸಿ ತನ್ನ ವಾಹನವನ್ನು ಜಖಂ ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಗೋವರ್ಧನ ತಂದೆ ಶ್ರೀನಿವಾಸ ಮ್ಯಾಕಲ್, ಪ್ರಾಯ-21 ವರ್ಷ, ವೃತ್ತಿ-ವಿದ್ಯಾರ್ಥಿ, ಸಾ|| ದಿನ್ನಿ, ತಾ&ಜಿ: ರಾಯಚೂರು ರವರು ದಿನಾಂಕ: 21-03-2021 ರಂದು 18-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 46/2021, ಕಲಂ: ಹುಡುಗಿ ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಹುಡುಗಿ ಕುಮಾರಿ: ಉಮಾ ತಂದೆ ಸತೀಷ ಉಪ್ಪಾರ, ಪ್ರಾಯ–19 ವರ್ಷ, ವೃತ್ತಿ-ಖಾಸಗಿ ಕೆಲಸ, ಸಾ|| ರವಿಂದ್ರ ನಗರ, ಶಿರಸಿ ರಸ್ತೆ, ತಾ: ಯಲ್ಲಾಪುರ. ಪಿರ್ಯಾದುದಾರರ ತಂಗಿಯಾದ ಇವರು 10 ನೇ ತರಗತಿಯವರೆಗೆ ವಿದಾಭ್ಯಾಸ ಮಾಡಿ ಖಾಸಗಿ ಕೆಲಸ ಮಾಡುತ್ತಿದ್ದವರು, ದಿನಾಂಕ: 20-03-2021 ರಂದು ಬೆಳಿಗ್ಗೆ 10-00 ಗಂಟೆಗೆ ಪಿರ್ಯಾದಿಯವರು ಮನೆಯಲ್ಲಿ ಇದ್ದಾಗ ‘ಕೆಲಸಕ್ಕೆ ಝೆರಾಕ್ಸ್ ಅಂಗಡಿಗೆ ಹೋಗಿ ಬರುತ್ತೇನೆ’ ಅಂತಾ ಹೇಳಿ ಮನೆಯಿಂದ ಹೋದವಳು, ಮರಳಿ ಮನೆಗೆ ಬರದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದು, ಕಾಣೆಯಾದವಳನ್ನು ಹುಡುಕಿ ಕೊಡಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ರವಿ ತಂದೆ ಸತೀಶ ಉಪ್ಪಾರ, ಪ್ರಾಯ–21 ವರ್ಷ, ವೃತ್ತಿ-ವಿದ್ಯಾರ್ಥಿ, ಸಾ|| ಶ್ರೀಮತಿ ಯಲ್ಲವ್ವಾ ಹಲಗಿ ರವರ ಬಾಡಿಗೆ ಮನೆಯಲ್ಲಿ, ರವೀಂದ್ರ ನಗರ, ಶಿರಸಿ ರಸ್ತೆ, ತಾ: ಯಲ್ಲಾಪುರ ರವರು ದಿನಾಂಕ: 21-03-2021 ರಂದು 20-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 24/2021, ಕಲಂ: 279 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಆದಮ್ ಮೆಹಮ್ಮುದ್ ಸಾಬ್, ಪ್ರಾಯ-35 ವರ್ಷ, ವೃತ್ತಿ-ಚಾಲಕ, ಸಾ|| ಹೆರೂರ, ಪೋ: ಹೆರೂರ, ತಾ: ಸಿದ್ದಾಪುರ (ಬೊಲೆರೋ ಪಿಕಪ್ ನಂ: ಕೆ.ಎ-31/7740 ನೇದರ ಚಾಲಕ). ನಮೂದಿತ ಆರೋಪಿತನು ದಿನಾಂಕ: 20-03-2021 ರಂದು 13-00 ಗಂಟೆಯ ಸುಮಾರಿಗೆ ಬೊಲೆರೋ ಪಿಕಪ್ ನಂ: ಕೆ.ಎ-31/7740 ನೇದನ್ನು ಎಕ್ಕಂಬಿ ಕಡೆಯಿಂದ ಬೊಪ್ಪನಳ್ಳಿ ಕಡೆಗೆ ಅತೀವೇಗವಾಗಿ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬರುತ್ತಾ ಬೊಪ್ಪನಳ್ಳಿ-ಎಕ್ಕಂಬಿ ರಸ್ತೆಯ ಬೊಪ್ಪನಳ್ಳಿ ಹತ್ತಿರದ ತಿರುವಿನ ರಸ್ತೆಯಲ್ಲಿ ತನ್ನ ವಾಹನದ ವೇಗವನ್ನು ನಿಯಂತ್ರಿಸಲಾಗದೇ, ರಸ್ತೆಯ ತೀರಾ ಬಲಬದಿಗೆ ಚಲಾಯಿಸಿ, ಎದುರುಗಡೆ ಶಿರಸಿ ಕಡೆಯಿಂದ ಬೊಪ್ಪನಳ್ಳಿ ಕಡೆಗೆ ಸವಾರಿ ಮಾಡಿಕೊಂಡು ಹೊರಟಿದ್ದ ಪಿರ್ಯಾದಿಯ ಮೋಟಾರ್ ಸೈಕಲ್ ನಂ: ಕೆ.ಎ-31/ಇ.ಎ-9574 ನೇದಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ವಾಹನಗಳನ್ನು ಜಖಂಗೊಳಿಸಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಅಬ್ದುಲ್ ರಹೀಮ್ ಖುದ್ದುಸ್ ಸಾಬ್, ಪ್ರಾಯ-31 ವರ್ಷ, ವೃತ್ತಿ-ಖಾಸಗಿ ನೌಕರ, ಸಾ|| ಬೊಪ್ಪನಳಿ (ಇಸಳೂರು), ಪೋ: ಬೊಪ್ಪನಳ್ಳಿ, ತಾ: ಶಿರಸಿ ರವರು ದಿನಾಂಕ: 21-03-2021 ರಂದು 16-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 21-03-2021

at 00:00 hrs to 24:00 hrs

 

ಪ್ರಕರಣಗಳು ದಾಖಲಾಗಿರುವುದಿಲ್ಲ....

 

======||||||||======

 

 

ಇತ್ತೀಚಿನ ನವೀಕರಣ​ : 22-03-2021 08:45 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080