ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 21-05-2021

at 00:00 hrs to 24:00 hrs

 

ಕಾರವಾರ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 28/2021, ಕಲಂ: 283, 304(ಎ) ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ರವಿಕುಮಾರ ತಂದೆ ರಾಜೇಂದ್ರ ಕುಮಾರ ತಿವಾರಿ, ಪ್ರಾಯ-26 ವರ್ಷ, ಸಾ|| ಪ್ರತಾಪಗಡ, ಉತ್ತರ ಪ್ರದೇಶ (ಟ್ರಾಲಿ ಲಾರಿ ನಂ: ಎಮ್.ಎಚ್-46/ಬಿ.ಎಮ್-6158 ನೇದರ ಚಾಲಕ). ಈತನು ದಿನಾಂಕ: 21-05-2021 ರಂದು 20-30 ಗಂಟೆಯ ರಾತ್ರಿಯ ಸಮಯಕ್ಕೆ ತನ್ನ ಟ್ರಾಲಿ ಲಾರಿ ನಂ: ಎಮ್.ಎಚ್-46/ಬಿ.ಎಮ್-6158 ನೇದನ್ನು ನಿರ್ಲಕ್ಷ್ಯತನದಿಂದ 6 ಮೈಲ್, ನಿರಾಕಾರವಾಡಾ, ಚೆಂಡಿಯಾ ಹತ್ತಿರ ಅರ್ಧ ಹೆದ್ದಾರಿಯ ಮೇಲೆ ಯಾವುದೇ ಸಿಗ್ನಲ್ ಹಾಕದೇ, ವಾಹನ ಸಂಚಾರಕ್ಕೆ ಅಡ್ಡಿ ಆತಂಕವಾಗುವಂತೆ ನಿಲ್ಲಿಸಿಟ್ಟಿದ್ದು, ಪಿರ್ಯಾದಿಯವರ ತಂದೆಯವರಾದ ಶ್ರೀ ಮಾರುತಿ ತಂದೆ ಚಂದ್ರು ಗುನಗಿ, ಪ್ರಾಯ-52 ವರ್ಷ, ವೃತ್ತಿ-ಗೌಂಡಿ ಕೆಲಸ, ಸಾ|| ಶ್ರೀ ಸಾಯಿ ಮಂದಿರ ರೋಡ್, 6 ಮೈಲ್, ಚೆಂಡಿಯಾ, ಕಾರವಾರ ರವರು ತಮ್ಮ ಬಾಬ್ತು ಹೀರೋ ಹೋಂಡಾ ಫ್ಯಾಷನ್ ಪ್ರೋ ಮೋಟಾರ್ ಸೈಕಲ್ ನಂ: ಕೆ.ಎ-30/ಕ್ಯೂ-5547 ನೇದನ್ನು ಕಾರವಾರ ಕಡೆಯಿಂದ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಕತ್ತಲೆಯಲ್ಲಿ ಗೊತ್ತಾಗದೇ ಸದರ ಟ್ರಾಲಿ ಲಾರಿಯ ಹಿಂಭಾಗಕ್ಕೆ ಡಿಕ್ಕಿ ಪಡಿಸಿಕೊಂಡು ತಲೆಗೆ, ಮುಖಕ್ಕೆ, ಕೈಗೆ ಹಾಗೂ ಕಾಲಿಗೆ ಮಾರಣಾಂತಿಕ ಗಾಯ ಪಡಿಸಿಕೊಂಡಿದ್ದು, ಗಾಯಗೊಂಡಿದ್ದ ಪಿರ್ಯಾದಿಯವರ ತಂದೆಯವರಿಗೆ ಚಿಕಿತ್ಸೆಗಾಗಿ ಕಾರವಾರದ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿ ಅವರು ಮೃತಪಟ್ಟ ಬಗ್ಗೆ ಪಿರ್ಯಾದಿ ಶ್ರೀ ನವೀನ ತಂದೆ ಮಾರುತಿ ಗುನಗಿ, ಪ್ರಾಯ-27 ವರ್ಷ, ವೃತ್ತಿ-ಸೀಬರ್ಡದಲ್ಲಿ ಖಾಸಗಿ ಕೆಲಸ, ಸಾ|| ಶ್ರೀ ಸಾಯಿ ಮಂದಿರ ರೋಡ್, 6 ಮೈಲ್, ಚೆಂಡಿಯಾ, ಕಾರವಾರ ರವರು ದಿನಾಂಕ: 21-05-2021 ರಂದು 22-20 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಅಂಕೋಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 88/2021, ಕಲಂ: ಮನುಷ್ಯ ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಮನುಷ್ಯ ಶ್ರೀ ಚೇತನ ತಂದೆ ನಾಗೇಶ ನಾಯ್ಕ, ಪ್ರಾಯ-21 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ತೆಂಕಣಕೇರಿ, ತಾ: ಅಂಕೋಲಾ. ಪಿರ್ಯಾದಿಯ ತಮ್ಮನ ಮಗನಾದ ಈತನು ಪಿರ್ಯಾದಿಯ ಸಂಬಂಧಿ ಸಂದೀಪ ತಂದೆ ಉಮೇಶ ನಾಯ್ಕ, ಸಾ|| ಬೇಳಾ, ತಾ: ಅಂಕೋಲಾ ಈತನೊಂದಿಗೆ ದಿನಾಂಕ: 21-05-2021 ರಂದು ಅಂಕೋಲಾ ತಾಲೂಕಿನ ಶೇಡಿಕುಳಿಯ ಬಸಾಕಲ್ ಗುಡ್ಡದ ಹತ್ತಿರ ಸಮುದ್ರ ದಡಕ್ಕೆ ಹೋದವರು, ಮಧ್ಯಾಹ್ನ 01-00 ಗಂಟೆಯಿಂದ 03-00 ಗಂಟೆಯ ನಡುವಿನ ಅವಧಿಯಲ್ಲಿ ಸಮುದ್ರ ದಡದಲ್ಲಿರುವ ದೊಡ್ಡ ಬಂಡೆ ಕಲ್ಲಿನ ಮೇಲೆ ನಿಂತು ಸಮುದ್ರ ನೋಡುತ್ತಿದ್ದಾಗ ಅಥವಾ ಇನ್ನಾವುದೋ ಕಾರಣಕ್ಕೆ ಬಂಡೆ ಕಲ್ಲಿನ ಮೇಲೆ ನಿಂತುಕೊಂಡಿದ್ದಾಗ ಆಕಸ್ಮಿಕವಾಗಿ ಕಾಲು ಜಾರಿ ಅಥವಾ ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿ ಸಮುದ್ರದ ನೀರಿನಲ್ಲಿ ಮುಳುಗಿ ಕಾಣೆಯಾಗಿರುತ್ತಾನೆ. ಕಾಣೆಯಾದ ತನ್ನ ತಮ್ಮನ ಮಗ ಚೇತನ ನಾಯ್ಕ, ಈತನನ್ನು ಹುಡುಕಿ ಪತ್ತೆ ಮಾಡಿ ಕೊಡಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಮೋಹನ ತಂದೆ ಹುಲಿಯಪ್ಪ ನಾಯ್ಕ, ಪ್ರಾಯ-54 ವರ್ಷ, ವೃತ್ತಿ-ಟೇಲರಿಂಗ್, ಸಾ|| ಅಗಸೂರು, ತಾ: ಅಂಕೋಲಾ ರವರು ದಿನಾಂಕ: 21-05-2021 ರಂದು 20-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 32/2021, ಕಲಂ: 269, 270 ಐಪಿಸಿ ಹಾಗೂ ಕಲಂ: 87 ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ಮಹೇಶ ದಿನೇಶ ದೇವಳಿ, ಪ್ರಾಯ-23 ವರ್ಷ, ವೃತ್ತಿ-ವ್ಯಾಪಾರ, ಸಾ|| ಬನವಾಸಿ ರೋಡ್, ತಾ: ಶಿರಸಿ, 2]. ಶಿವರಾಜ ನಿಂಗಪ್ಪ ಪೂಜಾರ, ಪ್ರಾಯ-23 ವರ್ಷ, ವೃತ್ತಿ-ವ್ಯಾಪಾರ, ಸಾ|| ಬನವಾಸಿ ರೋಡ್, ತಾ: ಶಿರಸಿ, 3]. ವಿನಾಯಕ ಪ್ರಕಾಶ ಶೆಟ್ಟಿ, ಪ್ರಾಯ-25 ವರ್ಷ, ವೃತ್ತಿ-ಕಾಂಟ್ರ್ಯಾಕ್ಟರ್, ಸಾ|| ರಾಮನಬೈಲ್, ತಾ: ಶಿರಸಿ, 4]. ಮಣಿಕಂಠ ಕಲ್ಲಪ್ಪ ವರದ, ಪ್ರಾಯ-23 ವರ್ಷ, ವೃತ್ತಿ-ಅಮೆಜಾನ್ ಡೆಲಿವರಿ ಬಾಯ್, ಸಾ|| ರಾಮನಬೈಲ್, ತಾ: ಶಿರಸಿ, 5]. ರಾಘವೇಂದ್ರ ಸಂಗಪ್ಪ ಹುಂಡೇಕರ, ಪ್ರಾಯ-30 ವರ್ಷ, ವೃತ್ತಿ-ಮೆಡಿಕಲ್ ರೆಫ್, ಸಾ|| ಛಲವಾದಿ ಗಲ್ಲಿ, ತಾ: ಶಿರಸಿ, 6]. ಗಣೇಶ ಶಿವಾಜಿ ದೊಡ್ಮನಿ, ಪ್ರಾಯ-21 ವರ್ಷ, ವೃತ್ತಿ-ಕೇಬಲ್ ಆಪರೇಟರ್, ಸಾ|| ಶ್ರೀರಾಮ ಕಾಲೋನಿ, ತಾ: ಶಿರಸಿ, 7]. ರಾಘವೇಂದ್ರ ನಾಗರಾಜ ಭೋವಿ, ಪ್ರಾಯ-34 ವರ್ಷ, ವೃತ್ತಿ-ಕಾಂಟ್ರ್ಯಾಕ್ಟರ್, ಸಾ|| ಮಾರಿಗುಡಿ ರೋಡ್, ತಾ: ಶಿರಸಿ. ಈ ನಮೂದಿತ ಆರೋಪಿತರು ಮಾನ್ಯ ಕರ್ನಾಟಕ ಸರ್ಕಾರ, ಬೆಂಗಳೂರು ಮತ್ತು ಮಾನ್ಯ ಜಿಲ್ಲಾಧಿಕಾರಿಗಳು, ಉತ್ತರ ಕನ್ನಡ ಜಿಲ್ಲೆ, ಕಾರವಾರ ರವರ ಅಧೀಕೃತ ಆದೇಶ ಹಾಗೂ ಮಾನ್ಯ ಪೊಲೀಸ್ ಅಧೀಕ್ಷಕರು, ಉತ್ತರ ಕನ್ನಡ ಜಿಲ್ಲೆ, ಕಾರವಾರ ರವರ ಆದೇಶದಂತೆ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಸಾಂಕ್ರಾಮಿಕ ರೋಗವಾದ ಕೋವಿಡ್-19 (ಕೊರೋನಾ ವೈರಾಣು) ಖಾಯಿಲೆ ಹರಡದಂತೆ ತಡೆಗಟ್ಟುವ ಸಲುವಾಗಿ ಕೊರೋನಾ ಕರ್ಫ್ಯೂ (ಲಾಕಡೌನ್) ಆದೇಶ ಜಾರಿ ಮಾಡಿದ್ದರೂ ಸಹ ದಿನಾಂಕ: 21-05-2021 ರಂದು 13-30 ಗಂಟೆಗೆ ಶಿರಸಿ ಶಹರದ ಶ್ರೀರಾಮ್ ಕಾಲೋನಿಯ ಅರಣ್ಯ ಪ್ರದೇಶದ ಸಾರ್ವಜನಿಕ ಸ್ಥಳದಲ್ಲಿ ತಮ್ಮ ತಮ್ಮ ಅನ್ಯಾಯದ ಲಾಭಕ್ಕೋಸ್ಕರ ಅಂದರ್-ಬಾಹರ್ ಇಸ್ಪೀಟ್ ಜೂಗಾರಾಟ ಆಡುತ್ತಿರುವಾಗ ನಮೂದಿತ ಆರೋಪಿತರೆಲ್ಲರೂ ನಗದು ಹಣ 3,860/- ರೂಪಾಯಿ, 52 ಇಪೀಟ್ ಎಲೆಗಳು, ಮಂಡಕ್ಕೆ ಬಳಸಿದ ಪ್ಲಾಸ್ಟಿಕ್ ಚೀಲದೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ರಾಜಕುಮಾರ, ಪಿ.ಎಸ್.ಐ (ಕಾ&ಸು), ಶಿರಸಿ ನಗರ ಪೊಲೀಸ್ ಠಾಣೆ ರವರು ದಿನಾಂಕ: 21-05-2021 ರಂದು 15-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ದಾಂಡೇಲಿ ನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 54/2021, ಕಲಂ: 269, 271 ಐಪಿಸಿ ವಿವರ...... ನಮೂದಿತ ಆರೋಪಿತ ಮಹಮ್ಮದ್ ತಂದೆ ಸಯ್ಯದ್ ಉಸ್ಮಾನ್ ಅನ್ಸಾರಿ, ಪ್ರಾಯ-31 ವರ್ಷ, ವೃತ್ತಿ-ಕಿರಾಣಿ ವ್ಯಾಪಾರ, ಸಾ|| ಸುಭಾಷ ನಗರ, ದಾಂಡೇಲಿ. ಈತನು ಜಗತ್ತಿನಾದ್ಯಂತ ಕೊರೋನಾ ವೈರಸ್ ಸಾಂಕ್ರಾಮಿಕ ರೋಗ ಹರಡಿಕೊಂಡಿದ್ದು, ಅದು ಭಾರತ ದೇಶದಲ್ಲಿಯೂ ವ್ಯಾಪಕವಾಗಿ ಹರಡುತ್ತಿದ್ದು, ಕರ್ನಾಟಕ ರಾಜ್ಯ ಸರಕಾರವು ದಿನಾಂಕ: 10-05-2021 ರಿಂದ 15 ದಿನಗಳ ಕಾಲ ಜನತಾ ಲಾಕಡೌನ್ ಘೊಷಣೆ ಮಾಡಿದ್ದಲ್ಲದೇ, ಮಾನ್ಯ ಜಿಲ್ಲಾಧಿಕಾರಿಗಳು, ಉತ್ತರ ಕನ್ನಡ ಜಿಲ್ಲೆ, ಕಾರವಾರ ರವರು ದಿನಾಂಕ: 16-05-2021 ರಿಂದ 24-05-2021 ರವರೆಗೆ ಹೆಚ್ಚುವರಿ ಕ್ರಮ ಕೈಗೊಳ್ಳಲು ಆದೇಶಸಿದ್ದಲ್ಲದೇ, ದಾಂಡೇಲಿ ನಗರದಲ್ಲಿ ಕೋವಿಡ್-19 ಪ್ರಕರಣಗಳು ಗಣನೀಯವಾಗಿ ಹೆಚ್ಚಾಗಿದ್ದರಿಂದ ದಾಂಡೇಲಿ ನಗರವನ್ನು ವಿಶೇಷ ಕಂಟೈನಮೆಂಟ್ ಜೋನ್ ಆಗಿ ಘೋಷಿಸಿ, ಕೊರೋನಾ ವೈರಸ್ ಸಾಂಕ್ರಾಮಿಕ ರೋಗ ಒಬ್ಬರಿಂದ ಒಬ್ಬರಿಗೆ ಹರಡದಂತೆ ಸೂಕ್ತ ಕ್ರಮ ಕೈಗೊಳ್ಳಲು ಎಲ್ಲ ವ್ಯಾಪಾರ ವಹಿವಾಟುಗಳನ್ನು ಬಂದ್ ಮಾಡಿ ಜನರು ತಿರುಗಾಡದಂತೆ ಲಾಕಡೌನ್ ಘೋಷಣೆ ಮಾಡಿದ್ದರೂ ಸಹ ಆರೋಪಿತನು ದಿನಾಂಕ: 21-05-2021 ರಂದು 17-30 ಗಂಟೆಗೆ ದಾಂಡೇಲಿಯ ಸುಭಾಷ ನಗರದಲ್ಲಿರುವ ಅಮೀನಾ ಸ್ಟೋರ್ ಎಂಬ ಹೆಸರಿನ ಕಿರಾಣಿ ಅಂಗಡಿಯನ್ನು ತೆರೆದು ವ್ಯಾಪಾರ ಮಾಡಿದರೆ ಅಲ್ಲಿ ಜನರು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳದೇ ಒಟ್ಟಾಗಿ ಮುಗಿ ಬಿದ್ದು, ಸಾಂಕ್ರಾಮಿಕ ರೋಗ ಒಬ್ಬರಿಂದ ಒಬ್ಬರಿಗೆ ಹರಡಿ ಪ್ರಾಣಕ್ಕೆ ತೊಂದರೆ ಆಗಬಹುದು ಅಂತಾ ಗೊತ್ತಿದ್ದರೂ ಸಹ ಉದ್ದೇಶಪೂರ್ವಕವಾಗಿ ಲಾಕಡೌನ್ ಘೋಷಣೆಯನ್ನು ಮಾಡಿದ ಸರ್ಕಾರದ ಆದೇಶವನ್ನು ಉಲ್ಲಂಘಿಸಿ, ತಾನು ವ್ಯಾಪಾರ ಮಾಡುವ ಕಿರಾಣಿ ಅಂಗಡಿಯನ್ನು ತೆರೆದು ದಾಂಡೇಲಿ ನಗರದಲ್ಲಿ ಪ್ರಾಣಕ್ಕೆ ತೊಂದರೆಯನ್ನುಂಟು ಮಾಡುವ ಕೊರೋನಾ ವೈರಸ್ ಸಾಂಕ್ರಾಮಿಕ ರೋಗ ಹರಡುವಂತೆ ಮಾಡಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಯಲ್ಲಪ್ಪ ಎಸ್, ಪಿ.ಎಸ್.ಐ, ದಾಂಡೇಲಿ ನಗರ ಪೊಲೀಸ್ ಠಾಣೆ ರವರು ದಿನಾಂಕ: 21-05-2021 ರಂದು 19-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹಳಿಯಾಳ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 100/2021, ಕಲಂ: 269, 270 ಐಪಿಸಿ ಹಾಗೂ ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ಸುಧೀರ ತಂದೆ ಅಶೋಕ ಶಿಂಧೆ, ಪ್ರಾಯ-38 ವರ್ಷ, ವೃತ್ತಿ-ರೈತಾಬಿ ವ ಕೂಲಿ ಕೆಲಸ, ಸಾ|| ದೇಶಪಾಂಡೆ ನಗರ, ಹಳಿಯಾಳ ಶಹರ. ಈತನು ಮಾನ್ಯ ಜಿಲ್ಲಾಧಿಕಾರಿಗಳು, ಉತ್ತರ ಕನ್ನಡ ಜಿಲ್ಲೆ, ಕಾರವಾರ ರವರು ಕೊರೋನಾ ಸಾಂಕ್ರಾಮಿಕ ರೋಗವು ವ್ಯಾಪಕವಾಗಿ ಹರಡುವುದನ್ನು ತಪ್ಪಿಸಲು ಹಾಗೂ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಲು ಲಾಕಡೌನ್ ಹಾಗೂ ಹಳಿಯಾಳವನ್ನು ಕಂಟೈನಮೆಂಟ್ ಝೋನ್ ಅಂತಾ ಜಾರಿ ಮಾಡಿದ್ದಾಗಲೂ ಸಹ ಕೋವಿಡ್-19 ಲಾಕಡೌನ್ ನಿಯಮವನ್ನು ಪಾಲಿಸದೇ, ಸಾಂಕ್ರಾಮಿಕ ರೋಗ ಎಲ್ಲೆಡೆ ಹರಡುತ್ತದೆ ಅಂತಾ ಗೊತ್ತಿದ್ದರೂ ಸಹ ನಿರ್ಲಕ್ಷ್ಯತೆಯಿಂದ ತನ್ನ ಅಕ್ರಮ ಲಾಭಕ್ಕಾಗಿ ಹಳಿಯಾಳ ಶಹರದ ದೇಶಪಾಂಡೆ ನಗರದ ಗುಡ್ನಾಪುರ ಶಾಲೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ನಿಂತು ಬರ-ಹೋಗುವ ಜನರಿಗೆ ಕರೆದು, ಅದೃಷ್ಟ ಸಂಖ್ಯೆಗಳ ಮೇಲೆ ಹಣ ಪಂಥ ಕಟ್ಟಿರಿ, ಅದೃಷ್ಟ ಸಂಖ್ಯೆ ತಾಗಿದರೆ 01/- ರೂಪಾಯಿಗೆ 80/- ರೂಪಾಯಿ ಹಣ ಕೊಡುತ್ತೇನೆ ಅಂತ ಜನರ ಮನ ಒಲಿಸಿ ಅವರಿಂದ ಹಣ ಪಡೆದು ಓ.ಸಿ ಮಟಕಾ ಜೂಗಾರಾಟ ನಡೆಸುತ್ತಿದ್ದಾಗ, ದಾಳಿಯ ಕಾಲಕ್ಕೆ ಜೂಗಾರಾಟದ ಸಾಮಗ್ರಿಗಳಾದ 1). ನಗದು ಹಣ 730/- ರೂಪಾಯಿ, 2). ಓ.ಸಿ ಅಂಕೆ-ಸಂಖ್ಯೆ ಬರೆದ ಚೀಟಿ-1, ಅ||ಕಿ|| 00.00/- ರೂಪಾಯಿ, 3). ಬಾಲ್ ಪೆನ್-01, ಅ||ಕಿ|| 00.00/- ರೂಪಾಯಿ, ಇವುಗಳೊಂದಿಗೆ ಪಿರ್ಯಾದಿಗೆ ಸೆರೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಶಿವಾನಂದ ನಾವದಗಿ, ಪಿ.ಎಸ್.ಐ, ಹಳಿಯಾಳ ಪೊಲೀಸ್ ಠಾಣೆ ರವರು ದಿನಾಂಕ: 21-05-2021 ರಂದು 20-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಬನವಾಸಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 51/2021, ಕಲಂ: 15(ಎ), 32(3) ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ಶ್ರೀನಿವಾಸ @ ಸೀನಾ ತಂದೆ ಮಂಜುನಾಥ ಉಪ್ಪಾರ, ಪ್ರಾಯ-29 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಉಪ್ಪಾರಕೇರಿ, ಬನವಾಸಿ, ತಾ: ಶಿರಸಿ. ಈತನು ದಿನಾಂಕ: 21-05-2021 ರಂದು ಬೆಳಿಗ್ಗೆ 11-30 ಗಂಟೆಗೆ ಉಪ್ಪಾರಕೇರಿಯ ರಂಗ ಮಂದಿರದ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ತಾತ್ಕಾಲಿಕ ಶೆಡ್ ನಿರ್ಮಿಸಿ ಸಾರ್ವಜನಿಕರಿಗೆ ಮದ್ಯ ಸೇವಿಸಲು ಅನುವು ಮಾಡಿಕೊಟ್ಟಿರುವಾಗ ಪಿರ್ಯಾದಿಯವರು ಸಿಬ್ಬಂದಿಗಳೊಂದಿಗೆ ಸೇರಿ ದಾಳಿ ಮಾಡಿದಾಗ ಅಬಕಾರಿ ಸ್ವತ್ತುಗಳಾದ Captain Martins Wisky-90 ML ನ Tetra Pack-4, ಅ||ಕಿ|| 141/- ರೂಪಾಯಿ, Captain Martins Wisky-90 ML ನ ಖಾಲಿ Tetra Pack-2, ಅ||ಕಿ|| 00.00/- ರೂಪಾಯಿ, ಪ್ಲಾಸ್ಟಿಕ್ ಗ್ಲಾಸ್-02, ಅ||ಕಿ|| 0000/- ರೂಪಾಯಿ ಹಾಗೂ ನಗದು ಹಣ 110/- ರೂಪಾಯಿ. ಇವುಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಹಣಮಂತ ಎಸ್. ಬಿರಾದಾರ, ಪಿ.ಎಸ್.ಐ (ಕಾ&ಸು), ಬನವಾಸಿ ಪೊಲೀಸ್ ಠಾಣೆ ರವರು ದಿನಾಂಕ: 21-05-2021 ರಂದು 13-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ರಾಮನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 48/2021, ಕಲಂ: 269, 270, 271 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಸುಶಾಂತ ತಂದೆ ಬಲವಂತ ದೇಸಾಯಿ, ಪ್ರಾಯ-40 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಲಕ್ಷ್ಮೀ ಕಾಲೋನಿ, ಜಗಲಬೇಟ, ತಾ: ಜೋಯಿಡಾ. ಈಗ ದೇಶಾದ್ಯಂತ ಕೊರೋನಾ ರೋಗ ಹೆಚ್ಚಾಗುತ್ತಿದ್ದು, ಕರ್ನಾಟಕ ಸರಕಾರವು ರಾಜ್ಯಾದ್ಯಂತ ಲಾಕಡೌನ್ ಘೋಷಿಸಿದ್ದು ಇರುತ್ತದೆ. ಮಾನ್ಯ ಜಿಲ್ಲಾಧಿಕಾರಿಗಳು, ಉತ್ತರ ಕನ್ನಡ ಜಿಲ್ಲೆ,, ಕಾರವಾರ ರವರು ದಿನಾಂಕ: 16-05-2021 ರ ಬೆಳಿಗ್ಗೆ 10-00 ಗಂಟೆಯಿಂದ ದಿನಾಂಕ: 24-05-2021 ರ ಬೆಳಿಗ್ಗೆ 06-00 ಗಂಟೆಯವರೆಗೆ ಪ್ರಚಲಿತದಲ್ಲಿರುವ ರಾಜ್ಯ ಸರಕಾರದ ಮಾರ್ಗಸೂಚಿಗಳಿಗೆ ಹೆಚ್ಚುವರಿಯಾಗಿ ಕೆಲವೊಂದು ಕ್ರಮಗಳನ್ನು ಸೇರಿಸಿ, ಎಲ್ಲಾ ಖಾಸಗಿ ವಾಹನಗಳ ತುರ್ತು ಸಂಧರ್ಭ ಹೊರತು ಪಡಿಸಿ ಸಂಚಾರವನ್ನು ನಿರ್ಭಂಧಿಸಿದ್ದು ಇರುತ್ತದೆ. 40 ಕ್ಕಿಂತ ಹೆಚ್ಚು ಇರುವ ಪಾಸಿಟಿವ್ ಪ್ರಕರಣಗಳಿರುವ ವಾರ್ಡ್ ಹಾಗೂ ಏರಿಯಾಗಳನ್ನು ವಿಶೇಷ ಕಂಟೈನಮೆಂಟ್ ಝೋನ್ ಗಳಾಗಿ ಆದೇಶ ಹೊರಡಿಸುವಂತೆ ತಹಶೀಲ್ದಾರರಿಗೆ ಸೂಚಿಸಿದಂತೆ, ಮಾನ್ಯ ತಹಶೀಲ್ದಾರ್ ಜೋಯಿಡಾರವರು ಜಗಲಬೇಟ ಗ್ರಾಮವನ್ನು ವಿಶೇಷ ಕಂಟೈನಮೆಂಟ್ ಝೋನ್ ಆಗಿ ಘೋಷಿಸಿದ್ದರೂ ಸಹ ನಮೂದಿತ ಆರೋಪಿತನು ದಿನಾಂಕ: 21-05-2021 ರಂದು ಮುಂಜಾನೆ 11-00 ಗಂಟೆಗೆ ಜಗಲಬೇಟ ಗ್ರಾಮಕ್ಕೆ ಗಸ್ತು ಕರ್ತವ್ಯಕ್ಕೆ ಹೋದಾಗ ಮಾಸ್ಕ್ ಧರಿಸದೆ ತಾನು ಹೊರಗಡೆ ಬಂದರೆ ರೋಗ ಹರಡುವ ಸಾಧ್ಯತೆ ಹೆಚ್ಚಾಗಿ ಜನರ ಜೀವಕ್ಕೆ ಅಪಾಯ ಇದೆ ಎಂದು ಗೊತ್ತಿದ್ದರೂ ಸಹ ಹೊರಗಡೆ ತಿರುಗಾಡುತ್ತಿದ್ದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಕಿರಣ ಬಿ. ಪಾಟೀಲ, ಪಿ.ಎಸ್.ಐ (ಕಾ&ಸು), ರಾಮನಗರ ಪೊಲೀಸ್ ಠಾಣೆ ರವರು ದಿನಾಂಕ: 21-05-2021 ರಂದು 12-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 21-05-2021

at 00:00 hrs to 24:00 hrs

 

ಕಾರವಾರ ಗ್ರಾಮೀಣ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 07/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ಸ್ಟೇನಿ ತಂದೆ ರುಜಾರಿಯೋ ರಾಯಪ್ಪನ್, ಪ್ರಾಯ-44 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕೋಮಾರಪಂಥವಾಡಾ, ಮ್ಹಾಳಸಾ ರೋಡ, ಬಿಣಗಾ, ಕಾರವಾರ. ಈತನು ಮದುವೆಯಾಗಿ ಸುಮಾರು ಒಂದೂವರೆ ವರ್ಷವಾದರೂ ಕೂಡಾ ಮಕ್ಕಳಾಗಿಲ್ಲವೆಂದು ಹಾಗೂ ಮದುವೆಗೆ ಮಾಡಿದ ಸಾಲ ತೀರಿಸಲು ಸಾಧ್ಯವಾಗಲಿಲ್ಲ ಅಂತಾ ಬೇಜಾರು ಮಾಡಿಕೊಂಡಿದ್ದವನು. ಮನೆಯಲ್ಲಿ ರಾತ್ರಿಯ ವೇಳೆ ಎಲ್ಲರೂ ಮಲಗಿದ್ದಾಗ ದಿನಾಂಕ: 21-05-2021 ರಂದು 00-45 ಗಂಟೆಯ ಸಮಯಕ್ಕೆ ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ಕುತ್ತಿಗೆಗೆ ಹರಿತವಾದ ಚಾಕುವಿನಿಂದ ಇರಿದುಕೊಂಡು ಗಾಯ ಮಾಡಿಕೊಂಡು ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಬೆಳಿಗ್ಗೆ 09-40 ಗಂಟೆಗೆ ಮರಣಪಟ್ಟ ಬಗ್ಗೆ ಪಿರ್ಯಾದಿ ಶ್ರೀಮತಿ ಫೇಮಿಲಾ ಕೋಂ. ಸ್ಟೇನಿ ಪ್ರಾಯ-38 ವರ್ಷ, ವೃತ್ತಿ-ಗೃಹಿಣಿ, ಸಾ|| ಕೋಮಾರಪಂಥವಾಡಾ, ಮ್ಹಾಳಸಾ ರೋಡ, ಬಿಣಗಾ, ಕಾರವಾರ ರವರು ದಿನಾಂಕ: 21-05-2021 ರಂದು 11-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಕಾರವಾರ ಶಹರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 16/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ಶಿವಾನಂದ ತಂದೆ ದತ್ತಾರಾಮ ಬೈಕೇರಿಕರ, ಪ್ರಾಯ-48 ವರ್ಷ, ವೃತ್ತಿ-ಅಕ್ಕಸಾಲಿಗ, ಸಾ|| ಡಿ-9 ರಸ್ತೆ, ಕೆ.ಎಚ್.ಬಿ ಕಾಲೋನಿ, ಹಬ್ಬುವಾಡ, ಕಾರವಾರ, ಈತನು ಪಿರ್ಯಾದಿಯ ಗಂಡನಾಗಿದ್ದು, ತನ್ನ ಹೆಂಡತಿ ಮಕ್ಕಳೊಂದಿಗೆ ವಾಸ ಮಾಡಿಕೊಂಡಿದ್ದವನು, ದಿನಾಂಕ: 21-5-2021 ರಂದು ರಾತ್ರಿ 01-00 ಗಂಟೆಗೆ ತನ್ನ ಮನೆಯ ಬೆಡ್ ರೂಮಿನಲ್ಲಿ ಮಲಗಿಕೊಂಡಿದ್ದವನು, ತಾನು ಹಾಲಿನಲ್ಲಿ ಮಲಗಿಕೊಳ್ಳುವುದಾಗಿ ತಿಳಿಸಿ, ಹೆಂಡತಿ ಮಗ ಮಲಗಿದ್ದ ಬೆಡ್ ರೂಮಿನ ಕೋಣೆಯ ಬಾಗಿಲಿನ ಚಿಲಕವನ್ನು ಹಾಕಿ, ಮನೆಯ ಎಲ್ಲಾ ಬಾಗಿಲಿನ ಚಿಲಕವನ್ನುಹಾಕಿ ಮನೆಯ ಹಾಲ್ ನ ಕೋಣೆಯಲ್ಲಿ ಮಲಗಿಕೊಂಡವನು, ರಾತ್ರಿ 01-00 ಗಂಟೆಯಿಂದ ಬೆಳಿಗ್ಗೆ 07-30 ಗಂಟೆಯ ನಡುವಿನ ಅವಧಿಯಲ್ಲಿ ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ಹಾಲ್ ನ ಕೋಣೆಯಲ್ಲಿದ್ದ ಸೀಲಿಂಗ್ ಫ್ಯಾನಿಗೆ ಬಟ್ಟೆಯ ವೇಲ್ ಅನ್ನು ಕಟ್ಟಿ, ತನ್ನ ಕುತ್ತಿಗೆಗೆ ಉರುಳು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಪಿರ್ಯಾದಿ ಶ್ರೀಮತಿ ಶಿವಾನಿ ಕೋಂ. ಶಿವಾನಂದ ಬೈಕೇರಿಕರ, ಪ್ರಾಯ-38 ವರ್ಷ, ವೃತ್ತಿ-ಮನೆವಾರ್ತೆ, ಸಾ|| ಡಿ-9 ರಸ್ತೆ, ಕೆ.ಎಚ್.ಬಿ ಕಾಲೋನಿ, ಹಬ್ಬುವಾಡ, ಕಾರವಾರ ರವರು ದಿನಾಂಕ: 21-05-2021 ರಂದು 09-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಅಂಕೋಲಾ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 25/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಸಂದೀಪ ತಂದೆ ಬೀರಪ್ಪ ನಾಯ್ಕ, ಪ್ರಾಯ-37 ವರ್ಷ, ವೃತ್ತಿ-ರಾಘವಿ ಆರ್ಟ್ಸ್ ಮಾಲಿಕ, ಸಾ|| ಬಂದರ್ ರಸ್ತೆ, ಬೇಳಾ, ತಾ: ಅಂಕೋಲಾ. ಈತನು ಪಿರ್ಯಾದಿಯ ಸಂಬಂಧಿ ಚೇತನ ತಂದೆ ನಾಗೇಶ ನಾಯ್ಕ, ಸಾ|| ತೆಂಕಣಕೇರಿ, ತಾ: ಅಂಕೋಲಾ ಈತನೊಂದಿಗೆ ದಿನಾಂಕ: 21-05-2021 ರಂದು ಅಂಕೋಲಾ ತಾಲೂಕಿನ ಶೇಡಿಕುಳಿಯ ಬಸಾಕಲ್ ಗುಡ್ಡದ ಹತ್ತಿರ ಸಮುದ್ರದ ದಡಕ್ಕೆ ಹೋದವರು, ಮಧ್ಯಾಹ್ನ 01-00 ಗಂಟೆಯಿಂದ 03-00 ಗಂಟೆಯ ನಡುವಿನ ಅವಧಿಯಲ್ಲಿ ಸಮುದ್ರ ದಡದಲ್ಲಿರುವ ದೊಡ್ಡ ಬಂಡೆ ಕಲ್ಲಿನ ಮೇಲೆ ನಿಂತು ಸಮುದ್ರ ನೋಡುತ್ತಿದ್ದಾಗ ಅಥವಾ ಇನ್ನಾವುದೋ ಕಾರಣಕ್ಕೆ ಬಂಡೆ ಕಲ್ಲಿನ ಮೇಲೆ ನಿಂತುಕೊಂಡಿದ್ದಾಗ ಆಕಸ್ಮಿಕವಾಗಿ ಕಾಲು ಜಾರಿ ಅಥವಾ ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿ ಸಮುದ್ರದ ನೀರಿನಲ್ಲಿ ಮುಳುಗಿ ಮೃತಪಟ್ಟಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಪ್ರಶಾಂತ ತಂದೆ ಬೀರಪ್ಪ ನಾಯ್ಕ, ಪ್ರಾಯ-33 ವರ್ಷ, ವೃತ್ತಿ-ರಾಘವಿ ಇಂಟರನೆಟ್ ಸರ್ವೀಸ್, ಸಾ|| ಬಂದರ್ ರಸ್ತೆ, ಬೇಳಾ, ತಾ: ಅಂಕೋಲಾ ರವರು ದಿನಾಂಕ: 21-05-2021 ರಂದು 16-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

ಇತ್ತೀಚಿನ ನವೀಕರಣ​ : 22-05-2021 06:10 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080