Daily District Crime Report
Date:- 21-11-2021
at 00:00 hrs to 24:00 hrs
ಅಂಕೋಲಾ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 174/2021, ಕಲಂ: 379 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ದಿನಾಂಕ: 18-11-2021 ರಂದು 13-00 ಗಂಟೆಯಿಂದ ದಿನಾಂಕ: 21-11-2021 ರಂದು 04-30 ಗಂಟೆಯ ನಡುವಿನ ಅವಧಿಯಲ್ಲಿ ಅಂಕೋಲಾ ತಾಲೂಕಿನ ರಾಮನಗುಳಿಯ ಜಂಗಲ್ ರೆಸಾರ್ಟ್ ಕಂಪೌಂಡ್ ಒಳಗಡೆ ಇರುವ ಬಿ.ಎಸ್.ಎನ್.ಎಲ್ ಮೊಬೈಲ್ ಟವರಿಗೆ ಇರುವ ಜಿಯೋ ಮೊಬೈಲ್ ಸಿಗ್ನಲ್ ಎಂಟೇನಾಗೆ ಅಳವಡಿಸಿದ ಅಂದಾಜು ಸುಮಾರು 10,000/- ರೂಪಾಯಿ ಮೌಲ್ಯದ ಪವರ್ ಸಪ್ಲೈ ಕೇಬಲ್ ಅನ್ನು ಕಳುವು ಮಾಡಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀ ಸಚೀನ್ ತಂದೆ ವಿಠ್ಠಲ ಪಾಡ್ಕರ್, ಪ್ರಾಯ-26 ವರ್ಷ, ವೃತ್ತಿ-ಜಿಯೋ ಕಂಪನಿಯಲ್ಲಿ ಸೂಪರವೈಸರ್, ಸಾ|| ಕಾನಂಗಿ, ಹಿರ್ಗಾನಾ, ತಾ: ಕಾರ್ಕಳ, ಜಿ: ಉಡುಪಿ ರವರು ದಿನಾಂಕ: 21-11-2021 ರಂದು 19-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಹೊನ್ನಾವರ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 314/2021, ಕಲಂ: 3, 7 ಅತ್ಯಾವಶ್ಯಕ ವಸ್ತುಗಳ ಕಾಯ್ದೆ-1955 ನೇದ್ದರ ವಿವರ...... ನಮೂದಿತ ಆರೋಪಿತರು 1]. ಈರಣ್ಣಾ ಮಾಳಗಿ, ಸಾ|| ಅಕ್ಕಿಆಲೂರು, ತಾ: ಹಾನಗಲ್, ಜಿ: ಹಾವೇರಿ, 2]. ನವೀನ್ ಶೆಟ್ಟಿ, ಸಾ|| ಮಂಗಳೂರು, 3]. ಉಮರ್ ಫಾರೂಖ್ ತಂದೆ ಅಬ್ದುಲ್, ಪ್ರಾಯ-36 ವರ್ಷ, ವೃತ್ತಿ-ಚಾಲಕ, ಸಾ|| ಹೊಸಮಠ, ಪೋ: ಬಲ್ಯಾ, ತಾ: ಪುತ್ತೂರು, ಜಿ: ದಕ್ಷಿಣ ಕನ್ನಡ, 4]. ಮಹಮ್ಮದ್ ಆಸೀಪ್ ತಂದೆ ಮಹಮ್ಮದ್, ಪ್ರಾಯ-37 ವರ್ಷ, ವೃತ್ತಿ-ಚಾಲಕ, ಸಾ|| ಬಜ್ಪೆ, ಮಂಗಳೂರು, ದಕ್ಷಿಣ ಕನ್ನಡ. ಈ ನಮೂದಿತ ಆರೋಪಿತರುಗಳು ಏಕೋದ್ದೇಶದಿಂದ ಸೇರಿಕೊಂಡು ಅದರಲ್ಲಿ ಆರೋಪಿ 1 ನೇಯವನು ಹಾವೇರಿ ಜಿಲ್ಲೆಯ ಅಕ್ಕಿಆಲೂರಿನಲ್ಲಿ ಅನಧೀಕೃತವಾಗಿ ಸಂಗ್ರಹಿಸಿಟ್ಟಿದ್ದ ಒಟ್ಟೂ ಅಂದಾಜು ಕಿಮ್ಮತ್ತು 13,73,400/- ರೂಪಾಯಿ ಮೌಲ್ಯದ ಒಟ್ಟೂ 49,050 ಕೆ.ಜಿ ತೂಕದ ಸರಕಾರದ ವಿವಿಧ ಯೋಜನೆಯ ಅಡಿಯಲ್ಲಿ ವಿತರಿಸಲಾಗುವ ಸರಕಾರಿ ಅಕ್ಕಿಯನ್ನು ಆರೋಪಿ 2 ನೇಯವನ ಸೂಚನೆಯ ಮೇರೆಗೆ ಕಂಟೇನರ್ ಲಾರಿ ಚಾಲಕರುಗಳಾದ ಆರೋಪಿ 3 ಮತ್ತು 4 ನೇಯವರು ತಮ್ಮ ಕಂಟೇನರ್ ಲಾರಿ ನಂ: ಕೆ.ಎ-19/ಎ.ಎ-7874 ಹಾಗೂ ಕಂಟೇನರ್ ಲಾರಿ ನಂ: ಕೆ.ಎ-19/ಎ.ಡಿ-2045 ನೇದವುಗಳಲ್ಲಿ ತುಂಬಿಕೊಂಡು ಸಂಬಂಧಪಟ್ಟ ಪ್ರಾಧಿಕಾರದಿಂದ ಯಾವುದೇ ಪರವಾನಿಗೆ ಇಲ್ಲದೇ ಅನಧೀಕೃತವಾಗಿ ಹಾವೇರಿ ಜಿಲ್ಲೆಯ ಅಕ್ಕಿಆಲೂರಿನಿಂದ ಮಂಗಳೂರು ಕಡೆಗೆ ಅಕ್ರಮವಾಗಿ ಸಾಗಾಟ ಮಾಡಿಕೊಂಡು ಹೋಗುತ್ತಿದ್ದಾಗ ದಿನಾಂಕ: 21-11-2021 ರಂದು 14-30 ಗಂಟೆಗೆ ಹೊನ್ನಾವರ ಪಟ್ಟಣದ ಗೇರುಸೊಪ್ಪ ಸರ್ಕಲ್ ಬಳಿ ಪಿರ್ಯಾದುದಾರರು, ಮಾನ್ಯ ತಹಶೀಲ್ದಾರರು ಹೊನ್ನಾವರ, ಪೊಲೀಸ್ ನಿರೀಕ್ಷಕರು (ಹೊನ್ನಾವರ ಠಾಣೆ), ಪಿ.ಎಸ್.ಐ (ಹೊನ್ನಾವರ ಠಾಣೆ), ಪಂಚರು ಹಾಗೂ ಪೊಲೀಸ್ ಸಿಬ್ಬಂದಿಯವರೊಂದಿಗೆ ತಪಾಸಣೆ ಮಾಡಿದ ಕಾಲಕ್ಕೆ ಆರೋಪಿ 3 ಮತ್ತು 4 ನೇಯವರು ಸಿಕ್ಕ ಬಗ್ಗೆ ಪಿರ್ಯಾದಿ ಶ್ರೀ ವೆಂಕಟ್ರಮಣ ಟಿ. ಎಮ್. ತಂದೆ ನಾಗಪ್ಪ ದೇವಾಡಿಗ, ಪ್ರಾಯ-53 ವರ್ಷ, ವೃತ್ತಿ-ಆಹಾರ ನಿರೀಕ್ಷಕರು, ಸಾ|| ತಹಶೀಲ್ದಾರ್ ಕಛೇರಿ, ತಾ: ಹೊನ್ನಾವರ ರವರು ದಿನಾಂಕ: 21-11-2021 ರಂದು 23-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಮುರ್ಡೇಶ್ವರ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 101/2021, ಕಲಂ: 32, 34 ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ಉಮೇಶ ತಂದೆ ನಾರಾಯಣ ನಾಯ್ಕ, ಪ್ರಾಯ-30 ವರ್ಷ, ವೃತ್ತಿ-ಹೋಟೆಲ್ ಕೆಲಸ, ಸಾ|| ಕಾನಪಟ್ಟಿ ಮನೆ, ಒಪ್ಪುಂದ, ನೀರಕಂಠ, ಶಿರಾಲಿ, ತಾ: ಭಟ್ಕಳ. ಈತನು ದಿನಾಂಕ: 21-11-2021 ರಂದು 21-15 ಗಂಟೆಗೆ ಬೇಂಗ್ರೆಯ ಅಕ್ಷಯ ಪೆಟ್ರೋಲ್ ಪಂಪ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಸಂಬಂಧಪಟ್ಟ ಅದೀüಕೃತ ಅಧಿಕಾರಿಗಳಿಂದ ಅನುಮತಿ ಅಥವಾ ಪಾಸ್ ಯಾ ಪರ್ಮಿಟ್ ಹೊಂದದೇ ಅಕ್ರಮವಾಗಿ SUZUKI ACCESS-125 ಮೋಟಾರ್ ಸೈಕಲ್ ನಂ: ಕೆ.ಎ-20/ಇ.ಎಸ್-2969 ನೇದರಲ್ಲಿ ಒಟ್ಟು 4,620/-ರೂಪಾಯಿ ಮೌಲ್ಯದ 1). UB EXPORT STRONG PREMIUM BEER ಅಂತಾ ಲೇಬಲ್ ಇರುವ ಬಾಟಲಿಗಳು-12, 2). KINGFISHER STRONG PREMIUM BEER ಅಂತಾ ಲೇಬಲ್ ಇರುವ ಬಾಟಲಿಗಳು-06, 3). TUBORG STRONG PREMIUM BEER ಅಂತಾ ಲೇಬಲ್ ಇರುವ ಬಾಟಲಿಗಳು-06, 4). UB EXPORT STRONG PREMIUM BEER ಅಂತಾ ಲೇಬಲ್ ಇರುವ ಬಾಟಲಿಗಳು-05, 5). TUBORG STRONG PREMIUM BEER ಅಂತಾ ಲೇಬಲ್ ಇರುವ ಬಾಟಲಿಗಳು-05, 6). KINGFISHER STRONG PREMIUM BEER ಅಂತಾ ಲೇಬಲ್ ಇರುವ ಬಾಟಲಿಗಳು-05. ಇವುಗಳನ್ನು ತನ್ನ ಲಾಭಕ್ಕಾಗಿ ಮಾರಾಟ ಮಾಡುವ ಉದ್ದೇಶದಿಂದ ಮುರ್ಡೇಶ್ವರ ಕಡೆಯಿಂದ ಶಿರಾಲಿ ಕಡೆಗೆ ಸಾಗಾಟ ಮಾಡುತ್ತಿರುವಾಗ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ರವೀಂದ್ರ ಎಮ್. ಬಿರಾದಾರ, ಪಿ.ಎಸ್.ಐ (ಕಾ&ಸು), ಮುರ್ಡೇಶ್ವರ ಪೊಲೀಸ್ ಠಾಣೆ ರವರು ದಿನಾಂಕ: 21-11-2021 ರಂದು 23-25 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 143/2021, ಕಲಂ: 87 ಕರ್ನಾಟಕ ಪೊಲೀಸ್ ಕಾಯ್ದೆ-1963 ನೇದ್ದರ ವಿವರ...... ನಮೂದಿತ ಆರೋಪಿತ 1]. ಗೋಪಾಲ ತಂದೆ ವೆಂಕಟಯ್ಯಾ ದೇವಾಡಿಗ, ಪ್ರಾಯ-31 ವರ್ಷ, ವೃತ್ತಿ-ಚಾಲಕ, ಸಾ|| ತಟ್ಟಿಹಕ್ಕಲ್, ಶಿರಾಲಿ, ತಾ: ಭಟ್ಕಳ, 2]. ಮಂಜುನಾಥ ತಂದೆ ಮಾಸ್ತಪ್ಪಾ ನಾಯ್ಕ, ಪ್ರಾಯ-34 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಗುಮ್ಮನಹಕ್ಕಲ್, ತಾ: ಭಟ್ಕಳ, 3]. ಸಣ್ಣಪ್ಪು ತಂದೆ ಕಂಚಿಗುಂಡಿ ನಾಯ್ಕ, ಪ್ರಾಯ-51 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಶಾರದಾಹೊಳೆ, ತಾ: ಭಟ್ಕಳ, 4]. ನಾಗಪ್ಪ ತಂದೆ ನಾರಾಯಣ ನಾಯ್ಕ, ಪ್ರಾಯ-62 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಹಿರಿಹಿತ್ಲ, ಶಾರದಾಹೊಳೆ, ತಾ: ಭಟ್ಕಳ. ಈ ನಮೂದಿತ ಆರೋಪಿತರು ದಿನಾಂಕ: 21-11-2021 ರಂದು 18-45 ಗಂಟೆಯ ಸಮಯಕ್ಕೆ ಶಿರಾಲಿ ಗ್ರಾಮದ ತಟ್ಟಿಹಕ್ಕಲ್ ಬ್ರಿಡ್ಜ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ತಮ್ಮ ತಮ್ಮ ಲಾಭಕ್ಕೋಸ್ಕರ ಅಂದರ್-ಬಾಹರ್ ಇಸ್ಪೀಟ್ ಜೂಗಾರಾಟ ಆಡುತ್ತಿದ್ದಾಗ ನಗದು ಹಣ 6,750/- ರೂಪಾಯಿ ಹಾಗೂ ಇಸ್ಪೀಟ್ ಎಲೆಗಳು-52 (ಅ||ಕಿ|| 00.00/- ರೂಪಾಯಿ), ನೈಲಾನ್ ಚೀಲ-01 (ಅ||ಕಿ|| 00.00/- ರೂಪಾಯಿ). ಇವುಗಳೊಂದಿಗೆ ಆರೋಪಿತರೆಲ್ಲರೂ ಸ್ಥಳದಲ್ಲಿ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಕುಮಾರಿ: ರತ್ನಾ ಸಂಕಪ್ಪ ಕುರಿ, ಡಬ್ಲ್ಯೂ.ಪಿ.ಎಸ್.ಐ (ತನಿಖೆ), ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ ರವರು ದಿನಾಂಕ: 21-11-2021 ರಂದು 20-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 149/2021, ಕಲಂ: 78(3) ಕರ್ನಾಟಕ ಪೊಲೀಸ್ (ತಿದ್ದುಪಡಿ) ಕಾಯ್ದೆ-2021 ನೇದ್ದರ ವಿವರ...... ನಮೂದಿತ ಆರೋಪಿತ ಮಾರುತಿ ತಂದೆ ಬಾಬು ಪಾವಸ್ಕರ, ಪ್ರಾಯ-41 ವರ್ಷ, ವೃತ್ತಿ-ಚಪ್ಪಲಿ ಅಂಗಡಿ ಕೆಲಸ, ಸಾ|| ಹಿಂದೂ ಕಾಲೋನಿ, ತಾ: ಭಟ್ಕಳ, ಹಾಲಿ ಸಾ|| ಕಡುವಿನ ಕಟ್ಟಾ, ತಾ: ಭಟ್ಕಳ. ಈತನು ದಿನಾಂಕ: 21-11-2021 ರಂದು ಬೆಳಿಗ್ಗೆ 10-00 ಗಂಟೆಯ ಸುಮಾರಿಗೆ ಭಟ್ಕಳದ ಶಹರದ ಹಳೇ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ನಿಂತು ತನ್ನ ಲಾಭಕ್ಕೋಸ್ಕರ ಓ.ಸಿ ಮಟಕಾ ಜೂಗಾರಾಟದ ಅಂಕೆ-ಸಂಖ್ಯೆಗಳ ಮೇಲೆ ಸಾರ್ವಜನಿಕರಿಂದ ಹಣವನ್ನು ಪಡೆದು ಪಂಥವನ್ನಾಗಿ ಕಟ್ಟಿ ಓ.ಸಿ ಮಟಕಾ ಜೂಗಾರಾಟ ಆಡಿಸುತ್ತಿರುವಾಗ ನಗದು ಹಣ 1,620/- ರೂಪಾಯಿ ಮತ್ತು ಓ.ಸಿ ಜೂಗಾರಾಟದ ಸಲಕರಣೆಗಳ ಸಮೇತ ದಾಳಿಯ ಕಾಲಕ್ಕೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಯಲ್ಲಪ್ಪ ಮಾದರ, ಪಿ.ಎಸ್.ಐ, ಭಟ್ಕಳ ಶಹರ ಪೊಲೀಸ್ ಠಾಣೆ ರವರು ದಿನಾಂಕ: 21-11-2021 ರಂದು 11-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಯಲ್ಲಾಪುರ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 205/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ರಾಜು ತಂದೆ ಭೀಮಾ ಗಾಡಿವಡ್ಡರ, ಪ್ರಾಯ-46 ವರ್ಷ, ವೃತ್ತಿ-ಚಾಲಕ ಸಾ|| ಮನೆ ನಂ: 40, ವಡ್ಡರ ಛಾವಣಿ, ನೆಹರು ನಗರ, ತಾ&ಜಿ: ಬೆಳಗಾವಿ (ಲಾರಿ ನಂ: ಕೆ.ಎ-22/ಡಿ-6608 ನೇದರ ಚಾಲಕ). ಈತನು ದಿನಾಂಕ: 20-11-2021 ರಂದು 11-30 ಗಂಟೆಯ ಸುಮಾರಿಗೆ ಯಲ್ಲಾಪುರ ತಾಲೂಕಿನ ಅರಬೈಲ್ ಮಾರುತಿ ದೇವಸ್ದಾನ ಹತ್ತಿರ ಹಾದು ಹೋದ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-63 ರಲ್ಲಿ ತನ್ನ ಬಾಬ್ತು ಲಾರಿ ನಂ: ಕೆ.ಎ-22/ಡಿ-6608 ನೇದನ್ನು ಅಂಕೋಲಾ ಕಡೆಯಿಂದ ಯಲ್ಲಾಪುರ ಕಡೆಗೆ ಅತೀವೇಗವಾಗಿ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ತನ್ನ ಲಾರಿಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳದೇ, ಅದೇ ವೇಳೆ ತನ್ನ ಮುಂದಿನಿಂದ ಅಂದರೆ ಯಲ್ಲಾಪುರ ಕಡೆಯಿಂದ ಅಂಕೋಲಾ ಕಡೆಗೆ ಪಿರ್ಯಾದಿಯವರು ತನ್ನ ಸೈಡಿನಲ್ಲಿ ನಿಧಾನವಾಗಿ ಚಲಾಯಿಸಿಕೊಂಡು ಬರುತ್ತಿದ್ದ ಕಂಟೇನರ್ ವಾಹನ ನಂ: ಎನ್.ಎಲ್-01/ಎ.ಇ-0876 ನೇದಕ್ಕೆ ಎದುರಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ತನ್ನ ಮೈ ಕೈಗೆ ಗಾಯನೋವು ಪಡಿಸಿಕೊಂಡಿದ್ದಲ್ಲದೇ, ಎರಡು ವಾಹನಗಳನ್ನು ಜಖಂಗೊಳಿಸಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಈರಣ್ಣಗೌಡ ತಂದೆ ಚನ್ನಪ್ಪಗೌಡ ಪಾಟೀಲ, ಪ್ರಾಯ-28 ವರ್ಷ, ವೃತ್ತಿ-ಚಾಲಕ, ಸಾ|| ಅದರಗುಂಚಿ, ಪೋ: ಅದರಗುಂಚಿ, ತಾ: ಹುಬ್ಬಳ್ಳಿ, ಜಿ: ಧಾರವಾಡ ರವರು ದಿನಾಂಕ: 21-11-2021 ರಂದು 11-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
======||||||||======
Daily District U.D Report
Date:- 21-11-2021
at 00:00 hrs to 24:00 hrs
ಸಿದ್ದಾಪುರ ಪೊಲೀಸ್ ಠಾಣೆ
ಯು.ಡಿ.ಆರ್ ಸಂಖ್ಯೆಃ 39/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಲಕ್ಷ್ಮಣ ತಂದೆ ರಾಮಾ ಗೌಡ, ಪ್ರಾಯ-70 ವರ್ಷ, ವೃತ್ತಿ-ನಿರುದ್ಯೋಗಿ, ಸಾ|| ದಾಸನಗದ್ದೆ, ಹೊಸಮಂಜು ಗ್ರಾಮ, ತಾ: ಸಿದ್ದಾಪುರ. ಪಿರ್ಯಾದಿಯ ತಂದೆಯಾದ ಇವರು ಬಹಳ ವರ್ಷಗಳಿಂದ ವಿಪರೀತ ದಮ್ಮಿನ ಕಾಯಿಲೆ ಹಾಗೂ ಇನ್ನಿತರ ಕಾಯಿಲೆಗಳಿಂದ ಬಳಲುತ್ತಾ ಜೀವನದಲ್ಲಿ ಜಿಗುಪ್ಸೆಗೊಂಡಿದ್ದವರು, ಈ ಹಿಂದೆ 2 ಬಾರಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದರು. ಹೀಗಿರುವಲ್ಲಿ ದಿನಾಂಕ: 19-11-2021 ರಂದು ಸಂಜೆ 06-00 ಗಂಟೆಗೆ ಮನೆಯ ಹತ್ತಿರ ಅಂಗಡಿಗೆ ಹೋದವರು, ‘ಮನೆಗೆ ಹೋಗುತ್ತೇನೆ’ ಅಂತಾ ಹೇಳಿ ಹೋದವರು, ಅಲ್ಲಿಂದ ಬಂದು ಮನೆಗೂ ಬಾರದೇ ಕಾಣೆಯಾಗಿದ್ದವರಿಗೆ ಹುಡುಕುತ್ತಿರುವಾಗ ದಿನಾಂಕ: 21-11-2021 ರಂದು ಬೆಳಿಗ್ಗೆ 10-00 ಗಂಟೆಗೆ ಮನೆಯ ಎದುರಿಗೆ ಅರ್ಧ ಕಿ.ಮೀ ಅಂತರದಲ್ಲಿರುವ ಬ್ಯಾಣನಮತ್ತಿ ಜಂಗಲ್ ದಲ್ಲಿನ ದಟ್ಟವಾದ ಗಿಡಗಂಟಿಗಳ ಮಧ್ಯದಲ್ಲಿರುವ ದಾಲ್ಚಿನ್ನಿ ಗಿಡದ ಅಡ್ಡ ಟೊಂಗೆಗೆ ಪ್ಲಾಸ್ಟಿಕ ವಾಯರ್ ನಿಂದ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಸಿಕ್ಕಿದ್ದು, ಮೃತರು ತನಗಿರುವ ದಮ್ಮಿನ ಕಾಯಿಲೆಯಿಂದ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ: 19-11-2021 ರಂದು ಸಂಜೆ 06-00 ಗಂಟೆಯಿಂದ ರಾತ್ರಿ 08-00 ಗಂಟೆಯ ನಡುವಿನ ಅವಧಿಯಲ್ಲಿ ಮನೆಯಿಂದ ಸುಮಾರು ಅರ್ಧ ಕಿ.ಮೀ ಅಂತರದಲ್ಲಿರುವ ಬ್ಯಾಣನಮತ್ತಿ ಜಂಗಲ್ ದಲ್ಲಿರುವ ದಾಲ್ಚಿನ್ನಿ ಗಿಡದ ಅಡ್ಡಟೊಂಗೆಗೆ ಪ್ಲಾಸ್ಟಿಕ್ ವಾಯರ್ ನಿಂದ ಕುತ್ತಿಗೆಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ಚಂದ್ರಕಾಂತ ತಂದೆ ಲಕ್ಷ್ಮಣ ಗೌಡ, ಪ್ರಾಯ-42 ವರ್ಷ, ವೃತ್ತಿ-ಅಂಗಡಿ ವ್ಯಾಪಾರ/ಕೃಷಿ ಕೆಲಸ, ಸಾ|| ದಾಸನಗದ್ದೆ, ಹೊಸಮಂಜು ಗ್ರಾಮ, ತಾ: ಸಿದ್ದಾಪುರ ರವರು ದಿನಾಂಕ: 21-11-2021 ರಂದು 12-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
======||||||||======