ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 21-10-2021

at 00:00 hrs to 24:00 hrs

 

ಕಾರವಾರ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 46/2021, ಕಲಂ: 143, 147, 323, 326 ಸಹಿತ 149 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಮಹ್ಮದ್ ರಮಜಾನ್, ಸಾ|| ಬಿಹಾರ ಹಾಗೂ ಬಿಹಾರ, ಆಂಧ್ರ ಪ್ರದೇಶ, ಪಶ್ಚಿಮ ಬಂಗಾಳ, ಝಾರ್ಖಂಡ ರಾಜ್ಯದ ಇನ್ನೂ 30 ರಿಂದ 40 ಜನರು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಈ ನಮೂದಿತ ಆರೋಪಿತರೆಲ್ಲರೂ ಅಮದಳ್ಳಿ, ಮುದಗಾದ ಎನ್.ಸಿ.ಸಿ ಕಂಪನಿಯಲ್ಲಿ ಕಾರ್ಮಿಕ ಕೆಲಸಕ್ಕೆ ಇದ್ದವರು, ದಿನಾಂಕ: 21-10-2021 ರಂದು ಬೆಳಿಗ್ಗೆ 08-15 ಗಂಟೆಯ ಸಮಯಕ್ಕೆ ಮುದಗಾದ ಎನ್.ಸಿ.ಸಿ ಕಂಪನಿಯ ಎನ್.ಸಿ.ಸಿ ಮೇನ್ ಗೇಟಿನಿಂದ ಒಳಗಡೆ ಹೋಗುವಾಗ ಪಿರ್ಯಾದಿಯವರು ಸೆಕ್ಯೂರಿಟಿ ಕರ್ತವ್ಯದಲ್ಲಿದ್ದವರು ನೇವಲ್ ಬೇಸ್ ಅಧಿಕಾರಿಗಳ ಆದೇಶದಂತೆ ಎಲ್ಲರ ಬ್ಯಾಗ್ ಗಳನ್ನು ಚೆಕ್ ಮಾಡಿ ಒಳಗಡೆ ಬಿಡುತ್ತಿದ್ದಾಗ ಆರೋಪಿತರೆಲ್ಲರೂ ಸಮಾನ ಉದ್ದೇಶದಿಂದ ಅಕ್ರಮಕೂಟ ಕಟ್ಟಿಕೊಂಡು ಪಿರ್ಯಾದಿಯವರಿಗೆ ಉದ್ದೇಶಿಸಿ ‘ಯಾಕೆ ಬ್ಯಾಗ್ ಚೆಕ್ ಮಾಡುತ್ತೀಯಾ?’ ಅಂತಾ ಹೇಳಿ ಪಿರ್ಯಾದಿಗೆ ಕೈಯಿಂದ ಹೊಡೆದುದ್ದಲ್ಲದೇ, ಆರೋಪಿ 1 ನೇಯವನು ತನ್ನ ಕೈಯಲ್ಲಿದ್ದ ಬೆಂಡಿಂಗ್ ರಾಡ್ ನಿಂದ ಪಿರ್ಯಾದಿಯ ತಲೆಯ ಹಿಂಬದಿಗೆ ಹೊಡೆದುದ್ದಲ್ಲದೇ, ಅದನ್ನು ತಪ್ಪಿಸಲು ಬಂದ ಇನ್ನೊಬ್ಬ ಸೆಕ್ಯೂರಿಟಿ ಗಾರ್ಡ್ ಶ್ರೀ ಅಭಿಷೇಕ ತಂದೆ ಮಾರುತಿ ತಾಂಡೇಲ ಇವರಿಗೂ ಸಹ ಬೆನ್ನಿನ ಮೇಲೆ ಹೊಡೆದು ತೀವೃ ಸ್ವರೂಪದ ಗಾಯನೋವು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ರಂಜನ ತಂದೆ ವಿನೋದ ದುರ್ಗೇಕರ, ಪ್ರಾಯ-24 ವರ್ಷ, ವೃತ್ತಿ-ಎನ್.ಸಿ.ಸಿ ಯಲ್ಲಿ ಸೆಕ್ಯೂರಿಟಿ ಗಾರ್ಡ್, ಸಾ|| ಸೀಬರ್ಡ್ ಕಾಲೋನಿ, ಮುದಗಾ, ಅಮದಳ್ಳಿ, ಕಾರವಾರ ರವರು ದಿನಾಂಕ: 21-10-2021 ರಂದು 10-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಅಂಕೋಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 155/2021, ಕಲಂ: 4, 5, 7, 12 THE KARNATAKA PREVENTION OF SLAUGHTER AND PRESERVATION OF CATTLE ORDINANCE -2020 ಹಾಗೂ ಕಲಂ: 11(1)(d) The Prevention of Cruelty to Animal Act-1960 ಮತ್ತು ಕಲಂ: 192(A) ಐ.ಎಮ್.ವಿ ಎಕ್ಟ್ ನೇದ್ದರ ವಿವರ...... ನಮೂದಿತ ಆರೋಪಿತರು 1]. ಹೈದರ್ ತಂದೆ ರೆಮಲನ್ ಬ್ಯಾರಿ, ಪ್ರಾಯ-40 ವರ್ಷ, ವೃತ್ತಿ-ಲಾರಿ ಚಾಲಕ, ಸಾ|| ನಡ್ತಿಕಲ್ ಹೌಸ್, ಮೂಡಕೋಡಿ, ತಾ: ಬೆಳ್ತಂಗಡಿ, ಜಿ: ದಕ್ಷಿಣ ಕನ್ನಡ, 2]. ಬೊಮ್ಮಯ್ಯ ತಂದೆ ಬೀರಣ್ಣ ನಾಯಕ, ಪ್ರಾಯ-82 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಶಿರಗುಂಜಿ, ತಾ: ಅಂಕೋಲಾ, 3]. ಮಂಜೇಗೌಡ ತಂದೆ ಜವರೇಗೌಡ, ಪ್ರಾಯ-62 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ದೊಡ್ಡ ಕೊಂಡಗೋಳ, ಹಳೆಕೊಪ್ಪಲು, ತಾ&ಜಿ: ಹಾಸನ, 4]. ಅಬ್ದುಲ್ ರಿಯಾಸ್ ತಂದೆ ಮಹಮ್ಮದ್, ಪ್ರಾಯ-27 ವರ್ಷ, ವೃತ್ತಿ-ವ್ಯಾಪಾರ, ಸಾ|| ಸುಬ್ಬಾನತೊಟ್ಟಿ ಹೌಸ್, ಮುತ್ತಾತ್ತೊಡಿ ಅಲಂಪಾಡಿ, ಕಾಸರಗೋಡ, ಕೇರಳಾ ರಾಜ್ಯ, 5]. ಅಬುಬಕ್ಕರ್ ದಿಲ್ ಶಾದ್ ತಂದೆ ಅಬ್ದುಲ್ ಹಮೀದ್, ಸಾ|| ಅಲಂಪಾಡಿ, ಕಾಸರಗೋಡ, ಕೇರಳಾ ರಾಜ್ಯ. ಈ ನಮೂದಿತ ಆರೋಪಿತರು ದಿನಾಂಕ: 21-10-2021 ರಂದು 01-15 ಗಂಟೆಯ ಸುಮಾರಿಗೆ ಅಂಕೋಲಾ ತಾಲೂಕಿನ ಕೋಡ್ಸಣಿ ಕ್ರಾಸಿನಲ್ಲಿ ಸುಮಾರು 2,25,000/- ರೂಪಾಯಿ ಮೌಲ್ಯದ 17 ಕೋಣಗಳನ್ನು ಸಂಬಂಧಪಟ್ಟ ಪ್ರಾಧಿಕಾರದಿಂದ ಯಾವುದೇ ಪರವಾನಿಗೆ ಪಡೆಯದೇ ಕೋಣಗಳನ್ನು ವಧೆ ಮಾಡುವ ಉದ್ದೇಶದಿಂದ ಮಾರಾಟ ಮಾಡುವ ಸಲುವಾಗಿ ಯಾವುದೇ ಸುರಕ್ಷತೆ ಇಲ್ಲದೇ ಹಿಂಸಾತ್ಮಕವಾದ ರೀತಿಯಲ್ಲಿ ಲಾರಿ ನಂ: ಕೆ.ಎ-01/ಎ.ಎಲ್-2779 ನೇದರಲ್ಲಿ ತುಂಬಿಕೊಂಡು ಅದಕ್ಕೆ ಸೇವಿಸಲು ನೀರು, ಹುಲ್ಲು ನೀಡದೇ, ಗಾಳಿ, ಬೆಳಕು ತಾಗದಂತೆ ಕಾಲು ಮತ್ತು ತಲೆಯನ್ನು ಹಗ್ಗದಿಂದ ಗಟ್ಟಿಯಾಗಿ ಕಟ್ಟಿ ಸಂಪೂರ್ಣವಾಗಿ ಮುಚ್ಚಿಕೊಂಡು ವಾಹನದ ಪರ್ಮಿಟ್ ನ್ನು ಉಲ್ಲಂಘನೆ ಮಾಡಿ, ಸದರಿ ಲಾರಿಗೆ ಇನೋವಾ ಕಾರ್ ನಂ: ಕೆ.ಎಲ್-60/ಬಿ-4004 ನೇದರಿಂದ ಎಸ್ಕಾರ್ಟ್ ಮಾಡಿ ಸಾಗಾಟ ಮಾಡಿಕೊಂಡು ಹೋಗುತ್ತಿದ್ದಾಗ ದಾಳಿಯ ಕಾಲಕ್ಕೆ ಆರೋಪಿ 1 ರಿಂದ 4 ನೇಯವರು ಸೆರೆ ಸಿಕ್ಕಿದ್ದು ಹಾಗೂ ಆರೋಪಿ 5 ನೇಯವನು ಓಡಿ ಹೋದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಸಂತೋಷ ಶೆಟ್ಟಿ, ಪೊಲೀಸ್ ನಿರೀಕ್ಷಕರು, ಅಂಕೋಲಾ ಪೊಲೀಸ್ ಠಾಣೆ ರವರು ದಿನಾಂಕ: 21-10-2021 ರಂದು 04-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮಂಕಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 129/2021, ಕಲಂ: 87 ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ಮಂಜುನಾಥ ತಂದೆ ಗೋವಿಂದ ಗೌಡ, ಪ್ರಾಯ-38 ವರ್ಷ, ಸಾ|| ಕಾಸರಕೋಡ, ದೇವಸ್ಥಾನಕೇರಿ, ತಾ: ಹೊನ್ನಾವರ, 2]. ಈಶ್ವರ ತಂದೆ ಚಂದ್ರು ಗೌಡ, ಪ್ರಾಯ-28 ವರ್ಷ, ಸಾ|| ಕಾಸರಕೋಡ, ಮಲ್ಲಮಾಸ್ತಿ, ತಾ: ಹೊನ್ನಾವರ, 3]. ನಾಗೇಶ ಎನ್. ಗೌಡ, ಅಂದಾಜು ಪ್ರಾಯ-27 ವರ್ಷ, ವೃತ್ತಿ-ಕಲ್ಲುಕೋರೆ ಕೆಲಸ, ಸಾ|| ಶಂಭು ಗೌಡರ ಮನೆಯ ಹತ್ತಿರ, ಗುಣವಂತೆ, ತಾ: ಹೊನ್ನಾವರ, 4]. ಮಹೇಶ ಗೌಡ, ವೃತ್ತಿ-ಹೆಗ್ರೆಯಲ್ಲಿ ಗ್ಯಾರೇಜ್ ಕೆಲಸ, ಸಾ|| ಅಪ್ಸರಕೊಂಡ, ತಾ: ಹೊನ್ನಾವರ. ಈ ನಮೂದಿತ ಆರೋಪಿತರು ಸೇರಿಕೊಂಡು ದಿನಾಂಕ: 21-10-2021 ರಂದು ಬೆಳಗಿನ ಜಾವ 01-00 ಗಂಟೆಯ ಸುಮಾರಿಗೆ ಅಪ್ಸರಕೊಂಡ ಗುಡ್ಡದ ಮೇಲೆ ಅಕೇಶಿಯಾ ಗಿಡಗಳ ಮಧ್ಯದ ಜಾಗದಲ್ಲಿ ತಮ್ಮ ತಮ್ಮ ಲಾಭಕ್ಕೋಸ್ಕರ ಕುಟಕುಟಿ ಎಂಬ ಜೂಗಾರಾಟ ಆಡುತ್ತಿದ್ದಾಗ ದಾಳಿಯ ವೇಳೆ ಜೂಗಾರಾಟಕ್ಕೆ ಬಳಸಿದ ನಗದು ಹಣ 4,810/- ರೂಪಾಯಿಗಳು ಹಾಗೂ ಕುಟಕುಟಿ ಜೂಗಾರಾಟಕ್ಕೆ ಬಳಸಿದ ಸಲಕರಣೆಗಳೊಂದಿಗೆ ಆರೋಪಿ 1 ಮತ್ತು 2 ನೇಯವರು ಸೆರೆ ಸಿಕ್ಕಿದ್ದು ಹಾಗೂ ಉಳಿದ ಆರೋಪಿತರು ಓಡಿ ಹೋದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಅಶೋಕ ಎಮ್. ಮಾಳಾಬಗಿ, ಪಿ.ಎಸ್.ಐ (ಕಾ&ಸು), ಮಂಕಿ ಪೊಲೀಸ್ ಠಾಣೆ ರವರು ದಿನಾಂಕ: 21-10-2021 ರಂದು 02-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 68/2021, ಕಲಂ: 323, 341, 504, 506 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಚಲುವಾ ಕೇರಿಯಾ ಚಲವಾದಿ, ಸಾ|| ಚಲವಾದಿ ಗಲ್ಲಿ, ತಾ: ಶಿರಸಿ, 2]. ಅಮೀತ ಜಾದವ, ಸಾ|| ಮಾರಿಕಾಂಬಾ ನಗರ, ತಾ: ಶಿರಸಿ, 3]. ನಾಗರಾಜ, ಸಾ|| ಶಿರಸಿ. ದಿನಾಂಕ: 20-10-2021 ರಂದು 19-30 ಗಂಟೆಯ ಸುಮಾರಿಗೆ ಪಿರ್ಯಾದಿಯು ಶಿರಸಿ ಶಹರದ ಖಾಜಿಗಲ್ಲಿಯಲ್ಲಿ ನಿಂತುಕೊಂಡಿರುವಾಗ ನಮೂದಿತ ಆರೋಪಿತರಲ್ಲಿ ಆರೋಪಿ 2 ನೇಯವನಿಗೆ ಪಿರ್ಯಾದಿಯು ‘ಅಮೀತ' ಅಂತಾ ಕರೆದಿದ್ದಕ್ಕೆ ‘ತನಗೆ ಅಮೀತ ಅಂತಾ ಕರೆಯುತ್ತಿಯಾ? ಬೋಳಿ ಮಗನೆ, ಸೂಳೆ ಮಗನೇ’ ಅಂತಾ ಅವಾಚ್ಯ ಶಬ್ದಗಳಿಂದ ಬೈಯ್ದು ಆರೋಪಿತರೆಲ್ಲರೂ ಸೇರಿ ಹೊಡೆಯಲು ಬಂದಾಗ ತಪ್ಪಿಸಿಕೊಂಡು ಹೋಗಿದ್ದು, ರಾತ್ರಿ 21-30 ಗಂಟೆಯ ಸುಮಾರಿಗೆ ಪಿರ್ಯಾದಿ ಹಾಗೂ ಪಿರ್ಯಾದಿಯ ತಮ್ಮ ಆನಂದ, ಗೆಳೆಯ ಅಕ್ಷಯ ಕೂಡಿ ಶಿರಸಿಯ ಮಾರಿಕಾಂಬಾ ನಗರದಿಂದ ಚಲುವಾದಿ ಗಲ್ಲಿ ಮಾರ್ಗವಾಗಿ ತಮ್ಮ ಮೋಟಾರ್ ಸೈಕಲ ಮೇಲೆ ಹೋಗುತ್ತಿರುವಾಗ ಆರೋಪಿತರು ಸಂಗನಮತ ಮಾಡಿಕೊಂಡು ಬಂದವರು ಒಮ್ಮೇಲೆ ಮೋಟಾರ್ ಸೈಕಲಗಳನ್ನು ಅಡ್ಡಗಟ್ಟಿ ತಡೆದು ನಿಲ್ಲಿಸಿ ‘ಬೋಳಿ ಮಕ್ಕಳೇ, ಸೂಳೆ ಮಕ್ಕಳೇ’ ಅಂತಾ ಅವಾಚ್ಯ ಶಬ್ದಗಳಿಂದ ಬೈಯ್ದು, ದೂಡಿ ಹಾಕಿ, ಕೈಯಿಂದ ಮೈಮೇಲೆ ಹೊಡೆದು ಗಾಯನೋವು ಪಡಿಸಿದ್ದಲ್ಲದೇ, ‘ಈ ದಿನ ಉಳಿದುಕೊಂಡಿದ್ದಿರಿ. ಇನ್ನೊಂದು ದಿನ ಸಿಕ್ಕರೆ ಜೀವ ಸಹಿತ ಬಿಡುವುದಿಲ್ಲ’ ಅಂತಾ ಜೀವದ ಬೆದರಿಕೆ ಹಾಕಿ ಹೋದ ಬಗ್ಗೆ ಪಿರ್ಯಾದಿ ಶ್ರೀ ಮಹಾದೇವ ತಂದೆ ಗಣಪತಿ ಮುರ್ಡೇಶ್ವರ, ಪ್ರಾಯ-20 ವರ್ಷ, ವೃತ್ತಿ-ಪೇಂಟಿಂಗ್ ಕೆಲಸ, ಸಾ|| ಕುಳವೆ ರೋಡ, ಗೋಪಿನಾಥಪುರ, ಪೋ: ಬಚಗಾಂವ್, ತಾ: ಶಿರಸಿ ರವರು ದಿನಾಂಕ: 21-10-2021 ರಂದು 22-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ಹೊಸಮಾರುಕಟ್ಟೆ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 79/2021, ಕಲಂ: 279 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಪ್ರಜ್ವಲ ತಂದೆ ಗಣೇಶ ನಾಡರ, ಪ್ರಾಯ-19 ವರ್ಷ, ಸಾ|| ಅಯ್ಯಪ್ಪನಗರ, ತಾ: ಶಿರಸಿ (ಮೋಟಾರ್ ಸೈಕಲ್ ನಂ: ಕೆ.ಎ-31/ಇ.ಸಿ-7502 ನೇದರ ಸವಾರ). ದಿನಾಂಕ: 21-10-2021 ರಂದು 13-00 ಗಂಟೆಯ ಸುಮಾರಿಗೆ ಪಿರ್ಯಾದಿಯವರು ತನ್ನ ಮಾರುತಿ ಸ್ವಿಪ್ಟ್ ಕಾರ್ ನಂ: ಕೆ.ಎ-27/ಎನ್-3443 ನೇದನ್ನು ಚಲಾಯಿಸಿಕೊಂಡು ಶಿರಸಿಯ ರಾಘವೇಂದ್ರ ಸರ್ಕಲ್ ಹತ್ತಿರ ಇರುವ ಕೃಷಿ ಇಲಾಖೆಗೆ ಬರುತ್ತಾ ಶಿರಸಿ-ಯಲ್ಲಾಪುರ ರಸ್ತೆಯಲ್ಲಿ ಸಾಮ್ರಾಟ್ ಹೊಟೇಲ್ ಎದುರು ತಲುಪಿದಾಗ ಎದುರುಗಡೆಯಿಂದ ನಮೂದಿತ ಆರೋಪಿತನು ತಾನು ಚಲಾಯಿಸುತ್ತಿದ್ದ ಮೋಟಾರ್ ಸೈಕಲ್ ನಂ: ಕೆ.ಎ-31/ಇ.ಸಿ-7502 ನೇದನ್ನು ಅತೀವೇಗವಾಗಿ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ರಸ್ತೆಯಲ್ಲಿ ತನ್ನ ಮುಂದೆ ಹೋಗುತ್ತಿದ್ದ ಕಾರನ್ನು ಓವರಟೇಕ್ ಮಾಡಲು ರಸ್ತೆಯಲ್ಲಿ ತನ್ನ ಎಡ ಬದಿಯನ್ನು ಬಿಟ್ಟು ಬಲ ಬದಿಗೆ ಬಂದು ಪಿರ್ಯಾದಿಯವರು ಚಲಾಯಿಸುತ್ತಿದ್ದ ಕಾರಿನ ಮುಂಭಾಗದ ಮಧ್ಯದಲ್ಲಿ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಜಖಂಗೊಳಿಸಿದ ಬಗ್ಗೆ ಪಿರ್ಯಾದಿ ಶ್ರೀ ಉಮೇಶ ತಂದೆ ಶಿವಾನಂದಪ್ಪ ಹಿಡಿಯಾಲ, ಪ್ರಾಯ-38 ವರ್ಷ, ವೃತ್ತಿ-ಖಾಸಗಿ ಕೆಲಸ, ಸಾ|| ಕುರುಬಗೊಂಡ, ತಾ&ಜಿ: ಹಾವೇರಿ ರವರು ದಿನಾಂಕ: 21-10-2021 ರಂದು 13-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹಳಿಯಾಳ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 160/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಶ್ರೀನಿವಾಸ ತಂದೆ ಭೀಮಪ್ಪ ಲಮಾಣಿ, ಪ್ರಾಯ-38 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಅಜಮನಾಳ ತಾಂಡಾ, ತಾ: ಹಳಿಯಾಳ (ಮೋಟಾರ್ ಸೈಕಲ್ ನಂ: ಕೆ.ಎ-65/ಜೆ-4345 ನೇದ ಸವಾರ). ಈತನು ದಿನಾಂಕ: 21-10-2021 ರಂದು ಬೆಳಿಗ್ಗೆ 09-30 ಗಂಟೆ ಸುಮಾರಿಗೆ ತಮ್ಮ ಬಾಬ್ತು ಮೋಟಾರ್ ಸೈಕಲ್ ನಂ: ಕೆ.ಎ-65/ಜೆ-4345 ನೇದನ್ನು ಹಳಿಯಾಳ ಕಡೆಯಿಂದ ಯಲ್ಲಾಪುರ ಕಡೆಗೆ ಅತೀವೇಗವಾಗಿ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗುತ್ತಾ, ತನ್ನ ಚಾಲನೆಯ ಮೇಲಿನ ನಿಯಂತ್ರಣ ಕಳೆದುಕೊಂಡು ಹಳಿಯಾಳ ತಾಲೂಕಿನ ತಟ್ಟಿಹಳ್ಳಿ ಫಾರೆಸ್ಟ್ ಟ್ರೇನಿಂಗ್ ಸೆಂಟರ್ ಕ್ರಾಸ್ ಹತ್ತಿರ ಡಾಂಬರ್ ರಸ್ತೆಯಲ್ಲಿ ಪಲ್ಟಿ ಕೆಡವಿ ಅಪಘಾತ ಪಡಿಸಿ, ತನ್ನ ಮೋಟಾರ್ ಸೈಕಲ್ ಹಿಂಬದಿಯಲ್ಲಿ ಕುಳಿತಿದ್ದ ತನ್ನ ಹೆಂಡತಿ ಶ್ರೀಮತಿ ಗೀತಾ ಕೋಂ. ಶ್ರೀನಿವಾಸ ಲಮಾಣಿ, ಪ್ರಾಯ-25 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಅಜಮನಾಳ ತಾಂಡಾ, ತಾ: ಹಳಿಯಾಳ ಇವರಿಗೆ ಸಾಧಾರಣ ಸ್ವರೂಪದ ಗಾಯನೋವು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಕೇಶವ ತಂದೆ ಪೋಮಾ ಲಮಾಣಿ, ಪ್ರಾಯ-24 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಅಜಮನಾಳ ತಾಂಡಾ, ತಾ: ಹಳಿಯಾಳ ರವರು ದಿನಾಂಕ: 21-10-2021 ರಂದು 12-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹಳಿಯಾಳ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 161/2021, ಕಲಂ: ಮಹಿಳೆ ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಮಹಿಳೆ ಶ್ರೀಮತಿ ಸೀಮಾ ಕೋಂ. ಶಾಂತಕುಮಾರ ದೇಸಾಯಿ, ಪ್ರಾಯ-34 ವರ್ಷ, ವೃತ್ತಿ-ಖಾಸಗಿ ಉಪನ್ಯಾಸಕಿ (ಆರ್.ವಿ.ಡಿ ಕಾಲೇಜ್ ಹಳಿಯಾಳ), ಸಾ|| ಹುಲ್ಲಟ್ಟಿ ಗ್ರಾಮ, ತಾ: ಹಳಿಯಾಳ. ಪಿರ್ಯಾದಿಯವರ ಮಗಳಾದ ಇವಳು ಕಳೆದ 6 ತಿಂಗಳ ಹಿಂದೆ ಪ್ರೇಮ ವಿವಾಹವಾಗಿದ್ದು, ದಿನಾಂಕ: 19-10-2021 ರಂದು ತನ್ನ ತವರು ಮನೆಯಾದ ಪಿರ್ಯಾದಿಯವರ ಮನೆಗೆ ಬಂದು 2 ದಿನ ಉಳಿದುಕೊಂಡು ನಂತರ ದಿನಾಂಕ: 21-10-2021 ರಂದು ತಾನು ತನ್ನ ಗಂಡನ ಮನೆಗೆ ಹೋಗುತ್ತೇನೆ ಅಂತಾ ಹಳಿಯಾಳಕ್ಕೆ ಬೆಳಿಗ್ಗೆ ಹೋಗಿ ಹಳಿಯಾಳದ ಕಾಲೇಜಿನಲ್ಲಿ ಕೆಲಸ ಮುಗಿಸಿಕೊಂಡು ಸಂಜೆ ತನ್ನ ಗಂಡನ ಮನೆಗೆ ಹೋದಾಗ ಗಂಡನ ಮನೆಯವರು ‘ನೀನು ಯಾಕೆ ನಿನ್ನ ತವರು ಮನೆಗೆ ಹೋಗಿದ್ದೆ? ಮತ್ತೆ ಯಾಕೆ ನಮ್ಮ ಮನೆಗೆ ಬಂದೆ?’ ಅಂತಾ ಹೇಳಿದ್ದರಿಂದ ಸೀಮಾ ಇವಳು ದಿನಾಂಕ: 21-10-2021 ರಂದು ಸಂಜೆ 18-00 ಗಂಟೆಯಿಂದ 19-00 ಗಂಟೆಯ ನಡುವಿನ ಅವಧಿಯಲ್ಲಿ ಹಳಿಯಾಳ ತಾಲೂಕಿನ ಹುಲ್ಲಟ್ಟಿ ಗ್ರಾಮದ ತನ್ನ ಗಂಡನ ಮನೆಯಿಂದ ಯಾರಿಗೂ ಹೇಳದೇ ಪಿರ್ಯಾದಿಯವರ ಮನೆಗೂ ಬಾರದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದು, ಸದ್ರಿ ಕಾಣೆಯಾದ ತನ್ನ ಮಗಳನ್ನು ಹುಡುಕಿ ಕೊಡುವಂತೆ ಕೋರಿದ ಬಗ್ಗೆ ಪಿರ್ಯಾದಿ ಶ್ರೀಮತಿ ಶೋಭಾ ಕೋಂ. ರಮಾಕಾಂತ ಬಸರಿಕಟ್ಟಿ, ಪ್ರಾಯ-63 ವರ್ಷ, ವೃತ್ತಿ-ಮನೆವಾರ್ತೆ, ಸಾ|| ರಜತಗಿರಿ, ವಿದ್ಯಾಗಿರಿ ಪೊಲೀಸ್ ಠಾಣೆ ಹತ್ತಿರ, ತಾ&ಜಿ: ಧಾರವಾಡ ರವರು ದಿನಾಂಕ: 21-10-2021 ರಂದು 23-20 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಬನವಾಸಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 99/2021, ಕಲಂ: 279, 304(ಎ) ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಮಹಮ್ಮದ್ ಶರೀಫ್ ತಂದೆ ಮಹಮ್ಮದ್ ರಫೀಕ್ ಸಾಬ್, ಸಾ|| ದಾಸನಕೊಪ್ಪ, ತಾ: ಶಿರಸಿ (ಮಹೀಂದ್ರಾ ಟೆಂಪೋ ಮ್ಯಾಕ್ಸಿ ಕ್ಯಾಬ್ ನಂ: ಕೆ.ಎ-27/5501 ನೇದರ ಚಾಲಕ). ಈತನು ದಿನಾಂಕ: 21-10-2021 ರಂದು 12-45 ಗಂಟೆಗೆ ಮಹೀಂದ್ರಾ ಟೆಂಪೋ ಮ್ಯಾಕ್ಸಿ ಕ್ಯಾಬ್ ನಂ: ಕೆ.ಎ-27/5501 ನೇದನ್ನು ಸಮ್ಮಸಗಿ-ದಾಸನಕೊಪ್ಪ ರಸ್ತೆಯಲ್ಲಿ ಸಮ್ಮಸಗಿ ಕಡೆಯಿಂದ ದಾಸನಕೊಪ್ಪ ಕಡೆಗೆ ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಸಮ್ಮಸಗಿ ಕಡೆಯಿಂದ ದಾಸನಕೊಪ್ಪ ಕಡೆಗೆ ರಸ್ತೆಯ ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿದ್ದ ಫಕ್ಕೀರಪ್ಪ ತಂದೆ ಫಕ್ಕೀರಪ್ಪ ಗೊಲ್ಲರ, ಪ್ರಾಯ-38 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಲಕ್ಷ್ಮೀಪುರ, ಗೊಲ್ಲರ ಬಿಡಾರ, ತಾ: ಹಾನಗಲ್, ಜಿ: ಹಾವೇರಿ ಈತನಿಗೆ ಭಾಸ್ಕರ ಶೇಟ್ ಇವರ ಹೊಲದ ಬಳಿ ಹಿಂದಿನಿಂದ ಬಂದು ಡಿಕ್ಕಿ ಹೊಡೆದು ರಸ್ತೆ ಅಪಘಾತ ಪಡಿಸಿ, ಅವರ ಬಲಗಾಲಿಗೆ, ಬಲಭುಜಕ್ಕೆ ಮತ್ತು ಕುತ್ತಿಗೆಯ ಭಾಗಕ್ಕೆ ಒಳನೋವು ಪಡಿಸಿದ್ದು, ಅವರಿಗೆ ಉಪಚಾರಕ್ಕೆ ಶಿರಸಿಯ ಸರ್ಕಾರಿ ಆಸ್ಪತ್ರೆಯಿಂದ ಹೆಚ್ಚಿನ ಉಪಚಾರಕ್ಕಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ವೈದ್ಯರು ಉಪಚರಿಸಿ ಅಂದಾಜು ಸುಮಾರು 16-15 ಗಂಟೆಗೆ ಈಗಾಗಲೇ ಮೃತಪಟ್ಟ ಬಗ್ಗೆ ತಿಳಿಸಿರುತ್ತಾರೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಯಲ್ಲಪ್ಪ ತಂದೆ ಫಕ್ಕೀರಪ್ಪ ಗೊಲ್ಲರ, ಪ್ರಾಯ-36 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಲಕ್ಷ್ಮೀಪುರ, ಗೊಲ್ಲರ ಬಿಡಾರ, ತಾ: ಹಾನಗಲ್, ಜಿ: ಹಾವೇರಿ ರವರು ದಿನಾಂಕ: 21-10-2021 ರಂದು 20-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 21-10-2021

at 00:00 hrs to 24:00 hrs

 

ಕಾರವಾರ ಗ್ರಾಮೀಣ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 13/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತಳಾದ ಕುಮಾರಿ: ನಿವೇದಿತಾ ತಂದೆ ದಿನೇಶ ಆಗೇರ, ಪ್ರಾಯ-22 ವರ್ಷ, ವೃತ್ತಿ-ಬಂಗಾರದ ಅಂಗಡಿಯಲ್ಲಿ ಕೆಲಸ, ಸಾ|| ಹರಿಜನಕೇರಿ, ಅಂಬೇಡ್ಕರ್ ಕಾಲೋನಿ, ಅಮದಳ್ಳಿ, ಕಾರವಾರ. ಪಿರ್ಯಾದಿಯವರ ಮಗಳಾದ ಇವಳು ಎಂದಿನಂತೆ ಕಾರವಾರಕ್ಕೆ ಬಂಗಾರದ ಕೆಲಸಕ್ಕೆ ಬರುವ ಸಲುವಾಗಿ ದಿನಾಂಕ: 21-10-2021 ರಂದು ಬೆಳಿಗ್ಗೆ 06-00 ಗಂಟೆಗೆ ಎದ್ದು ಚಹಾ ಕುಡಿದು ರೆಡಿಯಾಗುತ್ತಿದ್ದಾಗ ಬೆಳಿಗ್ಗೆ 06-30 ಗಂಟೆಯ ಸಮಯಕ್ಕೆ ಅಡುಗೆ ಕೋಣೆಯ ಹತ್ತಿರ ಹೋದಾಗ ಆಕಸ್ಮಾತ್ ಆಗಿ ಕಾಲು ಜಾರಿ ಬಿದ್ದವಳಿಗೆ ಕೂಡಲೇ 108 ಆಂಬ್ಯುಲೆನ್ಸ್ ಮೇಲಾಗಿ ಕಾರವಾರದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ಕರೆದುಕೊಂಡು ಬಂದಾಗ ಅಲ್ಲಿನ ವೈದ್ಯರು ಪರೀಕ್ಷಿಸಿ ಮಾರ್ಗ ಮಧ್ಯದಲ್ಲಿ ಮೃತಪಟ್ಟಿರುತ್ತಾಳೆ ಅಂತಾ ತಿಳಿಸಿರುತ್ತಾಳೆ. ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ದಿನೇಶ ತಂದೆ ಬಾಬು ಆಗೇರ, ಪ್ರಾಯ-50 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಹರಿಜನಕೇರಿ, ಅಂಬೇಡ್ಕರ್ ಕಾಲೋನಿ, ಅಮದಳ್ಳಿ, ಕಾರವಾರ ರವರು ದಿನಾಂಕ: 21-10-2021 ರಂದು 09-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

ಇತ್ತೀಚಿನ ನವೀಕರಣ​ : 23-10-2021 06:44 AM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080