ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 21-09-2021

at 00:00 hrs to 24:00 hrs

 

ಅಂಕೋಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 138/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ಶ್ರೀಧರ ತಂದೆ ಮಾರುತಿ ನಾಯ್ಕ, ಪ್ರಾಯ-24 ವರ್ಷ, ವೃತ್ತಿ-ಗೂಡಂಗಡಿ ವ್ಯಾಪಾರ, ಸಾ|| ಹಟ್ಟಿಕೇರಿ, ತಾ: ಅಂಕೋಲಾ. ಈತನು ದಿನಾಂಕ: 21-09-2021 ರಂದು 15-30 ಗಂಟೆಯ ಸುಮಾರಿಗೆ ಅಂಕೋಲಾ ತಾಲೂಕಿನ ಅವರ್ಸಾ ಗ್ರಾಮದ ಮೀನು ಮಾರುಕಟ್ಟೆಯ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ತನ್ನ ಲಾಭಕ್ಕೋಸ್ಕರ ರಸ್ತೆಯಲ್ಲಿ ಬರ-ಹೋಗುವ ಸಾರ್ವಜನಿಕರಿಗೆ ಅದೃಷ್ಟ ಸಂಖ್ಯೆ ತಾಗಿದರೆ 01/- ರೂಪಾಯಿಗೆ 80/- ರೂಪಾಯಿ ಕೊಡುವುದಾಗಿ ಹೇಳುತ್ತಾ, ಸಾರ್ವಜನಿಕರಿಂದ ಹಣ ಪಡೆದು ತನ್ನ ಹತ್ತಿರ ಇರುವ ಹಾಳೆಯಲ್ಲಿ ಅಂಕೆ-ಸಂಖ್ಯೆ ಬರೆದುಕೊಂಡು ಓ.ಸಿ ಮಟಕಾ ಜೂಗಾರಾಟ ಆಡುತ್ತಿದ್ದಾಗ ವಿವಿಧ ಮುಖಬೆಲೆಯ ನಗದು ಹಣ 1,710/- ರೂಪಾಯಿ ಮತ್ತು ಓ.ಸಿ ಜೂಗಾರಾಟದ ಸಲಕರಣೆಯೊಂದಿಗೆ ದಾಳಿಯ ಕಾಲಕ್ಕೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಪ್ರೇಮನಗೌಡ ಪಾಟೀಲ, ಪಿ.ಎಸ್.ಐ-02, ಅಂಕೋಲಾ ಪೊಲೀಸ್ ಠಾಣೆ ರವರು ದಿನಾಂಕ: 21-09-2021 ರಂದು 19-10 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 164/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಕಿರಣ್ ತಂದೆ ಸುರೇಶ ನಾಯ್ಕ, ಸಾ|| ದೊಡ್ಡಕೊಪ್ಪಾ, ಹೆಗಡೆ, ತಾ: ಕುಮಟಾ (ಯಮಹಾ ಕ್ರೂಕ್ಸ್ ಮೋಟಾರ್ ಸೈಕಲ್ ನಂ: ಕೆ.ಎ-47/ಕ್ಯೂ-8130 ನೇದರ ಸವಾರ). ಈತನು ದಿನಾಂಕ: 20-09-2021 ರಂದು 13-40 ಗಂಟೆಗೆ ತನ್ನ ಯಮಹಾ ಕ್ರೂಕ್ಸ್ ಮೋಟಾರ್ ಸೈಕಲ್ ನಂ: ಕೆ.ಎ-47/ಕ್ಯೂ-8130 ನೇದನ್ನು ಕುಮಟಾ ಕಡೆಯಿಂದ ಹೆಗಡೆ ಕಡೆಗೆ ಅತೀವೇಗವಾಗಿ ಚಲಾಯಿಸಿಕೊಂಡು ಹೋಗಿ ಹೆಗಡೆಯ ಹಿರಿಯ ಪ್ರಾಥಮಿಕ ಶಾಲೆಯ ಹತ್ತಿರ ಶಾಲೆ ಬಿಟ್ಟ ಮಕ್ಕಳು ನಡೆದುಕೊಂಡು ಹೋಗುತ್ತಿದ್ದರೂ ಕೂಡಾ ಮೋಟಾರ್ ಸೈಕಲ್ ವೇಗವನ್ನು ನಿಯಂತ್ರಿಸದೇ ರಸ್ತೆಯ ಬದಿಯಿಂದ ನಡೆದುಕೊಂಡು ಹೋಗುತ್ತಿದ್ದ ಕು: ಚಿನ್ಮಯ್ ತಂದೆ ಗಜಾನನ ಪಟಗಾರ, ಪ್ರಾಯ-13 ವರ್ಷ, ವೃತ್ತಿ-7 ನೇ ತರಗತಿ ವಿದ್ಯಾರ್ಥಿ, ಸಾ|| ತಾರಿಬಾಗಿಲು, ಹೆಗಡೆ, ತಾ: ಕುಮಟಾ ಇವರಿಗೆ ಹಿಂಬದಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ ಪರಿಣಾಮವಾಗಿ ಕು: ಚಿನ್ಮಯ್ ಇವರು ರಸ್ತೆಯ ಮೇಲೆ ಹಾರಿ ಬಿದ್ದು ತಲೆಗೆ ಗಂಭೀರ ಗಾಯವಾಗಿದ್ದು, ಅವರಿಗೆ ಎರಡೂ ಕೈಗಳಿಗೆ ಹಾಗೂ ಕಾಲುಗಳಿಗೆ ಗಾಯವಾಗಲು ಆರೋಪಿ ಮೋಟಾರ್ ಸೈಕಲ್ ಸವಾರನೇ ಕಾರಣನಾದ ಬಗ್ಗೆ ಪಿರ್ಯಾದಿ ಶ್ರೀ ರಾಮಚಂದ್ರ ತಂದೆ ಬಾಗ್ಲು ಪಟಗಾರ, ಪ್ರಾಯ-40 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಮಚಗೋಣ, ಹೆಗಡೆ, ತಾ: ಕುಮಟಾ ರವರು ದಿನಾಂಕ: 21-09-2021 ರಂದು 16-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 245/2021, ಕಲಂ: 380 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ದಿನಾಂಕ: 21-09-2021 ರಂದು 13-00 ಗಂಟೆಯಿಂದ 16-30 ಗಂಟೆಯ ನಡುವಿನ ಅವಧಿಯಲ್ಲಿ ಹೊನ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯ ಜಲವಳ್ಳಿ, ಕಾನಗೋಡದಲ್ಲಿರುವ ಶ್ರೀ ಚೆನ್ನಕೇಶವ ದೇವಸ್ಥಾನದ ಒಳಗೆ ಹೋಗಿ ಹಾಲ್ ನಲ್ಲಿದ್ದ ಸುಮಾರು 50,000/- ರೂಪಾಯಿಗಳಿರುವ 2 ಕಾಣಿಕೆ ಹುಂಡಿಗಳನ್ನು ಮತ್ತು ದೇವಸ್ಥಾನದಲ್ಲಿ ಅಳವಡಿಸಿದ್ದ ಸುಮಾರು 10,000/- ರೂಪಾಯಿ ಬೆಲೆಯ 5 ಘಂಟೆಗಳನ್ನು ಕಳವು ಮಾಡಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀ ರಾಜು ತಂದೆ ಮಾಬ್ಲೇಶ್ವರ ಹೆಗಡೆ, ಪ್ರಾಯ-59 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಕಾನಗೋಡ, ಜಲವಳ್ಳಿ, ತಾ: ಹೊನ್ನಾವರ ರವರು ದಿನಾಂಕ: 21-09-2021 ರಂದು 19-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಶಹರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 126/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ನಜಮುದ್ದೀನ್ ತಂದೆ ಮೊಹಮ್ಮದ್ ಡಾಂಗಿ, ಪ್ರಾಯ-31 ವರ್ಷ, ಸಾ|| ಜಾಮಿಯಾಬಾದ್, ಹೆಬಳೆ, ತಾ: ಭಟ್ಕಳ (ಮೋಟಾರ್ ಸೈಕಲ್ ನಂ: ಕೆ.ಎ-47/ಡಬ್ಲ್ಯೂ-3207 ನೇದರ ಸವಾರ). ಈತನು ದಿನಾಂಕ: 21-09-21 ರಂದು ಬೆಳಿಗ್ಗೆ 10-30 ಗಂಟೆಯ ಸುಮಾರಿಗೆ ಭಟ್ಕಳ ಶಹರದ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ರಸ್ತೆಯಲ್ಲಿ ಅನಪಾಲ್ ಸೂಪರ್ ಮಾರ್ಕೆಟ್ ಎದುರಿಗೆ ತನ್ನ ಮೋಟಾರ್ ಸೈಕಲ್ ನಂ: ಕೆ.ಎ-47/ಡಬ್ಲ್ಯೂ-3207 ನೇದನ್ನು ಶಿರಾಲಿ ಕಡೆಯಿಂದ ಭಟ್ಕಳ ಶಹರದ ಕಡೆಗೆ ಅತೀವೇಗವಾಗಿ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಅದೇ ದಿಸೆಯಲ್ಲಿ ಅಂದರೆ ಶಿರಾಲಿ ಕಡೆಯಿಂದ ಭಟ್ಕಳ ಶಹರದ ಕಡೆಗೆ ಪಿರ್ಯಾದಿಯವರು ಚಲಾಯಿಸಿಕೊಂಡು ಬರುತ್ತಿದ್ದ ಮೋಟಾರ್ ಸೈಕಲ್ ನಂ: ಕೆ.ಎ-47/ಡಬ್ಲ್ಯೂ-7468 ನೇದಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದ ಅಪಘಾತ ಪಡಿಸಿ, ಪಿರ್ಯಾದಿಯವರಿಗೆ ತಲೆಯ ಹಿಂಬದಿಗೆ ಮತ್ತು ಬಲಗಾಲಿಗೆ ಸಾದಾ ಸ್ವರೂಪದ ಗಾಯನೋವು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಜಹೀರಖಾನ್ ತಂದೆ ಪ್ಯಾರು ಸಾಬ್, ಪ್ರಾಯ-40 ವರ್ಷ, ವೃತ್ತಿ-ಗುಜರಿ ವ್ಯಾಪಾರ, ಸಾ|| ಆಯಿಶಾ ಮಂಜಿಲ್, ಗುಳ್ಮೆ, ತಾ: ಭಟ್ಕಳ ರವರು ದಿನಾಂಕ: 21-09-2021 ರಂದು 19-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 61/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಶಿವಯ್ಯಾ ತಂದೆ ನಾಗಯ್ಯಾ ಪೂಜಾರಿ ಪ್ರಾಯ-20 ವರ್ಷ, ವೃತ್ತಿ-ಬಹೇತಿ ಕನ್ವರ್ಟರ್ಸ್ ಕಂಪನಿಯಲ್ಲಿ ಕೆಲಸ, ಸಾ|| ಗಾಂಧಿನಗರ, ತಾ: ದಾಂಡೇಲಿ (ಮೋಟಾರ್ ಸೈಕಲ್ ನಂ: ಕೆ.ಎ-65/ಎಚ್-3484 ನೇದರ ಸವಾರ). ಈತನು ದಿನಾಂಕ: 21-09-2021 ರಂದು 10-00 ಗಂಟೆಯ ಸುಮಾರಿಗೆ ತಾನು ಸವಾರಿ ಮಾಡುತ್ತಿದ್ದ ಮೋಟಾರ್ ಸೈಕಲ್ ನಂ: ಕೆ.ಎ-65/ಎಚ್-3484 ನೇದರಲ್ಲಿ ಪಿರ್ಯಾದಿಯನ್ನು ಮೋಟಾರ್ ಸೈಕಲ್ ಹಿಂದೆ ಕೂಡ್ರಿಸಿಕೊಂಡು ದಾಂಡೇಲಿ ಕಡೆಯಿಂದ ಭರ್ಚಿ ರಸ್ತೆ ಕಡೆಗೆ ಅತೀವೇಗವಾಗಿ ಹಾಗೂ ನಿಷ್ಕಾಳಜಿತನದಿಂದ ಮಾನವೀಯ ಪ್ರಾಣಕ್ಕೆ ಅಪಾಯಕಾರಿಯಾಗುವಂತೆ ಸವಾರಿ ಮಾಡಿಕೊಂಡು ಹೋಗುತ್ತಾ ಆಶಾಕಿರಣ ಐ.ಟಿ.ಐ ಕಾಲೇಜಿನ ಕ್ರಾಸಿನಲ್ಲಿ ಮೋಟಾರ್ ಸೈಕಲ್ ಮೇಲಿನ ವೇಗವನ್ನು ನಿಯಂತ್ರಿಸಲಾಗದೇ ಮೋಟಾರ್ ಸೈಕಲ್ ಸ್ಕಿಡ್ ಆಗಿದ್ದರಿಂದ ಮೋಟಾರ್ ಸೈಕಲ್ ಸಹಿತ ರಸ್ತೆಯ ಮೇಲೆ ಬಿದ್ದು, ಸ್ವಯಂಕೃತ ಅಪಘಾತದಿಂದ ತನಗೆ ತಲೆಯ ಮೇಲ್ಬದಿಗೆ ಹಾಗೂ ಬಲಗಾಲಿನ ಪಾದದ ಮೇಲೆ ರಕ್ತಗಾಯ ಪಡಿಸಿಕೊಂಡಿದ್ದಲ್ಲದೇ, ಮೋಟಾರ್ ಸೈಕಲ್ ಹಿಂದೆ ಕುಳಿತ ಪಿರ್ಯಾದಿಗೆ ಯಾವುದೇ ಗಾಯನೋವು ಆಗಿದ್ದು ಇರುವುದಿಲ್ಲ ಎಂಬ ಬಗ್ಗೆ ಪಿರ್ಯಾದಿ ಶ್ರೀ ಪ್ರೀತಮ ತಂದೆ ಶಂಕರ ಘಾಟಗೆ, ಪ್ರಾಯ-21 ವರ್ಷ, ವೃತ್ತಿ-ಬಹೇತಿ ಕನ್ವರ್ಟರ್ಸ್ ಕಂಪನಿಯಲ್ಲಿ ಕೆಲಸ, ಸಾ|| ಬಸವೇಶ್ವರ ದೇವಸ್ಥಾನದ ಹತ್ತಿರ, ಗಾಂಧಿನಗರ, ತಾ: ದಾಂಡೇಲಿ ರವರು ದಿನಾಂಕ: 21-09-2021 ರಂದು 13-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ದಾಂಡೇಲಿ ನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 79/2021, ಕಲಂ: 8(c), 20(b)(ii)(A) ಎನ್.ಡಿ.ಪಿ.ಎಸ್ ಎಕ್ಟ್-1985 ನೇದ್ದರ ವಿವರ...... ನಮೂದಿತ ಆರೋಪಿತರು 1]. ಗಣೇಶ ತಂದೆ ರಾಜು ಅಷ್ಟೇಕರ, ಪ್ರಾಯ-24 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ನವಗ್ರಾಮ, ಗಾಂವಠಾಣಾ, ತಾ: ದಾಂಡೇಲಿ, 2]. ಮೆಹಬೂಬ್ ತಂದೆ ರಫೀಕಸಾಬ್ ಕೊಪ್ಪದ, ಪ್ರಾಯ-26 ವರ್ಷ, ವೃತ್ತಿ-ಸೆಂಟ್ರಿಂಗ ಕೆಲಸ, ಸಾ|| ನವಗ್ರಾಮ, ಗಾಂವಠಾಣಾ, ತಾ: ದಾಂಡೇಲಿ. ಈ ನಮೂದಿತ ಆರೋಪಿತರು ಕೂಡಿಕೊಂಡು ಅಕ್ರಮವಾಗಿ ಗಾಂಜಾ ಮಾದಕ ವಸ್ತುವನ್ನು ಮಾರಾಟ ಮಾಡಿ ಲಾಭಗಳಿಸುವ ಉದ್ದೇಶದಿಂದ ದಿನಾಂಕ: 21-09-2021 ರಂದು 10-25 ಗಂಟೆಯ ಸುಮಾರಿಗೆ ದಾಂಡೇಲಿಯ ಅಂಬೇವಾಡಿಯ ರೈಲ್ವೇ ಸ್ಟೇಷನ್ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಪಾಸ್ ಯಾ ಪರವಾನಗಿ ಇಲ್ಲದೇ ಅನಧೀಕೃತವಾಗಿ ಸುಮಾರು 10.000/- ರೂಪಾಯಿ ಮೌಲ್ಯದ 265 ಗ್ರಾಂ ತೂಕದ ಒಣಗಿರುವ ಗಾಂಜಾವನ್ನು ತಮ್ಮ ತಾಬಾದಲ್ಲಿಟ್ಟುಕೊಂಡು ಮಾರಾಟ ಮಾಡುತ್ತಿರುವಾಗ ದಾಳಿಯ ಕಾಲಕ್ಕೆ ಗಾಂಜಾ ಹಾಗೂ ಗಾಂಜಾ ಮಾರಾಟದಿಂದ ಸಂಗ್ರಹಿಸಿದ ನಗದು ಹಣ 1,300/- ರೂಪಾಯಿ, ಹೋಂಡಾ ಡಿಯೋ ಸ್ಕೂಟಿ ನಂ: ಕೆ.ಎ-65/ಎಚ್-8005 ನೇದು ಹಾಗೂ ಸಣ್ಣ ಪೇಪರ್ ತುಂಡುಗಳು-22 ಇವುಗಳೊಂದಿಗೆ ಪಿರ್ಯಾದಿಯವರಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಕಿರಣ ಎಸ್. ಪಾಟೀಲ್, ಪಿ.ಎಸ್.ಐ (ತನಿಖೆ), ದಾಂಡೇಲಿ ನಗರ ಪೊಲೀಸ್ ಠಾಣೆ ರವರು ದಿನಾಂಕ: 21-09-2021 ರಂದು 11-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹಳಿಯಾಳ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 151/2021, ಕಲಂ: 279, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಸುರೇಶ ತಂದೆ ಮಿಂಗೇಲ್ ಸಿದ್ದಿ, ಪ್ರಾಯ-37 ವರ್ಷ, ಸಾ|| ಕೇಗದಾಳ, ತಾ: ದಾಂಡೇಲಿ (ಮೋಟಾರ್ ಸೈಕಲ್ ನಂ: ಕೆ.ಎ-31/ಯು-3801 ನೇದರ ಚಾಲಕ). ಈತನು ದಿನಾಂಕ: 21-09-2021 ರಂದು 19-30 ಗಂಟೆಯಿಂದ 20-10 ಗಂಟೆಯ ನಡುವಿನ ಅವಧಿಯಲ್ಲಿ ಮೋಟಾರ್ ಸೈಕಲ್ ನಂ: ಕೆ.ಎ-31/ಯು-3801 ನೇದನ್ನು ಹಳಿಯಾಳ ಕಡೆಯಿಂದ ಸಾಂಬ್ರಾಣಿ ಕಡೆಗೆ ಅತೀವೇಗವಾಗಿ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬರುತ್ತಾ, ಹಳಿಯಾಳ ತಾಲೂಕಿನ ಸಾಂಬ್ರಾಣಿ ಗ್ರಾಮ ಪಂಚಾಯತ್ ಹತ್ತಿರ ಇರುವ ಕ್ರಾಸ್ ಹತ್ತಿರ ಹಾದು ಹೋದ ಹಳಿಯಾಳ-ಯಲ್ಲಾಪುರ ರಾಜ್ಯ ಹೆದ್ದಾರಿ ಸಂಖ್ಯೆ-93 ರ ಮೇಲೆ ಬರುತ್ತಿರುವಾಗ ಡಾಂಬರ್ ರಸ್ತೆಯ ಮೇಲೆ ಒಮ್ಮೇಲೆ ಯಾವುದೋ ಪ್ರಾಣಿ ಅಡ್ಡ ಬಂದಂತೆ ಭಾಸವಾಗಿದ್ದರಿಂದ ಒಮ್ಮೇಲೆ ಬ್ರೇಕ್ ಹಾಕಿದ್ದರಿಂದ ಮೋಟಾರ್ ಸೈಕಲ್ ಮೇಲಿನ ನಿಯಂತ್ರಣ ಕಳೆದುಕೊಂಡು ಡಾಂಬರ್ ರಸ್ತೆಯ ಮೇಲೆ ತನಗೆ ತಾನೇ ಸ್ಕಿಡ್ ಆಗಿ ಪಲ್ಟಿ ಕೆಡವಿಕೊಂಡ ಪರಿಣಾಮ ಬಲಗಾಲಿನ ಮೊಣಗಂಟಿನ ಕೆಳಗೆ ಹಾಗೂ ಬಲಪಾದಕ್ಕೆ ಗಂಭೀರ ಸ್ವರೂಪದ ಗಾಯನೋವು ಪಡಿಸಿಕೊಂಡಿದ್ದಲ್ಲದೇ, ಮೋಟಾರ್ ಸೈಕಲನ್ನು ಜಖಂಗೊಳಿಸಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀಮತಿ ಫ್ಲೋರಿನಾ ಕೋಂ. ಸುರೇಶ ಸಿದ್ದಿ, ಪ್ರಾಯ-37 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕೇಗದಾಳ, ತಾ: ದಾಂಡೇಲಿ ರವರು ದಿನಾಂಕ: 21-09-2021 ರಂದು 21-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.  

 

ಸಿದ್ದಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 120/2021, ಕಲಂ: 341, 427, 504, 506 ಐಪಿಸಿ ಹಾಗೂ ಕಲಂ: 3 Karnataka Prevention of Damage to Public Property Act-1984 ನೇದ್ದರ ವಿವರ...... ನಮೂದಿತ ಆರೋಪಿತ ಹನುಮಂತ ತಂದೆ ಗಣಪತಿ ಬಡಗಿ, ಪ್ರಾಯ-35 ವರ್ಷ, ಸಾ|| ಬೇಡ್ಕಣಿ, ತಾ: ಸಿದ್ದಾಪುರ. ಈತನು ಸಿದ್ದಾಪುರ ತಾಲೂಕಿನ ಬೇಡ್ಕಣಿಯ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ತನ್ನ ತಂದೆ ಈ ಹಿಂದೆ ಮಾಡಿದ ಸಾಲ ಇದ್ದರೂ ಸಹ ಪದೇ ಪದೇ ಸೊಸೈಟಿಗೆ ಹೋಗಿ ಸಾಲ ಕೊಡುವಂತೆ ಪಿರ್ಯಾದಿಯವರಿಗೆ ಕೇಳುತ್ತಾ ಬಂದವನಿದ್ದು, ‘ನಿನ್ನ ತಂದೆ ಮಾಡಿದ ಸಾಲ ಇನ್ನೂ ಬಾಕಿ ಇದ್ದ ಕಾರಣ ಸಾಲ ಕೊಡಲು ಬರುವುದಿಲ್ಲ’ ಅಂತಾ ಪಿರ್ಯಾದಿಯವರು ಹೇಳುತ್ತಿದ್ದುದಕ್ಕೆ ಪಿರ್ಯಾದಿ ಹಾಗೂ ಸೊಸೈಟಿಯವರೊಂದಿಗೆ ಹಲವು ಬಾರಿ ಜಗಳ ಮಾಡುತ್ತಾ ದ್ವೇಷದಿಂದ ಇದ್ದವನು. ದಿನಾಂಕ: 21-09-2021 ರಂದು ಬೆಳಿಗ್ಗೆ 06-30 ಗಂಟೆಗೆ ಸೊಸೈಟಿಯ ಕಿಟಕಿಯ ಗ್ಲಾಸುಗಳನ್ನು ಒಡೆಯುತ್ತಿದ್ದವನಿಗೆ ಪಿರ್ಯಾದಿಯವರು ತಡೆಯಲು ಮಂದೆ ಹೋದಾಗ ಪಿರ್ಯಾದಿಯವರನ್ನು ಅಡ್ಡಗಟ್ಟಿ ತಡೆದು ’ಏನಾ ಸೂಳೆ ಮಗನೇ, ನಾನು ಸಾಲ ಕೇಳಿದರೆ ನಿನಗೆ ಕೊಡಲು ಆಗುವುದಿಲ್ಲವಾ? ಸಾಲ ಏನು ನಿಮ್ಮ ಅಪ್ಪನ ಮನೆಯಿಂದ ಕೊಡುತ್ತೀಯಾ?’ ಅಂತಾ ಅವಾಚ್ಯವಾಗಿ ಬೈಯ್ದು, ತನ್ನ ಕೈಯಲ್ಲಿದ್ದ ಕಬ್ಬಿಣದ ರಾಡಿನಿಂದ ಸೊಸೈಟಿಯ ಕಿಟಕಿಯ ಪೂರ್ತಿ ಗ್ಲಾಸುಗಳನ್ನು ಒಡೆದು ಹಾಕಿ, ಸಾರ್ವಜನಿಕ ಆಸ್ಥಿಯನ್ನು ಹಾನಿಗೊಳಿಸಿ ಲುಕ್ಸಾನ್ ಪಡಿಸಿ, ಪಿರ್ಯಾದಿ ಹಾಗೂ ಸೊಸೈಟಿಯ ಕಮಿಟಿಯವರಿಗೆ ’ನೀವು ಮುಂದೆ ಬಂದರೆ ಇದೇ ಕಬ್ಬಿಣದ ರಾಡಿನಿಂದ ನಿಮ್ಮನ್ನು ಹೊಡೆದು ಸಾಯಿಸುತ್ತೇನೆ’ ಅಂತಾ ಜೀವ ಬೇದರಿಕೆ ಹಾಕಿದ ಬಗ್ಗೆ ಪಿರ್ಯಾದಿ ಶ್ರೀ ಗಣಪತಿ ತಂದೆ ಗೋವಿಂದ ನಾಯ್ಕ, ಪ್ರಾಯ-69 ವರ್ಷ, ವೃತ್ತಿ-ಅಧ್ಯಕ್ಷರು, ವ್ಯವಸಾಯ ಸೇವಾ ಸಹಕಾರಿ ಸಂಘ ಬೇಡ್ಕಣಿ, ಸಾ|| ಬೇಡ್ಕಣಿ, ತಾ: ಸಿದ್ದಾಪುರ ರವರು ದಿನಾಂಕ: 21-09-2021 ರಂದು 15-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಬನವಾಸಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 89/2021, ಕಲಂ: 15(ಎ), 32(3) ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ಹೆನ್ರಿ ತಂದೆ ಫ್ರಾನ್ಸಿಸ್ ರೋಡ್ರಿಗಸ್, ಪ್ರಾಯ-50 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಗಡಗೇರಿ, ಸುಗಾವಿ ಗ್ರಾಮ, ತಾ: ಶಿರಸಿ. ಈತನು ದಿನಾಂಕ: 21-09-2021 ರಂದು 16-30 ಗಂಟೆಗೆ ಶಿರಸಿ ತಾಲೂಕಿನ ಗಡಗೇರಿಯ ತನ್ನ ಮನೆಯ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ತಾತ್ಕಾಲಿಕ ಶೆಡ್ ನಿರ್ಮಿಸಿ, ಸಾರ್ವಜನಿಕರಿಗೆ ಮದ್ಯ ಸೇವಿಸಲು ಅನುವು ಮಾಡಿಕೊಟ್ಟಿರುವಾಗ ಪಿರ್ಯಾದಿಯವರು ದಾಳಿ ಮಾಡಿ 1). HAYWARDS CHEERS HISKY-90 ML ಅಂತಾ ಲೇಬಲ್ ಇರುವ 10 ಸೀಲ್ಡ್ ಟೆಟ್ರಾ ಪ್ಯಾಕ್ ಗಳು-351.30/- ರೂಪಾಯಿ, 2). HAYWARDS CHEERS HISKY-90 ML ಅಂತಾ ಲೇಬಲ್ ಇದ್ದ ಮದ್ಯದ ಖಾಲಿ ಟೆಟ್ರಾ ಪ್ಯಾಕ್ ಗಳು-04, ಅ||ಕಿ|| 00.00/- ರೂಪಾಯಿ, 3). ನಗದು ಹಣ 130/- ರೂಪಾಯಿ, 4). ಪ್ಲಾಸ್ಟಿಕ್ ಗ್ಲಾಸುಗಳು-02, ಅ||ಕಿ|| 00.00/- ರೂಪಾಯಿ ನೇದವುಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ನಾಗೇಂದ್ರ ನಾಯ್ಕ ಎಚ್, ಪಿ.ಎಸ್.ಐ (ತನಿಖೆ), ಬನವಾಸಿ ಪೊಲೀಸ್ ಠಾಣೆ ರವರು ದಿನಾಂಕ: 21-09-2021 ರಂದು 18-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 21-09-2021

at 00:00 hrs to 24:00 hrs

 

ಪ್ರಕರಣಗಳು ದಾಖಲಾಗಿರುವುದಿಲ್ಲ....

 

======||||||||======

 

 

 

 

ಇತ್ತೀಚಿನ ನವೀಕರಣ​ : 22-09-2021 01:21 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080